Friday, December 12, 2008

ಅಖಂಡ ಭಾರತ ? ? ?



ಕೆಲ ವರ್ಷದ ಹಿಂದೆ ಶೇಶಾದ್ರಿಪುರಂ ಕಾಲೇಜಿನಲ್ಲಿ ಒಂದು ಉಪನ್ಯಾಸ ಮಾಲಿಕೆ ಇತ್ತು .’ಭಾರತ ದರ್ಶನ ’ ಉಪನ್ಯಾಸ ಮಾಲಿಕೆ ಅದು.ಶ್ರೀ ವಿದ್ಯಾನಂದ ಶೆಣೈ ಅವರು ದೊಡ್ದ ’ಅಖಂಡ ಭಾರತ’ದ ಭೂಪಟವನ್ನು ತೋರಿಸಿ ಭಾಷಣ ಮಾಡ್ತಾ ಇದ್ರೆ ಮೈಯೆಲ್ಲಾ ರೋಮಾಂಚನಗೊಂಡಿತ್ತು .

ನಿನ್ನೆ ಒಂದು ಮೈಲ್ ಬಂದಿತ್ತು .ಅದನ್ನು ನೋಡಿದ ಮೇಲಂತೂ ಶ್ರೀ ವಿದ್ಯಾನಂದ ಶೆಣೈಯವರ ನೆನಪು ಕಾಡುತ್ತಿದೆ.ಆ ಮೈಲ್ ನಲ್ಲಿ ಪಾಕಿಸ್ತಾನ 2020ರಲ್ಲಿ ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನ ಹೇಗಿರುತ್ತದೆ ಅನ್ನೋದನ್ನು ಹಾಕಿದ್ದಾರೆ.ವಿದ್ಯಾನಂದ ಶೆಣೈಯವರಂತೂ ಆ ಅಖಂಡ ಭಾರತದ ಭೂಪಟವನ್ನು ಹಿಡಿದುಕೊಂಡು ಕರ್ನಾಟಕದಾದ್ಯಂತ ’ಭಾರತ ದರ್ಶನ’ ಉಪನ್ಯಾಸ ಮಾಲಿಕೆಯನ್ನು ನೀಡಿದ್ದರು.ಅವರ ಅಖಂಡ ಭಾರತದ ಕನಸನ್ನು ಈಗ ಪಾಕಿಸ್ತಾನಿಗಳು ನಿಜ ಮಾಡಲು ಹೊರಟಿದ್ದಾರೆ , ಭಾರತದ ಮುಕ್ಕಾಲು ಭಾಗವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದಲ್ಲಿ ಸೇರಿಸಿ !

ಹಿರಿಯ ಪತ್ರಕರ್ತರೊಬ್ಬರು "ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ " ಅಂತ ಬರೆದಿದ್ದಾರೆ.

ಅದು ಹೇಗೆ ಸಾಧ್ಯ ಅನ್ನೋದು ನನಗೆ ಇನ್ನೂ ಅರ್ಥ ಆಗಿಲ್ಲ! ಪಾಕಿಸ್ತಾನ ಅನ್ನೋದೇ ಧರ್ಮ .ಅಲ್ಲಿ ನಡೆಯೋದೆಲ್ಲ ಧರ್ಮಕ್ಕೆ ಸಂಬಂಧ ಪಟ್ಟದ್ದೇ.ಹೀಗಿದ್ರೂ ನಾವು ಭಯೋತ್ಪಾದನೆಯನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬೇಕಂತೆ!
ತಾಜ್ ಹೋಟೇಲಿಗೆ ಬಂದ ಉಗ್ರರು ತಾಜ್ ನಲ್ಲಿದ್ದ ಸಂಪತ್ತನ್ನು ಲೂಟಿ ಮಾಡಲು ಬಂದಿದ್ರೆ ಬಹುಶಃ ಆ ಕೃತ್ಯವನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬಹುದಿತ್ತೇನೋ .ಆದರೆ ಹಾಗಾಗಿಲ್ಲ.

ನಾವೆಲ್ಲರೂ ಇದನ್ನು ಮುಸ್ಲಿಂ ಉಗ್ರವಾದ ಅನ್ನೋದಕ್ಕೆ ತಯಾರಿಲ್ಲ ,ಯಾಕಂದ್ರೆ ನಮ್ಮನ್ನು ಬೇರೆಯವರು ತಪ್ಪು ತಿಳಿದುಕೋತಾರೇನೊ ಅನ್ನೋ ಭಯ.ಭಯೋತ್ಪಾದಕ ಕೃತ್ಯ ನಡೆಸುವವರೇ ಇದನ್ನು ’ಧರ್ಮಯುದ್ಧ’ ಅಂತ ಘಂಟಾಘೋಶವಾಗಿ ಹೇಳಿದ್ದಾರೆ .ಆದರೆ ನಮ್ಮ ಬುದ್ಧಿಜೀವಿಗಳಿಗೆ ಇದು ಧರ್ಮಕ್ಕೆ ಸಂಬಂದ ಪಟ್ಟದ್ದಲ್ಲ!

ಯಾರೋ ಮತಾಂಧ ಮುಸ್ಲಿಂ ಈ ರೀತಿಯ ಕೃತ್ಯ ಎಸಗಿದ್ದಾನೆ ಅಂದ ಮಾತ್ರಕ್ಕೆ ನಾವೇನೂ ಎಲ್ಲ ಮುಸ್ಲಿಮರ ಬಗ್ಗೆ ಅನುಮಾನದಿಂದ ನೋಡುತ್ತಿಲ್ಲ -ನೋಡೋದೂ ಇಲ್ಲ .ಹೀಗೆ ನೋಡ್ತಾ ಇದ್ದೀವಿ ಅನ್ನೋದು ಭ್ರಮೆ !

ನಮ್ಮ ಬಾಲಿವುಡ್ ನಲ್ಲಂತೂ ಮುಸ್ಲಿಂ ಜನಾಂಗದವರ ಕೊಡುಗೆ ಅಪಾರ.ಮುಸ್ಲಿಂ ಕವಿ ಜಾವೆದ್ ಅಖ್ತರ್ ಬರೆದ ಭಜನೆಗೆ (ರಾಧ ಕೈಸೆ ನ ಜಲೇ) ಮುಸ್ಲಿಂ ಸಂಗೀತ ನಿರ್ದೇಶಕ ರಹಮಾನ್ ಸಂಗೀತ ನಿರ್ದೇಶಿಸಿ ಮುಸ್ಲಿಂ ಹೀರೋ ಆ ಹಾಡಿನಲ್ಲಿ ನಟಿಸ್ತಾನೆ ಅನ್ನೋದಾದ್ರೆ ಅದು ಬರೀ ಭಾರತದಲ್ಲಷ್ಟೇ ಸಾಧ್ಯ.

ಹಿಂದೂ ಧರ್ಮಕ್ಕೆ ವಯಸ್ಸಾಯ್ತು .ಅದು ಕಾಲಕ್ಕೆ ತಕ್ಕಂತೆ ವಿಕಸಿತಗೊಳ್ತಾ ಇಲ್ಲ ಅನ್ನೋದು ಕೆಲವರ ಕಂಪ್ಲೇಂಟು.ನನಗಂತೂ ಹಾಗೆ ಅನ್ನಿಸಿಲ್ಲ ಯಾವತ್ತೂ.
ಕಾಲ ಬದಲಾಯಿತು ಐಟಿ-ಬಿಟಿ ಬಂತು ಇಂಟರ್ನೆಟ್ ಬಂತು ಇನ್ನೇನು ಧರ್ಮ ತನ್ನ ಮಹತ್ವ ಕಳ್ಕೊಳ್ಳುತ್ತೆ ಅಂತ ವಾದ ಮಾಡಿದ್ರು ಕೆಲವರು .ಆದರೆ ಏನಾಯ್ತು ಇಂಟರ್ನೆಟ್ ಬಂತು ಅದೇ ಇಂಟರ್ನೆಟ್ ನಿಂದ ಆನ್ಲೈನ್ ದೇವರ ದರ್ಶನ ಮಾಡೋಕೆ ಶುರು ಮಾಡಿದ್ವಿ ! ಚ್ಯಾನೆಲ್ಗಳು ವಿಪರೀತವಾದವು,ಆದರೆ ಆಧ್ಯಾತ್ಮಕ್ಕೆಂದೇ ಪ್ರತ್ಯೇಕ ಚ್ಯಾನೆಲ್ ಗಳು ಹುಟ್ಟಿಕೊಂಡವು.

ಸಾಫ್ಟ್ವೇರ್ ಬೂಮ್ ಬಂತು -ಆದ್ರೆ ಜಾತಕ ಬರೆಯೊದಕ್ಕೆಂದೆ ಆ ಸಾಫ್ಟ್ವೇರ್ ನ ಉಪಯೋಗಿಸಿದ್ವಿ ನಾವು!

ವೀಣಾ ಅನ್ನೋರು ಅಂದು ಸಲ ಬೇಸರದಿಂದ ಬರೆದಿದ್ದರು "ಸಂದೀಪ್ ನಿಮ್ಮ ಬ್ಲಾಗ್ ಯಾವಾಗ್ಲೂ ಓದ್ತಾ ಇದ್ದೆ ಆದ್ರೆ ಯಾವಾಗ ನೀವು ಧರ್ಮದ ಬಗ್ಗೆ ಬರೆಯೋದಕ್ಕೆ ಶುರು ಮಾಡಿದ್ರೋ ಅಂದಿನಿಂದ ಓದೋದು ಬಿಟ್ಟೆ " ಅಂತ.ಆದ್ರೆ ಈ ಪಾಕಿಸ್ತಾನದ ’ಅಖಂಡ ಭಾರತ (ಸಾರಿ ಅಖಂಡ ಪಾಕಿಸ್ತಾನ!) ’ ದ ನಕ್ಷೆ ನೋಡಿದ ಮೇಲಂತೂ ಬರೆಯದೆ ಇರೋಕೆ ಸಾಧ್ಯ ಆಗಿಲ್ಲ.

ಹೇಗೆ ತಾಜ್ ಮೇಲೆ ದಾಳಿ ಮಾಡಲು ಧರ್ಮ ಕಾರಣವೋ ,ಲಕ್ಷಾಂತರ ಭಾರತೀಯರು ದೇವರ ಮೇಲಿನ ಭಯದಿಂದ ಯಾವುದೇ ತಪ್ಪೆಸಗದೆ ಸುಮ್ಮನಿರೋದಕ್ಕೂ ಧರ್ಮವೆ ಕಾರಣ.

ಯಾರೋ ತಲೆ ಮಾಸಿದ ಧರ್ಮಾಂಧ ಉಗ್ರ, ಧರ್ಮದ ಹೆಸರಲ್ಲಿ ರಕ್ತದೋಕುಳಿ ನಡೆಸಿದ ಮಾತ್ರಕ್ಕೆ ಧರ್ಮವನ್ನು ಬಿಟ್ಟು ಬನ್ನಿ ಅಂತ ಹೇಳೋದು ಸರಿಯಲ್ಲ.

ಏನಂತೀರಾ?


ಚಿತ್ರ ಕೃಪೆ : ಲಷ್ಕರೆ ತಯ್ಬ

20 comments:

Pramod said...

ನನಗೆ ಭಾರತದ ಬಗ್ಗೆ ಹೋಪ್ಸ್ ಎಲ್ಲಾ ಹೊರಟುಹೋಗಿದೆ.. :(

ಸಿಂಧು ಭಟ್. said...

"ಏನಂತೀರ?"

ನಿಮ್ಮ ಬರವಣಿಗೆ ಖಂಡಿತ ಸತ್ಯ.
ಭಾರತ ತಲೆಯಂತೂ ಇಸ್ಲಾಂ,ಇತ್ತ ಕೈಯಂತಿರುವ ಭಾಗದಲ್ಲಿ ಬಾಂಗ್ಲಾದೇಶದ ನುಸುಳುಕೋರರು.ಮತ್ತೆ ಇಸ್ಲಾಂ.
ತಲೆಯೂ ಇಲ್ಲದೆ ಕೈಯೂ ಮುರಿದರೆ? ಭಾರತವಾ ಅದು?ನಮ್ಮಿಂದ ಆ ನಕಾಶೆಯನ್ನು ಕಲ್ಪಿಸಲೂ ಸಾಧ್ಯವಿದೆಯೇ?
ಇನ್ನು ಉಳಿದಂತೆ ಅವರ ಧರ್ಮ,ಜನಸಂಖ್ಯೆಯಂತು ಸಮ್ರದ್ಧಿ...ಇಷ್ಟು ಸಾಲದೆಂಬಂತೆ ನಮ್ಮ,ಬುದ್ದಿಜೀವಿಗಳೆಂದು ಕರೆಸಿಕೊಳ್ಳುವವರ ಬುದ್ದಿಗೇಡಿ ಹೇಳಿಕೆಗಳು.ಸಾಕಲ್ಲವೇ ನಮಗೆ!
ಹಿಂದೂ ರಾಷ್ಟ್ರ ಇನ್ನೆಷ್ಟು ದಿನ ಹಿಂದುವಾಗಿ ಉಳಿಯುತ್ತೋ? ಆ ಭಗವಂತನೇ ಬಲ್ಲ!!!

ವಿ.ರಾ.ಹೆ. said...

@ಪ್ರಮೋದ್,
ಹಾಗಿದ್ರೆ ಉಗ್ರರ ಉದ್ದೇಶ ಈಡೇರಿದೆ. ಕಂಗ್ರಾಟ್ಸ್ ಅನ್ನೋಕೆ ಬೇಜಾರಾಗತ್ತೆ! :(

ಚಿತ್ರಾ ಸಂತೋಷ್ said...

"ಹೇಗೆ ತಾಜ್ ಮೇಲೆ ದಾಳಿ ಮಾಡಲು ಧರ್ಮ ಕಾರಣವೋ ,ಲಕ್ಷಾಂತರ ಭಾರತೀಯರು ದೇವರ ಮೇಲಿನ ಭಯದಿಂದ ಯಾವುದೇ ತಪ್ಪೆಸಗದೆ ಸುಮ್ಮನಿರೋದಕ್ಕೂ ಧರ್ಮವೆ ಕಾರಣ..."ಎಂಥ ಮಾತು ಸಂದೀಪ್. ಒಳ್ಳೆಯ ಬರಹಾನ ಕೊಟ್ಟಿದ್ದೀರಿ. ಧರ್ಮದ ಬಗ್ಗೆಂತ ಅಲ್ಲ, ಇಂಥ ಸಮಯದಲ್ಲಿ ಿದ್ದುದನ್ನು ಇದ್ದ ಹಾಗೆನೇ ಹೇಳಿ. ಯಾರಿಗೆ ಬೇಜಾರಾದ್ರೂ ಪರ್ವಾಗಿಲ್ಲ. ವಿದ್ಯಾನಂದ ಶೆಣೈ 'ಭಾರತ ದರ್ಶನ'ದಲ್ಲಿ ಸತ್ಯವನ್ನೇ ಹೇಳಿದ್ದಾರೆ. ಆದರೆ ಬಹಳಷ್ಟು 'ಲದ್ದಿ'ಜೀವಿ'ಗಳು ಅವರ ಅದು ಬರೇ 'ಚೆಡ್ಡಿ''ಗಳಿಗೆ ಸಂಬಂಧಪಟ್ಟಿದ್ದು ಅಂತ ತಲೆಕೆಟ್ಟವರಂತೆ ಮಾತಾಡ್ತಾರೆ!
@ಪ್ರಮೋದ್..ಭರವಸೆ ಹೊರಟೋಗಿದೆ ಅನ್ನಬೇಡಿ..ನಾವಿರೋದು ನಮ್ ನೆಲ ಭಾರತದಲ್ಲೇ!
-ಚಿತ್ರಾ

Harisha - ಹರೀಶ said...
This comment has been removed by the author.
Harisha - ಹರೀಶ said...

ಇಲ್ಲೊಂದು ಆಸಕ್ತಿಕರ ವಿಷಯವಿದೆ... ನೋಡಿ http://www.thaindian.com/index.php?option=com_joomlaboard&id=6467&catid=2&func=sb_pdf

shivu.k said...

ಸಂದೀಪ್,
ಭಾರತದ ಬಗ್ಗೆ ನಿಮ್ಮ ಲೇಖನ ಓದಿದೆ. ನನಗೂ ಮೊದಲು ಹಾಗೆ ಅನ್ನಿಸಿತ್ತಾದರೂ ನನ್ನ ಮನಸ್ಸಿನಲ್ಲಿ ಕೊನೆಗೊಂದು ದಿನ ಪಾಕಿಸ್ತಾನವೆಂಬ ದೇಶ ಜಗತ್ತಿನ ಭೂಪಟದಲ್ಲಿ ಇರದೆ ಮಾಯಾವಾಗುತ್ತದೆ ಅಂತ ಅನ್ನಿಸುತ್ತದೆ. ಅವರ ಮೇಲೆ ನಾವು ಯುದ್ದ ಮಾಡಬೇಕಿಲ್ಲ ಮುಂದೊಂದು ದಿನ ಅವರವರೆ ಕಿತ್ತಾಡಿ ಹರಿದು ಚಿಂದಿಯಾಗುತ್ತಾರೆ ಇದು ನನ್ನ ಕನಸು. ಏನಂತೀರಿ ?

Anonymous said...

ನನ್ನ ಲೆಕ್ಕದಲ್ಲಿ ಹಿರಿಯ ಪತ್ರಕರ್ತರು ಹೇಳಿದ್ದು ಸರಿ ಇದೆ. ಅವರ ಮಾತು ಆರ್ಥವಾಗಲೂ ಭಯೋತ್ಪಾದನೆಯ ಬಗ್ಗೆ ಸ್ವಲ್ಪ ಹೆಚ್ಚಿನ ಓದು ಮತ್ತು ತೆರೆದ ಮನಸ್ಸು ಅಗತ್ಯ.
ಧರ್ಮ ಮತ್ತು ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಲೇ ಬೇಕು. ಮುಸ್ಲಿಮ್ ಧರ್ಮ ಭಯೋತ್ಪಾದನೆಯನ್ನು ಪ್ರಚೋದಿಸುವುದಿಲ್ಲ ಹಾಗೂ ಪ್ರೋತ್ಸಾಹಿಸುವುದೂ ಇಲ್ಲ ಎನ್ನುವುದು ನನ್ನ ಭಾವನೆ. ತಮ್ಮ ಧರ್ಮದ ಸಾರವನ್ನು ಸಮಾಜ ಘಾತುಕ ಶಕ್ತಿಗಳು ತಮಗೆ ಬೇಕಾದ ಹಾಗೆ ತಿರುಚಿಕೊನ್ಡು ಧರ್ಮದ ಹೆಸರಲ್ಲಿ ಜನರ ತಲೆ ತಿರುಗಿಸುತ್ತಿದ್ದಾರೆ.
ಹಾಗೆ ಮುಸ್ಲಿಮ್ ಉಗ್ರವಾದ ಅಂತ ತಲೆ ಪಟ್ಟಿ ಹಚ್ಚಿದರೆ ಸಾದಾ, ಬುದ್ಧಿ ಇಲ್ಲದ ಜನರಿಗೆ ಇದು ಆಪಾರ್ಥಕ್ಕೆ ಕಾರಣವಾಗುತ್ತದೆ. ಮೊನ್ನೆ ಮುಂಬಯಿಯಲ್ಲಿ ನಡೆದದ್ದು ಮುಸ್ಲಿಮ್ ರಿಂದ ಅಂತ ಎಲ್ಲಾದರೂ ಒಂದು ಹೇಳಿಕೆ ನೀಡಿದಿದ್ದರೆ, ರಾತ್ರೋ ರಾತ್ರಿ ಕೋಮು ಗಲಭೆ ಶುರುವಾಗುತ್ತಿತ್ತು. ಎಷ್ಟೋ ಸಮಾಜ ಘಾತುಕ ಶಕ್ತಿಗಳು ಇದನ್ನು ತಮ್ಮ ಹಿತಕ್ಕೆ ಬೇಕಾದ ಹಾಗೆ ಉಪ್ಯೋಗಿಸಲು ಕಾಯುತ್ತಾ ಕುಳಿತಿರುತ್ತವೆ. ಸಾವಿರ ಗಟ್ಟಲೆ ಅಮಾಯಕ ಹಿಂದೂ ಮತ್ತು ಮುಸ್ಲಿಮರ ಹತ್ಯೆಯಾಗುತ್ತಿತ್ತು. ಇದು ಭ್ರಮೆಯಲ್ಲ. ವಾಸ್ತವ.
ಮೊನ್ನೆ ನಡೆದ ತಾಜ್ ದಾಳಿಗೆ ಧರ್ಮವೊಂದೇ ಕಾರಣವಲ್ಲ. ಇವತ್ತು ಪೇಪರ್‌ನಲ್ಲಿ ಓದುತ್ತಿದ್ದೆ. ಕಸಾಬ್ ನ ಅಪ್ಪ ಜೀವನಕ್ಕಾಗಿ ಪಕೋಡಾಗಳನ್ನು ಮಾರುತ್ತಾನಂತೆ. ಅವನ ಅಣ್ಣ ಹೊಲದಲ್ಲಿ ಕೂಲಿ ಮಾಡಲು ಹೊಗುತ್ತಾನಂತೆ. ಮತ್ತು ಆತನಿಗೆ ಇಬ್ಬರು ತಂಗಿಯರು ಒಬ್ಬ ತಮ್ಮನಿದ್ದಾನೆ. ಆತನ ಹೇಳಿಕೆಯ ಪ್ರಕಾರ ಕಸಾಬ್ ನನ್ನು ಕೆಳಜನ ಬಹಳ ವರ್ಷಗಳ ಹಿಂದೆ ಕರೆದುಕೊಂಡು ಹೋಗಿದ್ದರಂತೆ. ಆತನ ಬಡತನದ ಕಾರಣ ಮಗನನ್ನು ವಾಪಸ್ಸು ಹುಡುಕಲು, ಕರೆತರಲು ಸಾಧ್ಯಾವಾಗಲಿಲ್ಲವಂತೆ. ಇಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ ಎಲ್ಲದೂ ತಮ್ಮ ಪಾಲನ್ನು ನೀಡಿವೆ. ಹಾಂ. ಅವರಲ್ಲಿ ಜಾಸ್ತಿ ಓದಿದವರು ಇರಬಹುದು. ಯುವಕರನ್ನು ತಮ್ಮ ದಾರಿಗೆ ಕರೆದೊಯ್ಯಲು ಭಯೋತ್ಪಾದಕ ಸನ್ಘಟನೆಗಳಿಗೆ ಜಾಸ್ತಿ ಹೊತ್ತು ಆಗದು. ಹಾದಿ ತಪ್ಪುತ್ತಿರುವ ಯುವಶಕ್ತಿಯು ಇದರ ಬೆಳವಣಿಗೆಗೆ ಪ್ರಮುಖ ಕಾರಣ.

ತೇಜಸ್ವಿನಿ ಹೆಗಡೆ said...

ಅಖಂಡ "ಅಪಾಕಿಸ್ತಾನವನ್ನು" ಚಿತ್ರದಲ್ಲೇ ಆಗಲಿ ಅರೆಕ್ಷಣವೂ ನನ್ನಿಂದ ಸಹಿಸಲಾಗುತ್ತಿಲ್ಲ! :(

ಒಂದು ಸಲಹೆ : ಪಾಕ್ = ಪವಿತ್ರ, ಪಾಕಿಸ್ತಾನ ಅಂದರೆ ಪಾವಿತ್ರ್ಯದ ನಾಡೆಂದು ಅರ್ಥ(??!!) ಎಂದು ಕೇಳಿರುವೆ. ಆದರೆ ಮೊದಲಿನಿಂದಲೂ.. ಅಂದರೆ ಆ ದೇಶ ಹುಟ್ಟಿದಾಗಿನಿಂದಲೂ ಅಪಾಕ್(ಹಿಂದಿಯಲ್ಲಿ "नापाक") ಕೃತ್ಯಗಳನ್ನೇ ನಡೆಸುತ್ತಾ ಬಂದಿದೆ. ಹಾಗಾಗಿ ನಾವೆಲ್ಲಾ ಅದನ್ನು ಇನ್ನು ಮುಂದೆ "ಅಪಾಕಿಸ್ತಾನ" ಎಂದು ಕರೆದೆರೆ ಹೇಗೇ???!(ಇದು ತಮಾಷೆಯಂತೂ ಖಂಡಿತ ಅಲ್ಲ)

ಸಂದೀಪ್ ಕಾಮತ್ said...

@ ಪ್ರಮೋದ್,
ಶತಶತಮಾನಗಳಿಂದ ಭಾರತ ಇಂಥ ದಾಳಿಗೆ ತುತ್ತಾಗುತ್ತಲೇ ಬಂದಿದೆ .ಆದರೂ India is shining! ಥಾಮಸ್ ಫ್ರೀಡ್ಮೆನ್ ಹೊರಗುತ್ತಿಗೆ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಿದ್ದ .ಅದರಲ್ಲಿ ಭಾರತದ ಯಾವುದೊ ಒಂದು ಕಂಪೆನಿಯವನು "India will become a super power and we will rule the world " ಅಂತಾನೆ .ಥಾಮಸ್ ದಂಗಾಗಿ ಬಿಡ್ತಾನೆ.

@ ಸಿಂಧು,ವಿಕಾಸ್ ,ಚಿತ್ರಾ :)

@ಹರೀಶ್ ,
ಥ್ಯಾಂಕ್ಸ್ ಲಿಂಕ್ ಗೆ!

@ ಶಿವು ,
ನೀವು ಹೇಳಿದ್ದು ನಿಜ .ಆದರೆ ಅವರು ಕಿತ್ತಾಡಿ ಸಾಯೋ ಮೊದಲು ಭಾರತದ ಮೇಲೊಂದು ಅಣುಬಾಂಬ್ ಹಾಕೇ ಸಾಯೋದು ಬಡ್ಡಿಮಕ್ಕಳು.

@ ನೀಲಾಂಜಲ,

ನೀವು ಹೇಳಿದ್ದನ್ನು ವಿರೋಧಿಸಲು ಯಾವತ್ತೂ ನನ್ನ ಮನಸ್ಸು ನೋಯುತ್ತದೆ .ಯಾಕಂದ್ರೆ ನಿಮ್ಮ ಉದ್ದೇಶ ಯಾವತ್ತೂ ಒಳ್ಳೆಯದಾಗಿರುತ್ತದೆ .ಆದರೂ ನಾನು ವಿರೋಧಿಸಬೇಕಾಗುತ್ತದೆ!

ಹಿರಿಯ ಪತ್ರಕರ್ತರು ಹೇಳಿದ್ದು ಸರಿ ಅಂದ್ರಿ .
ನಿಮಗೆ ಆ ಹಿರಿಯ ಪತ್ರಕರ್ತರು ಹೇಳಿದ್ದು ಸರಿ ಅನ್ನಿಸಿತು,ಆ ಧರ್ಮಾಂಧ ಕಸಬ್ ಗೆ ಅವನ ’ಚಾಚಾ’ ಲಶ್ಕರೇ ತಯ್ಬ ಮುಖ್ಯಸ್ಥ ಹೇಳಿದ್ದು ಸರಿ ಅನ್ನಿಸಿತು ,ನನಗೆ ನಾನು ಹೇಳಿದ್ದೇ ಸರಿ ಅನ್ನಿಸ್ತಾ ಇದೆ !

There is no ISO9001 standard for right or wrong!

ನಾವು ಈ ಜಗತ್ತಿನಲ್ಲಿ ಯಾವುದನ್ನು ಬೇಕಾದ್ರೂ ಸರಿ ಅಥವ ತಪ್ಪು ಅಂತ ನಿರೂಪಿಸಬಹುದು.ಈ ಸರಳ ಸತ್ಯದಿಂದಾಗೇ ಸಾವಿರಾರು ಲಾಯರ್ ಗಳು ಬದುಕಿರೋದು!

ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಸಮರ್ಥಿಸುತ್ತೆ ಅಂತ ನಾನು ಹೇಳಿಲ್ಲ .ನನಗೆ ಎಲ್ಲಾ ಧರ್ಮದ ಮೇಲೆ ಗೌರವವಿದೆ.

"ಮೊನ್ನೆ ನಡೆದ ತಾಜ್ ದಾಳಿಗೆ ಧರ್ಮವೊಂದೇ ಕಾರಣವಲ್ಲ" ಅಂದ್ರಿ ನೀವು .ಮತ್ತೇನು ಕಾರಣ ??
ಓಹ್ ಬಡತನ ವಾ?? ಭಾರತದಲ್ಲೂ ಲಕ್ಷಾಂತರ ಜನ ಬಡವರಿದ್ದಾರೆ .ಅವರ್ಯಾಕೆ ಉಗ್ರರಾಗಿಲ್ಲ??
ಅನಕ್ಷರತೆ ಕಾರಣ ಅಂದ್ರಿ! WTC ಗೆ ವಿಮಾನ ಡಿಕ್ಕಿ ಹೊಡೆದವರ ಕ್ವಾಲಿಫಿಕೇಶನ್ ಗೊತ್ತಾ ನಿಮಗೆ?? ಒಂದು ವಿಮಾನ ಚಾಲನೆ ಕಲೀಬೇಕಾದ್ರೆ ಅವನು ಎಷ್ಟು ಪ್ರತಿಭಾಶಾಲಿ ಆಗಿರ್ಬೇಕು ಅಲ್ವಾ?? ಮತ್ತೆ ಹೇಗೆ ಅನಕ್ಷರತೆ ಕಾರಣ ?

"ಧರ್ಮ ಮತ್ತು ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಲೇ ಬೇಕು. " ಅಂದ್ರಿ ನೀವೂ ಆ ಹಿರಿಯ ಪತ್ರಕರ್ತರ ಹಾಗೆ.ಹಾಗಿದ್ರೆ ಭಯೋತ್ಪಾದನೆಯನ್ನೂ ಇನ್ನಿತರ ಮಾಮೂಲಿ ಕ್ರೈಮ್ ಗಳ ರೀತಿ ಯಾಕೆ ನೋಡಬಾರದು??
ನೀವ್ಯಾಕೆ ’ಭಯೋತ್ಪಾದಕತೆಯ ವಿರುದ್ಧ ಪ್ರತಿಭಟನೆ’ ಅಂತ ನಿಮ್ಮ ಬ್ಲಾಗ್ ನಲ್ಲಿ ಒತ್ತಿ ಒತ್ತಿ campaigning ಮಾಡ್ತಾ ಇದ್ದೀರ? It’s just a crime like any other crime ಅಲ್ವಾ??ಮುಂಬೈ ಗ್ಯಾಂಗ್ ವಾರ್ನಲ್ಲೂ ಇದೇ ರೀತಿ ಹತ್ಯೆಗಳಾಗುತ್ತವೆ.ಮೊನ್ನೆ ಯಾರೋ ಒಂದು ಹಡಗನ್ನು ಹೈಜಾಕ್ ಮಾಡಿದ್ರು - ಅದೂ ಒಂದು ರೀತಿಯ ಕ್ರೈಮ್ .ಅದು ಹೇಗೆ ಭಯೋತ್ಪಾದನೆ ಆಗಲ್ಲ?? ಅಲ್ಲೂ ನಾವಿಕರಿಗೆ ’ಭಯ ಉತ್ಪಾದನೆ’ ಆಗಿತ್ತಲ್ವ?

ನೀವು ಭಯೋತ್ಪಾದಕತೆಯನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡೋದಾದ್ರೆ ಅದನ್ನು ಯಾವುದೆ 'ಬೇರೆ’ ಕ್ಯಾಟೆಗರಿ ಗೆ ಹಾಕಬೇಡಿ .Its just a crime and police will handle it!


"ಹಾದಿ ತಪ್ಪುತ್ತಿರುವ ಯುವಶಕ್ತಿಯು ಇದರ ಬೆಳವಣಿಗೆಗೆ ಪ್ರಮುಖ ಕಾರಣ" ಅಂದ್ರಿ ಇದು ಮಾತ್ರ ನೂರು ಪ್ರತಿಶತ ನಿಜ.
ನೀವು ಮೂರು ರುಪಾಯಿಯ ಖುರಾನ್ ಓದಿದ್ದೀರಿ ಅಲ್ವಾ??ದುರ್ದೈವವಶಾತ್ ನೀವು ಓದಿರುವ ಕುರಾನ್ ನಲ್ಲಿ ಎಲ್ಲಾ ಚೆನ್ನಾಗೆ ಬರೆದಿರ್ತಾರೆ.ಆದರೆ ಪಾಕಿಸ್ತಾನದಲ್ಲಿ ಆ ಪುಟ್ಟ ಮಕ್ಕಳಿಗೆ ಮದರಸಾಗಳಲ್ಲಿ ಏನು ಹೇಳಿ ಕೊಡ್ತಾರೆ ಅಂತ ಗೊತ್ತಿದೆಯ ನಿಮಗೆ?
ಪಾಕಿಸ್ತಾನ ಬಿಡಿ ಮಂಗಳೂರಿನ ಮದರಸಾಗಳಲ್ಲಿ ಏನು ಹೇಳಿ ಕೊಡ್ತಾರೆ ನಿಮಗೆ ಗೊತ್ತಾ?? ನಿಮಗೆ ಅಲ್ಲಿ ಪ್ರವೆಶವಿಲ್ಲ !ಹಾಗಾಗಿ ಗೊತ್ತಾಗಲ್ಲ.
ಮೊನ್ನೆ ಮಂಗಳೂರಿನಲ್ಲಿ ಉಗ್ರರರನ್ನು ಹಿಡಿಯಬೇಕಾದ್ರೆ ಪೋಲಿಸರು ಎಷ್ಟು ಜಾಗ್ರತೆ ವಹಿಸಿದ್ರು ಗೊತ್ತಾ?? ಯಾಕಂದ್ರೆ ಅಪ್ಪಿ ತಪ್ಪಿ ಆ ಶಂಕಿತರೇನಾದ್ರೂ ಮಸೀದಿಯ ಒಳಗೆ ನುಗ್ಗಿ ಬಿಟ್ರೆ ದೇವರನ್ನೂ ಒಳಗೆ ಬಿಡಲ್ಲ ಅಲ್ಲಿ ಹಿಡಿಯೋಕೆ ಹೋದ್ರೆ!

ನಾವು ಪಾಕಿಸ್ತಾನವನ್ನು ಸದೆಬಡಿಯುದು ಬಿಡಿ ಬಿಜಾಪುರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದವರನ್ನು ಸದೆಬಡಿಯೋದು ನಮ್ಮಿಂದ ಆಗಿಲ್ಲ:(

ಒಂದೆ ಖುಶಿ ಪಡುವ ಸಂಗತಿ ಅಂದ್ರೆ ಇಷ್ಟು ದಿನ ಎಲ್ಲೇ ಭಯೋತ್ಪಾದಕ ದಾಳಿ ನಡೆದ್ರೂ ಭಾರತದ ಮುಸ್ಲಿಮರು ದಿವ್ಯ ಮೌನ ವಹಿಸ್ತಾ ಇದ್ರು.ಆದರೆ ತಾಜ್ ದಾಳಿಯ ನಂತರ ಅವರೂ ಮೌನ ಮುರಿದಿದ್ದಾರೆ:)
"ಹಿರಿಯ ಪತ್ರಕರ್ತರ ಮಾತು ಆರ್ಥವಾಗಲೂ ಭಯೋತ್ಪಾದನೆಯ ಬಗ್ಗೆ ಸ್ವಲ್ಪ ಹೆಚ್ಚಿನ ಓದು ಮತ್ತು ತೆರೆದ ಮನಸ್ಸು ಅಗತ್ಯ"
ನನಗೆ ಹಾಗನ್ನಿಸಿಲ್ಲ ! ಬರಿ ಕಾಮನ್ ಸೆನ್ಸ್ ಇದ್ರೇನೂ ಸಾಕು ಬಿಡಿ.ನಮ್ಮ ಮನಸ್ಸು ಜಾಸ್ತಿ ತೆರೆದದ್ದರಿಂದಲೇ ಭಾರತ ಈ ರೀತಿ ನಲುಗುತ್ತಿರೋದು.
ನಮ್ಮದು ತೆರೆದ ಮನಸ್ಸಾದರೂ ಪಾಕಿಸ್ತಾನದ್ದು ಸಂಕುಚಿತ ಮನಸ್ಸು .ಹಾಗಾಗಿ ಈ ಸಮಸ್ಯೆಯನ್ನು ’ಸಾಧಾರಣ’ ರೀತಿಯಿಂದ ಬಗೆ ಹರಿಸಲು ಸಾಧ್ಯ ಇಲ್ಲ.

ನನ್ನ ಲೇಖನದಲ್ಲಿ ಲಗತ್ತಿಸಿರೋ ’ಅಖಂಡ ಭಾರತ’ ದ ಭೂಪಟ ನೋಡಿ.
2020 ಯಲ್ಲಿ ಅದು ;ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್ ’ ಆಗಿರುತ್ತಂತೆ!
ಅವರು ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಅನ್ನಾಗಿ ಮಾಡಹೊರಟಿದ್ದಾರೆ - ಆದರೆ ನೀವೂ ಆ ಹಿರಿಯ ಪತ್ರಕರ್ತರರು ’ಇದು ಧರ್ಮಕ್ಕೆ ಸಂಬಂದಿಸಿದ್ದೇ ಅಲ್ಲ’ ಅಂತೀರಿ!!
ಇದ್ಯಾವ ಲೆಕ್ಕಾಚಾರ ಸೌಪರ್ಣಿಕಾ ?

ಹರೀಶ ಮಾಂಬಾಡಿ said...

ತಾಜ್ ದಾಳಿಗೆ ಪಾಕ್ ಕಾರಣ ಎಂಬುದಕ್ಕೆ ನಾವು ಪುರಾವೆ ಹುಡುಕಬೇಕಿಲ್ಲ. ಅವರೇ ಬಿಟ್ಟು ಹೋಗಿದ್ದಾರೆ. ಅವರ ಉದ್ದೇಶ ಏನು ಎಂಬುದೂ ಸ್ಪಷ್ಟ.ದಾಳಿಗೆ ಧರ್ಮವೊಂದೇ ಕಾರಣ. ಅದು "ಕಾಶ್ಮೀರ ವಿಮೋಚನೆ" ಮಾತ್ರ ಅಲ್ಲ. ಇಡೀ ಭಾರತವನ್ನೇ ಕಬಳಿಸುವುದು.
ದುರಂತವೆಂದರೆ ನಮ್ಮಲ್ಲೇ ಇರುವ ಅತಿವಿಚಾರವಾದಿಗಳು ಇವರ ಕುರಿತು ಸಹಾನುಭೂತಿ ವ್ಯಕ್ತಪಡಿಸುತ್ತಿರುವುದು.
ಮುಂದೇನು?

ಸುಧೇಶ್ ಶೆಟ್ಟಿ said...

ಸ೦ದೀಪ್,

ಹಿ೦ದೆ ಸ್ಕೂಲಿನಲ್ಲಿ ಚರಿತ್ರೆ ಓದುತ್ತಿದ್ದಾಗ ಪ್ರಾಚೀನ ಭಾರತದ ಭೂಪಟ ಕ೦ಡು ಖುಷಿಯಾಗುತ್ತಿತ್ತು. ಈಗ ಈ ಭೂಪಟ ನೋಡುತ್ತಿದ್ದರೆ ಮೈಯಲ್ಲಾ ಉರಿಯುತ್ತಿದೆ.

ಉಗ್ರವಾದಕ್ಕೂ ಧರ್ಮಕ್ಕೂ ಸ೦ಬ೦ಧ ಸ್ಪಷ್ಟವಾದರೂ ಯಾಕೆ ಕೆಲವರು ಧರ್ಮಕ್ಕೂ ಉಗ್ರವಾದಕ್ಕೂ ತಳಕು ಹಾಕಬಾರದು ಎನ್ನುತ್ತಾರೋ?

ಗುರು [Guru] said...

ನೀವು ಬರೆದಿದ್ದರಲ್ಲಿ ನೂರಕ್ಕೆ ನೂರು ಸತ್ಯ ಇದೆ. ಈ"ಲದ್ದಿ" ಜೀವಿಗಳಿಂದ ನಮ್ಮ ದೇಶ ಇವತ್ತು ಈ ಸ್ಥಿತಿಗೆ ಬಂದಿದೆ. ನಮ್ಮ ರಾಜಕಾರಣಿಗಳ ಕೆಸರೆರೆಚಾಟ, ಅಲ್ಪಸಂಖ್ಯಾತರ ಕಾಲು ನೆಕ್ಕುವ ಸಂಸ್ಕೃತಿಗಳಿಂದ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಾಲಿಗೆ ಈಡಾಗಿದ್ದೇವೆ.
http://kannadaputhra.blogspot.com

prasca said...

ಇದೆ ತೆರನಾದ ಒಂದು ನಕ್ಷೆ ಪಾಕಿಸ್ತಾನದ ಐ ಎಸ್ ಐ. ಮುಖ್ಯ ಕಛೇರಿಯಲ್ಲಿದೆ. ಅದರ ಹಣೆ ಪಟ್ಟಿ ನಮ್ಮ ಗುರಿ ಎಂದು ಎಲ್ಲೋ ಒದಿದ ನೆನಪು. ದಕ್ಷಿಣ ಕರ್ನಾಟಕದ (ಹಳೆಮೈಸೂರನ್ನು ಬಿಟ್ಟು ಏಕೆಂದರೆ ಟಿಪ್ಪು-ಹೈದರ್ ಆಳಿದ್ದವು ಮುಸಲ್ಮಾನ್ ಪ್ರಾತ್ಯಗಳು ಎಂಬುದು ಅವರ ನಂಬಿಕೆ) ಕೆಲವು ಪ್ರದೇಶಗಳು, ಆಂಧ್ರದ ಕೆಲವು ಪ್ರದೇಶಗಳು ಮತ್ತು ತಮಿಳುನಾಡಿನ ಪ್ರದೇಶಗಳನ್ನೊಳಗೊಂಡ ಪ್ರದೇಶ ಮಾತ್ರವೇ ಹಿಂದೂಸ್ತಾನ ಮಿಕ್ಕಿದ್ದೆಲ್ಲ ಪಾಕಿಸ್ತಾನ ಮಾಡುವ ಅವರ ಹುನ್ನಾರದ ಭಾಗವಾದ ಆ ನಕ್ಷೆ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಅವರ ಉದ್ದೇಶ ಸ್ಪಷ್ಟವಾಗಿ ತೋರಿಸುತ್ತಿದೆ.
ಪಾಕಿಸ್ತಾನ ಹುಟ್ಟಿದ್ದೆ ಮತಾಂಧತೆಯಿಂದ, ಆದರೂ ಅಲ್ಲೂ ಇಲ್ಲೂ ಎಲ್ಲಿಯೂ ಸಲ್ಲದಂತೆ ಫೋಸು ಕೊಡುವವರು ಹೇಳುವುದು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಹಾಗಾದರೆ ಇದೆ ಮುಂಬೈ ದಾಳಿಕೋರರು ಟರ್ಕಿಯ ಮುಸ್ಲಿಂ ದಂಪತಿಗಳನ್ನು ಏಕೆ ಮುಕ್ತಿಗೊಳಿಸಿದರು. ಇದನ್ನೆಲ್ಲಾ ಕೇಳಿದರೆ ನಾವು ಕೋಮುವಾದಿಗಳು.

Shree said...

ಆ ಮ್ಯಾಪ್ ಏನು ಅಂತ ನನ್ನ ಕೆಲವು ಪಾಕಿಸ್ತಾನಿ ಗೆಳೆಯರ ಹತ್ರ ಕೇಳಿದೆ. ಯಾವನೋ ವಿದ್ಯಾರ್ಥಿ ಅದನ್ನು ಮಾಡಿ ಹಾಕಿದ್ದಾನಂತೆ, ಜತೆಗೆ ಭಾರತದೊಳಗಿನ ಒಳಜಗಳಗಳಿಂದಾಗಿ ಆ ದೇಶ ಒಡೆದು ಚೂರುಚೂರಾಗಲಿದೆ, ಆಗ ಆ ಪರಿಸ್ಥಿತಿಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಪಾಕಿಸ್ತಾನದ ಮ್ಯಾಪ್ ಈರೀತಿ ಬದಲಾಗಬಹುದು ಅಂತ ಹೇಳಿದ್ದಾನಂತೆ. ಉರ್ದು ಅರಬಿಕ್-ನಲ್ಲಿ ಓದಲು ಬರುವವರು ಯಾರಾದರೂ ಅದನ್ನು ಓದಿ ಹೀಗೆ ಅದರಲ್ಲಿ ಬರೆದಿರುವುದು ನಿಜವೇ ಅಂತ ತಿಳಿಸಬಹುದು.

ಪಾಕಿಸ್ತಾನದ ಪತ್ರಿಕೆಗಳಿಗೆ ಸರಕಾರ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಅತಿಯಾಯಿತು ಅನ್ನುವುದು ನಿಜ. ಆದರೆ ನಮ್ಮಲ್ಲಿ ಹೀಗೆ ಬ್ಲಾಗುಗಳ ಮೂಲಕ, ಪತ್ರಿಕೆಗಳ ಮೂಲಕ ಮುಸ್ಲಿಂವಿರೋಧಿ ಅಥವಾ ಕ್ರಿಶ್ಚಿಯನ್ ವಿರೋಧಿ ಭಾವನೆ ಬಿತ್ತುತ್ತಾ ಬೆಳೆಯುತ್ತಾ ಹೋದಲ್ಲಿ ನಮಗೂ ಪಾಕಿಸ್ತಾನಕ್ಕೂ ವ್ಯತ್ಯಾಸವಿರುವುದಿಲ್ಲ. ನಮ್ಮ-ನಮ್ಮೊಳಗಿನ ದ್ವೇಷ ನಮಗೇ ಮುಳುವಾಗಲಿರುವುದು ಖಂಡಿತ, ಇಬ್ಬರ ಜಗಳದ ಲಾಭ ಪಡೆಯಲು ಹತ್ತಾರು ಜನ ಕಾಯುತ್ತಿರುವುದೂ ಕೂಡ ನಿಜ. ಇದನ್ನು ಅರ್ಥಮಾಡಿಕೊಂಡ ದಿನ ನಾವು ಜಾಣರಾಗ್ತೇವೆ. ಮುಸ್ಲಿಂ ವಿರೋಧಿ ಭಾವನೆ ಈ ಭಯೋತ್ಪಾದಕ ಕೃತ್ಯದ ನಂತರ ಹೆಚ್ಚಾಗಿದೆ ಅಂದರೆ, ಭಯೋತ್ಪಾದಕರು ತಮ್ಮ ಉದ್ದೇಶವನ್ನು ಸಾಧಿಸಿದ್ದಾರೆ ಅಂತಲೇ ಅರ್ಥ.

ಸಂದೀಪ್ ಕಾಮತ್ said...

ಶ್ರೀ,

ಮಾಹಿತಿಗಾಗಿ ಧನ್ಯವಾದಗಳು.

ನನಗಂತೂ ಮುಸ್ಲಿಂ ಅಥವ ಕ್ರಿಸ್ಚಿಯನ್ ವಿರೋಧಿ ಧೋರಣೆ ಖಂಡಿತ ಇಲ್ಲ.

ಆದರೆ ಅನ್ಯಾಯ ಆಗ್ತ ಇದ್ರೆ ಅದನ್ನು ಬರೆಯೋದಕ್ಕೆ ಯಾವುದೇ ಮುಜುಗರ ಇಲ್ಲ.ಬುದ್ಧಿಜೀವಿಗಳ ಥರ ’ಈ ರೀತಿ ಹೇಳಿದ್ರೆ ಇವರಿಗೆ ಬೇಜಾರಗುತ್ತೆ ,ಆ ರೀತಿ ಹೇಳಿದ್ರೆ ಅವರಿಗೆ ಬೇಜಾರಾಗುತ್ತೆ ’ ಅನ್ನೋ ಧೋರಣೆ ನನಗಿಲ್ಲ .ಬೇಜಾರಾದ್ರೆ ನಾನು ಏನೂ ಮಾಡೋಕಾಗಲ್ಲ.

ಈ ಮುಸ್ಲಿಂ ವಿರೋಧಿ ಧೋರಣೆ ಬರೋದಿಕ್ಕೆ ಕಾರಣ ಅವರ ’ದಿವ್ಯ ಮೌನ’ .ಆದ್ರೆ ಈ ಸಲ ಮುಂಬೈ ದಾಳಿಯ ನಂತರ ಅವರೂ ಮೌನ ಮುರಿದಿದ್ದಾರೆ.ಇದನ್ನು ಮೊದಲೇ ಮಾಡಿದ್ರೆ ಪಾಕಿಸ್ತಾನಕ್ಕೆ ’ನಾವೆಲ್ಲ ಒಂದು’ ಅನ್ನೋ ಸ್ಪಷ್ಟ ಸಂದೇಶ ಕಳಿಸಿದ ಹಾಗಾಗುತ್ತಿತ್ತು.

ಆದರೆ ಅವರಲ್ಲಿನ ಬುದ್ಧಿ ಜೀವಿಗಳು ಸುಮ್ಮನಿದ್ರು.

ಈಗ ಎಲ್ಲ ಬದಲಾಗಿದೆ.We can hope for the best.

Anonymous said...

ಸಂದೀಪ,
ಈ ಮ್ಯಾಪ್ ಹೊಸತೇನಲ್ಲ. ಇದನ್ನೇ ಗ್ರೀನ್ ಕಾರಿಡಾರ್ ಅಂತ ಕರೆದಿರೋದು. ಇದು ಮತಾಂಧರ ಹಚ್ಚಹಳೆಯ ಯೋಜನೆ.
ಈ ಮ್ಯಾಪನ್ನು ನೀವು ಪಾಕಿಸ್ತಾನೀ ಪತ್ರಿಕೆಯಲ್ಲೋ, ಲಷ್ಕರ್ ಕರಪತ್ರದಲ್ಲೋ ಮಾತ್ರವೇ ನೋಡಬೇಕೆಂದಿಲ್ಲ. ಇದನ್ನು ನೀವು ತೀಸ್ತಾ ಸೆತಲ್ವಾಡಳ ವೆಬ್ ಸೈಟಿನಲ್ಲೂ ನೋಡಬಹುದು. ಅದು ಆಕೆಯ ಕನಸು ಕೂಡ ಆಗಿದೆ. ಬಹುಶಃ ನನ್ನ ಪಿ.ಸಿ.ಯಲ್ಲಿ ಅದರ ಲಿಂಕ್ ಇರಬಹುದು. ಸಿಕ್ಕರೆ ಕಳಿಸಿಕೊಡುವೆ.
- ಚೇತನಾ ತೀರ್ಥಹಳ್ಳಿ

ಸಂದೀಪ್ ಕಾಮತ್ said...

ಚೇತನಾ,
ತೀಸ್ಟಾ ಳ ಲಿಂಕ್ ಕಳಿಸಿ ನೋಡೋಣ.

ನಾವು ಪಾಕಿಸ್ತಾನದ ವಿರುದ್ಧ ಗೆಲುವು ಸಾದಿಸಬೇಕಿಲ್ಲ.ನಮ್ಮಲ್ಲೇ ಇರುವ ತೀಸ್ತಾಗಳನ್ನು ನೋಡ್ಕೊಂಡ್ರೆ ಸಾಕು!

VENU VINOD said...

ಉಗ್ರ ಕಸಬ್‌ನ ದ್ವೇಷಕ್ಕೆ ಏನು ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕೆಂದು ಇವತ್ತಿನ ಪತ್ರಿಕೆಯಲ್ಲಿ ಜ್ಞಾನಪೀಠಿಯೊಬ್ಬರು ಅಪ್ಪಣೆಕೊಡಿಸಿದ್ದಾರೆ.ಕಸಬ್ ಮಾಡಿದ ಯಾವ ಘನಂದಾರಿ ಕೆಲಸಕ್ಕೆ ಈ ಸಂಶೋಧನೆ ಮಾಡಬೇಕೋ ದೇವರೇ ಬಲ್ಲ!

Anonymous said...

ಕಾಮತ್‌ರೇ,
ಅಖಂಡ ಭಾರತದ ಕುರಿತಾಗಿನ ವಿದ್ಯಾನಂದಜೀ ಉಪನ್ಯಾಸ ಈಗಲೂ ಕಿವಿಯಲ್ಲಿ ಗುಯ್ ಅಂತಾ ಇದೆ. ಯಾಕೋ ಬೇಜಾರಾಗ್ತಾ ಇದೆ. ಅಂದಹಾಗೆ ಹಿರಿಯ ಪರ್ತಕರ್ತರು ಅನುಭವದಲ್ಲಿ ಹಿರಿಯರು. ಜ್ಞಾನದಲ್ಲೂ ಅಷ್ಟೆ. ಮೆಧಾವಿಗಳ ಮಾರ್ಗದರ್ಶನದಲ್ಲಿ ಬೆಳೆದುಬಂದವರು! ಹಾಗಾಗಿ ಅವರು ಹೇಳುವ ಮಾತಿನ ಅಂತರಾರ್ಥ ನಮ್ಮ-ನಿಮ್ಮಂತ ಹೊಸಬರಿಗೆ ಅರ್ಥವಾಗಲ್ಲ ಬಿಡಿ!!!
ಕೋಡ್ಸರ