Sunday, January 25, 2009

ಮೇ ಫ್ಲವರ್ ನಲ್ಲೊಂದು ಸಂವಾದ .



ಸಂದರ್ಶಕ:ಸರ್ ಮೇ ಫ್ಲವರ್ ಗೆ ’ಸ್ಲಂ ಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು ಆದ್ರೆ ನೀವು ಆ ಚಿತ್ರವನ್ನು ನೋಡೆ ಇಲ್ಲ ಅಂತ ನನಗೆ ಗೊತ್ತಿದೆ! ಮತ್ತೆ ಯಾಕೆ ಸರ್ ಸಂವಾದಕ್ಕೆ ಹೋದ್ರಿ?
ಸಂದೀಪ್: ಹೆ ಹೆ ಏನೋ ಇದು ಯಾವಾಗ್ಲೂ ಮಗಾ ಅಂತ ಕರೀತಾ ಇದ್ದವನು ಇವತ್ತು ಸರ್ ಅಂತಾ ಇದ್ದೀಯ? ಓಹ್ ಇಂಟರ್ವೂ ಅಂತಾನಾ?? ಇರ್ಲಿ ಬಿಡೋ ಮಾಮೂಲಾಗಿ ’ನೀನು ’ ಅಂತ ಕರಿ ಪರ್ವಾಗಿಲ್ಲ. .
ಸಂದರ್ಶಕ:ಓಕೆ ನೀನು ಸಿನೆಮಾ ನೋಡಿಲ್ಲ ಅಂತ ನಂಗೆ ಗೊತ್ತು .ಮತ್ತೆ ಯಾಕೆ ಸಂವಾದದಲ್ಲಿ ಭಾಗಿಯಾದೆ?ಭಾಗಿಯಾಗೋದಲ್ಲದೆ ಏನೇನೋ ಚರ್ಚೆ ಬೇರೆ ಮಾಡಿದ್ದೀಯಂತೆ ಯಾಕೆ?
ಸಂದೀಪ್:ಹೌದು ನಾನು ಸಿನೆಮಾ ನೋಡಿಲ್ಲ .ಏನಿವಾಗ?ಸಿನೆಮಾ ನೋಡಿಲ್ಲ ಅಂದ್ರೆ ಅದರ ಬಗ್ಗೆ ಮಾತಾಡಬರ್ದಾ?ಹಾಗೆ ನೋಡಿದ್ರೆ ನಾನು ’ವೈಟ್ ಟೈಗರ್ ’ಕೂಡಾ ಓದಿಲ್ಲ ಆದ್ರೆ ಬ್ಲಾಗ್ ನಲ್ಲಿ ಅದರ ಬಗ್ಗೆ ಉಗಿದು ಬರೆದಿಲ್ವ?
ಸಂದರ್ಶಕ:ನಂಗ್ಯಾಕೊ ನೀನು ಸಿನೆಮಾ ನೋಡದೇ ಅದರ ಬಗ್ಗೆ ಮಾತಾಡಿದ್ದು ಇಷ್ಟ ಆಗಿಲ್ಲಪ್ಪ.
ಸಂದೀಪ್:ಲೋ ಗೂಬೆ ! ’ ನಾನು ಸ್ಲಂ ಡಾಗ್ ಸಿನೆಮಾ ನೋಡಿಲ್ಲ ,ಅದ್ದರಿಂದ ಸಂವಾದ ಮುಂದಿನ ವಾರ ಇಟ್ಕೊಳ್ಳಿ ,ಅಷ್ಟರ ಒಳಗೆ ಸಿನೆಮಾ ನೋಡಿ ರೆಡಿ ಅಗಿರ್ತೀನಿ’ ಅಂದ್ರೆ ಮೋಹನ್ ಅವ್ರು ಉಗಿಯಲ್ವೇನೋ?
ಸಂದರ್ಶಕ:ಸಿನೆಮಾ ನೋಡಿಲ್ಲ ಅಂದ್ರೆ ನೀನು ಮೇ ಫ್ಲವರ್ ಗೆ ಹೋಗ್ಲೆ ಬಾರ್ದಿತ್ತು ಕಣೋ.
ಸಂದೀಪ್:ಹೆ ಹೆ .ಮೇ ಫ್ಲವರ್ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇದ್ದ ಹಾಗೆ ಕಣ್ಲ .ಅಲ್ಲಿ ಸುಮ್ಮನೆ ಹೋಗಿ ಏನೂ ಮಾಡದೆ.ಮಾತಾಡದೆ ,ಹಂಗೆ ಬಿಟ್ಟಿ ಪುಸ್ತಕಗಳನ್ನು ಓದ್ಕೊಂಡು ಬರಬಹುದು.ಅಂದ ಹಾಗೆ ನಾನು ಶ್ರೀರಾಂ ಪುರದ ಸ್ಲಂ ನೋಡಿದ್ದೀನಿ,ಡಾಗ್ ನೋಡಿದ್ದೀನಿ ,ಬೆಂಗಳೂರಿನಲ್ಲಿ ಬಹಳಷ್ಟು ಮಿಲೆನಿಯರ್ ಗಳನ್ನೂ ನೋಡಿದ್ದೀನಿ.ಹಾಗಾಗಿ ನಾನು ಸ್ಲಂ+ಡಾಗ್+ಮಿಲೆನಿಯರ್ ನೋಡಿದ್ದೀನಿ ಅಂತಾಯ್ತಲ್ವ?
ಸಂದರ್ಶಕ:ನಿನ್ ತಲೆ .ಮೂರನ್ನೂ ಒಟ್ಟಿಗೆ ನೋಡಿದ್ದೀಯಾ?
ಸಂದೀಪ್:ಇಲ್ಲ.
ಸಂದರ್ಶಕ:ಮತ್ತೆ ? ನಿನಗೆ ಸಿನೆಮಾ ಬಗ್ಗೆ ಏನ್ ಗೊತ್ತು.ಎಡಿಟಿಂಗ್,ಕೊರಿಯಾಗ್ರಾಫಿ,ಮಿಕ್ಸಿಂಗು,ಕ್ಯಾಮೆರಾ ವರ್ಕು ಅದು ಇದು ಅಂತ ಎಷ್ಟು ಕಷ್ಟ ಇದೆ ಗೊತ್ತಾ? ಸುಮ್ನೆ ಹೋಗಿ ಸ್ಲಂ ಡಾಗ್ ಇಷ್ಟ ಆಗಿಲ್ಲ ಅಂದ್ಯಲ್ಲ .ತಲೆ ಇದೆಯಾ ನಿಂಗೆ?
ಸಂದೀಪ್:ನಿಂಗೆ ಅಡಿಗೆ ಮಾಡೋದಕ್ಕೆ ಗೊತ್ತಾ?
ಸಂದರ್ಶಕ:ಇಲ್ಲ!
ಸಂದೀಪ್:ಮತ್ತೆ ಮೊನ್ನೆ ಶಾಂತಿಸಾಗರದಲ್ಲಿ ವೆಜ್ ಪಲಾವ್ ಸರಿಯಾಗಿಲ್ಲ .ಇಷ್ಟ ಆಗಿಲ್ಲ ಅಂತ ಉಗೀತಾ ಇದ್ದೆ ಯಾರನ್ನೋ.ಪಲಾವ್ ಮಾಡೊದು ಎಷ್ಟು ಕಷ್ಟ ಅಂತ ಗೊತ್ತಾ ನಿಂಗೆ? ಮೊದಲು ರೈಸ್ ಮಾಡ್ಬೇಕು,ಆಮೇಲೆ......
ಸಂದರ್ಶಕ:ತಪ್ಪಾಯ್ತು ಗುರುವೇ!.....ಅದಿರ್ಲಿ ನಿಂಗೆ ಸ್ಲಂ ಡಾಗ್ ಅಂದ್ರೆ ಯಾಕೆ ಸಿಟ್ಟು?ಅದರಲ್ಲಿ ’ನಿಜವಾದ’ ಭಾರತ ತೋರಿಸಿದ್ದಾರೇ ಅಂತಾನಾ?
ಸಂದೀಪ್:ಹೇ ಸಿಟ್ಟೇನಿಲ್ಲ ಮಾರಾಯಾ ಒಂದು ಸಾತ್ವಿಕವಾದ ಬೇಸರ ಅಷ್ಟೆ.ಆ ಸಿನೆಮಾ ನೋಡಿ ’ಯಾರಾದ್ರೂ’ ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಬೇಸರ ಅಷ್ಟೇ.ಸ್ಲಂ ಡಾಗ್ ಗೆ ಅವಾರ್ಡ್ ಬಂದಿದ್ದರಿಂದ ಅದೆಷ್ಟೊ ವಿದೇಶಿಯರು ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಭಯ!
ಸಂದರ್ಶಕ:ತಪ್ಪು ತಿಳ್ಕೊಂಡ್ರೆ ನಿಮ್ಮಪ್ಪನ್ ಗಂಟೇನು ಹೋಗುತ್ತೆ?
ಸಂದೀಪ್:ನಮ್ಮಪ್ಪನ್ ಗಂಟೇನೂ ಹೋಗಲ್ಲ.ಆದ್ರೆ ನಮ್ಮನೆ ದೋಸೆ ತೂತು ಅಂತ ಯಾರಿಗೂ ಗೊತ್ತಾಗ್ಬಾರ್ದು ಅಂತ :)
ಸಂದರ್ಶಕ:ಇದೊಳ್ಳೆ ಕಥೆಯಾಯ್ತಲ್ಲ ! ಎಲ್ಲರ ಮನೆ ದೋಸೆ ತೂತು ಅಂತ ಕೇಳಿಲ್ವಾ ನೀನು!
ಸಂದೀಪ್:ಇರಬಹುದು.ಆದ್ರೆ ನಮ್ಮನೆ ದೋಸೆ ತೂತು ಎಷ್ಟು ’ದೊಡ್ಡದು’ ಅಂತ ಬೇರೆಯವ್ರಿಗೆ ಗೊತ್ತಾಗಬಾರದು ಅಷ್ಟೆ.
ಸಂದರ್ಶಕ:ಒಹ್ ಹಾಗಾ? ಯಾರಾದ್ರೂ ವಿದೇಶಿಯರು ನಿನ್ ಹತ್ರ ಬಂದು ಕೇಳ್ತಾರೇನೋ ಭಾರತದ ಬಗ್ಗೆ.
ಸಂದೀಪ್:ಯಾಕೆ ಕೇಳಲ್ಲ? ನಿಂಗೆ ಗೊತ್ತಿಲ್ವಾ? ನಂ ಆಫೀಸ್ ಗೆ ತಿಂಗಳಿಗೆ ಎಷ್ಟು ಫಾರಿನರ್ಸ್ ಬರ್ತಾರೆ ಅಂತ. ಆ ಪೋಲೋ ಚೈನಾದಿಂದ ಬಂದಾಗ ಅವನು ಕಲಾಸಿಪಾಳ್ಯ ನೋಡಿ ಮೂಗು ಮುರಿದಾಗ ನಂಗೆ ಎಷ್ಟು ಕಷ್ಟ ಆಗಿತ್ತು ಗೊತ್ತಿಲ್ವ ನಿಂಗೆ?
ಸಂದರ್ಶಕ:ನಿಂದು ವಿಪರೀತ ಆಯ್ತು ಮಾರಾಯ.ಯಾವುದೆ ಸಿನೆಮಾ ನೋಡಿ ಜನ ತಮ್ಮ ಅಭಿಪ್ರಾಯ ನಿರೂಪಿಸಿಕೊಳ್ಳಲ್ಲ ಅಷ್ಟೇ.ಅದು ನಿನ್ನ ಭ್ರಮೆ!
ಸಂದೀಪ್:ಓಹ್ ಹಾಗ .ನೀನು ಅಮೆರಿಕಾ ನೋಡಿಲ್ಲ ಅಲ್ವ.ಮತ್ತೆ ಯಾಕೆ ನಿಂಗೆ ಅಮೆರಿಕ ಅಂದ್ರೆ ಸಿಡಿಮಿಡಿ.ಅಲ್ಲಿಯ ಸಂಸ್ಕೃತಿ ಸರಿ ಇಲ್ಲ ಅಂತ ಯಾಕೆ ಯಾವಾಗ್ಲೂ ಗೊಣಗ್ತಾ ಇರ್ತೀಯಾ?
ಸಂದರ್ಶಕ: ಅದು F TV ನೋಡಿದ್ರೆ ಗೊತ್ತಾಗುತ್ತೆ ಬಿಡು! ಆಮೇಲೆ ಅವರ ಇಂಗ್ಲೀಷ್ ಸಿನೆಮಾ ನೋಡಿದ್ರೆ ಗೊತ್ತಾಗುತ್ತೆ .ಸಿನೆಮ ಶುರು ಆದ್ರೆ ಸಾಕು-ಕಿಸ್ಸು .ಹತ್ತು ನಿಮಿಷಕ್ಕೊಂದು ಕಿಸ್ಸಿಲ್ಲ ಅಂದ್ರೆ ಅವರ ಸಿನೆಮಾ ಮುಂದೆ ಹೋಗಲ್ಲ.ಮತ್ತೆ ಅಲ್ಲಿ ಅಪ್ಪ ಅಮ್ಮ ಅಂದ್ರೆ ಮರ್ಯಾದೆ ಇಲ್ಲ ಕಣೋ.ವಿಚಿತ್ರ ದೇಶ ಅದು.ಅಲ್ಲಿನ ಸಂಸ್ಕೃತಿನೇ ಸರಿ ಇಲ್ಲ ಕಣೋ!
ಸಂದೀಪ್:ಒಹ್ ಅಮೆರಿಕಾ ಗೆ ಹೋಗದೇನೆ ಬರೀ F TV ,ಇಂಗ್ಲೀಷ್ ಸಿನೆಮಾ ನೋಡಿನೇ ಅಂಥ ದೇಶದ ಬಗ್ಗೆ ನೀನು ಅಭಿಪ್ರಾಯ ನಿರೂಪಿಸಿಕೊಂಡೆ ಅಲ್ಲಾ?ಆಮೇಲೆ ನಂಗೆ ಹೇಳ್ತೀಯ ’ಬರೀ’ ಸಿನೆಮಾದಿಂದ ಏನೂ ಆಗಲ್ಲ ಅಂತ! ಒಳ್ಳೇ ಆಸಾಮಿ ಕಣಯ್ಯ ನೀನು!
ಸಂದರ್ಶಕ:ಹಾಗೆನಿಲ್ಲ ಆ ದೇಶದ ಬಗ್ಗೆ ಒಳ್ಳೆಯ ಸಿನೆಮಾನೂ ನೋಡಿದ್ದೀನಿ .ಹಾಗಾಗಿ ಆ ದೇಶದ ಬಗ್ಗೆ ಒಳ್ಳೆ ಅಭಿಪ್ರಾಯಾನೂ ಇದೆ ನಂಗೆ.
ಸಂದೀಪ್:ಓಕೆ ಹಾಗಿದ್ರೆ ಭಾರತದ ಬಗ್ಗೆ ಒಳ್ಳೆ ಅಭಿಪ್ರಾಯ ಬರೊ ಹಾಗೆ ಇರೊ ಸಿನೆಮಾ ಅವರು ನೋಡ್ತಾರೆ ಅಂತೀಯಾ ನೀನು.
ಸಂದರ್ಶಕ:ಹೌದು ಯಾಕೆ ನೋಡಲ್ಲ? ಸ್ಲಂ ಡಾಗ್ ನೋಡಿಲ್ವ ಅವರು ಹಾಗೆ ಬೇರೆ ಸಿನೆಮಾನೂ ನೋಡ್ತಾರೆ.
ಸಂದೀಪ್:ಸ್ಲಮ್ ಡಾಗ್ ಗೆ ಅವಾರ್ಡ್ ಬಂದಿದೆ ಅದಕ್ಕೆ ಎಲ್ಲರೂ ನೋಡಿದ್ದಾರೆ ಅವಾರ್ಡ್ ಬಂದಿಲ್ಲ ನೋಡ್ತಾರಾ?
ಸಂದರ್ಶಕ:ನಿನ್ನ So called ಪ್ರಕಾಶಿಸುತ್ತಿರೋ ಭಾರತದ ಬಗ್ಗೆ ಒಳ್ಳೆ ಸಿನೆಮಾ ತೆಗೆದು ಅವಾರ್ಡ್ ತಗೊಳ್ಳಯ್ಯ ನೋಡ್ತಾರೆ ಎಲ್ಲ!
ಸಂದೀಪ್:ಬಿಟ್ಟಿ ಸಲಹೆಗೇನೋ ಕೊರತೆ ಇಲ್ಲ ನಿನ್ ಹತ್ರ ! ಇರ್ಲಿ ಬಿಡು ನೋಡೋಣ ಅಂಥ ಸಿನೆಮಾ ಬರುತ್ತೇನೋ ಅಂತ:(ಒಳ್ಳೆ ಸಿನೆಮಾ ಬಂದ್ರೂ ಅವಾರ್ಡ್ ಬರೋದು,ಅವರು ಅದನ್ನು ನೋಡೋದು ಅಷ್ಟರಲ್ಲೇ ಇದೆ ಬಿಡು.
ಸಂದರ್ಶಕ:ನೀನು ಯಾವಾಗ ನೋಡಿದ್ರೂ ’ಅವರು ಏನಂದುಕೋತಾರೋ ,ಇವರು ಏನಂದುಕೋತಾರೋ ’ ಅಂತ ಬದುಕ್ತಿರ್ತೀಯ .ಕಮಾನ್ ಮ್ಯಾನ್ ಅಂದುಕೊಳ್ಳುವವರು ಅಂದುಕೊಳ್ಳಲ್ಲಿ ಬಿಡು .ಭಾರತ ದರಿದ್ರ ದೇಶ ,ಕೊಳಕು ದೇಶ ಇಲ್ಲಿ ಏನೂ ಸರಿ ಇಲ್ಲ ಅಂತ .ನಿಂಗೇನು ಪ್ರಾಬ್ಲೆಮ್ ?
ಸಂದೀಪ್:ಆಯ್ತಪ್ಪ ನಂಗೇನೂ ಪ್ರಾಬ್ಲೆಮ್ ಇಲ್ಲ ಬಿಡು.ಈಗ ಹೇಳು ಆ ಸಿನೆಮಾದಿಂದ ಧಾರಾವಿ ಸ್ಲಂ ಜನರಿಗೆ ಏನು ಲಾಭ ಆಯ್ತು? A R Rehaman ಗೆ ಅವಾರ್ಡ್ ಬಂತು .ಡ್ಯಾನಿಗೂ ಅವಾರ್ಡ್ ಬಂತು.ಲತಿಕಾ ಗೆ ನೆಕ್ಸ್ಟ್ ಫಿಲಂ ಗೆ ಚಾನ್ಸ್ ಸಿಕ್ತು.ಅನಿಲ್ ಕಪೂರ್ ಗೆ ಏನೂ ಸಿಕ್ಕಿಲ್ಲ ಆದ್ರೂ ಪುಣ್ಯಾತ್ಮ ಖುಷಿಯಾಗಿದ್ದಾನೆ! ಈಗ ಹೇಳು ರಿಯಲ್ ಸ್ಲಂ ಡಾಗ್ ಗಳಿಗೆ ಏನ್ ಸಿಕ್ತು?
ಸಂದರ್ಶಕ:ಡ್ಯಾನಿ ಏನೂ ಚ್ಯಾರಿಟಿ ಸಂಸ್ಥೆ ಇಟ್ಟಿಲ್ಲ ಸ್ಲಂ ಜನಗಳಿಗೆ ಸಹಾಯ ಮಾಡಲು.ಅವನ ಕೆಲಸ ಫಿಲಂ ಮಾಡೋದು .ಫಿಲಂ ಆದ ಮೇಲೆ ಅದನ್ನು ಅವಾರ್ಡ್ ಗೆ ಕಳಿಸೋದು.ಅವಾರ್ಡ್ ಬಂದ್ರೆ ಅದನ್ನು ತಗೊಂಡು ತಾಜ್ ಹೋಟ್ಲಲ್ಲಿ ಪಾರ್ಟಿ ಮಾಡೋದು.ಅದು ಬಿಟ್ರೆ ಅವನೇನು ಮಾಡೊಕಾಗುತ್ತೆ?ಓಹ್ ಮೇ ಫ್ಲವರ್ ನಲ್ಲಿ ಯಾರೋ ’ನಾವು ನೈಜ ಪರಿಸ್ಥಿತಿಯ ಬಗ್ಗೆ ಬೇಸರ ಪಡೊದಕ್ಕಿಂತ ಸ್ಲಂ ಜನರ ಬದುಕನ್ನು ಅಭಿವೃದ್ಧಿ ಪಡಿಸೋಣ ’ ಅಂದಿದ್ದಕ್ಕೆ ಸಿಟ್ಟು ಬಂತಾ?
ಸಂದೀಪ್:ಇನ್ನೇನ್ ಮತ್ತೆ ಸಿನೆಮ ಮಾಡೊರು ಯಾವತ್ತಾದ್ರೂ ಒಳ್ಳೆ ಉದ್ದೇಶದಿಂದ ಸಿನೆಮಾ ಮಾಡಿದ್ದು ನೋಡಿದ್ದೀಯ?
ಸಂದರ್ಶಕ:ನಿಂದೊಳ್ಳೆ ಗೋಳಾಯ್ತು ಮಾರಾಯ! ಸಿನೆಮ ಅಂದ್ರೆ ಮನರಂಜನೆ .ನೋಡ್ಬೆಕು -ಮರೀಬೇಕು ಅಷ್ಟೆ.
ಸಂದೀಪ್:ಓಹ್ ಹಾಗಾ! ಇನ್ನು ಮುಂದೆ ಟ್ರೈ ಮಾಡ್ತೀನಿ ಕಣ್ಲಾ ಸಿನೆಮಾನ ಸಿನೆಮಾ ಥರ ನೆ ನೋಡೋದಕ್ಕೆ.
ಸಂದರ್ಶಕ:ಈಗ ಹೇಳು ಸಂವಾದ ಹೇಗಿತ್ತು ?
ಸಂದೀಪ್:ಬಹಳ ಚೆನ್ನಾಗಿತ್ತು !ಪರಮೇಶ್ವರ್ ಅದ್ಭುತವಾಗಿ ಮಾತಾಡಿದ್ರು.ಆರತಿ,ಸುಘೋಷ್,ಶ್ರೀಜಾ,ಲೀಲಾ ಸಂಪಿಗೆ ,ಶ್ರೀ,ವಿಕಾಸ್,ಮಂಜುನಾಥ್ ,ಮೋಹನ್ ಎಲ್ಲಾ ಚೆನ್ನಾಗೇ ಮಾತಾಡಿದ್ರು.
ಸಂದರ್ಶಕ:ಹಾಗಿದ್ರೆ ಸ್ಲಂ ಡಾಗ್ ಬಗ್ಗೆ ನಿನ್ನ ಅಭಿಪ್ರಾಯ ಬದಲಾಯ್ತು ಅನ್ನು!
ಸಂದೀಪ್:No Way!! ಡ್ಯಾನಿಯ ಬಗ್ಗೆ ಸಿಟ್ಟಿಲ್ಲ .ಆದ್ರೆ ಏನೋ ಬೇರೆ ರೀತಿಯ ಬೇಸರ ಇದೆ :(
ಸಂದರ್ಶಕ:ಏನು ಬೇಸರ ಹೇಳಪ್ಪ.
ಸಂದೀಪ್:ನನ್ನ ಭಾರತವನ್ನು ಸುಂದರವಾಗಿ ತೋರಿಸಲಾಗಲಿಲ್ಲವಲ್ಲ ಅನ್ನೋ ಬೇಸರ ! ನನ್ನ ಭಾರತದಲ್ಲಿ ಇಷ್ಟೊಂದು ತೊಂದರೆಗಳಿವೆಯಲ್ಲಾ ಅನ್ನೋ ಬೇಸರ ! ನನ್ನ ಬಗ್ಗೆಯೆ ಬೇಸರ!

12 comments:

shivu.k said...

ಸಂದೀಪ್,

ಸ್ಲಂ ಡಾಗ್ ಸಂದರ್ಶನ ಚೆನ್ನಾಗಿದೆ....ಸರಿಯಾಗಿ ಪ್ರಾರಂಭವಾಗಿ ಎಲ್ಲೋ ಹೋಗಿ ನಿಂತಿತಲ್ಲ.....ಇತ್ತೀಚೆಗೆ ತೀವ್ರತೆ ಕಡಿಮೆಯಾಗಿ ಸ್ವಲ್ಪ ಹಾಸ್ಯದ ಹೂರಣವು ಸೇರಿದೆಯಲ್ಲ ಬರವಣಿಗೆಯಲ್ಲಿ....

ನಿನ್ನ ನಾನು ಮೇ ಪ್ಲವರಿಗೆ ಬರದ ಕಾರಣ ರಂಗಶಂಕರದಲ್ಲಿ "ದಂಗೆಯ ಮುಂಚಿನ ದಿನಗಳು" ನಾಟಕ ನೋಡಲು ಹೋಗಿದ್ದು......

ಕೊನೆಯಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಸಿನಿಮಾನ ಸಿನಿಮಾ ರೀತಿ ನೋಡಬೇಕೆನ್ನುವುದು.....ಥ್ಯಾಂಕ್ಸ್....

ಸುಧೇಶ್ ಶೆಟ್ಟಿ said...

sandeep...

chennagi baredideeya....

naaninnu film nodilla... aadru nan weekend nalli attend maado claasinalli obbalu hudugi helidlu..."film is good, but u feel bad for showing india in this way".

film nodida mele nanage kanditha besaravaagabahudu annodu khaathriyaagide:)

idara madye BBC yalli michael wood nadesikoduva "story of india" tumba chennagidyanthe... aathana bagge thaane thaanaage mooduva ishta dyaniya bagge kanditha moodolla....

ಸಂದೀಪ್ ಕಾಮತ್ said...

ಶಿವು ,ಸುಧೇಶ್ ,
ಧನ್ಯವಾದಗಳು ಮೆಚ್ಚಿದ್ದಕ್ಕೆ.
ಶಿವು , ನೀವು ಹೇಳಿದ್ದು ಸರಿ ಸಿನೆಮಾನ ಸಿನೆಮಾ ರೀತಿಯಲ್ಲಿ ನೋಡಿದ್ರೇನೆ ಚಂದ!
ಸುಧೇಶ್,
ನನಗೂ ಬೇಜಾರಾಗುತ್ತೆ ಆದ್ರೆ ನಾವಿಬ್ಬರೂ ಸ್ವಲ್ಪ ಸುಧಾರಿಸಿಕೊಳ್ಳೋಣ! ಯಾರು ಭಾರತದ ಬಗ್ಗೆ ಏನಂದುಕೊಂಡ್ರೂ ಪರ್ವಾಗಿಲ್ಲ ಕತ್ತೆ ಬಾಲ .ನಮಗೆ ಗೊತ್ತಿದ್ರೆ ಸಾಕು ಭಾರತ ಏನು ಅಂತ.ಸ್ಲಂ ಡಾಗ್ ನೋಡಿ ಭಾರತ ಸ್ಲಂ ಗಳ ದೇಶ ಅಂದುಕೊಂಡ್ರೆ ಪರ್ವಾಗಿಲ್ಲ.ನೋಡ್ತಾ ಇರು ಇನ್ನು ಹತ್ತೇ ವರ್ಶಗಳಲ್ಲಿ ಭಾರತ ಅಮೆರಿಕಾದಷ್ಟೆ ಶಕ್ತಿಶಾಲಿಯಾಗುತ್ತೆ.
ತುಂಬಾ ಜನ ಡ್ಯಾನಿ ತೋರಿಸಿರುವ ಸತ್ಯವನ್ನು ತುಂಬಾ ಇಷ್ಟ ಪಟ್ಟಿದ್ದಾರೆ.ಅವರು ಮೂರು ಘಂಟೆ ಸಿನೆಮಾ ನೋಡಿದ್ದಾರೆ ಅದರ ಪ್ರಭಾವ ಮೂರು ದಿನ ಇರುತ್ತೆ.ಡ್ಯಾನಿಗೆ ಅವಾರ್ಡ್ ಸಿಕ್ಕಿದೆ ಅದರ ಪ್ರಭಾವ ಮೂರು ತಿಂಗಳು ಇರುತ್ತೆ .ಅಷ್ಟೆ.
ಆದ್ರೆ ಆ ಧಾರವಿ ಸ್ಲಂ ಜನರಿಗೆ ಇಂಥ ನೂರು ಸಿನೆಮಾ ಬಂದರೂ ಏನೂ ಲಾಭ ಇಲ್ಲ !
ನಮಗೆ ನವರಸಗಳಲ್ಲಿ ಕೆಲವು ರಸಗಳನ್ನು ತಣಿಸಿದ ಅನುಭವ ಅಷ್ಟೆ.ಅದನ್ನು ಬಿಟ್ರೆ ಯಾರಿಗೂ ನಯಾ ಪೈಸೆ ಲಾಭ ಇಲ್ಲ.
ಭಾರತದ ಕರಾಳ ರೂಪ ತೋರಿಸಿದವರಿಗೂ ಅದನ್ನು ಚಪ್ಪರಿಸಿ ನೋಡಿದವರಿಗೂ.ಏನಂತೀಯಾ ಸುಧೇಶ್?

ಚಿತ್ರಾ ಸಂತೋಷ್ said...

ಹಲೋ ಸಂದೀಪ್..ಅರ್ಥಪೂರ್ಣವಾದ ಬರಹಾನ ಓದಿದ ಖುಷಿ. ಸಂದರ್ಶಕನೆದುರು ನಿಂತ ಸಂದೀಪನೇ ಕೊನೆಗೆ ಸಂದರ್ಶಕನಾಗಿಬಿಡೋದಾ? "ನನ್ನ ಭಾರತವನ್ನು ಸುಂದರವಾಗಿ ತೋರಿಸಲಾಗಲಿಲ್ಲವಲ್ಲ ಅನ್ನೋ ಬೇಸರ ! ನನ್ನ ಭಾರತದಲ್ಲಿ ಇಷ್ಟೊಂದು ತೊಂದರೆಗಳಿವೆಯಲ್ಲಾ ಅನ್ನೋ ಬೇಸರ ! ನನ್ನ ಬಗ್ಗೆಯೆ ಬೇಸರ!"...ಕೊನೆಯ ವಾಕ್ಯದಲ್ಲಿ ಎಲ್ಲವನ್ನೂ ಒಂದೇ ಬಾರಿ ಹೇಳಿಬಿಟ್ಟಿದ್ದೀರಾ. ಆದರೆ ಈ ರೀತಿ ಯೋಚಿಸೋರು ದೇಶದಲ್ಲಿ ಎಷ್ಟು ಜನ ಇದ್ದಾರೆ?..!ಅನ್ನೋದಕ್ಕೆ ಉತ್ತರಮಾತ್ರ 'ಶೂನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿರಬಹುದಷ್ಟೇ'!
-ಪ್ರೀತಿಯಿಂದ,
ಚಿತ್ರಾ

Anonymous said...

:)
- Chetana

ಶ್ರೀನಿಧಿ.ಡಿ.ಎಸ್ said...

ಒಮ್ಮೆ ಸಿನಿಮಾ ನೋಡಿಬಿಡಿ..

Anonymous said...

Sandeep !!!

You speak your mind as it is that is what is endearing about your blog. You r neither a negative thinker nor a sadist. You will not lose anything if u do not watch that movie. the musical score by A.R. Rehman, i liked. Dont think the movie will get an Oscar though. that way 'lagaan' was a much better movie.

A day before i watched SDM, i read -TIK TIK GeLeya..from Jayanth kaikini Tuphan mail story collection..it was so touching. u should read that book da. I still am not being able to understand why people are creating a furor over SDM.

We have worked in Dharavi slums as part of a world bank Project. But as u said...they do it as social responsiblility but once the project is over they r not bothered what happens after the project period. What the film has depicted about life in a slum is true, but somehow the word 'dog' in the title made me feel uncomfortable.

Hey if u get a chance watch ‘changeling’ a gripping movie with excellent photography and a good performance by Angelina Jolie. The film is set in America in the 1929 there- abouts.

So keep writing in your unique style. And eating bangude in hotel is a better option so as not to antagonize our pure veg neighbours

Kassala mhaNtaa??

Dost

ಸಂದೀಪ್ ಕಾಮತ್ said...

ಚಿತ್ರಾ, ಚೇತನಾ, ಧನ್ಯವಾದಗಳು ಪ್ರತಿಕ್ರಿಯೆಗೆ!
ಚೇತನಾ ಏನ್ರಿ ಎಲ್ಲರಿಗೂ ಅಲ್ಲಿ ಸಂವಾದ ಇದೆ ಇಲ್ಲಿ ಸಂವಾದ ಇದೆ ಅಂತ ಹೇಳ್ತೀರಾ ಆದ್ರೆ ನೀವು ಯಾವ ಸಂವಾದಕ್ಕೂ ಬರೋದೇ ಇಲ್ವಲ್ರಿ!!

ಶ್ರೀನಿಧಿ ಖಂಡಿತ ನಾನು ಚಿತ್ರ ನೋಡ್ತೀನಿ.ನಂಗೆ ಚಿತ್ರದ ಬಗ್ಗೆ ಯಾವ ಆಕ್ಷೇಪವೂ ಇಲ್ಲ!
ನಂಗೆ ಇದ್ದಿದ್ದು ಒಂದೇ ಆಕ್ಷೇಪ ಇಂಥ ಚಿತ್ರವನ್ನು ನೋಡಿ ಹೊರ ದೇಶದವ್ರು ಭಾರತದ ಬಗ್ಗೆ ಏನು ಅಭಿಪ್ರಾಯ ತಾಳ್ತಾರೋ ಅನ್ನೋದು.ಆದ್ರೆ ಬಹಳಷ್ಟು ಜನರ ಅಭಿಪ್ರಾಯ ನೋಡಿದ ಮೇಲೆ ;ಬೇರೆಯವ್ರು ಏನಂದುಕೊಂಡ್ರೂ ಪರ್ವಾಗಿಲ್ಲ ಅಂತ ನಿರ್ಧಾರಕ್ಕೆ ಬಂದಿದ್ದೀನಿ!

ದೋಸ್ತ್,
ನೀವು ಹೇಳಿದ್ದು ಸರಿ .ನೀವು ಹೇಳಿದ ಚಿತ್ರಗಳನ್ನೂ ನೋಡ್ತೀನಿ.
ಧನ್ಯವಾದಗಳು ..

ಸುಧೇಶ್ ಶೆಟ್ಟಿ said...

Sandeep...

konegu cinema nodide... antha visheshathe yenu kaanisalilla nanage... Things are exaggarated and are not very realistic....

madhuru bhandarkaar, ameer khan cinemagalu needuva thripthiyannu ee cinema kanditha needuvudilla....

"Jai Ho" song maththu dance maathra ishta aaythu.....

ee film g eeth publicity daaye korpera?

ಸಂದೀಪ್ ಕಾಮತ್ said...

ಸುಧೇಶ್,
ಜನಕುಲೆ ಮರ್ಲ್ ಯಾ!!

Harisha - ಹರೀಶ said...

ಸ್ಲಮ್ ಡಾಗ್ ಮಿಲಿಯನೇರ್ ನೋಡಿದ್ರಾ?? ಒಟ್ಟಿಗೆ?

ಸಂದೀಪ್ ಕಾಮತ್ said...

ಇಲ್ಲ ಹರೀಶ್ !
ನನಗೆ ಹಿಂದಿಯಲ್ಲಿ ನೋಡ್ಬೇಕು ಅಂತ ಆಸೆ ಇಂಗ್ಲೀಷ್ ಡಿವಿಡಿ ಇದೆ ಆದ್ರೆ ಇರ್ಪಾನ್,ಸೌರಭ್ ಶುಕ್ಲಾ ಇವರ ಧ್ವನಿಯೇ ಜೀವಾಳ ಅದನ್ನು ಇಂಗ್ಲೀಷ್ ನಲ್ಲಿ ಕೇಳಲು ಸರಿ ಅನ್ಸಲ್ಲ.ಹಿಂದಿ ಡಿವಿಡಿ ಸಿಕ್ರೆ ನೋಡ್ತೀನಿ.