Tuesday, May 11, 2010

ಮಕ್ಕಳಲ್ಲದ ಮಕ್ಕಳು!

ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು.

ಮಕ್ಕಳ ಪದ್ಯಗಳ ಸಾಲಿಗೆ ಮತ್ತೊಂದು ಪುಸ್ತಕ ’ಹಲೋ ಹಲೋ ಚಂದಮಾಮ’ ಸೇರ್ಪಡೆ ಯಾಯ್ತು.ಅದನ್ನು ಎಷ್ಟು ಮಕ್ಕಳು ಓದ್ತಾರೆ ಅನ್ನೋದು ಗೊತ್ತಿಲ್ಲ.ಮಕ್ಕಳನ್ನು ಮಕ್ಕಳಾಗಿರಲು ನಾವೂ ಬಿಟ್ಟಿಲ್ಲ .ಅವರಾದರೂ ಪಾಪ ಏನು ಮಾಡಿಯಾರು?

’ಅಜ್ಜನ ಕೋಲಿದು ನನ್ನಯ ಕುದುರೆ’ ಕಾಲ ಹೋಯ್ತು,ಈಗ ಹತ್ತು ರೂಪಾಯಿ ಕೊಟ್ರೆ ಮಕ್ಕಳನ್ನು ನಿಜವಾದ ಕುದುರೆ ಮೇಲೆಯೇ ಕೂರಿಸಬಹುದು.ನಾವು ಬಾಯಲ್ಲೇ ಡುರ್ ಡುರ್ ಅಂತ ಕಾರ್ ಓಡಿಸುತ್ತಾ ಖುಷಿ ಪಡ್ತಿದ್ದ ಕಾಲವೂ ಈಗಿಲ್ಲ.ಮಕ್ಕಳು ಹುಟ್ಟುವಾಗಲೇ ನಿಜವಾದ ಕಾರಲ್ಲೆ ಸುತ್ತಾಡಿ ಬೆಳೆಯುತ್ತಿದ್ದಾರೆ.

ಇಂಥದ್ದರಲ್ಲಿ ನಮ್ಮ ಬಾಲ್ಯದಲ್ಲಿ ನಮಗಿದ್ದದ್ದು ಮುಗ್ಧತೆಯಾ ,ಅಥವ ಅವಕಾಶದ ಕೊರತೆಯಾ ? ಒಂದೂ ತಿಳಿಯುತ್ತಿಲ್ಲ.

ನಾವು ಶಾಲೆಯಲ್ಲಿದ್ದಾಗ ಮಕ್ಕಳ ಡ್ಯಾನ್ಸ್ ಅಂದರೆ ಹತ್ತು ಮಕ್ಕಳಿದ್ದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ ಅಷ್ಟೇ ಚಿಕ್ಕ ಮಕ್ಕಳು ಮೈಕಲ್ ಜಾಕ್ಸನ್ ನ ಸ್ಟೆಪ್ಸ್ ಹಾಕ್ತಾರೆ.ನಮ್ಮ ಹಾಡು ಅಂದರೆ ತಾಳ,ರಾಗ ಯಾವುದೂ ಇಲ್ಲದ ಗದ್ಯ ವಾಚನವಾಗಿತ್ತು.ಈಗ ಪುಟ್ಟ ಮಕ್ಕಳು ಸ್ಟಾರ್ ಸಿಂಗರ್ ಗಳಾಗಿದ್ದಾರೆ.’ಶ್ರೀ ಮಂಜುನಾಥ’ ದ ಕಠಿಣವಾದ ಹಾಡನ್ನು ಹಾಡಿ ಎಸ್.ಪಿ.ಬಿ ಯವರಿಗೇ ನಡುಕ ಹುಟ್ಟಿಸ್ತಾರೆ.

ಅಪ್ಪ ಅಮ್ಮಂದಿರಿಗೆ ಮೊಬೈಲ್ ಬಳಸಲು ಹೇಳಿ ಕೊಡೋದೇ ಮಕ್ಕಳು.ಇಂಟರ್ನೆಟ್ ನಲ್ಲಿ ಆರ್ಕುಟ್ ಬಳಸೋದು ಹೇಳಿ ಕೊಡೋದೂ ಮಕ್ಕಳೇ.ಟಿ.ವಿ ಯಲ್ಲಿ ಪ್ರಸಾರವಾಗ್ತಿರೊ ಸಿನೆಮಾದ ಹೀರೋ ಯಾರು ಅಂತ ಹೇಳೋದೂ ಅದೇ ಪುಟ್ಟ ಮಗು.ಆ ಸಿನೆಮಾದ ಹಾಡನ್ನೂ ಗುಣುಗುಣಿಸೋದು ಅದೇ ಪುಟ್ಟ ಮಗು.

ಪರಿಸ್ಥಿತಿ ಹೀಗಿದ್ದಾಗ ಮಕ್ಕಳಲ್ಲಿ ಮುಗ್ಧತೆಯನ್ನು ಎಲ್ಲಿ ಹುಡುಕೋದು?

ಛಂದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಮುದ್ದು ತೀರ್ಥಹಳಿ ಅನ್ನೋ ಏಳನೇ ಕ್ಲಾಸಿನ ಹುಡುಗಿ ಹೇಗೆ ಮಕ್ಕಳು ಹಳೆಯ ಮಕ್ಕಳ ಪದ್ಯಗಳನ್ನು ಕೇಳಿ ಕೇಳಿ ಬೋರ್ ಆಗಿದ್ದಾರೆ ಅನ್ನೊ ಬಗ್ಗೆ ಮಾತಾಡಿದ್ಲು.ಆದರೆ ಅವಳು ಕೆಂಡಸಂಪಿಗೆಯಲ್ಲಿ ಬರೆದ ಕವಿತೆಗಳನ್ನು ನೋಡಿದ್ರೆ ಅವಳು ಪುಟ್ಟ ಹುಡುಗಿ ಅಲ್ಲ ಅನ್ನೋದು ಗೊತ್ತಾಗಿ ಬಿಡುತ್ತೆ.

ಅದೇ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಹತ್ತನೆ ಕ್ಲಾಸ್ ಹುಡುಗ ಕೀರ್ತಿರಾಜ ಬರೆದಿರೋದು ಬೇಟೆಯ ಬಗೆಗಿನ ಪುಸ್ತಕ!

ಯಾವುದೇ ಪುಟ್ಟ ಮಗುವನ್ನು ಕರೆದು ಒಂದು ಹಾಡು ಹೇಳಪ್ಪ ಅಂದ್ರೆ ಅವನು ’ಧೂಮ್ ಮಚಾಲೇ ’ ಅಥವಾ ’ಝರಾ ಝರಾ ಟಚ್ ಮಿ ಕಿಸ್ ಮಿ ’ ಹಾಡನ್ನು ತಪ್ಪಿಲ್ಲದೆ ಹಾಡ್ತಾನೆ.ಕನ್ನಡ ಹಾಡು ಅಂದ್ರೆ ’ಹೊಡಿ ಮಗ ಹೊಡಿ ಮಗ’ ಹಾಡ್ತಾನೆ .ಇಂಥ ಸನ್ನಿವೇಶದಲ್ಲಿ ಮಕ್ಕಳ ಪದ್ಯ ಯಾರು ಓದ್ತಾರೆ?

ಕೆಲವೊಮ್ಮೆ ಮಕ್ಕಳು ಈ ಪರಿ ಬುದ್ಧಿವಂತರಾಗಿರೋದಕ್ಕೆ ಖುಷಿ ಅನ್ಸುತ್ತೆ.ಆದರೆ ಅದೇ ಸಮಯಕ್ಕೆ ’ಮಗುವಿನಷ್ಟು ಮುಗ್ಧ’ ಅನ್ನೋ ಶಬ್ದದ ಅರ್ಥವೆ ಕಳೆದು ಹೋಗುತ್ತಿದೆಯಲ್ಲ ಅನ್ನೋ ಆತಂಕವೂ ಆಗುತ್ತೆ!

ಇದು ಆತಂಕವೋ ಅಥವ ಮಕ್ಕಳು ಇನ್ನು ಮೇಲೆ ನಮ್ಮ ಬಳಿ ಏನೂ ಕೇಳಲ್ಲ(ನಾವೇ ಅವರ ಹತ್ತಿರ ಕಲೀಬೇಕು!) ಅನ್ನೋ ಭಯವೋ ಗೊತ್ತಿಲ್ಲ!

19 comments:

Anonymous said...

ಸಂದೀಪ್,

ನಿಮ್ಮ ಬರವಣಿಗೆಯನ್ನು ಇಷ್ಟಪಡುವರಲ್ಲಿ ನಾನೂ ಒಬ್ಬ. ವಿಭಿನ್ನವಾಗಿ ಬರೀತೀರ. ಹೀಗೆ ಮುಂದುವರೆಯಲ್ಲಿ ನಿಮ್ಮ ಬರವಣಿಗೆ

ಕೆಲವು ತಪ್ಪುಗಳನ್ನು ಗಮನಿಸಿದೆ.
,(ಕಾಮ) ಮತ್ತು .(ಫುಲ್ಸ್ಟಾಪ್ ) ಆದ ಮೇಲೆ ಸ್ಪೇಸ್ ಕೊಡಬೇಕು.
ಉದಾಹರಣೆಃ
ತಪ್ಪು: ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ
ಸರಿ: ದಿಕ್ಕಿನಲ್ಲಿ ಕೈ, ಕಾಲು. ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ. ಈಗ
-Ganesh

PARAANJAPE K.N. said...

ನನ್ನ ಮನದ ಮಾತನ್ನು ನೀವು ಹೇಳಿದ್ದೀರಿ, ಮೊನ್ನೆ ನನಗೂ ಹೀಗೆ ಅನ್ನಿಸಿತ್ತು .

ದಿವ್ಯಾ ಮಲ್ಯ ಕಾಮತ್ said...

ಚಿಂತನಾತ್ಮಕ ಬರಹ... ಕಾಲಾಯ ತಸ್ಮೈ ನಮಃ ಅನ್ನಬೇಕು ಅಷ್ಟೇ!

Chaithrika said...

ಸತ್ಯ. ಆದರೆ ನಾವು ಇದರ ಮೂಕ ಪ್ರೇಕ್ಷಕರಷ್ಟೇ ಅನ್ನಿಸುತ್ತದೆ. ಇವೆಲ್ಲಾ irreversible changes. ನಮ್ಮ ಅಪ್ಪ ಅಮ್ಮಂದಿರ ಬಾಲ್ಯಕ್ಕಿಂತ ನಮ್ಮದು ಭಿನ್ನವಾಗಿದ್ದಂತೆ.

Chaithrika said...

ಮೇಲೆ Anonymous ರ ಕಮೆಂಟ್ ಬಗ್ಗೆ ನನ್ನ ಅನಿಸಿಕೆ. ಕೀ ಬೋರ್ಡ್ ನಲ್ಲಿ ಟೈಪ್ ಮಾಡುವುದು ಕಷ್ಟ. ಕೆಲವು ಪದಗಳು ಸರಿ render ಆಗುವುದೂ ಇಲ್ಲ. ಹಾಗಾಗಿ ಇಂತಹ ಸಣ್ಣ ಸಣ್ಣ ಬರವಣಿಗೆಯ ತಪ್ಪುಗಳನ್ನು ನಿರ್ಲಕ್ಷಿಸಬೇಕು.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

muddu igeno hesaru heloke chennagide munde kasta aagabahudu. avalu matadiddi kandita avala anubavakke barada matu mattu avala bayinda aprastuta embantittu.
makkalu makkala haage doddavaru doddavara hage irodakke prakrati annodu.....
chennagide vivechane

Raj Gowda said...

Hi Sandeep,
Actually I got linked to your blog from some other blog for the aricle "Hede thatti helu nanu Hindu antha"..
My intial thought was..some mangalore boy agressive about hinduism..but as I started reading all other articles.. could not stop reading all ur blog content..yesterday..with out doing any work..in office..
After reading all(almost) ur writings.. I feel "Baddi Maga(sorry,..ee word nam kade preethiyinda use madthive) enu barithane annisthu".. in somany places I feel like,.. you have wrote..whatever I have it in my mind..
So at last I came to your profile. I saw fav Movie.. "MM -II" !!,.. than it was confirmed..
"Eeeva yarava,..Eeeva yaraava..antha odutha edhe..eega..Eeeva Nammava,..Eeeva Nammava.. antha anistha edhe..
Good writings..

sunaath said...

ಸಂದೀಪ,
ನಮ್ಮದೀಗ commercial culture ಆಗಿಬಿಟ್ಟಿದೆ. ಈ cultureನಲ್ಲಿ ಮಕ್ಕಳು ಮತ್ತು ಹೆಣ್ಣುಮಕ್ಕಳು most exploited ಭಾಗಗಳು! ಮುಗ್ಧತೆ ಹೇಗೆ ಉಳಿದೀತು.
ಆದರೆ ಈ ದುರಂತದ ಬಗೆಗೆ ಕಳಕಳಿ ಇರುವ ನಿಮ್ಮಂತಹ ತರುಣರು ಇರುವದೇ ಒಂದು ಆಶಾಕಿರಣ.

ಸುಧೇಶ್ ಶೆಟ್ಟಿ said...

Ene baredru interesting baritheera sandeep...

E baraha kooda haage ishta aayithu...

Subrahmanya said...

ಮಕ್ಕಳಲ್ಲಿ ಮುಗ್ಧತೆಯನ್ನು ಹುಡುಕುವುದೇ ಕಷ್ಟವಾಗಿದೆ...ನಿಜವಾದ ಮಾತು. ಬದಲಾವಣೆ ತರಲು ಏನು ಮಾಡಬೇಕು ???

ತೇಜಸ್ವಿನಿ ಹೆಗಡೆ said...

ಈಗ ಮುಗ್ಧತೆ ಎಂದರೆ ದಡ್ಡತನ ಅನ್ನೋ ಮೂರ್ಖತನದ ಅಭಿಪ್ರಾಯಕ್ಕೂ ಕೊರತೆಯಿಲ್ಲದಂತಾಗಿದೆ! ನಮ್ಮ ಮಕ್ಕಳು ಅವರ ವಯಸ್ಸಿಗೆ ಮೀರಿ ಮಾತಾಡಿದರೆ, ಯೋಚಿಸಿದರೆ, ವರ್ತಿಸಿದರೆ ಮಾತ್ರ ಅವರ ಐಕ್ಯೂ ಲೆವೆಲ್ ಜಾಸ್ತಿ ಇದೆ ಎಂದಾಗುತ್ತದೆ ಎನ್ನುವ ಹೆತ್ತವರೂ ಬಹಳಷ್ಟಿದ್ದಾರೆ! ಒಟ್ಟಾರೆ ಅಪಾಯಕಾರಿ ಬದಲಾವಣೆಯೇ ಸರಿ!

Anonymous said...

ಲಾಯ್ಕ್ ಕರ್ನು ಬರಯ್ಲಾ ಸಂದೀಪ್!!
ತೆ ದಿವಸು ಮೆಳ್ಳೆಲೆ ಖುಶಿ ಜಾಲ್ಲೆ. ಆನ್ನೇಕ್ ಪಂತ ಆರಾಮೇರಿ ಮೇಳ್ಯಾ!!!
:-)
ಮಾಯ್

Anonymous said...

ಲಾಯ್ಕ್ ಕರ್ನು ಬರಯ್ಲಾ ಸಂದೀಪ್!!
ತೆ ದಿವಸು ಮೆಳ್ಳೆಲೆ ಖುಶಿ ಜಾಲ್ಲೆ. ಆನ್ನೇಕ್ ಪಂತ ಆರಾಮೇರಿ ಮೇಳ್ಯಾ!!!
ತೆ ದಿವಸ್ ಕಾಳ್ಳೆಲೆ ಫೋಟೊ ಮಿಗ್ಗೆಲೆ ಬ್ಲಾಗಾಂತು ಘಾಲ್ಲಾ.
:-)
ಮಾಯ್

ಧರಿತ್ರಿ said...

ಬರಹ ಇಷ್ಟ ವಾಯ್ತು

Roopa said...

ಮೊದಲಿಗೆ ಪುಟ್ಟಿಪ್ರಪಂಚಕ್ಕೆ ಬಂದು ಕಮೆಂಟಿಸಿ, ಹೊಸ ಬ್ಲಾಗ್ ನ ಬಗ್ಗೆ ತಿಳಿಸಿದಕ್ಕೆ ವಂದನೆಗಳು!

ನನ್ನ ಮನದ ಮಾತನ್ನು ನೀವು ಹೇಳಿದ್ದೀರಿ, ಪುಟ್ಟಿಯನ್ನು ಕಂಡು ನನಗೂ ಹೀಗೆ ಅನಿಸುತ್ತೆ.

ತೇಜಸ್ವಿನಿ ಅವರ ’ಮುಗ್ಧತೆ ಎಂದರೆ ದಡ್ಡತನ’ ಅನ್ನೋ ಮಾತು ನಿಜ:(

Shree Harsha said...

ಇಂತಹ ಹಿಂದೆ ಚೆನ್ನಾಗಿತ್ತು, ಈಗ ಸರಿ ಇಲ್ಲ, ಅನ್ನೋ ಬರಹಗಳಲ್ಲಿ ಕಣೋ ಒಂದು common ಕೊರತೇನೆ ಇಲ್ಲೂ ಇದೆ. ಇಲ್ಲಿ ನಾವು ಏನನ್ನ ಮರೆತಿದೀವಿ ಅಂದ್ರೆ ಮುಗ್ಧತೆ ಅನ್ನೋದರ definition ಕಾಲಕಾಲಕ್ಕೆ ಬದಲಾಗ್ತಾ ಹೋಗತ್ತೆ ಅನ್ನೋದು. ಇದು ಯಾವ ಅವಕಾಶಗಳ ಕೊರತೆಗೂ ಸಂಬಂಧ ಪಟ್ಟಿದ್ದಲ್ಲ, ಯಾವ IQ ಗೂ ಸಂಬಂಧ ಪಟ್ಟಿದ್ದಲ್ಲ. ನಮ್ಮ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡಿದ್ದು ಅಷ್ಟೇ. ಮಕ್ಕಳು ಯಾವುದಕ್ಕೆ ಜಾಸ್ತಿ expose ಆಗ್ತಾರೋ ಅದನ್ನೇ ಕಲೀತ ಹೋಗ್ತಾರೆ. ನಮ್ಮ generation ಚಿಕ್ಕವರಿರುವಾಗ ನಾವು ಬಾಯಲ್ಲೇ ಡುರ್ರ್ ಡುರ್ರ್ ಅಂತ ಕಾರು ಓಡಿಸಿ ಸಂತೋಷ ಪಡ್ತಾ ಇದ್ವಿ, ಈಗಿನ ಮಕ್ಕಳು ಮೊದಲಿನಿಂದನೂ ಕಾರಿನಲ್ಲೇ ಸುತ್ತುವುದರಿಂದ, ಬಾಯಿ ಮೋಟಾರಿನ ಅವಶ್ಯಕತೆ ಇಲ್ಲ ನಿಜ. ಆದರೆ ಇದರಲ್ಲಿ ಮುಗ್ಧತೆ ಕಳೆದು ಹೋಯ್ತು ಅಂತ ಬೆಜರಗೋದು ಏನು ಇಲ್ಲ. ನಮ್ಮ ಅಪ್ಪ ಅಮ್ಮನ generation ಗೆ ಕಾರು ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಹಾಗಾಗಿ ಬಾಯಿ ಮೋಟಾರಿನ ಆಟ ಅಡಿರೋದಕ್ಕೆ ಸಾಧ್ಯನೇ ಇಲ್ಲ. ಬಹುಶ ಅವರದೇನಿದ್ರೂ ಕುದುರೆ ಗಾಡಿಯ ಆಟ ಅಷ್ಟೇ. ಆದರೆ ಕುದುರೆಗಾಡಿಯ ಆಟ ನಾವು ಆಡಿಲ್ಲ, ಯಾಕಂದ್ರೆ ಆ ಕಾಲಕ್ಕೆ ನಮಗೆ ಅದಕ್ಕಿಂತ ಆಕರ್ಷಕವಾದ ಕಾರು ಬಂದಿತ್ತು. ಅಂದ್ರೆ ನಮ್ಮ ಮುಗ್ಧತೆಯೂ ಸತ್ತು ಹೋಗಿತ್ತು ಅಂತ ಅರ್ಥವ? ಮುಗ್ಧತೆಗೆ ಒಂದು standard definition ಇಲ್ಲ. ಬಹುಶ ಇಂದಿನ ಮಕ್ಕಳು ಕಾರು driving ಮಾಡದೆ ಇರೋದನ್ನೇ ನಾಳೆ ಮುಗ್ಧತೆ ಅಂತ ಕರಿಯೋ ಕಾಲ ಬರಬಹುದೇನೋ. :) ಬದಲಾವಣೆ ಆಗಲೇಬೇಕು, ಆಗೇ ಆಗತ್ತೆ ಮತ್ತು ಆಗುವುದೇ ಸರಿ. ನಮ್ಮ ಮಿತಿಯಲ್ಲಿ ನಾವು ಆ ಪರಿಸರಕ್ಕೆ, ಕಾಲಕ್ಕೆ ತಕ್ಕಂತೆ ತಿಳಿದುಕೊಂಡಿರ್ತೇವೆ. ಅದೇ ಮುಗ್ಧತೆ, IQ ಎಲ್ಲ, ಅಷ್ಟೇ.

Shree Harsha said...

ಒಂದು ವಿಷಯ ಹೇಳೋಕೆ ಮರೆತೆ. ನಿಮ್ಮ ಎಲ್ಲ ಬರಹಗಳು ನಂಗೆ ತುಂಬಾ ಇಷ್ಟ ಆಯ್ತು. ಅದ್ಭುತ ಕಲ್ಪನೆ ಮತ್ತು ಶೈಲಿ. ಹೀಗೆ ಮುಂದುವರಿಸಿ.

ಸಂದೀಪ್ ಕಾಮತ್ said...

ಶ್ರೀಹರ್ಷ ,

ನೀವು ಹೇಳಿದ್ದು ಸರಿ.

ನನ್ನ ಬರಹಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Sheela Nayak said...

ಶ್ರೀಹರ್ಷ ಅವರು ಹೇಳುವುದು ನೂರಕ್ಕೆ ನೂರು ಸರಿ. ಕಾಲಾಯ ತಸ್ಮೈ ನಮಃ ಎನ್ನುವುದು ಬಿಟ್ಟು ಬೇರೇನು ಮಾಡಲಾಗುವುದಿಲ್ಲ. ಹರಯದ ಮಕ್ಕಳ ತಾಯಾದ ನನಗೆ ಈ ಮಾತು ಚೆನ್ನಾಗಿ ತಿಳ್ತ್ದಿದೆ. ಹಾ, ಇದರಲ್ಲಿ ಮತ್ತೊಂದು ವಿಷಯವಿದೆ. ಹೆಚ್ಚಿನ ಮಕ್ಕಳಿಗೆ ಇಂತಹ ವಿಷಯದಲ್ಲಿ ಅವರವರ ತಾಯ್ತಂದೆ ಗಳಿಂದ ಪ್ರೋತ್ಸಾಹವಿದೆ. ಕಾಲಕ್ಕೆ ಸರಿಯಾಗಿ ಬದಲಾವಣೆಗಳು ನಡಿಯುತ್ತಲೇ ಇರುತ್ತವೆ. ನಾವು ಸ್ವೀಕರಿಸಿದರೆ ಚೆನ್ನ, ಇಲ್ಲದಿದ್ದರೆ ನಾವೇ ಅಂತರಗಳನ್ನು ಹೆಚ್ಚಿಸಲು ಕಾರಣರಾಗುತ್ತೇವೆ!
ರೀ ಸಂದೀಪ್, ನಿಮ್ಮ ಬರಹ ತುಂಬಾ ಇಷ್ಟವಾಯಿತು....ಚಿಕ್ಕದಾದರು ಮನ ಮುಟ್ಟುವ ಬರಹ!