Monday, May 11, 2009

ಪಿಯುಸಿ - ಹೆಲ್ಪ್ ಲೈನ್ !

ಪ್ರತಿ ಸಲದ ಹಾಗೆ ನಮ್ಮೂರು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದೆ -ಸಂತೋಷದ ವಿಚಾರ ! ಆದರೆ ಈ ಸಲ ಹಿಂದಿನಂತೆ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ಆತ್ಮಹತ್ಯೆಯ ಹಾದಿ ಹಿಡಿಯದ ಹಾಗೆ ಎಚ್ಚರ ವಹಿಸಿ ನಮ್ಮ ಸರಕಾರ ವಿಶೇಷ ಹೆಲ್ಪ್ ಲೈನ್ ಗಳನ್ನು ರಚಿಸಿ ಅದರ ಬಗ್ಗೆ ಪ್ರಚಾರವನ್ನೂ ಮಾಡಿದ್ರು.

ಆ ಹೆಲ್ಪ್ ಲೈನ್ ಗೆ ಕೆಲ ಹುಡುಗಿಯರು ಕಾಲ್ ಮಾಡಿ ತಾವು ಅನುತ್ತೀರ್ಣರಾಗೋ ಭಯವನ್ನು ವ್ಯಕ್ತಪಡಿಸಿದ್ದು ಹೆಲ್ಪ್ ಲೈನ್ ನಲ್ಲಿದ್ದ ತಜ್ಞರು ತಮ್ಮ ಬುದ್ಧಿ ಉಪಯೋಗಿಸಿ ಆ ಹುಡುಗಿಯರ ಮನ ಒಲಿಸಿದ್ದೂ ಆಯಿತು !

ಇವತ್ತು ಬೆಳಿಗ್ಗೆ ಎದ್ದು ಪೇಪರ್ ನೋಡಿದ್ರೆ ಕಾದಿತ್ತು ಸುದ್ದಿ .

ಪಿ.ಯು.ಸಿ ಯಲ್ಲಿ ಮಗಳು ಫೇಲ್ ಆಗಿದ್ದಕ್ಕೆ ತಂದೆ ಆತ್ಮಹತ್ಯೆ !!!

3 comments:

Unknown said...

Really really bad ... then the help line should be there for parents also ... really a sad news .....

ವಿನುತ said...

ಇ೦ತದೊ೦ದು ದುರವಸ್ಥೆಗೆ ಶಿಕ್ಷಣ ವ್ಯವಸ್ಥೆಯನ್ನು ದೂರಬೇಕೋ, ಮಾತಾಪಿತರ ಅಜ್ಞಾನವನ್ನು ದೂರಬೇಕೋ, ಅ೦ತೂ ಸ್ಪರ್ಧಾತ್ಮಕ ಯುಗದ ಹೆಸರಿನಲ್ಲಿ ಮಕ್ಕಳು ಹಾಗೂ ಪೋಷಕರು ಅನಗತ್ಯ ಒತ್ತಡಕ್ಕೆ ಒಳಗಾಗುತ್ತಿರುವುದ೦ತೂ ದಿಟ.

Poorni said...

Good writeup on the real life situation.