Wednesday, August 13, 2008

ಲಾಫಿಂಗ್ ಬುದ್ಧ




"ಸೂರಿ ಒಂದು ಹುಡುಗಿ ಫ್ರೆಂಡ್ ಆಗಿದ್ದಾಳೋ ಚಾಟ್ ನಲ್ಲಿ .ತುಂಬಾ ಒಳ್ಳೆಯವಳು .ಅವಳ ಹತ್ರ ಮಾತಾಡ್ತಾ ಇದ್ರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ ! ಈಗಂತೂ ಬರೀ ಚಾಟಿಂಗು, ಎಸ್ಸೆಮ್ಮೆಸ್ಸು ,ಫೋನಲ್ಲೇ ದಿನ ಕಳೀತಾ ಇದ್ದೀವಿ ನಾವು !"


"ರವಿ, ಸಕ್ಕತ್ ಲಕ್ಕಿ ಕಣೊ ನೀನು ಯಾವಾಗ್ ಮೀಟ್ ಆಗ್ತಾಳಂತೆ? ಬೇಗ ಪಟಾಯಿಸ್ಕೊಳ್ಳೋ ,ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬೇಡ "


"ಸಧ್ಯಕ್ಕಂತೂ ಮೀಟ್ ಆಗೊ ಅವಶ್ಯಕತೆ ನಂಗೆ ಕಾಣಿಸ್ತಾ ಇಲ್ಲ ಸೂರಿ .ಹೀಗೆ ಸ್ವಲ್ಪ ದಿನ ಒಳ್ಳೆ ಫ್ರೆಂಡ್ ಆಗಿರೋಣ ಅಂತಿದ್ದೀನಿ. ಈ ಕಾಲದಲ್ಲಿ ಒಳ್ಳೆ ಫ್ರೆಂಡ್ಸ್ ಸಿಗೋದೆ ಕಷ್ಟ ಆಗ್ಬಿಟ್ಟಿದೆ ,ಅಂಥಾದ್ರಲ್ಲಿ ಸಿಕ್ಕಿರೋ ಗೆಳತೀನ ಕಳ್ಕೊಳ್ಳೋಕೆ ಇಷ್ಟ ಇಲ್ಲ ನಂಗೆ "


"ಥೂ ನಿನ್ನ ಏನೊ ರವಿ 21st century ನಲ್ಲಿದ್ದು ಒಳ್ಳೆ ಸನ್ಯಾಸಿ ಥರ ಮಾತಾಡ್ತಿಯಲ್ಲೋ ? ಏನೋ ಆಗಿದೆ ನಿಂಗೆ? ನೋಡು ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬಾರ್ದು . Never miss an oppertunity ಅಂತ ಸ್ಪೈಸ್ ಜಾಹೀರಾತು ನೋಡಿಲ್ವ? ಈಗ್ಲೆ ಮಜಾ ಮಾಡ್ಬೇಕು "


"ಹಾಗಂತೀಯಾ ಸೂರಿ .ಹಾಗಿದ್ರೆ ನಾನೇನ್ ಮಾಡ್ಬೇಕು ಹೇಳೋ ..."


"ಏನಿಲ್ಲ ರವಿ ಸ್ವಲ್ಪ ದಿನಾ ಹಾಗೆ ಅವಳ ವಿಶ್ವಾಸ ಗಳಿಸ್ಕೋ .ಆಮೇಲೆ ಒಂದು ದಿನ ಎಲ್ಲಾದ್ರೂ ಸಿನೆಮಾಗೆ ಕರ್ಕೊಂಡು ಹೋಗು.ಹಾಗೆ ಸ್ವಲ್ಪ ದಿನ ಆದ್ಮೇಲೆ ರೂಮ್ ಗೇ ಕರ್ಕೊಂಡು ಹೋಗಿ ’ಕೆಲಸ’ ಮುಗಿಸ್ಬಿಡು. ಆಮೇಲೆ ಯಾವುದಾದ್ರೂ ಗಿಫ್ಟ್ ತಗೊ. ಹುಡ್ಗೀರ್ಗೆ ಗಿಫ್ಟ್ ಕೊಟ್ರೆ ಹಾಗೆ ಕರಗ್ ಹೋಗ್ತಾರೆ "


"ಸೂರಿ ಥ್ಯಾಂಕ್ಸ್ ಕಣೊ ತುಂಬಾ ಒಳ್ಳೆ ಸಲಹೆ ಕೊಟ್ಟೆ ,ಇಲ್ಲಾಂದ್ರೆ ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋತಾ ಇದ್ದೆ."


------------------------------------*****************************---------------------------


"ಹೇ ರವಿ ಏನಾಯ್ತೋ ಎಲ್ಲಿ ತನಕ ಬಂತು ನಿನ್ ’ಲವ್ ಸ್ಟೋರಿ’ ? ಮಾಡಿದ್ಯಾ ಏನಾದ್ರೂ ?? "


"ಸೂಪರ್ ಕಣೊ ಸೂರಿ .ನೀನ್ ಹೇಳಿದ್ ಹಾಗೇನೆ ಮಾಡಿದೆ ಕಣೊ. ತುಂಬಾನೇ ಲಕ್ಕಿ ನಿನ್ನಂಥ ಗೆಳೆಯ ಸಿಕ್ಕಿದ್ದಕ್ಕೆ. "


"ಗುಡ್ . ಅಂದ ಹಾಗೆ ಏನ್ ಗಿಫ್ಟ್ ಕೊಟ್ಟೆ?"


"ಒಂದು ಲಾಫಿಂಗ್ ಬುದ್ಧ ಮೂರ್ತಿ ಕೊಟ್ಟಿದ್ದೀನಿ. ಹಾಳಾದ್ದು 500 ರುಪಾಯಿ ಖರ್ಚಾಯ್ತು!! ಆದ್ರೂ ಪರ್ವಾಗಿಲ್ಲ ಸಕ್ಕತ್ ಮಜಾ ಸಿಕ್ತು!"


"ಬಾಯ್ ಕಣೊ ಲೇಟ್ ಆಯ್ತು ,ಮನೆಗೆ ಹೋಗಿ ಶಟಲ್ ಆಡ್ಬೇಕು .."


"ಸರಿ ಕಣೊ ಬಾಯ್ "

-------------------------------------------*************************-------------------------


ಮನೆಗೆ ಬಂದ ಸೂರಿ ಸೀದಾ ತಂಗಿ ಶೃತಿ ರೂಮ್ ಗೆ ನುಗ್ಗಿದ ಶಟಲ್ ಬ್ಯಾಟ್ ತಗೊಳ್ಳೋಕೆ ..

ಶೃತಿ ಕಂಪ್ಯೂಟರ್ ಮಾನಿಟರ್ ಮೇಲೆ ಹೊಸ ’ಲಾಫಿಂಗ್ ಬುದ್ಧ ’ನ ಮೂರ್ತಿ ಕೂತಿತ್ತು.


ಹೊಟ್ಟೆ ಸವರುತ್ತ ತನ್ನನ್ನೇ ನೋಡಿ ನಕ್ಕಂತಾಯ್ತು ಸೂರಿಗೆ !


------------------------------------------*************************--------------------------




4 comments:

Harisha - ಹರೀಶ said...

ಹ್ಮ್.. ಒಂಥರಾ ಭಾವನೆ ಮೂಡುತ್ತೆ! ಮಾಡಿದ್ದುಣ್ಣೋ ಮಹರಾಯ ಎನ್ನಬಹುದೇ?

ಸಂದೀಪ್ ಕಾಮತ್ said...

ಅಂಥ ಸಲಹೆ ಕೊಡೋ ಸ್ನೇಹಿತರಿಗೇನು ಕಮ್ಮಿ ಇಲ್ಲ ಅಲ್ವ??
ಅದಿಕ್ಕೆ ಈ ಕಥೆ ಬರೆದ್(ಕಥೆ ಅನ್ನಬಹುದೇನೊ ಗೊತ್ತಿಲ್ಲ ಯಾಕಂದ್ರೆ ಮೊದಲನೇ ಸಲ ಬರೆದಿದ್ದು!)

ಪ್ರತಿಕ್ರಿಯೆಗೆ ಧನ್ಯವಾದಗಳು!

-ಸಂದೀಪ್ ಕಾಮತ್

ವಿ.ರಾ.ಹೆ. said...

ಹ್ಮ್.. ಮಸ್ತ್.
ಚಿಕ್ಕ ಕತೆಯಲ್ಲೇ ’ಎಲ್ಲವನ್ನೂ’ ಹೇಳಿಬಿಟ್ಟಿದ್ದೀಯ.

Anonymous said...

Serves him right. Since he plays shuttle too :-)
Malathi S