Tuesday, August 26, 2008

ಫೂಂಕ್ ಮತ್ತೆ ಭೂತದ ಕೋಲ !



ಈ ಭಾನುವಾರ ’ಫೂಂಕ್’ ಚಿತ್ರ ನೋಡಲು ಹೋಗಿದ್ದೆ . ಚಿತ್ರ ಚೆನ್ನಾಗಿತ್ತು .ತೀರಾ ಭಯಾನಕವಾಗಿಲ್ಲವಾದ್ರೂ ನೋಡುವಂತಿತ್ತು.
ಚಿಕ್ಕ ಹುಡುಗಿ ಮತ್ತೆ ಕುರುಡ ತಾಂತ್ರಿಕನ ಅಭಿನಯವಂತೂ ಸೂಪರ್.

ಅಂದ ಹಾಗೆ ಫೂಂಕ್ ನೋಡಿದಾಗ ನಂಗೆ ಮೊದಲಿಗೆ ನೆನಪಿಗೆ ಬಂದಿದ್ದು ನಮ್ಮೂರ ಕೋಲ !
ಸ್ವಾಮಿ ಕೋಲ ಅಂದ್ರೆ ಕೋಕಾಕೋಲಾ ಅಲ್ಲ. ಮಂಗಳೂರಿನಲ್ಲಿ ನಡೆಯೋ ಭೂತಾರಾಧನೆಗೆ ಭೂತದ ಕೋಲ ಅಂತಾರೆ ತುಳುವಿನಲ್ಲಿ.

ನಾವು ದೇವರು ,ದೈವಗಳನ್ನು ಎಷ್ಟು ನಂಬ್ತೀವೋ ಬಿಡ್ತೀವೋ ,ಆದ್ರೆ ಅವುಗಳು ಇರೋದಂತೂ ನಿಜ!

ನಮ್ಮ ದೈತ್ಯ ಬರಹಗಾರರು(ಸಾರಿ ವಿಕಾಸ್ ಕಾಪಿ ರೈಟ್ ನಿನ್ ಹತ್ರ ಇದ್ರೆ ಈ ಶಬ್ದಕ್ಕೆ!) ’ನಾನು ದೇವರನ್ನು ನಂಬೊಲ್ಲ ಅಂತ ಹೇಳ್ತಾನೆ ,ನನ್ನ ಪುಸ್ತಕ ಬಿಡುಗಡೆ ಇದೆ ನೀವೆಲ್ಲ ಹರಸಬೇಕು ’ ಅಂತಾರೆ.
ಹಾರೈಕೆ ಮೇಲೆ ಅಷ್ಟು ವಿಶ್ವಾಸ ಇಟ್ಟಿರೋರು ದೇವರಿದ್ದಾನೆ ಅಂತ ಯಾಕೆ ಅಲ್ಲಗಳೆಯುತ್ತಾರೆ??ದೇವರನ್ನು ಸ್ವತಃ ನೋಡಿಲ್ಲ ಅಂತಾನಾ?
ಯಾವುದೋ ಕಾಮಿಡಿ ಚಿತ್ರದಲ್ಲಿ ಒಬ್ಬ ಕೇಳ್ತಾನೆ ’ನೀನು ಜಪಾನ್ ನೋಡಿದ್ದೀಯಾ ?’ ಅಂತ ಇನ್ನೊಬ್ಬ ’ಇಲ್ಲ’ ಅಂತಾನೆ ’;’
ನೀನು ಜಪಾನ್ ನೋಡಿಲ್ಲ ಅಂದ ಮಾತ್ರಕ್ಕೆ ಜಪಾನ್ ಈ ಪ್ರಪಂಚದಲ್ಲೇ ಇಲ್ಲ ಅನ್ನೋದು ತಪ್ಪಲ್ವ ?’ ಅಂತಾನೆ ಮೊದಲನೆಯವನು!!

ಎಷ್ಟು ನಿಜ ಅಲ್ವಾ? ಈ ವಾದ !

ಅದೆಲ್ಲ ಬಿಡಿ ಈಗ ವಿಷಯಕ್ಕೆ ಬರೋಣ . ಸ್ಟೋರಿ ಏಮಂಟೆ ......ಫೂಂಕ್ ಚಿತ್ರದಲ್ಲಿ ಚಿಕ್ಕ ಹುಡುಗಿಯ ಮೇಲೆ ಪ್ರೇತಾತ್ಮ ಬರುತ್ತಲ್ಲ ,ಅದೇ ರೀತಿ ಮೈ ಮೇಲೆ ಬಂದ ಪ್ರೇತಾತ್ಮಗಳನ್ನು ಬಿಡಿಸಲು ನಮ್ಮೂರಿನ ಭೂತದ ಹತ್ತಿರ ಬರುತ್ತಿದ್ದರು ತುಂಬಾ ಜನ.

ಇದೆಲ್ಲ ನಾಟಕ ಅಂತೆಲ್ಲಾ ನಿಮ್ಮ ವಾದ ಆಗಿದ್ರೆ ಬನ್ನಿ ನಮ್ಮೂರಿಗೆ ತೋರಿಸ್ತೀನಿ !
ಭೂತದ ವೇಷಧಾರಿನ ನೋಡಿದ್ರೆ ದೊಡ್ಡವರೇ ಭಯ ಪಡಬೇಕು ಆ ರೀತಿ ಇರುತ್ತೆ.ಅಂಥದ್ದರಲ್ಲಿ ಪುಟ್ಟ ಮಕ್ಕಳು ಭೂತಕ್ಕೆ ಚ್ಯಾಲೆಂಜ್ ಹಾಕೋ ದೃಶ್ಯ ಮಾತ್ರ ರೋಮಾಂಚನಕಾರಿ.


ಹೀಗೆ ಒಂದು ವರ್ಷ ,ಒಂದು ಪುಟ್ಟ ಮಗುವಿಗೆ ಮೈ ಮೇಲೆ ದೆವ್ವ ಬಂದಿತ್ತು .ಅದನ್ನು ಬಿಡಿಸಲು ನಮ್ಮೂರಿನ ಭೂತದ ಕೋಲಕ್ಕೆ ತರಲಾಗಿತ್ತು .
ಆ ಭೂತವನ್ನು ಬಿಡಿಸಲು 2 ಘಂಟೆ ಹಿಡಿಯಿತು ದೈವಕ್ಕೇ !!!
ಕೇವಲ ನಾಲಕ್ಕನೇ ಕ್ಲಾಸ್ ಹುಡುಗ ಆ ರೀತಿ ಪ್ರಭುದ್ದವಾಗಿ ಮಾತಾಡೋದು ಸಾಧ್ಯಾನೇ ಇಲ್ಲ. ಎಷ್ಟೇ ಮನಶ್ಶಾಸ್ತ್ರ ,ಸುಪ್ತ ಮನಸ್ಸು ಅಂದ್ರೂ ಅದನ್ನು ನಂಬೋಕೆ ಸಾಧ್ಯವಿಲ್ಲ.

ಅಷ್ಟಕ್ಕೂ ಆಗಿದ್ದೇನಂದ್ರೆ ಆ ನಾಲಕ್ಕನೆ ಕ್ಲಾಸ್ ಹುಡುಗ ಕ್ರಿಕೆಟ್ ಆಡ್ತಿರ್ಬೇಕಾದ್ರೆ ಯಾವುದೋ ಕಲ್ಲಿನ ಮೇಲೆ ನಿಂತಿದ್ದನಂತೆ !

ಆ ಕಲ್ಲಿನ ಓನರ್ ಪ್ರೇತಾತ್ಮಕ್ಕೆ ಸಿಟ್ತು ಬಂದು ಹುಡುಗನ ಮೈ ಮೇಲೆ ಬಂದಿತ್ತು !!

ಈ ಪ್ರೇತಾತ್ಮಗಳ ಬಾಯಿ ಬಿಡಿಸೋದೆ ದೊಡ್ಡ ಸವಾಲು ನಮ್ಮ ಭೂತಕ್ಕೆ .ಮೊದಲ ಅರ್ಧ ಗಂಟೆಯಂತೂ ನೀನು ಯಾರು ,ಯಾಕೆ ಈ ಹುಡುಗನ ಮೇಲೆ ಬಂದೆ ಅಂತ enquiery ಮಾಡೋದೆ ಕಷ್ಟದ ಕೆಲಸ.
ಟಿ.ಎನ್ ಸೀತಾರಾಂ ಏನಾದ್ರೂ ನಮ್ಮ ಭೂತ ವಾದ ಮಾಡೊ style ಏನಾದ್ರೂ ನೋಡಿಬಿಟ್ರೆ ದಂಗಾಗಿ ಬಿಡ್ತಾರೆ.

ಬಹಳ ಕಷ್ಟ ಪಟ್ಟು ಬಾಯಿ ಬಿಡಿಸಿದಾಗ ಪ್ರೇತದ ಕಲ್ಲಿನ ಒನರ್ ಹೇಳಿದ್ದಿಷ್ಟು " ಆಟದ ನೆಪದಲ್ಲಿ ಹುಡುಗರು ನನ್ನ ಮೇಲೆ ಕುಣಿದಾಡ್ತಾರೆ ,ಮನೆಯರು ನನಗೆ ನೀಡಬೇಕಾದ ಗೌರವ ನೀಡ್ತಾ ಇಲ್ಲ ,ಅದನ್ನು ಹೇಳೊದಕ್ಕೆ ನಾನು ಈ ಹುಡುಗನ ಮೇಲೆ ಬಂದೆ.ಇದ್ದಿದ್ರಲ್ಲೇ ಪೋಲಿ ಹುಡುಗ ಇವನು ನನ್ನನ್ನು ಕಂಡ್ರೆ ಇವನಿಗೆ ಅಷ್ಟಕ್ಕಷ್ಟೆ !" ಅಂತ ಪಾಪ ಆ ಹುಡುಗನೇ ಅವನ ಬಾಯಿಯಿಂದ ಹೇಳ್ತಾ ಇದ್ರೆ ನಗು ಬರುತ್ತೆ.

ನಿನಗೆ ಕೊಡಬೇಕಾದ ಗೌರವ ಕೊಡಿಸ್ತೀನಿ ಬಿಟ್ಟು ಹೋಗು ಅಂದಾಗ ,"ಹೋಗಲ್ಲ ಏನ್ ಮಾಡ್ತೀಯಾ? " ಅಂತ ಭೂತಕ್ಕೇ ಚೋಟುದ್ದ ಹುಡುಗ ಸವಾಲು ಹಾಕಿದಾಗ್ ,ಇದು ಖಂಡಿತ ನಾಟಕ ಅಲ್ಲ ಅನ್ನೋದು ಮನದಟ್ಟಾಗುತ್ತೆ.

ಹಾಗೂ ಹೀಗೂ ಪ್ರೇತವನ್ನು convince ಮಾಡಿ ಒಂದು ತೆಂಗಿನಕಾಯಿಯಲ್ಲಿ ಬಂಧಿ ಮಾಡಿದ ಮೇಲೆ ಸುಖಾಂತ್ಯ!

ಇಷ್ಟೆ ಅಲ್ಲದೆ ಭೂತದ ಪಾತ್ರಧಾರಿ ಅಷ್ಟು ಸುಲಲಿತವಾಗಿ ಬೆಳಿಗ್ಗೆ ತನಕ ಮಾತಾಡೋದು ಒಂದು ಅದ್ಭುತ! ಇದು ಒಂದು ಕಲೇನೂ ಹೌದು .

ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಅಲ್ವ??

"ಆಪ್ ಅಗರ್ ಭಗವಾನ್ ಕೋ ಮಾನ್ ತೇ ಹೆಂ ತೋ ಶೈತಾನ್ ಕೋ ಭಿ ಮಾನ್ ನಾ ಪಡೆಗಾ " ಅನ್ನೋದು ಹಳೆಯ ಸಂಗತಿ .

ಫೂಂಕ್ ನಲ್ಲಿ ಹೇಳೊದು " ಬಿನಾ ಜಾನೆ ಹಿ ಇಸ್ ಮೆ ಕ್ಯಾ ಹೈ, ಅಗರ್ ಕ್ರೋಸಿನ್ ಕೋ ಮಾನ್ ತೇ ಹೋ ತೊ ಭಗವಾನ್ ಕೋ ಮಾನ್ ನೇ ಮೇ ಕ್ಯಾ ಹರ್ಝ್ ಹೈ "

ಭೂತದ ಕೋಲ ಏನೆಂದೇ ಗೊತ್ತಿಲ್ಲದವರು ಇದನ್ನು ನೋಡಿ .
http://www.youtube.com/watch?v=yU2dfJusI1c&feature=related

ಚಿತ್ರ ಕೃಪೆ : As usual ಕದ್ದದ್ದು ನಿಮಗೇನು ಪ್ರಾಬ್ಲೆಮ್?

7 comments:

Anonymous said...

ಸಂದೀಪ,
ಮಸ್ತ್ ಆಗಿದೆ ನಿಮ್ಮ ಶೈಲಿ. ಓದುತ್ತ ಇದ್ದರೆ ನಿಮ್ಮ ಜೊತೇನೇ ಕೂತು ಮಾತಾಡಿದ ಹಾಗೆ. ಆಮೇಲೆ ನಿಮಗೆ ಕವಿತೆಗಳು ಯಾಕೆ ಅರ್ಥ ಆಗಲ್ಲ ಅಂತ ಸವಿವರವಾಗಿ ಹೇಳಿರುವ ಬರಹವೂ ಖುಶಿ ಕೊಟ್ಟಿತು. ಬಹಳ ಫ್ರ್ಯಾಂಕ್ ಆಗಿ ಯಾವ ಭಿಡೆಯಿಲ್ಲದೆ ಬರೀತೀರಿ. ಹೀಗೇ ಬರೀರಿ. ’ಫೂಂಕ್’ಬಗ್ಗೆ ಬಹಳ ಕೆಟ್ಟ ರಿವ್ಯೂಗಳು ಬಂದಿದ್ದು ಓದಿ ನೋಡೋದಾ ಬೇಡ್ವಾ ಅಂತಿದ್ದೆ. ಈವತ್ತು ಬೆಂಗಳೂರ ಪ್ರವೀಣ್ ಪೊನ್ನಣ್ಣ ಅನ್ನೋರು ಇಡೀ ಥಿಯೇಟರಿನಲ್ಲಿ ಒಬ್ರೇ ಕೂತ್ಕೊಂಡು ಮೂವೀ ನೋಡಿದ್ದು ಓದಿದೆ. ನಿಮ್ಮ ಬರಹ ಕೂಡ ನೋಡಬೇಕು ಅನ್ನಿಸೋ ಹಾಗಿದೆ.
-ಟೀನಾ

ಸಂದೀಪ್ ಕಾಮತ್ said...

@ ಟೀನಾ

ಧನ್ಯವಾದಗಳು ಮೆಚ್ಚುಗೆಯ ನುಡಿಗೆ :)

ರಿವ್ಯೂ ನೋಡಿ ಯಾವತ್ತೂ ಹೋಗ್ಭೆಡಿ ಸಿನೆಮಾಗೆ !
ನಾನು ನೋಡಿದ್ದು 150Rs ಬ್ಲ್ಯಾಕ್ನಲ್ಲಿ ! ಹಾಗಾಗಿ ಸಿನೆಮಾ ಓಕೆ!
ಇದೇ ಸಿನೆಮಾನ PVR ನಲ್ಲಿ 600Rs ಕೊಟ್ಟು ನೋಡಿದ್ರೆ ನನ್ನ ಅಭಿಪ್ರಾಯ ಬೇರೆ ಅಗಿರ್ತಿತ್ತು !
ಬಿಟ್ಟಿ ನೋಡಿದ್ರಂತೂ ರಾಮ್ ಗೋಪಾಲ್ ವರ್ಮನನ್ನ ಇನ್ನೂ ಹೊಗಳ್ತಾ ಇದ್ದೆ!

ಆದ್ರೆ 47,500 Rs ಕೊಟ್ಟು ಸಿನೆಮಾ ನೋಡಿದ ಪ್ರವೀಣ್ ಹತ್ರ ಯಾರೂ ರಿವ್ಯೂ ಕೇಳ್ಬೇಡ್ರಪ್ಪೋ ! ಪಾಪ![ಆದ್ರೆ ಬಿಟ್ಟಿ(ofcourse 47,500Rs ಕೊಟ್ಟಿದ್ದಾನೆ!) ಪ್ರಚಾರ ಸಿಕ್ತು ಅವನಿಗೆ ]

ವಿ.ರಾ.ಹೆ. said...

ನಾನಿನ್ನೂ ನೋಡಿಲ್ಲ ಫೂಂಕ್. ಆದ್ರೆ ಅದರ ಕಥೆ ಕೇಳಿದ ಮೇಲೆ ಅದು ಯಂಡಮೂರಿಗಳ ತುಳಸೀದಳದ ತರನೇ ಇರೋದು ಗೊತ್ತಾಯ್ತು. ನಾನು ಖುದ್ದಾಗಿ ಭೂತದ ಕೋಲ ನೋಡಿಲ್ಲ ಒಂದುಸಲಾನೂ , ಯಾವಾಗ ತೋರಿಸ್ತೀಯ?

ಸಂದೀಪ್ ಕಾಮತ್ said...

@ vikas

ಫೂಂಕ್ ನ ಆದಷ್ಟು ಕಮ್ಮಿ ಖರ್ಚಿನಲ್ಲಿ ನೋಡಿದ್ರೆ ಅಭಿಪ್ರಾಯ ಚೆನ್ನಾಗಿರುತ್ತೆ.ಹಾಗಂತ ಸಿಡಿನಲ್ಲಿ ನೋಡೋದು ವೇಸ್ಟ್ !

ಇನ್ನು ಭೂತದ ಕೋಲ ನೋಡದೆ ನನೆ ಆರು ವರ್ಷ ಆಯ್ತು :( ಬೆಂಗಳೂರಿಗೆ ಬಂದ ಮೇಲೆ ನೋಡೋಕೆ ಅಗಿಲ್ಲ.

ನಿನ್ನನ್ನು ಕರ್ಕೊಂಡು ಹೋಗ್ತೀನಿ ಆದ್ರೆ ತುಳು ಬಂದಿಲ್ಲ ಅಂದ್ರೆ ಕಷ್ಟ .
ಆದ್ರೂ ಇದನ್ನು ನೋಡು.

http://www.youtube.com/watch?v=XDcYNYVwRgs&feature=related

ಸುಧೇಶ್ ಶೆಟ್ಟಿ said...

ಭೂತ, ಕೋಲದ ಬಗ್ಗೆ ಬರೆದಿರುವುದು ಓದಿ ತು೦ಬಾ ಖುಷಿಯಾಯಿತು. ನಾನು ತು೦ಬಾ ಸಲ ನೋಡಿದ್ದೇನೆ. ಸಣ್ಣವನಿರುವಾಗ ಅದರ ಬಗ್ಗೆ ತು೦ಬಾ ಕುತೂಹಲ, ಭಯ ಇತ್ತು. ಆದರೆ ಕಾಲೇಜಿಗೆ ಹೋಗುತ್ತಿದ್ದ೦ತೆ ಅದೆಲ್ಲಾ ಮೂಢನ೦ಬಿಕೆಗಳು ಅ೦ತನ್ನಿಸತೊಡಗಿತು. ಆದರೆ ನೀವು ಹೇಳಿದ ಹಾಗೆ ಭೂತ ವಾದ ಸ್ಟೈಲ್ ಮಾತ್ರ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತೆ. ಕೆಲವು ಭೂತಗಳು ತಮಾಷೆಯಾಗಿ ಮಾತನಾಡುವುದು ಇದೆ!

ತೇಜಸ್ವಿನಿ ಹೆಗಡೆ said...

ಸಂದೀಪ್,

ನೀವು ಗಂಭೀರವಾದ ವಿಷಯವನ್ನು ಲಘುವಾಗಿ ಹೇಳಿದ್ದೀರೋ ಇಲ್ಲಾ ಇಂತಹ ವಿಷಯಗಳನ್ನು ಲಘುವಾಗಿ ಪರಿಗಣಿಸದಿರಿ ಎಂದು ಗಂಭೀರವಾಗಿ ಹೇಳಿದ್ದೀರೋ ತಿಳಿಯದು. ಆದರೆ ಒಂದಂತೂ ಸತ್ಯ ಅತೃಪ್ತ ಆತ್ಮಗಳಿರುತ್ತವೆ. ಸರಿಯಾದ ಕ್ರಿಯಾಕರ್ಮಗಳನ್ನು ಮಾಡದೇ ತ್ರಿಶಂಕು ಸ್ಥಿತಿಯಲ್ಲಿರುವ ಆತ್ಮಗಳು ಕೆಲವೊಂದು ಸೂಕ್ಷ್ಮ ದೇಹಿ/ಮನುಸ್ಸುಗಳಿರುವವರನ್ನು ಆಕ್ರಮಿಸಿ ತಮ್ಮ ಆಸೆ/ಆಕಾಂಕ್ಷೆಗಳನ್ನು ಹೇಳುವ ನಿಜ ಘಟನೆಯನ್ನು ಕಣ್ಣಾರೆ ಕಂಡಿರುವೆ.. ಆ ನೋವನ್ನು ಸ್ವತಃ ನೋಡಿ ಮನಗಂಡಿರುವೆ. ಹಾಗಾಗಿ ನಾನು ದೇವರು ಹಾಗೂ ಅತೃಪ್ತ ಆತ್ಮಗಳನ್ನು ನಂಬುವೆ. ಜೊತೆಗೆ ನೀವು ಹೇಳುತ್ತಿರುವ ಭೂತಗಳೂ ಇರಬಹುದು. ಯಾಕೆಂದರೆ ನಾನು ಜಪಾನ್ ಇದೆಯೆಂದು ನಂಬುವೆ(ಅದನ್ನು ನೋಡಿರದಿದ್ದರೂ :) )

ಸಂದೀಪ್ ಕಾಮತ್ said...

@ ತೇಜಸ್ವಿನಿ

ನಾನು ಯಾವ ವಿಷಯವನ್ನು ಯಾವ ರೀತಿ ಹೇಳ್ತೀನಿ ಅಂತ ನಂಗೇ ಗೊತ್ತಿಲ್ಲ .ಉದ್ದಕ್ಕೆ ಬರೀತಾ ಹೋಗೋದು ಅಷ್ಟೆ!!