Sunday, March 14, 2010

ಬದುಕು ಎತ್ತಿನ ಬಂಡಿ...

ಕನ್ನಡದ ಒಂದು ಪ್ರಸಿದ್ಧ ಟಿ.ವಿ ವಾಹಿನಿಯೊಂದಕ್ಕೆ ’ಬದುಕು ಎತ್ತಿನ ಬಂಡಿ’ ಅನ್ನೋ ರಿಯಾಲಿಟಿ ಶೋ ಒಂದನ್ನು ನಿರ್ಮಿಸುವ ಸಲುವಾಗಿ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿರೂಪಕಿ:ಈ ಹುದ್ದೆ ಕೇವಲ ಮಹಿಳೆಯರಿಗೆ ಮೀಸಲು.ಪುರುಷರೇ ದಯವಿಟ್ಟು ಕ್ಷಮಿಸಿ.ನೀವು ಕೇವಲ ರಾಜಕಾಣಿಗಳ ಪಿತ್ತ ನೆತ್ತಿಗೇರೋ ಅಂಥ ಪ್ರಶ್ನೆಗಳನ್ನು ಕೇಳಿ ಕೇಳಿ ಜನರ ಪಿತ್ತವೂ ನೆತ್ತಿಗೇರೋ ಹಾಗೆ ಮಾಡಿದ್ದರಿಂದ ನಿಮ್ಮನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.ಇಲ್ಲಿ ಏನಿದ್ದರೂ ಭಾವನೆಗಳನ್ನು ಕೆದಕೋ ,ಕೆದಕಿ ಕೆದಕಿ ಕಣ್ಣೀರು ತರಿಸೋ ನಿಷ್ಣಾತರ ಅಗತ್ಯವಿದೆ.
ನಿರೂಪಕಿಯರು ಮಾಜಿ ಚಿತ್ರ ನಟಿಯರಾಗಿದ್ದಲ್ಲಿ ಆದ್ಯತೆ.ಗ್ಲಿಸರಿನ್ ಹಾಕದೆ ಅಳುವ ಸಾಮರ್ಥ್ಯವಿದ್ದಲ್ಲಿ ಅದು ಪ್ಲಸ್ ಪಾಯಿಂಟ್.ವೀಕ್ಷಕರನ್ನು ಅಳಿಸಲು ಗ್ಲಿಸರಿನ್ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದದ್ದರಿಂದ ಆ ಕೆಲಸವನ್ನು ನಿರೂಪಕಿಯರೇ ಮಾಡತಕ್ಕದ್ದು.

ಈ ಕಾರ್ಯಕ್ರಮದಲ್ಲಿ ಮಾಮೂಲಾಗಿ ಎರಡು ಕುಟುಂಬದವರನ್ನು ಕರೆಸಿ ಜಗಳ ಮಾಡಿಸಲಾಗೋದ್ರಿಂದ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಗೊತ್ತಿರಬೇಕು.ಎರಡು ಕುಟುಂಬದ ಜಗಳಗಂಟಿ ಹೆಂಗಸರು ಪರಸ್ಪರ ಜಡೆ ಎಳೆದು ಜಗಳವಾಡೋ ಸಮಯದಲ್ಲಿ ನಿಧಾನಕ್ಕೆ ಯಾರಿಗೂ ಕಾಣದೆ ಎಸ್ಕೇಪ್ ಆಗೋ ಕಲೆ ತಮಗೆ ಗೊತ್ತಿದ್ರೆ ಅದು ಪ್ಲಸ್ ಪಾಯಿಂಟ್.ಗೊತ್ತಿಲ್ಲದೇ ಇದ್ದರೂ ಪರ್ವಾಗಿಲ್ಲ ಆ ಬಗ್ಗೆ ತರಬೇತಿ ನೀಡಲಾಗುವುದು.

ಸ್ಕ್ರಿಪ್ಟ್ ಲೇಖಕರು
: ಕೌಟುಂಬಿಕ ಕಲಹದ ಬಗ್ಗೆ ಕಥೆ,ಕಾದಂಬರಿ ಬರೆದಿದ್ದರೆ ಆದ್ಯತೆ.ಎರಡೂ ಕುಟುಂಬದ ಇಡೀ ಕಥೆಯನ್ನು ನಿಮಗೆ ವಿವರಿಸಲಾಗುವುದು.ಆ ಮಾರುದ್ದ ಕಥೆಯಲ್ಲಿ ಸ್ಟೂಡಿಯೋದಲ್ಲಿ ಜಗಳ ಮಾಡಿಸಬಲ್ಲ ಅಂಶಗಳನ್ನು ನೋಟ್ ಮಾಡಿ,ಅಂಥ ಪ್ರಶ್ನೆಗಳನ್ನು ಮಾತ್ರ ನಿರೂಪಕಿಯರು ಕೇಳೋ ಹಾಗೆ ಸ್ಕ್ರಿಪ್ಟ್ ಬರೆಯಬೇಕಾಗಿರೋದು ನಿಮ್ಮ ಕೆಲಸ.ಈ ಕೆಲಸ ತುಂಬಾ ಚ್ಯಾಲೆಂಜಿಂಗ್!ಒಂದು ವೇಳೆ "ಪರ್ವಾಗಿಲ್ವೆ ಇವರ ಸಂಸಾರ ಚೆನ್ನಾಗಿದೆ " ಅನ್ನೋ ಭಾವನೆ ಬರೋ ಅಂಥ ಅಂಶಗಳೇನಾದ್ರೂ ಇದ್ರೆ ಅದನ್ನು ಹುಷಾರಾಗಿ ಸ್ಕ್ರಿಪ್ಟ್ ನಿಂದ ತೆಗೆದು ಹಾಕಬೇಕಾಗುತ್ತದೆ.ನೀವೇನಾದ್ರೂ ’ಬಾಬಾ ಬಾಂಡು ’ ಅಥವ ’ಚಿಲ್ಲಿ ಚಲ್ಲಿ’ ಅಂಥ ಸೀರಿಯಲ್ ಗಳಿಗೇನಾದ್ರೂ ಕೆಲಸ ಮಾಡಿದ್ದಲ್ಲಿ ದಯವಿಟ್ಟು ಅರ್ಜಿ ಗುಜರಾಯಿಸದಿರಿ.ಇಲ್ಲಿ ನಗಿಸುವವರಿಗೆ ಕೆಲಸವಿಲ್ಲ.

ಕ್ಯಾಮರಾಮ್ಯಾನ್(ವುಮನ್):ಇದು ಕಾರ್ಯಕ್ರಮದ ಅತ್ಯಂತ ಜವಾಬ್ದಾರಿಯುತ ಕೆಲಸ.ಇಡೀ ಕಾರ್ಯಕ್ರಮದ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ.ಇಡೀ ಕಾರ್ಯಕ್ರಮದಲ್ಲಿ ನಿರೂಪಕಿಯ ಕಣ್ಣಿರನ್ನು ಮಾತ್ರವಲ್ಲದೇ ಅಲ್ಲಿಗೆ ಬಂದ ವೀಕ್ಷಕರ ಕಣ್ಣೀರನ್ನೂ ಸೆರೆ ಹಿಡಿಯಬೇಕಾಗುತ್ತದೆ.ಜಗಳಗಂಟಿ ಹೆಂಗಸರು ಜಡೆ ಎಳೆಯೋ ದೃಶ್ಯವನ್ನು ಮಾತ್ರ ಅತ್ಯಂತ ನೈಜವಾಗಿ ಚಿತ್ರಿಸಬೆಕಾಗುತ್ತದೆ.ಅಕಸ್ಮಾತ್ ಯಾರಾದ್ರೂ ಪಿತ್ತ ನೆತ್ತಿಗೇರಿ ನಿರೂಪಕಿಯರಿಗೇನಾದ್ರೂ ಹೊಡೆಯಲು ಹೋದ್ರೆ ಅದನ್ನು ಚಿತ್ರಿಸತಕ್ಕದ್ದಲ್ಲ.ಕೆಲವು ಗಂಡಸರು ಸ್ಪೂರ್ಥಿಗಾಗಿ ಎರಡು(ಅಂದಾಜು) ಪೆಗ್ ಏರಿಸಿ ಬಂದಿದ್ರೆ ಅವರಿಂದ ಹುಷಾರಾಗಿರತಕ್ಕದ್ದು.ಅವರು ಮುನಿದು ನಿಮ್ಮ ಕ್ಯಾಮೆರಾ ಮೆಲೇರಿ ಬಂದರೆ ,ಕ್ಯಾಮೆರಾ ಹಾನಿಗೊಳಗಾದೇ ಅದನ್ನು ರಕ್ಷಿಸೋ ಜವಾಬ್ದಾರಿ ನಿಮ್ಮದೇ!

ಹಿನ್ನೆಲೆ ಸಂಗೀತ ನಿರ್ದೇಶಕರು:ನಮ್ಮ ಅನುಭವಿ ನಿರೂಪಕಿಯರು ಎಷ್ಟೇ ಕಷ್ಟ ಪಟ್ಟು ತಮ್ಮ ಕೆಲಸ ನಿರ್ವಹಿಸಿದರೂ ,ವೀಕ್ಷಕರ ಕಣ್ಣಲ್ಲಿ ಕಣ್ಣಿರು ಬರಿಸಲು ಹಿನ್ನೆಲೆ ಸಂಗೀತದ ಮಹತ್ವ ಬಹಳ.ಕಣ್ಣೀರು ಹಾಕುವಾಗ ಪಿಟೀಲಿನ ಧ್ವನಿಯನ್ನು ಬಳಸೋದು ಈಗಾಗಲೇ ಬಹಳಷ್ಟು ಯಶಸ್ಸು ಕಂಡಿರೋದ್ರಿಂದ ಸಂಗೀತ ನಿರ್ದೇಶಕರಿಗೆ ಪಿಟೀಲನ್ನು ಅತ್ಯಂತ ಸಮರ್ಪಕವಾಗಿ ಬಳಸಲು ಗೊತ್ತಿರಬೇಕು.ಬರೀ ಪೀಟೀಲಲ್ಲದೆ ಕೊಳಲು,ವೀಣೆ ಇನ್ನಿತರ ಪರಿಕರಗಳಿಂದಲೂ ಕಣ್ಣೀರು ತರಿಸುವ ಪ್ರತಿಭೆ ಇದ್ದಲ್ಲಿ ನಿಮ್ಮ ಆಯ್ಕೆ ಗ್ಯಾರಂಟಿ!

ಆಸಕ್ತರು badukuettinabandi@ettinabandi.com ಗೆ ಅರ್ಜಿ ಸಲ್ಲಿಸುವುದು.

20 comments:

Subrahmanya said...

ರಿಯಾಲಿಟಿ ಶೋಗಳ ಬಂಡವಾಳವನ್ನೇ ಹರಾಜಾಕಿದ್ದಿರಿ ನೀವು !. ನಿಜ, ನೀವು ಹೇಳಿದ್ದು ಕಟು ವಾಸ್ತವ, "ಬದುಕು ರೈಲು ಬಂಡಿ" ಅಂತಾ ಇನ್ನೊಂದು ಬರ್ತಾ ಇದೆ, ರೈಲು ಹತ್ತೋರು ರೆಡಿಯಾಗ್ಬೋದು..:)

sunaath said...

ಸಂದೀಪ,
ರಿಯಾಲಿಟಿ ಶೋಗಳ ತಳಬುಡವೆಲ್ಲ ನಿಮಗೆ ಚೆನ್ನಾಗಿ ಗೊತ್ತಿದೆ. ನೀವೇ ಒಂದು ಶೋ ಮಾಡಿದರೆ, full success!

Unknown said...

ಚೆನ್ನಾಗಿ ಬರ್ದಿದ್ದೀರಾ. ನಿಮ್ಮ ಕಾರ್ಯಕ್ರಮ ನಂ 1 ಆಗೋದು ಗ್ಯಾರಂಟಿ :)

Guruprasad said...

ಹಾ ಹಾ, ಸಂದೀಪ್,,, ತುಂಬಾ ಚೆನ್ನಾಗಿ ವಿವರಿಸಿ ಬರೆದಿದ್ದೀರಿ...ರಿಯಾಲಿಟಿ ಶೋ ಗಳ... ಪೂರ್ಣ ವಿಚಾರ ಮಾಡಿಸಿ ಇದ್ದೀರಾ..... ಎಲ್ಲ ಗೊತ್ತಿದು ಗೊತ್ತಿದು... ಯಾಕೆ ಹೀಗೆ ಮಾಡ್ತಾರೋ ನಮ್ಮ ಟಿವ ರವರು....ಒಂದು ವಿಷಯ ಕ್ಲಿಕ್ ಆದರೆ ಸಾಕು ಅದರ ಬಗ್ಗೆನೇ ಎಲ್ಲರೂ ಶುರು ಮಾಡಿ ಬಿಡ್ತಾರೆ.....
ತುಂಬಾ ಚೆನ್ನಾಗಿ ಇದೆ ನಿಮ್ಮ ಬರಹ .

ಹರೀಶ ಮಾಂಬಾಡಿ said...

ಈ ಬಂಡಿ ತಪ್ಪಿದರೆ ಪುನರ್ಜನ್ಮ ಇದೆಯಂತೆ :)

Pramod said...

ನಾನು ಒ೦ದು ಇದರ ಬಗ್ಗೆ ಹೊಗಳಿ, ಜನರಿಗಾದ ಉಪಯೋಗಗಳು ಬಗ್ಗೆ ಬರೋಯೋಣ ಅ೦ತಿದ್ದೆ. ನೀವೆ ಬರೆದಿರಿ ಬಿಡಿ. :) ಈ ಪ್ರೋಗ್ರಾಮ್ಸ್ ನೋಡೋದು ಜೀವನದ ವ್ಯಥೆ.

PARAANJAPE K.N. said...
This comment has been removed by the author.
PARAANJAPE K.N. said...
This comment has been removed by the author.
PARAANJAPE K.N. said...
This comment has been removed by the author.
PARAANJAPE K.N. said...

ಚೆನ್ನಾಗಿದೆ, ರಿಯಾಲಿಟಿ ಷೋ ಗಳ ಮಾನ ಹರಾಜು ಹಾಕಿದ್ದೀರಿ. ರೆಡ್ಡಿಗಳ ಮಾಲೀಕತ್ವದಲ್ಲಿ ಬರಲಿರುವ ಹೊಸ ಚಾನಲ್ ನಲ್ಲಿ ಇ೦ತಹ ಇನ್ನಷ್ಟು ಕ್ರಾ೦ತಿಕಾರಿ ಕಾರ್ಯ ಕ್ರಮ ಹಮ್ಮಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳಲಾಗುವುದು.ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ. ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ.

PARAANJAPE K.N. said...
This comment has been removed by the author.
Shivanand said...

ಸಖತ್ತಾಗಿ ಬರೆದಿದ್ದೀರಾ. ಇಂತಹ ೩ ಕಾರ್ಯಕ್ರಮಗಳು ೩ ವಾಹಿನಿಗಳಲ್ಲಿ ಬರ್ತವೆ. ಮೊದಲೇ ಹಾಡು, ನೃತ್ಯಗಳ ರಿಯಾಲಿಟಿ ಶೋ ಇವೆ. ಜೊತೆಗೆ ಬಂಡಿ, ಜನ್ಮ ಎಲ್ಲಾ. ನೋಡಿದ್ರೆ ಬೇಜಾರಾಗುತ್ತೆ.

V.R.BHAT said...

'ರೈಲನ್ನು' ಹಲವುಕಡೆ ಬಳಸುತ್ತಾರೆ, ಆದರೆ ರಿಯಾಲಿಟಿ ರೈಲನ್ನು ನೋಡಿರಲಿಲ್ಲ,ನೋಡಿ ಸಂತೋಷವಾಯ್ತು !

ಸಾಗರದಾಚೆಯ ಇಂಚರ said...

ಸಂದೀಪ್,
ತುಂಬಾ ಚೆನ್ನಾಗಿ ಹೇಳಿದ್ದಿರಿ
ನಿಮಗೆ ಹಬ್ಬದ ಶುಭಾಶಯಗಳು

Me, Myself & I said...

ಹಿಂದೊಮ್ಮೆ ಇಲ್ಲಿ ಡ್ಯಾನ್ಸ್ ಷೋಗಳ ಬಗ್ಗೆ ನಮಗೆ ಬೆಳಕು ಚೆಲ್ಲಿದ್ದೀರಿ.

ಈಗ ಇ್ಲ್ಲಿ (ಅ)ಪ್ರಸ್ತುತವಾದ ಸಿಲ್ಲಿ ಲಲ್ಲಿಯ ಪಾತ್ರಗಳು ನನಗೆ ಬಲು ಮೆಚ್ಚು.

ಇ ನಿಮ್ಮ ಲೇಖನ ಓದಿ ಒತ್ತಡದಲ್ಲಿದ್ದ ಮನಸ್ಸು ಸ್ವಲ್ಪ ಹಗುರವಾಯಿತು. ಧನ್ಯವಾದಗಳು

ಸಾಗರಿ.. said...

ಬಹಳ ಚೆನ್ನಾಗಿ ರಿಯಾಲಿಟಿ ಷೋ ಬಣ್ಣ ಬಯಲು ಮಾಡಿದ್ದೀರಿ.

Lakshmi Shashidhar Chaitanya said...

glycerine supply maaDo companygaLige tender kariri sir modlu ! adu mukhya !

ನಾನು ನಾನೇ.. said...

naanoo 2 hosa program maadbeku... :-)

1. idu Katte alla Karmaana
2. Mundina janma

Olle artist, script writer yella beku :-)

ಸುಧೇಶ್ ಶೆಟ್ಟಿ said...

oho....e programme na kathe koooda heegena?

shilpa said...

nice sir