Monday, October 11, 2010

ಗೂಗಲ್ ಕಾರ್ ...

’ ಗೂಗಲ್ ನಿಂದ ಚಾಲಕರಹಿತ ಕಾರ್ - ಸುದ್ದಿ ’

ಗೂಗಲ್ ಚಾಲಕ ರಹಿತ ಕಾರ್ ಅಭಿವೃದ್ಧಿಗೊಳಿಸುತ್ತಾ ಇದೆ. ಭಾರತದಿಂದಲೂ ಬೇಡಿಕೆ ಬಂದಿರುವುದರಿಂದ ಹಾಗೂ ಅಮೆರಿಕಾದ ಮಾಡೆಲ್ ಭಾರತಕ್ಕೆ ಸರಿ ಹೊಂದದ ಕಾರಣ ಭಾರತ ಮೂಲದ ಕಂಪನಿಯೊಂದು ಚಾಲಕ ರಹಿತ ವಾಹನವನ್ನು ಕೆಲವು ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ!

ಈ ಚಾಲಕರಹಿತ ಕಾರ್ ನ ಕೆಲವು ಫೀಚರ್ ಗಳು :

ಸಿಗ್ನಲ್ ಜಂಪಿಂಗ್ : ಎಲ್ಲರಿಗೂ ಈಗ ಸಿಗ್ನಲ್ ಜಂಪ್ ಮಾಡಿ ರೂಢಿ ಆಗಿರುವುದರಿಂದ ಈ ಕಾರ್ ನಲ್ಲಿ ’ಸಿಗ್ನಲ್ ಜಂಪಿಂಗ್’ ತಂತ್ರಾಂಶವನ್ನು ಅಳವಡಿಸಲಾಗಿದೆ. ಈ ಕಾರು ಕೆಂಪು ಸಿಗ್ನಲ್ ಬಿದ್ದ ಮೇಲೂ ೩ ಸೆಕೆಂಡ್ ,ಹಾಗೂ ಹಸಿರು ಸಿಗ್ನಲ್ ಬೀಳುವ ೩ ಸೆಕೆಂಡು ಮೊದಲೇ ಚಲಿಸುವ ರೀತಿಯಲ್ಲಿ ತಂತ್ರಾಂಶವನ್ನು ಅಬ್ಭಿವೃದ್ಧಿಗೊಳಿಸಲಾಗಿದೆ.

ಜಗಳ ಮೇಕರ್ (ವರ್ಶನ್ 2.1) : ’ ಜಗಳ ಮೇಕರ್ ’ ತುಂಬಾ ಉಪಯುಕ್ತ ತಂತ್ರಾಂಶ. ಅಕಸ್ಮಾತ್ ಬೇರೆ ವಾಹನಗಳಿಂದ ತೊಂದರೆ ಉಂಟಾದಲ್ಲಿ ಆ ವಾಹನವನ್ನು ಓವರ್ ಟೇಕ್ ಮಾಡಿ,ಆ ವಾಹನದ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬಯ್ಯಲಾಗುತ್ತದೆ. 50 ಪ್ರಿ ರೆಕಾರ್ಡೆಡ್ ಅಶ್ಲೀಲ ಬಯ್ಗುಳಗಳನ್ನು ಈಗಾಗಲೇ ಅಳವಡಿಸಲಾಗಿದೆ. ವರ್ಶನ್ 2.2 ನಲ್ಲಿ ಎಲ್ಲಾ ಭಾರತೀಯ ಭಾಷೆಗಳನ್ನು ಅಳವಡಿಸುವುದಲ್ಲದೇ ಎದುರಾಳಿ ಚಾಲಕನನ್ನು ತದಕುವ ಸೌಲಭ್ಯವೂ ದೊರಕುತ್ತದೆ.

ಲಂಚೇಶ : ಅಕಸ್ಮಾತ್ ಟ್ರಾಫಿಕ್ ಪೋಲಿಸರು ಹಿಡಿದಲ್ಲಿ ಅವರಿಗೆ ಲಂಚ ಕೊಡಲು ATM ಥರದ ಸೌಲಭ್ಯವನ್ನು ಅಳವಡಿಸಲಾಗಿದೆ.
ವಿ.ಸೂ : ಕೇವಲ ನೂರು ರೂ ನೋಟುಗಳನ್ನಷ್ಟೇ ಇಡಿ ,ಪೋಲಿಸರು ಲಂಚಕ್ಕೆ ಚಿಲ್ಲರೆ ವಾಪಾಸ್ ನೀಡುವುದಿಲ್ಲ !

ಪಂಚರಂಗಿ ಪಾಂ ಪಾಂ : ಈ ತಂತ್ರಾಂಶ ಕರ್ಕಶವಾದ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತದೆ. ಸಧ್ಯಕ್ಕೆ ಐದು ಥರದ ಕರ್ಕಶ ಸದ್ದುಗಳು ಲಭ್ಯವಿದೆ. ಜೊತೆಗೆ ಕಣ್ಣು ಕೋರೈಸುವ ಹೆಡ್ ಲೈಟ್ ಸೌಲಭ್ಯವೂ ಇದೆ.

ಡಿಸೆಂಬರ್ ಹೊತ್ತಲ್ಲಿ ಈ ಚಾಲಕ ರಹಿತ ಕಾರು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಾದು ನೋಡಿ !

11 comments:

  1. ತು೦ಬಾ ಉಪಯುಕ್ತವಾದ ಕಾರ್ ಇದು. ಜನರಿಗೆ ಹೇಳಿ ಮಾಡಿಸಿದ೦ತಹದ್ದು. 100% ಕಸ್ಟಮರ್ ಸಟಿಸ್ಪಾಕ್ಷನ್. ಸಿಕ್ಕಪಟ್ಟೆ ಕಸ್ಟಮೈಸ್ಡ್. ಮಾಹಿತಿಗಾಗಿ ಧನ್ಯವಾದಗಳು :P

    ReplyDelete
  2. ಭಾರತಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಅಳವಡಿಸಿದ್ದಕ್ಕಾಗಿ ಧನ್ಯವಾದಗಳು. ‘ಹೊಡಿ ಮತ್ತು ಓಡು’ ಇನ್ನೊಂದು ತಂತ್ರಾಂಶ ಸೇರಿಸಬಹುದಾಗಿತ್ತು ಅಂತ ಕಾಣುತ್ತೆ. ಬುಕಿಂಗ್ ಈಗಾಗಲೇ ಜೋರಾಗಿರಬೇಕು. ಮಾಹಿತಿಗಾಗಿ ಧನ್ಯವಾದಗಳು.

    ReplyDelete
  3. ಹಾಗೆ ಫೂಟ್ ಪಾತ್ ಮೇಲೆ ಹೋಗೋದು, ಆ೦ಬುಲೆನ್ಸೆಗೆ ದಾರಿ ಬಿಡದಿರುವುದು, ರೈಲ್ವೆ ಗೇಟ್ನಲ್ಲಿ wrong ಸೈಡ್ ನಿ೦ದ ಹೋಗಿ ಮುಂದೆ ತೂರಿಕೊಲ್ಲುವುದು ಇತ್ಯಾದಿ ಕಲಿಸಿ

    ReplyDelete
  4. ಹ್ಹ ಹ್ಹ ಹ್ಹಾ... ಚೆನ್ನಾಗಿದೆ.
    ಮಳೆಗಾಲದಲ್ಲಿ ಮಾರ್ಗದ ಕೆಸರು ನೀರನ್ನು ಸಾಧ್ಯವಾದಷ್ಟು ಪಾದಚಾರಿಗಳ ಮೇಲೆ ಸಿಡಿಸಿ ರಾಡಿ-ಸ್ನಾನ ಮಾಡಿಸಲೂ ಬಲ್ಲದೇನೋ.

    ReplyDelete
  5. ಆಮೇಲೆ ಇನ್ನೊಂದು- ಬಚ್ಚೆ ಗೌಡರ ಗಾಡಿ ಸಿಕ್ಕರೆ overtake ಮಾಡುವುದನ್ನೂ ಹೇಳಿಕೊಡಿ

    ReplyDelete
  6. ಸೂಪರ್!! ಬುಕಿಂಗ್ ಶುರು ಆಗಿದೆಯಾ ;-)

    ReplyDelete
  7. innashtu customization option iddiddare super aagirodhu :)

    ReplyDelete
  8. ಗೂಗಲ್ ಮ್ಯಾಪ್ಸ್ ಸಹಾಯದಿಂದ ಪೋಲೀಸ್ ಇಲ್ಲದಿರೋ ರಸ್ತೆಲಿ ಹೋಗೋ ಸೌಲಭ್ಯ ಇದ್ಯಾ? ;)

    ReplyDelete
  9. ಈ ಕಾರಿಗೆ ಸೀಮೆ ಎಣ್ಣೆ ವರ್ಶನ್ ಬಂದಿದೆ ಅಂತ ಕೇಳ್ದೆ....ಹೌದಾ?

    ReplyDelete
  10. Sports Bet Daily - Thakasino fun88 fun88 카지노 카지노 647Play Online in South Africa, South Africa | Play Online

    ReplyDelete