Tuesday, March 17, 2009

ತೂತಿರುವ ದೋಸೆಗೆ ಡಿಮಾಂಡಪ್ಪೋ ಡಿಮಾಂಡು !



ಮೊನ್ನೆ ಸಹೋದ್ಯೋಗಿಯೊಬ್ಬ (ಡೆಲ್ಲಿಯವನು) ’ಅಬೇ ತೇರೇ ಮ್ಯಾಂಗಲೋರ್ ಮೇಂ ಲಡ್ಕಿಯೋಂ ಕೋ ಮಾರ್ತೆ ಹೇಂ ನಾ ’ ಅಂತ ಕಿಚಾಯಿಸಿದ್ದ .ಅವನ ಕುತ್ತಿಗೆ ಹಿಚುಕುವಷ್ಟು ಸಿಟ್ಟು ಬಂದಿದ್ರೂ ತಡ್ಕೊಂಡು ’ನಹೀಂ ಯಾರ್ ಸಬ್ ನೇ ಜೀನ್ಸ್ ಪೆಹನಾ ಥಾ ನಾ ಇಸೀ ಲಿಯೆ ಲಡ್ಕೇ ಕೋನ್ ,ಲಡ್ಕಿಯಾಂ ಕೋನ್ ಮಾಲೂಂ ನಹಿ ಪಡಾ ಶಾಯದ್ ’ ಅಂತ ಹೇಳಿ ಹಾಗೆ ತಳ್ಳಿ ಬಿಟ್ಟಿದ್ದೆ ವಿಷಯವನ್ನು .

ಈಗ ಮತ್ತೆ ಚಾರ್ಲಿ ಚಾಪ್ಲಿನ್ ನಗಿಸುವ ಬದಲು ಅಳಿಸ್ತಾ ಇದ್ದಾನೆ !

ಕಳೆದ ವಾರಾಂತ್ಯದಲ್ಲಿ ನಾನು ಮಂಗಳೂರಲ್ಲೇ ಇದ್ದೆ .ಹಿಂದೂ ಸಮಾಜೋತ್ಸವಕ್ಕೆ ಹೋಗಿದ್ದಲ್ಲ ನನ್ನನ್ನು ನಂಬಿ ಪ್ಲೀಸ್ .ನಾನು ಹಿಂದು ಸಮಾಜೋತ್ಸವಕ್ಕೆ ಹೋಗಿಲ್ಲ ,ನನ್ನನ್ನು ಯಾರೂ ದೂರ ಮಾಡಬೇಡಿ ಪ್ಲೀಸ್ .. ಬೇಕಾದ್ರೆ ನನ್ನ ಸ್ನೇಹಿತರನ್ನೇ ಕೇಳಿ.ನಾನು ಹೋಗಿದ್ದು ಗೃಹಪ್ರವೇಶಕ್ಕೆ .ಅವನೊಬ್ಬ ಹಿಂದು ,ಆದ್ರೆ ಅವನು ಕ್ರಿಸ್ಚಿಯನ್ ಅಥವ ಮುಸ್ಲಿಂ ಆಗಿದ್ರೂ ನಾನು ಹೋಗ್ತಾ ಇದ್ದೆ ಯಾರೂ ದಯವಿಟ್ಟು ನನ್ನನ್ನು ತಪ್ಪು ತಿಳ್ಕೋಬಾರ್ದು .

ನನಗೂ ಮಂಗಳೂರು ಹೆಸರು ದಿನಾ ಪೇಪರ್ ನಲ್ಲಿ ಕಾಣೋದು ನೋಡಿ ಬೇಜಾರಾಗಿ ಬಿಟ್ಟಿತ್ತು. ಕೇರಳದ ಒಬ್ಬ ಸ್ನೇಹಿತನ ಬಳಿ ಹಾಗೆ ಹೇಳಿದೆ.ಅದಕ್ಕೆ ಆ ಮಹಾನುಭಾವ ’ಏನ್ ಹೇಳ್ತೀಯಾ ಸಂದೀಪ್ ನಮ್ಮ ಕಣ್ಣೂರಿನಲ್ಲಿ ದಿನಕ್ಕೊಂದು ಮರ್ಡರ್ ಆಗುತ್ತೆ ,ವರ್ಷದಲ್ಲಿ ೩೦೦ ದಿನ ಏನಾದ್ರೂ ಪ್ರತಿಭಟನೆ ಸ್ಟ್ರೈಕ್ ,ಇನ್ನು ನಿಮ್ಮಲ್ಲಿ ಆದ ಪಬ್ ದಾಳಿ ಏನೂ ಅಲ್ಲ ಅದಕ್ಕಿಂತ ಕೆಟ್ಟ ಸಂಗತಿಗಳ ಅಲ್ಲಿ ಆಗುತ್ತೆ' ಅಂದ.

ಪಕ್ಕದಲ್ಲೇ ಕೂತಿದ್ರೂ ತಮಿಳುನಾಡಿನವನ ಬಳಿ ನನ್ನ ದುಃಖ ಹೇಳಿಕೊಳ್ಳುವ ಅಗತ್ಯ ನನಗೆ ಕಾಣಿಸಲೇ ಇಲ್ಲ!

ಸ್ವಲ್ಪ ದಿನದ ಹಿಂದೆ ತಮಿಳುನಾಡಿನ ಒಂದು ಕಾಲೇಜಿನಲ್ಲಾದ ಗಲಬೆಯ ವೀಡಿಯೋ ನೋಡಿದ್ದೆ.ಅದರಲ್ಲಿ ಪೋಲಿಸರ ಮುಂದೆಯೇ ಒಬ್ಬ ಹುಡುಗನನ್ನು ಸಾಯುವ ಹಾಗೆ ಹೊಡೆದದ್ದು ನೋಡಿ ’ನಮ್ಮ ಕುಡ್ಲ’ ಎಷ್ಟೋ ವಾಸಿ ಅನ್ನಿಸಿತು.

ಪಕ್ಕದಲ್ಲೇ ಬಿಹಾರದವನೊಬ್ಬ ದೀಪಿಕಾ ಪಡುಕೋಣೆಯ ವಾಲ್ ಪೇಪರ್ ನೋಡಿ ಜೊಲ್ಲು ಸುರಿಸ್ತಾ ಇದ್ದ (ಸಂದೀಪಿಕಾಳ ಮೇಲೆ ಮಾತ್ರ ಬೇರೆಯವರು ಕಣ್ಣು ಹಾಕಿದ್ರೆ ಕೆಟ್ಟ ಸಿಟ್ಟು ಬರುತ್ತೆ ನನಗೆ).

ಅವನ ಬಳಿ ನನ್ನ ಗೋಳು ತೋಡಿಕೊಂಡೆ.

"ನೋಡಪ್ಪಾ ಗುರುವೆ ನನ್ನೂರು ’ತಲ್ಲಣ’ಗೊಂಡಿದೆ ,ಏನಾದ್ರೂ ಪರಿಹಾರ ಹೇಳು " ಅಂತ.

"ಅಬೇ ಸಾಲೆ ಹಮಾರ್ ಬಿಹಾರ್ ಮೆ ಪಚಾಸ್ ರುಪಯೇ ಮೇ ತೋ ಮರ್ಡರ್ ವಾ ಕರ್ತೇ ಹೇಂ .ತುಮ್ಹಾರ್ ಗಾಂವ್ ತೋ ಬಹುತ್ ಬಡಿಯಾ ಹೇ ರೇ .ಲಡ್ಕಿಯಾಂ ಬಿ ಮಸ್ತ್ ಹೇ ’( "ನನ್ನ ಬಿಹಾರದಲ್ಲಿ ಐವತ್ತು ರೂಪಾಯಿಗೆ ಸುಪಾರಿ ತಗೊಂಡು ಕೊಲೆ ಮಾಡ್ತಾರೆ ,ನಿನ್ನೂರೇ ಪರ್ವಾಗಿಲ್ಲ .ಅದೂ ಅಲ್ಲದೆ ನಿಮ್ಮೂರ ಹುಡ್ಗೀರು ಮಾತ್ರ ಸೂಪರ್ ! " ಅಂದ !

ಆಂದ್ರದ ರೆಡ್ಡಿ ಆಂದ್ರ ಮೆಸ್ ನಲ್ಲಿ ಭರ್ಜರಿ ಭೋಜನಂ ಮುಗಿಸಿ ನಿದ್ದೆ ಮಾಡಲು ತಯಾರಿ ನಡೆಸ್ತಾ ಇದ್ದ.ಅವನ ಬಳಿಯೂ ಕೇಳಿ ನೋಡೋಣ ಪರಿಹಾರ ಸಿಕ್ಕರೂ ಸಿಗಬಹುದು ಅಂದು ಕೊಂಡು ಕೇಳಿದೆ.

"ರೆಡ್ಡಿಗಾರು ನಮ್ಮ ಮಂಗಳೂರು ಹೀಗೆ ಬೇಡದ ಕಾರಣಗಳಿಗಾಗಿ ಪ್ರಖ್ಯಾತಿ ಹೊಂದುತ್ತಾ ಇದೆ ,ಏನಾದ್ರೂ ಸಜೆಶನ್ ಸಿಗಬಹುದಾ ?"

" ಮಂಗಳೂರಾ ಅದಿ ಎಕ್ಕಡ ಉನ್ನಾವು ? " ಅಂದ ಭೂಪ . " ನಿನ್ನಜ್ಜಿ ನ್ಯೂಸ್ ನೋಡಲ್ವಾ ಆ ಪರಿ ಬರುತ್ತೆ ದಿನಾಲೂ " ಅಂದೆ ಸಿಟ್ಟಿನಿಂದ.

’ಓಹ್ ಅದಾ ಅದೆಲ್ಲಾ ನಮಗೆ ಮಾಮೂಲಿ ಮಾರಾಯ .ನಮ್ಮೂರಲ್ಲಿ ಅದಕ್ಕಿಂತ ಭಯಂಕರ ಘಟನೆಗಳು ಆಗ್ತಾ ಇರ್ತಾವೆ .ಈ ಬಡ್ಡಿಮಕ್ಕಳು ನಮ್ಮೂರಿನ ಬಗ್ಗೆ ನ್ಯೂಸ್ ನಲ್ಲಿ ತೋರಿಸೋದೆ ಇಲ್ಲ .ಅದೇನ್ ಮೀಡಿಯಾ ನೋ ’ ಅಂತ ಮೀಡಿಯಾಗೆ ಬಯ್ಯೋದಕ್ಕೆ ಶುರು ಹಚ್ಚಿಕೊಂಡ.

ಎಲ್ಲರ ಮನೆ ದೋಸೆ ತೂತೆ ಆದ್ರೆ ನಮ್ಮ ’ತೂತಿರುವ ದೋಸೆ’ಗೆ ಈಗ ಎಲ್ಲೆಡೆ ಸಿಕ್ಕಾಪಟ್ಟೆ ಬೇಡಿಕೆ ಬಂದಿರಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಗೆಳೆಯ ರಮೇಶನ ಜೊತೆ ಊಟಕ್ಕೆ ಹೋದೆ.

ನೋಡಿ ರಮೇಶ ಹಿಂದೂ ಅನ್ನೋ ಕಾರಣಕ್ಕೆ ಅವನ ಜೊತೆ ಊಟಕ್ಕೆ ಹೋದದ್ದಲ್ಲ .ಪ್ಲೀಸ್ ನೀವೆಲ್ಲಾ ತಪ್ಪು ತಿಳ್ಕೋಬಾರ್ದು.ನಾನೊಬ್ಬ ಜಾತ್ಯಾತೀತ ವ್ಯಕ್ತಿ . ನನಗೆ ಮರಿಯಾ ಜೊತೆ ಊಟಕ್ಕೆ ಕೂರ್ಬೇಕು ಅಂತ ಭಾರಿ ಆಸೆ ಆದ್ರೆ ಏನ್ ಮಾಡೋದು ಅವಳು ಒಪ್ಪಲ್ಲ!


ಏನ್ ಮಾಡೋದು ಸಾರ್ ! ಈಗ ಏನೆ ಮಾಡಿದ್ರೂ ಅದಕ್ಕೆ ಹಿಂದುತ್ವದ ಟಚ್ ಕೊಡ್ತಾರೆ ಜನ .ಅದಕ್ಕೆ ಪದೇ ಪದೆ ಸ್ಪಷ್ಟೀಕರಣ ನೀಡ್ತಾ ಇದ್ದೀನಿ ತಾವ್ಯಾರೂ ಬೇಜಾರು ಮಾಡ್ಕೋಬಾರ್ದು .

ಯಾರೋ ಚಾರ್ಲಿ ಚಾಪ್ಲಿನ್ ಮೂರ್ತಿ ಮಾಡೋಕೆ ಮಂಗಳೂರಿಗೆ ಹೋಗಿದ್ನಂತೆ.ಅಲ್ಲಿನ ಜನ ಬಿಟ್ಟಿಲ್ಲ ಅಂತೆ .ಅದಕ್ಕೂ ಹಿಂದುತ್ವದ ಟಚ್ ಕೊಡಬಹುದು ಅಂತ ನನಗೆ ಈಗ್ಲೇ ಗೊತ್ತಾಗಿದ್ದು !

ಪಡುಬಿದ್ರಿಯಲ್ಲಿ ಸುಝ್ಲಾನ್ ,ನಾಗಾರ್ಜುನ ಆಗಬಾರದು ಅಂತ ಪಾಪ ರೈತರು ಯಾವತ್ತಿನಿಂದಲೋ ಪ್ರತಿಭಟನೆ ನಡೆಸ್ತಾ ಇದ್ದಾರೆ.ಸುಝ್ಲಾನ್ ಕಂಪನಿ ತಗೊಂಡ ಜಾಗದಲ್ಲಿ ಬಬ್ಬರ್ಯ ದೈವದ ವಾಸ್ತವ್ಯವಿದ್ದು ,’ಇದು ನನ್ನ ಜಾಗ ನನ್ನನ್ನು ಯಾರು ಇಲ್ಲಿಂದ ಓಡಿಸ್ತಾರೋ ನೋಡೋಣ ’ ಅಂತ ಮೊನ್ನೆ ನಡೆದ ಭೂತದ ಕೋಲ ದಲ್ಲಿ ದೈವನುಡಿಯಾಗಿದೆಯಂತೆ .

ಇಲ್ಲೂ ಹಿಂದುತ್ವದ ಟಚ್ ಮಾರಾಯ್ರೇ !

ಹೋಗಿ ಹೋಗಿ ಆ ಹೇಮಂತ್ ಹೆಗಡೆಗೆ ಬೇರೆ ಜಾಗವೇ ಸಿಗಲಿಲ್ಲವೇನೋ ? ಹಂಪನಕಟ್ಟೆ ಸರ್ಕಲ್ ನಲ್ಲೇ ನಿಲ್ಲಿಸಿದ್ರೆ ಆಗ್ತಿತ್ತಪ್ಪ .ಹೋಗಿ ಹೋಗಿ ಕಡಲತೀರವೇ ಬೇಕಿತ್ತಾ?

ಹಿಂದೆ ಮನಸ್ಸಿಗೆ ಬೇಜಾರಾದಗ ಕಡಲ ತೀರಕ್ಕೇ ಹೋಗ್ತಾ ಇದ್ದಿದ್ದು ನಾನು .ಆ ತೆರೆಗಗಳು ಅಪ್ಪಳಿಸುವಾಗ ಮಾಡುವ ಸದ್ದೇ ಒಂದು ಥರಾ ಸಾಂತ್ವಾನ ನೀಡುತ್ತೆ.ಕಡಲು ಆ ಪರಿ ಭೋರ್ಗರೆದರೂ ನೆಮ್ಮದಿ ಇರುತ್ತೆ .ನಮ್ಮ ಪಾಡಿಗೆ ನಾವು ನಮ್ಮದೇ ಲೋಕದಲ್ಲಿ ಕಳೆದು ಹೋಗಬಹುದು.

ಅಂಥ ಕಡಲತೀರದಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಹಾಕಿದ್ರೆ ಜನರಿಗೆ ಚಾರ್ಲಿ ಚಾಪ್ಲಿನ್ ಸಿನೆಮಾ ನೋಡಿದಷ್ಟೇ ಖುಷಿ ಸಿಗುತ್ತಾ ? ಗೊತ್ತಿಲ್ಲ !

ಆದ್ರೆ ಅದನ್ನು ನೋಡೋದಿಕ್ಕೆ ದಿನಾಲೂ ಡಜನ್ ಗಟ್ಟಲೆ ಹುಡುಗ-ಹುಡುಗಿಯರು ಬರೋದಂತೂ ನಿಜ.ಪ್ರಶಾಂತವಾದ ಕಡಲತೀರದಲ್ಲಿ ನೂರಾರು ಜನ ಗಿಜಿಗುಡುತ್ತಾರೆ.ಪಾಪ್ ಕಾರ್ನ್,ಐಸ್ ಕ್ರೀಮ್ ಮಾರೋರಿಗಂತೂ ಸುಗ್ಗಿ.ಅಲ್ಲೇ ಒಬ್ಬ ಬೋಟಿಂಗ್ ಅಂತ ಒಂದು ಅಂಗಡಿ ಓಪನ್ ಮಾಡ್ತಾನೆ.ಅದಕ್ಕೆ ನೂರು ರುಪಾಯಿ ಚಾರ್ಜ್ ಮಾಡ್ತಾನೆ .ಪ್ರಶಾಂತವಾದ ಕಡಲತೀರದಲ್ಲಿ ಕುಳಿತು ಖುಷಿ ಪಡ್ತಾ ಇದ್ದ ’ನನ್ನಂತವನು’ ಸಮುದ್ರ ತೀರಕ್ಕೆ ಬಂದವರಲ್ಲಿ ಯಾವ ಹುಡುಗಿ ನೀರಿಗೆ ಇಳೀತಾಳೋ ,ಯಾವಾಗ (~~~ಸೆನ್ಸಾರ್~~~ ) ಅಂತ ಕಾಯೋದಕ್ಕೆ ಶುರು ಮಾಡ್ತಾನೆ.’ಛೇ ನನಗೂ ಈ ರೀತಿ ಒಂದು ಗರ್ಲ್ ಫ್ರೆಂಡ್ ಇದ್ರೆ ಚೆನ್ನಾಗಿರ್ತಾ ಇತ್ತು ’ ಅಂತ ಕರುಬೋದಕ್ಕೆ ಶುರು ಮಾಡ್ತಾನೆ.ಜನಜಂಗುಳಿಯಲ್ಲಿ ಮಗು ನೀರಿಗೆ ಇಳಿದದ್ದು ತಾಯಿಗೆ ಗೊತ್ತೇ ಆಗಲ್ಲ ! ತಂದೆಗಾದ್ರೂ ಗೊತ್ತಾಗಲ್ವ ಅಂತ ಕೇಳ್ಬೇಡಿ .ತಂದೆಗೆ ನೋಡೋದಕ್ಕೆ ಬಹಳಷ್ಟು ವಿಷಯಗಳಿವೆ .

ಉದಾ: ಹುಡುಗಿಯರಲ್ಲ ಕಣ್ರಿ .........ಚಾರ್ಲಿ ಚಾಪ್ಲಿನ್ ನ ಬೃಹತ್ ಮೂರ್ತಿ !

ಆಟೋದವರಿಗಂತೂ ಹಬ್ಬ .ಕಡಲ ತೀರಕ್ಕಾ ? ಅಂತ ಯಾರೂ ಕೇಳಲ್ಲ ! ’ಓಹ್ ಚಾರ್ಲಿ ಚಾಪ್ಲಿನ್ ಗಾ ಐವತ್ತು ರುಪಾಯಿ ಆಗುತ್ತೆ ’ ! ’ಬರ್ಬೇಕಾದ್ರೆ ಬಾಡಿಗೆ ಸಿಗಲ್ಲ ನೋಡಿ ಅದಕ್ಕೆ ’ ಅಂತಾನೆ . ಮೂರ್ತಿ ನೋಡೊದಕ್ಕೆ ಹೋದವರು ಅಲ್ಲೇ ನೀರಿಗೆ ಬಿದ್ದು ಸಾಯ್ತಾರೆ ಅನ್ನೋ ಅಭಿಪ್ರಾಯವಿರಬಹುದೇ ಆಟೋದವನದ್ದು ? ಅದೂ ಗೊತ್ತಿಲ್ಲ !

ಕಾಲ ಕಳೆದಂತೆ ’ಕಡಲತೀರ’ ಚಾರ್ಲಿ ಚಾಪ್ಲಿನ್ ಆಗಿ ಬಿಡುತ್ತೆ !

’ನನ್ನ ಕಡಲತೀರ’ ಚಾರ್ಲಿ ಚಾಪ್ಲಿನ್ ಅಗೋದು ನನಗ್ಯಾಕೋ ಇಷ್ಟ ಆಗ್ತಾ ಇಲ್ಲ - Sorry !

26 comments:

  1. ಬರಹ ಎಂದಿನಂತೆ ಚೆನ್ನಾಗಿತ್ತು.
    ನಿಮ್ಮ ಬೇಸರಕ್ಕೆ ಏನು ಹೆಳಬೇಕೋ ಗೊತ್ತಾಗುತ್ತಿಲ್ಲ.
    ಮಂಗಳೂರಿನ ಪಬ್ ಧಾಳಿಗೆ ಮಾತ್ರ ಬಹಳ ಟಿ.ಆರ್.ಪಿ. ಸಿಕ್ತು. ಉಳಿದ ಕಡೆಯಲ್ಲೂ ಇದಕ್ಕಿಂತ ಭಯಂಕರ ಘಟನೆ ನಡೆಯುತ್ತದೆ. ಕಳೆದ ವರ್ಷ ಸ್ವತಃ ಮಂಗಳೂರಲ್ಲೆ ಇದ್ದು ಕೋಮು ಗಲಭೆಯ ದರ್ಶನ ನೋಡಿದ್ದೆ. ಅದಕ್ಕೆ ಹೋಲಿಸಿದರೆ ಪಬ್ ದೊಡ್ಡ ವಿಷಯ ಅಲ್ಲ.ಈಗ ಚಾಪ್ಲಿನ್. ಇಲ್ಲದ ವಿಷಯಕ್ಕೇ ತಲೆಬಿಸಿ ಮಾಡಿ ಸುದ್ದಿ ಮಾಡುವುದು ನಮ್ಮ ಜಾಯಮಾನವಾದಂತಿದೆ.ಅದಕ್ಕೆ ಮಾಧ್ಯಮಗಳ ಟಿ.ಆರ್.ಪಿ.ಯೂ ಕಾರಣ,
    ಏನೇ ಇರಲಿ, ಹಿಂದು ಎಂಬ ಕಾರಣಕ್ಕೆ ಕಾಮೆಂಟ್ ಮಾಡ್ತಾ ಇಲ್ಲ ನಿಮ್ಮ ಲೇಖನಕ್ಕೆ...!

    ReplyDelete
  2. nimma baraha ...satyakke hidida kannadi.

    ReplyDelete
  3. ನಮಸ್ಕಾರ ಕಾಮತ್ರೇ :-)

    ಭಾರೀ ಲಾಯ್ಕ್ ಬರೆತರ್ !!
    ಕುಡ್ಲ ಬೊಕ್ಕ ಕಡಲತೀರದ ಬಗ್ಗೆ ಭಾರೀ ಕಾಳಜಿ ಉಂಡು ಇರೆಗ್. ಅವು ಎಡ್ಡೆ.

    ನಾನು ಕೂಡಾ ಕೆಲವು ದಿನಗಳ ಹಿಂದೆ ನನ್ನ ಸಹೋದ್ಯೋಗಿ(ಉತ್ತರಪ್ರದೇಶದವ) ಜತೆ ಮಾತಾಡ್ತಾ ಇದ್ದೆ. "ಕೊಲೆ/ಸುಲಿಗೆ/ಕಳ್ಳತನಗಳ ಬಗ್ಗೆ ಇಲ್ಲಿಯ ಹಾಗೂ ಅಲ್ಲಿಯ ಜನ ಮಾತಾಡ್ತಾರೆ. ಆದ್ರೆ ನಾನು ಎರಡೂ ಕಡೆ ಇದ್ದವನು. ಇಲ್ಲಿಗಿಂತ ಅಲ್ಲೇ ಇಂತಹ ಘಟನೆಗಳು ಜಾಸ್ತಿ. ಬೆಂಗಳೂರು/ಕರ್ನಾಟಕ ನಮ್ಮೂರಿಗಿಂತ ಸೇಫ್" ಅಂದ.

    ಈಗೀಗ ಯಾವುದೇ ವಾಹಿನಿ ಹಾಕಿದ್ರೂ ಆತ್ಮಹತ್ಯೆ/ಕೊಲೆ/ಸುಲಿಗೆ/ಮೋಸ/ಕಳ್ಳತನಗಳ ವಾರ್ತೆಗಳೇ ಜಾಸ್ತಿ ಪ್ರಸಾರವಾಗುತ್ತಿರುತ್ತವೆ. ಅದೂ ಐಟಿ ಜನಕ್ಕೆ ಸಂಬಂಧ ಪಟ್ಟಿದ್ರೆ ಇನ್ನೂ ವೈಭವೀಕರಿಸುತ್ತಾರೆ.

    ಅವಿಭಜಿತ ದಕ್ಷಿಣ ಕನ್ನಡಕ್ಕೆ ವಿದ್ಯಾವಂತರ/ಬುದ್ಧಿವಂತರ ಜಿಲ್ಲೆ ಅಂತ ಹೆಸರಿದೆ. ಅದನ್ನು ಹಾಳು ಮಾಡುವ ಹುನ್ನಾರವೋ ಗೊತ್ತಿಲ್ಲ.

    ReplyDelete
  4. ಕುಡ್ಲಡ್ ಎಲಿ ಪೋ೦ಡಲಾ ಪಿಲಿ ಪೋಯಿಲೆಕ್ಕ ತೋಜು೦ಡು ಟಿ.ವಿ/ಪೇಪರ್ ದಕ್ಲೆಗ್!

    ReplyDelete
  5. ಎಲ್ಲರ ಮನೆ ದೋಸೆ ತೂತೇ, ಆದ್ರೆ ಬರೆ ನಮ್ಮನೆ ದೋಸೆಗೆ ಯಾಕಿಷ್ಟು ಡಿಮಾಂಡೋ ಗೊತಿಲ್ಲ :-)

    ReplyDelete
  6. ಎಡ್ಡೆ ಪಂಡರ್ ರವೀಶ್.

    ಕುಡ್ಲಡ್ ಎಲ್ಲೆ ಪೆತ್ತ ಕಂಜಿ ಪಾಂಡಲಾ, ಅಕ್ಲೆಗ್ ಅವು "BREAKING NEWS" ಆವರೆ ಯಾವು. :-)

    ReplyDelete
  7. ತುಂಬಾ ಸುಂದರವಾಗಿ ಮೂಡಿ ಬಂದಿದೆ - ನಮ್ಮೂರ ದೋಸೆ ಜನಪ್ರಿಯವಾಗುತ್ತಿದೆ!

    http://sihi.wordpress.com/

    ReplyDelete
  8. ಕುಡ್ಲದ ನೀರ್ ದೋಸೆಗೂ ಡಿಮಾಂಡಪ್ಪೋ ಡಿಮಾಂಡು

    ReplyDelete
  9. ಕಾಮತ್ ರೇ,
    ಎಡ್ಡೆ ಲೇಖನ...ಸಾರಿ..ರೀ..ಮುಂದಕ್ಕೆ ಕನ್ನಡಕ್ಕೆ ಶರಣುಹೋಗ್ತಿದೀನಿ...ನನಗೆ ತುಳು ತುಂಬಾ ಹಿಡಿಸ್ತು..ನಾನು ಓದಿದ್ದು ಕಂಕನಾಡಿಯ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ. ೧೯೭೮ ರಿಂದ ೮೪ ಮತ್ತೆ ೯೪ ರಿಂದ ೯೮. ನನ್ನ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಸಮಯ ನನ್ನ ಜೀವನದ ಸುವರ್ಣ ಸಮಯ. ಎಂಥ ಶಾಂತ ಮತ್ತು ಅಹ್ಲಾದಕರವಾಗಿತ್ತು ಆಗ ಮಂಗಳೂರು..?? ಓಹ್..ನೆನೆಸಿಕೊಳ್ಳುವುದೇ ಒಂದು ಥ್ರಿಲ್ಲು.. ೯೪-೯೮ ಓಕೆ....
    ಆದ್ರೆ ಈಗ...ಮೈ ಗಾಡ್... ಜನ ಅವ್ರೇ,,ಆದ್ರೆ..ಪಲ್ಯೂಟ್ ಮಾಡ್ಬಿಟ್ಟಿದ್ದಾರೆ..ಯು ನೋ..ಮಲಿನ ಮಾಡೋಕೆ ಒಂದೆರಡು ತೊಟ್ಟು ಸಾಕು...ಇಡೀ ತಂಬಿಗೆಯೇನು, ಹಂಡೆಯೇನು..ಕೆರೇನೇ ಕುಲಗೆಡುತ್ತೆ...ಜನ ಎಚ್ಚೆತ್ತ್ಕೋಬೇಕು ಅಷ್ಟೇ... ಇವರ ಗಾಳಕ್ಕೆ ಬೀಳಬಾರದು...ಗಾಳಾನೂ..ಗಾಳದ ಅಂಚಿನ ಎರೆಹುಳಾನೂ ಕಚ್ಚಿ ಜಿಗಿದು ಹೋಗೋ ಜಾಣ ಮೀನಿನ ತರಹ...
    ಒಳ್ಳೇ ಲೇಖನ..ಬ್ಲಾಗಿನಲ್ಲಿ..ಬರೆಯಿತ್ತಿರಿ...ಐ..ಮೀನ್..ಬ್ಲಾಗಿಸು ಕನ್ನಡ ಡಿಂಡಿಮವ
    ಡಾ. ಆಜಾದ್

    ReplyDelete
  10. ಸಿನೆಮಾ ಮಾಡೋಕೆ ಶಾಶ್ವತವಾದ ಮೂರ್ತಿ ಯಾಕೆ ಪ್ರತಿಷ್ಟಾಪಿಸಬೇಕು? ತಾತ್ಕಾಲಿಕವಾದ ಸೆಟ್ ಬಳಸಿ ಶೂಟಿ0ಗ್ ಮಾಡಬಹುದಲ್ಲವೆ?

    ಅಂದ ಹಾಗೆ ಮರಿಯಾ ನಿಮ್ಮೊಡನೆ ಊಟಕ್ಕೆ ಬಾರಲು ನಿರಾಕರಿಸುವುದರ ಹಿ0ದೆ ಹಿ0ದೂ ವಿರೋಧಿ ಸ0ಘಟನೆಗಳ ಕೈವಾಡ ಇದ್ದ0ತಿದೆ. ಯಾವುದಾದರೂ ಚಾನೇಲಿನವರಿಗೆ ತಿಳಿಸಿ ನೋಡಿ...Breaking News ಆದರೂ ಆದೀತು...

    ReplyDelete
  11. Good write up.
    I got to know about this Chaplin issue only through all the loud talks in blogs. Unnecessarily a nonissue is becoming an issue. Even trivial matters can become an ISSUE thanks to the media attention. It's time bloggers turned their attention to more fruitful thoughts/tasks :-)

    ReplyDelete
  12. ಎಲ್ಲಾ 'TOI'let paper ಹಾಗೂ ಇತರೇ ಅಧಿಕ ಪ್ರಸ೦ಗಿ ಚಾನೆಲ್ ಗಳ ಕಾರುಬಾರು..

    ReplyDelete
  13. hemanth hegde tappu maadibitru...charli chaplin thara iro namma Narasimharaju ( think only about prof.hucchuraya)avara vigraha nilsidre, he would have been garlanded and TV9 would have created another issue.... any ways Sandeep good article as usual

    ReplyDelete
  14. ಇಂಚ ಬ್ಲಾಗ್-ಡ್ ಬರೆದ್ ಬರೆದೇ ಎಲಿ ಇತ್ತಿನೈನ್ ಪಿಲಿ ಮಲ್ಪಿನಿ ನಮ, ಅತ್ತಾ? ಟೈಮ್ಸ್-ದ ಹಣೆಬರ ಮಾತೆರೆಗ್ಲಾ ಗೊತ್ತು, ಆಂಡಲಾ ಬೊಲ್ಪ್-ಗ್ ಲಕ್ಕ್-ದ್ ಟೈಮ್ಸ್ ಓದುನ ಏರಾಂಡಲ ಉಂತಾವೆರಾ? ಅಕ್ಲೆಗ್ ಬೋಡಾಯಿನಲಾ ಅವೇ ಅತ್ತಾ? ಉಂದು ಮಾಂತ ಬೊಡ್ಚಾಂಡ್.
    ----- ಕುಡ್ಲದಾರ್.

    ReplyDelete
  15. ಮಂಗಳೂರಿನ ಸುದ್ದಿ ಬೆಂಗಳೂರಿಗೆ ಬರೋದ್ರೊಳಗೆ ವಿಕೃತಿಗೊಳಿಸುವವರನ್ನು ಮಂಗಳೂರಿಗರೇ ಹೀಗೆ ಬಾಯಿ ಮುಚ್ಚಿಸಬೇಕು. ಚಿಲ್ಲರೆ ವಿಷಯಗಳನ್ನು ದೊಡ್ಡ ಮಾಡಿ ನಿಜವಾಗಿ ತಲೆಕೆಡಿಸಿಕೊಳ್ಳಿಸಬೇಕಾದ ವಿಷಯಗಳನ್ನು ಮುಚ್ಚಿಹಾಕುತ್ತಿದ್ದಾರೆ.!

    ReplyDelete
  16. Super Article sir... the way you wrote it is really superb...

    ReplyDelete
  17. ನಿಮ್ಮ ಲೇಖನ ಭಾಳಾ ಇಷ್ಟವಾಯ್ತು. ಆದರೆ ಏನು ಹೇಳೋಕೂ ಹೆದರಿಕೆ ಆಗತ್ತೆ. ನನ್ನನ್ನು ಕೋಮುವಾದಿ ಅಥವಾ ಜಾತ್ಯತೀತವಾದಿ ಅಂತೆಲ್ಲಾ ತಿಳ್ಕೋಬಾರ್ದಲ್ಲ!

    ReplyDelete
  18. ಸಂದೀಪ,
    ತುಂಬ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನಿಗೆ ತುಂಬ ತಾಕತ್ತಿದೆ, ಕೈಬಿಡಬೇಡಿ.
    - ಕೇಶವ (www.kannada-nudi.blogspot.com)

    ReplyDelete
  19. ಸಂದೀಪ್,

    ಎಂದಿನಂತೆ ಅದೇ ಹಾಸ್ಯದಾಟಿಯಲ್ಲಿ ಎಲ್ಲಾ ವಿಚಾರಗಳನ್ನು ಚೆನ್ನಾಗಿ ಹೇಳಿದ್ದೀರಿ..ದೋಸೆಯ ವಿಚಾರವಂತೂ...ತೂತಿನ ಮೇಲೆ ತೂತು...ಇದೇ ಮಾತನ್ನು ನನ್ನ ಶ್ರೀಮತಿಗೆ ಹೇಳಿದಾಗ ಆಕೆ ನೋಡ್ರಿ ಇದು ಹೇಗಿದೆ ಅಂತ ಒಂದೂ ತೂತಿಲ್ಲದ ದೋಸೆ ಬಡಿಸಿಬಿಡಬೇಕೆ ! ಒಟ್ಟಾರೆ ಎಲ್ಲಾ ವಿಚಾರಗಳಲ್ಲೂ ತೂತುಗಳು ಸೇರಿಹೋಗಿವೆ...

    ReplyDelete
  20. Strong coffee ಗೆ ಗಟ್ಟಿ ಹಾಲು ಮತ್ತು ಹದವಾಗಿ ಸಕ್ಕರೆ ಬೆರೆಸಿದಂತಿದೆ ಬರಹ. ಸಾಹಿತಿ ಅಲ್ಲ್ದೆಯೇ ಇಷ್ಟು effective ಆಗಿ ಬರಿತಿರಿ, ಇನ್ನು ಸಾಹಿತಿ ಆಗಿದ್ದಿದ್ರೆ... ಬೇಡ ಹೀಗೆ ಇರಿ.ಹಿಂದೆಯೂ ಅಷ್ಟೇ ಬಿಳಿ ಹುಲಿ ಬಗ್ಗೆ, ಐ ಟಿ ಜಗತ್ತಿನ ಬಗ್ಗೆ ಬರೆದಗ್ಲು ಅಷ್ಟೇ, ವಿಚಾರ ಮಂಡನೆ ತುಂಬಾ ತೂಕವಗಿರುತ್ತೆ, ಜೊತೆಗಿಷ್ಟು ವ್ಯಂಗ್ಯ, ಯಾವುದೇ ಉದ್ವೇಗವಿಲ್ಲದೆ ಮನಸ್ಸಿನ ಮಾತುಗಳಿಗೆ ಅಕ್ಷರ ರೂಪ.ನಿಮ್ಮ ಶೈಲಿಯೇ ಅದ್ಬುತ ಧನ್ಯೋಸ್ಮಿ...

    ReplyDelete
  21. ಸಂದೀಪ್,

    ವಿಷಯ ಸಂಗ್ರಹಣೆ ಮತ್ತು ಅದರ ನಿರೂಪಣೆ ಇಷ್ಟ ಆಯ್ತು. ಟಿಆರ್‌ಪಿ ಹೆಚ್ಚಿಸೋಕೆ ಮತ್ತಷ್ಟು ಸಲಹೆಗಳು ಸಿಕ್ಕಂತಾಗಿದೆ. ಇನ್ನಾದ್ರೂ ಈ ಮಾಧ್ಯಮದವರು ಕರಾವಳಿಯನ್ನು ಬಿಟ್ಟು, ಕೊಲೆ ಸುಲಿಗೆ ಅತ್ಯಾಚಾರ ಅನಾಚಾರ ನಿಜವಾಗಿಯೂ ನಡೆಯುವ ಸ್ಥಳಗಳ ಮೇಲೆ ಗಮನ ಹರಿಸ್ತಾರಾ ನೋಡೋಣ.

    ReplyDelete
  22. ಪಾಪ ಈ ವಿವಾದ ಹುಟ್ಟು ಹಾಕಿ ಸಿನೆಮಾಕ್ಕೆ ಪಬ್ಲಿಸಿಟಿ ಸಿಕ್ಕಿದಂತಾಯ್ತು. ಯಾರೇನೇ ಅಂದರೂ ಕುಡ್ಲ ಇಂದು, ನಾಳಯೂ ಹಾಗೇ ಇರುತ್ತದೆ.

    ReplyDelete
  23. ಹೌದು ಕಣ್ರೀ, ನಂಗೂ ಜನಾ ಕೇಳ್ತಾ ಇರ್ತಾರೆ.. ಮೊನ್ನೆ ತನೆ ಒಬ್ರು ಕೇಳಿದ್ರು, "ಓಹೋ! ನೀವು ಮಂಗ್ಳೂರ್ನವ್ರಾ.. ತುಂಬಾ dangerous ಜಾಗ ಅಲ್ವಾ ಅದು.." ..
    ಎಲ್ಲಾ ವಿಷಯ ಎಷ್ಟು ವಿವರವಾಗಿ ಹೇಳಿ ತಲೇತಿಂದೆನೆಂದರೆ ಮತ್ತೊಮ್ಮೆ ಮಂಗ್ಳೂರನ್ನ ಹಾಗೆ ಹೇಳ್ಬಾರ್ದು ನೋಡಿ..
    ಅಂದ ಹಾಗೆ, "ಹೋರಾಟದ ಹಾದಿ" ಎಂಬ ಬ್ಲಾಗ್ನಲ್ಲಿ ಈ ಬರಹವೊಮ್ಮೆ ನೋಡಿ..
    http://ajadhindkannada.wordpress.com/2009/02/10/%e0%b2%aa%e0%b2%ac%e0%b3%8d%e0%b2%ac%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%ac%e0%b3%8d%e0%b2%ac%e0%b3%81/

    ReplyDelete
  24. ಪುತ್ತೂರಲ್ಲಿ ಎರಡು ಗಲಾಟೆ ಆಗಿದ್ದೆ ತಡ, ನಮ್ಮ ಆಫೀಸಲ್ಲಿ ಎಲ್ಲಾರು ನನ್ನ ತಲೆ ತಿನ್ನಕ್ ಶುರು ಮಾಡಿದ್ರು.
    ಅದೇ ಅಪ್ಪಂಗೆ ಫೋನ್ ಮಾಡಿ ಕೇಳಿದ್ರೆ ಅಂತಾದ್ ಏನೂ ಆಗಿಲ್ಲ, ತುಂಬಾ ಮಸಾಲೆ ಸೇರ್ಸಿ ಬರ್ದಿದಾರೆ ಪೇಪರ್ ಅಲ್ಲಿ ಅಂದ್ರು!
    TOI ಮತ್ತು ವಿಜಯ ಕರ್ನಾಟಕದಲ್ಲಿ ಮೊದಲ ಪುಟದಲ್ಲೇ ಸುದ್ದಿ ಬಂದರೆ, the hindu ಅಲ್ಲಿ ಎಲ್ಲೂ ಸುದ್ದಿ ಕಾಣಿಸಲೇ ಇಲ್ಲ!
    ಬೇರೆ ಊರಿನ ವಿಷಯ ಈ ರೀತಿ ಬರೆದರೆ ಅವರಿಗೆ ಏನು ಸಿಗತ್ತೋ!

    ReplyDelete
  25. bhale bhale! tumba chennagide baraha :-)

    ReplyDelete
  26. ಸಂದೀಪ್,

    "’ಬರ್ಬೇಕಾದ್ರೆ ಬಾಡಿಗೆ ಸಿಗಲ್ಲ ನೋಡಿ ಅದಕ್ಕೆ ’ ಅಂತಾನೆ . ಮೂರ್ತಿ ನೋಡೊದಕ್ಕೆ ಹೋದವರು ಅಲ್ಲೇ ನೀರಿಗೆ ಬಿದ್ದು ಸಾಯ್ತಾರೆ ಅನ್ನೋ ಅಭಿಪ್ರಾಯವಿರಬಹುದೇ ಆಟೋದವನದ್ದು ? ಅದೂ ಗೊತ್ತಿಲ್ಲ !"

    :D ಈ ಸಾಲು ಓದಿ ನಕ್ಕೂ ನಕ್ಕೂ ಸುಸ್ತಾದೆ. ಏನೇ ಹೇಳಿ ಮನಸ್ಸು ಬೇಸರವಾದಗಲೋ ಇಲ್ಲಾ ಮನಸ್ಸು ನಕ್ಕು ಹಗುರಾಗಲೋ ನಿಮ್ಮ ಇಂತಹ ಬರಹಗಳು ಟೋನಿಕ್ ಅಂತೆ ವರ್ತಿಸುತ್ತವೆ. ಚಾಪ್ಲಿನ್‌ನಂತೇ ನಗಿಸುವ ಕಲೆ ನಿಮ್ಮಲ್ಲೂ ಇದೆ. ಇದನ್ನು ಹೀಗೇ ಮುಂದುವರಿಸಿ.

    ReplyDelete