Wednesday, November 19, 2008

ತಂತ್ರೋಪದೇಶ !



’ಚುರುಮುರಿ ’ ಬ್ಲಾಗ್ ತಂಡ ಮೊನ್ನೆ ಮಕ್ಕಳ ದಿನಾಚರಣೆಯಂದು ಒಂದು ಸ್ಪರ್ಧೆ ನಡೆಸಿತ್ತು.

"Children's Day Caption Contest " ಅಂತ!

ದೇವೇಗೌಡರು ಮತ್ತೆ ಕುಮಾರಸ್ವಾಮಿಯ ಫೋಟೋ ಗೆ ಒಂದು caption ನೀಡೋ ಸ್ಪರ್ಧೆ ಅದು.

ಅದರಲ್ಲಿ ನನ್ನನ್ನು ವಿಜೇತ ಅಂತ ಘೋಷಿಸಿದ್ದಾರೆ :)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಸ್ಪರ್ಧೆಯ ಬಹುಮಾನವಾಗಿ ದೇವೇಗೌಡರ ರಾಜಕೀಯ ’ತಂತ್ರೋಪದೇಶ’ದ ಕೋರ್ಸ್ ಗೆ ಉಚಿತ ನೋಂದಾವಣೆ!

Photo Courtesy : http://churumuri.wordpress.com

16 comments:

shivu.k said...

ಸಂದೀಪ್ ಕಾಮತ್,

ಸಮಯೋಜಿತವಾಗಿ ಇವರಿಬ್ಬರ[ ನಟನೆಯ] ಫೋಟೊ ಚೆನ್ನಾಗಿ ತೆಗೆದಿದ್ದೀರಿ. ಅದಕ್ಕೆ ತಕ್ಕಂತೆ ಶೀರ್ಷಿಕೆ ಕೂಡ ತುಂಬಾ ಚೆನ್ನಾಗಿದೆ. ಓದಿ ಮತ್ತು ಫೋಟೊ ನೋಡಿ ನನಗೆ ನಗುಬಂತು. ಒಳ್ಳೆಯ ಚಿತ್ರಕ್ಕೆ ಹಾಗೂ ಶೀರ್ಷಿಕೆಗೆ ತಕ್ಕ ಬಹುಮಾನ ಬಂದಿರುವುದಕ್ಕೆ ನಿಮಗೆ ಅಭಿನಂದನೆಗಳು.
ಹಾಗೆ ನನ್ನ ಬ್ಲಾಗಿನಲ್ಲಿ ಮತ್ತಷ್ಟು ಹೊಸ ಟೋಪಿಗಳು ಬಂದಿವೆ ಬಿಡುವು ಮಾಡಿಕೊಂಡು ಬನ್ನಿ.

ಸುಧೇಶ್ ಶೆಟ್ಟಿ said...

ಕ೦ಗ್ರಾಟ್ಸು...:)

ಒಳ್ಳೆಯ ಶೀರ್ಷಿಕೆ!

ಸಂದೀಪ್ ಕಾಮತ್ said...

ಅಯ್ಯೋ ಶಿವು ಫೋಟೋ ನಾನು ತೆಗೆದದ್ದಲ್ಲ!
ಬರೀ ಶೀರ್ಶಿಕೆ ಇಡೋ ಸ್ಪರ್ಧೆ ಅದು:) ಅದಿಕ್ಕೆ ಫೋಟೋ ಸೌಜನ್ಯ ’ಚುರುಮುರಿ ’ ಅಂತ ಹಾಕಿರೋದು.

ಧನ್ಯವಾದಗಳು ಶಿವು,ಸುಧೇಶ್.

ವಿ.ರಾ.ಹೆ. said...

aittalakadi !!

olle Talentu nimdu :)

ಸಂದೀಪ್ ಕಾಮತ್ said...

ಥ್ಯಾಂಕ್ಸ್ ವಿಕಾಸ್.

ನಂದೇನಿಲ್ಲ ಟ್ಯಾಲೆಂಟು ಎಲ್ಲಾ ದೇವೇಗೌಡ್ರ ಆಶೀರ್ವಾದ:)

VENU VINOD said...

ಕಾಮತರೇ,
ಹಹ್ಹಹ್ಹ ನಿಮ್ಮ ತಲೆ ಚೆನ್ನಾಗಿಯೆ ಓಡಿದೆ ಮಾರಾಯ್ರೇ.
ಒಳ್ಳೆ ಶೀರ್ಷಿಕೆ....ಅಂತೂ ಗೌಡ್ರು ನಿಮಗೂ ಸ್ಫೂರ್ತಿಯಾದ್ರು ಬಿಡಿ :)
ಫೋಟೋಗ್ರಾಫರ್‍ ಯಾರೇ ಇರಲಿ ಅವರಿಗೂ ಒಂದು ಹ್ಯಾಟ್ಸಾಫ್

ಶಾಂತಲಾ ಭಂಡಿ (ಸನ್ನಿಧಿ) said...

ಸಂದೀಪ್ ಕಾಮತ್ ಅವರೆ...

ಅಭಿನಂದನೆಗಳು.
ಚಂದ ಹೊಂದುವ ಶೀರ್ಷಿಕೆ :-)

Anonymous said...

Congrats da.
perfect shirshike. Liked other three captions too.
what other hidden talents do u possess.
:-)
malathi S

ಚಿತ್ರಾ ಸಂತೋಷ್ said...

ಅಭಿನಂದನೆಗಳು...ಅಂದಹಾಗೇ ..ನಿಮ್ಮ ಟಾಲೆಂಟೂ ದೇವೇಗೌಡ್ರ ಆಶೀರ್ವಾದ ಅಂದ್ರೆ ಹೇಗೇ?..
-ಚಿತ್ರಾ

ಸಂದೀಪ್ ಕಾಮತ್ said...

ಧನ್ಯಾದಗಳು ವೇಣು,ಶಾಂತಲಾ,ಚಿತ್ರಾ ,ಮಾಲತಿ.

ಮಾಲತಿಯವರೇ hidden talents are meant to be hidden!

ಚಿತ್ರಾ ದೇವೇಗೌಡರಿಲ್ಲದಿದ್ದರೆ ನಾನು ಈ ಸ್ಪರ್ಧೆ ಗೆಲ್ಲೋದಿಕ್ಕೆ ಆಗ್ತಾ ಇರ್ಲಿಲ್ಲ ಅಲ್ವ ಅದಿಕ್ಕೆ ದೇವೇಗೌಡ್ರ ಆಶೀರ್ವಾದ!

Jagali bhaagavata said...

ಕಂಗ್ರಾಟ್ಸ್ ಸಂದೀಪ್. ಮತ್ತೆ ನಮಗೆಲ್ಲ ಪಾರ್ಟಿ ಯಾವಾಗ?

ಸಂದೀಪ್ ಕಾಮತ್ said...

ಭಾಗವತರೇ ,

ದೇವೇಗೌಡ್ರ ಬಳಿ ಪಾರ್ಟಿಯ ಬಗ್ಗೆ ಪ್ರಸ್ತಾವಿಸಿದೆ.
ಈ ಭಾನುವಾರ ಪ್ಯಾಲೇಸ್ ಗ್ರೌಂಡ್ ಬುಕ್ ಮಾಡಿ ಪಾರ್ಟಿ ಮಾಡೋಣ ಅಂದಿದ್ದಾರೆ.

ಯಾವುದಕ್ಕೂ ಸರಿಯಾದ ದಿನಾಂಕವನ್ನು ಅವರ ಬಳಿ ಮತ್ತೊಮ್ಮೆ ಚರ್ಚಿಸಿ ತಿಳಿಸುತ್ತೇನೆ ನಿಮಗೆಲ್ಲ!

Jagali bhaagavata said...

ಭಾನುವಾರ ಮಾಡಿ ಎಂತ ಪ್ರಯೋಜನ, ಕಾಮತರೇ? ಸೋಮವಾರ ಬೆಳಿಗ್ಗೆನೋ, ಸಂಜೆನೋ, ಆಫೀಸು, ಶಾಲೆ ಬಿಡುವ ಸಮಯದಲ್ಲಿ ಮಾಡಿ. ಆಗ ಬೇಸತ್ತ ಜನ "ಇದು ಕಾಮತರದ್ದೇ ಕಿತಾಪತಿಯಲ್ದಾ ಹಾಗಾದ್ರೆ" ಅಂತ ನಿಮ್ಮ ಗುಣಗಾನ ಮಾಡ್ತಾರೆ :-)...ಆದ್ರೂ ಮೊದ್ಲು ನೀವು ಒಂದು ಮಾತು ಶಂಕರ ಬಿದರಿಯವರಿಗೆ ಹೇಳಿಡುವುದು ಒಳ್ಳೆಯದು. ಏನಂತೀರಾ? :-)

ಸಂದೀಪ್ ಕಾಮತ್ said...

ದೇವೇಗೌಡ್ರಿಗಿಂತ ನಿಮ್ಮ ಬಳಿಯೇ ತಂತ್ರ’ಜ್ಞಾನ’ ಜಾಸ್ತಿ ಇರೋ ಹಾಗಿದೆ!

ನಿಮ್ ಬಳಿಯೇ ಬರ್ತೀನಿ ನೆಕ್ಸ್ಟು ಟ್ರೈನಿಂಗ್ ಗೆ:)

Shree said...

Congrats! ಅಧಿಕೃತವಾಗಿ ನಮ್ಮ ಪಕ್ಷಕ್ಕೆ ತಾವು ಕಾರ್ಯಕರ್ತರಾಗುವ ದಿನ ದೂರವಿಲ್ಲ ಅಂತಾಯಿತು! :P ಬನ್ನಿ ಬನ್ನಿ, ನಿಮ್ಮಂತವರು ನಮಗೆ ಬೇಕಾಗಿದ್ದಾರೆ, ಕುರಿ ಕೊಬ್ಬಿದಷ್ಟು ಕಟುಕನಿಗೇ ಲಾಭ!

ಸಂದೀಪ್ ಕಾಮತ್ said...

ಶ್ರೀ ,
ಧನ್ಯವಾದಗಳು.