Thursday, April 16, 2009

ಹಳೆ ಪಾತ್ರೆ,ಹಳೆ ಕಬ್ಬಿಣ .....

ಬೆಳಿಗ್ಗೆ ಬೆಳಿಗ್ಗೆ ಮನೆಯ ಕರೆಗಂಟೆ ಟ್ರಿಣ್ ಅಂದಿತು .ಶಪಿಸುತ್ತಾ ಎದ್ದು ನೋಡಿದ್ರೆ ಮಾದೇಶ.ಮಾದೇಶ ಹಳೇ ಪಾತ್ರೆ,ಪೇಪರ್ ತಗೊಳ್ಳೋನು.

"ಏನ್ ಮಾದೇಶ ಯಾವಾಗ್ಲೂ ದಾರೀಲಿ ಕಿರುಚಿ ನಿದ್ದೆ ಹಾಳು ಮಾಡೋನು ಇವತ್ತು ಸೀದಾ ಮನೆಯೊಳಗೆ ಬಂದು ನಿದ್ದೆ ಕೆಡಿಸಿದೆಯಲ್ಲಾ ,ಹೆಂಗೈತೆ ಮೈಗೆ " ಅಂದೆ ಸಿಟ್ಟಿನಿಂದ.

"ಏನಿಲ್ಲಾ ಸ್ವಾಮಿ ಒಂದು ಸಹಾಯ ಆಗಬೇಕಿತ್ತು ನಿಮ್ಮಿಂದ "

"ಏಯ್ ಕಾಸೆಲ್ಲಾ ಕೊಡಕ್ಕಾಗಲ್ಲ .ತಿಂಗಳ ಕೊನೆ ಬೇರೆ " ಗದರಿಸಿದೆ ನಾನು .

"ಕಾಸೇನೂ ಬೇಡ ಸ್ವಾಮಿ.ನಿಮಗೆ ಸಿನೆಮಾದವರೆಲ್ಲ ಗೊತ್ತಲ್ವ ಹಂಗೆ ಒಂದು ಸಹಾಯ ಆಗ್ಬೇಕಿತ್ತು ದಣಿ "

"ಏನೋ ಸಿನೆಮಾ ಹೀರೋ ಆಗ್ತಿಯೇನೋ " ಅಂದೆ ತಮಾಷೆಗೆ .

"ಇಲ್ಲಾ ಬುದ್ದಿ ’ಜಂಗ್ಲಿ ’ ಸಿನೆಮಾ ನೋಡಿದ್ದೀರಲ್ವ ಅದರಲ್ಲಿ ಒಂದು ಹಾಡು ಬರುತ್ತಲ್ವ ’ಹಳೇ ಪಾತ್ರೆ ,ಹಳೆ ಕಬ್ಬಿಣ ’ ಅದನ್ನು ಬರೆದೋರ ನಂಬರ್ ಬೇಕಿತ್ತು ಸ್ವಾಮಿ "

"ಅಯ್ಯೋ ದೇವ್ರೆ ಅದು ಯೋಗರಾಜ್ ಭಟ್ರು ಬರೆದಿರೋದು ಕಣ್ಲಾ .ನಿನಗ್ಯಾಕೆ ಅವರ ನಂಬರು ?"

"ಬುದ್ದಿ ಏನಿಲ್ಲ ಆ ಹಾಡು ಸ್ವಲ್ಪ ಬದಲಾಯಿಸಿ ಕೊಡ್ಬೇಕಿತ್ತು.ನಾನು ಎಂಗೂ ಹಳೆ ಪಾತ್ರೆ ,ಹಲೆ ಕಬ್ಬಿಣ ತಗೊಳ್ಳೋನಲ್ವ ನನಗೂ ದಿನಾ ರಸ್ತೆಯಲ್ಲಿ ’ಹಳೆ ಪಾತ್ರೆ ,ಕಬ್ಬಿಣ ಅಂತ ಕಿರುಚಿ ಕಿರುಚಿ ಸುಸ್ತಾಗಿ ಬಿಟ್ಟಿದೆ. ಅವರು ಸ್ವಲ್ಪ ಹಾಡು ಬದಲಾಯಿಸಿ ಬರೆದ್ರೆ ,ನಾನು ಅದನ್ನೆ ಮತ್ತೆ ಹಾಡಿಸಿ ಕ್ಯಾಸೆಟ್ ನ ನನ್ ಗಾಡಿನಲ್ಲಿ ಜೋರಾಗಿ ಹಾಕ್ಕೊಂಡು ಹೋಗ್ತೀನಿ. ಒಸಿ ವ್ಯಾಪಾರನೂ ಜೋರಾಗುತ್ತೆ ಅಲ್ವ ಬುದ್ದಿ ?"

"ಐಡಿಯಾ ಏನೋ ಜೋರಾಗಯ್ತೆ ಮಾದೇಶ ,ಆದ್ರೆ ಹಾಡು ಯಾಕೆ ಬದಲಾಯಿಸ್ಬೇಕು .ಹಂಗೆ ಚೆನ್ನಾಗಿದೆಯಲ್ಲ ? "

"ಚೆನ್ನಾಗೇನೋ ಬುದ್ದಿ ! ಆದ್ರೆ ಪ್ರೀತಿ ಗೀತಿ ಎಲ್ಲ ಬೇಡ ಇನ್ನೂ ಸ್ವಲ್ಪ ನಮ್ಮವೇ ಐಟಂಗಳನ್ನು ಸೇರಿಸ್ಬೇಕಿತ್ತು.ಹಳೇ ಪಾತ್ರೆ,ಕಬ್ಬಿಣ,ಸೀಸ ,ಬಟ್ಟೆ ,ಚಪ್ಪಲಿ,ಚೊಂಬು ,ಕೊಡ ,ಬಾಲ್ಟಿ ಹೀಗೆ .ಸ್ವಲ್ಪ ಚೆನ್ನಾಗಿ ಬರ್ ಕೊಟ್ರೆ ನಂಗೂ ಒಸಿ ಸಹಾಯ ಆಗ್ತಿತ್ತು.ಮತ್ತೆ ಆ ಹಾಡು ಹಾಡಿರೋರ್ ನಂಬರೂ ಕೊಡಿ ಬುದ್ದಿ ಸಕ್ಕತ್ತಾಗಿ ಹೊಂದುತ್ತೆ ನಂ ಬಿಸ್ನೆಸ್ ಗೆ ,ಅವರಿಂದಾನೇ ಹಾಡಿಸ್ಬೆಕು ಅಂತಿವ್ನಿ .ಬುದ್ದಿ ಇದೇನಾದ್ರೂ ಐಡಿಯಾ ಕಿಲಿಕ್ ಆಗ್ಬುಟ್ರೆ ನಮ್ಮ ಸಿದ್ದೇಶಂಗೂ ಒಂದು ಹಾಡು ಮಾಡಿ ಬೇಕಾಗುತ್ತೆ .ಅವನು ತರಕಾರಿ ಮಾರ್ತಾನಲ್ವ ..."

ಸೂಚನೆ:ಇದೊಂದು ಕಾಲ್ಪನಿಕ ಹಾಸ್ಯ ಲೇಖನ .

11 comments:

  1. Sakathaggide mamu..

    ReplyDelete
  2. ಹ್ಹೆ, ಹ್ಹೆ, ಸಕ್ಕತ್, ನಿಜ ಇನ್ನು ಆ ತರ ಹಾಡುಗಳು ಬರೋ ದಿನ ದೂರವಿಲ್ಲ!

    ReplyDelete
  3. ಸಕ್ಕತ್ತಾಗಿದೆ, ಕಾಮತ್. ಈ ಹಾಡು ಕೇಳಿದಾಗಿನಿಂದ ಇಂತಹುದಕ್ಕೆ ಏನಾದರೂ ಅದು ಲಾಯಕ್ಕಾಗುತ್ತದೆ ಅನ್ನಿಸಿತ್ತು. ನಿಮ್ಮೆ ಸೆನ್ಸ್ ಆಫ್ ಹ್ಯೂಮರ್ ಸಕ್ಕತ್ತಾಗಿ ವರ್ಕ್ ಔಟ್ ಆಗಿದೆ ಇಲ್ಲಿ

    ReplyDelete
  4. ಸೂಪರಾಗಿದೆ ಐಡಿಯಾ...

    ಮಾದೇಸನಿಗೆ ನೀವೆ ಒಸಿ ಪದ್ಯ ಬರ್ದು ಕೊಟ್ಬುಡಿ.... ಪಾಪ:)

    ReplyDelete
  5. ಕಾಮತರೇ,
    ಚೆನ್ನಾಗಿದೆ ಕಣ್ರೀ

    ReplyDelete
  6. hehe..nice writeup. inthadde ondu incident nammanelu nadedittu..naanu zindagi li haako ashtaroLagaagi neevu post maadbittiddeeri..parvaagilla.

    ReplyDelete
  7. ಸಂದೀಪ ಸರ್ ಒಳ್ಳೆ ವಿಡಂಬನೆ, ಇತ್ತೀಚೆಗೆ ಬರುತ್ತಿರುವ ಹಾಡುಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ, ಸಾಹಿತ್ಯ ಅನ್ನೋದು ಎಲ್ಲೊ ಹೋಗಿದೆ ನಕ್ಕು ನಕ್ಕು ಸುಸ್ತಾಗತ್ತೆ, ಇತ್ತೀಚೆಗೆ ಬಂದ ಟಾಟಾ ಬಿರ್ಲಾ ಚಿತ್ರದ ಹಾಡು ಕೂಡಾ ಹೀಗೆ "ಸಖಿ ಸಖಿ ಓ ಗಗನ ಸಖಿ.. ಹಾರೋಣ ಬಾ ಕಾಗೆ ಹಾಗೆ" ಹಾಗೆ ಇತ್ತೀಚಿನ "ಪೌಡರ ಹಾಕೊಳ್ರೊ ತಲೇ ಬಾಚ್ಕೊಳ್ರೊ" ಒಂಥರ ಚಿತ್ರ ವಿಚಿತ್ರಾನಗಳು... ಅಂದ ಹಾಗೆ ಹಿಂದೊದು ಲೇಖನದಲ್ಲಿ ನೀವು ವಸುಧೇಂದ್ರರ "ಹಂಪಿ ಎಕ್ಸಪ್ರೆಸ್" ಬಗ್ಗೆ ಹೇಳಿದ್ರಲ್ಲಾ ಅದೇ ಅಂಕಿತದಲ್ಲಿ ತಂದು ಓದುತ್ತಿದ್ದೇನೆ ಬಹಳ ಚೆನ್ನಗಿವೆ ಕಥೆಗಳು... ಆ ಲೇಖಕರ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete