~~~~~~~~~~~~~~~~~~~~~~~ಸ್ವಮೇಕ್~~~~~~~~~~~~~~~~~~~~~~
'ರಾಮ್’ ತೆಲುಗಿನ ’ರೆಡಿ’ಯ ರಿಮೇಕ್ ಅಂತೆ. ’ಸೂರ್ಯಕಾಂತಿ’ ತೆಲುಗಿನ ’ಅತಿಥಿ’ಯ ಹಾಗೇ ಇದೆಯಂತೆ.ಗಣೇಶ್ ’ತ್ರೀ ಈಡಿಯಟ್ಸ್ ’ ಮಾಡ್ತಾರಂತೆ.ಈ ಸುದ್ದಿಗಳನ್ನೆಲ್ಲಾ ಕೇಳ್ತಾ ಇದ್ರೆ ನಖಶಿಖಾಂತ ಉರಿಯುತ್ತೆ.ಎಷ್ಟು ಅಂತ ಸಹಿಸೋದು ?
ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ನಮ್ಮ ಕನ್ನಡ ಚಿತ್ರರಂಗದವರು ಅಸಮಧಾನ ವ್ಯಕ್ತ ಪಡಿಸ್ತಾನೆ ಇರ್ತಾರೆ.ಆದ್ರೆ ಅವರಿಗೆ ರಿಮೇಕ್ ಮಾಡಲು ಪರಭಾಷಾ ಚಿತ್ರಗಳೇ ಬೇಕು.
ಮೊನ್ನೆ ಲೂಸ್ ಮಾದನ ಹೊಸ(?) ಚಿತ್ರ ’ರಾವಣ’ದ ಬಗ್ಗೆ ಚಿತ್ರದ ನಿರ್ಮಾಪಕರು ತಮ್ಮ ಅಭಿಪ್ರಾಯ ಹೇಳ್ತಾ ’ತಮಿಳಿನ ಧನುಷ್ ಗಿಂತ ನಮ್ಮ ಯೋಗೇಶ್ ಚೆನ್ನಾಗಿ ಮಾಡಿದ್ದಾನೆ ’ ಅಂದುಬಿಡೋದಾ?ಕನ್ನಡದ ಧನುಷ್ ಅಂತ ಹೆಸರು ಪಡೆದುಕೊಂಡಿದ್ದಕ್ಕೆ ಒಂದರ ಮೇಲೊಂದು ಧನುಷ್ ನ ಚಿತ್ರಗಳನ್ನು ಭಟ್ಟಿ ಇಳಿಸ್ತಾ ಇದ್ದಾನೆ ಯೋಗೀಶ !
ಸಧ್ಯದ ಮಟ್ಟಿಗೆ ಖುಶಿ ಪಡಲು ಒಂದೇ ಕಾರಣ ಚಲನಚಿತ್ರಗಳ ಸಂಗೀತ ! ಸಧ್ಯ ನಮ್ಮ ಸಂಗೀತ ನಿರ್ದೇಶಕರೇ ನಾವೆಲ್ಲಾ ಕೊಂಚ ತಲೆ ಎತ್ತಿ ಗರ್ವದಿಂದ ಓಡಾಡೋ ಹಾಗೆ ಮಾಡಿದ್ದಾರೆ.ಅವರಿಗೆ ಅಭಿನಂದನೆಗಳು.
ಕನ್ನಡ ನಿರ್ದೇಶಕರ ಬಳಿ ಕೇಳಿದ್ರೆ ’ ಕಥೆ ಇಲ್ಲ ಸ್ವಾಮಿ ’ ಅಂತಾರೆ.ನಾವೇನು ಕನ್ನಡದ್ದೇ ಕಥೆ ಬೇಕು ಅಂದಿದ್ದೀವಾ? ಯವುದೋ ಜಪಾನೀಸ್ ಭಾಷೆಯ ಕಥೆಯ ಅಧರಿತ ಚಿತ್ರವನ್ನೂ ಸೂಕ್ತ ತಿದ್ದುಪಡಿ ಮಾಡಿ ಬಳಸಬಹುದು.ಕನ್ನಡದಲ್ಲಿ ಬೇಕಾದಷ್ಟು ಕಥೆಗಾರರಿದ್ದಾರೆ.ಆದರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದೆ ನಮ್ಮ ಅನಿಸಿಕೆ ಆದ್ರೆ ಬೇರೆ ಹಿತ್ತಲಿನ ಗಿಡವನ್ನು ಬಳಸಿ ಮದ್ದು ಮಾಡಿ.ಯಾಕೆ ಮದ್ದನ್ನೆ ತಗೊಂಡು ಬರ್ತೀರಾ?ತಮಿಳು ಕಥೆಯೇ ಬೇಕಿದ್ರೆ ತಮಿಳುನಾಡಿನ ಯಾವುದೋ ಕತೆಯನ್ನೆ ಚಿತ್ರ ಮಾಡಬಹುದು(ಕದಿಯೋದಲ್ಲ,ಕಥೆಗಾರನಿಗೆ ಸೂಕ್ತ ಸಂಭಾವನೆ ಕೊಟ್ಟು!).ಈ ರೀತಿ ಹೇಳಿದ್ರೆ ನಮ್ಮ ಬಳಿ ಅವರಿಗೆ ಕೊಡೋಕೆ ಕಾಸಿಲ್ಲ ಅಂತಾರೆ.
ಎಲ್ಲೋ ಫಾರಿನ್ ಗೆ ಹೋಗಿ ಅಲ್ಲಿ ಪಟ್ಟಾ ಪಟ್ಟಿ ಚಡ್ಡಿ ಹಾಕಿ ಡ್ಯಾನ್ಸ್ ಶೂಟ್ ಮಾಡೋಕೆ ಕಾಸಿದೆ. ಆದ್ರೆ ಕಥೆಗೆ ಕಾಸಿಲ್ಲ!!!
ಏನ್ ಮಾಡೋದ್ ಹೇಳಿ ನಮ್ ಹಣೆ ಬರಹ!
~~~~~~~~~~~~~~~~~~~~~~~ರಿಮೇಕ್~~~~~~~~~~~~~~~~~~~~~~
ಈ ಜನ ಯಾಕೆ ರಿಮೇಕ್ ಬಗ್ಗೆ ಕಿಡಿ ಕಾರ್ತಾರೋ ಗೊತ್ತಿಲ್ಲ ಕಣ್ರಿ!ನೋಡಿ ನಮಗೆ ಎಲ್ಲಾ ಭಾಷೆಗಳು ಅರ್ಥ ಆಗಲ್ಲ.ಹಾಗಾಗಿ ನಾವು ಆ ಭಾಷೆಯಲ್ಲಿ ತಯಾರಾಗಿರೋ ಸಿನೆಮಾ ನೋಡೋ ಸಾಧ್ಯತೆಗಳು ತೀರಾ ಕಮ್ಮಿ.ಅಂಥದ್ದರಲ್ಲಿ ನಮ್ಮ ಚಿತ್ರ ನಿರ್ಮಾಪಕರು ಪಾಪ ಅನ್ಯ ಭಾಷೆಯ ಬರೀ ಹಿಟ್ ಆಗಿರೋ ಚಿತ್ರಗಳನ್ನಷ್ಟೇ ನಮಗೆ ರಿಮೇಕ್ ಮಾಡಿ ತೋರಿಸಿದ್ರೆ ಏನ್ ನಷ್ಟ ಅಂತ ನಂಗೆ ಗೊತ್ತಾಗ್ತಿಲ್ಲ! ಅವರು ಆ ರೀತಿ ಮಾಡಿದ್ರಿಂದಲೇನಮಗೆ ’ಆಟೋಗ್ರಾಫ್’ ,’ಹುಚ್ಚ’ ,ಮುಂತಾದ ಒಳ್ಳೆಯ ಸಿನೆಮಾಗಳು ನೋಡೋಕೆ ಸಾಧ್ಯ ಆಗಿದ್ದು.
ನಮಗೆ ಗೋಬಿ ಮಂಚೂರಿ ತಿನ್ನೋವಾಗ ಅದು ರಿಮೇಕ್ ಅನ್ಸೋದೇ ಇಲ್ಲ! ನೂಡಲ್ಸ್ ತಿನ್ನೋವಾಗ್ಲೂ ’ಅದು ಚೈನಿಸ್ ಆಗಿರ್ಬಹುದು ಆದ್ರೆ ಮಾಡಿರೋದು ನಮ್ಮ ’ಅಡಿಗಾಸ್’ ನವ್ರೇ ತಾನೇ ’ಅಂತ ಬಾಯಿ ಚಪ್ಪರಿಸಿ ತಿಂತೀವಿ.ಯಾಕೆ ಗೋಬಿ ,ನೂಡಲ್ಸ್ ಗಳು ಚೈನೀಸ್ ನಮಗೆ ರಿಮೇಕ್ ಥರ ಅನ್ಸಲ್ಲ?ಹಾಗೇ ನೋಡೋದಕ್ಕೆ ಹೋದ್ರೆ ಕಾಫಿ,ಟೀ ಕೂಡ ನಮ್ಮ ದೇಶದ್ದಲ್ಲ.ಯಾರೋ ಕೊಟ್ಟ ರಿಮೇಕ್ ಸರಕು! ರೇಶ್ಮೆ ಕೂಡ ಎಲ್ಲಿಂದಲೋ ಭಾರತಕ್ಕೆ ಬಂದಿದ್ದು.ಆದ್ರೂ ನಾವು ಅದನ್ನು ಪ್ರೀತಿಯಿಂದಲೆ ಸ್ವೀಕರಿಸಿದ್ದೀವಿ.
ರಿಮೇಕ್ ಚಿತ್ರಗಳ ಬಗ್ಗೆ ಈ ಮುನಿಸು ತರವೇ?
~~~~~~~~~~~~~~~~~~~~~~~ಕಿರಿಕ್~~~~~~~~~~~~~~~~~~~~~~
ಎರಡೂ ನಾನೇ ಬರೆದಿದ್ದು ! ದಯವಿಟ್ಟು ಹೊಡೆಯೋಕೆ ಕೋಲು ಹುಡುಕ್ಬೇಡಿ!
ನಿಮಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿ .
Friday, January 22, 2010
Subscribe to:
Post Comments (Atom)
19 comments:
ಎರಡೂ ಸರಿಯಾಗಿಯೇ ಇದೆ...ಆದ್ರೆ ರೀಮೇಕ್ ನಲ್ಲಿ quality maintain ಮಾಡ್ಬೇಕು ಅಷ್ಟೆ. ಇನ್ನು ಸ್ವಮೇಕ್ ನಲ್ಲಿ ಕನ್ನಡದ ಕಥೆಗಾರರನ್ನು ಉದ್ಧಾರ ಮಡೋ ನಿರ್ಮಾ’ಪಕರು’ ಗಳು
ಸಿಗ್ಬೇಕಲ್ಲಾ...ನೀವು ಹೆಳಿದಂತೆ ವಿದೇಶಕ್ಕೆ ಹೋಗೋಕಾಗುತ್ತೆ...ಕಥೆಗೆ ಮೀನ-ಮೇಷ ಎಣಿಸ್ತಾರೆ...ಧನ್ಯವಾದಗಳು.
very diplomatic...
ನೀವು ಬರೆದ ಎರಡು ಸ್ವಮೇಕ್ +ರಿಮೇಕ್ ಗಳು ಕಿರಿಕ್ ಆಗದೆ ಹೊಡೆಯಲು ಕೋಲು ಹಿಡಿಯುವ ಪ್ರಮೇಯವೇ ಬರಲಿಲ್ಲವಲ್ಲ ಮಾರಾಯರೇ.
ಎರಡೂ ಹೌದು...ಸರಿಯದೆ ನೀವು ಹೇಳಿದ್ದು..
ತಮಿಳು ಮಿತ್ರನೋರ್ವ ನಿನ್ನೆ ತಾನೆ ಚರ್ಚೆ ಮಾಡ್ತಾ ಹೇಳ್ದಾ: ಅವ್ನಿಗೆ ಜಗತ್ತಿನ ಎಲ್ಲಾ ಭಾಷೆಯ ಚಲನಚಿತ್ರಗಳನ್ನ ನೋಡುವ ಹವ್ಯಾಸವಿರುವುದನ್ನ ತಿಳಿಸಿದ.
ಅವನ ಪ್ರಕಾರ, ತಮಿಳಿನಲ್ಲಿ ಸಾಕಷ್ಟು ಜನಪ್ರಿಯವಾಗಿರೋ ಹಣ ಗಳಿಸಿರೋ ಚಿತ್ರಗಳಲ್ಲಿ ಅನೇಕ ಚಿತ್ರಗಳು ಜಪಾನ್, ಚೈನೀಸ್ ಮುಂತಾದ ಅನ್ಯ ಭಾಷೆಯ ಚಿತ್ರಗಳನ್ನ ತಮಿಳಿಗೆ ಅಳವಡಿಸಿದ್ದಾರಂತೆ.
ಇದು ನಾನೇಳಿದ್ದಲ್ಲ, ನನ್ನ ತಮಿಳು ಮಿತ್ರ ಹೇಳಿದ್ದು :)
FM ನಲ್ಲಿ ಒಂದು ಕನ್ನಡ ಜಾಹೀರಾತಿನಲ್ಲಿ "ಏನ್ ಗುರು ತೆಲುಗು film producer ಥರ ಆಗಿಬಿಟ್ಟೀದೀಯಾ.. ಏನ್ ಲಾಟರಿ ಹೊಡೀತಾ?" ಅನ್ನೋದನ್ನ ಕೇಳಿದಾಗ ಮಾತ್ರ ಉರಿಯುತ್ತೆ - ಬೇರೆ ಏನೂ ಸಿಕ್ಕಿಲ್ವ ಇವರಿಗೆ ಸಿರಿವಂತಿಕೆ ಹೊಲಿಸೋಕೆ ಅಂತ!
~~~~~~~
ಅಡಿಗಾಸ್ ಅವರು ಗೋಬಿ ಮಂಚೂರಿಯನ್ನು ಗೋಬಿ ಮಂಚೂರಿಯಂತೆಯೇ ಮಾಡಿದ್ರೆ, ಖಂಡಿತ ಇಷ್ಟವಾಗುತ್ತೆ ! ಆದ್ರೆ ಅತ್ತ ಮಂಚೂರಿಯೂ ಆಗದೆ ಇತ್ತ ಮಸಾಲೆ ದೋಸೆಯೂ ಆಗದಿದ್ರೆ ಅದು ಕಷ್ಟ !
~~~~~~~
ಎಲ್ಲವೂ ಬೇಕು. ಒಟ್ಟಿನಲ್ಲಿ ಕ್ವಾಲಿಟಿ ಇರ್ಬೇಕು. ಆಗ ಯಾವ ಕಿರಿಕ್ಕೂ ಇರೋಲ್ಲ
ಸ್ವಮೇಕ್ ಆಗಲೀ, ರಿಮೇಕ್ ಆಗಲಿ, ಒಟ್ಟಿನಲ್ಲಿ ಸು-ಮೇಕ್ ಆಗುವದು important!
ಏನೇ ಆದರೂ ಅದರಲ್ಲಿ ನಮ್ಮ ತನ ಉಳಿಸಿಕೊಳ್ಳಬೇಕು ಅಲ್ಲವೇ?
ತಮಿಳ್, ತೆಲುಗಿ೦ದ ಯಥಾತ್ ಭಟ್ಟಿ ಇಳಿಸುವ ಈ ಪರಿ ನೋಡಿ ವಾ೦ತಿ ಬರುತ್ತದೆ. ಸ್ವಲ್ಪ ಕೂಡ ಕ್ರಿಯೇಟಿವಿಟಿ ಇಲ್ಲಾ!
ರೀಮೇಕ್ ಚಿತ್ರಗಳಿಗೆ ಕಡಿವಾಣ ಹಾಕಬೇಕು...
ಸ್ವಮೇಕೋ ರಿಮೇಕೋ ಒಟ್ನಲ್ಲಿ ಕ್ವಾಲಿಟಿ ಇದ್ರೆ ನೋ ಕಿರಿಕ್ !
While reading this article I remembered my school days when I used to write both "for & against the subject debate" and then select which one to present.
ಒಳ್ಳೆಯ ಚಿತ್ರಗಳೂ ಯಾವುದೇ ಭಾಷೆಯಿಂದ ಬೇಕಾದರೂ ಬರಲಿ ಆದರೆ ಆ ಚಿತ್ರ ನಮ್ಮ ನೆಲಕ್ಕೆ ಸರಿ ಹೊಂದುವ ಹಾಗೆ ಇರಬೇಕು..... ಒಳ್ಳೆ ಕಥೆಯನ್ನು ಎಲ್ಲರೂ ನೋಡುವ ಹಾಗೆ ಮಾಡಿದ್ರೆ ಯಾಕೆ ಫ್ಲಾಪ್ ಆಗತ್ತೆ ಅಲ್ಲವಾ........
ನಾನು ಕನ್ನಡಾಭಿಮಾನಿ. ಆದರೆ ಕನ್ನಡ ಸಿನೆಮಾ ನನಗೆ ಹಿಡಿಸುವುದಿಲ್ಲ. ರಾಮ-ಶ್ಯಾಮ-ಭಾಮ ನೋಡೋಣ ಅಂದರೆ ಬೀವಿ ನಂ. ೧ ಅಂತ ತಿಳಿದು ಉತ್ಸಾಹ ತಗ್ಗಿತು. ತೆಲುಗು ಅರ್ಥವಾಗದಿದ್ದರೂ "ಹ್ಯಾಪಿ ಡೇಸ್" ನೋಡಿ ಬಹಳ ಮೆಚ್ಚಿಕೊಂಡಿದ್ದೇನೆ. ಆದರೆ ಕನ್ನಡದಲ್ಲಿ ಜಾಲಿ ಡೇಸ್ ಅರ್ಧ ಗಂಟೆ ನೋಡಲಾಗಲಿಲ್ಲ. ಇಷ್ಟು ಕಾಪಿ ಹೊಡೆಯುವವರಿಗೆ ನಟರನ್ನೂ ಅವರನ್ನೇ ಇರಿಸಿದ್ದರೆ ಏನಿತ್ತು ಅನ್ನಿಸಿತು. ೧೦ ನಿಮಿಷದಲ್ಲಿ ಯಾವ ಸಿನಿಮಾದ ಕಾಪಿ ಎಂದು ತಿಳಿಯುತ್ತದೆ. ಎಳ್ಳಷ್ಟೂ ಹೊಸತನವಿಲ್ಲ. ಕಥೆ ಮಾತ್ರ ಕದ್ದರೆ ಸಾಕು. ಇದು ಲೊಕೇಶನ್ ಬಿಡಿ ನಟರ ಹಾವಬಾವಗಳನ್ನೂ ಕಾಪಿಹೊಡೆಯುವುದೆಂದರೆ! ಸಿನಿಮಾಗಳಿಗೆ ಕಾಪಿರೈಟ್ ಮಾಡುವುದು ಒಳ್ಳೆಯದೇನೋ...
ನಿಮ್ಮ ಸ್ವಮೇಕ್ ರಿಮೇಕ್ ಬರಹಕ್ಕೆ ಪಂಚ್ ಲೈನ್ ಅನ್ನೋ ತರಹದ ಕಿರಿಕ್ ಸುದ್ದಿ ಬಂದಿದೆ ನೋಡಿ...
ಇತ್ತೀಚಿಗೆ 'ಪೋಲಿಸ್ ಕ್ವಾರ್ಟ್ರಸ್' ಫಿಲ್ಮ್ ಬಂದಿತ್ತಲ್ಲ, ಅದು ಸ್ವಮೇಕ್ ಆದರೂ ರಿಮೇಕ್ ಅಂತ ಕಿರಿಕ್ ಆಗಿದೆಯಂತೆ.
ಯಾಕಂದ್ರೆ ಆ ಚಿತ್ರ ಕನ್ನಡ ತಮಿಳು ಎರಡರಲ್ಲೂ ಒಟ್ಟಿಗೆ ತಯಾರಿಸಿದ್ರು ರಮೇಶ್ ... ಆದ್ರೆ ಅವ್ರ ತಮಿಳು ಫಿಲ್ಮ್ ಮೊದ್ಲು ಸೆನ್ಸಾರ್ ಆಗಿದೆಯಂತೆ.
ಎರಡೂ ಚಿತ್ರ ಅವರದ್ದೇ ಆದರೂ ಸಹ ಮೊದ್ಲು ಸೆನ್ಸಾರ್ ಆಗಿರೋದು ತಮಿಳು ಅವತರಣಿಕೆ. ಹಾಗಾಗಿ ಕನ್ನಡದ್ದು ರಿಮೇಕ್ ಅಂತ ಆಗುತ್ತಂತೆ ...
ಹೇಗಿದೆ ನೋಡಿ ಸ್ವಮೇಕ್ -ರಿಮೇಕ್ ಕಿರಿಕ್.... :-)
I am still struggling to find how exactly you type in kannada here.. anyways I just wanted to express my feelings on this..
Remake or kirik or "swa"make the movie should be watchable. When I saw "Aaptha Mitra" I never bothered whether it is remake or not.. another classic example "Raamachaari" and a lot of others.. Remake or kirik or whatever they are good and certainly watchable multiple times.
But I cant say same about "Pakkad mane Hudugi" :) or some cheap copies of Govinda movies by Jaggesh.
So at the end of the day "WATCHABILITY" is the thing that counts.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು :)
ಅಟೊಗ್ರಾಫ್ ಹುಚ್ಚ ನಂಥ ಒಳ್ಳೇ ಚಿತ್ರಗಳು ರಿಮೇಕನಿಂದ ಬಂದದ್ದೇ ಅಂತ ಒಪ್ಕೊಬಹುದು... ಆದ್ರೂ ನಮ್ಮ ಫಿಲ್ಮಗಳೂ ಹೀಗೆ ಹಿಟ್ ಆಗಿ, ಬೇರೆ ಕಡೆ ರಿಮೇಕ್ ಆಗ್ಲಿ ಅಂತ ಮನಸಲ್ಲಿ ಯಾವಾಗ್ಲೂ ಇರತ್ತೆ... ಏನೊ ಒಂದೊ ಒಳ್ಳೇ ಹಾಡು ಕೇಳ್ತಾ ಇದ್ದಂಗೇ ಇದು ತೆಲಗು, ತಮಿಳೊ ಯಾವುದೊ ಫಿಲಂ ಟ್ಯೂನ್ ಅಂತಿದ್ದಂಗೆ ಕೇಳೊಕೆ ಮನಸಿಲ್ಲದಾಗಿ ಬಿಡ್ತದೆ... ನಮ್ಮೊರೂ ಒಂದು ಒಳ್ಳೇ ಫಿಲ್ಮ್ ಮಾಡ್ಲಿ ಹೆಸರು ಮಾಡ್ಲಿ ಅಂತ ಆಸೆ. ಅದಕ್ಕೇ ಏನೊ ಮುಂಗಾರುಮಳೆ ಹಿಟ್ ಆದಾಗ ಹೆಮ್ಮೆ ಅನಿಸಿದ್ದು...
neevu tumba chennagi bariteera, naijavagi
Post a Comment