Tuesday, September 16, 2008
ಉದ್ಯೊಗಂ ಪುರುಷ ಲಕ್ಷಣಂ !
’ಪುರುಷರಿಗಾಗಿ ಮಾತ್ರ ’ ಅಂತ ಒಂದು ಪತ್ರಿಕೆ ಬರುತ್ತೆ ,ಟೈಟಲ್ ಕೆಳಗೆ ಪುರುಷರನ್ನು ಪ್ರೀತಿಸುವ ಮಹಿಳೆಯರೂ ಓದಬಹುದು ! ಅಂತ caption ಇದೆ .ಅದೇ ರೀತಿ ’ಉದ್ಯೋಗಂ ಪುರುಷ ಲಕ್ಷಣಂ ’ ಅನ್ನೋದು ಬರೀ ಟೈಟಲ್ಲು ! ಉದ್ಯೊಗದಲ್ಲಿರೋ ಮಹಿಳೆಯರೂ ಧಾರಾಳವಾಗಿ ಓದಬಹುದು ಇದನ್ನು !ರೆಡಿಮೇಡ್ ಆಗಿ ಸಿಗುತ್ತಲ್ವ ಇಂಥ ಟೈಟಲ್ ಅದಿಕ್ಕೆ ಉಪಯೋಗಿಸಿದ್ದೀನಿ ,ಮಹಿಳೆಯರು ಬೇಜಾರು ಮಾಡ್ಕೋಬಾರ್ದು .
ಅಂದ ಹಾಗೆ ವಿಷಯ ಅಷ್ಟೆನೂ ಗಂಭೀರ ಇಲ್ಲ ! ಯಾವುದೇ ಥರದ ವಾದಗಳನ್ನಿಲ್ಲಿ ಹುಟ್ಟು ಹಾಕ್ತಾ ಇಲ್ಲ ನಾನು . ಒಂದು ಚಿಕ್ಕ ಪ್ರಾಬ್ಲೆಮ್ಮು ಮಾರಾಯ್ರೆ .ಅದು ನಂದು ಮಾತ್ರ ಅಲ್ಲ ಬಹುತೇಕ ಜನರ ಪ್ರಾಬ್ಲೆಮ್ ಕೂಡಾ .
ವಿಷಯ ಏನಂದ್ರೆ , ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದಿರ್ತೀರ . ಹೇಗೋ ದೇವರ ದಯೆಯಿಂದ ಇಂಟೆಲ್ ಅಂಥ ಒಳ್ಳೆ (?) ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಇರೋ ಕೆಲಸಾನೂ ಸಿಕ್ಕಿ ಬಿಡುತ್ತೆ .ಇನ್ನೇನು ನಾನೇ ಕಿಂಗು ,ಕ್ವೀನ್ ಸಿಗೋದೊಂದೇ ಬಾಕಿ ಅಂತ ಖುಶಿಯಿಂದ ಬೀಗ್ತಿರ್ತೀರ. ಹಂಗೆ ಸೀರೆ ,ಸ್ವೀಟ್ಸು ಅಂತೆಲ್ಲ ಕಟ್ಟಿಕೊಂಡು ಊರಿಗೆ ಹೋಗಿ ಮನೆಯವರಿಗೆಲ್ಲ ಹಂಚ್ತೀರ .
ನಿಮ್ಮ ಗಲಾಟೆ ಕೇಳಿ ಪಕ್ಕದ ಮನೆಯವ್ರು ಬಂದು ’ಏನಪ್ಪ ಹೆಂಗಿದ್ದೀಯ?? ಕೆಲ್ಸ ಸಿಗ್ತಾ?? ಯಾವ ಕಂಪೆನಿ ? ’ ಅಂತ ಕೇಳ್ತಾರೆ.
ನೀವೂ ಖುಷಿಯಿಂದ ,’ಹೌದು ಸಿಗ್ತು ಇಂಟೆಲ್ ಅಂತ ಬೆಂಗ್ಳೂರಲ್ಲಿ ’ ಅಂತೀರ .ನಿಮ್ಮ ಪ್ರಕಾರ ಇಂಟೆಲ್ ಬಿಲಿಯನ್ ಡಾಲರ್ ಕಂಪೆನಿ .ನೆಕ್ಸ್ಟ್ ಪೆಂಟಿಯಮ್ ಪ್ರೊಸೆಸರ್ ನಾನೇ ಡಿಸೈನ್ ಮಾಡೊದು ಅನ್ನೊ ರೀತಿಯ ಉತ್ಸಾಹ !
ಅವರು ಅದಿಕ್ಕೆ ’ಇಂಟೆಲ್ ಆ??....... ಛೆ ಯಾಕಪ್ಪಾ ಇನ್ಫೋಸಿಸ್ ಟ್ರೈ ಮಾಡಿಲ್ವ ’....... ಅಂತಾರೆ.ಅದೂ ಸಾಲದು ಅನ್ನೋ ಹಾಗೆ ವಿಪ್ರೋ ಗೂ ಒಂದು ಅರ್ಜಿ ಹಾಕಿ ನೋಡು ಅಂತಾರೆ .
.
.
ಟುಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್
.
.
ಬಲೂನು ಹಂಗೇ ಒಡೆದು ನಿಧಾನಕ್ಕೆ ತೇಲಿಕೊಂಡು ಭೂಮಿಗೆ ಇಳೀತೀರ .. ಹೆಂಗಿತ್ತು ಆಕಾಶಯಾನ??
ಎಲ್ಲರಿಗೂ ಒಂದು ಆಸೆ ಇರುತ್ತೆ (ಅದಿಕ್ಕೆ ಹೇಳೊದು ಉಪ್ಪು,ಹುಳಿ,ಖಾರ ಸ್ವಲ್ಪ ಕಮ್ಮಿ ತಿನ್ನಿ ಅಂತ) ನಮ್ಮ ಪ್ರಗತಿ ಕಂಡು ಮನೆಯವ್ರು,ಊರವ್ರು ಹೆಮ್ಮೆ ಪಡಬೇಕು ,ಹೊಗಳ್ಬೇಕು ಅಂತ .ಆದ್ರೆ ಇಲ್ಲಿ ನೋಡಿದ್ರೆ ಎಲ್ಲ ಎಡವಟ್ಟು :(
ಹೀಗೆ ಸ್ವಲ್ಪ ದಿನ ಹಿಂದೆ ಊರಿಗೆ ಹೋಗಿದ್ದೆ .ಅಲ್ಲಿ ಪರಿಚಯಸ್ತರೊಬ್ರು ಸಿಕ್ಕಿದ್ರು ,ಅವರಿಗೆ ಚಕ್ಕುಲಿ,ಕೋಡುಬಳೆ ಮುಂತಾದ ಕುರ್ಕಲು ತಿಂಡಿ ಮಾರೋ ವ್ಯವಹಾರ.ಅವರೂ as usual ’ಓಹ್ ಸಂದೀಪ ಏನಪ್ಪ ಹೇಗಿದ್ದೀಯಾ ,ಎಲ್ಲಿ ಕೆಲಸ ’ ಅಂದ್ರು .
’ನಂದು Conexant ಅಂತ ಕಂಪೆನಿ ಹೆಸ್ರು ’ ಅಂದೆ .ಅವ್ರು’ಓಹ್ ಕನೆಕ್ಶನಾ ’ ಅಂದ್ರು .
’ಅಲ್ಲ ,ಕನೆಕ್ಶನ್ ಅಲ್ಲ Conexant ಅಮೆರಿಕಾದ ಕಂಪೆನಿ ’ ಅಂದೆ .
ಅವರು ಮತ್ತೆ ’ಗೊತ್ತಾಯ್ತು ಬಿಡು ಕನೆಕ್ಶನ್ನು’!!! ಅಂದ್ರು . ಇನ್ನೇನ್ ಮಾಡೋದು ’ಹೌದು’ ಅಂತ ಗೋಣಾಡಿಸಿದೆ .
’ಅದಿರ್ಲಿ ಏನು ಕೆಲಸ ಮಾಡ್ತೀರ ಅಲ್ಲಿ ’ ಸುಂಯ್ ಅಂತ ಬಂತು ಎರಡನೇ ಪ್ರಶ್ನೆ !!
ಸಾಫ್ಟ್ ವೇರ್ ಇಂಜಿನಿಯರ್ ಅಂತ ಹೇಳಿ ಎಸ್ಕೇಪ್ ಆಗೋಣ ಅಂತಿದ್ದೆ .ಆದ್ರೆ ಮನಸ್ಸು ಯಾಕೋ ಒಪ್ಪಲಿಲ್ಲ .ಯಾಕಂದ್ರೆ ನಂದು ಸಾಫ್ಟ್ವೇರ್ ಅಲ್ಲ ! ಹಾರ್ಡ್ ವೇರ್ ಕೆಲಸ!!
ಸಿಂಪಲ್ ಆಗಿ ಹೇಳೋಣ ಅಂತ ’ ಅದೂ ನಂದು ಕಂಪ್ಯೂಟರಲ್ಲಿ ಕೆಲಸ ’ ಅಂದೆ .
ಅದಿಕ್ಕೆ ಅವ್ರು ’ ಥೂ ನಿನ್ನ ಅದಕ್ಯಾಕೋ ಬೆಂಗಳೂರಿಗೆ ಹೋಗ್ಬೇಕು ?? ಇಲ್ಲೆ ಪಕ್ಕದೂರಿನಲ್ಲಿ ನಾಯಕ್ ರ ಮಗ ಏನೊ ಸೈಬರ್ ಅಂತ ಇಟ್ಟಿದ್ದಾನೆ . ಬೇಕಾದ್ರೆ ಕೇಳಿ ನೋಡ್ತೀನಿ ಕೆಲಸ ಇದೆಯಾ ’ ಅಂದ್ರು.
ಅವರ ಕಾಳಜಿ ನೋಡಿ ಏನೋ ಖುಷಿ ಆಯ್ತು . ಆದ್ರೆ ’ನಾನು ಏನು ’ ಅಂತ ಕಡೆಗೂ ಅವರಿಗೆ ಅರ್ಥ ಆಗಿಲ್ವಲ್ಲ ಅಂತ ಬೇಜಾರಾಯ್ತು.ಸಧ್ಯ ಬಚಾವಾದೆ ನಂದು ಸಾಫ್ಟ್ ವೇರಲ್ಲ ಹಾರ್ಡ್ ವೇರು ಅಂತ ಗೊತ್ತಾಗಿದ್ರೆ ನಟ್ಟು ,ಬೋಲ್ಟು ,ಅಂಗಡಿಯವ್ರೂ ಗೊತ್ತು ಅಂತಿದ್ರೇನೋ ಪಾಪ!
ಹಾಗೆ ಬೀಚು,ಅದೂ ಇದೂ ಅಂತ ಸುತ್ತಾಡಿ ಮನೆಗೆ ವಾಪಸ್ ಆಗ್ಬೇಕಾದ್ರೆ ಇನ್ನೊಬ್ರು ಪರಿಚಯದವ್ರು ಸಿಕ್ಕಿದ್ರು ! ಮತ್ತೆ ಇವರಿಂದ ಮುಖಭಂಗ ಆಗೋದು ಬೇಡ ಅಂತ ಎಸ್ಕೇಪ್ ಆಗೋಣ ಅನ್ನೊ ಅಷ್ಟರಲ್ಲಿ ಹಿಡಿದು ಬಿಟ್ರು .....
’ಸಂದೀಪ.................’
’ಬೆಂಗ್ಳೂರಲ್ವ ಈಗ ,ಹೇಗಿದ್ದೀಯ ’ಅಂದ್ರು .’ಚೆನ್ನಾಗಿದ್ದೀನಿ ಅಂಕಲ್ ಎಲ್ಲಾ ನಿಮ್ಮ ಆಶೀರ್ವಾದ ’ ಅಂದೆ.
ಅದಿಕ್ಕೆ ಅವ್ರು ’ನೀನು ಇಲೆಕ್ಟಾನಿಕ್ಸ್ ಡಿಪ್ಲೋಮಾ ಅಲ್ವಾ ಓದಿರೋದು ’ .ಸಕ್ಕತ್ ಖುಶಿ ಅಯ್ತು .
ನಾನು ಏನು ಓದಿದ್ದೀನಿ ಅಂತ ಇವ್ರಿಗೆ ಗೊತ್ತಿದ್ದ ಮೇಲೆ ಖಂಡಿತ ಇವ್ರಿಗೆ ’ನಾನು ಏನು’ ಅಂಥ ಅರ್ಥ ಆಗುತ್ತೆ ಅಂದುಕೊಂಡೆ.
’ಏನಿಲ್ಲ ಸಂದೀಪ ನಂದೊಂದು ಟಿ.ವಿ ರಿಪೇರಿ ಆಗ್ಬೇಕಿತ್ತು ,ಮಾಡ್ ಕೊಡೋಕಾಗುತ್ತಾ ?????’
ಮತ್ತೆ ಟುಸ್ಸ್ ಸ್ ಸ್ ಸ್ ಸ್ ಸ್..............
’ಸಾರಿ ಅಂಕಲ್ ನಂಗೆ ಬರಲ್ಲ ಅದೆಲ್ಲ ’ ಅಂದೆ . ಸಿಟ್ಟಾಗ್ಬಿಟ್ರು ಅಂಕಲ್ಲು !!!!
’ಇನ್ನ್ಯಾವ್ ಸೀಮೆ ಇಲೆಕ್ಟ್ರಾನಿಕ್ಸ್ ಕಲಿತೆ ಕಣಯ್ಯ ನೀನು ? ಒಂದು ಟಿವಿ ರಿಪೇರಿ ಬರಲ್ಲ ಅಂತೀಯ ’ ಶುರು ಹಚ್ಚಿಕೊಂಡ್ರು .
’ಅದು ಹಾಗಲ್ಲ ಅಂಕಲ್ ,ಬರುತ್ತೆ ಆದ್ರೆ ಅದಿಕ್ಕೆ ಮಲ್ಟಿಮೀಟರ್ ಅಂತ ಬೇಕು ,ಅದು ಬೆಂಗಳೂರಲ್ಲೇ ಬಿಟ್ಟು ಬಂದಿದ್ದೀನಿ .ನೆಕ್ಸ್ಟ್ ಟೈಮ್ ಬಂದಾಗ ಖಂಡಿತ ತರ್ತೀನಿ .ಸಾರಿ ’ ಅಂತ ಹಲ್ಲು ಕಿಸಿದೆ.
’ಹೋ ಹಾಗ ಮೊದಲೇ ಹೇಳೊದಲ್ವೇನೊ .ಇಂಥದ್ದೆಲ್ಲ ಬ್ಯಾಗ್ ನಲ್ಲೇ ಇಟ್ಕೊಂಡಿರ್ಬೇಕಯ್ಯ ’ ಅಂತ ಬುದ್ಧಿವಾದ ಬೇರೆ .
ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಡಿಗ್ರಿ -ಅಂತ ನನ್ನ ನಾನೇ ಬಯ್ ಕೋತಾ ಕಳಚಿಕೊಂಡೆ ಅಲ್ಲಿಂದ.
ನಂಗೇನಾದ್ರೂ ’ಆಪಲ್ ’ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದಿದ್ರೆ ಏನ್ ಗತಿ ಅಂತ ನೆನೆಸಿಕೊಂಡ್ರೇನೆ ಭಯ ಆಗುತ್ತೆ. Apple ಬಿಲಿಯನ್ ಡಾಲರ್ ಕಂಪೆನಿ .Apple iPod,iPhone ತುಂಬಾನೇ ಫೇಮಸ್ಸು !
ಆದ್ರೇ ಊರಿಗೆ ಹೋಗಿ ’apple' ನಲ್ಲಿ ಕೆಲಸ ಅಂದ್ರೆ ,’ಯಾಕೋ ಹಲಸಿನ ಹಣ್ಣು ,ಮಾವಿನ ಹಣ್ಣು ಅಂತ ಕಂಪೆನಿ ಇಲ್ವ ಅಲ್ಲಿ ’ ಅಂತ ಹೇಳಿಸ್ಕೋಬೇಕಾಗಿತ್ತು. ಅಷ್ಟರ ಮಟ್ಟಿಗೆ ಲಕ್ಕಿ ನಾನು !
ರೀ,ಇನ್ಫೋಸಿಸ್ ,ವಿಪ್ರೊ ,ಅಥವ TCS ಈ ಮೂರರಲ್ಲಿ ಕೆಲಸ ಇದ್ರೆ ಹೇಳ್ತೀರಾ ಪ್ಲೀಸ್ .....
Subscribe to:
Post Comments (Atom)
20 comments:
ಆ ಮೂರು ಇಲ್ಲಾಂದ್ರೆ ಯಾವುದಾದರೂ ಗೌರ್ಮೆಂಟ್ ಕೆಲಸ ನೆಡೆಯುತ್ತೆ . ಅಲ್ವಾ ಸಂದೀಪ? :)
ಊರಿನ ಜನ ಬೈಯೋದ್ರಲ್ಲಿ ತಪ್ಪೆನಿಲ್ಲ. ಇಲ್ಲಿ ಉನ್ನತ, ತಾಂತ್ರಿಕ, ವೃತ್ತಿಪರ ಇತ್ಯಾದಿ ಭಯಂಕರ ಹೆಸರುಗಳಿಂದ ಪಡೆಯೋ ಡಿಗ್ರಿಗಳಿಂದ ನಮ್ಮ ಸಮಾಜಕ್ಕೆ, ನಮ್ಮ ದೇಶಕ್ಕೆ, ನಮ್ಮ ಜನಗಳಿಗೆ ಸಹಾಯವಾಗುವುದಕ್ಕಿಂತ ವಿದೇಶಿ ಕೂಲಿ ಮಾಡುವುದೇ ಜಾಸ್ತಿ. ಅದಕ್ಕೇ ಅವರು ಉಪ್ಯೋಗ ಇಲ್ದಿರೋ ಓದು ಕಟ್ಕೊಂಡು ಏನು ಮಾಡ್ತೀರ ಅಂತ ಹೇಳ್ತಾರೆ. ಆದ್ರೆ ಎಂ.ಎನ್.ಸಿ ದುಡ್ಡಿನ ಮುಂದೆ ಎಲ್ಲವೂ ಟುಸ್ಸ್ ಸ್ಸ್ ಸ್ಸ್.. ಸೊ... ಸಾಫ್ಟ್ ವೇರು, ಹಾರ್ಡ್ ವೇರು, ಎಲೆಕ್ಟ್ರಾನಿಕ್ಕು ಮಣ್ಣು ಮಸಿ ಎಲ್ಲಾ ಮನೆಗೆ ಮಗ ಅಲ್ಲ ಸುಡುಗಾಡಿಗೆ ಹೆಣ ಅಲ್ಲ.!
(ಸಾಫ್ಟ್ ವೇರ್ ನಿಂದ ಆರ್ಥಿಕತೆ ಬೆಳೆದು ನಿಂತಿದೆ, ತೆರಿಗೆ ಕಟ್ತೀವಿ, ಜನಕ್ಕೆ ಅನುಕೂಲವಾಗಿರೋ ಸಾಫ್ಟ್ ವೇರ್ ಬರೆದುಕೊಡ್ತೀವಿ, ಉದಾ: ಬಸ್ ಟಿಕೆಟ್ಟು, ರೈಲ್ವೆ ಟಿಕೆಟ್ತು, ಇಂಟರ್ನೆಟ್ಟು ಅಂತ ಎಷ್ಜ್ಟೆ ಕೊಚ್ಕೊಂಡ್ರೂ ಅಲ್ಲಿ ೧:೮ ಲಾಭ ಪಡ್ಕೋತಾ ಇರೋದು ಅಮೆರಿಕ ಅನ್ನೋದು ಸತ್ಯ. )
ನಾನು ಇ೦ತಹುದೇ ಪೇಚಿಗೆ ಸಿಕ್ಕಿ ಬಿದ್ದಿದ್ದೆ
ಅವ್ರು ನಮ್ಮ ಹತ್ತಿರದ ಸ೦ಬ೦ಧಿ..
ನಾನು : 'ಸುರತ್ಕಲ್ krec ಸೀಟು ಸಿಕ್ತು..'
ಅವ್ರು : 'ಯಾಕೆ ..ಪುತ್ತೂರು..ವಿವೇಕಾನ೦ದದಲ್ಲಿ ಸೀಟು ಸಿಗ್ಲಿಲ್ಲ?. ದಿನಾ ಮನೆಗೆ ಹೋಗಿ ಬರ್ಬೋದಿತ್ತಲ್ಲಾ..'
ನಾನು : '???!!!'
@ ವಿಕಾಸ್ ,
ನಾನು ಇಲ್ಲಿ ಒಂದು ವಿಷಯಾನಾ ಬೇಕೂಂತ್ಲೇ ಪ್ರಸ್ತಾವಿಸಿಲ್ಲ :)
ಅದು ’ಸಂಬಳ ಎಷ್ಟು ಬರುತ್ತೆ?? ’ ಅನ್ನೋದು !
ಅದಕ್ಕೆ ಉತ್ತರ ಕೇಳಿದ್ ಮೇಲೆ ಯಾವ ಕಂಪೆನಿಯಾದ್ರೂ ಪರವಾಗಿಲ್ಲ ,ಯಾವ ಸುಡುಗಾಡ್ ಕೆಲಸ ಮಾಡಿದ್ರೂ ನೋ ಪ್ರಾಬ್ಲೆಮ್!
ನಾನು ಇಸ್ರೋದಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡ್ತಿದ್ದೆ -ನನಗೋ ಪ್ರಖ್ಯಾತ ವಿಜ್ಞಾನಿಗಳ ಜೊತೆ ಕೆಲಸ ಮಾಡ್ತಾ ಇದ್ದೀನಿ ,ನೆಕ್ಸ್ಟ್ ಇನ್ಸಾಟ್ ಸಿ ಉಪಗ್ರಹ ನಾನೇ ಉಡಾಯಿಸೋದು ಅನ್ನೋ ಥರ ಜಂಬ ಇತ್ತು .ಊರಿಗೆ ಹೋದ್ರೆ ,ಯಥಾ ಪ್ರಕಾರ ಜನ ಕೇಳ್ತಾ ಇದ್ರು ಸಂಬಳ ಎಷ್ಟು ಅಂತ .Rs1,400/-(stipend) ಅಂದ್ರೆ ’ಥೂ ಅಷ್ಟೆನಾ ,peonಗೆ ಕೂಡಾ ಜಾಸ್ತಿ ಬರುತ್ತಲ್ಲೋ ’ ಅನ್ನೊ ಕೊಂಕು ಮಾತು!
ನನ್ನ ಇನ್ಸಾಟ್ ಸಿ ಅಲ್ಲೇ u turn ತಗೊಂಡು ಟುಸ್ ಸ್ ಸ್ ಅಂತ ವಾಪಸ್ !!
@ Pramod ,
ಹೇಗಿತ್ತು ಟುಸ್ ಸ್ ಸ್ ಸ್ ಬಲೂನು ಯಾನ??
@ ವಿಕಾಸ್,
ಪಾಪ ಅಮೆರಿಕಾ ಅದ್ರೂ ಮಜಾ ಮಡ್ಲಿ ಬಿಡೊ !
ನಂ ಅಂಬಾನಿಗಳ ,ಮಲ್ಯರ ಹತ್ರ ಇದ್ರೂ ನಮ್ಮ ದೇಶಕ್ಕೆ ನಯಾಪೈಸೆ ಲಾಭ ಇಲ್ವಲ್ಲ?? ಅವ್ರು ಮಾತ್ರ ದುಬಾರಿ ಮನೆ ಕಟ್ಕೊಂಡು ಆರಾಮಾಗಿರ್ತಾರೆ.
ಹಣ ನಮಗಲ್ಲದೆ ಯಾರಿಗೆ ಹೋದ್ರೂ ಏನೂ ಉಪಯೋಗವಿಲ್ಲ:(
ಒಳ್ಳೆ ಕಾಮಿಡಿ... "ನಮ್ಮಮ್ಮ ಅಂದ್ರೆ ನಂಗಿಷ್ಟ" ದಲ್ಲಿರೋ ಒಂದು ಕಥೆ ನೆನಪಾಯಿತು... :-)
@ ಹರೀಶ,
ಅದು ವಸುಧೇಂದ್ರ ಅವರದ್ದಲ್ಲ .ನಾನೂ ಓದ್ಬೇಕು ಚೆನ್ನ್ನಾಗಿದೆ ಅಂತ ಕೇಳಿದ್ದೀನಿ . ಅವ್ರೂ ಸಾಫ್ಟ್ವೇರ್ ಇಂಜಿನಿಯರ್ ಅಲ್ವ?
ಹೌದು.. ಬ್ಲಾಗರ್ಸ್ ಮೀಟಿನಲ್ಲಿ ಅವರನ್ನು ನೋಡಿದ ನೆನಪು...
@Sandeep, The image and the writeup weren't related much but I enjoyed reading it. Very common experience. But I hear such complaints only from men. We women haven't faced such questions like why we are not at Infy, Wipro etc etc. Wonder why!.
@Vikas, whatever we may talk about America making big bucks, it's hard reality that without IT revolution many of us would have just stuggled for a living.
@ Radhika,
Very rarely i get everything right!
You don't have to answer such questions because.......
"Udyogam Purusha Laksanam !!" ;)
@ಸಂದೀಪ್, ನೀವು ಹೇಳಿದ ಉಕ್ತಿ ಈ ಕಾಲಕ್ಕೆ ಸರಿ ಹೊಂದಲ್ಲ ಬಿಡಿ!. ಈಗ ಸ್ತ್ರೀ ಪುರುಷರಿಬ್ಬರಿಗೂ ಉದ್ಯೋಗ ಭೂಷಣಕ್ಕಿಂತ ಅವಶ್ಯಕತೆ ಮತ್ತು ಅನಿವಾರ್ಯ !
Check this link in your spare time :)
http://thatskannada.oneindia.in/column/humor/2008/0731-inflation-radhika-mg.html
@ Radhika,
;) ಅಂದ್ರೆ ತಮಾಷೆಗೆ ಅಂತ ಅರ್ಥ ಅಲ್ವ?ನಾನು ಬರೆದಿರೋದೆಲ್ಲಾ ತಮಾಷೆಗೆ ಅದನ್ನು ಹಾಗೇ ತಗೋಂಡ್ರೆ ಚೆನ್ನಾಗಿರುತ್ತೆ ,ಇಲ್ಲಂದ್ರೆ ನಾಳೆ ವಿಪ್ರೋ ,ಇನ್ಫೋಸಿಸ್ ನವ್ರೂ ತಕರಾರು ತೆಗೀತಾರೆ :(
ನಿಮ್ಮ ಆರ್ಟಿಕಲ್ ನೋಡಿದೆ ಚೆನ್ನಾಗಿದೆ,ಸಂದೀಪ ಅನ್ನೋರು ಎಲ್ಲಾ ಕುಳ್ಳಗಿರ್ತಾರ:( ನಾನೂ ರಾಜ್ ಪಾಲ್ ಯಾದವ್ ಥರ ಇದೀನಿ :)
Rajpal Yadav yaarO gottilla!
@ Radhika,
ರಾಜ್ ಪಾಲ್ ಯಾದವ್ ಹಿಂದಿ ಹಾಸ್ಯ ನಟ .ಅವನ ’Main, Meri Patni Aur Woh’ ನೋಡಿ .
ನಂಗೂ ಗೊತ್ತಿಲ್ಲ :P
@ Vikas ,
ರಾಜ್ ಪಾಲ್ ಯಾದವ್ ಹಿಂದಿಯ ಸಾಧು ಕೋಕಿಲ .
ವಿಕ್ಕಿ ಸಾಧು ಕೋಕಿಲಾನೂ ಗೊತ್ತಿಲ್ಲ ಅಂದ್ರೆ ನಾನು ಸುಮ್ನಿರಲ್ಲ :x
ಯಾರಿಗ್ರಪ್ಪ ರಾಜ್ಪಾಲ್ ಯಾದವ್ ಗೊತ್ತಿಲ್ದೆ ಇರೋರು? ಕೈ ಮುಂದೆ ಮಾಡಿ!!
ಛೋಟಾ ಡಾನ್
Good write up.
sakkat humour ittu, neevu desha uddaara maado article bariyolla antha heLidri alva? so ee article adakke tumba fit aagatte bidi. TV repair and the multimeter :-) doctor tara yaavaglu ondu toolkit hidkond oDaadthaa iri!!
naanu engineering mugsi higher studies maadbeku antha entrace ge prepare aagthiddaaga ondu prashne keLthidru ella, Campus interview nalli select aaglilva?
Even after 10 years, when people get to know that I am working for a software firm, they ask.. Campus nalli aayta? !!.. so haagide effectu nodi.
One of our family friends is a s/w engg at Microsoft, Hyderabad. Maduve maadkoLLokke hudgi nodok hodaaga jana heLthaaranthe, Microsoft aa yaavdidu keLe illa..! and multinational company andre, eege bidi beedi gondu MNC anthaarante (small start up ge refer maadi)
@ ವೀಣಾ,
ಅದೆಲ್ಲ ಇರ್ಲಿ ವೀಣ ವಿಪ್ರೋನಲ್ಲಿ ಕೆಲಸ ಇದ್ರೆ ಹೇಳಿ ಮೊದ್ಲು ;)
@ ಹರೀಶ,
ಥ್ಯಾಂಕ್ಸ್ ಕಣೋ ನನ್ ಕೆಲಸ ಸುಲಭ ಮಾಡಿದ್ದಕ್ಕೆ!
Dear Sandeep
The Bitter-TRUTH coated with humor.Read 'nammadallada paatra'an essay from Vasudhendra's 'nammamma anndre nangishTa'.( wrt TV repair)
:-)
have yet to read ur latest. Srikanth wants to read it first.
:-)
malathi S
@ Malathi
I haven't read 'Nammamma andre ' yet :( .I will deffinetely buy and read it :)
Post a Comment