Wednesday, October 22, 2008
ಚಂದ್ರಯಾನ -ಚಂದ್ರನತ್ತ ಪಯಣ.
ಚಂದ್ರನತ್ತ ಪಯಣದ ಮೊದಲ ಹಂತ ಯಶಸ್ವಿಯಾಗಿದೆ.ಭಾರತದ ವಿಜ್ಞಾನಿಗಳ ಸಾಮರ್ಥ್ಯವನ್ನು ಜಗತ್ತಿಗೇ ತೋರಿಸುವಲ್ಲಿ ಈ ಯಶಸ್ಸು ತುಂಬಾ ಪ್ರಮುಖ ಪಾತ್ರ ವಹಿಸಿದೆ. ಈ ಯಶಸ್ಸಿನಲ್ಲಿ ಭಾಗಿಯಾದ ಸಮಸ್ತರಿಗೂ ನಮ್ಮ ಅಭಿನಂದನೆ ತಿಳಿಸೋಣ.ಸಾವಿರಾರು ಕೆ.ಜಿ ತೂಕದ ಉಪಕರಣಗಳನ್ನು ಚಂದ್ರ ಮೇಲೆ ಇಳಿಸೋದು ಹುಡುಗಾಟದ ಕೆಲಸವಲ್ಲ.ಇದರ ಹಿಂದೆ ಸಾವಿರಾರು ಜನರ (ಬರೀ ವಿಜ್ಞಾನಿಗಳ ಅಂದ್ರೆ ತಪ್ಪಾಗುತ್ತೆ !) ,ಹಲವಾರು ವರ್ಷಗಳ ಪರಿಶ್ರಮವಿದೆ.
ಸುಮಾರು ಐದು ವರ್ಷಗಳ ಹಿಂದೆ ನನಗೂ ಇಸ್ರೋದ ಬೆಂಗಳೂರು ಶಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದರಿಂದ ಆ ವಿಜ್ಞಾನಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು! ಬಾಹ್ಯಾಕಾಶ ಪ್ರಾಜೆಕ್ಟ್ ಗಳು ಕೆಲಸದ ದೃಷ್ಟಿಯಿಂದ ನೋಡಿದ್ರೆ ತುಂಬಾನೆ ಕಷ್ಟ ಹಾಗೂ risky .ಇಲ್ಲಿ ನಿಮಗೆ ಸಿಗೋದೇ ಒಂದು ಅವಕಾಶ .’ಛೆ! ಅಲ್ಲಿ ಸ್ವಲ್ಪ ಎಡವಟ್ಟಾಗಿತ್ತು ನೆಕ್ಸ್ಟ್ ಟೈಮ್ ಸರಿ ಮಾಡ್ತೀನಿ ’ಅನ್ನೋದಕ್ಕೆ ಇಲ್ಲಿ ಆಸ್ಪದವೇ ಇಲ್ಲ.ಹಾಗಾಗಿ ಇಲ್ಲಿ ಇರುವಷ್ಟು ಚ್ಯಾಲೆಂಜ್ ಬೇರೆ ಯಾವ ವೃತ್ತಿಯಲ್ಲೂ ಇಲ್ಲ ಎಂಬುದು ನನ್ನ ಅನಿಸಿಕೆ.
ಉಡಾವಣೆಯ ಸಂದರ್ಭದಲ್ಲಿ ಉಂಟಾಗುವ ಶಾಖದಿಂದ ಉಪಗ್ರಹವನ್ನು ರಕ್ಷಿಸೋದೆ ಒಂದು ದೊಡ್ಡ ಸಾಹಸ.ಹೀಗಾಗಿ ಉಪಗ್ರಹದಲ್ಲಿ ಉಪಯೋಗಿಸುವ ಒಂದೊಂದು ಬಿಡಿ ಭಾಗವೂ ಅತ್ಯಂತ ದುಬಾರಿ .S.P roadನಲ್ಲಿ ಸಿಗುವ ಮಾಮೂಲಿ ಐದು ರೂಪಾಯಿಯ ಬಿಡಿಭಾಗವೂ ಸ್ಪೇಸ್ ಗ್ರೇಡ್ ನಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ.ಒಂದೇ ಒಂದು ಕಡೆ ಎಡವಟ್ಟಾಯ್ತೋ ಕೋಟ್ಯಾಂತರ ರೂಪಾಯಿ ನೀರುಪಾಲು!ಹಣದ ಮನೆ ಹಾಳಾಗ್ಲಿ ಅಷ್ಟು ವರ್ಷದ ಶ್ರಮ ವ್ಯರ್ಥ ಆಗ್ಬಿಡುತ್ತೆ.
ಅಂದ ಹಾಗೆ ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ಅಧ್ಯಯನ.ಆದ್ರೆ ಅದಕ್ಕಿಂತ ಮುಖ್ಯ ಉದ್ದೇಶ ಚಂದ್ರನಲ್ಲಿರುವ ಹೀಲಿಯಮ್ ನಿಕ್ಷೇಪದ ಬಗ್ಗೆ ತಿಳಿಯೋದು.ಒಂದು ಟನ್ ಹೀಲಿಯಂ ಸಿಕ್ಕಿದ್ರೆ ಒಂದು ವರ್ಷ ವಿದ್ಯುತ್ ಪಡೆಯಬಹುದಂತೆ.ಹೀಲಿಯಮ್ ಇದೆ ಅಂತ ಗೊತ್ತಾದ್ರೆ ನಮ್ಮ ರೆಡ್ಡಿಗಳು ಚಂದ್ರನಲ್ಲೂ ಗಣಿಗಾರಿಕೆ ಶುರು ಮಾಡೋದಂತೂ ಗ್ಯಾರಂಟಿ!
ಇವತ್ತು ನಮ್ಮ ದೇಶದ ಐದು ಉಪಕರಣಗಳಲ್ಲದೆ ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜನ್ಸಿಯ ಆರು ಉಪಕರಣಗಳನ್ನೂ ಕಳಿಸಿದ್ದಾರೆ.ನೋಡಿ ಭಾರತದ ಉಡಾವಣಾ ಸಾಮರ್ಥ್ಯದ ಮೇಲೆ ಬೇರೆ ದೇಶದವರಿಗೂ ಎಷ್ಟು ವಿಶ್ವಾಸವಿದೆ ಅಂತ..
ಇಷ್ಟೆಲ್ಲದರ ನಡುವೆ ಕೆಲವ್ರದ್ದು ಒಂದು ತಕರಾರು! ’ ಸುಮ್ಮನೆ ಚಂದ್ರನ ಮೇಲೆ ಏನೋ ಕಳಿಸೋದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸೋದಕ್ಕಿಂತ ಇದೇ ಹಣವನ್ನು ಬೇರೆ ಒಳ್ಳೆಯ(?) ಕಾರ್ಯಗಳಿಗೆ ಉಪಯೋಗಿಸಬಹುದಿತ್ತು ’ ಅಂತ.
ಅವರಿಗೆ ’ಸಾರ್ ನಿಮ್ಮ ಮಗಳ ಮದುವೇನ ಸಿಂಪಲ್ ಆಗಿ ರಿಜಿಸ್ಟರ್ ಆಫೀಸ್ ನಲ್ಲಿ ಮಾಡಿಸೋದು ಬಿಟ್ಟು ಅದ್ಯಾಕೆ ಧಾಂ ಧೂಮ್ ಅಂತ ಛತ್ರದಲ್ಲಿ ಮಾಡಿಸಿದ್ರಿ ? ’ ಅಂದ್ರೆ ’ಹೆ ಹೆ ಇರೋದು ಒಬ್ಳೆ ಮಗಳು ಕಣ್ರಿ ಅದಿಕ್ಕೆ ’ ಅಂತಾರೆ!!!”
ಇರ್ಲಿ ಬಿಡಿ ಕಾರ್ ಯಾಕೆ ಇಟ್ಕೊಂಡಿದ್ದೀರಾ? ಸಿಂಪಲ್ ಆಗಿ ಬಿ ಎಮ್ ಟಿ ಸಿ ಬಸ್ ನಲ್ಲೆ ಓಡಾಡಬಹುದಲ್ಲ ,ನೀವು ಹಾಕೋ ಪೆಟ್ರೋಲ್ ಕಾಸಲ್ಲಿ ನಾಲ್ಕು ಜನ ಬಡವ್ರು ಊಟ ಮಾಡಬಹುದು ’ಅಂದ್ರೆ ,ಅದಕ್ಕೂ ಅದೇ ಮೀಸೆಯಡಿಯಲ್ಲಿ ಮೋನಾಲೀಸಾ ಸ್ಮೈಲ್ ಕೊಟ್ಟು ’ಬಿ ಎಮ್ ಟಿ ಸಿ ಸಕ್ಕತ್ ರಶ್ಶು ಸಾರ್ ಅದಿಕ್ಕೆ ’ ಅಂತಾರೆ ಯಜಮಾನ್ರು!!!
ಇಂಥ ಉಡಾವಣೆಗಳು ವೈಜ್ಞಾನಿಕ ಸಂಶೋಧನೆಗಳಿಗೆ ಸಹಕರಿಸೋದೇನೋ ನಿಜ ,ಆದ್ರೆ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಷ್ಟೆ ಹೆಚ್ಚಿಸೋದೂ ಅಷ್ಟೇ ಸತ್ಯ.ಪೋಖರಾನ್ ಟೆಸ್ಟ್ ಆದ್ಮೆಲೆ ತಾನೆ ನಾವೇನು ಅಂತ ಬೇರೆಯರಿಗೆ ತಿಳಿದದ್ದು??
ಚಂದ್ರಯಾನದ ಮೊದಲ ಹಂತ ಏನೋ ಯಶಸ್ವಿಯಾಗಿದೆ .ಆದ್ರೆ ಇನ್ನಿರೋದೆ ನಿಜವಾದ ಚ್ಯಾಲೆಂಜ್ .ಕಳಿಸಿರೋ ಎಲ್ಲ ಉಪಕರಣಗಳೂ ಚಂದ್ರ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಅಂತ ದೇವರಲ್ಲಿ ಬೇಡಿಕೊಳ್ಳೋಣ .
ಇಸ್ರೋ ತಂಡದ ಎಲ್ಲರಿಗೂ ಅಭಿನಂದನೆಗಳು.
Subscribe to:
Post Comments (Atom)
8 comments:
nijakku sambramisabekada dina..:-)
ಸಂದೀಪ್, ಲೇಖನ ಚೆನ್ನಾಗಿದೆ. ಅದರಲ್ಲಿ ಪ್ರಸ್ತಾಪಗೊಂಡಿರುವ ವಿಷಯಗಳೂ ಅಷ್ಟೇ ಸೊಗಸಾಗಿವೆ.
ಚಂದ್ರಯಾನ ಕೇವಲ ಸರ್ಕಾರದ ಸ್ವತ್ತಾಗಿ ಉಳಿಯಬೇಕಿಲ್ಲ. ಖಾಸಗಿಯವರ ಸಹಭಾಗಿತ್ವ ಇದ್ದರೆ ಇನ್ನೂ ಉತ್ತಮ. ಏಕೆಂದರೆ, ಸರ್ಕಾರ ಪ್ರತಿಯೊಂದನ್ನೂ ದುಬಾರಿಯಾಗಿ, ತಡವಾಗಿ ಹಾಗೂ ಕಳಪೆಯಾಗಿ ಮಾಡುತ್ತದೆ. ಅವಕಾಶ ದೊರೆತಿಲ್ಲ ಎಂಬ ಒಂದೇ ಕಾರಣಕ್ಕೆ ಖಾಸಗಿ ಸಂಸ್ಥೆಗಳು ದೂರ ಉಳಿಯಬೇಕಿದೆ. ದೂರಸಂಪರ್ಕ ಕ್ಷೇತ್ರದ ಉದಾಹರಣೆಯನ್ನೇ ನೋಡಿ. ಬೇಕೆಂದವರಿಗೆ ಫೋನ್ ಕೊಡಲು ಸರ್ಕಾರ ವಿಫಲವಾಯಿತು. ಖಾಸಗಿ ಕಂಪನಿಗಳಿಗೆ ಅವಕಾಶ ದೊರೆತಾಗ ಭಾರತದ ದೂರಸಂಪರ್ಕ ಕ್ಷೇತ್ರದ ಚಿತ್ರಣವೇ ಬದಲಾಯಿತು. ಇದೇ ಮಾತನ್ನು ದೂರದರ್ಶನ(ಟಿವಿ)ಕ್ಕೂ ಹೇಳಬಹುದು.
ಈಗ ಆ ಕಾಲ ಬಂದಿದೆ ಅನಿಸುತ್ತದೆ.
- ಪಲ್ಲವಿ ಎಸ್.
@ Pallavi,
ಪಲ್ಲವಿ ಇಸ್ರೋ ದ ಎಲ್ಲ ಯಶಸ್ಸುಗಳಲ್ಲೂ ಖಾಸಗಿ ಕಂಪೆನಿಗಳ ಸಹಭಾಗಿತ್ವ ಇದೆ !ಜನರಿಗೆ ಗೊತ್ತಾಗಲ್ಲ ಅಷ್ಟೆ! ಇಸ್ರೋಗಾಗಿ ಬಹಳಷ್ಟು ಖಾಸಗಿ ಕಂಪೆನಿಗಳು ಇಸ್ರೋದಲ್ಲಿಯೇ ಕೆಲಸ ಮಾಡುತ್ತವೆ,ಅವು ಯಾವುದು ಅನ್ನೋದು ಮಾತ್ರ confidential ನಾನು ಹೇಳಲು ಇಚ್ಚೆ ಪಡಲ್ಲ.
ದೇಶಕ್ಕೆ ದೇಶವೇ ಸಂಭ್ರಮಿಸುವ ದಿನ. ಮತ್ತೆ ಮತ್ತೆ ನಮ್ಮ ಶುಭ ಹಾರೈಕೆ. ಅದನ್ನು ಬಿಟ್ಟು ಮತ್ತೆನು....??
ಸಂಭ್ರಮದ ದಿನದಲ್ಲಿ ಸಂತೋಷ ಪಡೋದು ಬಿಟ್ಟು ಇಲ್ಲದ ಸಲ್ಲದ ಮಾತಾಡ್ತಿರೋರನ್ನ ನೋಡಿದ್ರೆ ನನಗಂತೂ ರೇಗಿಹೋಗತ್ತೆ!
ಇವತ್ತಂತೂ ಯಾರೋ ಮಹಾನುಭಾವರು ದಟ್ಸ್ ಕನ್ನಡದಲ್ಲಿ "ಇವರಿಗೆಲ್ಲ ಚಂದ್ರನೇ ಯಾಕೆ ಬೇಕು? ಬೇರೆ ಗ್ರಹಗಳೇ ಇಲ್ವ" ಅನ್ನೋ ಮಾತನ್ನೂ ಆಡಿದಾರೆ. ಅದು ಕುಹಕದ ಮಾತೋ ಅಥವಾ ತಿಳೀದೆ ಆಡೋ ಮಾತೋ ಗೊತ್ತಿಲ್ಲ. ಹೆಜ್ಜೆ ಇಡದೇ ಓಡ್ದೋರುಂಟೇ? ಚಂದ್ರನ್ನ ಬಿಟ್ಟು ನೇರವಾಗಿ ಬೇರೆ ಗ್ರಹಕ್ಕೆ ಹೋಗೋದು ಅಂದ್ರೇನು - ನೆರೆಮನೆ ಬಿಟ್ಟು ದೂರದೂರಿಗೆ ಹೋಗೋ ಪ್ರಯತ್ನ ಮಾಡಿದಹಾಗಾಗಲ್ವಾ?
-ಹಂಸಾನಂದಿ
ಸಂದೀಪ್, ಬರವಣಿಗೆ ಚೆನ್ನಾಗಿದೆ. ಹೀಲಿಯಂ-೩ ನಮಗೆ ಜಾಸ್ತಿ ಸಿಗಲಿ ನಮ್ಮ ದೇಶದ ವಿದ್ಯುತ್ ಸಮಸ್ಯೆ ಸಂಪೂರ್ಣ ನೀಗಲಿ. ಆಗಲೇ ಅಮೇರಿಕಾಗೆ ಭಯವಾಗಿದೆಯಂತೆ! ಇನ್ನಷ್ಟು ಭಯ, ದಿಗಿಲುಂಟು ಮಾಡುವ ಕೆಲಸಗಳನ್ನೂ ನಮ್ಮ ಇಸ್ರೋ ಮಾಡಲಿ ಎಂದು ಹಾರೈಸೋಣ.
ನನ್ನ ಬ್ಲಾಗಿಗೊಮ್ಮೆ ಬನ್ನಿ ಅಲ್ಲಿ ನಿಮಗಿಷ್ಟವಾಗುವ ಫೋಟೋ ಮತ್ತು ಲೇಖನ ಸಿಗಬಹುದು. ಆಂ! ಈಗ ತಾನೆ ನನ್ನ ಬ್ಲಾಗಿಗೆ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ಬನ್ನಿ ಓದಿ ಪ್ರತಿಕ್ರಿಯಿಸಿ.
http://camerahindhe.blogspot.com/
ಮತ್ತೊಂದು ವಿಚಾರ ನನ್ನ ಮತ್ತೊಂದು ಬ್ಲಾಗ್ ಆದ ಕ್ಯಾಮೆರಾ ಹಿಂದೆ" ನಲ್ಲಿ ಒಂದು ಹೊಸ ವಿಚಾರದ ಬಗ್ಗೆ ಲೇಖನಗಳಿವೆ. ನೀವು ಓದಿ ವಿಭಿನ್ನವೆನಿಸಬಹುದು. ಬ್ಲಾಗ್ ವಿಳಾಸ:
http://camerahindhe.blogspot.com/
abhinandanegaLu ISROge mattu alli kelsa maDiddakke nimagu kooda. navella hemme paDo sadhane idu.
ಸ೦ದೀಪ್,
ಓದಿ ಖುಷಿಯಾಯಿತು ಮತ್ತು ಗೊತ್ತಿಲ್ಲದ ಕೆಲವು ವಿಷಯಗಳೂ ತಿಳಿದವು.
ನಿನಗೆ ಖಗೋಳದ ಬಗ್ಗೆ ಆಸಕ್ತಿ ಇದ್ದರೆ, ಈ ಬ್ಲಾಗಿಗೆ ಭೇಟಿ ನೀಡು. ನನ್ನ ಗೆಳೆಯನ ಬ್ಲಾಗ್... ಖಗೋಳದ ಬಗ್ಗೆ ಹುಚ್ಚುಹಿಡಿಸುವಷ್ಟು ಪ್ರೀತಿ ಅವನಿಗೆ ಮತ್ತು ಅವನಿಗೆ ಅದರ ಬಗ್ಗೆ ಹೆಚ್ಚೇ ತಿಳಿದಿದೆ.
http://ekhagola.blogspot.com/
Post a Comment