ಹೊಚ್ಚ ಹೊಸ ಚ್ಯಾನಲ್ ಒಂದಕ್ಕೆ ಹೊಚ್ಚ ಹೊಸ ಕಾರ್ಯಕ್ರಗಳನ್ನು ಮಾಡಿಕೊಡುವವರು ಬೇಕಾಗಿದ್ದಾರೆ. ಅಂದ ಹಾಗೆ ಬೇಕಾಗಿರೋ ಕಾರ್ಯಕ್ರಮಗಳ ಪಟ್ಟಿ ಈ ರೀತಿ ಇವೆ :
ಸಿಕ್ಸರ್ ,ಬೌಂಡರಿ ಲೈನ್ ಥರದ ಆದರೆ ವಿಭಿನ್ನವಾದ 365 ದಿನವೂ ಇರೋ ಕ್ರೀಡಾ ಕಾರ್ಯಕ್ರಮ .
ಲೇಡಿಸ್ ಕ್ಲಬ್ ಥರದ ಆದರೆ ವಿಭಿನ್ನವಾದ ಗಂಡಸರೇ ಜಾಸ್ತಿ ನೋಡೋ ಹೆಂಗಸರ ಕಾರ್ಯಕ್ರಮ.
ಹೀಗೂ ಉಂಟೆ , ಅಗೋಚರ ಥರದ್ದೇ ಆದರೆ ವಿಭಿನ್ನವಾದ ಯಾವುದಾದರೂ ಹೆದರಿಸೋ,ಬೆದರಿಸೋ ಕಾರ್ಯಕ್ರಮ .
ಕೇಳ್ರಪ್ಪೋ ಕೇಳಿ , ಸಿಂಗ್ರಿ ರೌಂಡ್ಸ್ ಥರದ್ದೇ ಆದರೆ ವಿಭಿನ್ನವಾದ ಮಿಮಿಕ್ರಿ ಕಾರ್ಯಕ್ರಮ.
ಚಕ್ರವ್ಯೂಹ , ಟಾರ್ಗೆಟ್ ಥರದ್ದೆ ಆದರೆ ವಿಭಿನ್ನವಾದ ಟಾಕ್ ಶೋ .
ಯೂ ಟ್ಯೂಬ್ ವಿಡಿಯೋಗಳನ್ನು ಎಗರಿಸಿ ಕನ್ನಡ ಕಮೆಂಟರಿ ಕೊಡೋ ಯೂ ಟ್ಯೂಬ್ ಮಸಾಲಾ ಥರದ ಕಾರ್ಯಕ್ರಮ.
ವಾರಂಟ್ , ಕ್ರೈಂ ಬೀಟ್ ಥರದ ಆದರೆ ವಿಭಿನ್ನವಾದ ಪೋಲೀಸ್ ಸ್ಟೇಶನ್ ಕಾರ್ಯಕ್ರಮ .
ಕ್ರಿಯೇಟಿವ್ ಆಗಿರೋ ಜನರು ಮಾತ್ರ ಅರ್ಜಿ ಸಲ್ಲಿಸಿ.
arji bardu post dabbakke hakidre saaka?
ReplyDeleteಪೇಟೆ ಹುಡುಗ್ರು ಕಾಡಿಗೆ ಹೋಗಿ, ಅಲ್ಲಿ೦ದ ಹಳ್ಳಿಗೆ, ಗಲ್ಲಿಗೆ, ದಿಲ್ಲಿಗೆ, ಎಲ್ಲಿಗೆ ಇತ್ಯಾದಿ ಕತೆಯಲ್ಲದ ಜೀವನ ರಿಯಾಲಿಟೀ ಶೋಸ್ ನಿಮ್ಮ ಚಾನೆಲ್ ನಲ್ಲಿ ಇಲ್ವಾ? ಹಾಗಾದ್ರೆ ಟೀ ಆರ್ ಪಿ ಏರೋದು ಹೇಗೆ ಮಾರಯ್ರೆ? ಹಾಗೇಯೆ ಕೈ ಕಾಲು ಮುರ್ದು ಡ್ಯಾನ್ಸ್ ಪ್ರೋಗ್ರಾಮ್, ಬೆಳಗ್ಗೆ ಬ್ರಹ್ಮಾ೦ಡ ಭವಿಷ್ಯ ಅದೂ ಇರ್ಲಿ.
ReplyDeleteಕಂಡವರಿಗೆ ಮದುವೆ ಮಾಡಿಸೋದು , ಹಿಂದಿನ ಜನ್ಮದ ರಹಸ್ಯ ತಿಳಿಸೋದು ಈ ಎರಡು ಕಾರ್ಯಕ್ರಮಗಳಿದ್ದರೆ ತಿಳಿಸಿ. ನಾನೂ ಅರ್ಜಿ ಹಾಕುವೆ.
ReplyDeleteಕಾಲೇಜು ಹುಡುಗ್ರು ಹೈಸ್ಕೂಲ್ನಾಗೆ ಅಂತ ಒಂದು ವಿಭಿನ್ನ ಕಾರ್ಯಕ್ರಮ ಇದೆ ಬೇಕಾ?
ReplyDelete:)
ReplyDelete:-) :-) :-)
ReplyDeletems