Saturday, December 26, 2009

ಶಿಶಿರದ ಜೊತೆಯಲಿ ತ್ರೀ ಈಡಿಯಟ್ಸ್...


ಈ ಶುಕ್ರವಾರ ಮೂರು ಚಲನಚಿತ್ರ ನೋಡಿದೆ !

ಬೆಳಗಿನ ಶೋ ’ಶಿಶಿರ’.ಮ್ಯಾಟನಿ ಶೋ ’ಮಳೆಯಲಿ ಜೊತೆಯಲಿ’ ರಾತ್ರಿ ಶೋ ’ತ್ರೀ ಈಡಿಯಟ್ಸ್’!!!

’ಶಿಶಿರ’ ತುಂಬಾ ಉತ್ತಮ ಪ್ರಯತ್ನ.ಛಾಯಾಗ್ರಹಣ,ನಿರ್ದೇಶನ,ಸಂಗೀತ, ನಾಯಕ ಯಶಸ್ ನ ನಟನೆ ಎಲ್ಲವೂ ಚೆನ್ನಾಗಿತ್ತು.ಚಿತ್ರಕಥೆಯೊಂದನ್ನು ಬಿಟ್ಟು:( ಸಸ್ಪೆನ್ಸ್ ಚಿತ್ರಕ್ಕಿರಬೇಕಾದ ಕೆಲವು ಅಂಶಗಳು ಕಡಿಮೆ ಆಗಿದ್ದೇ ಎಡವಟ್ಟು.ನಿರ್ದೇಶಕರು ಮುಂದಿನ ಪ್ರಯತ್ನದಲ್ಲಿ ಖಂಡಿತ ಯಶಸ್ವಿಯಾಗ್ತಾರೆ ಅನ್ನೋ ಭರವಸೆ ನನಗಿದೆ.

ಬಹುನಿರೀಕ್ಷಿತ ’ತ್ರೀ ಈಡಿಯಟ್ಸ್ ’ ಮಾತ್ರ ನಿರೀಕ್ಷೆಗೆ ಮೀರಿ ಚೆನ್ನಾಗಿದೆ.ತುಂಬಾನೇ ಖುಷಿ ಕೊಟ್ಟಿತು ಇಡೀ ಚಿತ್ರ.ಒಂದೇ ಒಂದು ನಿಮಿಷ ಬೋರ್ ಹೊಡೆಸಿಲ್ಲ.ಅದ್ಭುತ ನಿರ್ದೇಶನ,ಅದ್ಭುತ ಕಥೆ,ಅದ್ಭುತ ಹಾಡುಗಳು ಹಾಗೆಯೇ ತುಂಬಾ ಒಳ್ಳೆಯ ಸಂದೇಶ.

ಬೊಮನ್ ಇರಾನಿ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.ಬಾಡಿ ಲ್ಯಾಂಗ್ವೇಜ್ ಆಗಲಿ,ಡೈಲಾಗ್ ಡೆಲಿವರಿಯಾಗಲಿ ಎಲ್ಲವೂ ಸೂಪರ್! ಬೊಮನ್ ರ ನಟನೆ ’ಮುನ್ನಾಭಾಯಿಯ’ ಥರದ್ದೇ ಇರಬಹುದೇನೊ ಅಂದುಕೊಂಡವರಿಗೆ ದೊಡ್ಡ ಅಚ್ಚರಿ ಕೊಡ್ತಾರೆ ಅವರು.

ಚೇತನ್ ಭಗತ್ ರ ಕಾದಂಬರಿಯ ಎಳೆಯನ್ನಷ್ಟೇ ಹಿಡಿದು ಚಿತ್ರ ಮಾಡಿದರೂ ಕಾದಂಬರಿಯ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಂದಿಲ್ಲ ಬದಲಾಗಿ ಸರಿಯಾದ ನ್ಯಾಯ ದೊರಕಿದೆ.ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತೆ ಈ ಚಿತ್ರ.

ಆಮೀರ್ ,ಶರ್ಮನ್ ಜೋಷಿ,ಮಾಧವನ್,ಬೊಮನ್,ಕರೀನಾ ಗೆ ಸರಿ ಸಾಟಿಯಾಗಿ ಓಮಿ ಅನ್ನೊ ನಟ ಅದ್ಭುತವಾಗಿ ನಟಿಸಿದ್ದಾನೆ.ಚಿತ್ರದುದ್ದಕ್ಕೂ ನಕ್ಕು ನಲಿಸುವ ಸಂಭಾಷಣೆಗಳು.

ಶಿಕ್ಷಣ ಬರೀ ಮಾರ್ಕ್ಸ್ ಗಳಿಸೋದಷ್ಟೇ ಕಲಿಸುತ್ತೆ ,ಬದುಕುವುದನ್ನಲ್ಲ!

10 comments:

Shrinidhi Hande said...

fully agree on last sentence

Subrahmanya said...

೧೦ ನೇ ತರಗತಿವರೆಗೂ ರ‍್ಯಾಂಕ್ ಬರುವ ವಿದ್ಯಾರ್ಥಿಯೊಬ್ಬ ೧೧ ನೇ ತರಗತಿಯಲ್ಲಿ ನಪಾಸ್ ಆಗ್ತಾನೆ ಅಂದ್ರೆ ಏನರ್ಥ ಸಂದೀಪ್ ಅವರೇ ?!! ಅಂಕ ಗಳಿಸುವುದು ಮಕ್ಕಳಿಗಿಂತಲೂ ಇಂದು ಪೋಷಕರಿಗೇ ಫ಼್ಯಾಶನ್ ಆಗಿರೋದು ಸತ್ಯ ಅಲ್ವೇ...!! ಕೊನೆ ವಾಕ್ಯಕ್ಕೆ ನಂದೂ ಸಮ್ಮತಿ ಇದೆ

BG said...

adella sari. maleyali hegittu guru?

ಸುಧೇಶ್ ಶೆಟ್ಟಿ said...

ಸ೦ದೀಪ....

ಓಡೆ ಪೋದಿತ್ತ ಮಾರಾಯ? ಮಸ್ತ್ ಅಪರೂಪ ಆತ :)

ಅ೦ದ್.... ಮಳೆಯಲಿ ಜೊತೆಯಲಿ ಎ೦ಚ ಇತ್ತ೦ಡ್... ತೂವೊಲಿಯಾ?

sunaath said...

matinee show ಬಗಗೆ ನೀವು ಏನೂ ಹೇಳಿಲ್ಲ ಅಂದ ಮೇಲೆ, ಅದು ಹೇಗಿದೆ ಎನ್ನುವದು ಅರ್ಥವಾಯಿತು.

Me, Myself & I said...

:)

ಒಳ್ಳೇ ಚಾನ್ಸ್....ಒಂದೇ ದಿನದಲ್ಲಿ ಮೂರು ಚಿತ್ರಗಳು...

ವಿ.ರಾ.ಹೆ. said...

ಹಾಕಿರೋ ಚಿತ್ರ ನೀವೇ ತಯಾರು ಮಾಡಿದ್ದಾ? ಚೆನ್ನಾಗಿದೆ!

Pramod said...

ಈಕಡೆ ತಲೆ ಹಾಕದೆ ದಿನಗಳಾಗಿತ್ತು. ಅ೦ದ ಹಾಗೆ "ಮಳೆಯಲಿ ಜೊತೆಯಲಿ" ಇ೦ಗ್ಲೀಷ್ ನಲ್ಲಿ "ಮಲೆಯಾಳಿ ಜೊತೆಯಲ್ಲಿ" ಅ೦ತಾ ಓದಿದ್ದೆ :D

Pradhan S.P said...

ನೀವು ಸಿನಿಮಾ ಪ್ರಿಯರಾಗಿರುವುದು ಬಹಳ ಸ೦ತೋಷದ ವಿಚಾರ. ಕೊನೆಯ ವಾಕ್ಯ ನೂರಕ್ಕೆ ನೂರು ನಿಜ. By the way, ‘ಅವತಾರ್’ ನೋಡಿದ್ರಾ ?

ಅಹರ್ನಿಶಿ said...

ಸ೦ದೀಪ್,
ಒ೦ದೇ ದಿನದಲ್ಲಿ ಮೂರು ಚಿತ್ರಾನಾ.....ನಿಮ್ಮ ಬ್ರೈನ್ ಚಿತ್ರಾನ್ನ ವಾಗಲಿಲ್ಲವಲ್ಲ ಸದ್ಯ,ಯಾಕ೦ದ್ರೆ ಈಗಿನ ಸಿನಿಮಾಗಳು ಹಾಗೆ ಇರುತ್ತವೆ ಅಲ್ವಾ....ಆದ್ರೂ ಕೊನೆಯ ಸಿನಿಮಾ "ಮೂವರು ಮೂರ್ಖರು" ನೋಡಿದ ಮೇಲೆ ನಿಮಗೆ ರಿಲ್ಯಾಕ್ಸ್ ಆಗಿರಬೇಕು .ತು೦ಬಾ ಇಷ್ಟವಾದ ಸಿನಿಮಾ ನನಗೂ ಕೂಡ.ಮತ್ತೊಮ್ಮೆ ಹ್ಯಾಟ್ರಿಕ್ ಯಾವಾಗ್ ಮಾಡ್ತೀರಾ?ನಿಮಗೊ೦ದು ಬಿರುದು"ಹ್ಯಾಟ್ರಿಕ್ ಪ್ರೇಕ್ಷಕ",ಹೇಗಿದೆ.