ಈ ಲೇಖನದ ಹೆಸರು ಕಳ್ಳ-ಪೋಲಿಸ್ ಅಂತ ಇಟ್ಟಿದ್ದು ನೋಡಿ ನಿಮಗೆಲ್ಲರಿಗೂ ಬಾಲ್ಯದ ನೆನಪು ಬಂದಿರುತ್ತೆ ಬಹುಷ! ಆದ್ರೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ-ಪೋಲೀಸ್ ಆಟದ ಬಗ್ಗೆ ಅಲ್ಲ ಸ್ವಾಮಿ ಈ ಲೇಖನ !ನಿಮ್ಮ ಬಾಲ್ಯದ ನೆನಪನ್ನು ಅನಗತ್ಯವಾಗಿ ಮೆಲುಕು ಹಾಕಿಸಿದ್ದರೆ ಕ್ಷಮೆ ಇರಲಿ .
ಇದೊಂದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂಥ ಲೇಖನ.ಆದರೆ ಯಾರಾದ್ರೂ ಹಿಂದಿ ಸಿನೆಮಾ ಹಾಡುಗಳ ’ಕಟ್ಟಾ’ ಅಭಿಮಾನಿಗಳು,ಸಂಗೀತ ನಿರ್ದೇಶಕರ ಫೋಟೋ ಇಟ್ಟು ಪೂಜಿಸುವಂಥವರಿದ್ರೆ ದಯವಿಟ್ಟು ಮುಂದೆ ಓದಬೇಡೀ .ಹಂಗೇ ಬಂದ ದಾರಿಗೆ ಸುಂಕವಿಲ್ಲ ಅಂತ ನನಗೆ ಶಪಿಸಿ ವಾಪಾಸ್ ಹೋಗಿ ಬಿಡಿ!
ಈಗ ವಿಷಯಕ್ಕೆ ಬರೋಣ.ನಾವೆಲ್ಲ ಹಿಂದಿ ಸಿನೆಮಾ ನೋಡಿರ್ತೀವಿ ಹಾಗೇ ಹಾಡುಗಳನ್ನೂ ಕೇಳೇ ಕೇಳಿರ್ತೀವಿ . ಸಿನೆಮಾ ನಿರ್ದೇಶಕರು ಕಥೆಗಳನ್ನು ಕದಿಯೋದು ಮಾಮೂಲಿ.ಹಾಗೆ ಸಂಗೀತ ನಿರ್ದೇಶಕರೂ ಕೂಡಾ ತಮ್ಮ ಹಾಡಿನ ಟ್ಯೂನ್ ಗಳನ್ನು ಎಲ್ಲೆಲ್ಲೆಂದಲೋ ಕಷ್ಟ ಪಟ್ಟು ಕದ್ದಿರ್ತಾರೆ. ಓಹ್ ಸಾರಿ ಎಲ್ಲಿಂದಲೋ ಪ್ರೇರಿತರಾಗಿ ಹಾಡಿನ ಟ್ಯೂನ್ ರಚಿಸಿರ್ತಾರೆ.
ಇಂಥ ಕದ್ದಿರೋ ,ಓಹ್ ಕ್ಷಮಿಸಿ ಎಲ್ಲಿಂದಲೋ ಪ್ರೇರಿತರಾಗಿರೋ ಟ್ಯೂನ್ ಗಳ ಮೂಲ ಹುಡುಕುವುದಕ್ಕೆಂದೇ ಒಂದು ವೆಬ್ ಸೈಟ್ ಇದೆ .ಈ ಲೇಖನ ಆ ನಿಮ್ಮನ್ನು ಆ ವೆಬ್ ಸೈಟ್ ಗೆ ಪರಿಚಯಿಸೋದು.
ಅಂಥ ಒಂದು ವೆಬ್ ಸೈಟ್ ನ ಹೆಸರೇ.... ಹೀಗೂ ಉಂಟೆ . ಓಹ್ ಸಾರಿ ಎಲ್ಲಾ TV 9 ಪ್ರಭಾವ.
ಅಂಥ ಒಂದು ವೆಬ್ ಸೈಟ್ ನ ಹೆಸರು ItwoFS
ಈ ವೆಬ್ ಸೈಟ್ ಗೆ ItwoFS ಅಂಥ ಹೆಸರು ಯಾಕೆ ಬಂತು ಅಂತೀರಾ ? ItwoFS ಅಂದ್ರೆ Inspirations in Indian Film Songs!
ಈ ವೆಬ್ ಸೈಟ್ ನಲ್ಲಿ ಯಾವ್ಯಾವ ಸಂಗೀತ ನಿರ್ದೇಶಕರು ಯಾವ್ಯಾವ ಭಾಷೆಯ ಹಾಡನ್ನು ಕದ್ದು ಟ್ಯೂನ್ ಕೊಟ್ಟಿದ್ದಾರೆ ಅನ್ನೋದನ್ನ ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಅದಕ್ಕೆ ಈ ಲೇಖನದ ಹೆಸರು ಕಳ್ಳ ಪೋಲಿಸ್ ಅಂತ ಇಟ್ಟಿರೋದು!
ಆ ವೆಬ್ ಸೈಟ್ ನಲ್ಲಿ ಬಹುತೇಕ ಎಲ್ಲಾ ಹಿಂದಿ ಸಂಗೀತ ನಿರ್ದೇಶಕರ ಕದಿಯುವಿಕೆಯನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಕೆಲವೊಮ್ಮೆ ನಮ್ಮ ನೆಚ್ಚಿನ ಹಾಡು ಎಲ್ಲಿಂದಲೋ ಕದ್ದಿರೋದು ಅನ್ನೋದು ಗೊತ್ತಾದಾಗ ತುಂಬಾನೇ ಬೇಜಾರಾಗುತ್ತೆ.ಆದ್ರೆ ಹಾಗಂತ ಸತ್ಯವನ್ನು ಅಲ್ಲಗಳೆಯಲಾಗದು ಅಲ್ವೆ?
ಈ ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ ...... ಸಿಕ್ಕಿ ಬೀಳದ ಹೊರತು!
ಸ೦ದೀಪ
ReplyDeleteಯಾವಾಗಲು ಹೊಸ ವಿಚಾರಗಳನ್ನ ಹುಡುಕಿ ಕೊಡುತ್ತೀರಿ, ಅದಕ್ಕೆ ನಿಮ್ಮ ಬ್ಲಾಗು ಇಷ್ಟವಾಗುವುದು.
ಈ ಲಿ೦ಕನ್ನು 2008ರ ಮೇ ನಲ್ಲಿ ನೋಡಿದ್ದೆ.. ಆದ್ರೆ ಇದ್ರ ಬಗ್ಗೆ ಬ್ಲಾಗ್ ಬರೆಯೋ ಐಡಿಯ ನಿಮಗೆ ಬ೦ತಲ್ಲ..ನೈಸ್ :)
ReplyDelete“The secret to creativity is knowing how to hide your sources.”
"ಈ ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ ...... ಸಿಕ್ಕಿ ಬೀಳದ ಹೊರತು! "(:)
ReplyDeleteಒಳ್ಳೆಯ ಮಾಹಿತಿ..
ಧನ್ಯವಾದಗಳು ಸಂದೀಪ್.
-ಧರಿತ್ರಿ
ಇದರ ಬಗ್ಗೆ ಮೊದಲೂ ಕೇಳಿದ್ದೆ. ಈಗ ಮತ್ತೊಮ್ಮೆ ನೋಡುವಂತಾಯಿತು. ಅಂದಹಾಗೆ "ಕಡಲತೀರ" ಶೀರ್ಷಿಕೆಯನ್ನೇ ಚಿತ್ರದೊಳಗಿನ ಕಡಲು ನುಂಗಿಹಾಕಿತೆ?!
ReplyDeleteಪರಾಂಜಪೆಯೆಯವರೆ, ಪ್ರಮೋದ್ ,ಧರಿತ್ರಿ,ತೇಜಸ್ವಿನಿ ಧನ್ಯವಾದಗಳು.
ReplyDeleteಪ್ರಮೋದ್ ನಾನು ಬಹಳಷ್ಟು ವರ್ಷಗಳಿಂದ ಈ ವೆಬ್ ಸೈಟ್ ಅನ್ನು ರೆಗುಲರ್ ಆಗಿ ನೋಡ್ತೀನಿ:)
ಆದ್ರೆ ನಾನೊಬ್ಬನೇ ಯಾಕೆ ಮಜಾ ತಗೊಳ್ಳೋದು ಎಲ್ಲರಿಗೂ ಗೊತ್ತಾಗಲಿ ಅನ್ನೋ ಉದ್ದೇಶದಿಂದ ಬರೆದೆ.
ತೇಜಸ್ವಿನಿಯವರೆ ಕಡಲಿನ ಮುಂದೆ ಶೀರ್ಷಿಕೆ ಯಾವ ಲೆಕ್ಕ ಅಲ್ವೆ?
ಎಲ್ಲರೊ ಒಂದಲ್ಲ ಒಂದು ರೀತಿ ಕಳವು ಮಾಡುತ್ತಾರೆ ... ಇನ್ನು ಸಂಗೀತಗಾರರು ಬೇರೆನಾ...ಹೇಳಿ..? ಪ್ರತಿಷ್ಠಿತ ಸಂಗೀತ ನಿರ್ದೆಶಕರನ್ನ ಒಮ್ಮೆ ಕೇಳಿ ನೋಡಿ ನೀವು ಈ ಸಂಗೀತವನ್ನ ಇಂತಹ ಕಡೆ ಕದ್ದಿರುವುದೆಂದು ಹೇಳಿದರೆ ಮುಗಿಯಿತು ಮತ್ತೆ ನಮ್ಮೊಂದಿಗೆ ಮಾತೆ ಆಡೋದಿಲ್ಲ... ಹ ಹ ಇದು ನನ್ನ ಸ್ನೇಹಿತೆಯ ಅನುಭವ ಅದಕ್ಕೆ ತಿಳಿಸಿದೆ..
ReplyDeleteಆ ವೆಬ್ಸೈಟ್ ಚೆನ್ನಾಗಿದೆ...ಒಳ್ಳೆಯಮಾಹಿತಿ...
ಧನ್ಯವಾದಗಳು..
ಬರೀ ಹಾಡುಗಳಷ್ಟೇ ಅಲ್ಲ, ಹಿಂದಿ ಸಿನೆಮಾಗಳ ಮುಕ್ಕಾಲು ಭಾಗ ಕಥೆಗಳೆಲ್ಲಾ ಇಂಗ್ಲೀಷು, ಫ್ರೆಂಚು ಮುಂತಾದ ಸಿನೆಮಾಗಳಿಂದ ಎತ್ತಿರುವಂತದ್ದು. ಅದನ್ನು ಭಾರತಕ್ಕೆ ತಕ್ಕುನಾಗಿ ಪರಿವರ್ತಿಸಿ ನಾಲ್ಕು ಹಾಡು ಸೇರಿಸಿ, ಐಟಂ ಕುಣಿಸಿ ಇಲ್ಲಿ ರಿಲೀಸ್ ಮಾಡುತ್ತಾರೆ .
ReplyDeleteಇದರ ಬಗ್ಗೆ ಕೇಳಿದ್ದೆ... ಆದರೆ ಕಳ್ಳರನ್ನು ಆದಾರದ ಸಮೇತ ಹಿಡಿದು ತೋರಿಸಿದ್ದೀರಿ,, ಧನ್ಯವಾದಗಳು....
ReplyDeleteನಿಮ್ಮ ಬ್ಲಾಗಿನ ಎಲ್ಲ information ಚೆನ್ನಾಗಿ ಇದೆ... ಹೀಗೆ ಮುಂದುವರಿಸಿ....
ಗುರು
ಮನಸು ,ವಿಕಾಸ್ ,ಗುರು ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ.
ReplyDeleteಸ೦ದೀಪ್...
ReplyDelete"ಕಳ್ಳತನ ಮಾಡದವ್ರು ಯಾರವ್ರೇ..." ಅ೦ತ ಹಾಡಿಕೊ೦ಡೆ ನನ್ನಷ್ಟಕ್ಕೆ ನಿನ್ನ ಲೇಖನ ಓದಿ.
"ಇ೦ತಿ ನಿನ್ನ ಪ್ರೀತಿಯ" ಸಿನಿಮಾದ "ಮಧುವನ ಕರೆದರೆ..." ಹಾಡು ನಮಸ್ತೆ ಲ೦ಡನ್ ಸಿನಿಮಾದ "ಮೈ ಜಹಾನ್ ರಹೂನ್.." ಹಾಡಿನ ಕಾಪಿಯ೦ತಿದೆ. ಇನ್ನೂ ಈ ಹಿ೦ದಿ ಹಾಡು ಯಾವ ಇ೦ಗ್ಲಿಷ್ ಹಾಡಿನ ಕಾಪಿಯೋ.