Thursday, October 9, 2008
ಅನಾಮಿಕಾ
"A rose by any other name would smell as sweet" ಅಂತ ಶೇಕ್ ಸ್ಪಿಯರ್ ರೋಮಿಯೋ ಜೂಲಿಯಟ್ ನಲ್ಲಿ ಹೇಳಿದ್ದನಂತೆ ,ಅದನ್ನೆ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿದ್ದಾರೆ ಕೆಲವು ಜನಗಳು! ಶೇಕ್ ಸ್ಪಿಯರ್ ಏನೋ ಮಾತಿಗೆ ಆ ರೀತಿ ಬರೆದಿರಬಹುದು ,ಆದ್ರೆ ನಿಜ ಜೀವನದಲ್ಲಿ ಅವನೇನಾದ್ರೂ ಹೆಸರಿಗೆ ಅಷ್ಟು ಪ್ರಾಮುಖ್ಯತೆ ಕೊಡದೇ ಹೋಗಿದ್ರೆ ,ಅವನು ಬರೆದ ಎಷ್ಟೊ ನಾಟಕಗಳನ್ನು ಬೇರೆಯವರು ತಮ್ಮದಾಗಿಸ್ತಿದ್ರೇನೋ ?
ಹೊಸದಾಗಿ ಇಂಟರ್ನೆಟ್ ಲೋಕಕ್ಕೆ ಪರಿಚಯವಾದಾಗ ಹೀಗೆ ಸಮಯ ಕಳೆಯಲು ಚಾಟ್ ರೂಮ್ ಗೆ ಎಡತಾಕುವ ಅಭ್ಯಾಸ ಇತ್ತು.ಎಲ್ಲರೂ ಮಾಮೂಲಾಗೇ ಕೇಳುವ ಪ್ರಶ್ನೆ ಹೆಸರೇನು(Age Sex Location),ಎಲ್ಲಿರೋದು ಇತ್ಯಾದಿ.
ಇಂಟರ್ನೆಟ್ ನಲ್ಲಿ ಅಷ್ಟು ಸುಲಭವಾಗಿ ನಮ್ಮ ಪರಿಚಯ ಮಾಡ್ಕೋಬಾರದು ಅನ್ನೋ ಅರಿವು ಬಹಳಷ್ಟು ಜನರಿಗೆ ಇದ್ದುದರಿಂದ ಯಾರೂ ಈ ಪ್ರಶ್ನೆ ಗೆ ನಿಜ ಉತ್ತರ ನೀಡ್ತಾ ಇರ್ಲಿಲ್ಲ.
ಆಗ ಬಹಳಷ್ಟು ಜನರ ನೆರವಿಗೆ ಬರ್ತಾ ಇದ್ದಿದ್ದೇ ಶೇಕ್ ಸ್ಪಿಯರ್ ನ ಈ ವಾಕ್ಯ "A rose by any other name would smell as sweet" . ಹೆಸರ್ಲ್ಲೇನಿದೆ ??? !!! ಅಂತ.
ಆದ್ರೆ ರೋಸ್ ಅನ್ನೋದೇ ಒಂದು identity ಅಲ್ವ? ರೋಸ್ ನ ಜಾಸ್ಮಿನ್ ಅಂತ ಕರೆದಿದ್ರೆ ಅದೇ ಸುವಾಸನೆ ಇರುತ್ತೇನೋ ಆದ್ರೆ ಆ ಆಪ್ಯಾಯಮಾನತೆ??
ನನ್ನ ಗೆಳತಿಯೊಬ್ಬಳು ಹೀಗೆ ಇಂಟರ್ನೆಟ್ ನಲ್ಲಿ ಪರಿಚಯ ಆಗಿದ್ಲು ನಂಗೆ .ಮಾಯಾ ಅನ್ನೋ ಹೆಸರಲ್ಲಿ ಅವಳು ಚಾಟ್ ಮಾಡ್ತಾ ಇದ್ಲು .ಅವಳ ನಿಜ ಹೆಸರೂ ಅದೇ ಅಂತ ಹೇಳಿದ್ಲು. ಆದ್ರೆ ಸುಮಾರು ಒಂದು ವರ್ಷದ ನಂತರ 'ಸಂದೀಪ್ ಸಾರಿ ಕಣೋ ನನ್ನ ಹೆಸರು ಮಾಯಾ ಅಲ್ಲ ರಶ್ಮಿ ’ಅಂದ್ಲು!!!!
ಸಕ್ಕತ್ ಬೇಜಾರಾಗಿತ್ತು ಆ ದಿನ :(
ಎಷ್ಟು ಕಷ್ಟ ಅಲ್ವ ಒಂದು identity ನ ಭಿನ್ನವಾಗಿ ನೋಡೋದಕ್ಕೆ??
ಒಂದು ಹೆಸರು,ವ್ಯಕ್ತಿ ಯ ಬಗ್ಗೆ ಏನೇನೋ ಕಲ್ಪನೆ ಇರುತ್ತೆ .ಅದನ್ನು ಸಡನ್ ಆಗಿ ಬದಲಾಯಿಸೋದು ತುಂಬಾ ಕಷ್ಟ . ಹೇಳೊದೇನೋ ಹೇಳಿ ಬಿಡ್ತಾರೆ ಹೆಸರಲ್ಲೇನಿದೆ ಮಣ್ಣಾಂಗಟ್ಟಿ ಅಂತ -ಆದ್ರೆ ಅದೇ ವ್ಯಕ್ತಿಯ ಹೆಸರು ಬಿಡಿ, initial ತಪ್ಪಾಗಿ ಹೇಳಿದ್ರೂ ದುರುಗುಟ್ಟಿ ನೋಡ್ತಾರೆ.
VVS Laxman ನ ಬದಲು PVS Laxman ಅಂತೇನಾದ್ರೂ ಅಪ್ಪಿ ತಪ್ಪಿ ಕರೆದ್ರೋ ನಿಮ್ಮ ತಿಥಿ ಗ್ಯಾರಂಟಿ!
ನನ್ನ ಬ್ಲಾಗ್ ಗೆ ಪ್ರತಿಕ್ರಿಯಿಸುತ್ತ ಒಬ್ಬರು "ಸಂದೀಪ್ ನಾಯಕ್ರೇ ಚೆನ್ನಾಗಿ ಬರೆದಿದ್ದೀರ " ಅಂದಿದ್ರು .ಇರ್ಲಿ ಪರ್ವಾಗಿಲ್ಲ ತಪ್ಪಿ ಬರೆದಿದ್ದಾರೆ ಅಂತ ನಂಗೇ ನಾನೇ ಸಮಾಧಾನ ಮಾಡ್ಕೊಂಡ್ರೂ ಮನಸ್ಸು ಒಪ್ಪಲಿಲ್ಲ -ಹೇಳಿಯೇ ಬಿಟ್ಟೆ ’ ಮ್ಯಾಡಂ ನನ್ನ ಸರ್ ನೇಮ್ ಕಾಮತ್ ನಾಯಕ್ ಅಲ್ಲ ’ ಅಂತ! ಸರ್ ನೇಮ್ ತಪ್ಪಾಗಿ ಹೇಳೋದು ಬಿಡಿ Kamath ನ Kamat ಅಂತ ಬರೆದ್ರೂ ಮೈ ಎಲ್ಲಾ ಉರಿಯುತ್ತೆ ನಂಗೆ! ’ಅದು ಹೋಟೇಲ್ ಕಾಮತ್ ಕಣ್ರಿ ನಮ್ಮದು ಬೇರೆ ಅಂತೀನಿ’ !
ಇಷ್ಟೆಲ್ಲ ಯಾಕೆ ಬರೆದೆ ಅಂದ್ರೆ ಈಗಿಗ ಬ್ಲಾಗಿಗರೂ ಅನಾಮಿಕರಾಗತೊಡಗಿದ್ದಾರೆ! .ಕೆಲವು ಬ್ಲಾಗಿಗರು ’ಅನಾಮಿಕ’ರಾಗೇ ಇರಲು ಬಯಸ್ತಾರಂತೆ! ನಾವು ’ಇದು ಯಾರಿರಬಹುದು ,ಹುಡುಗ ನಾ ಹುಡುಗಿ ನಾ ’ ಅಂತೆಲ್ಲ ತಲೆ ಕೆಡಿಸ್ಕೊಂಡ್ರೇನೆ ಅವರಿಗೆ ಸಮಾಧಾನವೇನೋ . ಅಥವಾ ಇದೂ ಒಂದು ಮಾರ್ಕೆಟಿಂಗ್ strategy ನಾ??
ಎಷ್ಟು ದಿನ ಅಂತ ಅನಾಮಿಕರಾಗಿ ಇರಲು ಸಾಧ್ಯ ಅಲ್ವೇನ್ರಿ?ದಿನದಿಂದ ದಿನಕ್ಕೆ ಬ್ಲಾಗ್ ವಿಸಿಟಿಗರ ಸಂಖ್ಯೆ ಜಾಸ್ತಿ ಆದ್ರೆ , ಪಕ್ಕದಲ್ಲೇ ಯಾರಾದ್ರೂ ಅವರ ಬಗ್ಗೆ ’ಎಷ್ಟು ಚೆನ್ನಾಗಿ ಬರೀತಾನ್ರಿ/ಳ್ರಿ ಇವನು/ಳು ಅಂತ ಹೇಳ್ತಾ ಇದ್ರೆ ’ಅದು ನಾನೇ ಕಣ್ರೋ ! ’ ಅಂತ ಹೇಳಲಾರದ ಪರಿಸ್ಥಿತಿ!
ಉಫ್ ನಂಗಂತೂ ಸಾಧ್ಯಾನೇ ಇಲ್ಲ !
’ಹಾಯ್ ಬೆಂಗಳೂರಿನಲ್ಲಿ ’ ಜೋಗಿ ’ಜಾನಕಿ ಅಂಕಣ ಬರೀತಾ ಅನಾಮಿಕರಾಗಿದ್ದ ಕಾಲದಲ್ಲಿ ,ಆರ್ಕುಟ್ ನಲ್ಲಿ ಹೀಗೆ ಒಂದು ಚರ್ಚೆ ಪ್ರಾರಂಭ ಆಗಿತ್ತು ’ಜಾನಕಿ ಯಾರು ?’ ಅಂತ .ನಾನೂ ತುಂಬಾ ಇಷ್ಟ ಪಟ್ಟು ಓದ್ತಾ ಇದ್ದೆ ’ಜಾನಕಿ ’ ಕಾಲಂ ನ. ಜಾನಕಿ ಅಂತ ಹೆಸರು ಇಟ್ಟಿದ್ರಿಂದ ಇದನ್ನು ಬರೆಯೋರು ಯಾರೋ ಹೆಂಗಸು ಅನ್ನೋ strong feeling ನಂದಾಗಿತ್ತು. ಬೇರೆಯವ್ರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ರು ಅಲ್ಲಿ.
ಅವರಲ್ಲಿ ಯಾರೋ ಒಬ್ರು ಜಾನಕಿ ಬೇರೆ ಯಾರೂ ಅಲ್ಲ ಅದು ’ಜೋಗಿ’ ! ಅವರ ನಿಜ ಹೆಸರು ಗಿರೀಶ್ ರಾವ್ ಅಂತ ಬೇರೆ ಹೇಳಿದ್ರು.
ದುರದೃಷ್ಟ ಅಂದ್ರೆ ನಂಗೆ ಆಗ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ .ಹಾಗಾಗಿ ನಂಗೆ ಆ ಉತ್ತರ ಸಮಂಜಸ ಅನ್ನಿಸಿರ್ಲಿಲ್ಲ.
ನಂದೆಲ್ಲಿಡ್ಲಿ ಅನ್ನೋ ಹಾಗೆ ನಾನು, ’ ಜಾನಕಿ ಅನ್ನೋರು ಬಹುಷ ವೈದೇಹಿ ಇರಬಹುದೇನೋ ಅವರ ನಿಜ ಹೆಸರು ಜಾನಕಿ ಅಂತೆ ’ ಅಂದಿದ್ದೆ .ನನ್ನದು ಅಧಿಕ ಪ್ರಸಂಗವಾಗಿತ್ತು ಯಾಕಂದ್ರೆ ನಂಗೆ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ ,ಅದೂ ಅಲ್ಲದೆ ವೈದೇಹಿ ಯವರ ಬಗ್ಗೇನೂ ಜಾಸ್ತಿ ಗೊತ್ತಿರ್ಲಿಲ್ಲ :(
ಇದಾದ ನಂತರ ಜೋಗಿಯವರು ’ಜೋಗಿ ಕಥೆಗಳು’ ಪ್ರಕಟಿಸಿದ ನಂತರ ’ಜಾನಕಿ’ ಯಾರು ಅನ್ನೋದು ಜಗಜ್ಜಾಹೀರಾಯ್ತು.
ನನ್ನ ಹಾಗೆಯೇ ಜಾನಕಿಯ ಬಗ್ಗೆ ಬೇರೆಯವರ ಕಲ್ಪನೆಗಳೂ ಛಿದ್ರವಾದವಾ?????? ಯಾರಿಗೆ ಗೊತ್ತು!
ಇದೇ ರೀತಿ ಈ ಹೊಸ ’ಅನಾಮಿಕ ’ ಬ್ಲಾಗಿಗರಿಗೆ ಒಂದು ದಿನ lime light ಗೆ ಬರುವ ಆಸೆ ಆದ್ರೆ ನಮ್ಮಂಥವರ ಗತಿ ಏನು? ನಮ್ಮ ಕಲ್ಪನೆಗಳ ರೆಕ್ಕೆ ಪುಕ್ಕ ಎಲ್ಲ ಮುರಿಯುವಾಗ ನೋವಾಗಲ್ವ?
ಯಂಡಮೂರಿಯವರ’ ಬೆಳದಿಂಗಳ ಬಾಲೆ’ ಕೊನೆಯವರೆಗೆ ನಮಗೆ ಕಾಣೋದೆ ಇಲ್ಲ ! ಹಾಗಾಗಿಯೇ ನಂಗೆ ಅದು ಬಹಳ ಇಷ್ಟ ಆಯ್ತು !
ಅದು ಬಿಟ್ಟು ಕೊನೆಗೆ ’ಛೆ ನಾನಂದು ಕೊಂಡ ಬೆಳದಿಂಗಳ ಬಾಲೆ ಇವಳಲ್ಲ ’-ಅನ್ನೋ conclusion ಗೆ ಬರೋದು ಎಂಥ ಯಾತನೆ ಅಲ್ವ?
ಅದೂ ಅಲ್ಲದೇ ಅನಾಮಿಕರು ಅನಾಮಿಕರಾಗೇ ಉಳಿಯೋದು ಸಾಧ್ಯ ನಾ??
ಹ್ಯಾರಿ ಪೋಟರ್ ಲೇಖಕಿ ಹೆಂಗಸು ಅಂತ ಗೊತ್ತಾಗಬಾರದು ಅಂತ ಪಾಪ ಪ್ರಕಾಶಕರು ಅವಳ ಹೆಸರನ್ನು ಶಾರ್ಟ್ ಫಾರ್ಮ್ ನಲ್ಲಿ ಬರೀತಾ ಇದ್ರಂತೆ . ಎಂಥ ಸಂಕಟ ಅಲ್ವ ಅವಳಿಗೆ?
ಮೇರಿ ಭೀಗಿ ಭೀಗಿ ಸಿ ಪಲ್ಕೋಂ ಪೇ ರೆಹ್ ಗಯೆ,
ಜೈಸೆ ಮೆರೆ ಸಪನೆ ಭಿಕರ್ ಕೇ ......................
ಜಲೆ ಮನ್ ತೇರಾ ಭಿ ಕಿಸಿಕೆ ಮಿಲನ್ ಪರ್ ,
ಅನಾಮಿಕಾ ತು ಭಿ ತರಸೇ .................................!!!
Subscribe to:
Post Comments (Atom)
13 comments:
sariyaagi hElidiri....
anaamikaragoru....
hesaru badalisikondu bareyoru...
anamika comment haakoru..
yella jaasti aagbittiddare...
adu yaake haage maadthaaro arthane aagolla ...
vijayraj
ಚೆನ್ನಾಗಿ ಬರೆದಿದ್ದೀರಿ ಸಂದೀಪ್,
ನನ್ನ ಪ್ರಕಾರ, ಅನಾಮಿಕರಾಗಿ ಬರೆಯೋದ್ರಲ್ಲಿ ತಪ್ಪೇನೂ ಇಲ್ಲ. ಅಂಥವರಿಗೆ ಬರೆಯುವುದು ಮುಖ್ಯವಾಗಿರುತ್ತದೆಯೇ ಹೊರತು ಅದನ್ನು ಯಾರು ಬರೆಯುತ್ತಾರೆ ಎಂಬುದಲ್ಲ. ಹೀಗಾಗಿ, ನಿಮಗೆ ಅನಾಮಿಕ ಅನಿಸಿದವರ ಬರವಣಿಗೆ ಮಾತ್ರ ಗಮನಿಸಿದರೆ ಈ ಸಮಸ್ಯೆ ಇರುವುದಿಲ್ಲ ಅನಿಸುತ್ತದೆ.
ಬ್ಲಾಗ್‌ಗಳು ಬಂದ ನಂತರ ಅನಾಮಿಕ ಬರಹಗಾರ/ಗಾರ್ತಿಯರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣವೂ ಇದೆ. ಮುದ್ರಣ ಮಾಧ್ಯಮದಲ್ಲಿ ಅನಾಮಿಕರಾಗಿ ಬರೆಯುವುದು ಖ್ಯಾತನಾಮರಿಗೆ ಮಾತ್ರ ಸಾಧ್ಯ. ಅಂಥದೊಂದು ಖಾಸಗಿತನವನ್ನು ಮಾಧ್ಯಮ ಸಂಸ್ಥೆಗಳು ಪೋಷಿಸುತ್ತವೆ. ಅವರು ಯಾವ ಹೆಸರಿನಿಂದ ಬರೆದರೂ, ಚೆಕ್ ಮಾತ್ರ ಮೂಲ ಲೇಖಕ/ಕಿಗೇ ಹೋಗುತ್ತದೆ. ಆದರೆ, ಇತರರಿಗೆ ಈ ಅನುಕೂಲತೆ ಇಲ್ಲ.
ಆದರೆ, ಮುದ್ರಣ ಮಾಧ್ಯಮದ ಜನ ಒಪ್ಪಿಕೊಳ್ಳದಂಥ, ಸ್ವೀಕರಿಸಿದಂಥ ಬರವಣಿಗೆ ಹೊಂದಿದವರು ತಮ್ಮ ಬರವಣಿಗೆಗಳು ಬೆಳಕು ಕಾಣಲು ಏನು ಮಾಡಬೇಕು? ಬ್ಲಾಗ್ ಅಂಥವರಿಗೆ ಅವಕಾಶ ಕೊಟ್ಟಿದೆ. ಹೀಗಾಗಿ, ಗುಪ್ತರಾಗಿದ್ದುಕೊಂಡೇ ಅವರು ಬರೆಯುತ್ತಾರೆ ಎಂಬುದು ನನ್ನ ಭಾವನೆ.
ಯಾರು ಏನೇ ಆಗಿದ್ದುಕೊಂಡು ಬರೆಯಲಿ, ಅದು ಮುಖ್ಯವಲ್ಲ. ಅವರು ಬರೆದಿದ್ದು ಹೇಗಿದೆ? ಅದು ಇಷ್ಟವಾಯಿತಾ? ಅದಕ್ಕೆ ನಮ್ಮ ತಕರಾರಿದೆಯಾ? ಎಂಬುದಷ್ಟೇ ಮುಖ್ಯವಾಗಲಿ. ಸ್ವೀಕರಿಸುವುದು, ಬಿಡುವುದು ನಮ್ಮ ಕೈಲೇ ಇದೆ ತಾನೆ?
- ಪಲ್ಲವಿ ಎಸ್.
@ Pallavi,
ನೀವು ಹೇಳಿದ್ದು ಸರಿ ಅನಮಿಕರಾಗಿ ಬರೆದರೂ ,ಬರೆದ ವಿಷಯ ಚೆನ್ನಾಗಿದ್ದರೆ ಯಾವ ತಕರಾರೂ ಇರಬಾರದು.
ಸ೦ದೀಪ್,
ನಿನ್ ತಲೇಲಿ ಏನೆಲ್ಲಾ ವಿಷಯಗಳು ಹುಟ್ಟುತ್ತವೊ?
’ಅನಾಮಿಕಾ’ ಅನ್ನೋ ಫಿಲ್ಮ್ ಸಿ.ಡಿ. ತ೦ದಿಟ್ಟುಕೊ೦ಡು ಆರು ತಿ೦ಗಳಾಗಿತ್ತು. ಇನ್ನೂ ನೋಡಿಲ್ಲ. ನಿನ್ನ ಬ್ಲಾಗಿನಲ್ಲಿ ಅನಾಮಿಕ ಮತ್ತು ಚಿತ್ರ ನೋಡಿದಾಗ, ಸಿನಿಮಾ ಬಗ್ಗೆ ಏನೋ ಬರೆದಿರಬೇಕು ಅ೦ದುಕೊ೦ಡೆ. ಓದಿದರೆ ಬೇರೆ ಇ೦ಟ್ರೆಸ್ಟಿ೦ಗ್ ವಿಷ್ಯ ಇದೆ.
ನನಗೂ ಅಷ್ಟೇ, ನನ್ನ ಹೆಸರನ್ನು ಯಾರಾದರೂ ಶಾರ್ಟ್ ಮಾಡಿ ಕರೆದರೆ ಕೋಪ ಬರ್ತದೆ. ನಾನೂ ಅಷ್ಟೆ ಬೇರೆಯವರನ್ನು ಕರೆಯುವಾಗ ಅವರ ಫುಲ್ ನೇಮ್ ಇಟ್ಕೊ೦ಡೇ ಕರೆಯೋದು.
ಸುಧೇಶ್ ,
ಬಹಳ ಜನರ ಕಂಪ್ಲೇಂಟ್ ಇದೇ !ನಾನು ಏನೋ ಬರೀತೀನಿ ಏನೋ ಚಿತ್ರ ಹಾಕ್ತೀನಿ:)
ಓಹ್ ಇನ್ನೊಂದು ವಿಷಯ ಹೇಳೋಕೆ ಮರೆತೆ ಸುಧೇಶ್,
ನಾನು ನನ್ನ ಬ್ಲಾಗ್ ನಲ್ಲಿ ಬರೆಯೋದೆಲ್ಲ ನನ್ನ ಈಗೋ ತಣಿಸೋಕೆ .ಟೈಂ ಪಾಸ್ ಗೆ .(ಈಗಿಗ ಟೈಂ ಕಡಿಮೆ ಆಗ್ತ ಇದೆ ಇಷ್ಟು ದಿನ ಬಿಡುವಿತ್ತು )
ಸಮಾಜ ಸುಧಾರಣೆ ,ಲೋಕೋದ್ಧಾರದ ಯಾವ ಉದ್ದೇಶವೂ ಇಲ್ಲಿಲ್ಲ.
ಇಲ್ಲಿರೋದೆಲ್ಲ Read and forget ಅಷ್ಟೆ!
ಸಂದೀಪ್, ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ.
ಪಲ್ಲವಿ, ಕಮೆಂಟುಗಳು constructive ಆಗಿದ್ದರೆ ಬಹುಶಃ ಸಂದೀಪ್ ಈ ಲೇಖನ ಬರೆಯುತ್ತಿರಲಿಲ್ಲ. ಆದರೆ ಕೆಲವರು ಅನಾಮಿಕರಾಗಿ ಬಂದು ಇತರರನ್ನು ಬಾಯಿಗೆ ಬಂದಂತೆ ಬಯ್ದು, ನಿಂದಿಸಿ ಬರೆಯುತ್ತಾರೆ. ಅದರಿಂದ ಆ ಲೇಖನ/ಪ್ರತಿಕ್ರಿಯೆಗಳನ್ನು ಬರೆದವರ ಹಾಗೂ ನೋಡುವವರ ಮನಸ್ಸಿಗೆ ಬಹಳ ನೋವಾಗುತ್ತದೆ. ಇಂತಹ ಕಹಿ ಅನುಭವ ನಿಮಗಾಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ನನಗಂತೂ ಆಗಿದೆ.
ha ha Sandeep Kamathare,olleya lekhana.. lokoddharakke bariyolla bari fun ge antha heLid mele tumba regular aagi odutta idde..yaavag neevu dharma mathaanthara antha shuru hachkondri aagle last illi bandiddu..
ee lekhana chennagide, anonymous bloggers/commentators bagge tumba sala maathadidivi ellar hatra, adu avaravara bhaavakke anthaare tiLidavru...
@ Veena,
ಧನ್ಯವಾದಗಳು ಮೆಚ್ಚಿದ್ದಕ್ಕೆ.
ನಾನು ಕಟ್ಟಾ ಹಿಂದೂವಾದಿಯಲ್ಲ.ಮತಾಂತರದಿಂದ ದೇಶದ ಐಕ್ಯತೆಗೆ ತೊಂದ್ರೆ ಆಗುತ್ತೆ ಅಂತ ಮಾತ್ರ ನನಗೆ ಆತಂಕ.
ಇಲ್ಲಾಂದ್ರೆ ಜನ ಏನ್ ಬೇಕಾದ್ರೂ ಮಾಡ್ಲಿ ನಂಗೇನೂ ಪ್ರಾಬ್ಲೆಮ್ ಇಲ್ಲ.
ಹಳೇ ಬರಹಕ್ಕೆ ಹೊಸಾ ಟಿಪ್ಪಣಿ ಹಾಕ್ತಿದ್ದೇನೆ :)
ನಾನು ಏನು ಹೇಳಬಹುದು ಅಂತಿತ್ತೋ ಅದನ್ನ ಪಲ್ಲವಿ ಎಸ್ ಹೇಳಿಬಿಟ್ಟಿದ್ದಾರೆ. ಮತ್ತೆ ಹೇಳಲಾರೆ - ಹಸು ಮೆಲುಕು ಹಾಕಿದ ಹಾಗೆ.
ಬಹುಶ: ಅನಾಮಿಕರಾಗಿ ಹೊರಡುವವರಿಗೆ ಮುಖ್ಯ ಕಾರಣ (ನನಗೂ ಇತ್ತು ಅನ್ನಿ)ನಾನು ಬರೆದದ್ದನ್ನೂ ಯಾರಾದರೂ ಓದುತ್ತಾರಾ ಎನ್ನುವ ಅನುಮಾನ. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೇ" ಎಂದು ಹೇಳುವ ಹಕ್ಕಿಯೂ ಕೂಡ ಬೇರೆ ಹಕ್ಕಿಗಳ ಸುತ್ತಮುತ್ತ ಹಾಡುವುದಕ್ಕೆ ಆಸೆ ಪಡುವ ಹಾಗೆ - ಅನಾಮಿಕ ವಾಗಿ ಬರೆದರೆ ಯಾರಾದರೂ ಓದಿದರೂ ಸರಿ, ಇಲ್ಲದಿದ್ದರೂ ಸರಿ - ಹಾಗೇ ಮುಂದೆ ನಡೆಯಬಹುದಲ್ಲ ಅನ್ನುವ ಭಾವನೆಯೂ ಇರತ್ತೆ ಅನ್ಸತ್ತೆ.
ಯಾರು ಬರೆದರು ಅನ್ನೋದು ಒಂದೊಂದ್ಸಲ ಮುಖ್ಯ ಆಗತ್ತೆ - ಯಾಕಂದ್ರೆ "ಅನಾಮಿಕರಾದವರು" ಒಂದು ಬ್ರಾಂಡ್ ಎಸ್ಟಾಬ್ಲಿಶ್ ಮಾಡ್ಕೊಳೋವರೆಗೆ ಅವರು ಹೇಗೆ ಬರೀತಾರೆ ಅನ್ನೋದು - ಅವರು ಬರೆದದ್ದನ್ನು ಬೇರೆಯವರು ಹೇಗೆ ತೊಗೋತಾರೆ/ಅಥವಾ ಓದೋದೇ ಇಲ್ಲವಾ ಅನ್ನೋದು ಮುಖ್ಯ ಆಗತ್ತೆ. ನಂತರ ನೀವು ಬರೆಯೋ ಬರಹವನ್ನ ಓದೋರು -ನೀವು ಅನಾಮಿಕರೋ ಸನಾಮಿಕರೋ ಗಮನಿಸೋಲ್ಲ. ಅಲ್ವೇ?
-ಹಂಸಾನಂದಿ (not so anonymous anymore :))
ಹೌದು ಸಂದೀಪ್. ಅನಾನಿಮಸ್ಸರಾಗಿ ಬರೆಯೋದು ಭಾಳ ತಪ್ಪು ನೋಡ್ರೀ. ಯಾರೂ ಅನಾನಿಮಸ್ಸರಾಗಿ ಬರೀಕೂಡದು!!!
nice job buddy.. although i really find ti difficult reading aknnada i did read ru blog.. keep up the good job.. well to read ur blog in detail il take days but surely will read.
aaangla bhasheyalli uttarisiddakke kshame yaachisutene
@ 'jashn jaari hai' ,
Thanx dude this comment is speacial for me coz eventhough you u are not comfortable with kannada reading ,you read my blog!
Good !
Post a Comment