Friday, August 1, 2008

ಪತ್ರ ಬರೆಯಲಾ ಇಲ್ಲ ....????
ಹೀಗೆ ಸ್ವಲ್ಪ ದಿನ ಮುಂಚೆ ’ಜಾನಕಿ ’ ,’ಹಾಯ್ ಬೆಂಗಳೂರ್’ ನಲ್ಲಿ ,ಪತ್ರದಲ್ಲಿರೋ ಆಪ್ಯಾಯಮಾನತೆ ಈ-ಮೇಲ್ ಅಥವಾ ಇನ್ನ್ಯಾವುದೋ ಮಾಧ್ಯಮದಲ್ಲಿ ಸಿಗೊದಿಲ್ಲ ಅನ್ನೊ ಧಾಟಿಯಲ್ಲಿ ಬರೆದಿದ್ದರು. ಬಹಳಷ್ಟು ಜನರ ಅಭಿಪ್ರಾಯನೂ ಅದೇ ಆಗಿತ್ತು.
ಆದ್ರೆ ನನಗನ್ನಿಸೋ ಪ್ರಕಾರ ಎರಡರ ಅನುಭವ ಬೇರೆನೇ ! ಈ ಎರಡೂ ಮಾಧ್ಯಮಗಳ ಅನುಭೂತಿ ಬೇರೇನೆ !

ನಾನು P.U.C ನಲ್ಲಿರ್ಬೇಕಾದ್ರೆ ಒಬ್ಳು ಗೆಳತಿ ಇದ್ಲು. ಪತ್ರ ಮಿತ್ರೆ! ಆಗ ಮಂಗಳ ಪತ್ರಿಕೆಯಲ್ಲಿ ’ಸ್ನೇಹ ಸೇತು’ ಅನ್ನೋ ಒಂದು ಅಂಕಣ ಬರ್ತಾ ಇತ್ತು .ಅದರಲ್ಲಿ ಒಬ್ಬಳ ಹೆಸರು ,ವಿಳಾಸ ಸಿಕ್ಕಿ ಅವಳಿಗೆ ಪತ್ರ ಬರೆದಿದ್ದೆ.
ಅವಳೂ ಅದಿಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ಲು. ಹೀಗೆ ಪ್ರಾರಂಭವಾಯಿತು ನಮ್ಮ ಸ್ನೇಹ.ಪತ್ರ ಬರೀತಾ ಬರೀತಾ ತುಂಬಾನೆ ಹತ್ತಿರವಾಗಿ ಬಿಟ್ಟಿದ್ವಿ. ನಮ್ಮಿಬ್ಬರ ಅಭಿರುಚಿಗಳೂ ಸುಮಾರಾಗಿ ಒಂದೆ ಆಗಿದ್ವು!
ನನಗೆ ಯಂಡಮೂರಿ ,ರವಿ ಬೆಳಗೆರೆ ಅಂದ್ರೆ ತುಂಬಾ ಇಷ್ಟ -ಹಾಗೇ ಅವಳ ಫೇವರೆಟ್ ಕೂಡಾ!
ಆದ್ರೆ ನನಗೆ ಲವ್ ಲವಿಕೆ ಸ್ವಲ್ಪಾನೂ ಇಷ್ಟ ಆಗ್ತ ಇರ್ಲಿಲ್ಲ. ಆದ್ರೆ ಅವ್ಳಿಗೆ ಅದಂದ್ರೆ ಪ್ರಾಣ.
ಯಾರೋ ಯಾರಿಗೋ ಬರೆದಿರೊ ಪ್ರೇಮಪತ್ರ ಓದೋದು ಲವ್ ಲವಿಕೆ ಓದೋದಂದ್ರೆ ಅನ್ನೋ ಭಾವನೆ ನನ್ನಲ್ಲಿತ್ತು.ಅದೂ ಅಲ್ದೆ ಅದರಲ್ಲಿ ಇರ್ತಾ ಇದ್ದ ಕೆಲವು ಹಿಂದಿ ಹಾಡುಗಳು ನನ್ನ ಮನಸ್ಸಿಗೆ ಅಷ್ಟೊಂದು ಹಿಡಿಸುತ್ತಿರಲಿಲ್ಲ.
ನಾನು ಅವಳಿಗೆ ಪುಟಗಟ್ಟಲೆ ಪತ್ರ ಬರೀತಾ ಇದ್ದೆ .32 A4 size ನ ಪುಟಗಳು ತುಂಬಿಸಿದ್ದೂ ಉಂಟು ಒಂದೊಂದು ಸಲ.

’ನಿನ್ನ ಪತ್ರ ಓದ್ತಾ ಇದ್ರೆ ನೀನೆ ಮುಂದೆ ಕೂತು ಏನೊ ಹೇಳ್ತಾ ಇರೋ ಹಾಗೆ ಅನ್ಸುತ್ತೋ ’ ಅಂತ ಅವಳು ಹೇಳಿದಾಗ ತುಂಬಾನೆ ಖುಷಿ ಆಗ್ತಾ ಇತ್ತು.

ಆದ್ರೆ ಒಂದೇ ಬೇಜಾರಂದ್ರೆ ಅವಳು ನನಗೆ ಕೇವಲ ಮೂರು ಪುಟದ inland letter ನಲ್ಲಿ ಬರೀತಾ ಇದ್ಲು! ಅವಳೂ ತುಂಬಾ ಬರೀಬೇಕು ,ನಾನೂ ಅದನ್ನು ಓದ್ಬೇಕು ಅನ್ನೊ ಆಸೆ ತುಂಬಾನೆ ಇತ್ತು ನನಗೆ. ಆದ್ರೆ ಪಾಪ ಅವಳು ಪರಾವಲಂಬಿ ,20 Rs stamp ಹಾಕೋ ಅಷ್ಟು ಸಾಮರ್ಥ್ಯ ಇರಲಿಲ್ಲ. ಆದ್ರೂ ಚಿಕ್ಕದಾಗಿ ಚೊಕ್ಕದಾಗಿ ಬರೀತಾ ಇದ್ಲು.
ಒಂದು ಪತ್ರದಲ್ಲಿ ನಾನು ಯಂಡಮೂರಿಯ ಕಾದಂಬರಿಯ ಒಂದು sentence ಕದ್ದು ಹಾಗೆ ಬರೆದಿದ್ದೆ.
"ನನ್ನ ಜೀವನ ಅನ್ನೋದು ಈರುಳ್ಳಿಯ ಹಾಗೆ ,ಸಿಪ್ಪೆ ಸುಲೀತಾ ಹೋದಂತೆ ಖಾಲಿ ಖಾಲಿ ,ಅಮೇಲೆ ಏನೂ ಉಳಿಯೋದಿಲ್ಲ " ಅಂತ ,ಅದಿಕ್ಕೆ ಅವಳು " ಉಳಿಯೊದು ಓಂದಿದೆ ಸಂದೀಪ್ ,ಅದು ಕಣ್ಣೀರು !!" ಅಂತ reply ಮಾಡಿದ್ಲು..
ಆ ದಿನ ತುಂಬಾನೆ impress ಆಗಿದ್ದೆ ಅವಳ ಮಾತು ಕೇಳಿ.
ತುಂಬಾ ಉತ್ಸುಕತೆಯಿಂದ ಕಾಯ್ತಾ ಇದ್ದೆ ಅವಳ ಪತ್ರಕ್ಕೆ . ಕೆಲವೊಮ್ಮೆ ನಾನೇ ಪೋಸ್ಟ್ ಆಫೀಸಿಗೆ ಹೋಗಿ ಪೋಸ್ಟ್ ಮ್ಯಾನ್ ತಲೆ ತಿನ್ತಾ ಇದ್ದಿದ್ದೂ ಉಂಟು!

ಕೊನೆಗೊಂದು ದಿನ ಪತ್ರ ಬರೆಯೋದೆ ನಿಲ್ಲಿಸಿ ಬಿಟ್ಲು ಅವಳು ,ಮನೆಯವರ ತಕರಾರಿನಿಂದ.
ತುಂಬಾನೆ miss ಮಾಡ್ತಾ ಇದ್ದೆ ಅವಳ ಪತ್ರಗಳನ್ನ.ಆದ್ರೆ ಕಾಲ ಕಳೆದಂತೆ ಎಲ್ಲಾ ಸರಿ ಹೋಯ್ತು.

ಅಮೇಲೆ ನಾನು ನನ್ನ ಪಾಡಿಗೆ ಓದು ಮುಗಿಸಿ ಕೆಲಸಕ್ಕೆ ಸೇರ್ಕೊಂಡೆ. ಆಫೀಸ್ ನಲ್ಲಿ ಇಂಟರ್ ನೆಟ್ ,ಈ-ಮೇಲ್, ಚಾಟ್ ನಂತ ಹೊಸ ಜಗತ್ತಿನ ಅನಾವರಣವಾಯ್ತು.
ಹಾಗೇ ಯಾಹೂ ಗ್ರೂಪ್ನಲ್ಲಿ ಗೆಳತಿಯೊಬ್ಬಳ ಪರಿಚಯವಾಯ್ತು. ಗಂಟೆಗಟ್ಟಲೆ chat ಮಾಡ್ತಾ ಇದ್ವಿ ನಾವು.
ಯಾಹೂ ಮೆಸೆಂಜರ್ ನಲ್ಲಿ ಅವಳು ಆನ್ ಲೈನ್ ಇದ್ದಾಳೆ ಅಂತ ಗೊತ್ತಾದ ಕೂಡಲೆ ಖುಷಿ ಆಗ್ತಾ ಇತ್ತು. ಆ ಹಳದಿ ಬಣ್ಣದ ನಗುಮುಖದ symbol (onile indication ) ನೋಡಿದ ತಕ್ಷಣ ಏನೋ ಒಂಥರಾ ಆನಂದ.

mail inbox ನಲ್ಲಿ ಅವಳ ಹೆಸರಿನ e-mail ನೋಡಿದಾಕ್ಷಣ ,ಹಿಂದೆ ಪೋಸ್ಟ್ ಮ್ಯಾನ್ ನನ್ನ ಕೈಯಲ್ಲಿ ’ಅವಳ’ ಪತ್ರ ಕೊಟ್ಟಾಕ್ಷಣ ಎಷ್ಟು ಖುಷಿ ಆಗ್ತಾ ಇತ್ತೋ ಅಷ್ಟೇ ಖುಷಿ ಆಗ್ತಿತ್ತು.
ಈ-ಮೇಲ್ ನಲ್ಲಿ ಅವಳು ಚಿಕ್ಕ ಮಕ್ಕಳ ಹಾಗೆ ಚಿತ್ರ ವಿಚಿತ್ರ fontಗಳು ,ಬಗೆ ಬಗೆಯ smileyಗಳನ್ನು ಹಾಕಿ ಬರೆದ mail ನೋಡಿ ತುಂಬಾ ಖುಷಿ ಆಗ್ತಾ ಇತ್ತು.

ಯಾಕೋ ದೇವರ ದಯೆಯಿಂದ ಪೋಸ್ಟ್ ನಿಂದ ಈ-ಮೇಲ್ ಗೆ transition ನನಗೇನೂ ಕಷ್ಟ ಅನ್ನಿಸಿಲ್ಲ.
ಬದಲಾಗಿ ಅವಳು ಆ ಕಡೆ ಕೂತು send ಬಟನ್ ಒತ್ತಿದ ತಕ್ಷಣ ಈ ಕಡೆ inbox ನಲ್ಲಿ ಮೇಲ್ ಬಂದು ಬೀಳುತ್ತಿದ್ದ ಪರಿ ಕಂಡು -"ಛೇ ಈ e-mail ಸೌಲಭ್ಯ ನನ್ನ ಹಳೇ ಗೆಳತಿಗೂ ಇದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವಾ?!" ಅನ್ನೋ ಕೊರಗು ಉಂಟಾಗ್ತಾ ಇತ್ತು.

ಪತ್ರ ಹಾಗೂ e-mail ಈ ಎರಡೂ ಮಾಧ್ಯಮಗಳ ಸುಂದರ ಅನುಭೂತಿ ನನಗೆ ಸಿಕ್ಕಿದ್ದಕ್ಕೆ ತುಂಬಾ ಲಕ್ಕಿ ಅನ್ನಿಸ್ತಾ ಇದೆ .ಹಾಗೇ ನನ್ನ generation ಕೂಡಾ !
8 comments:

ಬಾನಾಡಿ said...

ಅಪರೂಪಕ್ಕೆ ಸಿಕ್ಕ ಒಳ್ಳೆಯ ಬ್ಲಾಗು. ಬರೆಯುವ ಉತ್ಸುಕತೆ, ಸರಳವಾಗಿ ತಿಳಿಸುವ ರೀತಿ, ಹೇಳುವ ವಿಷಯಗಳಲ್ಲಿ ನಿಮ್ಮನ್ನು ನೀವೆ ತೊಡಗಿಸಿಕೊಳ್ಳುವುದು ಈ ಬ್ಲಾಗ್ ಇಷ್ಟವಾಗಲು ಕಾರಣ. ಎಲ್ಲ ಬರಹಗಳು ಚೆನ್ನಾಗಿವೆ. ಬರೆಯುತ್ತಾ ಹೋಗಿ. ಒಂದು ದಿನ ನೀವೆ ಕವಿತೆ ಬರೆಯಲು ತೊಡಗುವಿರಿ. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿ

ಸಂದೀಪ್ ಕಾಮತ್ said...

ಪ್ರೀತಿಯ ಬಾನಾಡಿ,

ನಿಮ್ಮ ಪ್ರೋತ್ಸಾಹ ಇದ್ರೆ ಖಂಡಿತ ಬರೆಯಬಲ್ಲೆ.

ಧನ್ಯವಾದಗಳು,
-ಸಂದೀಪ್ ಕಾಮತ್

ವಿ.ರಾ.ಹೆ. said...

nicely presented.

ಹಳೇ ಗೆಳತಿ ಏನಾದ್ಲಪ್ಪ? ಬಿಟ್ಟೇ ಬಿಟ್ಯಾ?

ಆದರೂ ಆ ಪತ್ರದಲ್ಲಿನ ’ಕಾಯುವಿಕೆಯ ಸುಖ’ ಈಗ ಸಿಗೋಲ್ಲ ಬಿಡು

ಸಂದೀಪ್ ಕಾಮತ್ said...

@vikas

ಗೊತ್ತಿಲ್ಲ ಕಣೊ !
ಮದುವೆ ಆಗಿ ಮಕ್ಕಳಿರಬೇಕು.
ನನ್ ಮದುವೆಗೆ ಕರೆಯೋದಕ್ಕೆ ಹೋಗೋಣ ಅಂತಾ ಇದ್ದೀನಿ ಮೈ ಆಟೋಗ್ರಾಫ್ ಸ್ಟೈಲ್ ನಲ್ಲಿ!

Anonymous said...

ಸಂದೀಪ್..ಯಾಕೋ ಈ ಪತ್ರ ಓದಿ ನೀವು ಆ ಗೆಳತಿಯನ್ನ ಮಿಸ್ ಮಾಡ್ಕೋಬಾರದಿತು ಅನ್ನಿಸುತ್ತೆ..:( ತುಂಬಾನೆ ಹಿಡಿಸ್ತು ಇದು..:( ದೇವರೇ ಆ ಹುಡುಗಿ ಮತ್ತೆ ಪತ್ರಬರೆಯುವ ಹಾಗೆ ಮಾಡು ಪ್ಲೀಸ್ ಪ್ಲೀಸ್ ಪ್ಲೀಸ್...

ನಿಮ್ಮ ಸೋಮು

ಸಂದೀಪ್ ಕಾಮತ್ said...

ಪತ್ರ ಬರೆಯೋಳೂ ಇಲ್ಲ ,mail ಮಾಡೋಳೂ ಇಲ್ಲ ಈಗ !
ಇರ್ಲಿ ಏನ್ ಮಾಡೋದು:)

Anonymous said...

Good one !

Anonymous said...

Sandeep
try. u might find her on the net.
ms