Tuesday, September 30, 2008

ಧರ್ಮ ಮತ್ತು ವಿಜ್ಞಾನ .



" ರಾಮಾಯಣ,ಮಹಾಭಾರತ,ಬೈಬಲ್,ಕುರಾನ್-ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts.
ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ "

ಹೀಗಂತ ಗೆಳತಿಯೊಬ್ಬರು ನನ್ನ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಬರೆದಿದ್ರು !ಬೈಬಲ್ ,ಕುರಾನ್ ಬಗ್ಗೆ ನಾನು ಓದಿಲ್ಲವಾದ್ದರಿಂದ ನನ್ಗೆ ಆ ಬಗ್ಗೆ ಮಾತಾಡೋದು ಕಷ್ಟ.ಆದ್ರೆ ರಾಮಾಯಣ ,ಮಹಾಭಾರತದ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಬೆರಗಿದೆ ,ಗೌರವವಿದೆ.

ಈ ಎರಡನ್ನೂ ನಾನು ಓದಿಲ್ಲ! ಬರೀ ನೋಡಿದ್ದಷ್ಟೆ(ಟಿ.ವಿ ಯಲ್ಲಿ ಮಾರಾಯ್ರೆ, ಹಸ್ತಿನಾವತಿ,ಅಯೋಧ್ಯೆಗೆ ಹೋಗಿಲ್ಲ ಇನ್ನೂ!)

ಮೇಲೆ ಹೇಳಿದ ಪ್ರಕಾರ ರಾಮಾಯಣ ,ಮಹಾಭಾರತಗಳು ’ಬರೀ’ literature texts ಗಳಾಗಿದ್ದಿದ್ರೆ ನಾನಂತೂ ತುಂಬಾ ಖುಶಿ ಪಡ್ತೀನಿ! ಒಂದು ವೇಳೆ ಇದೊಂದು ಸತ್ಯ ಕಥೆ ಆಗಿದ್ರೆ ಟುಸ್ಸ್ ಸ್ಸ್ ಸ್ಸ್ ಸ್ಸ್ ಸ್ಸ್ ಪಟಾಕಿ!!!!

ಯಾಕೆ ಅಂತೀರಾ?? ಸತ್ಯ ಕಥೆ ಬರೆಯೋದೇನ್ರಿ ದೊಡ್ದ ವಿಷಯ?? ಎಲ್ಲೋ ಏನೋ ಆಗಿರುತ್ತೆ ಅದನ್ನು ನಿಮಗೆ ’ಯಾರೋ ’ ಹೇಳಿರ್ತಾರೆ ನೀವು ಅದನ್ನು ಚಾಚೂ ತಪ್ಪದೆ ಬರ್ದಿರ್ತೀರ .ಅದರಲ್ಲೇನು greatness? ನಿಮಗೆ ಕೂಲಿ ಕೊಟ್ಟು,.ಅರ್ಧ ಟೀ (ಬೆಂಗಳೊರ್ರಿನಲ್ಲಾದ್ರೆ ಮಾತ್ರ!) ಕುಡಿಸಿ ಕಳಿಸೋದು.ಆಮೇಲೆ ಯಾವುದಾದ್ರೂ ಪಬ್ಲಿಷರ್ ಹಿಡ್ಕೊಂಡು ಪ್ರಕಟಿಸೋದು ಅದ್ರಲ್ಲೇನು ವಿಶೇಷ ಅಲ್ವಾ??

ಆದ್ರೆ ಸ್ವಲ್ಪ ಯೋಚಿಸಿ ನೋಡಿ -ಈ ರಾಮಾಯಣ ,ಮಹಾಭಾರತಗಳು ಕಟ್ಟುಕಥೆಗಳೇ ಆಗಿದ್ದಿದ್ರೆ..........????
ಎಷ್ಟು ಬುದ್ಧಿವಂತನಾಗಿದ್ದಿರಬಹುದು ಅದರ ಲೇಖಕ??ಕಥೆ ಬಿಡ್ರಿ ಆ ಕಥೆಗಳಲ್ಲಿ ಬರೋ ಸಾವಿರಾರು ಪಾತ್ರದ ಹೆಸರುಗಳನ್ನು ಯೋಚಿಸಲೇ ಎಷ್ಟು ತಲೆ ಓಡಿಸಿರ್ಬೇಕು ಆ ಲೇಖಕ?? ನನ್ನ ಜುಜುಬಿ ಬ್ಲಾಗ್ ಗೆ ಒಂದು ಹೆಸರಿಡಲು ಎಷ್ಟು ತಲೆ ಕೆರ್ಕೊಂಡ್ರೂ ಹೊಸ ಹೆಸರು ಹೊಳೀಲಿಲ್ಲ!
ನಮ್ಮ ಮಕ್ಕಳಿಗೆ ಹೆಸರಿಡ್ಬೇಕಾದ್ರೆ ಎಷ್ಟೇ ಒರಿಜಿನಲ್ ಇಡೊದಕ್ಕೆ try ಮಾಡಿದ್ರೂ ಅದು ಎಲ್ಲೊ use ಆಗಿರುತ್ತೆ!
ಇಂಥ ಒಂದು ಕಟ್ಟು ಕಥೆ ತಯಾರು ಮಾಡ್ಬೇಕಾದ್ರೆ ಆ ಲೇಖಕರು ಎಷ್ಟು ಒದ್ದಾಡಿರ್ಬೇಕು ಅಲ್ವ?? ಒಂದು ಕಡೆ ಬಂದ ಹೆಸರು ಇನ್ನೊಂದು ಕಡೆ ಇಲ್ಲ.ಕಥೆಯಲ್ಲಿ twistಗಳ ಮೇಲೆ twistಗಳು .ಕಾಮಿಡಿ ಇದೆ,ಸಸ್ಪೆನ್ಸ್ ಇದೆ ,horror ಇದೆ ,ಎಲ್ಲ ಇದೆ!!
ಆಮೇಲೆ ಈ ಮಹಾಭಾರತ,ರಾಮಾಯಣಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಅಂತ ಹೇಳೋಮಂದಿನೂ ಸಿಗ್ತಾರೆ !
ನಾವು ಯಾರ್ರಿ ವಿಜ್ಞಾನದ ಬಗ್ಗೆ ಮಾತಾಡೊದಕ್ಕೆ ಅಧಿಕಾರ ಉಳ್ಳವರು?? ಹೊಸದಾಗಿ ಕಂಡು ಹುಡುಕೋದು ಬಿಡಿ ಯಾವತ್ತೋ ನ್ಯೂಟನ್ ಕಂಡು ಹುಡುಕಿದ ನಿಯಮಗಳನ್ನೇ 5 marks ಗೆ ಆಗೋ ಅಷ್ಟು ಬರೆಯೋ ಯೋಗ್ಯತೆ ನಮಗಿಲ್ಲ(ನನ್ನಂಥ ಸಾಮನ್ಯ ಜನರಿಗೆ)!
ಈ ವಿಜ್ಞಾನಿಗಳೂ ಪಾಪ ಒಂದು ದಿನ ಭೂಮಿ ಚಪ್ಪಟೆ ಅಂತಾರೆ! ಮಾರನೇ ದಿನ ಭೂಮಿ ಗುಂಡಗಿದೆ ಅಂತಾರೆ.ನಾಳೆ ಭೂಮಿ ಚೌಕವಾಗಿದೆ ಅಂದ್ರೂ ಅನ್ನಬಹುದು!
ನಾನು ವಿಜ್ಞಾನಿಗಳನ್ನು ಅವಮಾನಿಸಲು ಈ ರೀತಿ ಬರೆದಿಲ್ಲ .ಅವರ ಬಗ್ಗೆ ಅಪಾರ ಗೌರವವಿದೆ ನನಗೆ. ಆದ್ರೆ ವಿಜ್ಞಾನದ ಸಿದ್ಧಾಂತಗಳೂ ಕಾಲ ಕಾಲಕ್ಕೆ ಬದಲಾಗೋದಂತೂ ನಿಜ.The ultimate truth ! ಅನ್ನೋ ಅಂಥದ್ದು ವಿಜ್ಞಾನದಲ್ಲೂ ಇಲ್ಲ,ಅಲ್ವ??
ಒಂದು ದಿನ ಮೊಟ್ಟೆ ಸಸ್ಯಾಹಾರಿ ಅಂತಾರೆ ,ಆಮೇಲೆ ಯಾವುದೋ ಲೇಖನದಲ್ಲಿ ಮಾಂಸಾಹಾರ ಅಂತಾರೆ.ಒಬ್ಬ ಕೊಪರ್ನಿಕಸ್ ಅಂದದ್ದೇ ಸರಿ ಅಂತಾನೆ,ಇನ್ನೊಬ್ಬ ಗೆಲಿಲಿಯೊ ಅಂದಿದ್ದೇ ಸರಿ ಅಂತಾನೆ.ಮತ್ತೊಬ್ಬ ಎಲ್ಲರದ್ದೂ ತಪ್ಪು ’ನಾನು ಹೇಳಿದ್ದೆ ಸರಿ ’ ಅಂತಾನೆ(ನನ್ ಥರ ಪಾರ್ಟಿ!).

ಈಗ ವೈಜ್ಞಾನಿಕ ದೃಷ್ಟಿಯಿಂದಲೇ ನೋಡೋಣ ರಾಮಾಯಣ ,ಮಹಾಭಾರತಗಳನ್ನು:-

ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿದ ಅಂತ ಮೇಷ್ಟ್ರು ಹೇಳ್ತಾ ಇದ್ರೆ ಕೊನೆ ಬೆಂಚಲ್ಲಿ ಕೂತು ಮಕ್ಕಳು ಮುಸಿ ಮುಸಿ ನಗ್ತಾರೆ! ಏನಪ್ಪ ಜೋಕ್ ಮಾಡ್ತಾರೆ ಮೇಷ್ಟ್ರು! ,ಆ ಕಾಲದಲ್ಲಿ ವಿಮಾನ ಇತ್ತಂತೆ ,ಅದೂ ಹಾರ್ತಾ ಇತ್ತಂತೆ!!
ಆದ್ರೆ ಮನಮೋಹನ್ ಸಿಂಗ್ ಕಿಂಗ್ ಫಿಶರ್ airlines ನಲ್ಲಿ ಇನ್ನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಬರ್ತಾರಂತೆ ಅಂದ್ರೆ ಹಾರ,ತುರಾಯಿ ತಗೊಂಡು ವಿಮಾನ ನಿಲ್ದಾಣಕ್ಕೆ ಧಾವಿಸ್ತಾರೆ ಜನ -ಆಗ ನಗಲ್ಲ!!!!!!

ಸಂಜಯ ಯುದ್ಧಭೂಮಿಯಲ್ಲಿ ಏನಾಗ್ತಾ ಇತ್ತು ಅಂತ ಇಲ್ಲೇ ಕುಳಿತು ಧೃತರಾಷ್ಟ್ರನಿಗೆ ವಿವರಿಸ್ತಾ ಇದ್ದ ಅಂತ lecturer ಹೇಳ್ತಾ ಇದ್ರೆ ಅಸಡ್ಡೆಯಿಂದ ಮುಂದಿನ ಬೆಂಚಿನಲ್ಲಿ ಕೂತ ಹುಡುಗಿಯ ಜಡೆ ಜೊತೆ ಆಟ ಆಡ್ತಾನೆ ಕಾಲೇಜ್ ಹುಡುಗ!
ಆದ್ರೆ ದೂರದಲ್ಲೆಲ್ಲೋ ಸೌತ್ ಆಫ್ರಿಕಾದಲ್ಲಿ ಅಗೋ ಮ್ಯಾಚ್ ಬಗ್ಗೆ ,ರವಿಶಾಸ್ರಿ ಇಲ್ಲೇ ದೆಹಲಿ ಸ್ಟೇಡಿಯಂ ನಲ್ಲಿ ಕೂತು ಕಮೆಂಟ್ರಿ ಕೊಡ್ತಾ ಇದ್ರೆ ಅದನ್ನು laysಗೆ ಸ್ವಲ್ಪ ಉಪ್ಪಿನಕಾಯಿ ಹಾಕಿ ತಿನ್ತಾ ಚಪ್ಪರಿಸಿ ಮ್ಯಾಚ್ ನೋಡ್ತಾನೆ ಅದೇ ಕಾಲೇಜಿನ ಪಡ್ದೆ ಹುಡುಗ!

ಇದು ವಿಜ್ಞಾನ - ಅದು ಅಜ್ಞಾನ !!!

ಋಷಿ ಮುನಿಗಳು ತಮ್ಮ ದಿವ್ಯ ಜ್ಞಾನದಿಂದ ದೂರದ್ಲ್ಲಿದ್ದ ಇನ್ನೊಬ್ಬರ ಬಳಿ ಸಂವಹನ ನಡೆಸ್ತಾ ಇದ್ರು ಅಂತ ಹೇಳಿದ್ರೆ ನಂಬೋಕೆ ಆಗಲ್ಲ ನಮಗೆ.
ಆದ್ರೆ ಇಲ್ಲಿಂದ U.K ನಲ್ಲಿರೋ ಮಗಳ ಹತ್ರ ಮೊಬೈಲ್ ನಲ್ಲಿ ಮಾತಾಡ್ತೀನಿ ಅಂದ್ರೆ ನಗಲ್ಲ ಬದಲಾಗಿ ’ಎಷ್ಟು ಬೀಳುತ್ತೆ ಮಿನಿಟಿಗೆ ’ ಅಂತ ಪ್ರಶ್ಶ್ನಿಸ್ತಾರೆ!!!!

ಘಟೋತ್ಕಚ ದೈತ್ಯ ದೇಹಿಯಾಗಿದ್ದ ಅಂದ್ರೆ ಖಂಡಿತ ನಂಬಲ್ಲ ! ಆದ್ರೆ ದ ಗ್ರೇಟ್ ಖಲಿ WWE ನಲ್ಲಿ ಪೈಟ್ ಮಾಡ್ತಾ ಇದ್ರೆ ’ಏನು ಕಟ್ಟು ಮಸ್ತಾದ ಜೀವ ಕಣ್ರಿ ’ ಅಂತೀವಿ! ಡೈನೋಸರ್ ಬಗ್ಗೆ ಬಂದ ’ಜುರಾಸಿಕ್ ಪಾರ್ಕ್ ’ ನೋಡಿ ಖುಷಿ ಪಡ್ತೀವಿ!

ಕುಂತಿ ಕೇವಲ ದೇವರ ಪ್ರಾರ್ಥನೆಯಿಂದ ಗರ್ಭವತಿ ಆದ್ಲು ಅಂದ್ರೆ ನಂಬಲ್ಲ!

’ಪಕ್ಕದ ಮನೆ ಆಂಟಿಯ ಗಂಡ ಸತ್ತು ಮೂರು ವರ್ಷ ಆಯ್ತು ,ಆದ್ರೆ ವೀರ್ಯಾಣು ಫ್ರಿಜ್ ನಲ್ಲಿ ಜೋಪಾನವಾಗಿಟ್ಟಿದ್ರಿಂದ In vitro fertilization ಮಾಡಿ ಈಗ ಗರ್ಭವತಿ ಆದ್ರು ಅಂದ್ರೆ -ವಾವ್ ಇದು ನೋಡ್ರಿ ವಿಜ್ಞಾನ ಅಂದ್ರೆ! ’ಅಂತ ಖುಷಿ ಪಡ್ತೀವಿ!

ಅರ್ಜುನ ಬಿಟ್ಟ ಬಾಣ ಟಾರ್ಗೆಟ್ ನ ಹುಡುಕಿಕೊಂಡು ಹೋಗಿ ದಾಳಿ ನಡೆಸುತ್ತೆ ಅಂದ್ರೆ ನಂಬಲ್ಲ!
ಆದ್ರೆ ಅಬ್ದುಲ್ ಕಲಾಂ ಡಿಸೈನ್ ಮಾಡಿದ ’guide missile' targetನ ಹುಡುಕಿಕೊಂಡು ಹೋಗಿ ದಾಳಿ ಮಾಡುತ್ತೆ ಅಂದ್ರೆ ’ಗ್ರೇಟ್ ಕಣ್ರಿ ಅಬ್ದುಲ್ ಕಲಾಂ’ .Brilliant scientist ಅಂತೀವಿ!!!!!

ಅಬ್ದುಲ್ ಕಲಾಂರದ್ದು ವೈಜ್ಞಾನಿಕ ಸತ್ಯ - ಅರ್ಜುನ ಮಾಡಿದ್ದು ’literature text '????

ಇಷ್ಟೊಂದು ಬೆರಗುಗಳನ್ನು ಕೂಡಿದ ರಾಮಾಯಣ ,ಮಹಾಭಾರತ ನಮಗೆ just literature texts!!

ಅದೇ ವರ್ಷಕ್ಕೊಂದು ಹೆಂಡತಿಯರನ್ನು ಬದಲಾಯಿಸುವ ಸಲ್ಮಾನ್ ರಶ್ದಿ ಬರೆದಿರೋ ’Midnight’s Children' ಸಾರ್ವಕಾಲಿಕ ಶ್ರೇಷ್ಠ ಬೂಕರ್ ಕೃತಿ!

ರಾಮಾಯಣ ,ಮಹಾಭಾರತಗಳು ಏನಾದ್ರೂ ನಿಜ ಕಥೆಗಳೇ ಆಗಿದ್ರೆ -’ಛೇ ,ಬೇಜಾರು.......’

ಇವುಗಳೇನಾದ್ರೂ ಕಾಲ್ಪನಿಕ ಕಥೆಗಳೇ ಆಗಿದ್ರೆ - ಪ್ರೀತಿಯ ರಾಮಾಯಣ ,ಮಹಾಭಾರತದ ಲೇಖಕರೇ ನೀವು ನಿಜಕ್ಕೊ ಗ್ರೇಟ್ !

33 comments:

ವಿ.ರಾ.ಹೆ. said...

ನಮ್ಮ ಮೆಂಟಾಲಿಟಿಯೇ ಹಾಗೆ, ಹಳೇದೆಲ್ಲಾ ಶಿಟ್ಟು. ಅದರಲ್ಲೂ ಅದಕ್ಕೆ ಧಾರ್ಮಿಕ ಟಚ್ ಇದ್ದರಂತೂ ಬುಲ್ಶಿಟ್ಟು !

ವಿಜ್ಞಾನ ವಿಸ್ತಾರವಾದಂತೆಲ್ಲಾ ಪುರಾಣದ ಅಂಚುಗಳನ್ನು ತಾಕುತ್ತದೆ ಎಂದು ಎಲ್ಲೋ ಓದಿದ ನೆನಪು. ಅವು ಕಾಲ್ಪನಿಕವಾಗಿದ್ದರೂ, ನಿಜವಾಗಿದ್ದರೂ ಬರೆದವರಂತೂ ಗ್ರೇಟೇ ಗ್ರೇಟು.

Pramod said...

ಕುರಾನ್,ಬೈಬಲ್ ಗಳು ಈ ವಿಜ್ಙಾನಿಗಳ 'Evolution Theory' ಅನ್ನ ಸಪ್ಪೋರ್ಟ್ ಮಾಡಲ್ಲ.
ಕುರಾನ್,ಬೈಬಲ್ ಗಳು ಈ ವಿಜ್ಙಾನಿಗಳ 'Evolution Theory' ಅನ್ನ ಸಪ್ಪೋರ್ಟ್ ಮಾಡಲ್ಲ.
ಆದ್ರೆ ನಮ್ಮ ವಿಷ್ಣುವಿನ ಹತ್ತು ಅವತಾರಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದರೆ ಮಾನವನ ಉಗಮ ಹೇಗೆ ಆಯಿತು ಎ೦ಬ ಈ 'Evolution Theory'ಗೆ ಇ೦ಬು ಕೊಡುತ್ತದೆ.ಮೊದಲು ಮತ್ಸ್ಯಾವತಾರ ಅ೦ದ್ರೆ ನೀರಿನಲ್ಲಿ ಜೀವಿಗಳು ಹುಟ್ಟಿ, ಕೂರ್ಮಾವತಾರವಾಗಿ ಅ೦ದ್ರೆ ಸ್ವಲ್ಪ ಭೂಮಿ ಹಾಗು ನೀರಿನಲ್ಲಿ ಬದುಕಲು ಸಾಧ್ಯಾವಾಗುವ೦ತಹ ಜೀವಿಗಳು ಉಧ್ಬವಿಸಿದವು.ನ೦ತರ ಬ೦ದ ವರಹಾವತಾರ ಅ೦ದ್ರೆ ಜೀವನ ಪರ್ಯ೦ತ ನೆಲದ ಮೇಲೆ ಬದುಕವ೦ತಹ, (ನೀರಿನಿ೦ದ ಹೊರಗೆ) ಜೀವಿ ಸೃಷ್ಟಿ ಆಯಿತು.ನ೦ತರ ಈ Evolution ಮು೦ದುವರೆದು ನರಸಿ೦ಹ, ಅರ್ಧ ಮನುಷ್ಯ- ಅರ್ಧ ಸಿ೦ಹ(ಸಸ್ತನಿ,ಮನುಷ್ಯನ ಕಡೆಗೆ), ವಾಮನ(ಮನುಷ್ಯನೇ,ಆದ್ರೆ ಪೂರ್ತಿ ಬೆಳವಣಿಗೆ ಇಲ್ಲದ ಕುಬ್ಜ ದೇಹಿ), ನ೦ತರ ಪರಶುರಾಮನ( ಮು೦ಗೋಪಿ ಮನುಷ್ಯ, ಅಷ್ಟೊ೦ದು ಬುಧ್ದಿ ಬೆಳೆಯದ) ಸೃಷ್ಟಿ ಆಯಿತು. ಏಳನೇ ಅವತಾರ ಶ್ರೀರಾಮ, ಒಬ್ಬ ಪರಿಪೂರ್ಣ ಮಾನವ.
ಇದಕ್ಕೇನ೦ತೀರಿ :)

ಸಂದೀಪ್ ಕಾಮತ್ said...

ನಾಳೆ ರಂಜಾನ್ ಹಬ್ಬ !ನನ್ನ ಬ್ಲಾಗ್ ವಿಸಿಟರ್ ಸಂಖ್ಯೆ ನಾಳೆಗೆ 786 ತಲುಪುತ್ತೆ .ಏನು ಕಾಕತಾಳೀಯ ಅಲ್ವ?
.
.
.
ಇವತ್ತೇ ಓದ್ಬೇಡ್ರಯ್ಯ ಎಲ್ಲ :(

hEmAsHrEe said...

ಸಂದೀಪ್ ಅವರೇ,
ನೀವು ಬರೆದದ್ದು ಅದ್ಭುತವಾಗಿದೆ.

- " ಆದ್ರೆ ಸ್ವಲ್ಪ ಯೋಚಿಸಿ ನೋಡಿ -ಈ ರಾಮಾಯಣ ,ಮಹಾಭಾರತಗಳು ಕಟ್ಟುಕಥೆಗಳೇ ಆಗಿದ್ದಿದ್ರೆ ...???
ಎಷ್ಟು ಬುದ್ಧಿವಂತನಾಗಿದ್ದಿರಬಹುದು ಅದರ ಲೇಖಕ??? -

... ನೀವು ಅಂದುಕೊಂಡ ಹಾಗೆ, ಬರವಣಿಗೆ , ಸಾಹಿತ್ಯ ಅಂದರೆ ಕೇವಲ imagination...,ಕಟ್ಟು ಕಥೆ ... ನಿಜದ ಅನುಭವ ಏನೂ ಬೇಡ ಅಂದ ಹಾಗೆ ಆಯ್ತಲ್ಲಾ. ??? ಅಂದ್ರೆ ಕುವೆಂಪು ಬರೆದದ್ದು , ಕಾರಂತರು ಬರೆದದ್ದು ... ಇರಲಿ ...

ಜಗತ್ತಿನ writers , poets ... ಎಲ್ಲರೂ ಬರೆಯುವುದು ತಮ್ಮ ಕಲ್ಪನೆಯಿಂದ ... ಮತ್ತು ತಾವು ದಕ್ಕಿಸಿಕೊಂಡ ಅನುಭೂತಿಯಿಂದ...

ಅನುಭವ... ಅಭಿವ್ಯಕ್ತಿಯಾದಾಗಲೇ ತಾನೆ ಆತ ಕಲಾವಿದ ... ಸಾಹಿತಿ ... ಬರಹಗಾರ ಅನಿಸುವುದು. ಇಲ್ಲವಾದರೆ ... ಎಲ್ಲರೂ ಕಲಾವಿದರೋ ... ಕವಿಗಳೋ ... ಸಾಹಿತಿಗಳೋ ಅಗುತ್ತಿದ್ದರಲ್ಲಾ???

... ಸಂದೀಪ್ ... ಕಲ್ಪನೆ ಇಲ್ಲದೆ ಇದ್ದರೆ ... ಯಾವನೂ ಕೂಡ ಒಂದು ಪುಟ್ಟ ಕಥೆಯನ್ನೂ ತನ್ನ ಮಗುವಿಗೆ ಹೇಳಲಾರ. ಜತೆಗೆ ತನ್ನ ಅನುಭವದ ಸಾರ , ಅಂಶ ಇಲ್ಲದೇ ಹೋದಲ್ಲಿ ... fantasy stories ಆಗುತ್ತವೆ. daily news ಹೇಗೆ ... ಸಾಹಿತ್ಯವಾಗುವುದಿಲ್ಲ ... ನೋಡಿ.

ರಾಮಾಯಣ , ಮಹಾಭಾರತ ನೀವು ಓದಿಲ್ಲ ಅಂದಿರಿ ... ನೀವು ನೋಡಿದ್ದು... ರಮಾನಂದ ಸಾಗರ ಮತ್ತು ಬಿ ಆರ್ ಚೋಪ್ರ ಅವರು ನಿಮಗೆ ತೋರಿಸಿದ ರಾಮಾಯಣ ... ಮಹಾಭಾರತ ... ಅಲ್ವಾ ????!!!! ...
ಕಥೆ ಒರಿಜಿನಲ್ಲೇ ... ಅದ್ರೆ ಈಗಲೂ ನೀವು ರಾಮ ಕೃಷ್ಣ ಅಂತ ಹೇಳೋವಾಗೆಲ್ಲಾ ಅರುಣ್ ಗೋವಿಲ್, ನಿತೀಷ್ ಭಾರಧ್ವಾಜರೇ ನೆನಪಾಗುತ್ತಾರಲ್ಲಾ ...
ಅದೇ ... ನೋಡಿ... ಕಾರಂತರು ಹೇಳಿದ್ದು ... ದೇವರು ನಮ್ಮ ಕಣ್ಣಿನ ವಿಸ್ತಾರವನ್ನು ದಾಟಲಾರ... ಕಲ್ಪನೆಯ ಪರಿಧಿಯನ್ನು ದಾಟಲಾರ ...

ಜಿ ವಿ ಅಯ್ಯರ್ ಅವರು ಭಗವದ್ಗೀತೆ ಸಿನಿಮಾ ಮಾಡಿದ್ರು ... ಅವರ ಕಲ್ಪನೆ ಅದ್ಭುತವಾಗಿತ್ತು ...
ಆದ್ರೆ ಅದು ಸಾಮಾನ್ಯ ಮನುಷ್ಯನಿಗೆ ಎಲ್ಲಿ ಅರ್ಥ ಆಗ್ಬೇಕು... ಅದ್ರಲ್ಲಿ ಇರೋ ಎಲ್ಲರೂ ಆದಿ ಮಾನವರು ... ಪಾಂಡವರಿಂದ ಹಿಡಿದು... ಕೃಷ್ಣನ ವರೆಗೆ...

ಮಹಾಭಾರತ ನಡೆದ ಕಾಲಘಟ್ಟವನ್ನು ನೋಡಿದ್ರೆ ... ಅಯ್ಯರ್ ಅವರ version ಸರಿ ಆನಿಸುತ್ತೆ.
ರಾಜ ಅಂದ್ರೆ ... ಇದೇ ರೀತಿ costume ಇರ್ಬೇಕು... ರಾಕ್ಷಸ ಅಂದ್ರೆ ಇದೇ ರೀತಿ ಇರ್ಬೇಕು ಅಂತೆಲ್ಲಾ ನಾವು ಕಲ್ಪಿಸಿಕೊಳ್ಳೋದು ಅಲ್ವಾ... ನಾವೇನು ನೋಡಿದ್ದೀವಾ... ರಾಮನನ್ನು ... ಅಥವಾ ... ರಾವಣನನ್ನು ... ವಾಲ್ಮೀಕಿ ... ವ್ಯಾಸರಿಂದ ತೊಡಗಿ... ಈಗಿನ ... ಸಾಹಿತಿಗಳ ವರೆಗೂ ... ಹಲವು ರೀತಿಯಲ್ಲಿ ಪಾತ್ರ ಚಿತ್ರಣಗಳನ್ನು ನಾವು ನೋಡುತ್ತಾ ಬಂದಿಲ್ಲವೇ.

ಖಂಡಿತವಾಗಿಯೂ ... ರಾಮಾಯಣ ... ಮಹಾಭಾರತ ... ನೂರಕ್ಕೆ ನೂರು ಸತ್ಯ ಘಟನೆಗಳೇ. ಬರೆದು ಇಟ್ಟ ಪುಸ್ತಕ ಅಲ್ಲವಲ್ಲಾ ... ಸಾವಿರಾರು ವರ್ಷಗಳಲ್ಲಿ ಎಷ್ಟೊಂದು ಪರಿವರ್ತನೆ ಆಗಿರಲಿಕ್ಕಿಲ್ಲ. ಜನರ ಬಾಯಲ್ಲಿ ನಲಿದಾಡಿ ... ಎಷ್ಟೊಂದು ಜನರ ಕಲ್ಪನೆಗಳು ... ಅನುಭವಗಳು ಸೇರಿ ... ಎಷ್ಟು ಅದ್ಭುತವಾದ ಮಹಾಕಾವ್ಯ ಆಗಿವೆ ನೋಡಿ.
ವಾಲ್ಮೀಕಿ ... ವ್ಯಾಸ ... ಏನಾದ್ರೂ ಪುಸ್ತಕ ಬರೆದು ಇಟ್ಟಿದ್ದರೆ... ಇದು ಸಾಧ್ಯವಾಗುತ್ತಿತ್ತಾ !!!???

ವಿಷಯ ಅದಲ್ಲ ...
ವಿಜ್ಞಾನ ಆ ಕಾಲದಲ್ಲೂ ಇತ್ತು ಸಂದೀಪ್ ಅವರೆ. ಅದು ಆ ಕಾಲಕ್ಕೆ ಜನರು ಅಂದುಕೊಂಡ ವಿಜ್ಞಾನ ...

- " ವಿಜ್ಞಾನದ ಸಿದ್ಧಾಂತಗಳೂ ಕಾಲ ಕಾಲಕ್ಕೆ ಬದಲಾಗೋದಂತೂ ನಿಜ.The ultimate truth ! ಅನ್ನೋ ಅಂಥದ್ದು ವಿಜ್ಞಾನದಲ್ಲೂ ಇಲ್ಲ,ಅಲ್ವ?? _

ಖಂಡಿತ... ಇಲ್ಲಾ ಅಂದ್ರೆ.. ನಾವು ಇನ್ನೂ ಸೂರ್ಯ ... ಭೂಮಿಯನ್ನು ಸುತ್ತುತ್ತಾನೆ ಅಂತಲೇ ಅಂದುಕೊಂಡಿರಬೇಕಿತ್ತು ... ಅಲ್ವಾ ???!!!

- " ಈಗ ವೈಜ್ಞಾನಿಕ ದೃಷ್ಟಿಯಿಂದಲೇ ನೋಡೋಣ ರಾಮಾಯಣ ,ಮಹಾಭಾರತಗಳನ್ನು:- " -

ಇದನ್ನು ನೀವು ವೈಜ್ಞಾನಿಕ ದೃಷ್ಟಿಯಿಂದ ನೋಡಿದ್ದು ಅನ್ನುವುದಕ್ಕಿಂತಲೂ ... ಘಟನೆಗಳ ಸಾಮ್ಯತೆ ಮತ್ತು ಭಿನ್ನತೆಗಳನ್ನು ಹೇಳುತ್ತಿದ್ದೀರಿ ಅಷ್ಟೆ. ...

- " ಆದ್ರೆ ಮನಮೋಹನ್ ಸಿಂಗ್ ಕಿಂಗ್ ಫಿಶರ್ airlines ನಲ್ಲಿ ಇನ್ನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಬರ್ತಾರಂತೆ ಅಂದ್ರೆ ಹಾರ,ತುರಾಯಿ ತಗೊಂಡು ವಿಮಾನ ನಿಲ್ದಾಣಕ್ಕೆ ಧಾವಿಸ್ತಾರೆ ಜನ -ಆಗ ನಗಲ್ಲ!!!!!! " -

ಇದು ಈ ಕಾಲದ ಸತ್ಯ ಅಲ್ವಾ ಸಂದೀಪ್ ?
.... ನನ್ನ ಅಜ್ಜನ ಅಜ್ಜ ... ಯಾಕೆ ... ಯಾವುದೋ ಹಳ್ಳಿ ಮೂಲೆಯಲ್ಲಿ ಇದ್ದ ನನ್ನ ಅಜ್ಜನೇ ವಿಮಾನ ನೋಡಿಲ್ಲ ... ಅವರು ನಂಬ್ತಾರಾ...???
ಆಗ ಅವರ ನೆರವಿಗೆ ಬರೋದು ... ರಾಮಾಯಣದ ಪುಷ್ಪಕ ವಿಮಾನ ... ಅವರ ಕಲ್ಪನೆಯಲ್ಲಿರೋ ಅವರು ಕೇಳಿರುವ ... ಅವರು imagine ಮಾಡಿರೋ ಪುಷ್ಪಕ ವಿಮಾನವೇ ಹೊರತು ... ರಮಾನಂದ ಸಾಗರ ತೋರಿಸಿರೋ ವಿಮಾನವೂ ಅಲ್ಲ ...ನಾವು ಈಗ ನೋಡ್ತಾ ಇರೋ ಬೋಯಿಂಗ್ ವಿಮಾನವೂ ಅಲ್ಲ ...

ಖಂಡಿತವಾಗಿಯೂ ಕುಂತಿ... ದೇವರ ಪ್ರಾರ್ಥನೆಯಿಂದಂತೂ ಮಗು ಪಡೆಯಲು ಸಾಧ್ಯವೇ ಇಲ್ಲ ಅಲ್ವಾ !!!
they really have had some similar fertilization system ... ಇಲ್ಲಾ ಅಂದ್ರೆ ಗಾಂಧಾರಿ ನೂರು ಮಕ್ಕಳನ್ನು ಹೇಗೆ ಹಡೆಯಲು ಸಾಧ್ಯವಾಯ್ತು ???
ಇದನ್ನು ನಂಬಿದ್ರೂ okay ... ಆದ್ರೆ ಸೂರ್ಯದೇವ ವರ ಕೊಟ್ಟಾ... ಆಕೆ ಮಗು ಹಡೆದ್ಲು ... !!! ನಿಜಾನಾ ಅದು. ಅದು ಕಲ್ಪನೆಯಷ್ಟೆ ...
ಆದ್ರೆ ಅದರಲ್ಲಿನ ಸತ್ಯ ... ಆಕೆ ಆಮೇಲೆ ಪಾಂಡವರನ್ನೂ ಹಡೆದಳು ಅನ್ನೋದು ... ಅದಕ್ಯಾಕೆ ದೇವರು ಕೊಟ್ಟ ವರ ಅನ್ನೋ mask ...

ರಾಮಾಯಣ, ಮಹಾಭಾರತ are really great works of genious people. ಅವಕ್ಕೆ ಗೌರವ ನೀಡೊಣ. ಅಷ್ಟು ಮಾತ್ರಕ್ಕೆ ... ಅವುಗಳಿಗೆ ದೈವೀ ಸ್ಥಾನ ನೀಡಿ ಅವು ಹೇಳೋದೆಲ್ಲಾ ಸತ್ಯ ಅಂತ ನಂಬೋದಕ್ಕೆ ಆಗುತ್ತಾ ???

ನೀವು ಓದಿಲ್ಲ ಅಂದ್ರಲ್ಲ.. ಓದಿ ...
ಜೀವನ ಪಾಠ ಹೇಳಿಕೊಡುತ್ತವೆ ಅವು. ಆ ಕಾಲಕ್ಕೆಯೇ ಮನುಷ್ಯನ ರಾಗ ದ್ವೇಷಗಳನ್ನು ಬಯಲು ಮಾಡುತ್ತವೆ ಅವು.

ಇನ್ನು ಬೈಬಲ್, ಕುರಾನ್ ಕಥೆಯೂ ಇಷ್ಟೆ.
ಯೇಸು, ಪ್ರವಾದಿ ಮೊಹಮ್ಮದ್ ಕೂಡ ಪವಾಡ ನಡೆಸಿಯೇ ... ದೈವತ್ವಕ್ಕೆ ಏರಿದ್ದು. ( ಜನರು ಏರಿಸಿದ್ದು !!! )
ಕೃಷ್ಣ , ರಾಮ ಇನ್ನೂ ಹಲವು ದೇವ ದೇವಿಯರ ಹಾಗೆ.

ನಮ್ಮಲ್ಲೂ ಈ ಕಾಲಕ್ಕೂ ಇದ್ದಾರಲ್ಲಾ ...
ಸಾಯಿಬಾಬಾ, ಅದ್ಯಾರೋ ಅಮ್ಮ ...
ಪಾಪ ... ಈ ಕಾಲಕ್ಕೆ ಅವರ ದೈವೀಕ್ರಿಯೆಗಳಿಗೆ ಸವಾಲು ಹಾಕೋರು ಇದ್ದಾರೆ. ಇಲ್ಲಾ ಅಂದ್ರೆ... ದೇವರು ಆಗೋದಕ್ಕೆ ಹೆಚ್ಚು ಪ್ರಯತ್ನ ಮಾಡ್ಬೇಕಾಗಿಲ್ಲ.!!!

ಯಾವುದು ಸತ್ಯಕ್ಕೆ ಹತ್ತಿರವಾದದ್ದು ... ಮತ್ತು ಯಾವುದು ಕಲ್ಪನೆಯಿಂದ ಸೃಷ್ಟಿಯಾದದ್ದು ಅನ್ನೋದನ್ನು ತಿಳಿದುಕೊಳ್ಳೋದು ಅಗತ್ಯ ಅಲ್ವಾ.
ಇಲ್ಲಾ ಅಂದ್ರೆ... ಧರ್ಮ ಬೋಧಿಸುವ ಮಂದಿಯೇ ... ಅನುಕೂಲ ಶಾಸ್ತ್ರ ಬರೆಯುತ್ತಾರೆ.

religious leaders certainly do have a social responsibility. ಅಲ್ವಾ. ??? ಯಾಕಂದ್ರೆ ಜನರು ಅವರನ್ನು ನಂಬುತ್ತಾರೆ. ಸಹಜವೇ. ತಪ್ಪು ಅಂತ ಹೇಳ್ತಾ ಇಲ್ಲ.
ಆದ್ರೆ, ಅದು ಬಿಟ್ಟು, ಧರ್ಮ ಗುರುಗಳು (of all the religions ) ... ಯಾರೋ ಬಿಡಿಸಿದ ಚಿತ್ರಕ್ಕೆ ಫತ್ವಾ ನೀಡೋದ್ರಲ್ಲಿ ... ಇನ್ನ್ಯಾರಿಗೋ sainthood ನೀಡೋದಾ ಬೇಡ್ವಾ ಅನ್ನೋ ವಾದದಲ್ಲಿ ... ತಮಗೆ ಪೀಠ ಸಿಗ್ಲಿಲ್ಲ ಅಂತ ಜಗಳ ಮಾಡೋದ್ರಲ್ಲೇ ಮುಳುಗಿರೋವಾಗ ... ಪಾಪ ... ಜನರು ಕತ್ತಿ, ಲಾಠಿ , ಬಾಂಬ್ ಹಿಡಿಯದೆ ಮತ್ತೇನು ಮಾಡ್ತಾರೆ.
ಅವರಿಗೆ ಸರಿ ದಾರಿ ಯಾರಾದ್ರೂ ತೋರಿಸಬೇಕಲ್ವಾ ???

ಅಲ್ಲಾ ಸಂದೀಪ್, ಭೈರಪ್ಪ ಅವ್ರು ಬರೆಯೋ ಮಂದ್ರ, ಅನಂತಮೂರ್ತಿಯವರ ಭವ ... ಸಂಸ್ಕಾರ ನಮ್ಗೆ ಒಳ್ಳೆಯ ಕೃತಿಯಾಗೋದಾದ್ರೆ ... ರಶ್ದೀ ಬರೆದದ್ದು ಯಾಕೆ ಸಮ್ಮತ ಆಗೊಲ್ಲಾ.???

ಸರಿ ಇರ್ಲಿ ... ನಾನು ಹೇಳಿದ್ದನ್ನು ಇಟ್ಟುಕೊಂಡು ಲೇಖನ ಬರೆದ್ರಲ್ಲಾ. ಅದಕ್ಕೆ. thanks ನಿಮ್ಗೆ .
ಹೀಗೇ ಬರೀತಾ ಇರಿ.

Anonymous said...

Hema, gaaLi jote guddaaDi Enoo prayOjna illa. sumne neevE sari anta opkonDu biDi. aaga Sandeep sumnaagtaare. ildE idre sumne avrdE aada vitanDa vaada manDistaa irtaare. adke avkaasha kODOde nimmantavara comments! blog OdOvru, baryOvru, comment maaDOvru yaaroo avaravara abhipraaya badlaaysikoLLOlla. sumne kaala haraNa. ashTe.

hEmAsHrEe said...

ಅಭಿಪ್ರಾಯ ಬದಲಿಸಿ ಅಂತ ಯಾರೂ ಕಮೆಂಟ್ ಮಾಡೋದಿಲ್ಲ ಅನ್ಸುತ್ತೆ.

ಒಟ್ಟಾರೆ ವಾದ-ವಿವಾದಕ್ಕೆ, ಮಾತುಕತೆ-ಚರ್ಚೆಗೆ ಇದು ಒಂದು platform ಅಷ್ಟೆ.

ಯಾರೂ ಸಹ ಇನ್ನೊಬ್ಬರ ಮಾತು ಕೇಳಿ ತಮ್ಮ ವಿಚಾರ ಬದಲಾಯಿಸೋವಷ್ಟು ಮೂರ್ಖರೇನಲ್ಲ.

ಅದು ಏನಿದ್ದರೂ ತಲೆಯಲ್ಲಿ ಸೆಗಣಿ ತುಂಬ್ಕೊಂಡು , ಮಾಡೋಕ್ಕೆ ಏನೂ ಕೆಲ್ಸ ಇಲ್ದೆ ... ಯಾರೋ ಹೇಳಿದ್ರು ಅಂತ ಕಲ್ಲು, ಕತ್ತಿ, ಬಾಂಬ್ ಸಂಸ್ಕೃತಿಯನ್ನು ಬೆಳೆಸುವವರಿಗೇ ಸರಿ ...

ಸಂದೀಪ್ ಕಾಮತ್ said...

ಹೇಮಾ,
ನನ್ನ ಲೇಖನಕ್ಕಿಂತ ನಿಮ್ಮ ಕಮೆಂಟೇ ಉದ್ದಕ್ಕಿದೆಯಲ್ರೀ!!!
ಇರ್ಲಿ ಪರ್ವಾಗಿಲ್ಲ ನಿಮ್ಮ ಆಶಯ ಒಳ್ಳೆಯದೇ ಅಲ್ವ ಎಷ್ಟು ಬೇಕಾದ್ರೂ ಬರೆಯಿರಿ :)
anonymous ಅವ್ರು ಹೆಸರು ಹಾಕಿ ಬರೆದಿದ್ರೆ ಚೆನ್ನಾಗಿರ್ತಿತ್ತು.

Anonymous said...

Pramod and Sandeep,

That there are ideas in our ancient texts that resemble modern innovations merely suggests that these texts can be classified as science fiction. Since there is no evidence for the existence of pushpaka vimana or in vitro fertilization (as well as all other examples cited), since they were very likely simply an imagination of people who liked to tell stories, they cannot be accepted as scientific facts or theories.

It is unscientific to claim that the Dashavatara supports evolution theory. In the matsyavatara story, all forms of animals and plants including humans already existed and life was created again after a pralaya by saving one animal or seed of each kind. This is very similar to 'creationism', there is nothing here that supports the evolution theory if each kind of animal was saved and then all of them were allowed to procreate and to grow all at the same time.

You could stretch imagination and suggest that the authors of these stories suspected that evolution had occurred on earth, as suggested by the various avataras. However, without supportive evidence (I am not aware of any ancient text that has elaborated evidence to support evolution theory in any degree of detail), it can at the most be a hypothesis but certainly not a theory.

I don’t think anyone disputes the strength of imagination in our ancient texts, they might even be loosely based on true incidents but to impose science on them is a stretch and simply unacceptable. Imagination is a prerequisite for scientific innovation but scientific theories cannot be proved or supported merely by imagination. The proposal of a scientific theory is preceded by observation, proposal of a hypothesis, test of the hypothesis to collect experimental evidence, verification and then a theory!

Sandeep, even though you mention that you have respect for scientists, by comparing the modern innovations to imagination in ancient texts (as amazing as it is) you are belittling the efforts the people that have gone into materializing what used to be thought of as science fiction.

One thing is still not clear to me, do you think Ramayana and Mahabharatha happened as actually described or do you think they are based on imagination?

-Vanitha

ಸಂದೀಪ್ ಕಾಮತ್ said...

@ Vanitha,
If you think that i had insulted scientist please forgive me,i know everything we use in this world is a gift of science.
Asking evidence for each and everything is not justified .And also it doesn't mean that evidence is NOT there just because we are NOT able to find that.
And asking evidence for things that are said to be happened 5000 years ago seems funny to me.

Abdul Kalam is a great scientist ,but he believes in GOD. WHY?
Being a scientist why he doesn't ask the evidence for god?
Few things in life doesn't ask for evidence ,only belief will work .Nobody in India ask his father to produce a DNA test report to prove that he is his real biological father.
In science also nobody verifies things individually.You don't sit and verify Einstein's theory of relativity .You just believe Einstein or the person/committee which has certified that.

You have faith in Einstein but not in our ancestors!

My intention was just to tell HINDUS that DON'T question our religion.If we ourselves don't respect and question it's genuineness how can we expect others to respect our religion?

Anonymous said...

Sandeep,

>>Asking evidence for each and everything is not justified .And also it doesn't mean that evidence is NOT there just because we are NOT able to find that.
And asking evidence for things that are said to be happened 5000 years ago seems funny to me.>>

Asking for evidence is justified in science.
If you want to claim that Pushpakavimana existed 5000 years ago, then you will have to provide evidence. Why do you think people believe life forms such as dinosaurs existed in the past? One of the reasons is the fossilized dinosaur skeletons that have been found. Not only that these fossils were dated back to the time when dinosaurs were supposed to have existed, which is several million years ago!! Now tell me, do you still think asking for evidence for what happened 5000 years ago is funny?

>>Few things in life doesn't ask for evidence ,only belief will work .>>

You are right, the two aspects for which asking for evidence does not usually work but only belief works are religion and God. If you want to believe in religion, you are very welcome to, but please don’t make claim that mythological stories are scientific facts.

>>Abdul Kalam is a great scientist ,but he believes in GOD. WHY? Being a scientist why he doesn't ask the evidence for god?>>

If a person wants to ask evidence for the existence of God, does not find it and therefore chooses to be an atheist, then that is that person’s choice. If Dr. Kalam wants to believe in God, then that is his choice. However, despite his belief in God, I seriously suspect if Dr. Kalam also believes that pushpakavimanas flew around the Indian subcontinent 5000 years ago.

>>Nobody in India ask his father to produce a DNA test report to prove that he is his real biological father.>>

You need to stop making blanket statements like this one. I will not say anymore about this because it is irrelevant to the topic of discussion.

>>In science also nobody verifies things individually. You don't sit and verify Einstein's theory of relativity .You just believe Einstein or the person/committee which has certified that.>>

If I want to verify ANY theory in science, I can do so because I can find documentation for all theories. All the questions asked in science and the experimental evidence for each question is systematically documented and published for anyone to read and to dispute if the reader finds a discrepancy. Not only that most theories are verified by independent groups around the world. We don’t believe in Mendelian inheritance just because Mendel stated it. We believe in it because he showed ample evidence for his inheritance theory.

>>You have faith in Einstein but not in our ancestors!>>

It is incorrect to say that I have faith in Einstein. My faith is in science, not necessarily in individuals. As for my ancestors, I am very proud of my heritage. There are several contributions to astronomy and mathematics made by scholars of ancient India. I have respect for what my ancestors have achieved. But I have a serious problem with the kind of unreasonable claims that you have made, with regard to the scientific capabilities of our ancestors.

>>My intention was just to tell HINDUS that DON'T question our religion.If we ourselves don't respect and question it's genuineness how can we expect others to respect our religion?>>

You say that have not read Ramayana and Mahabharatha, you have certainly not done any kind of systematic study in Hindu religion. You don’t seem to understand the difference between imagination and fact or the difference between science and religion. And yet, you don’t stop yourself from telling people NOT to question their religion! What is worse, you are trying to pass mythology as science!!

You have to come up with better and stronger arguments if you want to make anyone respect your religion. In any case, please don’t forget that to believe or not to believe in religion is an individual’s choice.

Anonymous said...

Sandeep,

I am sorry, I forgot to sign my name while responding to your comment!!

-Vanitha

ಸಂದೀಪ್ ಕಾಮತ್ said...

ವನಿತಾರವರೇ,
ಮಾದೇಶ ಚಿತ್ರದ ಗೊವರ್ಧನಮೂರ್ತಿ ಕೊಲೆ ಮಾಡಿ ಕೊಚ್ಚಿಗೆ ಓಡಿ ಹೋಗಿದ್ರು ,ಈಗ ಸಿಕ್ಕಿ ಬಿದ್ದಿದ್ದಾರೆ.ಆದ್ರೆ ಪಾಪ ಅವರೇ ಕೊಲೆ ಮಾಡಿದ್ದು ಅಂತ ನಿರೂಪಿಸಲು ಕೊಲೆಗೆ ಉಪಯೋಗಿಸಿದ ರಿವಾಲ್ವರ್ ನ ಪೋಲಿಸರು ಹುಡುಕಬೇಕಂತೆ ಪಾಪ.
ಯಾಕಂದ್ರೆ ಅದೇ ಪ್ರಮುಖ ’ಸಾಕ್ಷಿ ’!

This is the most funny thing of evidence!

ಈಗ ಆ ರಿವಾಲ್ವರ್ ಸಿಕ್ಕಿಲ್ಲ ಅಂದ್ರೆ ಅದರ ಅರ್ಥ ಅವರು ಕೊಲೆ ಮಾಡಿಲ್ಲ ಅಂತಾ ನಾ? ನೀವನ್ನಬಹುದು ಆ ರಿವಾಲ್ವರ್ ಅನ್ನೋದು ಇದ್ದಿದ್ದೇ ಆದ್ರೆ ಅದು ಸಿಕ್ಕೇ ಸಿಗುತ್ತೆ ಅಂತ.ಹಾಗಾದ್ರೆ ಬೈ ಚಾನ್ಸ್ ಅದು ಸಿಕ್ಕಿಲ್ಲ ಅಂದ್ರೆ ಕೊಲೆ ಅವನು ಮಾಡಿದ್ದು ಅಲ್ಲ ಅಂತಾ ನಾ?

ಇದಕ್ಕೆ ಹೇಳಿದ್ದು ನಾನು ಸಾಕ್ಷಿ ನಿಮ್ಮ ’ಕೈ ಗೆ’ ಸಿಕ್ಕಿಲ್ಲ ಅಂದ ಮಾತ್ರಕ್ಕೆ ಅದು ಇಲ್ಲವೇ ಇಲ್ಲ ಅನ್ನೋದು ಸರಿ ಅಲ್ಲ.
ಗೋವರ್ಧನ ಮೂರ್ತಿಯ ರಿವಾಲ್ವರ್ ನ ಪೋಲಿಸರು ಅವನಿಗೆ ಎರಡು ತದಕಿ ಎಲ್ಲಿದೆ ಅಂತ ತಿಳ್ಕೊಂಡು ವಶಪಡಿಸಿಕೊಳ್ಳಬಹುದು ಆದ್ರೆ ಸಾವಿರಾರು ವರ್ಷಗಳ ಹಿಂದೆ ಹಾರಾಡ್ತಿತ್ತು ಅನ್ನಲಾದ ಪುಶ್ಪಕವಿಮಾನದ ಸಾಕ್ಷ್ಯ ತಗೊಂಡು ಬಾ ಅಂತ ನನಗೆ ಹೇಳಿದ್ರೆ ನಾನೆಲ್ಲಿ ಹೋಗೋದು ಮಾರಾಯ್ರೆ?
ಡೈನೋಸಾರ್ ಗಳಿದ್ದುದ್ದಕ್ಕೆ ಸಾಕ್ಷಿ ಸಿಕ್ಕಿದ್ದು ಭೂಮಿ ಅಗೆದಾಗ ,ಹಾಗೇನಾದ್ರೂ ಅಗೆದಾಗ ಸಿಕ್ಕಿಲ್ಲವಾಗಿದ್ರೆ ,ಇಡೀ ವಿಶ್ವವನ್ನು ಅಗೀತಾ ಕೂರ್ತಿದ್ರಾ ವಿಜ್ಞಾನಿಗಳು?ಸಾಕ್ಷಿ ಸಿಕ್ಕೋ ತನಕ?

ನನ್ನದು ತಪ್ಪಾಯ್ತು ! ನಾನು ಪೌರಾಣಿಕ ಸತ್ಯಗಳೆನ್ನೆಲ್ಲಾ ವೈಜ್ಞಾನಿಕ ಅಂದೆ. ದಯವಿಟ್ಟು ಕ್ಷಮಿಸಿ ನನ್ನನ್ನು ಅದೆಲ್ಲ ವೈಜ್ಞಾನಿಕ ಖಂಡಿತ ಅಲ್ಲ !
ಯಾಕಂದ್ರೆ ವಿಜ್ಞಾನ ಅನ್ನೋ ಪದಕ್ಕೆ ಅಸ್ತಿತ್ವ ಬಂದದ್ದೇ ಇತ್ತೀಚೆಗೆ .ಹಾಗಾಗಿ ಆ ಪದ ಅಸ್ತಿತ್ವ ಬರೋದಕ್ಕೆ ಮುಂಚೆ ನಡೆದ ಘಟನೆಗಳನ್ನು ವೈಜ್ಞಾನಿಕ ಅನ್ನೋದು ಸಮಂಜಸ ಅಲ್ಲ.
ಒಂದು ವಿಷಯ ನೆನಪಿಡಿ ,ಈ ಭೂಮಿ ಚಪ್ಪಟೆಯಾಗಿದೆ ಅಂತ ಹೇಳಿದ ಪುಣ್ಯಾತ್ಮರು ವಿಜ್ಞಾನಿಗಳೇ ,ಅವರು ತಮ್ಮ ಮಟ್ಟಿಗೆ ಸರಿಯಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಕ್ಕೇ ಅದನ್ನು ಜನರು ನಂಬಿದ್ದು,ಭೂಮಿ ದುಂಡಗಿದೆ ಅಂತ ಇನ್ನೊಬ್ಬ ವಿಜ್ಞಾನಿ ಬೇರೆ ಸಾಕ್ಷ್ಯಾಧರಗಳನ್ನು ಒದಗಿಸೋ ತನಕ!

ಆದ್ರೆ ನಮ್ಮ ಆರ್ಯಭಟ 1400AD ನಲ್ಲೇ Mrujjalashikhivaayumayo Bhoogola: sarvatho vruttha: ಅಂದಿದ್ದ.
ಇದರ ಅರ್ಥ ಭೂಮಿ ದುಂಡಗಿದೆ ಅಂತ .ಆದ್ರೆ ಇದು ವಿಜ್ಞಾನವೇ ಅಲ್ಲ ಅಂತೀರಾ ಯಾಕಂದ್ರೆ ಭೂಮಿ ದುಂಡಗಿದೆ ಅಂತ ಸಾಕ್ಷ್ಯಾಧಾರ ಒದಗಿಸಿದ್ದು ಅರಿಸ್ಟಾಟಲ್ ,ಆರ್ಯಭಟ ಅಲ್ಲ!
ಈ ಬಗ್ಗೆ ಚರ್ಚೆ ಮಾಡಿದಷ್ಟು ಮುಂದುವರೆಯುತ್ತೆ .
ನನ್ಗೆ ಇದನ್ನು ಸಾಬೀತುಪಡಿಸಲು ಸಾಧ್ಯವೂ ಇಲ್ಲ !
ಹಾಗಾಗಿ ಇದು ವಿಜ್ಞಾನ ಅಲ್ಲ ಅದಕ್ಕಿಂತ ಮಿಗಿಲಾದದ್ದು ಅನ್ನೋದು ನನ್ನ ಅನಿಸಿಕೆ.

Anonymous said...

Sandeep,
You say that the concept of science was proposed after the puranas happened and therefore science should not be imposed on the puranas. But didn’t dinosaurs exist way before the puranas are thought to have happened? How is it that there is scientific evidence for old dinosaurs but not for your pushpakavimana?

As for ‘earth is round’ issue, there were many Greek philosophers and as you mentioned our own Aryabhata who argued that earth is spherical. But there were others who believed that the earth was flat. At a much later time in history, when knowledge in science and technology got a whole lot better, we reached a point when a picture of earth could be taken from space, which showed a spherical but not a flat earth (there were other lines of evidence before this).

Sometimes, providing proof to a hypothesis can be very difficult even in science and takes several centuries and many kinds of proofs. In the meantime, it is not who says any given thing (whether it is Aryabhata or Aristotle or Einstein), but it is what they say and whether or not what they say fits the prevalent and accepted scientific/philosophical theories that is important. (BTW, I have acknowledged the contributions of ancient Indians to mathematics and astronomy in one of my previous comments. Some of these contributions were made by Aryabhata).

Please try to think about evidence this way:
If you have evidence for any given point, then you prove the point. I hope you agree with me on this one.

If you do not have evidence: When you believe or suspect that a given event has occurred (for example – people manufactured pushpakavimana 5000 years ago or dinosaurs lived a few million years ago or a person X killed someone), until you have evidence to prove that the event indeed occurred, you can only state that due to these reasons (state your reasons- such as, it is mentioned in an ancient text), you suspect that –state your suspicion or belief.

Once you have stated your belief (this can be a hypothesis), you can make a list of ways in which you could prove your point: regarding dinosaurs, finding fossils would be one of the ways in which to prove the existence of dinosaurs. Finding the age of the fossils and dating them back to when dinosaurs were hypothesized to have lived would further bolster your argument in favor of dinosaurs. But until you find such evidence that can prove a point, your statement is a hypothesis or a guess but cannot be a theory or a basis for a theory.

While the imagination in the stories of Ramayana and Mahabharatha are unquestionably exquisite, modern scientific innovations (you have mentioned airplanes, mobile phones, in vitro fertilization, guided missiles and a couple of others) are human achievements that awes people. Why do you have a problem with people admiring modern scientific achievements (going back to your post), especially since Sanjaya’s ability to see the battle while sitting in a palace or other miracles that you mention (whether or not they actually happened) have not provided us the airplanes and other conveniences of today?

But there is another way by which you can prove that pushpakavimana existed: by building a pushpakavimana based on the description available in the ancient texts and making it fly. This way you can actually fly around in a pushpakavimana and look down on skeptics like me and tell us how wrong we were! :-)


-Vanitha

ಸಂದೀಪ್ ಕಾಮತ್ said...

@ Vanitha,

ನೀವು ತುಂಬಾ ಚೆನ್ನಾಗಿಯೇ ವಾದ ಮಾಡುತ್ತೀರಿ .ಆದ್ರೆ ಈ ಪುರಾಣಗಳು ಸತ್ಯ ಕಥೆ ಹೌದೋ ಅಲ್ಲವೋ ಅನ್ನೋದು ನನ್ಗೆ ಗೊತ್ತಿಲ್ಲ ,ಇದನ್ನು ನಾನೇ ಹೇಳಿದ್ದೀನಿ.
ಇನ್ನು ಇಂಥ ವಾದಗಳನ್ನು prove ಮಾಡೋ ಅಗತ್ಯವೂ ನನಗಿಲ್ಲ .
ನಾನು ಈ ಲೇಖನವನ್ನು ನಾಸ ಅಥವ ಇನ್ಯಾವುದೇ ಸಂಸ್ಥೆಗೆ ಕಳಿಸುತ್ತಿಲ್ಲ.ಅಥವ ಯಾವುದೇ ಪಿ.ಎಚ್ .ಡಿ ಪಡೆಯುವ ಇರಾದೆಯೂ ನನಗಿಲ್ಲ.
ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನು ಬರೆದಿದ್ದು ಅಷ್ಟೆ.ನನ್ಗೆ ಪಿ.ಯು.ಸಿ ಯಲ್ಲಿ ಗಣಿತದಲ್ಲಿ ಬಂದಿದ್ದು ಕೇವಲ್ಲ 40 marks ! ಹಾಗಾಗಿ ವಿಜ್ಞಾನ ಹಾಗೂ ವಿಜ್ಞಾನಿಗಳ ಬಗ್ಗೆ ಮಾತಾಡಲು ನನ್ಗೆ ಯಾವುದೇ ಹಕ್ಕಿಲ್ಲ .
ನನಗೆ ವಿಜ್ಞಾನ/ವಿಜ್ಞಾನಿಗಳ ಬಗ್ಗೆಯಾವುದೇ ದ್ವೇಷವಿಲ್ಲ.ವಿಜ್ಞಾನಿಗಳ ಬಗ್ಗೆ ತಪ್ಪಾಗಿ ಬರೆದಿದ್ದರೆ ನನ್ನನ್ನು ಕ್ಷಮಿಸಿ ಎಂದು ನಾನು ಮುಕ್ತ ಮನಸ್ಸಿನಿಂದ ಕೇಳಿಕೊಂಡಿದ್ದೆ(ಬಹುಷ ನೀವು ಗಮನಿಸಿಲ್ಲ)!
ಆದ್ರೆ ಒಂದು ಮಾತು ನೆನಪಿಟ್ಟುಕೊಳ್ಳಿ ಈ ಪ್ರಪಂಚದಲ್ಲಿ ವಿಜ್ಞಾನಕ್ಕೆ ನಿಲುಕದ ಎಷ್ಟೋ ಸಂಗತಿಗಳಿವೆ ,ಅದನ್ನು ಸ್ವಥ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ .ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡೋದು ಸಾಧ್ಯ ಇಲ್ಲ,ನೋಡಬಾರದು ಕೂಡಾ.
ಆದ್ರೂ ನಿಮ್ಮ ಪ್ರಕಾರ ವಿಜ್ಞಾನವೇ ಗ್ರೇಟ್ ಅಂತಾದ್ರೆ ಸರಿ ವಿಜ್ಞಾನವೇ ಗ್ರೇಟ್ .

ಸುಧೇಶ್ ಶೆಟ್ಟಿ said...

ಯ೦ಡಮೂರಿಯವ್ರು ಕೂಡ ಮಹಾಭಾರತ ಮತ್ತು ರಾಮಾಯಣಗಳು ಕಾಲ್ಪನಿಕ ಕಥೆಗಳು ಎ೦ದು ತಮ್ಮ ಯಾವುದೋ ಪುಸ್ತಕದಲ್ಲಿ ಬರೆದಿದ್ದರು.ನಿಮ್ಮ ಲೇಖನ ಓದಿದಾಗ ಅದು ನೆನಪಾಯಿತು.

Anonymous said...

Sandeep,

When you write something, even when it is not for a degree, you need to take responsibility for it.

We have come a long way from the time even the most recent of our ancient texts were written. During this time, advances in science have explained a number of things that were once thought to be supernatural. For instance, we now know that plague is caused by a microorganism and not by the wrath of a God/Goddess. Science allows us to question everything, constantly. That is why even scientific theories are challenged from time to time. This process of questioning and finding rational answers betters our understanding of the universe.

However, in our culture we are always told to accept whatever is ancient without questioning. It might seem very harmless to just accept the stories of Ramayana and Mahabharatha as being true inclusive of all the miracles and magic in them. But our religion does not stop here. It also wants us to accept religious/cultural practices such as sati, caste system, dowry, female infanticide/feticide, the list is long. If we don’t think clearly in the light of modern advances and question religion and the related practices, we will reduce ourselves to justifying killing women on their husbands’ funeral pyres, ill-treating men and women because they belong to a ‘lower’ caste, killing women for not bringing enough dowry, killing fetuses and infants because they are female.

Also when we don’t learn to question, we will reduce ourselves to justifying acts like these:

http://www.nytimes.com/2008/10/13/world/asia/13india.html?_r=1&oref=slogin

-Vanitha

ಸಂದೀಪ್ ಕಾಮತ್ said...

Vanitha,

Nobody stopped anybody from questioning.
I myself was /is not sure about the truth/myth of Mahabharata,Ramayana .I had clearly told this in my blog.

I appreciate your questioning skills.
But such questioning always will be restricted to Hindu religion.
You will never tell a Christian that Bible is myth.
You will never tell a Muslim that Quran is myth.

I don't see any relevance to the link provided at the end of your comment to this article.


ಒಂದು ಪ್ರಶ್ನೆ ಕೇಳ್ತೀನಿ ,ಎಲ್ಲವನ್ನೂ ಪ್ರಶ್ನಿಸಬೇಕು ಅಂತ ನೀವು ಹೇಳ್ತೀರಾ .ನಿಜ ಜೀವನದಲ್ಲಿ ನೀವು ಅದನ್ನು ಅಳವಡಿಸಿಕೊಂಡಿದ್ದೀರಾ?
ನಿಮ್ಮ ಮದುವೆ ಸಾಂಪ್ರದಾಯಿಕ ಶೈಲಿಯಲ್ಲಿ ಆಗ್ಬೇಕು ಅಂತ ನಿಮ್ಮ ಮನೆಯವರಿಗೆ ಆಸೆ ಇರುತ್ತೆ.ನೀವು ಅದನ್ನು ಪ್ರಶ್ನಿಸುತ್ತೀರಾ?
ಸಂಪ್ರದಾಯ ಎಲ್ಲ Myth ನಾನು ಅದನ್ನು ನಂಬಲ್ಲ ಅಂತೀರಾ?
ಪ್ರಶ್ನಿಸಬೇಕು ನಿಜ -ಎಲ್ಲವನ್ನೂ ಪ್ರಶ್ನಿಸುತ್ತ ಕೂತ್ರೆ ಜೀವನ ನೀರಸ ಆಗ್ಬಿಡುತ್ತೆ( ನಿಮಗೆ ಪ್ರಶ್ನಿಸುದರಲ್ಲೇ ಆನಂದ ಸಿಗೋದಾದ್ರೆ ಅದು ಬೇರೆ ವಿಷಯ)

ಅಷ್ಟಕ್ಕೂ ನೀವು ನನ್ನಿಂದ ಏನನ್ನು ನಿರೀಕ್ಷಿಸ್ತಿದ್ದೀರಾ ಅಂತ ಹೇಳಿದ್ರೆ ನನಗೂ ಸ್ವಲ್ಪ ನೆಮ್ಮದಿ ಇರ್ತಾ ಇತ್ತು!
ವಿಜ್ಞಾನಿಗಳ ಬಗ್ಗೆ ನಾನು ಹಗುರವಾಗಿ ಬರೆದದ್ದಕ್ಕೆ ನಿಮ್ಮ ತಕರಾರಿತ್ತು -ನಾನು ಮುಕ್ತವಾಗಿ ಕ್ಷಮೆ ಕೇಳಿದ್ದೆ,ಆದ್ರೂ ನಿಮಗೆ ಸಮಾಧಾನ ಆಗಿಲ್ಲ!
ಪುರಾಣದ ಸಂಗತಿಗಳೆಲ್ಲ ವೈಜ್ಞಾನಿಕ ಅಂದಿದ್ದಕ್ಕೆ ನಿಮಗೆ ತಕರಾರಿತ್ತು-ಅದು ವಿಜ್ಞಾನವೇ ಅಲ್ಲ ಅಂದೆ ನಾನು,ಅದೂ ನಿಮಗೆ ಸಮಾಧಾನ ತಂದಿಲ್ಲ!


ನಾನು ಈಗಾಗಲೇ ಸುಧೇಶ್ ಗೆ ಹೇಳಿದ್ದೆ .
ನಾನು ಬರೆದಿದ್ದೆಲ್ಲ ಟೈಂ ಪಾಸ್ ಗೆ ಅಂತ .ಇದನ್ನು ನಾನು ಯಾವ ಸಮಾಜ ಸುಧಾರಣೆಗೂ ಬರೆದಿಲ್ಲ .ನನ್ನ ಈ ಲೇಖನ ಸಮಾಜಕ್ಕೆ ಏನಾದ್ರೂ ತಪ್ಪು ಮೆಸೇಜ್ ಕೊಡ್ತಾ ಇದೆ ಅಂತ ನಿಮಗೆ ಅನ್ನಿಸಿದ್ರೆ ಹೇಳಿ ಕಿತ್ತು ಹಾಕ್ತೀನಿ(you need not provide a evidence for that!)

Anonymous said...

Sandeep,

>>But such questioning always will be restricted to Hindu religion.
You will never tell a Christian that Bible is myth.
You will never tell a Muslim that Quran is myth.>>

How do you know I don't? If you get a chance read Richard Dawkins' 'God Delusion'. There are a lot of people out there who question all religions.


Since you asked, yes, I try to keep all aspects of my life rational. I don't do things that don't mean anything to me. It took me several years to reach this point and I still have a long way to go. And yes, there are times when it is hard to convince people about my rationality, and I am compelled to go with the flow.

It is your blog and you can post anything you like. Since you keep it public and open for comments, I responded with my thoughts and arguments.

But I think what really bothered me is that there are young people who are confused about myths and realities pertaining to religion and that science education has not helped as much as I thought it would to dispel the confusion.

But never mind what I say, I do not want anything from you. I am glad that I got a chance to think about religion and science after reading your post and your comments.

Don't let comments like mine stop you from writing, that shouldn't be the intention of any discussion.

-Vanitha

Anonymous said...

Sandeep,

I need to make a correction:

In my previous comment, please read: Don't let comments like mine stop you from writing anything, that shouldn't be the intention of any discussion. -Vanitha

Anonymous said...

@Vanitha,
'But our religion does not stop here. It also wants us to accept religious/cultural practices such as sati, caste system, dowry, female infanticide/feticide, the list is long'......
Really? Hindu religion tells you to do all that? Do you have any evidences to support your claim? I know many religious Hindus. They never indulge in such things.

I went through the link provided by you. It is really unfortunate that two tribes who were living peacefully hitherto have now locked horns with each other.

Could you please go through the following links, please?
http://www.tehelka.com/story_main.asp?filename=ts013004shashi.asp

http://www.joshuaproject.net/

ಸಂದೀಪ್ ಕಾಮತ್ said...

ವನಿತಾ,
If you are rationalist well and good!

ಆದ್ರೆ ನೀವ ಪ್ರವಾಹದ ವಿರುದ್ಧ ಈಜ್ತಾ ಇದ್ದೀರ ! ಕೊನೆ ತನಕ ಈಜೋ ಶಕ್ತಿ ಧೈರ್ಯ ,ಉತ್ಸಾಹ ನಿಮ್ಮಲ್ಲಿದ್ರೆ ಆಲ್ ದಿ ಬೆಸ್ಟ್ :)
Being rationalist is NOT at all possible for me.
I would like to live in a fantasy world .I don't want to seek truth in every matter I look into.
That's how bollywood,hollywood and other film industries survive!

ಚಿಕ್ಕ ಮಗು ಸಾಂಟಾಕ್ಲಾಸ್ ಗೊಂಬೆ ತರ್ತಾನೆ ಅಂತ ನಂಬಿಕೊಂಡಿದ್ರೆ ಇರ್ಲಿ ಬಿಡಿ ,ಅದನ್ಯಾಕೆ ನೋಯಿಸ್ಬೇಕು ನಾವು ಸತ್ಯದ ಹೆಸರೇಳಿ?
ದೇಶದ ೯೦ ಕೋಟಿಗಿಂತಲೂ ಮಿಗಿಲಾದ ಜನ ದೇವರನ್ನು,ಧರ್ಮವನ್ನು ನಂಬ್ತಾರೆ ಎಂದಾದ್ರೆ ಇರ್ಲಿ ಬಿಡಿ .ನಿಮ್ಮ ಪ್ರಕಾರ ಧರ್ಮ ದೇಶದ ನೆಮ್ಮದಿ ಕೆಡಿಸುತ್ತೆ ,ಆದ್ರೆ ನನ್ನ ಪ್ರಕಾರ ಬಹಳಶ್ಟು ಜನ ನೆಮ್ಮದಿಯಿಂದ ಇರೋದಕ್ಕೆ ಕಾರಣ ದೇವರ ಮೇಲಿನ ಭಕ್ತಿ ,ಭಕ್ತಿಗಿಂತಲೂ ಮಿಗಿಲಾಗಿ ’ಭಯ’!
ಕೆಲವು ಪುಂಡು ಪೋಕರಿಗಳು ದೇವರ ಹೆಸರಿನಲ್ಲಿ ಗಲಾಟೆ ಮಾಡ್ತಾರೇನೋ ನಿಜ ,ಆದ್ರೆ ಉಳಿದ ಜನರು ಸುಮ್ಮನಿರೋದಕ್ಕೂ ದೇವರ ಮೇಲಿನ ಭಯ ಕಾರಣ.

>>But I think what really bothered me is that there are young people who are confused about myths and realities pertaining to religion and that science education has not helped as much as I thought it would to dispel the confusion. >>

ಇದು ನಿಜ:) ಆದ್ರೆ ಇದರಿಂದ ಯಾರಿಗೂ ಹಾನಿ ಇಲ್ಲ ಅಂದ್ರೆ ಪರ್ವಾಗಿಲ್ಲ ಅಲ್ವ?
ಎಲ್ಲವನೂ ಸೈಂಟಿಫಿಕ್ ಆಗಿ ನೋಡಿದ್ರೆ ಪ್ರೀತಿ ಅನ್ನೋದು ಹಾರ್ಮೋನ್ ಗಳ ಚೆಲ್ಲಾಟ ,ಸೆಕ್ಸ್ ಅನ್ನೋದು reproduction system ಆಗ್ಬಿಡುತ್ತೆ!

"Don't let comments like mine stop you from writing anything, that shouldn't be the intention of any discussion" ಅಂದ್ರಿ ,ಖುಷಿಯಾಯಿತು ನೋಡಿ:)
ನಿಮ್ಮ ಉದ್ದೇಶ ಒಳ್ಳೆಯದೇ ಆದ್ರೆ ಪರ್ವಾಗಿಲ್ಲ ಎಷ್ಟು ಬೇಕಾದ್ರೂ ಕಮೆಂಟ್ ಮಾಡಿ .

Harisha - ಹರೀಶ said...

ರಾಮಾಯಣ ನಡೆದಿದ್ದು ೫೦೦೦ ವರ್ಷಗಳ ಹಿಂದಲ್ಲ. ಅದು ನಡೆದಿದ್ದು ಹಿಂದೂ ಪುರಾಣಗಳ ಪ್ರಕಾರ ೧೪ನೇ ತ್ರೇತಾಯುಗದಲ್ಲಿ. ಇದು ೧೮ನೇ ಕಲಿಯುಗ. ಅಂದರೆ ಸುಮಾರು ೧೭೩೩೦೦೦ಕ್ಕಿಂತ ಹೆಚ್ಚು ವರ್ಷಗಳ ಹಿಂದೆ. ಮಹಾಭಾರತ ನಡೆದಿದ್ದು ೫೦೦೦ ವರ್ಷಗಳ ಹಿಂದೆ.

Harisha - ಹರೀಶ said...

ಕ್ಷಮಿಸಿ, ಒಂದು ಸೊನ್ನೆ ಬಿಟ್ಟು ಲೆಕ್ಕಹಾಕಿಬಿಟ್ಟಿದ್ದೆ.. ರಾಮಾಯಣದ ಕಾಲ ೧೭೩೩೦೦೦ ಅಲ್ಲ, ೧೭೨೮೫೦೦೦ ವರ್ಷಗಳ ಹಿಂದೆ...

ಸಂದೀಪ್ ಕಾಮತ್ said...

ಮಾಹಿತಿಗಾಗಿ ಧನ್ಯವಾದಗಳು ಹರೀಶ್:)

ಸಿಂಧು ಭಟ್. said...

ನಿಮ್ಮ ಲೇಖನ ಓದು ಖುಷಿ ಕೊಟ್ತು. ಅದಕ್ಕಿಂತ ಹೆಚ್ಚು commentಗಳು.

ಸಂದೀಪ್ ಕಾಮತ್ said...

ಧನ್ಯವಾದಗಳು ಸಿಂಧು!
ಲೇಖನಕ್ಕಿಂತ ಕಮೆಂಟೇ ಉದ್ದಕ್ಕಿದೆ:))

hamsanandi said...

[quote] ಆದ್ರೆ ನಮ್ಮ ಆರ್ಯಭಟ 1400AD ನಲ್ಲೇ Mrujjalashikhivaayumayo Bhoogola: sarvatho vruttha: ಅಂದಿದ್ದ.
ಇದರ ಅರ್ಥ ಭೂಮಿ ದುಂಡಗಿದೆ ಅಂತ .ಆದ್ರೆ ಇದು ವಿಜ್ಞಾನವೇ ಅಲ್ಲ ಅಂತೀರಾ ಯಾಕಂದ್ರೆ ಭೂಮಿ ದುಂಡಗಿದೆ ಅಂತ ಸಾಕ್ಷ್ಯಾಧಾರ ಒದಗಿಸಿದ್ದು ಅರಿಸ್ಟಾಟಲ್ ,ಆರ್ಯಭಟ ಅಲ್ಲ! [/quote]

ಸಂದೀಪರೆ,

ಇಲ್ಲೊಂದು ತಪ್ಪಿದೆಯಲ್ರೀ? ಆರ್ಯಭಟ ಇದ್ದದ್ದು ಸುಮಾರು ಕ್ರಿ.ಶ.೫೦೦ ರಲ್ಲಿ - ನೀವು ಬರೆದ ಹಾಗೆ ಕ್ರಿ.ಶ.೧೪೦೦ ಅಲ್ಲ. ಆದ್ರೆ ಅರಿಸ್ಟಾಟಲ್ ಆರ್ಯಭಟನಿಗಿಂತ ಮೊದಲಿದ್ದವನು ಅನ್ನೋದು ನಿಜ.

-ಹಂಸಾನಂದಿ

hamsanandi said...

ಹರೀಶರೆ,

ನೀವು ಹೀಗಂದ್ರಿ:

[quote] ಕ್ಷಮಿಸಿ, ಒಂದು ಸೊನ್ನೆ ಬಿಟ್ಟು ಲೆಕ್ಕಹಾಕಿಬಿಟ್ಟಿದ್ದೆ.. ರಾಮಾಯಣದ ಕಾಲ ೧೭೩೩೦೦೦ ಅಲ್ಲ, ೧೭೨೮೫೦೦೦ ವರ್ಷಗಳ ಹಿಂದೆ...[/quote]

ಇಲ್ಲೊಂದು ಮರ್ಮ ಇದೆ - ವೇದದ ಕಾಲದಲ್ಲಿ ಒಂದು ಯುಗ ಅಂದರೆ ೫ ವರ್ಷಗಳ ಕಾಲದ ಅವಧಿ ಆಗಿತ್ತು. ಇದು ಸೂರ್ಯ ಚಂದ್ರ ಒಂದೇ ಜಾಗಕ್ಕೆ ಮರಳಿ ಬರುವ ಕಾರಣದ ಮೇಲೆ ಆಧಾರಿತವಾಗಿತ್ತು.

ನಂತರದ ದಿನಗಳಲ್ಲಿ ಅಯನದ (ಪ್ರಿಸಿಶನ್) ಬಗ್ಗೆ ಅರಿತ ನಂತರ ಕೆಲವು ಲೆಕ್ಕಾಚಾರಗಳನ್ನು ಮಾಡಿ ಆಕಾಶದ ಘಟನೆಗಳನ್ನು ಹೇಳಲು ಮಹಾಯುಗಗಳ ಕಲ್ಪನೆ ಮಾಡಲಾಯಿತು. (ಇದು ಆಕಾಶಕಾಯಗಳ ಸಂಚಾರವನ್ನು ನಿರ್ಧರಿಸಲು ಬೇಕಾಗಿತ್ತು) ನನ್ನ ಒಂದು ಅನುಮಾನವೆಂದರೆ - ಕೆಲವು ಕಡೆ ಕೃತ-ತ್ರೇತಾ-ಯುಗಗಳ ಲೆಕ್ಕ ಹಾಕುವಾಗ ವೇದಾಂಗ ಜ್ಯೋತಿಷದ ಯುಗಗಳೂ - ನಂತರದ ಯುಗಗಳೂ ಒಟ್ಟಿಗೆ ಬೆರೆತು ರಾಮಾಯಣ - ಮಹಾಭಾರತಗಳಿಗೆ ತೀರಾ ನಂಬಲಿಕ್ಕೆ ಅಸಾಧ್ಯವಾದಂತಹ ( ಅಥವಾ ಕಷ್ಟಸಾಧ್ಯ ಅಂತ ಬೇಕಾದರೆ ಅನ್ನಿ!) ಕಾಲಗಳು ಬರತೊಡಗಿದವು.

ಈ ನನ್ನ ಅನುಮಾನವನ್ನು ಪರೀಕ್ಷಿಸಲು ನಾನಿನ್ನೂ ಬಹಳ ಓದಿಕೊಳ್ಳಬೇಕಿದೆ - ಆದ್ದರಿಂತ ಇದಕ್ಕಿಂತ ಹೆಚ್ಚಿಗೆ ಹೇಳುವುದು ಕಷ್ಟ.

ವೇದ- ಮಹಾಭಾರತದ್ಲಲಿರುವ ಆಕಾಶದ ಸಂಬಂಧೀ ಘಟನೆಗಳು- ಮಾಹಿತಿಗಳನ್ನು ನೋಡಿದರೆ ಅವು ಯಾವುದನ್ನೂ ಕ್ರಿ.ಪೂ.೫೦೦೦ ಕ್ಕಿಂತಲೂ ಹಿಂದಕ್ಕೆ ಹಾಕುವುದು ಕಷ್ಟ.

(ಇದು ಸಂದೀಪರ ಮೂಲ ಲೇಖನದ ಆಶಯಕ್ಕೆ ವಿರುದ್ಧವಾಗಿದೆ - ನಡೆದದ್ದನ್ನೆ ಬರೆದಿದ್ದರೆ ವ್ಯಾಸರು ಮಾಡಿದ ಘನಕಾರ್ಯವೇನು ಅನ್ನುವುದು ಅವರ ಪ್ರಶ್ನೆ - ನನ್ನ ಮಟ್ಟಿಗೆ ಹೇಳುವುದಾದರೆ - ನಡೆದದ್ದನ್ನು ರಂಜಿಸುವಂತೆ ಹೇಳಿರುವುದು ವ್ಯಾಸರ ಹೆಚ್ಚಾಯ!

-ಹಂಸಾನಂದಿ

Harisha - ಹರೀಶ said...

ಹಂಸಾನಂದಿ ಅವರೇ,
>> ವೇದದ ಕಾಲದಲ್ಲಿ ಒಂದು [b]ಯುಗ[/b] ಅಂದರೆ ೫ ವರ್ಷಗಳ ಕಾಲದ ಅವಧಿ ಆಗಿತ್ತು.

ಯುಗ ಎಂಬುದು ಸರಿಯೇ? ಅಥವಾ ವರ್ಷವೇ??

ಯುಗದ ಬಗ್ಗೆ ಗೊತ್ತಿಲ್ಲ. ವರ್ಷವಾಗಿದ್ದಲ್ಲಿ, ದೇವವರ್ಷ, ಮಾನುಷವರ್ಷ ಎಂದು ಎರಡು ಗಣನಾ ವ್ಯವಸ್ಥೆಯಿತ್ತು; ೧ ದೇವ ವರ್ಷ = ೬ ಮಾನುಷ ವರ್ಷ ಎಂದು ಓದಿದಂತೆ ನೆನಪು. ಸರಿಯಾಗಿ ನೋಡಿ ಹೇಳುತ್ತೇನೆ.

ರಾಮಾಯಣದಲ್ಲಿ ರಾಮ ೧೦೦೦೦ ವರ್ಷ ರಾಜ್ಯವಾಳಿದ ಬಗ್ಗೆ ಮಾಹಿತಿಯಿದೆ. ಮಹಾಭಾರತದಲ್ಲಿ ಕೃಷ್ಣ ೧೨೫ ವರ್ಷ, ಅರ್ಜುನ ೭೫ ವರ್ಷ ಬದುಕಿದ್ದ ಎನ್ನಲಾಗಿದೆ. ಇವೆಲ್ಲ ವಿಚಿತ್ರವೆನಿಸಬಹುದು. ಆದರೆ ಕಾಲಾನುಕ್ರಮವಾಗಿ ಮನುಷ್ಯನ ಧರ್ಮಭ್ರಷ್ಟತೆ ಹೆಚ್ಚುತ್ತದೆ; ಬುದ್ಧಿ, ನೆನಪಿನ ಶಕ್ತಿ, ಆಯುಷ್ಯ ಕಡಿಮೆಯಾಗುತ್ತದೆ ಎಂದೂ ವಿವರಿಸಲಾಗಿದೆ. ಕಲಿಯುಗಾಂತ್ಯದ ವೇಳೆ ಮನುಷ್ಯನ ಸರಾಸರಿ ಆಯುಷ್ಯ ೧೬ ವರ್ಷವಾಗಿರುತ್ತದೆ ಎಂದೂ ಹೇಳಲಾಗಿದೆ. ವಿಜ್ಞಾನ ದಿನೇ ದಿನೇ ಪ್ರಗತಿ ಸಾಧಿಸುತ್ತಿದ್ದರೂ ಕಡಿಮೆ ಆಗುತ್ತಿರುವ ಆಯುಷ್ಯ ನೋಡಿದರೆ ಇವೆಲ್ಲವನ್ನು ಅಲ್ಲಗಳೆಯುವುದೂ ಸುಲಭವಲ್ಲ.

ಸಂದೀಪ್ ಕಾಮತ್ said...

ಹಂಸಾನಂದಿಯವ್ರೇ,

ಆರ್ಯಭಟನ ಬಗ್ಗೆ ನಾನು ಬರೆದಿದ್ದು ತಪ್ಪು :( ಸರಿ ಮಾಡಿದ್ದಕ್ಕೆ ಧನ್ಯವಾದಗಳು!

ಬೇರೆ ಬೇರೆ ಸೈಟ್ ಗಳಿಂದ ಸಾಮಗ್ರಿ ಕದಿಯಬೇಕಾದ್ರೆ ಎಡವಟ್ಟಾಯ್ತು !!!
ನಾನು ಇಲ್ಲಿಂದ ಕದ್ದಿದ್ದು ಆದ್ರೆ ಬರೀಬೇಕಾದ್ರೆ ಎಡವಟ್ಟಾಯ್ತು!

Unknown said...

Sandeep,
any one can comment any thing ...but u r article is very good .. i will support u r point of view... some times the person will argue for the sake of argument... don't take it seriously and continue the writing like this .. i am feeling very happy to read this blog

ಸಂದೀಪ್ ಕಾಮತ್ said...

Roopa ,

Thanks for you support and appreciation!

Regards,
Sandeep Kamath

Sathisha said...

Really thought provoking discussions, thanks to you and vanitha.
Just because there is no evidence we can't say Ramayana never existed. But it really makes sense to say I dont beleive in it because you dont have any evidence to prove it. Probably you could have put a better argument if you have taken ramsethu as an example instead of pushpaka vimana.