Monday, January 19, 2009

ಬಂಗುಡೆ ಮೀನಿನ ಫ್ರೈ ಮತ್ತೆ ಐಟಿ ವಿರೋಧಿಗಳು!

ನಿನ್ನೆ ಬಂಗುಡೆ ಮೀನಿನ ಫ್ರೈ ಮಾಡೋಣ ಅನ್ನಿಸಿತು ರೂಮ್ ನಲ್ಲಿ.ಮನೆಗೆ ತಂದು ಫ್ರೈ ಮಾಡೋಣ ಚೆನ್ನಾಗಿರುತ್ತೆ ಅಂದೆ ಸ್ನೇಹಿತನಿಗೆ.ಆದ್ರೆ ಅವನದ್ದು ಒಂದು ಪ್ರಾಬ್ಲೆಮ್ಮು!
ಅವನಿಗೆ ಬಂಗುಡೆ ಮೀನೇನೋ ಚಪ್ಪರಿಸಿ ತಿನ್ನಲು ಇಷ್ಟ ,ಆದ್ರೆ ಅದನ್ನು ಮನೆಗೆ ತಂದು ಮಾಡಬಾರದಂತೆ.ಯಾಕೆ ಅಂತ ಕೇಳಿದ್ರೆ ’ಮೀನೇನೋ ಚೆನ್ನಾಗಿರುತ್ತೆ ಆದ್ರೆ ಸಿಕ್ಕಾಪಟ್ಟೆ ವಾಸನೆ ಮಾರಾಯ’ ಅನ್ನೋದಾ!!!

ಅವನ ವಿಚಾರಧಾರೆ ಕೇಳಿ ಮತ್ತೆ ಐಟಿ ವಿರೋಧಿಗಳ ನೆನಪಾಯ್ತು ನಂಗೆ.
ಅವನಿಗೆ ಚಪ್ಪರಿಸಿ ತಿನ್ನಲು ಬಂಗುಡೆ ಮೀನಿನ ಫ್ರೈ ಬೇಕು ಆದ್ರೆ ಅದರ ವಾಸನೆ ಆಗಲ್ಲ!

ಹಾಗೇ ನಮ್ಮ ಐಟಿ ವಿರೋಧಿ ಸ್ನೇಹಿತರಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಬೇಕು ಆದ್ರೆ ಗೂಗಲ್ ಆಫೀಸ್ ಬೆಂಗಳೂರಿನಲ್ಲಿರೋದು ಬೇಡ!
ಮೈಲ್ ಮಾಡಲು ಯಾಹೂ ಬೇಕು ಆದ್ರೆ ಯಾಹೂ ಆಫೀಸು ಮಾತ್ರ ದಯವಿಟ್ಟು ಹೈದರಾಬಾದ್ ನಲ್ಲಿರ್ಲಿ ಅಂತಾರೆ.
ಮಾತಾಡಲು ನೋಕಿಯಾ ಫೋನೇ ಬೇಕು ಆದ್ರೆ ನೋಕಿಯಾ ಆಫೀಸ್ ಏನಾದ್ರೂ ಇಲ್ಲಿ ಮಾಡೋಣ್ವಾ ಅಂದ್ರೆ ’ನೋಓಓಓ ’ !

ಸುಮ್ಮನೆ ಹೇಳಿದೆ ಮಾರಾಯ್ರೆ ಬಯ್ಯಬೇಡಿ !
ನಂಗೆ ಗೊತ್ತು ನಾವೆಲ್ರೂ ಪಟಾಕಿ ಇಷ್ಟಪಡ್ತೀವಿ ಆದ್ರೆ ಪಟಾಕಿ ಫ್ಯಾಕ್ಟರಿ ಮಾತ್ರ ಶಿವಕಾಶಿಯಲ್ಲೇ ಇರ್ಲಿ ಅಂತೀವಿ ಅಂತ....!!!

ಆದ್ರೆ ಈ ವಿಷಯದಲ್ಲಿ ಮಾತ್ರ ನಾನು ರಾಜೀವ್ ದೀಕ್ಷೀತ್ ನ ಇಷ್ಟ ಪಡ್ತೀನಿ .ಯಾಕಂದ್ರೆ ಅವರು ಮೊದಲು ಬಂಗುಡೆ ಮೀನು ತಿನ್ನೋದೇ ಬಿಡ್ತಾರೆ ,ಆಮೇಲೆ ಮೀನು ಬೇಡ ಅಂತಾರೆ.

ಇರ್ಲಿ ಬಿಡಿ ಎಲ್ಲರಿಗೂ ಅವರ ಹಾಗೆ ಇರೋಕಾಗುತ್ತಾ??

15 comments:

Pramod said...

ಬ೦ಗುಡೆಗೂ ಐಟಿಗೂ ಭಯ೦ಕರ ಲಿ೦ಕ್ ಕೊಟ್ರಿ ಮಾರಾಯ್ರೆ..:P

guruve said...

ha ha,, chennaagide..

Anonymous said...

mamu...superb

ಸಂದೀಪ್ ಕಾಮತ್ said...

Thanks Pramod ,Guru,

Mr Anonymous I will give one plate Bangude Fry to you if you publish your real name!

-Sandeep Kamath

ಚಿತ್ರಾ ಸಂತೋಷ್ said...

ಸಂದೀಪ್...ನಕ್ಕು ನಕ್ಕು ಹೊಟ್ಟೆ ಹಣ್ಣಾಯ್ತು ಮಾರಾಯ...ಎಂಥ ಲಿಂಕು? ಅದ್ಸರಿ ಇದು ಯಾವ ಸಮರ ಸಿದ್ಧತೆ ಮಾರಾಯ್ರೆ?
-ಚಿತ್ರಾ

ವಿ.ರಾ.ಹೆ. said...

ನಿಮ್ಮ ಸಂಶಯದಲ್ಲೇ ಉತ್ತರವೂ ಇದೆ ಸಂದೀಪ್. ನೀವು ತಪ್ಪು ತಿಳಿದುಕೊಂಡಿರುವುದೇನೆಂದರೆ ಐ.ಟಿ. ವಿರೋಧಿಗಳೆಂದರೆ ಐ.ಟಿ. ಯನ್ನು ವಿರೋಧಿಸುವುದೆಂದು. ಆದರೆ ನಿಜವಾಗಿ ಐ.ಟಿ. ವಿರೋಧವೆಂದರೆ ಐ.ಟಿ.ಯಿಂದಾಗುವ ಕೆಟ್ಟ ಪರಿಣಾಮಗಳ ವಿರೋಧ. ನಿಮ್ಮೂರಲ್ಲಿ ಒಂದು ನದಿ ಹರಿಯುತ್ತಿದೆ ಎಂದಿಟ್ಟುಕೊಳ್ಳೋಣ. ಅದರ ದಂಡೆಯ ಮೇಲೆ ಒಂದು ಕಂಪನಿ ಕಾರ್ಖಾನೆ ಕಟ್ಟುತ್ತದೆ. ಬಹಳ ಜನರಿಗೆ ಕೆಲಸ ಕೊಡುತ್ತದೆ. ಜನರ ಕೈಯಲ್ಲಿ ದುಡ್ಡು ಓಡಾಡುತ್ತದೆ. ಆದರೆ ಆ ಕಾರ್ಖಾನೆಯ ಹೊಲಸು , ರಾಸಾಯನಿಕಗಳು ದಿನವೂ ನದಿಗೆ ಸೇರುತ್ತಾ ಹೋಗುತ್ತದೆ. ಈಗ ಹೇಳಿ, ಅವರಿಂದ ನಮಗೆ ಕೆಲಸ ಸಿಕ್ಕಿದೆ ಅಂತ ನಿಮ್ಮ ನದಿ ಹೊಲಸಾಗುವುದನ್ನು ಮನಸಾರೆ ಒಪ್ಪಿಕೊಳ್ಳುತ್ತೀರಾ? ಅಥವಾ ನದಿಗೆ ಬಿಡುವ ಮೊದಲು ಶುದ್ಧೀಕರಿಸಿ ಬಿಡಿ ಎನ್ನುತ್ತೀರಾ? ಈಗಾಗಿರುವುದೇ ಅದು. ನಾವು ಪಟಾಕಿ ಹೊಡೆಯಲು ಬಯಸುತ್ತೇವೆಂದು ಶಿವಕಾಶಿಯ ಹೊಲಸನ್ನೆಲ್ಲಾ ಇಲ್ಲಿ ತಂದು ಸುರಿದರೂ ಸುಮ್ಮನಿರಬೆಕಾಗಿಲ್ಲ. ಅದೇ ಆ ಶಿವಕಾಶಿ ಫ್ಯಾಕ್ಟರಿ ಇಲ್ಲಿ ಯಾರಿಗೂ ತೊಂದರೆ ಮಾಡದೇ ಪಟಾಕಿ ಫ್ಯಾಕ್ಟರಿ ಮಾಡಿದರೆ ಯಾರೂ ವಿರೋಧಿಸುವುದಿಲ್ಲ ಕೂಡ. ಐ.ಟಿ ಕಂಪನಿಗಳಾಗಲೀ, ಐ.ಟಿ.ಯಲ್ಲಿ ಕೆಲಸ ಮಾಡುವವರಾಗಲೀ ಎಲ್ಲರಂತೇ ತಮ್ಮ ಜೀವನ ಶೈಲಿ ರೂಢಿಸಿಕೊಂಡು ಇದ್ದಿದ್ದರೆ ಯಾವ ವಿರೋಧವೂ ಇರುತ್ತಿರಲಿಲ್ಲ. ಬುಂಗುಡೆ ಮೀನು ಫ್ರೈ ಚೆನ್ನಾಗಿರುತ್ತದೆ ನಿಜ, ಹಾಗಂತ ಅದರದ್ದು ಬರೇ ವಾಸನೆ ಮಾತ್ರ ಕೆಟ್ಟದಾಗಿದ್ದರೆ ಒ.ಕೆ. ಆದರೆ ಅದರ ಕೆಟ್ಟ ವಾಸನೆಯಿಂದ ನಮ್ಮ ಆರೋಗ್ಯ ಹಾಳಾಗುವಂತಿದ್ದರೆ ಬೇಡ .

ಸಂದೀಪ್ ಕಾಮತ್ said...

ವಿಕಾಸ್ ,
ನೀವು ಹೇಳಿದ್ದು ಸರಿ .ಐಟಿಯಿಂದ ದುಷ್ಪರಿಣಾಮಗಳು ಇದ್ದದ್ದೇ ಆದರೆ ಅದನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವ ಜವಾಬ್ದಾರಿ ನಮ್ಮದೇ!

ಆದರೆ ರಾಸಾಯನಿಕಗಳಷ್ಟು ಕೆಟ್ಟ ಪರಿಣಾಮ ಉಂಟಾಗಿಲ್ಲ ಬಿಡಿ !ಎಲ್ಲಾ ಮಾನಸಿಕ ಪರಿಣಾಮಗಳೇ ಉಂಟಾಗಿರೋದು ,ಅದನ್ನು ನಿವಾರಿಸಲಷ್ಟೇ ನಾನು ಪ್ರಯತ್ನಿಸಿದ್ದು.

ದಿನಪತ್ರಿಕೆಗಳು ದಿನಕ್ಕೊಂದು ಪುರವಣಿಗಳನ್ನು ನೀಡುವುದರಿಂದ ಪೇಪರ್ ಬಳಕೆ ಜಾಸ್ತಿ ಆಗಿದೆ,ಆ ಕಾರಣದಿಂದಲೇ ಈ ಪರಿ ಮರಗಳನ್ನು ಕಡೀತಾ ಇರೋದು ಅಂತ ಹೇಳಿದ್ರೆ ಪತ್ರಕರ್ತರು ಸುಮ್ಮನಿರ್ತಾರಾ??

ಚಿತ್ರಾ ಸಂತೋಷ್ said...

ಸಂದೀಪ್....
ಪತ್ರಿಕೆಗಳ ಪುರವಣಿ ಹೆಚ್ಚಾಗಿದ್ದುದರಿಂದ ಮರಗಳ ನಾಶವಾಗುತ್ತಿದೆ ಎನ್ನುವುದು ನಿಮ್ಮ ಕಲ್ಪನೆ.

ಆದರೆ ತಮ್ಮ ಜೀವನಪೂರ್ತಿ ಮರಗಳನ್ನು ಬೆಳೆಸುತ್ತಾ, ಅವುಗಳ ಪಾಲನೆ-ಪೋಷಣೆ ಮಾಡುತ್ತಾ ಸಾಲುಮರದ ತಿಮ್ಮಕ್ಕಜ್ಜಿಯನ್ನು ಜನರಿಗೆ ಪರಿಚಯಿಸಿದ್ದು ಪತ್ರಿಕೆಗಳೇ.

ನೀವೇ ಹೇಳಿದಂತೆ ರಾಜೀವ್ ದೀಕ್ಷಿತ್ ನನಗೂ ಇಷ್ಟ..ನಿಮಗೂ ಇಷ್ಟವಾಗಿರುವುದರಲ್ಲಿ ಪತ್ರಿಕೆಗಳ ಪಾತ್ರ ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಅಷ್ಟೇ ಅಲ್ಲ, ಈಗ ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಮರಗಳು ಉರುಳಿಬೀಳುತ್ತಿವೆ..ಅದಕ್ಕೆ ರಸ್ತೆ ಅಗಲೀಕರಣ ಅಥವಾ ಇನ್ಯಾವುದೋ ಕಾರಣವಿರಬಹುದು..ಪತ್ರಿಕೆಗಳಿಗೆ ಮರಗಳಿಂದ ಉಪಯೋಗವಿದೆ..ಆದರೆ ಪತ್ರಿಕೆಗಳಿಗಾಗಿಯೇ ಹೆಚ್ಚೆಚ್ಚು ಮರಗಳ ನಾಶ ಮಾಡ್ತಾರೆ ಅನ್ನೋ ಮಾತಿನಲ್ಲಿ ಹುರುಳಿಲ್ಲ.

ಅಷ್ಟೇ ಅಲ್ಲ, ಮರಗಳು ನಾಶವಾಗುವುದರಷ್ಟೇ ವೇಗದಿಂದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಇಂದು ಪತ್ರಿಕೆಗಳಲ್ಲಿ ಪುಟಗಳು ಕಡಿಮೆಯಾಗುತ್ತಿವೆ ಎನ್ನುವುದನ್ನು ನೀವು ಗಮನಿಸಿರಬಹುದು.

ನೀವು ಮೊದಲಿನ ಐಟಿ ಜಗತ್ತು ಲೇಖನದಲ್ಲಿ ಹೇಳಿದಂತೆ ಐಟಿ ಎಷ್ಟೋ ಹಸಿದಿರುವ ಹೊಟ್ಟೆಗೆ ಅನ್ನ ನೀಡುತ್ತೆ...ಪ್ರತಿಯೊಂದರಲ್ಲೂ ಪ್ಲಸ್ ಮತ್ತು ಮೈನಸ್ ಎರಡೂ ಇದೆ. ಆದರೆ ತಪ್ಪು ಎಲ್ಲಿ ಆಗಿದೆ? .....ಇದನ್ನು ವಿಕಾಸ್ ಚೆನ್ನಾಗಿಯೇ ಹೇಳಿದ್ದಾರೆ.

-ಚಿತ್ರಾ

ಸಂದೀಪ್ ಕಾಮತ್ said...

ಚಿತ್ರಾ,

ಪತ್ರಿಕೆಗಳ ಪುರವಣಿಗಳು ಜಾಸ್ತಿ ಆದ್ದರಿಂದ ಮರಗಳು ಜಾಸ್ತಿ ಉರುಳಿವೆ ಅಂತ ನಾನು ಹೇಳಿಲ್ಲ.ಆ ರೀತಿ ಹೇಳಿದ್ರೆ ಪತ್ರಕರ್ತರು ಸುಮ್ಮನಿರ್ತಾರಾ ಅಂತ ಕೇಳಿದ್ದೆ ಅಷ್ಟೆ.
ಪತ್ರಕರ್ತರು ಸುಮ್ಮನಿರಲ್ಲ ಅಂತ ನಿಮ್ಮ ಅಭಿಪ್ರಾಯದಿಂದ ಈಗಾಗ್ಲೇ ಗೊತ್ತಾಗಿದೆ.

ನೀವು ಮಾರುದ್ದ ಬರೆದು ಪತ್ರಿಕೆಗಳ ಲಾಭವನ್ನು ತಿಳಿಯಪದಿಸಿದಿರಲ್ಲ ಅದನ್ನೇ ನಾನು ಮಾಡಿದ್ದು ಐಟಿಯ ಬಗ್ಗೆ ಬರೆದು.

shivu.k said...

ಸಂದೀಪ್,

ಬಂಗಡೆ ಮೀನಿಗೂ ಐಟಿಗೂ ಎಂಥ ಸಂಭಂದ...ನಿಮ್ಮ ಲೇಖನ ಮತ್ತು ಇಲ್ಲಿ ನಡೆದಿರುವ ಚರ್ಚೆ ಚೆನ್ನಾಗಿದೆ....ನಿಮ್ಮ ಚರ್ಚೆಯನ್ನು ದೂರದಿಂದ ಓದುತ್ತಾ enjoy ಮಾಡುತ್ತಿದ್ದೆ....ಅದ್ರೆ ನಾನ್ಯಾಕೆ ಇಲ್ಲಿಗೆ ಬಂದೆ ಅಂದಿರಾ ! ವಿಷಯವಿದೆ...ಚಿತ್ರಾ....ದಿನಪತ್ರಿಕೆಗಳ ಪುರವಾಣಿ ಕಡಿಮೆ ಬರುವ ವಿಚಾರ ಬರೆದಾಗ ನಾನು ಬರಬೇಕಾಯಿತು....ನೀವೆಲ್ಲಾ editoril ನಲ್ಲಿದ್ದೂ ಮಾತಾಡುತ್ತೀರಿ.....ನಾವು[ದಿನಪತ್ರಿಕೆ ಹಂಚುವವರು]circulation ವಿಭಾಗದ ಕಡೆಯಿಂದ ಹೇಳಬೇಕೆಂದರೆ ನಮ್ಮ ಗ್ರಾಹಕರಿಗೆ ಮೊದಲಿಗೆ ಹೆಚ್ಚು ಪುರವಾಣಿಗಳ ರುಚಿ ತೋರಿಸಿ ಈಗ ಕಡಿಮೆಯಾಗಿರುವುದು ತಿಳಿದು ನಾವೆ ಸರಿಯಾಗಿ ಹಾಕುತ್ತಿಲ್ಲವೆಂದು ನಮ್ಮನ್ನು ದೂರುತ್ತಾರೆ.........ಇದಕ್ಕೆಲ್ಲಾ ಕಾರಣ ಯಾರು ! ಮತ್ತಷ್ಟು ಕಾಡು ನಾಶವಾದರೂ ಪರ್ವಾಗಿಲ್ಲ..ಜೊತೆಗೆ ಅವೆರಿಗೆ ಮೊದಲಿನಷ್ಟೇ ಪುರವಾಣಿಗಳು ಬೇಕಂತೆ. ಸದ್ಯದ ಸ್ಥಿತಿಯಲ್ಲಿ ಎಲ್ಲರಿಗೂ ಇವತ್ತಿನ ಚಿಂತೆ ....ಭವಿಷ್ಯದ ಚಿಂತೆ ಯಾರಿಗೂ ಇಲ್ಲ... ಹೀಗಾದರೆ ಒಂದು ದಿನ ಎಲ್ಲರೂ ಚಾಪೆ ಸುತ್ತಿಕೊಂಡು ಹೋಗುವುದು ಗ್ಯಾರಂಟಿ.....

ಸಂದೀಪ್ ಕಾಮತ್ said...

ಶಿವು,
ನಾನು ಸುಮ್ಮನೆ ಪತ್ರಕರ್ತರ ಉದಾಹರಣೆ ಕೊಟ್ಟೆ ಅಷ್ಟೆ.ಕೆಲವರು ಐಟಿಯಿಂದ ಬೆಂಗಳೂರು ಹಾಳಾಗಿದೆ ಅಂತ ವಾದ ಮಾಡ್ತಾರಲ್ಲ ಹಾಗೇ ನಾನು ಪತ್ರಿಕೆಗಳಿಂದ ಕಾಡಿನ ನಾಶ ಆಗ್ತಿದೆ ಅಂತ ವಾದ ಮಾಡಬಹುದು ಅಂದಿದ್ದು ನಾನು.ಸುಮ್ಮನೆ ಉದಾಹರಣೆಗೆ ಹೇಳಿದ್ದು ಯಾವುದೇ ದುರುದ್ದೇಶದಿಂದ ಅಲ್ಲ.
ಪತ್ರಿಕೆಗಿಂತ ಪುರವಣಿಗಳೇ ಮಜಾ ಕೊಡುತ್ತೆ!
ಶಿವು ನಿಮಗೆ ಇನ್ನೊಂದು ವಿಷಯ ಗೊತ್ತಾ? ಊರಲ್ಲಿ ನನ್ನ ತಂದೆಗೆ ಮರದ ಸಾಮಿಲ್ ಇತ್ತು.ಮರಗಳದ್ದೇ ಬಿಸ್ನೆಸ್.ಮರ ಕಡಿಯೋದು ತಪ್ಪು ಅಂತ ಹೇಳೋದಿಕ್ಕೆ ಯಾವ ನೈತಿಕತೆಯೂ ಇಲ್ಲ ನಂಗೆ!
ಬಹಳಷ್ಟು ಸಂಧರ್ಭಗಳಲ್ಲಿ ಒಬ್ಬರಿಗೆ ಒಳಿತಾದ್ರೆ ಇನ್ನೊಬ್ರಿಗೆ ಕೆಟ್ಟದಾಗುತ್ತೆ.ನೀವು ಐಸ್ ಕ್ರೀಮ್ ಮಾರೋರಾದ್ರೆ ’ದೇವರೇ ಬಿಸಿಲು ಜೋರಾಗ್ಲಪ್ಪ ’ ಅಂತ ಪ್ರಾರ್ಥಿಸ್ತೀರ.ಅದೇ ನೀವು ಸ್ವೆಟರ್ ಮಾರೋರಾದ್ರೆ ’ದೇವರೇ ಸಕ್ಕತ್ ಚಳಿ ಬರ್ಲಪ್ಪ ’ ಅಂತ ಬೇಡ್ಕೋತೀರಾ ಅಲ್ವಾ??
ಐಟಿಯಿಂದ ನೂರು ಜನರಿಗೆ ಒಳಿತಾಗುವಾಗ ಹತ್ತು ಜನರಿಗೆ ತೊಂದರೆಗಳಾಗೇ ಆಗುತ್ತೆ ಅಂತ ಹೇಳಿದ್ದು ಅಷ್ಟೆ.
ಇದೇನು ಅಂಥಾ ಗಂಭೀರ ವಿಷಯವಲ್ಲ ಬಿಡಿ ತಲೆ ಕೆಡಿಸಿಕೊಂಡು ಚರ್ಚೆ ಮಾಡೋದಿಕ್ಕೆ.

Anonymous said...

ಮೂಗು ಮುಚ್ಕೊಂಡು ತಿನ್ಬಹುದಲ್ಲ ಮಾರೆ! ;-D

Anonymous said...

Mamu...sakath offer
Aaji bangude paarty kai karche?

ಸಂದೀಪ್ ಕಾಮತ್ said...

Mr Anonymous maamu ,
I am still awake if u r ready we can got to Impreial at Shivajinagar! It's open till 3AM!!

prasca said...

ಸಂದೀಪ್,
ನೀವು ಹೇಳುತ್ತಿರುವ ವಿಷಯಗಳು ಚೆನ್ನಾಗಿವೆ.
ಡಾಕ್ಟರ್ಗಳು ರೋಗಿಗಳು ಹೆಚ್ಚಾಗ್ಲಿ ಎಂದು ಪ್ರಾರ್ಠನೆ ಮಾಡ್ತಾರೆನೋ ಅಲ್ವ? ನಮ್ ದೇಸದಲ್ಲಿ ಎಲ್ಲದಕ್ಕೂ ಏನಾದರೊಂದು ತೊಡಕು ಪ್ಲಾಸ್ಟಿಕ್ ಚೀಲಗಳನ್ನು ನಿಷೇದಿಸಬೇಕು. ಅದನ್ನೆ ನಂಬಿಕೊಂಡು ಲಕ್ಷಾಂತರ ಜನರಿದ್ದಾರೆ. ಗುಟ್ಕಾ ನಿಷೆಧಿಸಲಿಕ್ಕೆ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲಿಕುತ್ತಾರೆ. ಮದ್ಯ ಸಿಗರೇಟ್ ಬೀಡಿಗಳಿಗೆ ಸರ್ಕಾರವೇ ದಿವಾಳಿಯಾಗುತ್ತೆ. ಹೀಗೆ ನೋಡ್ತಾ ಹೋದ್ರೆ ಏನೂ ಂಆಡದೆ ಇರೋದಿಕ್ಕೆ ಎಷ್ಟು ಕಾರಣಗಳು ಸಿಗುತ್ವೆ ಅಲ್ವ? ಅದಕ್ಕೆ ನಾವು ಮತ್ತು ನಮ್ಮ ಸರ್ಕಾರಗಳು ಹೀಗಿವೆ ಅದಕ್ಕೆ ನಂ ದೇಶ ಹೀಗೆ ಇರ್ಲಿ ಏನಂತೀರಿ?