Tuesday, March 24, 2009

ಮಕ್ಕಳಿರಬೇಕಮ್ಮ ಚ್ಯಾನೆಲ್ ತುಂಬಾ....


ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಸರಿಯಾಗಿ ಚಡ್ಡಿ ಹಾಕಿ ಕೊಳ್ಳಲೂ ಬರುತ್ತಿರಲಿಲ್ಲ(ಈಗ ಬರುತ್ತಾ ಅಂತ ಕೇಳಬೇಡಿ ಪ್ಲೀಸ್..)! ಯಾರಾದ್ರೂ ನೆಂಟರು ಮನೆಗೆ ಬಂದವರು ’ಸಂದೀಪ ಯಾವುದಾದರೂ ಹಾಡು ಹೇಳಪ್ಪ ’ ಅಂದ್ರೆ ಕೈ ಕಾಲೆಲ್ಲ ನಡುಗುತ್ತಿತ್ತು.ಆದರೂ ಕಷ್ಟಪಟ್ಟು ’ನಾಯಿ ಮರಿ ನಾಯಿ ಮರೀ ತಿಂಡಿ ಬೇಕೇ ’ ಅನ್ನೋ ಹಾಡನ್ನು ನೆಂಟರು ತಂದಿರುವ ತಿಂಡಿಯನ್ನೇ ಆಸೆಯಿಂದ ದಿಟ್ಟಿಸುತ್ತಾ ನೋಡಿ ಹಾಡಿ ಮುಗಿಸಿದರೆ ಅದೇ ದೊಡ್ಡ ಸಾಧನೆ ಅವತ್ತಿಗೆ. A B C D ಕಲಿತಿದ್ದೇ ಐದನೇ ಕ್ಲಾಸಿನಲ್ಲಾದ್ದರಿಂದ ಇಂಗ್ಲೀಷ್ ರೈಮ್ಸ್ ಅನ್ನೋದೊಂದು ಇದೆ ಅನ್ನೋದೆ ಗೊತ್ತಿರಲಿಲ್ಲ(ಸಧ್ಯ ಬದುಕಿದೆ ಅವತ್ತು).

ಆದರೆ ಮೇಲಿನ ಫೋಟೋದಲ್ಲಿರುವ ಪುಟ್ಟಿ ಸಲೋನಿ ಅನ್ನೋ ಹುಡುಗಿಗೆ ಏಳು ವರ್ಷ ವಯಸ್ಸು ! ಆದರೆ ಈಗಾಗಲೇ ಹನ್ನೊಂದು ಲಕ್ಷದ ಒಡತಿ!

ಕಲರ್ಸ್ ಚಾನಲ್ ನಲ್ಲಿ ಬರುತ್ತಿದ್ದ ’ಛೋಟೇ ಮಿಯಾ’ ಅನ್ನೋ ಹಾಸ್ಯ ಕಾರ್ಯಕ್ರಮದ ವಿಜೇತೆ ಈಕೆ.

ಒಂದು ದಿನ ನಾನು ಹೀಗೆ ರಿಮೋಟ್ ನಿಂದ ಚ್ಯಾನೆಲ್ ಬದಲಾಯಿಸುವಾಗ ಈ ಕಲರ್ಸ್ ಚ್ಯಾನೆಲ್ ನಲ್ಲಿ ಬರುತ್ತಿದ್ದ ’ಛೋಟೆ ಮಿಯಾನ್ ’ ಕಾರ್ಯಕ್ರಮಕ್ಕೆ ಅಚಾನಕ್ ಆಗಿ ಬಂದು ಲ್ಯಾಂಡ್ ಆದೆ . ನಾನು ಈಗಾಗಲೇ ಸ್ಟಾರ್ ಒನ್ ನಲ್ಲಿ ಬರುತ್ತಿದ್ದ ಲಾಫ್ಟರ್ ಚ್ಯಾಲೆಂಜ್ ಗೆ ಅಡಿಕ್ಟ್ ಆಗಿದ್ದರಿಂದ ಬೇರೆ ಹಾಸ್ಯ ಕಾರ್ಯಕ್ರಮಗಳು ಅಷ್ಟೊಂದು ರುಚಿಸುತ್ತಿರಲಿಲ್ಲ.ಆದರೂ ಕಾರ್ಯಕ್ರಮ ಕೊಡುತ್ತಿದ್ದ ಪುಟ್ಟ ಹುಡುಗಿಯ ಮುಂದಿನ ಎರಡು ಹಲ್ಲು ಮುರಿದು ತುಂಬಾ ಮುದ್ದಾಗಿ ಕಾಣುತ್ತಿದ್ದರಿಂದ ಹಾಗೆ ಕುತೂಹಲ ತಡೆಯಲಾಗದೆ ಪೂರ್ತಿ ಕಾರ್ಯಕ್ರಮ ವೀಕ್ಷಿಸಿದೆ.

ಆಮೇಲಂತೂ ಆ ಕಾರ್ಯಕ್ರಮದ ರೆಗುಲರ್ ಗಿರಾಕಿಯಾದೆ ನಾನು.(ಈಗ ಅದೇ ಮಕ್ಕಳು ದೊಡ್ಡವರೊಂದಿಗೆ ಅದೇ ಕಲರ್ಸ್ ಚ್ಯಾನೆಲ್ ನಲ್ಲಿ ಶನಿವಾರ ರಾತ್ರಿ 9.00 ಕ್ಕೆ ’ಛೋಟೇ ಮಿಯಾ-ಬಡೆ ಮಿಯಾ ’ ಅನ್ನೋ ಕಾರ್ಯಕ್ರಮ ಕೊಡ್ತಾ ಇದ್ದಾರೆ ,ಆಸಕ್ತರು ವೀಕ್ಷಿಸಬಹುದು)

ಪುಟ್ಟ ಸಲೋನಿ ಆ ಕಾರ್ಯಕ್ರಮದಲ್ಲಿ ಭಾಗವಸಿದ ಪೈಕಿ ಅತ್ಯಂತ ಚಿಕ್ಕವಳು.ಬರೇ ಏಳು ವರ್ಷ ವಯಸ್ಸು ! ಉಳಿದ ಮಕ್ಕಳೂ ಅದ್ಭುತ ಪ್ರತಿಭಾವಂತರು.ಆದರೆ ವಯಸ್ಸು ಪ್ರತಿಭೆ ಎರಡನ್ನೂ ಗಣನೆಗೆ ತಗೊಂದ್ರೆ ಗೆಲ್ಲೋದು ’ನಮ್ಮ’(ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯೋರೇ!) ಸಲೋನಿನೇ.ಅಂತ ಅದ್ಭುತವಾದ ಪ್ರತಿಭೆ ಅವಳದ್ದು.ಆದರೆ ಕಾರ್ಯಕ್ರಮ ಕೊಟ್ಟಾದ ಮೇಲೆ ಮಾತ್ರ ಈ ಹುಡುಗಿ ಇದರ ಮುದ್ದು ಮಕ್ಕಳ ಹಾಗೆ ಮುದ್ದು ಮುದ್ದಾಗಿ ಆಡ್ತಾಳೆ.ಆದರೆ ಕಾರ್ಯಕ್ರಮ ಕೊಡುವಷ್ಟು ಹೊತ್ತು ಪಾತ್ರದೊಳಗೆ ಪರಕಾಯ ಪ್ರವೆಶ ಮಾಡಿದ ಹಾಗೆ ಅದ್ಭುತವಾಗಿ ಅಭಿನಯಿಸ್ತಾಳೆ!

ಅವಳ ಗಂಗೂಬಾಯಿ ಪಾತ್ರ ಮಾತ್ರ ಅತ್ಯಂತ ದೇಶದಾದ್ಯಂತ ಜನ ಮೆಚ್ಚುಗೆ ಗಳಿಸಿದೆ .ಗಂಗೂಬಾಯಿ ಅಂದ್ರೆ ಮುಂಬೈ ಯ ಮರಾಠಿ ಹೆಣ್ಣುಮಗಳೊಬ್ಬಳ ಪಾತ್ರ.ಆಕೆ ಬೇರೆ ಬೇರೆ ಪಾತ್ರಗಳನ್ನು ಗಂಗೂಬಾಯಿಯ ಮರಾಠಿ ಆಕ್ಸೆಂಟ್ ನಲ್ಲಿ ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಳು.

ಗಂಗೂಬಾಯಿ ನರ್ಸ್ ಆಗಿ,ಪೋಲಿಸ್ ಕಾನ್ಸ್ಟೇಬಲ್ ಆಗಿ ,ಗಗನಸಖಿ ಆಗಿ ಹೀಗೇ ಬೇರೆ ಬೇರೆ ಪಾತ್ರದಲ್ಲಿ ತುಂಬಾನೆ ಚೆನ್ನಾಗಿ ಜನರನ್ನು ನಗಿಸಿದ್ಲು.

ಇಷ್ಟು ಚಿಕ್ಕ ಮಕ್ಕಳಲ್ಲಿ ಅದು ಹೇಗೆ ಅಷ್ಟು ಪ್ರತಿಭೆ ಅಡಗಿದೆಯೋ ದೇವರಿಗೇ ಗೊತ್ತು.ನಮ್ಮ ಕನ್ನಡದ ಕಂದಮ್ಮಗಳಾದ ಸಹನಾ ,ಮನೋಜವಂ,ಓಹಿಲೇಶ್ವರಿ,ರಕ್ಷಿತಾ ಭಾಸ್ಕರ್ ಮುಂತಾದ ಮುದ್ದು ಮಕ್ಕಳದ್ದೂ ಅದ್ಭುತ ಪ್ರತಿಭೆ.ಈ ವಯಸ್ಸಿನಲ್ಲೆ ಮಕ್ಕಳು ಈ ಪರಿ ಪ್ರತಿಭಾವಂತರಾದರೆ ದೊಡ್ಡವರಾದ ಮೇಲೆ ಹೇಗೋ?

ಆದರೆ ಇಂಥ ಮಕ್ಕಳ ಹೆತ್ತವರು ಹೆಸರು ,ಹಣ ಗಳಿಸುವ ಪ್ರಯತ್ನದಲ್ಲಿ ತಮ್ಮ ಮಕ್ಕಳ ಬಾಲ್ಯವನ್ನು ಹಾಳುಗೆಡವುತ್ತಿದ್ದಾರೆ ಅನ್ನೋ ಆರೋಪವೂ ಇದೆ.

ಈಗಿನ ಮಕ್ಕಳು ಎಷ್ಟೇ ಖುಷಿ ಕೊಟ್ಟರೂ ನನ್ನ ಆಲ್ ಟೈಮ್ ಫೇವರೇಟ್ ಮಾತ್ರ ಮಾಸ್ಟರ್ ಮಂಜುನಾಥ್ !

ನನ್ನಂಥವರಿಗೆ ಹಾಸ್ಯದ/ಸಂಗೀತದ ರಸದೌತಣ ಉಣಿಸಿದ ಮಕ್ಕಳಿಗೆ ಹಾಗೂ ಅವರನ್ನು ಸೃಷ್ಟಿಸಿದ ಅವರ ಹೆತ್ತವರಿಗೆ ನನ್ನದೊಂದು ಥ್ಯಾಂಕ್ಸ್ !

ಫೋಟೋ ಕೃಪೆ :’ಕಲರ್ಸ್ ಟಿ.ವಿ’

14 comments:

Pramod said...

:)

ಆದ್ರೆ ಚಿಕ್ಕದರಲ್ಲೇ ತು೦ಬಾ 'ಫೇಮಸ್' ಆಗಿಬಿಟ್ರೆ ಮು೦ದೆ ಲೈಫಲ್ಲಿ ಏನ್ ಮಾಡ್ಬೇಕು ಅ೦ತಾ ಗೊ೦ದಲ ಕಾಡ್ಬೋದೇನೋ?..

PARAANJAPE K.N. said...

ಸ೦ದೀಪ ಕಾಮತ್,
ನಮಸ್ಕಾರ. ನಿಮ್ಮ ಬ್ಲಾಗಿಗೆ ನಾನೂ ಒಬ್ಬ ಖಾಯ೦ ಗಿರಾಕಿ, ಚೆನ್ನಾಗಿ ಬರೀತಿರಿ. ಹೌದು ಈಗೀಗ ಚಾನಲ್ ಗಳಲ್ಲಿ ಮಿ೦ಚುತ್ತಿರುವ ಬಾಲಪ್ರತಿಭೆಗಳನ್ನು ನೋಡಿದಾಗ, ಮು೦ದೆ ಇವರೆಲ್ಲ ಏನಾಗಬಹುದು ಅ೦ತ ಅನ್ನಿಸುತ್ತೆ. ಉತ್ತಮ ಲೇಖನ, ನನ್ನ ಬ್ಲಾಗಿಗೂ ಬರುತ್ತಿರಿ.
www.nirpars.blogspot.com

ಶ್ರೀಹರ್ಷ Salimath said...

ಸಂದೀಪ್ ,
ಮಂಜುನಾತ್ ಆ ಚಿಕ್ಕ ವಯಸ್ಸಿಗೆ ಅಷ್ಟು ಅದ್ಭುತವಾದ ಎಕ್ಸ್ಪ್ರೆಶನ್ ಕೊಡ್ತಿದ್ದ. ಅವನ ಮುಂದೆ ಹೀರೋಗಳೇ ನಾಚ್ಕೊಬೇಕು ಹಾಗೆ!
ಇಂತಹ ಕಾರ್ಯಕ್ರಮಗಳ ಬಗ್ಗೆ ನನಗೂ ಅಸಹನೆ ಇದೆ. ಮಕ್ಕಳನ್ನು ಹಾಡಿಸಿ ಆಡಿಸಿ ಅವರ ಪ್ರತಿಭೆಗಳನ್ನು ಪುರಸ್ಕರಿಸಿ ಕಳುಹಿಸಿದರಾಯಿತು. ಡ್ರಾಮ ಮಾಡಿ ಚಿಕ್ಕ ಮಕ್ಕಳ ಮನಸ್ಸಿಗೆ ನೋವುಂಟು ಮಾಡುವುದು ಎಷ್ಟು ಸರಿ ?
ನಾವೆದ್ ರವಿಯ ಬೂಗಿ ವೂಗಿ ಮತ್ತು ಎಸ್ಪಿಬಿ ಯ "ಎದೆತುಂಬಿ ..." ಈ ಥರ ಮಾಡ್ತಿರಲಿಲ್ಲ. ಇತ್ತೀಚಿಗೆ ಇದರಲ್ಲೂ ಡ್ರಾಮಗಳು ಕಾಣಿಸಿಕೊಳ್ಳತೊಡಗಿವೆ. ಛೆ !

Unknown said...

ಕಾಲ ಬದಲಾದಂತೆ ನಾವೂ ಬದಲಾಗಬೇಕು! ಇಲ್ಲದಿದ್ದರೆ ರೇಸಿನಲ್ಲಿ ಹಿಂದೆ ಉಳಿಯೋದು ಗ್ಯಾರಂಟಿ. ಕೇವಲ ಸ್ಕೂಲು ಅನ್ನುತ್ತಿದ್ದ ಕಾಲ ಎಂದೋ ಹೋಯಿತು. ಈಗ ಶಿಕ್ಷಣ ಬಹುಮುಖಿ!

ಮನಸು said...

ಸ೦ದೀಪ ಕಾಮತ್,
ನೀವು ಹೇಳಿದ ಮಗುವಿನ ಬಗ್ಗೆ ತಿಳಿದು ಕುಶಿಯಾಯಿತು... ಮಕ್ಕಳ ಕಲೆ , ಪ್ರತಿಭೆ ಅಸ್ಟು ಚೆನ್ನಾಗಿದೆ ಈಗ..
ಈಗಿನ ಮಕ್ಕಳ ಪ್ರತಿಭೆ ಹೇಳಲು ಅಸಾಧ್ಯ....ನಾವು ಈಗ ಕಲಿಯೋದನ್ನ ಮಕ್ಕಳು ಆಗಲೇ ಕಲಿತುಬಿಟ್ಟಿದಾರೆ.. ಆದರೆ ಇಷ್ಟು ಚುರುಕು ಮಕ್ಕಳೊಂದಿಗೆ ಸಾಮಾನ್ಯ ಮಕ್ಕಳು ಮುಜುಗರಕ್ಕೆ ಹೊಳಗಾಗುತ್ತಾರೆ... ಎಲ್ಲ ಕಡೆ ಸ್ಪರ್ಧೆ ಪ್ರಾರಂಭ ಆಗಿಬಿಟ್ಟಿದೆ... ಸ್ಪರ್ಧೆ ತುಂಬಾ ಕಷ್ಟ ಕೊಡುತ್ತೇನೋ ಕೆಲವರಿಗೆ ಅನ್ನಿಸುತೆ..

ಸುಧೇಶ್ ಶೆಟ್ಟಿ said...

ನಾನು ಈ ಕಾರ್ಯಕ್ರಮ ನೋಡಿದ್ದೆ ಸ೦ದೀಪ್... ಆ ಹುಡುಗಿ ಅದೆಷ್ಟು ಚೆನ್ನಾಗಿ ನಟಿಸುತ್ತಾಳೆ... ಅವತ್ತು ಅಮ್ಮನ ಪಾತ್ರ ಮಾಡಿದ್ದಕ್ಕೆ ಆ ಹುಡುಗಿಗೆ ನಲವತ್ತಕ್ಕೆ ನಲವತ್ತು ಸಿಕ್ಕಿಬಿಟ್ಟಿತ್ತು.

Anonymous said...

ಪ್ರತಿಭೆ ಯಾವಾಗಲೂ ಇತ್ತು. ಈಗ ಅದಕ್ಕೆ ಬೇರೆ ಬೇರೆ ರೀತಿಯಲ್ಲಿ ಬಹಳಷ್ಟು ವೇದಿಕೆ ಸಿಗುತ್ತಾ ಇದೆ. ಅದನ್ನ ನೋಡಿ ಖುಷಿ ಪಡಬೇಕು. ಆದರೆ ಬಾಲ್ಯದಲ್ಲಿ ಮಿಂಚಿದ ಎಲ್ಲರೂ ದೊಡ್ಡವರಾದಮೇಲೂ ಮಿಂಚುತ್ತಾರೆ ಎಂಬ ಖಾತ್ರಿಯಿಲ್ಲ. ಹಲವಾರು ಸನ್ನಿವೇಶ ಸೃಷ್ಟಿಸಿದ ಕೂಸುಗಳಿರುತ್ತವೆ.

-vik

sunaath said...

ಸಂದೀಪ,
ಆ ಬಾಲೆಯಲ್ಲಿ ಅಪಾರ ಪ್ರತಿಭೆ ಇರಬಹುದು. ಅದು ಬರಿ
commercial exploitation ಆಗ್ತಾ ಇದೆ. ಬಾಲಪ್ರತಿಭೆಗಳು ಮುಂದೂ ಸಹ ಮಿಂಚುವವು ಎಂದು ಹೇಳಲಾಗದು. ರಾಜಕಪೂರನ ಚಿತ್ರಗಳಲ್ಲಿ ಶ್ರೇಷ್ಠ ಅಭಿನಯ ಕೊಟ್ಟ ಡೇಜಿ ಇರಾಣಿ ಕಣ್ಮರೆಯಾಗಿ ಬಿಟ್ಟಳು; ಅರುಣಾ ಇರಾಣಿ
ಸಾಮಾನ್ಯ ನಟಿ ಆದಳು.

Unknown said...

yugAdi habbada shuBAShayagaLu

ಸಂದೀಪ್ ಕಾಮತ್ said...

ರೂಪಾ ನಿಮಗೂ ಯುಗಾದಿ ಹಬ್ಬದ ಶುಭಾಷಯಗಳು..

ಹರೀಶ ಮಾಂಬಾಡಿ said...

ಸಂದೀಪ್,

ಇಂದಿನ ಮಕ್ಕಳಿಗೆ ಸಿಗೋ ಸ್ಕೋಪ್ ಅಂಥಾದ್ದು. ಹುಟ್ಟಿ ವರ್ಷವಾದರೆ ಸಾಕು ಬರ್ತ್ ಡೇ ಖುಷಿಗೆ ಮೊಬೈಲ್ ಉಡುಗೊರೆ ಕೊಡ್ತಾರೆ..

Anonymous said...

Dear Sandeep
Master Manjunath was my favorite too in Swami and Friends...(malgudi days). assuming that you and me are talking about the same manjunath. he was a natural.
But where is he now???
new generation kids have loads of self confidence da. and some parents do prod them into being all round performers.
But where will all these lead to once they grow up is the BIG question.
good blog da
:-)
malathi S

Unknown said...

i too a fan of his acting... now the manjunath is working for a "nice!!! " company.. well known the nice karidar plan ;-) ;-) he is working as a social wellfare officer or some thing ..not sure the designation .. i saw the interview in paper ... he is tired of the politics in the kannada industry...

Guruprasad said...

ಈಗಿನ generation ಮಕ್ಕಳೇ ಹಾಗೆ...
ಸಿಕ್ಕ oprtunityna ತುಂಬ ಚೆನ್ನಾಗಿ use ಮಾಡ್ಕೊತಾರೆ.... ನಾನು ಎ ಹುಡುಗಿಯ ಆಕ್ಟಿಂಗ್ ಅನ್ನು ನೋಡಿದ್ದೇನೆ .... ವೆರಿ brilient,,,

Guru