Tuesday, June 29, 2010

ಕೈ (ಹಣೆ) ಬರಹ ...

ಮಕ್ಕಳ ಕೈ ಬರಹ ಸುಂದರವಾಗಲೆಂದು ದಿನಾ ಒಂದು ಪುಟ ಕಾಪಿ ಬರೆಯಲು ಕನ್ನಡ ಟೀಚರು ಹೇಳಿದ್ದರು.

ಗುಂಡು ಗುಂಡಗೆ ಬರೆದ ಸುರೇಶನಿಗೆ ಟೀಚರು ಹತ್ತರಲ್ಲಿ ಹತ್ತು ಅಂಕ ನೀಡೋದಲ್ಲದೆ ಲ್ಯಾಕ್ಟೋ ಕಿಂಗ್ ಚಾಕಲೇಟ್ ಬೇರೆ ಕೊಟ್ಟಿದ್ದರು.

ಕಾಗೆ ಕಾಲಿನ ಅಕ್ಷರವಿರುವ ಶ್ರೀಧರನಿಗೆ ಯಥಾ ಪ್ರಕಾರ ಛೀಮಾರಿ ಹಾಕಿದ್ದರು !

ಶ್ರೀಧರ ಈಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ .

ಸುರೇಶನಿಗೆ ರಾಜಕಾರಣಿಗಳು ಸುಂದರವಾಗಿ, ಗುಂಡ ಗುಂಡಗೆ ತಮ್ಮ ಪಕ್ಷದ ಬ್ಯಾನರ್ ಬರೆಯುವ ಕೆಲಸ ನೀಡಿದ್ದಾರೆ.

25 comments:

  1. :-)
    ಹಣೆ / ಕೈ - ಬರಹ ಎರಡೂ ಬದಲಾಯಿಸುವುದು ಕಷ್ಟ !

    ReplyDelete
  2. ಇಂತಹ ಅನೇಕವು ನಡೆಯುತ್ತವೆ. ನಮ್ಮ ಕಾಲೇಜಿನಲ್ಲಿ internals ಅಲ್ಲಿ 25ರಲ್ಲಿ 2 ಅಂಕ ಪಡೆದು external ನಲ್ಲಿ ಎರಡನೇ ಬಾರಿ 48 (total 50 marks is required for passing) ಅಂಕ ಗಳಿಸಿ ಪಾಸ್ ಆದ ಹುಡುಗನ ಬಗ್ಗೆ ಶಿಕ್ಷಕರ ಧೋರಣೆ ಚೆನ್ನಾಗಿಯೇ ಇರಲಿಲ್ಲ. ಆತನೀಗ ತನ್ನ M.S. ಮುಗಿಸಿ Ph.D. ಮಾಡಹೊರಟಿದ್ದಾನೆ.
    ಪಠ್ಯೇತರ ವಿಷಯಗಳಲ್ಲಿ ಅತ್ಯಂತ ಚುರುಕಿದ್ದ ಆದರೆ ಕಲಿಕೆಯಲ್ಲಿ ಹಿಂದುಳಿದು ಮೇಷ್ಟರಿಂದ "ನೀನು ಉದ್ಧಾರವಾಗುವುದಿಲ್ಲ" ಬೈಸಿಕೊಳ್ಳುತ್ತಿದ್ದ ನನ್ನ ಶಾಲೆಯ ಹುಡುಗನೊಬ್ಬ M.B.A. ಮಾಡಿ ತನ್ನ ತಂದೆಯ ಎಲ್ಲ ಸಂಸ್ಥೆಗಳ ಆಡಳಿತ ನೋಡಿಕೊಳ್ಳುತ್ತಿದ್ದಾನೆ.
    ಶಿಕ್ಷಣ ವ್ಯವಸ್ಥೆಯ ಅವಸ್ಥೆಯೇ? ವಿಪರ್ಯಾಸವೇ?

    ಚುಟುಕು ಬರಹವಾದರೂ ಬಹು ದಿನಗಳ ನಂತರ ಕಂಡಕಾರಣ ಖುಷಿಯಾಯಿತು.

    ReplyDelete
  3. ಒಳ್ಳೆ ಬರಹ.ಕೈ ಬರಹ ಚೆನ್ನಾಗಿದ್ದೂ ಬುದ್ದಿ ಉಪಯೋಗಿಸಿ ಬದುಕಲು ಅವಕಾಶವಿದೆ.ಆದರೂ ನೀವು ಹೇಳಿದ ಕಥೆ ಬಹಳಷ್ಟು ಇದೆ. ನಿಮ್ಮ ಬರಹ ಚೆನ್ನಾಗಿದೆ. ಕಡಲ ತೀರದ ವಿಷಯಗಳು ಹೆಚ್ಚಾಗಿ ಮೂಡಿಬರಲಿ.
    .

    ReplyDelete
  4. ha ha ha... :):D

    Moral of the story : Dont write "ಗುಂಡ ಗುಂಡಗೆ" but write like "ಕಾಗೆ ಕಾಲು"...

    ReplyDelete
  5. ಹಾಹಾಹಾ, ಹೌದು doctor ಗಳ handwritting ಅಂತೂ medical shop ನವರಿಗೆ ಮಾತ್ರ ಓದಲಿಕ್ಕೆ ಬರೋದು. ಕೈಬರಹ ಚೆನ್ನಾಗಿಲ್ಲದವರು lucky ಇರ್ಬೇಕು ಅಲ್ವ,, ದಿವ್ಯ ಅವರ ಮಾತೂ ನಿಜ,, ಹಹ

    ReplyDelete
  6. ಸಂದೀಪ್, ಶಿಕ್ಷಣ ವ್ಯವಸ್ಥೆಯ ಅವಸ್ಥೆ, ವಿಪರ್ಯಾಸ ಪುಟ್ಟದಾಗಿ ಚೊಕ್ಕವಾಗಿ ಮೂಡಿ ಬಂದಿದೆ.. ಇಷ್ಟವಾಯ್ತು..
    shama, nandibetta

    ReplyDelete
  7. ಏನ್ ಬರೀತೀವಿ ಅನ್ನೋದಕ್ಕಿಂತ ಹೇಗೆ ಬರೀತೀವಿ ಅನ್ನೊ ಬಗ್ಗೆ ಜಾಸ್ತಿ ಒತ್ತು ಕೊಟ್ಟರೆ ಆಗುವ ಪರಿಣಾಮದ ಬಗ್ಗೆ ಸಂದೇಶ ಹೇಳುವ ಪುಟ್ಟ ಬರಹ.

    ಮುದ್ದಾಗಿ ಅಕ್ಷರ ಬರೆಯುವವನಿಗೆ, ರಾಜಕಾರಣಿಗಳ ಬ್ಯಾನರ್ ಬರೆಯೋದು ಇಷ್ಟದ ಸಂಗತಿಯಾಗಿದ್ದರೆ ಅವನೇನೂ ತನ್ನ ಅವಸ್ಥೆಗೆ ಹಲುಬಬೇಕಾಗಿಲ್ಲ. ಅಥವಾ ಮುದ್ದಾದ ಅಕ್ಷರದಿಂದ ಆತನಿಗೆ Add Agency ಯಲ್ಲೋ, ಕಂಪ್ಯೂಟರಿಗಾಗಿ ಹೊಸ ಅಕ್ಷರವನ್ನೋ ಬರೆದರೆ ಅದೂ ಕಡಿಮೆ ಸಾಧನೆಯೇನಲ್ಲ..

    ಅಂದ ಹಾಗೇ ವಿಷಯಕ್ಕೂ ಒತ್ತು ಕೊಟ್ಟು, ಅಕ್ಷರವೂ ಮುದ್ದಾಗಿ ಇರಬಹುದಲ್ವ :)

    ReplyDelete
  8. ಬದುಕು ಎಷ್ಟು ಸಸ್ಪೆನ್ಸ್ ಅಲ್ವಾ!

    ReplyDelete