Tuesday, July 29, 2008

ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ

’ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ ?’- ಇಂಥ ಪ್ರಶ್ನೆಯೊಂದು ತುಂಬಾ ವರ್ಷಗಳಿಂದ ನನಗೆ ಕಾಡುತ್ತಾ ಬಂದಿದೆ. ಬಹುತೇಕ ಎಲ್ಲ ಟ್ಯಾಬ್ಲಾಯ್ಡ್ ಪತ್ರಿಕೆ, ಮಾಸ ಪತ್ರಿಕೆ ಗಳಲ್ಲಿ ಕವಿತೆಗಳು ಬಂದೇ ಬರುತ್ತವೆ.ಅದೂ ಅಲ್ದೆ ಇತ್ತೀಚೆಗೆ ಎಲ್ಲಾ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗಿನಲ್ಲಿ ಸ್ವ ರಚಿತ ಕವಿತೆಗಳು ಹಾಕ್ತಿದ್ದಾರೆ.ಆದ್ರೆ ನನ್ಗೆ ಕವಿತೆಗಳು ಬರೆಯೋದು ಬಿಡಿ ,ಯಾರೊ ಬರೆದಿರೋ ಕವಿತೆಗಳನ್ನು ಓದಿ ಆನಂದ ಪಡೊ ಭಾಗ್ಯಾನೂ ಇಲ್ವೆ??ನನ್ಗೆ ಕವಿತೆಗಳಂದ್ರೆ ’ಮಾಲ್ಗುಡಿ ಡೇಸ್’ ಸೀರಿಯಲ್ ಥರ್!ಚಿಕ್ಕವನಿರ್ಬೇಕಾದ್ರೆ ತುಂಬಾ interest ನಿಂದ ಆ ಸೀರಿಯಲ್ ನೋಡೊಕೆ ಕೂತ್ಕೋತ ಇದ್ದೆ ,ಆದ್ರೆ ಅದರ ending ಎಷ್ಟು ತಲೆ ಕೆಡಿಸ್ಕೊಂಡ್ರೂ ಅರ್ಥ ಆಗ್ತಾ ಇರ್ಲಿಲ್ಲ..ಅಷ್ಟಕ್ಕೂ ಅಂಥಾ ಸೀರಿಯಲ್ ,ಕಥೆಗಳಿಗೆ ಅಂತ್ಯ ಅನ್ನೋದೆ ಇಲ್ಲ ಅಂತ ಕಾಣ್ಸುತ್ತೆ!!ಎಲ್ಲಾ ಅವರವರ ಭಾವಕ್ಕೆ ,ಅವರವರ ಭಕುತಿಗೆ.ನಾನು ಈ ವರೆಗೆ ಖರೀಸಿದಿರೋ ಒಂದೇ ಒಂದು ಕವನ ಸಂಕಲನ ಅಂದ್ರೆ ’ಮಾತು ಚಿಟ್ಟೆ ’- ಸಂಧ್ಯಾದೇವಿಯವರದ್ದು.ಪ್ರಜಾವಾಣಿಯಲ್ಲಿ ಬಂದಿರೋ review ನೋಡಿ ಅದನ್ನು ಖರೀದಿಸಿದ್ದೆ ಅಂಕಿತ ಪ್ರಕಾಶನಕ್ಕೆ ಹೋಗಿ.ಎಷ್ಟು ತಲೆ ಕೆರ್ಕೋಂಡ್ರೂ ಟೈಟಲ್ಲೇ ಅರ್ಥ ಆಗಿಲ್ಲ ನನಗೆ ,ಇನ್ನು ಕವಿತೆ ಹೇಗೆ ತಾನೆ ಅರ್ಥ ಆಗುತ್ತೆ ಅಲ್ವಾ??ಆದ್ರೆ ಅಂಕಿತ ಪ್ರಕಾಶನದವ್ರು ಪುಸ್ತಕದ ಜೊತೆ ಕ್ಯಾಲೆಂಡರ್ ಒಂದನ್ನು ಉಚಿತವಾಗಿ ಕೊಟ್ಟಿದ್ದೆ ನನಗೆ ಸಮಾಧಾನ.ಕವಿತೆಗಳು ಅರ್ಥವಾಗೋ ಅಂಥ ಸ್ನೇಹಿತರು ಇದ್ದಿದ್ರೆ ಅವರಿಗಾದರೋ gift ಕೊಡಬಹುದಿತ್ತು,ಆದ್ರೆ ಅಂಥವರ್ಯಾರೂ ಇಲ್ಲ.ಕೆಲವೊಂದು ವಿಷಯಗಳೇ ಹೀಗೆ... ಅವು ತಾನಾಗೇ ಬರಬೇಕು ..ಯಾರೂ ಹೇಳಿಕೊಟ್ಟು ಬರಲು ಸಾಧ್ಯವೇ ಇಲ್ಲ.ನನಗೆ ಜಗಜೀತ್ ಸಿಂಗ್ ಗಜಲ್ ಅಂದ್ರೆ ಇಷ್ಟ ಆದ್ರೆ ನನ್ನ ಫ್ರೆಂಡ್ ಗೆ ಲಿಂಕಿನ್ ಪಾರ್ಕ್ ಅಂದ್ರೆ ಪ್ರಾಣ..ಅದ್ಯಾಕೊ ಹಂದಿ ಓಡಿಸೋ ಸಂಗೀತ ಕೇಳ್ತೀಯಾ? ಜಗಜೀತ್ ಸಿಂಗ್ ನ ಕೇಳೊ ಅಂತ ಹೇಳೋಣ ಅಂತ ಅನ್ಸುತ್ತೆ ಆದ್ರೆ ಹೇಳಲ್ಲ..ನನಗೆ ಗೊತ್ತು ಇವತ್ತು ಅವನಿಗೆ ನಾನು ಆ ರೀತಿ ಹೇಳಿದ್ರೆ ನಾಳೆ ಇನ್ಯಾರೋ ಬಂದು ನನಗೆ ಶಾಸ್ತ್ರೀಯ ಸಂಗೀತ ಕೇಳು ಅಂತ force ಮಾಡ್ತಾರೆ !ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಲ್ವೆ?

8 comments:

  1. ಚೆನ್ನಾಗಿ ಬ್ಲಾಗಿಸುತ್ತಾ ಇದ್ದೀರ.ನಂಗು ಕವಿತೆಗಳೆಂದರೆ ಅರ್ಥವಾಗದ ಸಾಹಿತ್ಯ. ತಮ್ಮ ಬ್ಲಾಗು ಕವಿತೆಯಾಗಿ ಉಳಿದಿಲ್ಲ, ಅದೇ ಸಂತೋಷ.
    ಸಿಂಧು ಭಟ್.

    ReplyDelete
  2. ಧನ್ಯವಾದಗಳು ಸಿಂಧು !

    ReplyDelete
  3. ಸಂದೀಪ್, ಈ ಕವಿತೆಗಳು ಹಾಗೆನೇ. ಬರೆದವರು ಏನೋ ಅರ್ಥ ಇಟ್ಟುಕೊಂಡು ಏನೇನೋ ಪದಬಂಧ ಮಾಡಿ ಬರೆದಿರುತ್ತಾರೆ. ಅವರು ಹೇಳಿದ ಅರ್ಥವೇ ನಮಗೂ ಆಗಬೇಕಂತಲೂ ಇಲ್ಲ. ಮತ್ತು ನಾವು ತಿಳಿದುಕೊಂಡ ಅರ್ಥವೆ ನಿಜವಾಗಬೇಕಂತಲು ಇಲ್ಲ. ಯಾರಿಗೂ ಅರ್ಥವಾಗದಂತೇ ಬರೆಯುವುದೇ ಕವನ ಎಂದು ತಿಳಿದುಕೊಂಡವರೂ ಇದ್ದಾರೆ.
    ನೇರ ಅರ್ಥ ಕೊಡುವ ಕವನಗಳನ್ನು ಬರೆಯೋರೂ ಇದ್ದಾರೆ. ಅವು ಚೆನ್ನಾಗಿಯೂ ಇರುತ್ತವೆ. ಆದರೆ ಹೆಚ್ಚಿನ ಜನಕ್ಕೆ ತಾನು ಕವನ ಬರೆದು ’ಸಾಹಿತಿ’ಯಾಗಬೇಕೆಂಬ ಚಪಲ. ಇನ್ನು ಕೆಲವರಿಗೆ ಕವನ ಬರೆದಾಕ್ಷಣ ಆ ’ಸಾಹಿತಿ ’ಯನ್ನು ಅನುಮೋದಿಸುವ ಗುಣ. ಕೆಲವರಿಗೆ ಕವನ ಒಂಥರಾ ಅನುಭೂತಿ ಕೊಡುವ ಸಾಹಿತ್ಯವಾಗಿದ್ದರೆ ಹೆಚ್ಚಿನ ಓದುಗರಿಗೆ ಪುಟ ತಿರುಗಿಸಿ ಮುಂದೆ ಹೋಗುವ ಸಾಹಿತ್ಯ. ನಮಗೆ ಅರ್ಥಾದಷ್ಟು ಅರ್ಥ ಮಾಡಿಕೊಂಡರೆ ಆಯಿತು, ಅರ್ಥವಾಗದಿದ್ದರೂ ಆಯಿತು. ಇಲ್ಲದಿದ್ದರೆ next pageu :)

    ReplyDelete
  4. @vikas

    ವಿಕಾಸ್ ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ!

    ನನಗೆ ಕವಿತೆಗಳು ಅರ್ಥವಗಲ್ಲ ಎಂಬ ಕೊರಗಿತ್ತು !ಈ ಕವಿತೆಗಳು ಸಿನೆಮಾ ಹಾಡಿನಂತೆ ಯಾಕೆ ಸುಲಭವಾಗಿರಲ್ಲ ಅಲ್ವ??
    ಜಾವೆದ್ ಅಖ್ತರ್ ರ ಎಷ್ಟೊಂದು ಹಾಡುಗಳು ಚೆನ್ನಾಗಿವೆ,ಹಾಗೆಯೇ ಅರ್ಥ ಕೂಡಾ ಆಗುತ್ತೆ!

    ReplyDelete
  5. ಚೆನ್ನಾಗಿದೆ ಲೇಖನ/ಬ್ಳಾಗು. ಎಷ್ಟೋ ಕವನಗಳು ಓದುವುದಕ್ಕಿಂದ, ಅವುಗಳನ್ನು ಯಾರಾದರೂ ಹಾಡಿದಾಗ ಅವುಗಳು ಬಹಳ ಚೆನ್ನಾಗಿ ಕೇಳಿಸುತ್ತವೆ ಮತ್ತು ಅರ್ಥ ಪೂರ್ಣ ಅನ್ನಿಸುತ್ತವೆ. ದ ರಾ ಬೇಂದ್ರೆ ಯವರ "ಯುಗ ಯುಗಾದಿ ಕಳೆದರೂ" ಕೇಳಿರಬಹುದಲ್ಲ ನೀವು, ಒಮ್ಮೆ ಸಾಹಿತ್ಯದ ಕಡೆ ಗಮನ ಹರಿಸಿದರೆ ಅದ್ಭುತವಾಗಿದೆ ಎನಿಸಬಹುದು! ದ ರಾ ಬೇಂದ್ರೆಯವರ ’ಕುರುಡು ಕಾಂಚಾ’ ಅಶ್ವಥ್ ರವರ ಧ್ವನಿಯಲ್ಲಿ ಕೇಳಿ ಅರ್ಥೈಸಿಕೊಳ್ಳಬಹುದು, ಕನಿಷ್ಟ ಕೆಲವೊಂದು ಪಂಕ್ತಿಗಳಾದರೂ ಅರ್ಥವಾಗುತ್ತದೆ ಮತ್ತು ಎಷ್ಟು ಸೊಗಸಾಗಿದೆ ಎಂದೆನಿಸುತ್ತದೆ.ಕುವೆಂಪು, ಜಿ ಎಸ್ ಶಿವರುದ್ರಪ್ಪ, ಲಕ್ಷ್ಮಿ ನಾರಾಯಣ ಭಟ್ಟರ, ವೆಂಕಟೇಶ್ ಮೂರ್ತಿ ಇನ್ನೂ ಹಲವಾರು ಕವಿಗಳ ಕವಿತೆಗಳೂ ಕೂಡ ಇದಕ್ಕೆ ಅಪವಾದವಲ್ಲ.ಇನ್ನೊಂದೆರಡು ನೆನಪಿಗೆ ಬರುತ್ತಾ ಇವೆ, ಜಿ ಎಸ್ ಶಿವರುದ್ರಪ್ಪ - "ಎಲ್ಲೋ ಹುಡೂಕಿದೆ ಇಲ್ಲದ ದೇವರ", ಹೆಚ್ ಎಸ್ ವೆಂಕಟೇಶ್ ಮೂರ್ತಿಯವರ "ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ!", ಕುವೆಂಪು ರವರ ನಾಡಗೀತೆ ಇತ್ಯಾದಿ. ಲೋಕೋವಿಭಿನ್ನ ರುಚಿ! ನೀವು ಹೇಳಿದ ಮಾತು "ಅವರವರ ಭಾವಕ್ಕೆ ಅವರವರ ಭಕುತಿಗೆ" ಅಕ್ಷರಷ: ನಿಜ! :)

    ReplyDelete
  6. ಗುರು ನೀವು ಹೇಳಿದ್ದು ನಿಜ .ರಾಗ ಸಂಯೋಜನೆ ಮಾಡಿದ ಮೇಲೆ ಯಾವುದೇ ಕವಿತೆಗಳು ನಮ್ಮಂಥ ಸಾಮಾನ್ಯ ಜನರಿಗೂ ತಲುಪುತ್ತವೆ.

    ಇಲ್ಲಾಂದ್ರೆ ಕವಿತೆಗಳು ಉಪೇಂದ್ರ ಸಿನೆಮಾ ಥರ "ಬುದ್ಧಿವಂತರಿಗೆ ಮಾತ್ರ !!"

    ReplyDelete
  7. ಕವಿತೆಗಳು ಅರ್ಥವಾಗುವುದಿಲ್ಲ ಅನ್ನುವ ಮಾತು ಬಹುಶಃ ಸರಿಯಲ್ಲ ಎನ್ನಿಸುತ್ತದೆ. "ಅದರರ್ಥ ನನಗೆಟುಕಿಲ್ಲ " ಅಥವಾ "ಪ್ರಯತ್ನ ನಾ ಮಾಡಿಲ್ಲ "ಅಥವಾ "ಪ್ರಯತ್ನ ಮಾಡೋದೆ ಇಲ್ಲ "ಅಂತ ಹೇಳಿದರೆ ಸರಿ ಅನ್ನಿಸುತ್ತದೆ.

    ಕವಿತೆಯ ಮುದ ಅನುಭವಿಸೋ ಸಾವಿರ ಸಾವಿರ ಮಂದಿ ಇದ್ದಾರೆ, ಒಮ್ಮೆ ಮೌನದಲ್ಲಿ ಕುಳಿತು ಸುಮ್ಮನೆ ಓದಿ.. ಅನುಭವ ಎಟುಕಬಹುದು ಅನ್ನಿಸುತ್ತದೆ.

    -ರಂಜಿತ್

    ReplyDelete
  8. ಸಂದೀಪ್, ನಂಗೆ ಕವಿತೆಗಳು ಅರ್ಥ ಆಗ್ತಾವೆ ಮತ್ತು ನಂಗೆ ನೀವು ಗಿಫ್ಟ್ ಕೊಟ್ರೆ ಖಂಡಿತ ಬೇಜಾರಿಲ್ಲ.

    ReplyDelete