ನಿಮ್ಮ ಬಳಿ ಒಳ್ಳೆಯ ಕ್ಯಾಮೆರಾ ಇದ್ರೆ ಸೊಳ್ಳೆಯ ಒಂದು ಫೋಟೋ ತೆಗೆದು ನೋಡಿ!
ಎಷ್ಟು ಸುಂದರ ಕಾಣ್ಸತ್ತೆ ಸೊಳ್ಳೆ. ಕಡುಗಪ್ಪು ಬಣ್ಣ. ಸುಂದರ ಕಾಲುಗಳು. ಕೆಂಪನೆ ಡುಮ್ಮ ಹೊಟ್ಟೆ. ಫಳ ಫಳ ಹೊಳೆಯೋ ಮೊನಚಾಗಿರೋ ಎರಡು ಸೂಜಿ.
ನೋಡ್ತಾ ನೋಡ್ತಾ ಪಾಪ ಅನಿಸಿಬಿಡುತ್ತೆ. ಛೇ ಈ ಸೊಳ್ಳೆಯನ್ಯಾಕೆ ನಾವು ಅಷ್ಟು ದ್ವೇಷಿಸ್ತೀವಿ? ಪಾಪ ಅದೂ ತನ್ನ ಹೊಟ್ಟೆಪಾಡಿಗೆ ತಾನೇ ರಕ್ತ ಹೀರೋದು. ಅದು ಅದರ ಹವ್ಯಾಸ ಅಲ್ವಲ್ಲ!ಅಲ್ಲದೆ ಎಲ್ಲಾ ಸೊಳ್ಳೆಗಳೂ ಕೆಟ್ಟವೇನಲ್ಲ. ಕೆಲವು ಪಾಪದ ಸೊಳ್ಳೆಗಳೂ ಇರುತ್ತೆ!
ಹೀಗೆ ಸೊಳ್ಳೆಯ ಮೇಲೂ ನಮಗೆ ಪ್ರೀತಿ ಉಕ್ಕುತ್ತೆ ಒಮ್ಮೊಮ್ಮೆ!
ಆದರೆ ರಾತ್ರಿ ಮಲಗಿದಾಗ ಸೊಳ್ಳೆ ಗುಂಯ್ ಅನ್ನುತ್ತಾ ಕೆನ್ನೆ ಮೇಲೆ ಏನಾದ್ರೂ ಕೂತ್ರೆ ಟಪ್ ಅಂತ ಒಂದು ಶಬ್ದ ಕೇಳುತ್ತೆ!
ಒಂದೇ ಏಟು ಸೊಳ್ಳೆ ಖಲಾಸ್!
ಅಂದ ಹಾಗೆ ಈ ಪಾಕಿಸ್ತಾನ ಒಂದು ಸೊಳ್ಳೆ !
ಕೊನೇ ಸಾಲು ನೋಡಿ ಬಿದ್ದು ಬಿದ್ದು ನಕ್ಕೆ :D
ReplyDelete'Nimma ondu hani raktakkaagi namma jeevavanne tegeyodu sariye...'
ReplyDeleteBANNI: http://manasinamane.blogspot.com/
ಸೊಳ್ಳೆ ನೋಡೋಕಷ್ಟೆ ಚಂದ ಅಲ್ಲ, ಅದರ ಸಂಗೀತವೂ ಕರ್ಣಮಧುರವಾದದ್ದೇ! ಪಾಪ, ಅದನ್ಯಾಕೆ ಹೊಡೆದು ಕೊಲ್ಲುತ್ತೀರಿ, ಸಂದೀಪ?
ReplyDeleteclimax sakkat :-)
ReplyDelete:)
ReplyDeleteAdu Solle mathra alla...
ReplyDeleteHybrid of Mosquito and Bed Bug
ಕೊನೆ 'ಗುಂಡು' ಚೆನ್ನಾಗಿದೆ.
ReplyDelete:-)
ಮೊದಲು DDT ಹೊಡೆದು ಕೊಂದ್ರು, ಸ್ವಲ್ಪ ದಿವಸಕ್ಕೆ DDT resistant ಸೊಳ್ಳೆ ಹುಟ್ಕೊಂಡ್ವು
ReplyDeleteನಂತರ allout, good knight ಅಂತೇನೋ ಬಂದ್ವು ಆದ್ರೆ ಇತ್ತೀಚೆಗೆ ಸೊಳ್ಳೆಗಳು ಇವಕ್ಕೂ ಹೊಂದ್ಕೊಂಡಂಗಿದೆ.
ಇನ್ಮೇಲೇನಿದ್ರೂ ಮನೆಗೆ ನುಗ್ಗಿದ ಸೊಳ್ಳೆಗಳನ್ನ ಕಿಟಕಿ,ಬಾಗ್ಲು ಎಲ್ಲಾ ಹಾಕಿ electric bat ತಗೊಂಡು ಹೊಡ್ಯೋದೇ...