’ಭಾಮಿನಿ ಷಟ್ಪದಿ’ ಕಥೆ ನಾ ಅಥವಾ ಕವನ ಸಂಕಲನ ನಾ ಅಂತ ಟೀನಾ ಹತ್ರ ಕೇಳಿದ್ದೆ. ಇವತ್ತು ಬಿಡುಗಡೆ ಅಗುತ್ತಲ್ವಾ ನೀವೆ ಬಂದು ನೋಡಿ ಅಂದ್ರು ಟೀನಾ.ವಾರಕ್ಕೆ ಏಳು ದಿನ ತಪ್ಪದೆ ಸೆಂಟ್ರಲ್ ಕಾಲೇಜಿನ ಪಕ್ಕದ ಕಟ್ಟಡಕ್ಕೆ ಭೇಟಿ ನೀಡುವ ಅನಿವಾರ್ಯತೆ ನನ್ನದಾಗಿದ್ದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತೆ ಅನ್ನೋ ಭರವಸೆ ನನಗಿರಲಿಲ್ಲ !!
ಆದ್ರೂ ಸಾಧ್ಯವಾಯಿತು .’ ಥ್ಯಾಂಕ್ ಯೂ ’ ದೇವ್ರೆ!
ಬೆಂಗಳೂರಿಗೆ ಬಂದು ಆರು ವರ್ಷಗಳಾಗಿದ್ರೂ ಇಂಥ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ನಂಗೆ.ಎರಡು ವರ್ಷದ ಹಿಂದೆ ರವಿ ಬೆಳಗೆರೆ ಆಫೀಸಿನಲ್ಲಿ ರವಿ ನ ನೋಡಿದ್ದು ಬಿಟ್ರೆ (ಬಾಂಬ್ ಎಸ್ಸೈ ಗಿರೀಶ್ ಮಟ್ಟೆಣ್ಣನವರ್ ನ ಅವಾಂತರದಿಂದ!) ಬೇರೆ ಯಾವ ಸಾಹಿತಿಗಳನ್ನೂ ನಾನು ಮುಖತಃ ನೋಡಿರ್ಲಿಲ್ಲ.
ನಿನ್ನೆ ಕೆಲವರನ್ನು ನೋಡೊದಿಕ್ಕೆ ಸಾಧ್ಯವಾಯಿತು. ಥಾಂಕ್ಸ್ ಟು ಚೇತನಾ !
ಚೇತನಾ ರ ಯಾವುದೇ ಬರಹಗಳನ್ನು ನಾನು ಓದಿರಲಿಲ್ಲ .ಆರ್ಕುಟ್ ನಲ್ಲಿ ತುಂಬಾ ಕಮ್ಮ್ಯೂನಿಟಿಗಳಲ್ಲಿ ವಾದ ಮಾಡಿ ಹಲವಾರು ’ಶತ್ರು’ಗಳನ್ನು ಗಳಿಸಿಕೊಂಡ ಮೇಲೆ ಇಂಟರ್ನೆಟ್ ,ಚಾಟ್ ಸಹವಾಸಾನೇ ಬೇಡ ಅಂತ ದೂರವಿದ್ದೆ.ಆದ್ರೆ ಸ್ವಲ್ಪ ದಿನಗಳ ಹಿಂದೆ ಮತ್ತೆ ಸೆಳೆಯಿತು ಮಾಯಾಜಾಲ .
ನಿನ್ನೆ ರಾತ್ರಿ ಒಂದು ಗಂಟೆಯ ತನಕ ಕೂತು ಭಾಮಿನಿ ಷಟ್ಪದಿ ಓದಿ ನೇ ಮಲಗಿದ್ದು ನಾನು .
ಹೇಗಿದೆ ಅಂತ ಕೇಳ್ತೀರಾ???????
.
.
.
ರೀ ಸ್ವಾಮಿ ಎಲ್ಲಾ ಬಿಟ್ಟಿನೇ ಗೊತ್ತಾಗ್ಬೇಕಾ ನಿಮ್ ಗೆ ? ಐವತ್ತು ರೂಪಾಯಿ ಕೊಟ್ಕೊಂಡು ಓದ್ರಿ !
.
.
.
ನನಗೂ ಕವಿತೆಗಳಿಗೂ ಆಗಿ ಬರಲ್ಲ ! ಅಂಥಾದ್ರಲ್ಲಿ ಮತ್ತೆ ಕವನ ಸಂಕಲನ ತಗೊಂಬಿಟ್ ನಾ ಅನ್ನೋ ದಿಗಿಲು ಉಂಟಾಯ್ತು.
ಆದ್ರೇನಂತೆ ಕವನ ಸಂಕಲನ ಆಗಿದ್ರೂ ಏನೂ ಬೇಜಾರಿಲ್ಲ ,ಹೇಗೂ ಕಪಾಟಿನಲ್ಲಿ ಸಂಧ್ಯಾದೇವಿಯವರ ’ಮಾತು ,ಚಿಟ್ಟೆ ’ ಬೆಚ್ಚಗೆ ಕೂತಿತ್ತು . ಅದಕ್ಕೂ ಒಂದು ಜೋಡಿ ಅಂತ ಆಗುತ್ತೆ ,ಅಂತ ನನಗೆ ನಾನೆ ಸಮಾಧಾನ ಮಾಡ್ಕೊಂಡೆ.
ಸಮಾರಂಭ ತುಂಬಾನೆ ಚೆನ್ನಾಗಿತ್ತು .ಮೋಹನ್ ತುಂಬಾನೇ ಚೆನ್ನಾಗಿ ಮಾತಾಡಿದ್ರು .ಚೇತನಾ ಹಾಗೂ ಟೀನಾ ಕೂಡ ಸುಂದರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ್ರು .ಬೇಜಾರಂದ್ರೆ ಕೊನೆ ತನಕ ಇರೋದಿಕ್ಕೆ ಸಾಧ್ಯ ಆಗಿಲ್ಲ .ಅದಿಕ್ಕೇ ಚೇತನಾ ಆಟೋಗ್ರಾಫ್ ತಗೊಳ್ಳೋದಿಕ್ಕೆ ಆಗಿಲ್ಲ !
ಆದ್ರೇನಂತೆ ಪಕ್ಕದಲ್ಲೇ ವಸುಧೇಂದ್ರ ಕೂತಿದ್ರು ಅವರ ಹತ್ರ ಕೇಳಿದೆ ’ಸರ್ ,ಆಟೊಗ್ರಾಫ್ ಕೊಡಿ ’ .
ಅದಿಕ್ಕೆ ಪಾಪ ಅವ್ರು ’ಹೇ ಚೇತನಾದಲ್ವ ತಗೋಬೇಕು ಆಟೊಗ್ರಾಫ್’ ಅಂದ್ರು !
’ಅವರದ್ದೂ ತಗೋತೀನಿ ಸರ್ ಅಮೇಲೆ ,ನೀವು ಹಾಕಿ ’ ಅಂದೆ . ಕೊನೆ ಪೇಜ್ ನಲ್ಲಿ ಹಾಕಿದ್ರು ಕಡೆಗೂ........
ಅವರ ಪಕ್ಕದಲ್ಲೇ ಅಪಾರ ಕೂತಿದ್ರು .ಆದ್ರೆ ಅವರ ಮೇಲೆ ಸಿಟ್ಟಿತ್ತು ನನಗೆ ! ವೇದಿಕೆಯಲ್ಲಿ ಹಾಕಿರೋ ವಿನೈಲ್ ಪೋಸ್ಟರ್ನಲ್ಲಿರೋ ಚಿತ್ರ ಪುಸ್ತಕದಲ್ಲಿ ಇರ್ಲೇ ಇಲ್ಲ!!! ಅದಿಕ್ಕೆ ಅಪಾರ ಜೊತೆ ಟೂ ....
ಅಲ್ಲೇ ಮುಂದೆ ಜೋಗಿ ಕೂತಿದ್ರು ,ಅವರ ಹಿಂದೆ ಇಬ್ರು ಹುಡುಗೀರು ಕೂತಿದ್ರು(ವಯಸ್ಸಾಗಿತ್ತು ,ಆದ್ರೂ ಜೀನ್ಸ್ ಹಾಕಿ ಯಂಗ್ ಕಾಣಿಸ್ತಿದ್ದಿದ್ರಿಂದ ಹುಡುಗೀರು ಅನ್ಬಹುದು !).ಜೋಗಿ ಪಕ್ಕದಲ್ಲಿ ಇರೋರ್ ಜೊತೆ ಮಾತಾಡ್ತಾ ಇದ್ದಿದ್ರಿಂದ ಹತ್ತಿರ ಜೀನ್ಸ್ ಮ್ಯಾಡಮ್ ನ ಕರೆದು ಹೇಳಿದೆ ’ಮ್ಯಾಡಮ್ ಸ್ವಲ್ಪ ಆಟೊಗ್ರಾಫ್ ತಗೊಂಡು ಕೊಡ್ತೀರಾ ?’ ಅಂತ ಜೋಗಿನಾ ತೋರಿಸ್ದೆ .
ಅವ್ರು ’ಯಾರ್ದು ಜೋಗಿ ದಾ ಅಂದ್ರು !’
’ಇನ್ನೇನು ನಿಮ್ ದಾ ’ ಅನ್ನೋಣ ಅನ್ನಿಸ್ತು. ಆದ್ರೆ ಸುಮ್ಮನೆ ತಲೆ ಆಡಿಸಿದೆ .ಪಾಪ ಅವರು ಪುಸ್ತಕನ ಜೋಗಿ ಕೈಗೆ ಕೊಟ್ಟು ’ಆಟೊಗ್ರಾಫ್ ’ ಬೇಕಂತೆ ಅಂತ ನನ್ನನ್ನು ತೋರಿಸಿದ್ರು .
ಪುಸ್ತಕ ತಗೊಂಡ ಜೋಗಿ ,ಕೊನೇ ಪೇಜ್ ನಲ್ಲಿ ವಸುಧೇಂದ್ರ ಬರೆದ ಕೆಳಗೇ ಬರೆದ್ರು .
"ಕವಿತೆ ಚಿರಾಯುವಾಗಲಿ -ಜೋಗಿ (180808 ) "
ಇದಾದ ಸ್ವಲ್ಪ ಹೊತ್ತಲ್ಲಿ ,ಯಾರಿಗೋ ಹೂ ಗುಚ್ಚ ಕೊಡೊದಿಕ್ಕೆ ಮಮತಾ ಸಾಗರ್ ಬರ್ಬೇಕು ಅಂದ್ರು . ಪಕ್ಕದಲ್ಲೆ ಕೂತಿದ್ದ ಜೀನ್ಸ್ ಮ್ಯಾಡಮ್ ಎದ್ದು ಹೋಗೋದಾ!!!!!!!!!
ಧಸಕ್ ಅಂತು ಎದೆ !
ಒಹ್ ಇವ್ರೂ ಯಾರೋ ಲೇಖಕಿ ಇರ್ಬೇಕು ! ಅದಿಕ್ಕೆ ಆಟೊಗ್ರಾಫ್ ಯಾರ್ದು ಅಂತ ಕೇಳಿದ್ದು !
ಮಮತಾ ಸಾಗರ್ ಹೆಸರು ನೋಟ್ ಮಾಡ್ಕೊಂಡೆ .ನಾಳೆ ಬೆಳಿಗ್ಗೆ ಆಫೀಸಿಗೆ ಹೋದ ತಕ್ಷಣ ದೊಡ್ಡಣ್ಣನ (Google) ಹತ್ರ ಕೇಳ್ಬೇಕು ಮಮತಾ ಸಾಗರ್ ಯಾರು ಅಂತ !
ಗೂಗಲ್ ನಲ್ಲಿ ಹುಡುಕಿದಾಗ ಗೊತ್ತಾಯ್ತು ಮಮತಾ ಸಾಗರ್ ಒಬ್ಬ ಪ್ರಖ್ಯಾತ ಬರಹಗಾರ್ತಿ ಅಂತ .
ಸಾರಿ ಮಮತಾ ಜಿ !!!!!!!
ವಿವೇಕ್ ರೈಗಳು ಮಾತಾಡೋದು ಕೇಳ್ಬೇಕು ಅಂತ ಆಸೆ ಇತ್ತು .ಹಾಗೇ ಚೇತನಾ ಆಟೊಗ್ರಾಫ್ ತಗೋಬೇಕು ಅಂತ .
ಆದ್ರೆ ಅರ್ಜಂಟ್ ಆಗಿ ಹೋಗ್ಲೇ ಬೇಕಿತ್ತು ನಾನು .
ಬೇಸರದಿಂದ ಹೊರಟೆ ಅಲ್ಲಿಂದ ...
ರಾತ್ರಿ ಕೂತು ಪುಸ್ತಕ ಓದಿ ಮುಗಿಸಿದಾಗ guilty feel ಆಯ್ತು. ಅರೇ ಇದೇನಿದು”ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೀದ ’ಅಂದಂಗಾಯ್ತಲ್ಲ ಅನ್ನಿಸಿತು !
ಅಂದ ಹಾಗೆ ನನ್ನ ಪಾಪ ಪ್ರಜ್ಞೆಗೆ ಕಾರಣ ಪುಸ್ತಕಕ್ಕೆ ಕಾರಣರಾದ ಗಂಡಸರಲ್ಲಿ ನಾನೂ ಒಬ್ಬನಲ್ವಾ??
’ಗಂಡಸರು’ ಅಂತ ಜನರಲೈಸ್ ಮಾಡಿ ಬರೆಯೋದು ತಪ್ಪಾದ್ರೂ ,ನಾವು ಬಹುತೇಕ ಗಂಡಸರು ಇರೋದೇ ಹೀಗಲ್ವಾ??
ಆಗ್ಲೇ ನಿರ್ಧಾರ ಮಾಡಿದೆ .ನಾನು ’ಅಂಥ’ ಗಂಡಸಾಗ್ಬಾರ್ದು . ’ಭಾಮಿನಿ ಷಟ್ಪದಿ -ಭಾಗ 2 'ಕ್ಕೆ ಅವಕಾಶ ಮಾಡಿಕೊಡೋ ಗಂಡಸು ನಾನಾಗ್ಬಾರ್ದ್ರು !!!
ಪುಸ್ತಕದಲ್ಲಿದ್ದ ಬರಹಗಳು ಎಷ್ಟು ಅರ್ಥವಾಯಿತು ,ಅಥವಾ ಎಷ್ಟು ’ಅಪಾರ್ಥ’ವಾಯಿತು ಅನ್ನೋದು ಗೊತ್ತಿಲ್ಲ !!! ಆದ್ರೆ ಹುಡುಗಿಯರ ಮಾನಸಿಕ ತುಮುಲದ ಅರಿವು ಸ್ವಲ್ಪ ಮಟ್ಟಿಗೆ ನನಗಾಯ್ತು !
ಅಷ್ಟರ ಮಟ್ಟಿಗೆ ನಾನು ಚೇತನಾಗೆ ಋಣಿ !!!!
ಚಿತ್ರ ಕೃಪೆ : ’ಅವಧಿ’ ಯಿಂದ ಹೈಜಾಕ್ ಮಾಡಿದ್ದು .
14 comments:
ನಿಮ್ಮ ಕಥೆ ಕೇಳಿ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ.
ಹೂ ಗುಚ್ಛ ಕೊಟ್ಟು ಬಂದ ಮೇಲಾದ್ರೂ ಅವರ ಆಟೋಗ್ರಾಫ್ ತೊಗೊಂಡ್ರಾ?
ಹರೀಶ,
ನಂಗೆ ನಿನ್ನೆ ಅವರು ಮಮತಾ ಸಾಗರ್ ಅಂತ ಅಷ್ಟೆ ತಿಳೀತು!!!
ಅವರು ಪ್ರಸಿದ್ಧ ಕವಯತ್ರಿ ಅಂತ ಇವತ್ತು ಬೆಳಿಗ್ಗೆ ಗೂಗಲ್ ಸರ್ಚ್ ಮಾಡಿದ್ ಮೇಲೆ ತಿಳೀತು ! :(
-ಸಂದೀಪ್ ಕಾಮತ್
:-) since it says Kamath (In CheTs blog) i was curious for i am a shenoy. met Chetana for the first time yesterday,though i have been in touch through e-mail for quite sometime . Also she hails from my husbands place -Teerthahalli. :-)
Liked the way you have given a touch of humour while having your say on the programme.hence i could not refrain from commenting. Sorry :-)
Bye
Malathi S
Hi Malathi,
thanx for reading my blog and commenting !
I don't know why u felt sorry for commenting!!! I read any blog in internet and make comment on that -Bindaaas!!!!!
Please keep reading my blogs(and others' too!) and comment if u feel like.Because making comments/appreciation is very important for a bloger to keep blogging.
In India if u write 100 right(good) things, nobody appreciate/comment it ;but if u write single offensive thing 100 people comment on that.
If u want to keep in touch write to sandeepkamath82@yahoo.com
with warm regards,
Sandeep Kamath
ಹಲವು ದಿನಗಳಿಂದ ಬ್ಲಾಗ್ ಮಂಡಲದಲ್ಲಿ ಚೇತನಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಬಹಳ ಜಾಹೀರಾತು ನೋಡ್ತಾ ಇದ್ದೆ.ಇದು ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರದ ಜಾಹಿರಾತಾ!!! ನಿಮ್ಮ ಲೇಖನ ಓದಿದ ಮೆಲಂತೂ ಕವನ ಪುಸ್ತಕವಾದರೂ ಅಡ್ಡಿ ಇಲ್ಲ,ಖುದ್ದು ಓದೇಕೆನಿಸಿದೆ. ಆ ದಿನ ಮಾತ್ರ ಯಾವಾಗ ಬರುತ್ತದೊ ತಿಳಿದಿಲ್ಲ. ಅದಕ್ಕೂ ಮೊದಲು ಒಂದು ಕುತೂಹಲ. "ಭಾಮಿನಿ ಷಟ್ಪದಿ" ನಿಜವಾಗಿಯೂ ಹಳೆಗನ್ನಡದ ಭಾಮಿನಿ ಷಟ್ಪದಿಯಲ್ಲಿದೆಯೋ? ಆಧುನಿಕ ಕನ್ನಡದಲ್ಲಿದೆಯೊ?
@ ಸಿಂಧು,
ನೀವು ದೆಹಲಿಯಲ್ಲಿದ್ದು ಯಾಕ್ರಿ ಮಂಡೆ ಬಿಸಿ ಮಾಡ್ಕೊಳ್ತೀರಾ? ಕನ್ನಡ ಪುಸ್ತಕ ತರಿಸೋದು ಅಷ್ಟು ಕಷ್ಟಾನಾ??
mayflowermh@gmail.com ಗೆ ಮೇಲ್ ಮಾಡಿ ಕಳಿಸಿಕೊಡ್ತಾರೆ ಅವ್ರು.
ಸಂದೀಪ,
ಹಯ್ಯೊ, ಸಿಗ್ಲೇ ಇಲ್ವಲ್ರಿ!! ನೀವು ಪಕ್ಕದ ಬಿಲ್ಡಿಂಗಲ್ಲಿರ್ತೀನಿ ಆದ್ರೆ ಬರೋಕಾಗಲ್ಲ ಅಂದಿದ್ರಲ್ಲ!! ಏನೆ ಇರಲಿ, ಪುರುಸೊತ್ತು ಮಾಡ್ಕೊಂಡು ಬಂದ್ರಲ್ಲ, ಅದೆ ಖುಶಿ. ಭಾರಿ ತಮಾಶೆಯಾಗಿದೆ ಬರಹ. ಆಮೇಲೆ ಕೊನೆಯ ನಿಮ್ಮ ನಿರ್ಧಾರಕ್ಕೆ ಹ್ಯಾಟ್ಸಾಫ್!! ಚೇತೂ ಪುಸ್ತಕ ಬರೆದದ್ದು ಸಾರ್ಥಕವಾಯಿತು ಅಂದ್ಕೋತೀನಿ. ಬೆಂಗ್ಳೂರಲ್ಲೆ ಇದೀವಲ್ಲ, ಸಿಗೋಣ.
-ಟೀನಾ
(ಮತ್ತೆ ನೀವು ಮಾಲತಿಯವರ ಕಮೆಂಟಿಗೆ ಉತ್ತರಿಸುತ್ತ ಕಮೆಂಟುಗಳ ಅವಶ್ಯಕತೆಯ ಬಗ್ಗೆ, ಅಫೆನ್ಸಿವ್ ಅಬ್ಸರ್ವೇಶನ್ನುಗಳಿಗೆ ಹೆಚ್ಚಿನ ಕಮೆಂಟುಗಳು ದೊರಕುವ ಬಗ್ಗೆ ಬರೆದಿರೋದು ಪಕ್ಕಾ ನಿಜ!!)
@ ಟೀನಾ,
ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ!
ನಾವೆಲ್ಲ ವಚನಗಳಲ್ಲಿ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುವವರು! ’ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸಬೇಡ ’ ಅಂದ ಹಾಗೆ ನಾವು ಯಾರು ಎಷ್ಟೆ ಚೆನ್ನಾಗಿ ಬರೆದ್ರೂ ಹೊಗಳೋಕೆ ಹಿಂದೆ ಮುಂದೆ ನೋಡ್ತೀವಿ.
sandeep
thanks a lot for such a wonderful write up
-Mayflower Media House
@ Mayflower Media House
You are most welcome :)
And thanks for publishing such a nice books/blog
-Sandeep Kamath
ನಮಸ್ತೇ ಸಂದೀಪ್,
“ನಾನು ’ಅಂಥ’ ಗಂಡಸಾಗ್ಬಾರ್ದು . ’ಭಾಮಿನಿ ಷಟ್ಪದಿ -ಭಾಗ 2 'ಕ್ಕೆ ಅವಕಾಶ ಮಾಡಿಕೊಡೋ ಗಂಡಸು ನಾನಾಗ್ಬಾರ್ದ್ರು !!!" ಅಂತ ಬರೆದಿದೀರಿ. ನಿಜ ಹೇಳ್ತೇನೆ, ಒಬ್ಬ ಗಂಡಸಾದ್ರೂ ಹೀಗಂದುಕೊಂಡರೆ ನಾನು ಬರೆದಿದ್ದು ಸಾರ್ಥಕವಾಯ್ತು ಅಂತ ಯೋಚಿಸ್ತಿದ್ದೆ. ಈಗಂತೂ ನಿಮ್ಮ ಹೇಳಿಕೆ ನನ್ನನ್ನ ಕೃತಾರ್ಥಳಾಗಿಸಿಬಿಡ್ತು.
ನಿಮ್ಮ ಈ ಬರಹ ತಮಾಷೆಯಾಗಿದೆ ಮತ್ತು ಚೆನ್ನಾಗಿದೆ.
ವಂದೇ,
ಚೇತನಾ ತೀರ್ಥಹಳ್ಳಿ
@ Chetana
ಚೇತನಾ ,
ಧನ್ಯವಾದಗಳು ಕಮೆಂಟಿಸಿದ್ದಕ್ಕೆ :)
ಇನ್ನು ಮುಂದೆ ವಿಭಿನ್ನ ಶೈಲಿಯ ಬರಹಗಳನ್ನು ನೀಡಿ ಪ್ಲೀಸ್ !!
ನಿಜ ಹೇಳ್ಬೇಕಂದ್ರೆ ನನಗೂ ಫೆಮಿನಿಸ್ಟ್ ಗಳಿಗೂ ಆಗಿ ಬರಲ್ಲ.ಹಾಗಂತ ನಾನು ಸ್ತ್ರೀಯರ ಬಗ್ಗೆ ಪೂರ್ವಾಗ್ರಹ ಪೀಡಿತನಲ್ಲ.
ಸ್ತ್ರೀಯರು ತಮಗಾಗುತ್ತಿರುವ ಅನ್ಯಾಯಗಳನ್ನು ಪ್ರತಿಭಟಿಸಬೇಕು ನಿಜ ,ಆದ್ರೆ ಗಂಡಸರೆಲ್ಲ ಕೆಟ್ಟವರು ಅನ್ನೋ ಭಾವನೆ ಬರೋ ತರಃ ಬರೆಯೋದು ನಂಗೆ ಇಷ್ಟ ಆಗಲ್ಲ.
ಹೀಗೆ ಬರೀತಾ ಇರಿ .
ಶುಭವಾಗಲಿ :)
-ಸಂದೀಪ್ ಕಾಮತ್
ಸಂದೀಪ, ಈಗ ನನಗೆ ಬರ್ತಾ ಇರೋ ಕೋಪಕ್ಕೆ ನೀನೇನಾದ್ರೂ ಸಿಕ್ಕಿದ್ರೆ.......ಅಲ್ಲಾ ಗುರು, ಅಲ್ಲಿಗೆ ಬರಕ್ಕಾಗಲ್ಲ ಅಂದು ಬಂದಿದ್ದಲ್ದೇ ನನಗೆ ಸಿಕ್ಕದೇ ಹಾಗೇ ಹೋಗಿದೀಯ. ಇದು ಅನ್ಯಾಯ, ಅಕ್ರಮ.
ಕಾರ್ಯಕ್ರಮ ವರದಿ ಸುಪರ್.
ಜೋಗಿ ಅದೆನೊ ಕೋಡ್ ನಂ. ಬರ್ಕೊಂಟ್ಟಂಗಿದೆ ?! :)
ಯಾರ್ಗೂ ಹೇಳಕ್ಕೋಗ್ಬೇಡ.
ಆಮೆಲೆ, ಅಂತ ಕಾರ್ಯಕ್ರಮಗಳಲ್ಲಿ ಹುಶಾರಾಗಿರ್ಬೇಕು.
ಅಕ್ಕಪಕ್ಕದಲ್ಲೇ ಎಲ್ರೂ ಇರ್ತಾರೆ. ಅದರಲ್ಲೂ ಜೀನ್ಸ್ ಹಾಕಿರೋ ಹುಡ್ಗೀರು ಮತ್ತು ಜುಬ್ಬ ಹಾಕಿರೋ ಹುಡುಗರ ಬಗ್ಗೆ ಇನ್ನೂ ಜೋಪಾನ :)
ನಮ್ಮೂರಲ್ಲಿ ರಣಜಿ ಮ್ಯಾಜ್ ನೆಡೆದಾಗ ಹೀಗೇ ಆಗಿತ್ತು. ವಿಜಯ್ ಭಾರಧ್ವಾಜ್ ಕೈಯಲ್ಲಿ ರಾಹುಲ್ ದ್ರಾವಿಡ್ ಆಟೋಗ್ರಾಫ್ ಹಾಕಿಸಿಕೊಡಿ ಅಂತ ನಮ್ ಹುಡುಗರು ಗಂಟು ಬಿದ್ದು ಕೊನೆಗೆ ಅವರು ವಿಜಯ್ ಅಂತ ಗೊತ್ತಾದಾಗ ಹಲ್ಲು ಕಿಸಿದಿದ್ರು.
@ vikas
ವಿಕಾಸ ಸಾರಿ ಕಣೊ ನಂಗೂ ಗೊತ್ತಿರ್ಲಿಲ್ಲ ನಾನು ಹೋಗ್ತೀನಿ ಅಂತ! ಅಚಾನಕ್ ಆಗಿ ಹೋದೆ!
ಇನ್ನೊಂದು ವಿಷಯ ಯಾರಿಗೂ ಹೇಳ್ಬೇಡ ! ನನಗೆ ಮೊದಲು ಜೋಗಿದೇ ಗುರುತು ಸಿಕ್ಕಿರ್ಲಿಲ್ಲ(ನಿಜವಾಗ್ಲೂ) !ಟೀ ಶರ್ಟ್ ಹಾಕಿ ಆರಾಮಾಗಿ ಲಾಸ್ಟ್ ರೋ ನಲ್ಲಿ ಕೂತಿದ್ರು .ನಾನೂ ನೋಡಿದ್ದೆ ಆದ್ರೆ ಗುರುತು ಸಿಗ್ಲಿಲ್ಲ .ಸೆನೆಟ್ ಹಾಲ್ ನ ಇನ್ ಚಾರ್ಜ್ ಅಂದುಕೊಂಡಿದ್ದೆ ಕಣೊ:(
ಇದೇನಾದ್ರೂ ಮೊದಲೇ ಬರೆದಿದ್ರೆ ಚಪ್ಪಲಿ ತಗೊಂಡು ಹೊಡೀತಾ ಇದ್ರು ನನ್ ಬ್ಲಾಗ್ ಓದಿದವ್ರು.
ನಾನೇನ್ ಮಾಡ್ಲಿ ನಾನು ಮೊದಲ ಸಲ ಇಂಥ ಕಾರ್ಯಕ್ರಮಕ್ಕೆ ಹೋಗಿದ್ದು .ಅದಿಕ್ಕೆ ಎಡವಟ್ಟಾಯ್ತು ಗುರು ಸಾರಿ.
Post a Comment