Saturday, February 21, 2009

ಪ್ರೀತಿಯಿಂದ ಪ್ರತಾಪ್ ಗೆ ...

"ಐಟಿ ಬೂಮ್ ಶುರು ಆಗಿ ಹದಿನೈದು ವರ್ಷಗಳಾದ್ರೂ ಈ ಐಟಿಯವರೇನು ಮಾಡ್ತಾರೆ ಅಂತ ಇನ್ನೂ ಜನರಿಗೆ ಗೊತ್ತಾಗಿಲ್ಲ !" ಅಂತ ಆರೋಪವನ್ನು ಪ್ರತಾಪ್ ಸಿಂಹರವರು ಹಾಕಿದ್ದಾರೆ ಈ ವಾರದ ’ಬೆತ್ತಲೆ ಜಗತ್ತಿನಲ್ಲಿ’ .ಹಿಂದೆ ಮಣಿಕಾಂತ್ ರವರು ಹಾಕಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಆರೋಪವನ್ನೂ ಹಾಕಿದ್ದರೆ ಪ್ರತಾಪ್.
ಶಾಂತಿಸಾಗರದಲ್ಲಿ ಕ್ಯಾಶಿಯರ್ ಏನ್ ಮಾಡ್ತಾನೆ ಅಂತ ಎರಡು ನಿಮಿಷ ಅವನ ಪಕ್ಕದಲ್ಲಿ ನಿಂತುಕೊಂಡ್ರೆ ಗೊತ್ತಾಗುತ್ತೆ.ಗ್ಯಾರೇಜ್ ಗೆ ಹೋದ್ರೆ ಅವನು ಕಾರಿನ ಒಂದೊಂದೇ ಬಿಡಿ ಭಾಗಗಳನ್ನು ಬಿಚ್ಚುತ್ತಾ ಇದ್ರೆ ಆ ಬಿಡಿ ಭಾಗಗಳು ಏನು ಅಂತ ಗೊತ್ತಿಲ್ಲದಿದ್ರೂ ಅವನೇನು ಮಾಡ್ತಾ ಇದ್ದಾನೆ ಅನ್ನೋದು ಸ್ವಲ್ಪವಾದ್ರೂ ಗೊತ್ತಾಗುತ್ತೆ.
ಮನೆಯಲ್ಲಿ ಬಿಸಿ ಬಿಸಿ ಕಾಫಿ ಕುಡೀತಾ ’ವಿಜಯ ಕರ್ನಾಟಕ’ ಓದ್ತಾ ಇದ್ರೆ ಖಂಡಿತ ವಿಜಯ ಕರ್ನಾಟಕದ ಪತ್ರಕರ್ತರು ಏನು ಮಾಡಿ ಈ ಪತ್ರಿಕೆಯನ್ನು ತಯಾರಿಸಿದ್ದಾರೆ ಅನ್ನೋದು ಅರ್ಥವಾಗಲ್ಲ.ಆದ್ರೆ ವಿಶ್ವೇಶ್ವರ ಭಟ್ಟರ ಅನುಮತಿ ಪಡೆದು ಒಂದು ದಿನ ಪತ್ರಿಕೆಯ ಕಚೇರಿಗೆ ಭೇಟಿ ಕೊಟ್ಟರೆ ಪತ್ರಿಕೆಯ ರೂಪುರೇಷೆ ಯಾರು ಮಾಡ್ತಾರೆ ,ಮುಖಪುಟ ಯಾರು ರಚಿಸ್ತಾರೆ.ಫಿಲ್ಲಿಂಗ್ ನ್ಯೂಸ್ ಅಂದ್ರೆ ಏನು ? ಇತ್ಯಾದಿ ಇತ್ಯಾದಿ ’ಸ್ವಲ್ಪವಾದ್ರೂ’ ಅರ್ಥವಾಗುತ್ತೆ.
ಆದ್ರೆ ನೀವು ಇನ್ಫೋಸಿಸ್ ಗೆ ಭೇಟಿ ಕೊಡಿ .ಒಂದು ಕ್ಯೂಬಿಕಲ್ ನಲ್ಲಿ ನಾಲ್ಕು ಜನ ಕೂತಿದ್ರೆ ಆ ನಾಲ್ಕು ಜನರಿಗೆ ಪರಸ್ಪರರು ಏನು ಮಾಡ್ತಾರೆ ಆನೋದೇ ಗೊತ್ತಿರಲ್ಲ.
ಇದು ಅವರ ತಪ್ಪಾ? ತನ್ನ ಸಹೋದ್ಯೋಗಿ ಏನು ಮಾಡ್ತಾನೆ ಅನ್ನೋದರ ಅರಿವು ಅವನಿಗೆ ಇರದೇ ಇದ್ದದ್ದು ತಪ್ಪಲ್ವ?
ಖಂಡಿತ ಅಲ್ಲ ! ಪಕ್ಕದವರು ಏನು ಮಾಡ್ತಾರೆ ಅನ್ನೋದು ತಿಳಿಯೋದು ಅಷ್ಟು ಸುಲಭವೂ ಅಲ್ಲ.

ಟಿವಿ ಹಾಳಾದಾಗ ಅದನ್ನು ರಿಪೇರಿಯವನ ಬಳಿ ಎಲ್ಲರೂ ತಗೊಂಡು ಹೋಗಿರ್ತಾರೆ .ಮತ್ತೆ ಆ ರಿಪೇರಿಯವನು ’ಸಾರ್ IC ಹೋಗಿದೆ ನಾಳೆ ಬನ್ನಿ ಸರಿ ಮಾಡಿ ಕೊಡ್ತೀನಿ ’ ಅನ್ನೋದೂ ಎಲ್ಲರಿಗೂ ಗೊತ್ತು .ಆದ್ರೆ ಆ IC ಅಂದ್ರೆ ಏನು ಅನ್ನೋದು ಗೊತ್ತಾ ? ಇಲ್ಲ!
ಆ ಐಸಿಯನ್ನು ತಯಾರಿಸಲು ಬೆಂಗಳೂರಿನ ಅಷ್ಟೂ ಸೆಮಿಕಂಡಕ್ಟರ್ ಕಂಪೆನಿಗಳಲ್ಲಿ ಅತ್ಯಂತ ಪ್ರತಿಭಾವಂತ ಇಂಜಿನಿಯರ್ ಗಳು ದಿನ ರಾತ್ರಿ ದುಡಿಯೋದು ನಮಗೆ ಗೊತ್ತಿರಲ್ಲ.
ನಾವು ಅಷ್ಟೆಲ್ಲಾ ಖುಷಿಯಿಂದ ಟಿವಿ ನೋಡ್ತೀವಿ ಟಿವಿಯ ಒಂದೊಂದು ದೃಶ್ಯವೂ ಅದ್ಭುತವಾಗಿ ಕಾಣೋದಕ್ಕೆ Sony India Software ನ ಕೋರಮಂಗಲದ ಆಫೀಸಿನಲ್ಲಿ ಇಪ್ಪತ್ತೈದು ಜನ ದಿನ ರಾತ್ರಿ ಕೂತು ಸಾಫ್ಟ್ವೇರ್ ಬರೀತಾ ಇರೋದು ಜನರಿಗೆ ಗೊತ್ತಾ?
ಹಿಂದೆಲ್ಲಾ ಟಿವಿಯಲ್ಲಿ ಕಾರ್ಯಕ್ರಮ ಯಾವುದು ಅಂತ ಗೊತ್ತಾಗೋದಕ್ಕೆ ಪೇಪರ್ ನೋಡ್ಬೇಕಿತ್ತು ಆದ್ರೆ ಈಗ ಸೆಟ್ ಟಾಪ್ ಬಾಕ್ಸ್ ನ ಆವಿಷ್ಕಾರದಿಂದ ಮುಂದಿನ ಕಾರ್ಯಕ್ರಮ ಯಾವುದು ಅಂತ ಟಿವಿಯಲ್ಲೇ ಒಂದು ಬಟನ್ ಪ್ರೆಸ್ ಮಾಡಿ ನೋಡಬಹುದು.ಇಂಥ ಸಾಫ್ಟ್ವೇರ್ ನ ನಾಗಾವರದ ಟೆಕ್ ಪಾರ್ಕಿನಲ್ಲಿ ಕುಳಿತ ಐದು ಜನ ಸಾಫ್ಟ್ ವೇರ್ ಇಂಜಿನಿಯರ್ ಬರೆದಿದ್ದು ನಿಮಗೆ ಗೊತ್ತಾ? ಗೊತ್ತಿಲ್ಲ.

ಯಾಕಂದ್ರೆ ಪತ್ರಿಕೆಯ ಲೇಖನದ ಕೆಳಗೆ ಲೇಖಕನ ಹೆಸರಿರುವ ಹಾಗೆ , ’ಈ ಸಾಫ್ಟ್ ವೇರ್ ಬರೆದವರು ...’ ಅಂತ ಇಂಜಿನಿಯರ್ ನ ಹೆಸರು ಟಿವಿಯಲ್ಲಿ ಬರಲ್ವಲ್ಲ .

ಬಹಳಷ್ಟು ಫೋಟೋಗ್ರಾಫರ್ ಗಳು ಈಗ ಪ್ರಖ್ಯಾತರಾಗಿದ್ದಾರೆ .ಆದ್ರೆ ಅವರು ಫೋಟೋ ತೆಗೆಯುವ ಕ್ಯಾಮೆರಾದಲ್ಲೊಂದು ಇಮೇಜ್ ಪ್ರೊಸೆಸಿಂಗ್ ಗೆ ಸಂಬಂದ ಪಟ್ಟ ಸಾಫ್ಟ್ ವೇರ್ ಇದೆ ಅನ್ನೋದು ಅವರಿಗೇ ಗೊತ್ತಿರಲ್ಲ .ಯಾಕಂದ್ರೆ ಕ್ಯಾಮೆರಾ ಬಿಚ್ಚಿದ್ರೂ ಸಾಫ್ಟ್ವೇರ್ ಕಾಣಲ್ವಲ್ಲ!
ಫೋಟೋ ತೆಗೆದಾದ ಮೇಲೆ ಅದನ್ನು ಕಂಪ್ಯೂಟರ್ ನಲ್ಲಿ ಅಪ್ಲೋಡ್ ಮಾಡಿ Adobe Photoshop ಉಪಯೋಗಿಸಿ ಅದರ ಬಣ್ಣವನ್ನು ತಿದ್ದಿ ತೀಡಿ ಸುಂದರಗೊಳಿಸುವಾಗ Photoshop ಸಾಪ್ಟ್ವೇರ್ ಬರೆದವನು ಅದನ್ನು ಹೇಗೆ ಬರೆದಿರ್ತಾನೆ ,ಅವನಿಗೆ ಫೋಟೋಗ್ರಾಫಿಯ ಬಗ್ಗೆ ಹೇಗೆ ಗೊತ್ತು .ಅಕಸ್ಮಾತ್ ಗೊತ್ತಿಲ್ಲ ಅಂದ್ರೆ ಅವನು ಫೋಟೋ ಸುಂದರ ಕಾಣುವ ಹಾಗೆ ಮಾಡುವ ಸಾಫ್ಟ್ವೇರ್ ಹೇಗೆ ಬರೀತಾ ಇದ್ದ ಅನ್ನೋದನ್ನ ಯೋಚಿಸ್ತಾರಾ ಫೋಟೋಗ್ರಾಫರ್ ಗಳು?
ಇಲ್ಲ ! ಪೈರೇಟೇಡ್ ಸಾಫ್ಟ್ವೇರ್ ಹಾಕಿ ಅದರಿಂದ ಫೋಟೋವನ್ನು ಬೇಕಾದ ಹಾಗೆ ಮಾರ್ಪಾಡು ಮಾಡಿ . ’ನಾನೇ ತೆಗೆದಿದ್ದು ’ ಅಂತ ನಾಲ್ಕು ಜನರಿಗೆ ತೋರಿಸಿ ಹೆಸರು ಗಳಿಸ್ತಾರೆ.ಇಮೇಜ್ ಸ್ಟೆಬಿಲೈಸೇಶನ್ ಸಾಫ್ಟ್ವೇರ್ ಬರೆದವನಿಗೂ ಬೈಗುಳ ! ಫೋಟೋಶಾಪ್ ಸಾಫ್ಟ್ವೇರ್ ಬರೆದವನಿಗೂ ಬೈಗುಳ !
ಮೊನ್ನೆ ’ವಿಜಯಕರ್ನಾಟಕ’ ದ ಮುಖಪುಟ ವಿನ್ಯಾಸಗಾರರಿಗೆ ಅತ್ಯುತ್ತಮ ಮುಖಪುಟ ವಿನ್ಯಾಸ ಮಾಡಿದ್ದಕ್ಕೆ ಪ್ರಶಸ್ತಿ ಬಂತಂತೆ ,ಸಂತೋಷ!.ಮುಖಪುಟ ಬಿಡಿ ಇಡೀ ಪತ್ರಿಕೆ ಸಿದ್ಧಪಡಿಸೋದಕ್ಕೆ ಅವರೂ ಸಾಫ್ಟ್ವೇರ್ ಉಪಯೋಗಿಸಿಯೇ ಇರ್ತಾರೆ .ಮೊದಲು ಒಂದು ಹೆಡ್ಡಿಂಗ್ ಹಾಕಿ ಅದರ ಸೈಜ್ ಹಿಗ್ಗಿಸಿ ಕುಗ್ಗಿಸಿ ,ಕಲರ್ ಬದಲಾಯಿಸಿ ನೋಡುವಾಗಲೂ ಅವರಿಗೆ ’ ವಾವ್ ಈ ಸಾಫ್ಟ್ವೇರ್ ಎಷ್ಟು ಚೆನ್ನಾಗಿದೆ ! ಬರೀ ಮೌಸ್ ಉಪಯೋಗಿಸಿಯೇ ಎಷ್ಟೆಲ್ಲಾ ಆಟ ಆಡಬಹುದು ’ ಈ ಸಾಫ್ಟ್ವೇರ್ ಬರೆದವನೇನಾದ್ರೂ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾನಾ? ಇಲ್ಲಾಂದ್ರೆ ಅವನಿಗೆ ನನ್ನ ಅವಶ್ಯಕತೆ ಹೇಗೆ ಗೊತ್ತಾಗ್ತಾ ಇತ್ತು ’ ಅನ್ನೋ ವಿಚಾರ ತಲೆಗೆ ಬರೋದೆ ಇಲ್ಲ!
ಅವರೇನಿದ್ರೂ ’ನೋಡ್ರಿ ನನ್ನ ಡಿಸೈನು ಹೆಂಗಿದೆ ’ ಅಂತ ಸ್ವಥ ಅವರೇ ಕೂತು ಒಂದೊಂದೆ ಅಕ್ಷರದ ಬಣ್ಣವನ್ನೂ ಕಲರ್ ಪೆನ್ಸಿಲ್ ನಿಂದ ಬದಲಾಯಿಸಿದವರ ಹಾಗೆ ಖುಷಿ ಪಡ್ತಾರೆ.
ಬಿ.ಎಮ್.ಟಿ.ಸಿ ಬಸ್ಸಿನ ಕಂಡಕ್ಟರ್ ತನ್ನ ಬಳಿ ಇರೋ hand held device ನ ಒಂದೇ ಒಂದು ಬಟನ್ ಒತ್ತಿ ಆ ದಿನದ ಟ್ರಿಪ್ ಶೀಟ್ ಪ್ರಿಂಟ್ ಮಾಡ್ತಾನೆ .ಅವನೂ ಯಾವತ್ತೂ ’ಅಯ್ಯೋ ನನ್ನ ಸಮಯ ಎಷ್ಟು ಉಳಿತಾಯ ಆಯ್ತು ಇದರಿಂದ .ಈ ಉಪಕರಣವನ್ನು ಡಿಸೈನ್ ಮಾಡಿದ ಪುಣ್ಯಾತ್ಮ ಯಾರೋ ,ಒಂದೇ ಬಟನ್ ಒತ್ತಿ ಇಡೀ ಟ್ರಿಪ್ ಶೀಟ್ ಮಾಡೋ ಹಾಗೆ ಸಾಫ್ಟ್ವೇರ್ ಬರೆದ ಆ ಮನುಷ್ಯನ ಹೊಟ್ಟೆ ತಣ್ಣಗಿರಲಿ ಅಂತ ’ ಹೇಳಲ್ಲ . ’ ರೀ ಹನುಮಂತಪ್ಪ ಈ ಸಾಫ್ಟ್ವೇರ್ ಮುಳುಗೋಯ್ತಂತೆ, ಹಾಳಾದ್ದು ಹಾಗೆ ಆಗ್ಬೇಕು ಅವರಿಗೆ ’ ಅಂತಾರೆ.

ನಿಮ್ಮ ಸಂಬಂದಿಗಳಿಗೆ ಬ್ರೇನ್ ಟ್ಯೂಮರ್ ಆಗಿದೆ ಅಂತ Nimhans ಗೆ ಹೋಗ್ತೀರಾ(ಹಾಗೆ ಆಗದಿರಲಿ).ಅಲ್ಲಿ ಡಾಕ್ಟರ್ ಸ್ಕ್ಯಾನಿಂಗ್ ಮಾಡ್ಬೇಕು ಅಂತಾರೆ .ಸ್ಕ್ಯಾನಿಂಗ್ ಮಾಡ್ತಾ ಇರ್ಬೇಕಾದ್ರೆ ಟಿವಿಯಂಥ ಒಂದು ಪರದೆಯಲ್ಲಿ ಚಿತ್ರ ಮೂಡುತ್ತೆ . ’ಡಾಕ್ಟರ್ ಚಿತ್ರ ನೋಡಿ, ಈಗ್ಲೇ ತೋರ್ಸಿದ್ದು ಒಳ್ಳೆದಾಯ್ತು .ಇಲ್ಲಾಂದ್ರೆ ಪ್ರಾಣಾನೇ ಹೋಗ್ತಿತ್ತು’ ಅಂತಾರೆ.ನೀವೂ ಖುಷಿಯಾಗಿ ಡಾಕ್ಟರ್ ಕಾಲಿಗೆ ಡೈವ್ ಹೊಡೀತೀರಾ.
ಆದ್ರೆ ಯಾವೊಬ್ಬನೂ ಆ ಸ್ಕ್ಯಾನಿಂಗ್ ಮೆಶಿನ್ ಇಲ್ಲದಿದ್ರೆ ಆ ಡಾಕ್ಟರ್ ಅಲ್ಲ ಅವನ ತಾತ ಕೂಡಾ ಟ್ಯೂಮರ್ ಪತ್ತೆ ಹಚ್ಚೋದು ಸಾಧ್ಯ ಇರಲಿಲ್ಲ ಅನ್ನೋದು ಯೋಚಿಸಲ್ಲ.ಆ ಸ್ಕ್ಯಾನಿಂಗ್ ಉಪಕರಣದಲ್ಲಿ ಸ್ಪಷ್ಟವಾಗಿ ಚಿತ್ರಗಳು ಮೂಡುವಂತೆ ಸಾಫ್ಟ್ವೇರ್ ಅನ್ನು ಬರೆದ ’ನಮ್ಮ ಬೆಂಗಳೂರಿನ’ ನಾಗಾವರದ ಟೆಕ್ ಪಾರ್ಕಿನಲ್ಲಿ ಕುಳಿತ ಫಿಲಿಪ್ಸ್ ಕಂಪೆನಿಯ ತರುಣ ಹುಡುಗ ಹುಡುಗಿಯರನ್ನು ನೆನೆಸಿಕೊಳ್ಳೋದೆ ಇಲ್ಲ .ಯಾಕಂದ್ರೆ ಆ ಸ್ಕ್ಯಾನಿಂಗ್ ಚಿತ್ರ ತೋರಿಸ್ತಾ ಇರ್ಬೇಕಾದ್ರೆ ’ಈ ಟ್ಯೂಮರ್ ತೋರಿಸಲು ಸಹಕಾರಿಯಾದವನು ನಾನೇ ’ ಅಂತ ಆ ಹುಡುಗ-ಹಡುಗಿಯರ ಹೆಸರು ಕಾಣಿಸಲ್ವಲ್ಲ ಆ ಚಿತ್ರದಲ್ಲಿ.

ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಸಾಫ್ಟ್ವೇರ್ ಬಿಟ್ರೆ ಬೇರೆ ಏನೂ ಕೆಲಸ ಗೊತ್ತಿಲ್ಲ ಅಂತ ಆರೋಪಿಸ್ತಾರೆ ಪ್ರತಾಪ್.ಹೌದು ಅದೊಂದೆ ಗೊತ್ತಿರೋದು ಆದ್ರೆ ಅದು ತಪ್ಪಾ?.ಒಬ್ಬ ಪತ್ರಕರ್ತನ ಕೆಲಸ ಹೋದ್ರೆ ಅವನೇನು ಮಾಡ್ತಾನೆ ? ಬೇರೆ ಪತ್ರಿಕೆಗಳಿಗೆ ತಾನೇ ಅರ್ಜಿ ಹಾಕೋದು?ಬೇರೆ ಕೆಲಸ ಮಾಡೋದಿಕ್ಕೆ ಅವರು ತಯಾರಿದ್ದಾರಾ?ಬೇರೆ ಗತ್ಯಂತರವಿಲ್ಲದೇ ಇದ್ರೆ ಯಾವ ಕೆಲಸಕ್ಕಾದರೂ ಇಳಿದೇ ಇಳೀತಾರೆ ಜನ ಅದು ಪ್ರಕೃತಿ ನಿಯಮ.ಈಗಾಗಲೇ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಸಿಕ್ಕದೆ ಮೇರು ಟ್ಯಾಕ್ಸಿಯ ಡ್ರೈವರ್ ಆಗಿದ್ದಾನಂತೆ!

ಇಷ್ಟೆಲ್ಲ ದಿಗ್ಗಜ ಐಟಿ ಕಂಪೆನಿಗಳಿದ್ದರೂ ಪೇಟೆಂಟ್ ಗಳು ಶೂನ್ಯ ಅಂತ ಆರೋಪಿಸಿದ್ದಾರೆ.ಟೆಕ್ಸಾಸ್ ಇನ್ಸ್ಟ್ರುಮೆಂಟ್ ಅನ್ನೋ ಕಂಪೆನಿಯ ಬೆಂಗಳೂರಿನ ಶಾಖೆಯಲ್ಲಿ ವರ್ಷಕ್ಕೆ ನೂರಾರು ಪೇಟೆಂಟ್ ಗಳು
ದಾಖಲಾಗುತ್ತವೆ.ಅದು ಬಹುಷ ಪ್ರತಾಪ್ ರಿಗೆ ಗೊತ್ತಿಲ್ಲ.ಯಾಕಂದ್ರೆ ಅವರಿಗೆ ಗೊತ್ತಿರೋದು ಬರೀ ದಿಗ್ಗಜರಾದ ಇನ್ಫೋಸಿಸ್ ಹಾಗೂ ವಿಪ್ರೋ .

ಹೌದು ಐಟಿಯವರು ಅಮೆರಿಕಾದ ಕೂಲಿಗಳು. ಹಾಗೆ ನೋಡಿದ್ರೆ ಸಂಬಳ ತಗೊಳ್ಳುವರೆಲ್ಲಾ ಕೂಲಿಗಳೇ! ಏನೇ ಪತ್ರಿಕಾಧರ್ಮ ,ಅದು ಇಂದು ಅಂದುಕೊಂಡರೂ ತಿಂಗಳ ಕೊನೆಗೆ ಸಂಬಳಕ್ಕಾಗಿ ದಣಿಗಳ ಮುಂದೆ ಯಾವನಾದ್ರೂ ಕೈ ಚಾಚಲೇ ಬೇಕಲ್ವ?
ಒಟ್ಟಿನಲ್ಲಿ ಐಟಿಯವರನ್ನು ದೂಷಿಸೋದು ಕಡಿಮೆ ಆಗೋ ಯಾವ ಲಕ್ಷಣಗಳೂ ಕಾಣಿಸ್ತಾ ಇಲ್ಲ .

ಆಲ್ ದಿ ಬೆಸ್ಟ್ !

75 comments:

Pramod said...

ಸಾಫ್ಟ್ ವೇರನ್ನು ಯಾರು ಯಾರು ಎಲ್ಲೆಲ್ಲಿ ಹೇಗೆ ಉಪಯೋಗಿಸ್ತಾರೆ ಅ೦ತಾ ತು೦ಬಾ ಸರಿಯಾಗಿ ಹೇಳಿದ್ರಿ, ಪ್ರತಾಪ್ ಅವ್ರೂ ಬ್ಗಾಗಿ೦ಗ್ ಮಾಡ್ತಾರೆ, ಮತ್ತೆ ಅದೇನ೦ತೆ? ಸಾಫ್ಟ್ ವೇರ್ ಅಲ್ವಾ? ಅವರಲ್ಲದ, ಅವರಿಗಲ್ಲದ ಪ್ರೊಫೆಷನ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ..ಅಲ್ವಾ?

Anonymous said...

ಸಂದೀಪ್ ಅವರೇ,
ನೀವು ಹೇಳುವುತ್ತಿರುವುದು ಎಷ್ಟೋ ನಿಜ.
ಯಾವಗಲೂ ಎಲ್ಲಾರೂ ಯಾಕೆ ಐ.ಟಿ. ಇಂಡಸ್ಟ್ರೀಯನ್ನ ಇಷ್ಟಾಗಿ ತೆಗಳುತ್ತಾರೋ ನನಗಂತೂ ಅರ್ಥವಾಗುವುದಿಲ್ಲ.

ಇನ್ನೂ ಒಂದು ಮಾತು ಅವರು ಹೇಳಿದ್ದು ಸಾವಿರಾರು ಮನೆಗಳು ಉದ್ಧಾರವಾದರೂ ಅದಕ್ಕಿಂತ ಹೆಚ್ಚಿನವು ನಾಶವಾಗಿದೆ ಅಂತ. ಅದನ್ನಂತೂ ನಂಬಲು ಸಾಧ್ಯವಿಲ್ಲ. ಒಂದೆರಡು ತಿಂಗಳ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಸರ್ವೇ ಮಾಡಿದ್ದರು. ಬೆಂಗಳೂರಿನಲ್ಲಿ ಐ.ಟಿ. ಇಂಡಸ್ತ್ರೀಯಲ್ಲಿರುವ ಜನ 10% ಗಿಂತಲೂ ಕಡಿಮೆ ಅಂತ. ಆದರೆ ಉಳಿದಿರುವವರಲ್ಲಿ 25% ಗಿಂತಲೂ ಹೆಚ್ಚು ಜನ ಐ.ಟಿ. ಕಂಪೆನಿಗಳಿಗೆ ಕ್ಯಾಬ್, ಹೌಸ್ ಕೀಪಿಂಗ್, ಕ್ಯಾಟರಿಂಗ್ ಇತ್ಯಾದಿ ಮಾಡಿ ಜೀವನ ನಡೆಸುತ್ತಿದ್ದಾರೆ ಅಂತ. ಈಗ ಐ.ಟಿ. ಇಂಡಸ್ಟ್ರೀ ಬಿದ್ದರೆ ಇವರ ಗತಿ?

ಹೋಗಲಿ ದುಡ್ಡಿದೆ ಅಂತ ನಾವು ಸುಮ್ಮ ಸುಮ್ಮನೆ ಖರ್ಚು ಮಾಡುತ್ತಿದ್ದೇವೆ ಅನ್ನುವುದು ಅವರ ಇನ್ನೊಂದು ಅಪವಾದ. ಬರೀ ಐ.ಟಿ. ಕಂಪೆನಿಯವರು ಹೀಗೆ ಮಾಡುತ್ತಾರಾ? ಎಲ್ಲರೂ ಇದೇ ಅಲ್ಲವೇ ಮಾಡುವುದು. ಕೂಲಿ ಮಾಡುವವರು ದುಡಿದ 120ರೂಪಾಯಿಯಲ್ಲಿ ಏನಿಲ್ಲ ಅಂದರೂ 50ರೂ ಕುಡಿಯಲು ಖರ್ಚು ಮಾಡುತ್ತಾರೆ, ಪತ್ರಿಕೋದ್ಯಮದವರೂ ಇದಕ್ಕೆ ಹೊರತಲ್ಲ ಎಂದು ಕೇಳಿದ್ದೇನೆ, ಆದರೆ ಅವರಿಗೆ ಕಾಣುವುದು ಮಾತ್ರ ನಾವು.
ಈಗ ದುಡ್ಡಿದೆ ಅಂತ ದಿನಪತ್ರಿಕೆ ತೆಗೆದುಕೊಳ್ಳುತ್ತಿದ್ದೇವೆ, ಅದನ್ನೇ ನಿಲ್ಲಿಸಿದರೆ? ಆಗ ಪತ್ರಿಕಾ ಉದ್ಯೋಗಕ್ಕೊ ರಿಸೆಷನ್ ಬಿಸಿ ಮುಟ್ಟುತ್ತದೆ ಅಲ್ವಾ?

ಟಾಟಾ, ಬಿರ್ಲಾ ಅಂತ ಯಾವುದ್ಯವುದೋ ಉದಾಹರಣೆ ಕೊಡುತ್ತಾರೆ, ನಮ್ಮ ಕಂಪೆನಿ "Giving back to society" ಅನ್ನುವುದನ್ನ ತನ್ನ ಧ್ಯೇಯಗಳಲ್ಲಿ ಒಂದಾಗಿಸಿದೆ. ಪ್ರತೀ ತಿಂಗಳೂ, ಪ್ರತೀ ವರ್ಷ ಒಂದಲ್ಲ ಒಂದು ರೀತಿ ಅನಾಥಶ್ರಮಗಳಿಗೆ, ಸರಕಾರಿ ಶಾಲೆಗಳಿಗೆ ಚಂದಾ ರೂಪದಲ್ಲಿ ದುಡ್ಡು ಕೊಡುತ್ತದೆ, ತುಂಬಾ ಜನ ಉದ್ಯೋಗಿಗಳೂ ಪ್ರತೀ ತಿಂಗಳೂ ಶ್ರಮದಾನ ಮಾಡುತ್ತಾರೆ, ಆದರೆ ಯಾರೂ ಅದಕ್ಕೆ ಪ್ರಚಾರ ಬಯಸುವುದಿಲ್ಲ. ಇದು ನಮ್ಮ ತಪ್ಪಾ?

ಮಲೆನಾಡಲ್ಲಿ ಹೋಮ್ ಸ್ಟೇ ಅಂತ ಇನ್ನೊಂದು ವಿಷಯ ಬರೆದಿದ್ದಾರೆ. ಅದರಲ್ಲಿ ನಮ್ಮ ತಪ್ಪಿಗಿಂತ ಆ ಮನೆಯವರ ತಪ್ಪಿನ ಪಾಲು ಹೆಚ್ಚು ಅಂತ ನಿಮಗೆ ಅನಿಸುವುದಿಲ್ಲವೇ? ಈ ಹೋಮ್ ಸ್ಟೇ ಗಳನ್ನು ಬರೀ ಐ.ಟಿ. ಕಂಪೆನಿ ಉದ್ಯೋಗಿಗಳಿಗಾಗಿ ಮೀಸಲಾಗಿ ಇಡಲಿಲ್ಲವಲ್ಲಾ, ಎಲ್ಲರೂ ಹೋಗುತ್ತಾರೆ(ಪತ್ರಿಕೋದ್ಯಮಿಗಳು ಕೂಡಾ), ಆದರೆ ಕಾಣಿಸುವುದು ಬರೀ ನಾವು!

ಯಾಕೆ ಹೀಗೆ?

ಸುಧೇಶ್ ಶೆಟ್ಟಿ said...

ಹಲೋ ಸ೦ದೀಪ್...

ಬೆಳಗ್ಗೆ ಪ್ರತಾಪ್ ಸಿ೦ಹರ ಲೇಖನ ಓದಿದ ಮೇಲೆ ನನಗೆ ಕೂಡಲೇ ನೆನಪಾದದ್ದು ನೀನು. ನೀನು ಅವರ ಲೇಖನ ಓದಿದ ಮೇಲೆ ಅದರ ಬಗ್ಗೆ ಬರೆಯಬಹುದು ಅ೦ತ ಗೆಸ್ ಮಾಡಿದ್ದೆ. ನಾನು ಎಣಿಸಿದ೦ತೆ ಸೂಪರ್ ಲೇಖನ ಬರೆದಿದ್ದೀಯಾ:)

ಓದಿ ತು೦ಬಾ ಖುಷಿಯಾಯಿತು. ಸಾಫ್ಟ್ವೇರ್ ಇ೦ಡಸ್ಟ್ರಿ ಬಗ್ಗೆ ಗೊತ್ತಿಲ್ಲದವರೊಮ್ಮೆ ನಿನ್ನ ಲೇಖನವನ್ನು ಓದಬೇಕು.

ಸಾಫ್ಟ್ವೇರ್ ಕ೦ಪೆನಿಗಳ ಬಳಿ ಯಾವುದೇ ಪೇಟೆ೦ಟ್ ಗಳಿಲ್ಲ ಅ೦ತ ಆರೋಪಿಸಿದ್ದಾರಲ್ಲ, ಇನ್ಫೋಸಿಸ್ ಬಳಿಯೇ ಬೇಕಾದಷ್ಟು ಪೇಟೆ೦ಟುಗಳಿವೆ ಎ೦ಬುದು ಬಹುಶಹ ಪ್ರತಾಪ್ ಸಿ೦ಹರಿಗೆ ಗೊತ್ತಿಲ್ಲ ಅ೦ತ ಕಾಣಿಸುತ್ತದೆ. ಬರೆಯುವ ಮೊದಲು ಸ್ವಲ್ಪ ಗೂಗಲ್ ಮಾಡಿದ್ದರೂ ಸಾಕಿತ್ತು.

ನೀನು ಉಪಯೋಗಿಸುವ ಲಾಜಿಕ್ ಪಾಯಿ೦ಟ್ಸ್ ಸೂಪರ್:)

Anonymous said...

ಸಂದೀಪ್, ಬಹಳ ಚೆನ್ನಾಗಿ ಪಾಯಿಂಟ್ ಮೇಲೆ ಪಾಯಿಂಟ್ ಹಾಕಿ ಬರ್ದಿದೀರಾ. ನನಗೂ ಸಾಕಾಗಿದೆ ಅದೇ ರಾಗ ಅದೇ ತಾಳ ಅಂತ ಎಲ್ಲರೂ ಐಟಿ ಇಂಡಸ್ಟ್ರಿಯನ್ನು ತೆಗಳೋದು.

Anonymous said...

Well done mamu...Mast Article.

Keshav.Kulkarni said...

ಪ್ರತಾಪರ ಲೇಖನದ ಲಿಂಕ್ ಕೊಡಬೇಕಿತ್ತು ಇದರ ಜೊತೆ.

ಕೇಶವ (www.kannada-nudi.blogspot.com)

ಹರೀಶ ಮಾಂಬಾಡಿ said...

Good observation!

ಸಂತೋಷಕುಮಾರ said...

ಸಂದೀಪ್,

ನಿಮ್ಮ ನೋವು ನನಗೆ ಅರ್ಥವಾಗುತ್ತಿಲ್ಲಾ. ನೀವು ಹೇಳಿದ Philips,Sony india softwareನ ಇಂಜೀನಿಯರರುಗಳು ಯಾವುದೋ ಧರ್ಮ ಕಾರ್ಯಗಳಿಗೆ ಮಾಡುತ್ತಿಲ್ಲ್ಲಾ! They are paid well for that and they r doing. If they wont do, some one in market will do and grab the market, its all marketing boss. If you wont give some thing new and user friendly, u wont survive in market, thats it. you dont describe this as "social cause" ಅವರೇನೂ ಇಡಿ ಮನುಕುಲಕ್ಕೆ ಉಪಯೋಗವಾಗಲಿ ಅಂತೆಲ್ಲಾ ಮಾಡುತ್ತಿಲ್ಲಾ, ಅವರಿಗೆ ಅವರ ಸಂಶೋಶನೆಯ ಪೆಟೆಂಟ್ ಬೇಕು, ಅದರಿಂದ ಬರುವ ಹಣ ಬೇಕು ಅಷ್ಟೇ. ನೀವು ಅವಕ್ಕೆಲ್ಲಾ ಇಲ್ಲದ ಸಾಮಾಜಿಕ ಆಯಾಮಗಳನ್ನೂ ಆರೋಪಿಸ್ತಾ ಇದ್ದಿರಾ. ಅನವಶ್ಯಕವಾಗಿ ಸಾಫ್ಟವೇರಿನವರನ್ನು "ಧರ್ಮಾತ್ಮ"ರು ಅನ್ನೋ ಭ್ರಮೆ ಮೂಡಿಸ್ತಾ ಇದ್ದಿರಾ ಮತ್ತು ನೀವೂ ಅದೇ ಕಲ್ಪನೆಯಲ್ಲಿ ಇದ್ದೀರಾ.
ಅವರ ಉದ್ದೇಶ ಒಳ್ಳೆಯದೇ ಆಗಿದ್ದರೆ ದೊಡ್ಡ ದೊಡ್ಡ ಸಂಬಳ ಕೊಡುವ ಕಂಪನಿಗಳೇ ಆಗಬೇಕಿರಲಿಲ್ಲಾ. DRDO, ISROಗಳಂತಹ ಸರಕಾರಿ ಸಂಸ್ಥೆಗಳಲ್ಲೂ ಸಂಶೋದನೆ ಮಾಡ ಬಹುದಿತ್ತಲ್ಲ?

ನಿಮ್ಮ ಇನ್ನೊಂದು ಆರೋಪವೆಂದರೆ ಐಟಿಯವರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲಾ ಅಂತ.Every profession has its own significance, if u become a teacher u wont get good money, but u ll get social respect, if u become scintist, u ll get name and fame.. so n so.. Its all depends on our priorities and what we want ಅಂತಾ, ನಿಮಗೆ ದುಡ್ಡು ಬೇಕಿತ್ತು ಅದಕ್ಕೆ ಈ profession ಆರಿಸಿಕೊಂಡಿರಿ ಅಷ್ಟೆ!.. ಅದು ಬಿಟ್ಟು ನನ್ನ ಹೆಸರು ಹಾಕ್ಲಿಲ್ಲಾ ಅಂತ ಹಲುಬುವದರಲ್ಲಿ ಅರ್ಥವಿಲ್ಲಾ.

ಇನ್ನು ಪ್ರತಾಪ ಸಿಂಹರ ವಾದಗಳು ಬಿಡಿ "ತೋಳ ಹಳ್ಳಕ್ಕೆ ಬಿತ್ತು ಅಂದರೆ ಆಳಿಗೊಂದು ಕಲ್ಲು " ಅಂತಾರಲ್ಲಾ ಹಾಗೆ ಇದ್ದ ಬದ್ದ ಎಲ್ಲಾ ಉರಿಯನ್ನು ಕಾರಿಕೊಂಡಿದ್ದಾರೆ. ಕೆಲವರಿಗೆ ಹಂಗೆನೆ ಕೈಗೆ ಸಿಗದ ದ್ರಾಕ್ಷಿ ಹುಳಿಯಾಗಿಯೇ ಇರುತ್ತೆ. ಪ್ರತಿ ವಾರವೂ ಎನಾದರೂ ಬರೆಯಲೇಬೇಕಲ್ಲಾ, ಬರೆಯುತ್ತಾರೆ. ಅದರ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸುವದು ಬೇಕಿರಲಿಲ್ಲಾ..

Anonymous said...

Santhosha Kumara,
Nijavaglu ninna tale li segani tumbide, enu baryake hontiya anta yarigu gottu agata illa.

ಸಂದೀಪ್ ಕಾಮತ್ said...

ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
ಪ್ರಮೋದ್ ನೀನು ಹೇಳಿರೋದು ನಿಜ "ಅವರಲ್ಲದ, ಅವರಿಗಲ್ಲದ ಪ್ರೊಫೆಷನ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ".

ಜ್ಯೋತಿ,
ನಿಮ್ಮ ಪ್ರಶ್ನೆಗೆ ಉತ್ತರ ಸಂತೋಷ್ ಕುಮಾರರ ಕಮೆಂಟಿನಲ್ಲಿ ಸಿಗುತ್ತೆ ನೋಡಿ.ಸಂತೋಷ್ ಕುಮಾರರು ಸ್ವಥ ಐಟಿ ಜಗತ್ತಿನಲ್ಲಿದ್ದು ಅದರ ಬಗ್ಗೆ ಎಳ್ಳಷ್ಟೂ ಅಭಿಮಾನ ಇಲ್ಲದವರು.

ಸಂತೋಷ್ ,
ಐಟಿ ಬೇರೆ ಯಾವುದೇ ಉದ್ಯೋಗದ ಹಾಗೆ ಒಂದು ಉದ್ಯೋಗ .ಇಂಜಿನಿಯರ್ ಗಳು ಧರ್ಮಾತ್ಮರೆಂದು ನಾನು ಹೇಳಿಲ್ಲ .ಅವರು ಮಾಡಿದ ಕೆಲಸಕ್ಕೆ ಅವರು ಸಂಬಳ ತಗೊಳ್ಳುತ್ತಾರೆ .ಆ ಸಂಬಳ ಹೆಚ್ಚೋ ಕಡಿಮೆಯೋ ಎಂದು ನಿರ್ಧರಿಸುವ ಹಕ್ಕು ಯಾರಿಗೊ ಇಲ್ಲ.
ಪ್ರತಾಪ್ ಸಿಂಹ ಅಷ್ಟೆಲ್ಲ ಬರೆದು ಸಂಬಳ ತಗೊಳ್ಳಲ್ವಾ? ಅನಂತಮೂರ್ತಿಗಳು , ಎಸ್ ಎಲ್ ಭೈರಪ್ಪ ಅವರು ಶ್ರೇಷ್ಠ ಬರಹಗಾರರು ಅವರು ತಮ್ಮ ಪುಸ್ತಕಗಳನ್ನು ಮಾರ್ತಾರೋ ಅಥ್ವ ನಿಮಗೆ ಧರ್ಮಕ್ಕೆ ಓದಲು ಕೊಡುತ್ತಾರೆ?
ಮನಮೋಹನ್ ಸಿಂಗ್ ಈ ದೇಶದ ಪ್ರಧಾನಿ.ಅವರು ಸಂಬಳ ತಗೊಳ್ಳಲ್ಲವ?
ಎ.ಅರ್ ರಹಮಾನ್ ಆಸ್ಕರ್ ಮೆಟ್ಟಿಲು ಹತ್ತಿದ್ದಾರೆ .ಹಾಗಂತ ಅವರು ಬಿಟ್ಟಿ ಮ್ಯೂಸಿಕ್ ಕೊಟ್ಟಿದ್ದಾರಾ ಸ್ಲಮ್ ಡಾಗ್ ಗೆ? ಎಲ್ಲ ಬಿಸಿನೆಸ್ ಕಣ್ರಿ.

ರೋಹಿಣಿ ನಿಲೇಕಣಿ ಹಾಗೊ ಸುಧಾ ಮೂರ್ತಿಯವರು ಅಷ್ಟೊಂದು ಶ್ರೀಮಂತರಾಗಿದ್ದಕ್ಕೆ ಅಷ್ಟೊಂದು ದಾನ ಧರ್ಮ ಮಾಡೋದು.social cause ಎಲ್ಲ ಹೊಟ್ಟೆ ತುಂಬಿದ ಮೇಲೆ ಸ್ವಾಮಿ.ಹಾಗಾಗಿ ಸಾಫ್ಟ್ವೇರ್ ಇಂಜಿನಿಯರ್ ಗಳು ಚ್ಯಾರಿಟಿ ಕೆಲಸ ಮಾಡ್ತಾ ಇದ್ದಾರೆ ಅಂತ ನಾನೆಲ್ಲೂ ಹೇಳಿಲ್ಲ.
DRDO ,ISRO ಗಳಲ್ಲಿ ಕೆಲಸ ಮಾಡುವವರ ಬಗ್ಗೆ ನನಗೆ ಅಪಾರವಾದ ಗೌರವವಿದೆ.ಹಾಗಾಗಿ ಅವ್ರ ಬಗ್ಗೆ ನಾನೀಗ ಮಾತಾಡಲ್ಲ.
if u become a teacher u wont get good money ಅಂದ್ರಿ .ಅದೆಲ್ಲ ಹಳೆಕಾಲದ ಮಾತು ಸರ್ ಈಗ ಇಂಟರ್ನಾಶನಲ್ ಸ್ಕೂಲ್ ಗಳಿವೆ ಹೋಗಿ ಕೇಳಿ ಸಂಬಳ ಎಷ್ಟು ಅಂತ.ಅವರನ್ನು ಕೇಳಿ ನಮ್ಮೂರಿನ ಸರಕಾರಿ ಶಾಲೆಗೆ ಬರ್ತಾರ ಅಂತ .ಅವರು ಒಪ್ಪಿದ್ರೆ ನಾನು ನಿಮ್ಮ ಕಾಲಿಗೆ ಬೀಳ್ತೀನಿ ಸ್ವಾಮಿ.
ಪ್ರತಾಪ್ ಸಿಂಹರ ಲೇಖನಕ್ಕೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಅಂದ್ರಿ.
ಹಾಗಿದ್ರೆ ನೀವ್ಯಾಕೆ ನನ್ನ ಲೇಖನಕ್ಕೆ ಪ್ರತಿಕ್ರ್ಯಿಸಿದ್ರಿ ಅಷ್ಟೊಂದು ಆಸಕ್ತಿಯಿಂದ.ನಿಮಗೆಲ್ಲಿಂದ ಅಷ್ಟೊಂದು ಆಸಕ್ತಿ ಕೆರಳಿತು?
ಐಟಿಯವರಿಗೆ ಸ್ಥಾನಮಾನ ಕೊಡಿ ಅಂತ ನಾನು ಕೇಳಿಲ್ಲ.ಆದ್ರೆ ತೆಗಳೋದು ಬೇಡ ಅಂತ ಅಷ್ಟೆ ನಾನು ಹೇಳಿದ್ದು.
ಅವರು ಐಟಿಯವರನ್ನು ತೆಗಳಿದಾಗಲೂ ನನಗೆ ಬೇಜಾರಗಿರ್ಲಿಲ್ಲ ನೀವು ಇದೇ ಫೀಲ್ಡ್ ನಲ್ಲಿದ್ದು ತೆಗಳ್ತಾ ಇದ್ದೀರಲ್ಲ ಅದು ನಂಗೆ ಇಷ್ಟ ಆಗಿಲ್ಲ.ನಿಮಗೆ ಈ ಫೀಲ್ಡ್ ಬಗ್ಗೆ ಗೌರವ ಇಲ್ಲ ಅಂದ್ರೆ ಬೇರೆ ಫೀಲ್ಡ್ ನೋಡ್ಕೊಳ್ಳಿ ಸರ್.
ನಾನು ಐಟಿ ಜಗತ್ತಿನ ಅನ್ನ ಉಣ್ಣುತ್ತಿರೋದ್ರಿಂದ ಅದನ್ನು ತೆಗಳಿದ್ರೆ ನಂಗೆ ಬೇಜಾರಾಗುತ್ತೆ(ತೆಗಳಿಗೆಕೆ ಕಾರಣವಿದ್ದರೂ)
.ನಾನು ಪಾಕಿಸ್ತಾನಿಯಾಗಿದ್ದರೆ ಪಾಕಿಸ್ತಾನವನ್ನೇ ಸಮರ್ಥಿಸ್ತಾ ಇದ್ದೆ.
ನಾನು ಅಂಡರ್ ವರ್ಲ್ಡ್ ನಲ್ಲಿದ್ರೆ ಅದನ್ನೇ ಸಮರ್ಥಿಸ್ತಾ ಇದ್ದೆ .
ತಪ್ಪು ಸರಿ ನೋಡ್ಕೊಂಡು ಸಮರ್ಥಿಸೊ ಜಾಯಮಾನ ನನ್ನದಲ್ಲ.

Anonymous said...

Sandeep, very apt writeup to answer all those who have vengeance about IT employees. Please do forward it to Pratap simha :-)
At the same time, we don’t need to feel low about people talking ill of IT employees. The words just depict their level of thinking.

ಸಂದೀಪ್ ಕಾಮತ್ said...

ರಾಧಿಕಾ ,
ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು.
ಈ ಲೇಖನ ಓದಿ ಪ್ರತಾಪ್ ಸಿಂಹ ತಮ್ಮ ಅಭಿಪ್ರಾಯ ಬದಲಿಸಿಕೊಳ್ತಾರೆ ಅನ್ನೋ ಅಭಿಪ್ರಾಯ ನನಗಿಲ್ಲ.ಐಟಿ ಜಗತ್ತಿನ್ನಲ್ಲಿರುವ ಇಂಜಿನಿಯರಗಳಿಗೇ ತಮ್ಮ ಉದ್ಯೋಗದ ಬಗ್ಗೆ ಅಭಿಮಾನ ಇಲ್ಲದ ಮೇಲೆ ಬೇರೆಯವರಿಂದ ಏನನ್ನು ಅಪೇಕ್ಷಿಸಬಹುದು ಅಲ್ವ?
ಕೆಲವು ಪ್ರಶ್ನೆಗಳಿಗಷ್ಟೇ ನಾನು ಉತ್ತರಿಸಲು ಪ್ರಯತ್ನಿಸಿದೆ ಅಷ್ಟೇ :
೧.ಐಟಿ ಯವರ ಕೊಡುಗೆ ಏನು?
೨.ಭಾರತೀಯ ಐಟಿಯವರು ಬರೀ ಕೂಲಿಗಳಲ್ಲ.ಅವರ ಕೊಡುಗೆಯೂ ತುಂಬಾ ಇದೆ ಅನ್ನೋದು.

ನನು ಬ್ಲಾಗ್ ಬರೆದರೆ ಅದನ್ನು ಹತ್ತಿಪ್ಪತ್ತು ಜನ ಓದ್ತಾರೆ.ಅದೂ ಓದುಗರು ತಮ್ಮದೇ ಆದ ಸ್ವತಂತ್ರ ಅಭಿಪ್ರಾಯವನ್ನು ಹೊಂದಿರುವವರು.
ಪ್ರಮೋದ್,ಸುಧೇಶ್,ಜ್ಯೋತಿ ಅಂಥವರು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ ಅದೇ ಸಂತೋಷ್ ಅಂತವರು ಯಾವಾಗ್ಲೂ ನನ್ನದೇ ತಪ್ಪು ಅಂತಾರೆ.
ಯಾರೂ ತಮ್ಮ ಅಭಿಪ್ರಾಯಗಳನ್ನು ನನ್ನ ಬ್ಲಾಗ್ ಓದಿ ಬದಲಾಯಿಸೋದಿಲ್ಲ.
ಆದರೆ ಪ್ರತಾಪ್ ಸಿಂಹ,ರವಿ ಬೆಳಗೆರೆಯಂಥವರ ಬರಹಗಳನ್ನು ಲಕ್ಷಾಂತರ ಕನ್ನಡಿಗರು ಓದ್ತಾರೆ.ಇವರ ಬರಹಗಳನ್ನು ಓದಿಯೇ ತಮ್ಮ ಅಭಿಪ್ರಾಯಗಳನ್ನು ನಿರೂಪಿಸಿಕೊಳ್ತಾರೆ.
ರವಿ ಬೆಳಗೆರೆ ಹಿಂದೆ ಬರೆದಿದ್ದರು.
ಅಮೆರಿಕಾದಲ್ಲಿ ನೂರು ರುಪಾಯಿಗೆ ಮಾಡುವ ಕೆಲಸವನ್ನು ಭಾರತೀಯರು ನಲವತ್ತು ರುಪಾಯಿಗೆ ಮಾಡಿ ಕೊಡ್ತಾರೆ ಅದಕ್ಕೆ ಐಟಿ ಇಂಡಸ್ಟ್ರಿ ಬದುಕಿರೋದು ಅಂತ.
ಹಾಯ್ ಬೆಂಗಳೂರಿನಲ್ಲಿ ರವಿ ಅಜ್ಜಿಪುರರು ನೂರು ರುಪಾಯಿಗೆ ಮಾಡುವ ಕೆಲಸವನ್ನು ನಾನು ನಲವತ್ತು ರುಪಾಯಿಗೆ ಮಾಡಿಕೊಡ್ತೀನಿ ಅಂದ್ರೆ ಮಾನ್ಯ ರವಿಯವರು ಆ ಕೆಲಸವನ್ನು ನನಗೆ ಕೊಡ್ತಾರಾ?
ರವಿ ಅಜ್ಜಿಪುರರಷ್ಟೆ ಕಾರ್ಯಕ್ಷಮತೆಯನ್ನು ನಲವತ್ತು ರುಪಾಯಿಗೆ ಕೊಟ್ಟರಷ್ಟೆ ನನ್ನನ್ನು ತಗೊಳ್ಳೋದು?
ಅವರ ಬರಹವನ್ನು ಓದಿದ ಆಟೋ ಡ್ರೈವರ್ ಕೂಡಾ "ಏನಿಲ್ಲ ಮಾರಾಯ ಈ ಐಟಿ ಅಂದ್ರೆ ,ಅಮೆರಿಕಾದವರಿಗಿಂತ ಕಮ್ಮಿ ಕಾಸಿಗೆ ಕೆಲಸ ಮಾಡೋದು ಅಷ್ಟೆ " ಅಂದುಕೊಳ್ತಾನೆ!
ಇಂಥ ತಪ್ಪು ಮಾಹಿತಿಯನ್ನು ಕೊಡಬಾರದು ಅನ್ನೋದಷ್ಟೆ ನನ್ನ ಮನವಿ.
ಪ್ರಮೋದ್ ಹೇಳಿದ ಹಾಗೆ "ಅವರಲ್ಲದ, ಅವರಿಗಲ್ಲದ ಪ್ರೊಫೆಷನ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ"...

Anonymous said...

ಮಾಮು, ಏನೇ ಆದರೂ ಈ ಐ.ಟಿ.ಯವರು ’ಮನೆಗೆ ಮಗ ಅಲ್ಲ ಸುಡುಗಾಡಿಗೆ ಹೆಣ ಅಲ್ಲ’ ಬಿಡು. :-) ಬರೆಯುವ ಮೂರುಕಾಸಿನ ಕೋಡಿಂಗ್ ಗೆಲ್ಲಾ ಪೇಟೆಂಟ್ ತಗೊಂಡು ಅದನ್ನೇ ದೊಡ್ಡ ಸಂಶೋಧನೆ ಪೇಟೆಂಟು ಅನ್ನೋ ಹಾಗೆ ಹೇಳ್ತಾ ಇದ್ದೀರ! ನೀವಲ್ಲ ಅಂದರೆ ಇನ್ನೊಬ್ಬರು ಮಾಡುತ್ತಿದ್ದರು, ತಮ್ಮಿಂದನೇ ಜಗತ್ತು ಉದ್ಧಾರ ಆಗಿದ್ದು , ಅವರಿಗೆ ಇವರಿಗೆ ಎಲ್ಲರಿಗೂ ಕೆಲಸ ಸಿಕ್ಕಿದ್ದು ಅನ್ನುವ ಆತ್ಮರತಿ ಬೇಕಿರಲಿಲ್ಲ ಮಾಮು. ಅದೆಲ್ಲಾ ಇರಲಿ , ಯಾಕೆ ಜನ ಐ.ಟಿ.ಯನ್ನು, ಐ.ಟಿ. ಯವರನ್ನು ಇಷ್ಟು ಬೈಯುತ್ತಾರೆ ಅಂತ ಒಮ್ಮೆಯಾದರೂ ಗಂಭೀರವಾಗಿ ಯೋಚಿಸಿದ್ದೀರಾ? ಯೋಚಿಸಿದರೆ ಉತ್ತರ ತಿಳಿಯುತ್ತದೆ. ಚರ್ಚೆ ಅಗತ್ಯವಿಲ್ಲ ಆಗ.

ಸಂದೀಪ್ ಕಾಮತ್ said...

ಅನಾನಿಮಸ್,
A patent is patent!
ಅದು ಮೂರುಕಾಸಿನ ಕೋಡಿಂಗ್ ಗೆ ಸಿಕ್ಕಿದ್ದೋ ಆರು ಕಾಸಿನ ಕೋಡಿಂಗ್ ಗೆ ಅನ್ನೋ ಮಾತು ಬೇಡ.ನಾನು ವೈಯುಕ್ತಿಕವಾಗಿ ಪೇಟೆಂಟ್ ವಿರೋಧಿ.ಪುರಂದರದಾಸ ,ಕನಕದಾಸರು ಸಾವಿರಾರು ಕೀರ್ತನೆಗಳನ್ನು ಬರೆದರು ಯಾವುದಕ್ಕೂ ಪೇಟೆಂಟ್ ಮಾಡಿಸಿಲ್ಲ.ಭಾರತೀಯರು ಜಗತ್ತಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಆದರೆ ಯಾರೊ ಪೇಟೆಂಟ್ ಹಿಂದೆ ಬಿದ್ದಿಲ್ಲ.
ಪ್ರತಾಪ್ ರವರು ಪೇಟೆಂಟೇ ಸಿಕ್ಕಿಲ್ಲ ಅಂದಿದ್ದಕ್ಕಷ್ಟೆ ನಾನು ಅದರ ಬಗ್ಗೆ ಬರೆದಿದ್ದೆ.

ನೀವು ಹೇಳಿದ್ದು ಸರಿ ಆತ್ಮರತಿ ಬೇಕಿಲ್ಲ.ಆತ್ಮರತಿ ಮಾಡಿಕೊಳ್ಳೋದಕ್ಕೆ ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ನೆನಪಿರಲಿ.
"ಯಾಕೆ ಜನ ಐ.ಟಿ.ಯನ್ನು, ಐ.ಟಿ. ಯವರನ್ನು ಇಷ್ಟು ಬೈಯುತ್ತಾರೆ ಅಂತ ಒಮ್ಮೆಯಾದರೂ ಗಂಭೀರವಾಗಿ ಯೋಚಿಸಿದ್ದೀರಾ? " ಯೋಚಿಸಿದ್ದೇನೆ ಹಾಗೊ ಉತ್ತರ ಸಿಕ್ಕಿದೆ!
ಜನ ಐಟಿಯವರನ್ನಷ್ಟೆ ಬಯ್ಯಲ್ಲ -ಎಲ್ಲರನ್ನೂ ಬಯ್ಯುತ್ತಾರೆ ಅನ್ನೋದೆ ಉತ್ತರ. ಆದ್ರೆ ರಾಜಕಾರಣಿಗಳಿಗೆ ಬಯ್ಯಬೇಕಾದ್ರೆ ಐಟಿಯವನು ಅದನ್ನು ಕೇಳಿ ಮಜಾ ಮಾಡ್ತಾನೆ. ಪತ್ರಕರ್ತರು ಕಾಸು ತಗೊಂಡು ಸುಳ್ಳು ಸುಳ್ಳೇ ಸುದ್ದಿ ಬರೀತರೆ ಅಂತ ’ಜನ’ ಬಯ್ತಾ ಇದ್ರೆ ರಾಜಕಾರಣಿ,ಐಟಿಯವನು ಇಬ್ರೂ ಮಜಾ ಮಾಡ್ತಾರೆ.
ಸಿನೆಮಾ ರಂಗದವರನ್ನು ’ಜನ’ ಬಯ್ತಾ ಇದ್ರೆ ಪತ್ರಕರ್ತರು,ರಾಜಕಾರಣಿ,ಐಟಿ ಯವನು ಮೂರು ಜನ ಸೇರಿ ಮುಸಿ ಮುಸಿ ನಗ್ತಾರೆ ಅಷ್ಟೆ!!!
ಬಿಲ್ಲು ಬಾರ್ಬರ್ ಅನ್ನೋ ಸಿನೆಮಾಗೆ ಬಾರ್ಬರ್ ಅಂತ ಹೆಸರಿಟ್ಟಿದ್ದಕ್ಕೆ ಅವರು ಗಲಾಟೆ ಮಾಡಿ ಆ ಹೆಸರೇ ಇಡದ ಹಾಗೆ ಮಾಡಿದ್ರು.ಅದೇ ಐಟಿಯವರನ್ನು ಬೇರೆಯವರು ಬಯ್ತಾ ಇದ್ರೆ ಅದನ್ನು ಸಪೋರ್ಟ್ ಮಾಡೋನೂ ಇನ್ನೊಬ್ಬ ಐಟಿಯವನೇ ಆಗಿರ್ತಾನೆ.ಅದಿಕ್ಕೆ ಜನ ಇನ್ನೂ ಬಯ್ತಾರೆ.
ಒಬ್ಬ ಗ್ಯಾರೇಜ್ ನಲ್ಲಿ ಕೆಲಸ ಮಾಡೊನಿಗೆ ತನ್ನ ಕಟ್ಟಿಂಗ್ ಪ್ಲಯರ್ ,ಸ್ಕ್ರೂ ಡ್ರೈವರ್ ಮೇಲೆ ಬಹಳ ಅಭಿಮಾನ ಇರುತ್ತೆ .ನೀವು ಅದನ್ನು ಅಕಸ್ಮಾತ್ ತುಳಿದು ನೋಡಿ ಗೊತ್ತಾಗುತ್ತೆ! ಅದೇ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಗೆ ಅನ್ನ ಕೊಡ್ತಾ ಇರೋ ಕೋಡಿಂಗೇ ಮೂರು ಕಾಸಿನ ಕೋಡಿಂಗ್ ಆಗಿರುತ್ತೆ .
That's the difference dude!Respect your job !

Anonymous said...

ಸುಪಾರಿ ಹಂತಕನಿಗೂ, ರೌಡಿಗೂ, ಪಿಕ್ ಪಾಕೆಟ್ ಮಾಡುವವನಿಗೂ ಅವರವರದ್ದು ಉದ್ಯೋಗವೇ. Respect ur job ಅಂತೀರಾ? One should not/cannot defend everything wrong also just becoz it is his job. ಎಲ್ಲರನ್ನೂ ಯಾರೂ ಬೈಯಲ್ಲ , ತಪ್ಪು ತಿಳ್ಕಂಡಿದ್ದೀರಿ, ಯಾರಿಂದ ಸಮಾಜಕ್ಕೆ ಜಾಸ್ತಿ ತೊಂದರೆ ಆಗ್ತಾ ಇದೆಯೋ ಅವರನ್ನು ಜಾಸ್ತಿ ಬೈತಾರೆ, ಬೇರೆಯವರನ್ನು ಕಡಿಮೆ ಬೈತಾರೆ. ಅದೂ ಕೂಡ ಅಲ್ಲಿ ತಪ್ಪು ಮಾಡಿದವರನ್ನ ಮಾತ್ರ ಬೈತಾರೆ, ಇಡೀ ಫೀಲ್ಡಿಗೇ ಬೈಯೋಲ್ಲ. ಯೋಚಿಸಿ ನೋಡಿ ಮತ್ತೊಮ್ಮೆ.

Anonymous said...

Congrats, All the best Sandeep!

ಹರಿಜೋಗಿ said...

sorry.. this is not a comment on your posts... I keep reading your posts.
Pls check the below link
http://enguru.blogspot.com/2009/02/hesarallenide.html
Plz write your opinion and inform other mangalore friends.. let us have healthy discussion.

ಸಂತೋಷಕುಮಾರ said...

ಸಂದೀಪ್,

"ಪ್ರಮೋದ್,ಸುಧೇಶ್,ಜ್ಯೋತಿ ಅಂಥವರು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ ಅದೇ ಸಂತೋಷ್ ಅಂತವರು ಯಾವಾಗ್ಲೂ ನನ್ನದೇ ತಪ್ಪು ಅಂತಾರೆ"

ನಿಮ್ಮನ್ನು ಯಾವಾಗ್ಲೂ ಎಲ್ರಿ ತಪ್ಪು ಅಂತೀದೀನಿ? ಇದೇ ಮೊದಲ ಬಾರಿ ಅನಿಸುತ್ತೆ.ಅಷ್ಟಕ್ಕೂ ಇದು ನೀವು ತಪ್ಪು ಅಂತಾ ಹೇಳ್ತಾ ಇಲ್ಲಾ.ನೀವೂ ಬರೆದಿದ್ದು ಎಲ್ಲವೂ ಸರಿಯೆನಿಸಲಿಲ್ಲಾ ಅಂದೆ. ನಾನು ಕೆಲಸ ಮಾಡುತ್ತಿರುವ ಕ್ಷೇತ್ರ ಅಂದ ಮಾತ್ರಕ್ಕೆ ಇಲ್ಲಿ ಎಲ್ಲವೂ ಸರಿಯಿದೆ ಮತ್ತು ಸರಿಯಿಲ್ಲದಿದ್ದರೂ ನಾನದನ್ನು ಸಮರ್ಥಿಸಕೊಳ್ಳಲೇಬೇಕು ಅನ್ನುವುದು ತಪ್ಪು. ನೀವಿಲ್ಲಿ ನನ್ನ ವೃತ್ತಿಗೌರವಕ್ಕೂ ನನ್ನ ಅಭಿಪ್ರಾಯಕ್ಕೂ ಥಳುಕು ಹಾಕಿದ್ದು ಸರಿಯೆನಿಸಲಿಲ್ಲಾ..

ಸಂದೀಪ್,ಪ್ರತಿ ವೃತ್ತಿಯ ಬಗೆಗೆ ನಮಗೆ ಒಂದು ಅಭಿಪ್ರಾಯ ತಾನಾಗೇ ಮೂಡುತ್ತದೆ.ಐಟಿ ಯವರೆಂದ ಕೂಡಲೇ ಸಾಮಾನ್ಯರಿಗೆ ಬರುವ ಅಭಿಪ್ರಾಯ ಎಂತದು ಅಂತಾ ನಿಮಗೂ ಗೊತ್ತು. ಅದು ಯಾಕೆ ಏನು ಅನ್ನುವುದು ಸಹ ಎಲ್ಲರಿಗೂ ಗೊತ್ತು. ಅದನ್ನು ನಾನು ಮತ್ತೆ ಮತ್ತೆ ಹೇಳುವ ಅವಶ್ಯಕತೆಯಿಲ್ಲವೆಂದುಕೊಳ್ತಿನಿ.

"ಪ್ರತಾಪ್ ಸಿಂಹರ ಲೇಖನಕ್ಕೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಅಂದ್ರಿ.ಹಾಗಿದ್ರೆ ನೀವ್ಯಾಕೆ ನನ್ನ ಲೇಖನಕ್ಕೆ ಪ್ರತಿಕ್ರ್ಯಿಸಿದ್ರಿ ಅಷ್ಟೊಂದು ಆಸಕ್ತಿಯಿಂದ.ನಿಮಗೆಲ್ಲಿಂದ ಅಷ್ಟೊಂದು ಆಸಕ್ತಿ ಕೆರಳಿತು?"

ನೋಡಿ ಸಂದೀಪ್, ಎಣ್ಣೆ ಇದ್ದಾಗ ನನ್ನನ್ನೂ ಸೇರಿ,ಎಲ್ಲಾ ಐಟಿಯವರು ತುಸು ಜಾಸ್ತಿನೆ ಉರಿದಿದ್ದೇವೆ, ಈಗ ಸದ್ಯಕಂತೂ ಎಣ್ಣೆ ಕಮ್ಮಿಯಾಗುತ್ತಿದೆ, ಹಾಗಾಗಿ ನಮ್ಮ ಬಗ್ಗೆ ಎಲ್ಲರೂ ಕಾರಿಕೊಳ್ಳುತ್ತಿದ್ದಾರೆ, ಕಾರಿಕೊಳ್ಳಲಿ ಬಿಡಿ ಅಂದೆ ಅಷ್ಟೆ. ಇದು ಆಡಿಕ್ಕೊಳ್ಳುವವರ ಸಮಯ. ನಾವು ಇಷ್ಟವಿಲ್ಲದಿದ್ದರೂ ಕಷ್ಟವಾದರೂ ಒಪ್ಪಿಕೊಳ್ಳಲೇಬೇಕು.

"ಎಲ್ಲರನ್ನೂ ಯಾರೂ ಬೈಯಲ್ಲ , ತಪ್ಪು ತಿಳ್ಕಂಡಿದ್ದೀರಿ, ಯಾರಿಂದ ಸಮಾಜಕ್ಕೆ ಜಾಸ್ತಿ ತೊಂದರೆ ಆಗ್ತಾ ಇದೆಯೋ ಅವರನ್ನು ಜಾಸ್ತಿ ಬೈತಾರೆ, ಬೇರೆಯವರನ್ನು ಕಡಿಮೆ ಬೈತಾರೆ. ಅದೂ ಕೂಡ ಅಲ್ಲಿ ತಪ್ಪು ಮಾಡಿದವರನ್ನ ಮಾತ್ರ ಬೈತಾರೆ, ಇಡೀ ಫೀಲ್ಡಿಗೇ ಬೈಯೋಲ್ಲ. ಯೋಚಿಸಿ ನೋಡಿ ಮತ್ತೊಮ್ಮೆ"

ಈ ಮಾತನ್ನು ನಾನು ಅನುಮೋದಿಸ್ತೀನಿ. ನಿಮಗೂ ಅರ್ಥವಾಯಿತು ಅಂದುಕೊಳ್ತೀನಿ..

ಸಂದೀಪ್ ಕಾಮತ್ said...

ಸಂತೋಷ್,
ಬಿಡಿ ಅದೆಲ್ಲ .
ವೆಂಕಟ ಇನ್ ಸಂಕಟ ನೋಡಿ ಮಸ್ತ್ ಮಜಾ ಮಾಡಿ.

ಸಂತೋಷಕುಮಾರ said...

ನಿನ್ನೆ ಹೋಗಿದ್ದೆ.. ನಂಗೆ ಬೋರ್ ಅನಿಸ್ತು.ಎಲ್ಲಾ ಹಳಸಲು ಸಿಲ್ಲಿ ಪಿಜೆಗಳು ಅನಿಸ್ತು.. ಮೀಡಿಯಾದೋರು ರಮೇಶ್ ಚಿತ್ರಗೆಳಿಗೆ ಯಾಕೆ ಅಷ್ಟು ಒಳ್ಳೆಯ ರೇಟಿಂಗ್ ಕೊಡ್ತಾರೋ ಗೊತ್ತಿಲ್ಲಾ.
ಶರ್ಮಿಳಾ ಓಕೆ, ಆದರೆ ಉಳಿದ ಇಬ್ಬರು ಹೀರೋಯಿನ್ಸ ಯಾಕೇ ಅಂತಾ ತಿಳಿಲಿಲ್ಲ್ಲಾ :) ಹಿಂದಿಯ ಮೈ ಹೊಂ ನಾ ಚಿತ್ರವನ್ನು ಇನ್ನೂ ಚೆನ್ನಾಗಿ ಕಾಪಿ ಮಾಡಬಹುದಿತ್ತು.:)

Harisha - ಹರೀಶ said...

ಸಂದೀಪ್, ಐಟಿ ಜನರ ಪರವಾಗಿ ವಾದಿಸಲು ನೀವು ಟೊಂಕ ಕಟ್ಟಿ ನಿಂತಂತಿದೆ.

ನೀವು ಮಂಡಿಸಿರುವ ವಾದವೆಲ್ಲವೂ ಒಪ್ಪತಕ್ಕದ್ದಾದರೂ ಪ್ರತಾಪ್ ಸಿಂಹ ಅವರು ಬರೆದಿರುವ ಯಾವ ವಾಕ್ಯ ನಿಮಗೆ ತಪ್ಪಾಗಿ ಕಂಡಿತು ಎಂದು ತಿಳಿಯಲಿಲ್ಲ.

"ಐಟಿ ಬೂಮ್ ಶುರು ಆಗಿ ಹದಿನೈದು ವರ್ಷಗಳಾದ್ರೂ ಈ ಐಟಿಯವರೇನು ಮಾಡ್ತಾರೆ ಅಂತ ಇನ್ನೂ ಜನರಿಗೆ ಗೊತ್ತಾಗಿಲ್ಲ !" -ಇದನ್ನು ನೀವು ತಪ್ಪು ಎನ್ನುವಿರಾದರೆ ಸ್ವಲ್ಪ ವಿಮರ್ಶೆ ಮಾಡುವುದೊಳಿತು.

ನೀವು ಮಾಡುತ್ತಿರುವ "ಮಾಡ್ಯೂಲ್" ಅಂತಿಮವಾಗಿ ಎಲ್ಲಿ ಉಪಯೋಗಿಸಲ್ಪಡುತ್ತದೆ ಅಥವಾ ನೀವು ಮಾಡುತ್ತಿರುವ ಮಾಡ್ಯೂಲ್ ಒಟ್ಟಾರೆ ಉತ್ಪನ್ನದ ಎಷ್ಟನೇ ಒಂದು ಭಾಗ ಎಂದು ಇಂಜಿನಿಯರ್ ಒಬ್ಬನನ್ನು ಕೇಳಿ ನೋಡಿ. (ನನ್ನನ್ನೂ ಸೇರಿ) ಬಹುತೇಕ ಜನರು ಇದಕ್ಕೆ ಸರಿಯುತ್ತರ ನೀಡಲಾರರು. ಯಾರೋ ಪ್ರಾಜೆಕ್ಟ್ ಹುಡುಕುತ್ತಾರೆ, ಯಾರೋ ಆರ್ಕಿಟೆಕ್ಚರ್ ಡಿಸೈನ್ ಮಾಡ್ತಾರೆ, ಯಾರೋ ಕೋಡ್ ಬರೀತಾರೆ, ಯಾರೋ ಟೆಸ್ಟ್ ಮಾಡ್ತಾರೆ, ಯಾರೋ ಉಪಯೋಗಿಸ್ತಾರೆ... ಹೀಗಿರುವಾಗ ಇಂಥದ್ದೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸಾಧ್ಯವೇ?

ಸೆಟ್ ಟಾಪ್ ಬಾಕ್ಸ್ ನ ವಿಷಯ ಎತ್ತಿದ್ದೀರಿ.. ಸೆಟ್ ಟಾಪ್ ಬಾಕ್ಸ್ ನ ಮೇಲೆ ಕೆಲಸ ಮಾಡುತ್ತಿರುವ ನಾನೇ ಇದುವರೆಗೂ (ಊರಿನಲ್ಲಿ ನಮ್ಮ ಮನೆಯಲ್ಲಿಯೇ ಸೆಟ್ ಟಾಪ್ ಬಾಕ್ಸ್ ಇದ್ದರೂ) ಯಾವುದೇ ಸೆಟ್ ಟಾಪ್ ಬಾಕ್ಸ್ ನ ಎಲ್ಲಾ ಫೀಚರ್ ಗಳನ್ನು ನೋಡಿಲ್ಲ. ಹೀಗಿರುವಾಗ ಯಾರಾದರೂ ನೀನೇನು ಮಾಡುತ್ತೀಯ ಎಂದು ಕೇಳಿದರೆ ನಾನೇನು ಹೇಳಲಿ? ಅದೋ ಅಲ್ಲಿ ಮುಂದಿನ ಪ್ರೋಗ್ರಾಮ್ ಬರುತ್ತಲ್ಲ.. ಅದು ಬರುವಂತೆ ಮಾಡಿದ್ದು ನಾನು, ಅಥವಾ ಇದೋ ಈ ಬಟನ್ ಒತ್ತಿದರೆ ವಾಲ್ಯೂಮ್ ಹೆಚ್ಚು ಕಡಿಮೆ ಆಗುತ್ತದಲ್ಲ, ಅದು ಆಗುವಂತೆ ಮಾಡಿರುವುದು ನಾನು ಎಂದು ಹೇಳಿದರೆ ಯಾರೇ ಆಗಲಿ, ಅದನ್ನು ಮಾಡಲು ಅಷ್ಟು ಸಂಬಳ ಕೊಡುತ್ತಾರೆಯೇ ಎಂದು ಆಶ್ಚರ್ಯ ಪಡದೇ ಇರಲಾರರು.

ಕೆಲಸ ಮಾಡುವವರಿಗೇ ಸರಿಯಾಗಿ ಏನು ಮಾಡುತ್ತಿದ್ದೇವೆ ಎಂದು ತಿಳಿದಿಲ್ಲ ಎಂದ ಮೇಲೆ ಸಾಮಾನ್ಯ ಜನರಿಗೆ ಹೇಗೆ ತಿಳಿಯಲು ಸಾಧ್ಯ?

ಇಲ್ಲಿ ಮೇಲೆ ಯಾರೋ ಕೇಳಿದಂತೆ ಪಾಠ ಮಾಡುವ ಮೇಷ್ಟ್ರನ್ನು ಯಾಕೆ ಜನರು ಬೈಯ್ಯುವುದಿಲ್ಲ? ಬೀದಿಯಲ್ಲಿ ಹಣ್ಣು ಮಾರುವವರನ್ನು ಯಾಕೆ ಯಾರೂ ತೆಗಳುವುದಿಲ್ಲ? ಬೈಯಲು ರಾಜಕಾರಣಿಗಳು, ಐಟಿ ಜನರೇ ಯಾಕೆ ಬೇಕು?

ಐಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಬಹುತೇಕ ಜನರಿಗೆ ರಾಶಿ ರಾಶಿ ದುಡ್ಡು ಬಂದು ಬೀಳುತ್ತದೆ, ನಿಜ. ಆದರೆ ಒಬ್ಬ ಅವಿವಾಹಿತ ವ್ಯಕ್ತಿ ಜೀವಿಸಲು ತಿಂಗಳಿಗೆ ಇಪ್ಪತ್ತು-ಇಪ್ಪತ್ತೈದು ಸಾವಿರದಷ್ಟು ದುಡ್ಡಿನ ಅವಶ್ಯಕತೆ ಇದೆ ಎಂದು ನಿಮಗನಿಸುತ್ತದೆಯೆ? ಇಲ್ಲ ಎಂದಾದ ಪಕ್ಷದಲ್ಲಿ ದುಡ್ಡೆಲ್ಲಿಗೆ ಹೋಯಿತು? ತಿಂಗಳ ಕೊನೆಗೆ ಯಾಕೆ ಅಕೌಂಟ್ ಖಾಲಿಯಾಗಿರುತ್ತದೆ? ಕ್ರೆಡಿಟ್ ಕಾರ್ಡ್ ಯಾಕೆ ಹೊರಗೆ ಬರುತ್ತದೆ?

ಯೋಚಿಸಿ ನೋಡಿ.. ನಿಮಗೇ ಉತ್ತರ ಸಿಗುತ್ತದೆ.. ಬೆಂಕಿಯಿಲ್ಲದೆ ಹೊಗೆಯಾಡದು, ವಿನಾ ಕಾರಣ ಬೈಗುಳ ಸಿಗದು..

ಇನ್ನು "ತಪ್ಪು ಸರಿ ನೋಡ್ಕೊಂಡು ಸಮರ್ಥಿಸೊ ಜಾಯಮಾನ ನನ್ನದಲ್ಲ" ಎಂದು ಬರೆದಿದ್ದೀರಿ.. ಇದು ನಿಜವಾಗಿದ್ದರೆ ಮೊದಲು ನಿಮ್ಮ ಜಾಯಮಾನ ಬದಲಾಯಿಸಿಕೊಳ್ಳಿ ಎಂಬುದು ನನ್ನ ಸಲಹೆ.

ಸಂದೀಪ್ ಕಾಮತ್ said...

ಹರೀಶ್ ,
ನೀವೂ ವೆಂಕಟ ಇನ್ ಸಂಕಟ ನೋಡಿ ಮಸ್ತ್ ಮಜಾ ಮಾಡಿ. ಅದು ಚೆನ್ನಾಗಿಲ್ಲ ಅಂದ್ರೆ ’ಈ ಸಂಭಾಷಣೆ ’ ನೋಡಿ ಅದೂ ಚೆನ್ನಾಗಿಲ್ಲ ಅಂದ್ರೆ ’ಜಂಗ್ಲಿ ’ನೋಡಿ.
ಥ್ಯಾಂಕ್ಸ್ .

Anonymous said...

ಮಾಮು.. ಹಾಗಿದ್ರೆ ನೀನು ಇನ್ಮುಂದೆ ಇಂತಹ ಬ್ಲಾಗ್ ಬರೆಯೋದು ಬಿಟ್ಟು ಸುಮ್ನಿದ್ದು ಮಜಾ ಮಾಡು..

guruve said...

prataap simhara artha-heena lEkhanakke, samartha uttaravannu koTTiddeera!

ಸಂದೀಪ್ ಕಾಮತ್ said...

ಮಚ್ಚ ,
ನೀನು ಹೇಳುವ ಮೊದಲೇ ಆ ನಿರ್ಧಾರವನ್ನು ತೆಗೆದುಕೊಂಡಾಗಿದೆ .

ಬೆಂಗಳೂರು ರಘು said...

sandeep super article.... pratap simha's articles are usually hollow..

ಸಂದೀಪ್ ಕಾಮತ್ said...

ಹಾಂ ಕೆಲಸದಿಂದ ಸ್ವಲ್ಪ ಬಿಡುವು ಸಿಕ್ತು ಈಗಲಾದರೂ ಹರೀಶ್ ಸಂಶಯಗಳಿಗೆ ಉತ್ತರಿಸಬೇಕು!

ಹರೀಶ,
’ಸಂದೀಪ್, ಐಟಿ ಜನರ ಪರವಾಗಿ ವಾದಿಸಲು ನೀವು ಟೊಂಕ ಕಟ್ಟಿ ನಿಂತಂತಿದೆ’ ಅಂದ್ರಿ ನೀವೂ ಐಟಿ ವಿರೋಧಿಗಳನ್ನು ಪ್ರೋತ್ಸಾಹಿಸಲು ಟೊಂಕಕಟ್ಟಿರುವ ಹಾಗಿಲ್ಲವೇ?ಕಳೆದ ಬಾರಿ ಕೂಡಾ ನಾನು ಬರೆದಿದ್ದು ತಪ್ಪು ಅಂದಿದ್ರಿ ! ಇರ್ಲಿ ಬಿಡಿ.

"ಯಾರೋ ಆರ್ಕಿಟೆಕ್ಚರ್ ಡಿಸೈನ್ ಮಾಡ್ತಾರೆ, ಯಾರೋ ಕೋಡ್ ಬರೀತಾರೆ, ಯಾರೋ ಟೆಸ್ಟ್ ಮಾಡ್ತಾರೆ, ಯಾರೋ ಉಪಯೋಗಿಸ್ತಾರೆ... ಹೀಗಿರುವಾಗ ಇಂಥದ್ದೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸಾಧ್ಯವೇ?"
ಅಂತ ಕೇಳಿದ್ರಿ ಈ ಪ್ರಪಂಚದಲ್ಲಿ ಬಹಳಷ್ಟು ಜನ ಇಂಥದ್ದೇ ಕೆಲಸ ಮಾಡೋದು.
ಕೆಲಸ ಶುರುವಿನಿಂದ ಕೊನೆ ತನಕ ಒಬ್ಬನೇ ಮಾಡೋದಿಕ್ಕಾಗಲ್ಲ.
ಸಿನೆಮಾ ರಂಗದಲ್ಲೂ ಒಬ್ಬ ಆಕ್ಟ್ ಮಾಡ್ತಾನೆ ,ಇನ್ನೊಬ್ಬ ಎಡಿಟಿಂಗ್ ಮಾಡ್ತಾನೆ,ಇನ್ನೊಬ್ಬ ಮ್ಯೂಸಿಕ್ ಡೈರೆಕ್ಷನ್ ಮಾಡ್ತಾನೆ.
ವಿ.ಮನೋಹರ್ ಕೂಡ ಕರಿಯಾ ಐ ಲವ್ ಉ ಸಾಂಗ್ ನಾನೇ ಮಾಡಿದ್ದು ಅಂತ ಹೇಳಬಹುದು ! ಆದ್ರೆ ಹಾಡು ಹಾಡಿದ್ದು ರಾಜೇಶ್ ,ನಂದಿತಾ .ಅದಕ್ಕೆ ತಬ್ಲಾ ಹೊಡೆದದ್ದು ಇನ್ಯಾವನೋ ಒಬ್ಬ ,ಗಿಟಾರ್ ಬಾರಿಸಿದ್ದು ಮತ್ಯಾವನೋ ಒಬ್ಬ.
ಗಿಟಾರ್ ಬಾರಿಸಿದವನಿಗೆ ಕೇಳಿದ್ರೆ ಅವನೂ ಆ ಹಾಡು ನನ್ನದೇ ಅಂತಾನೆ.
ಇಂಟೆಲ್ ನಲ್ಲಿ ಸಾವಿರ ಜನ ಸೇರಿ ಒಂದು ಪೆಂಟಿಯಂ ಚಿಪ್ ಮಾಡೋದು ನೆನಪಿರಲಿ .ಅದೂ ಮಾಡ್ಯೂಲ್ ವೈಸ್.
ನೀವು ಮಾಡುವ ಮಾಡ್ಯೂಲ್ ಏನು ಕೆಲಸ ಮಾಡುತ್ತೆ ಹೇಗೆ ಮಾಡುತ್ತೆ ಅನ್ನೋದು ನಿಮಗೆ ಗೊತ್ತಿಲ್ಲದಿದ್ದರೆ ಕೊರಗುವ ಅಗತ್ಯ ಇಲ್ಲ.
ಬಿರಿಯಾನಿ ಮಾಡುವವನು ಯಾವತ್ತೂ ಬಿರಿಯಾನಿ ಮಸಾಲಾ ಹೇಗೆ ತಯಾರಿಸಿದ್ದಾರೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ .

’ಹೀಗಿರುವಾಗ ಯಾರಾದರೂ ನೀನೇನು ಮಾಡುತ್ತೀಯ ಎಂದು ಕೇಳಿದರೆ ನಾನೇನು ಹೇಳಲಿ?’ ಹೇಳಲಿ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದ್ರಿ .ಅದೂ ಒಂದು ಸಾಮಾನ್ಯ ಸಮಸ್ಯೆ.
ಒಬ್ಬ ಟೀಚರ್ ಹತ್ರ ಏನು ಮಾಡ್ತೀರಿ ಅಂದ್ರೆ ನಾನು ಟೀಚರ್ ಅಂತಾರೆ ನೀವು ಹೌದಾ ಅಂತ ಸುಮ್ಮನಾಗ್ತೀರಿ ಅಷ್ಟೆ.ಅದು ಬಿಟ್ಟೂ ಯಾವ ಸಬ್ಜೆಕ್ಟ್ ಕಲಿಸ್ತೀರಿ,ಯಾವ್ಯಾವ ಪಾಠ ಇದೆ ,ನಾಯಿ ನಾಯಿ ಮರಿ ಪದ್ಯ ಇನ್ನೂ ಕಲಿಸ್ತೀರಾ ಅಂತ ಯಾರೂ ಕೇಳಲ್ಲ.(ಕೆಲವರು ಕೇಳ್ತಾರೆ ಅದು exception!)
ಇಸ್ರೋ ವಿಜ್ಞಾನಿಯ ಹತ್ರ ’ಸಾರ್ ಏನ್ ಮಾಡ್ತೀರಿ ನೀವು ’ ಅಂದ್ರೆ ಇಸ್ರೋದಲ್ಲಿ ವಿಜ್ಞಾನಿ ಅಂತಾರೆ .ನೀವು ’ಹೌದಾ ,ಇಸ್ರೋದಲ್ಲಿ ಸ್ಯಾಟೆಲೈಟ್ ಹೇಗೆ ತಯಾರಿಸ್ತಾರೆ? ನೀವೋಬ್ರೆ ತಯಾರಿಸೋದಾ ,ದಿನಕ್ಕೆಷ್ಟು ತಯಾರಿಸ್ತೀರಿ ’ ಅಂತ ಕೇಳಲ್ಲ.
ಒಂದು ಪಕ್ಷ ಅವರು ನಾನು Attitude and Orbit Control ನಲ್ಲಿ ಕೆಲಸ ಮಾಡ್ತಾ ಇದ್ದೀನಿ ಅಂದ್ರೂ ಜನ ಸಾಮಾನ್ಯರಿಗೆ ಅರ್ಥ ಆಗಲ್ಲ(ನಿಮಗೆ ಆಗಬಹುದೇನೋ ನೀವು ತುಂಬಾ ಬುದ್ಧಿವಂತರು).
ಶಾಂತಿಸಾಗರಕ್ಕೆ ಹೋಗಿ ಒಬ್ಬನ ಹತ್ತಿರ ನೀನಿಏನ್ ಮಾಡ್ತೀಯಾ ಅಂದ್ರೆ ’ಅವನು ಸಾರ್ ದೋಸೆ ಹುಯ್ತೀನಿ ಅಂತಾನೆ’.
ನೀವು ’ಹೌದಾ ಯಾವ ದೋಸೆ ? ನೀರುಳ್ಳಿ ದೋಸೆಗೆ ಎಷ್ಟು ಕೆ.ಜಿ ಅಕ್ಕಿ ಬೇಕು. ಅದು ಫಳ ಫಳ ಮಿಂಚುತ್ತಲ್ಲ ಹೇಗೆ ?’ ಅಂತ ಕೇಳಲ್ಲ(ಕೆಲವರು ಕೇಳ್ತಾರೆ ಅದು exceptin!).

"ಕೆಲಸ ಮಾಡುವವರಿಗೇ ಸರಿಯಾಗಿ ಏನು ಮಾಡುತ್ತಿದ್ದೇವೆ ಎಂದು ತಿಳಿದಿಲ್ಲ ಎಂದ ಮೇಲೆ ಸಾಮಾನ್ಯ ಜನರಿಗೆ ಹೇಗೆ ತಿಳಿಯಲು ಸಾಧ್ಯ?" ಅಂದ್ರಿ !
ಕೆಲಸ ಮಾಡುವವರಿಗೇ ಏನು ಮಾಡ್ತ ಇದ್ದೀವಿ ಅಂತ ಗೊತ್ತಿಲ್ಲದೇ ಇದ್ರೆ ಪೆಂಟಿಯಂ ಚಿಪ್ ಕಂಪ್ಯೂಟರ್ ಆನ್ ಮಾಡ್ತಾ ಇದ್ದ ಹಾಗೆ ಬೆಂಕಿ ಹಿಡಿದು ಸುಟ್ಟು ಹೋಗ್ತಾ ಇತ್ತು ಸ್ವಾಮಿ. ಆ ಇಂಜಿನಿಯರ್ಗಳಿಗೆಲ್ಲ ತಾವೇನ್ ಮಾಡ್ತಾ ಇದ್ದೀವಿ ಅಂತ ಚೆನ್ನಾಗಿ ಗೊತ್ತು.
ನಿಮಗೆ ಗೊತ್ತಿಲ್ಲ ಅಂದ ಮಾತ್ರಕ್ಕೆ ನಾವೇನ್ ಮಾಡೋಣ.
ಅಷ್ಟಕ್ಕೂ ನಾವೇನ್ ಮಾಡ್ತಾ ಇದ್ದೆವಿ ಅಂತ ಗೊತ್ತಿದ್ರೆ ಮಾತ್ರ ಸಂಬಳ ತಗೋಬೇಕು ಅಂತಿಲ್ವಲ್ಲ?

ಡಾಕ್ಟರ್ ಶಾಪಿಗೆ ಹೋದ್ರೆ ಯಾವುದೋ ಸೂಜಿ ಚುಚ್ತಾರೆ.ಅವರು ಮಾಡ್ತಾ ಇರೋ ಕೆಲಸ ನಿಮಗೆ ಅರ್ಥ ಆಗಿಲ್ಲ ಅಂದ ಮಾತ್ರಕ್ಕೆ ಅವರ ಕೆಲಸ ಅರ್ಥಹೀನ ವಾ?

ಬಟ್ಟ್ಗೆ ಡ್ರೈ ಕ್ಲೀನಿಂಗ್ ಅಂತ ಮಾಡ್ತಾರೆ .ನೆಮಗೆ ಅದನ್ನು ಹೇಗೆ ಮಾಡ್ತಾರೆ ಅಂತ ಗೊತ್ತಾ? ಹೋಟೆಲ್ ಗೆ ಹೋಗಿ ಗಡದ್ದಾಗಿ ಮಂಗಳೂರು ಬಜ್ಜಿ ತಿಂದು ಬರ್ತೀರಲ್ವ ಅದು ಹೇಗೆ ಮಾಡೊದು ಅಂತ ನಿಮಗೆ ಗೊತ್ತಾ? ಒಂದು ವೇಳೆ ಹೇಳಿದ್ರೂ ನಿಮಗೆ ಅರ್ಥ ಆಗುತ್ತಾ? ಒಂದು ವೇಳೆ ಅರ್ಥ ಆದ್ರೂ ನಿಮ್ಮಿಂದ ಮಾಡೋಕಾಗುತ್ತಾ??

ಐಟಿ ಕೆಲಸ ಶ್ರೇಷ್ಟ ಕೆಲಸ ಅಂತ ನಾನು ಹೇಳಿಲ್ಲ,ಹೇಳೋದೂ ಇಲ್ಲ.
ಪ್ರತಾಪ್ ಸಿಂಹರಿಂದ ಹಿಡಿದು ,ನಿಮ್ಮ ತನಕ ಯಾರೇ ಒಬ್ಬನಿಗೂ ಐಟಿಯವರೇನ್ ಮಾಡ್ತಾರೆ ಅಂತ ಅರ್ಥ ಆಗಿಲ್ಲ ಅಂದ ಮಾತ್ರಕ್ಕೆ ಅವರು ಅರ್ಥಹೀನ ಕೆಲಸ ಮಾಡ್ತಾ ಇಲ್ಲ ಅಂತ ಹೇಳಿದ್ದು ಅಷ್ಟೆ.

Anonymous said...

ಪ್ರತಾಮ್ ಸಿಮ್ಮ ಆಗಲೀ ಮತ್ಯಾರೇ ಆಗಲೀ ಐ.ಟಿ. ಎಂಬುದು ಅರ್ಥಹೀನ ಕೆಲಸ ಅಂತ ಹೇಳೇ ಇಲ್ವಲ್ಲ ಮಾಮು. ನೀನ್ಯಾಕೆ ನೀನೆ ಹಾಗೆ ಹೇಳಿ ನೀನೆ ಅದಕ್ಕೆ ಸಮರ್ಥನೆ / ವಿರೋಧ ಕೊಡ್ತೀಯಾ?! ಇನ್ನು ೫-೬ ತಿಂಗಳು ಬಿಟ್ಟು ನೋಡು ಐ.ಟಿ.ಯವರು ಹೇಗೆ ಬೀದಿಗೆ ಬಂದಿರ್ತಾರೆ ಅಂತ. ಆಗ ಪ್ರತಾಪನ ಲೇಖನ ಓದೋದೇ ಬೇಡ, ಆಟೋ ಡ್ರೈವರೂ ಅಂತಾನೆ ಪಾಪ ಐ.ಟಿಯವರು ಬೀದ್ ಬೀದಿ ಅಲೀತಿದಾರೆ ಅಂತ! ಆಗ ಯೋಚನೆ ಮಾಡುವಿಯಂತೆ, ಪ್ರತಾಪ ಬರ್ದಿದ್ದು ನಿಜಾನಾ ಸುಳ್ಳಾ ಅಂತ.

ಸಂದೀಪ್ ಕಾಮತ್ said...

ಹಾಯ್ ಹರೀಶ್ ,
ಸ್ವಲ್ಪ ಕೆಲಸ ಇತ್ತು ಹೋಗ್ಬೇಕಾಗಿ ಬಂತು ...
ಮತ್ತೆ ಹಾಜರ್ ನಾನು.

"ಇಲ್ಲಿ ಮೇಲೆ ಯಾರೋ ಕೇಳಿದಂತೆ ಪಾಠ ಮಾಡುವ ಮೇಷ್ಟ್ರನ್ನು ಯಾಕೆ ಜನರು ಬೈಯ್ಯುವುದಿಲ್ಲ? " ಅಂತ ಕೇಳಿದ್ರಿ .
ಯಾರು ಹೇಳಿದ್ದು ಮೇಷ್ಟ್ರನ್ನ ಬಯ್ಯಲ್ಲ ಅಂತ?’ ’ಆ ಸುಡುಗಾಡು ಗಣಿತ ಮೇಷ್ಟೃ ಏನ್ ಪಾಠ ಹೇಳ್ತಾನೋ ,ನಮ್ ಪುಟ್ಟ ಯಾವಾಗ್ಲೂ ಫೇಲ್ ಆಗ್ತಾನೇ ಇರ್ತಾನೆ ’ ಅಂತ ಜನ ಬಯ್ಯೋದನ್ನ ಬಹುಷ ನೀವು ಕೇಳಿಲ್ಲ.ಈ ಟೀಚರ್ ಗಳಿಗೆ ಕೆಲ್ಸ ಏನ್ರಿ ಇದೆ. ಶಾಲೆಗೆ ಬರ್ತಾರೆ ಆರಾಮಾಗಿ ಮಕ್ಕಳಿಗೆ ಬಯ್ಕೊಂಡೂ ಟೈಮ್ ಪಾಸ್ ಮಾಡ್ತಾರೆ .ವರ್ಷಕ್ಕೆ ತಿಂಗಳಾನುಗಟ್ಟಲೆ ರಜೆ ಬೇರೆ ಅಂತ ’ ಜನ ಕುಹಕವಾಡೋದು ನಿಮ್ಮ ಗಮನಕ್ಕೆ ಬಂದಿಲ್ಲವೇನೋ?


"ಒಬ್ಬ ಅವಿವಾಹಿತ ವ್ಯಕ್ತಿ ಜೀವಿಸಲು ತಿಂಗಳಿಗೆ ಇಪ್ಪತ್ತು-ಇಪ್ಪತ್ತೈದು ಸಾವಿರದಷ್ಟು ದುಡ್ಡಿನ ಅವಶ್ಯಕತೆ ಇದೆ ಎಂದು ನಿಮಗನಿಸುತ್ತದೆಯೆ? ಇಲ್ಲ ಎಂದಾದ ಪಕ್ಷದಲ್ಲಿ ದುಡ್ಡೆಲ್ಲಿಗೆ ಹೋಯಿತು? ತಿಂಗಳ ಕೊನೆಗೆ ಯಾಕೆ ಅಕೌಂಟ್ ಖಾಲಿಯಾಗಿರುತ್ತದೆ? ಕ್ರೆಡಿಟ್ ಕಾರ್ಡ್ ಯಾಕೆ ಹೊರಗೆ ಬರುತ್ತದೆ?" ಅಂತ ಕೇಳಿದ್ರಿ .

ನೀವೂ ತಿಂಗಳಿಗೆ ಇಪ್ಪತ್ತೈದು ಸಾವಿರ ದುಡಿದೇ ದುಡೀತೀರಾ ಅಲ್ವ? ನೀವ್ಯಾಕೆ ನಿಮ್ ಮ್ಯಾನೇಜರ್ ಹತ್ರ "ಸಾರ್ ನಾನೊಬ್ಬ ಅವಿವಾಹಿತ ನನಗೆ ಇಪ್ಪೈತ್ತೈದು ಸಾವಿರದ ಅವಶ್ಯಕತೆ ಇಲ್ಲ ಬರೀ ಐದು ಸಾವಿರ ಸಾಕು ’ ಅಂತ ಯಾಕೆ ಹಿಂದಿರುಗಿಸಲ್ಲ? ಹಾಗೆ ಹಿಂದುರಿಗಿಸಿ ’ನೀವು’ ನಮಗೆ ದಾರಿದೀಪವಗನಹುದಲ್ಲವೇ?

ಡೆಕ್ಕನ್ ಕ್ರೊನಿಕಲ್ ನ ಪತ್ರಕರ್ತರಿಗೆ ತಿಂಗಳಿಗೆ ಮೂವತ್ತು ಸಾವಿರ ಸಂಬಳವಂತೆ ಗೊತ್ತಾ? ಆಗ್ಯಾಕೆ ಜನ ’ಅರ್ಹತೆಯ’ ಬಗ್ಗೆ ಮಾತಾಡಲ್ಲ?ವೊಲ್ವೋ ಬಸ್ ಡ್ರೈವರ್ ಗೆ ಮಾಮೂಲಿ ಬಸ್ ಡ್ರೈವರ್ ಗಿಂತ ಸಂಬಳ ಕಮ್ಮಿ ಇರುತ್ತೆ. ಕೆ.ಎಸ್.ಆರ್.ಟಿ.ಸಿ ಯಿಂದಾನೇ ಸಂಬಳದ ಭಿನ್ನತೆ ಕಾಣಸಿಗುತ್ತದೆ ಐಟಿಯವರೆಗೆ ಹೋಗಬೇಕಿಲ್ಲ.
ಕೇಂದ್ರ ಸರಕಾರ ನೌಕರರಿಗೆ ಸಂಬಳ ಹೆಚ್ಚು ಕೊಡ್ತೀರ ನಮಗ್ಯಾಕೆ ಕಮ್ಮಿ ಅಂತ ರಾಜ್ಯ ಸರಕಾರಿ ನೌಕರರು ಹೋರಾಟ ಮಾಡಿದ್ದು ನಿಮಗೆ ಬಹುಷ ಗೊತ್ತಿಲ್ಲ .ತಾರತಮ್ಯ ಅಲ್ಲಿಂದಲೇ ಶುರು ಆಗಿದ್ದು.
ಮಾಮೂಲಿ ಗಾರ್ಮೆಂಟ್ ಕಂಪನಿಯಲ್ಲಿ ಕೊಡೋದಕ್ಕಿಂತ ಪ್ರತಿಷ್ಟಿತ ಗಾರ್ಮೆಂಟ್ ಕಂಪನಿಗಳಲ್ಲಿ ಸಂಬಳ ಜಾಸ್ತಿ ಕೊಡ್ತಾರೆ .ಇಬ್ಬರೂ ಹೊಲಿಯೋದು ಒಂದೇ ರೀತಿಯ ಬಟ್ಟೆ .ಮತ್ಯಾಕೆ ಸರ್ ಸಂಬಳದ ತಾರಾತಮ್ಯದ ಬಗ್ಗೆ ಈಗಷ್ಟೇ ಧ್ವನಿ ಎತ್ತಿದ್ದೀರಿ?

ತಿಂಗಳ ಕೊನೆಗೆ ಐಟಿಯವರ ಜೇಬ್ಯಾಕೆ ಖಾಲಿ ಅಂತ ಕೇಳಿದ್ರಿ.
ನಿಮಗೆ ಪ್ಯಾರ ಸೈಲಿಂಗ್ ಗೊತ್ತಾ? ಗೊತ್ತೇ ಇರುತ್ತೆ ಬಿಡಿ ಯಾಕಂದ್ರೆ Rs 350/- ಕೊಟ್ಟು ಮೇಲೆ ಹಕ್ಕಿಯ ಹಾಗೆ ಹಾರೋ ಅಂತ ದುಬಾರಿ ಕ್ರೀಡೆಯ ಬಗ್ಗೆ ನೀವೆ ಒಂದು ಸಲ ನಿಮ್ಮ ಬ್ಲಾಗ್ ನಲಿ ಬರೆದಿದ್ರಿ . ಬಹುತೇಕ ಐಟಿಯವರು ನಿಮ್ಮ ಹಾಗೆ ದುಬಾರಿ ಕ್ರೀಡೆಯ ಬಗ್ಗೆ ಒಲವಿರೋರು! ನೀವು ಮುನ್ನೂರೈವತ್ತು ತೆತ್ತು ಪ್ಯಾರಸೈಲಿಂಗ್ ಗೆ ಹೋದ ಹಾಗೆ ಕೆಲವರು ಬಂಗೀ ಜಂಪು ,ಕಮಂಗಿ ಜಂಪು ಅಂತ ಊರೆಲ್ಲಾ ಸುತ್ತುತ್ತಾರೆ.ದುಡ್ಡು ಖಾಲಿಯಾಗದೆ ಇನ್ನೇನ್ ಮತ್ತೆ?
ಬಹುತೇಕ ಐಟಿಯವರ ಜೇಬು ಖಾಲಿಯಾಗೋದಕ್ಕೆ ಒಂದೇ ಒಂದು ಹೋಂ ಲೋನ್ ಸಾಕು.

ಐಟಿಯವರೇನು ನನ್ನ ಬಾವ ಮೈದುನರಲ್ಲ .ಅವರ ಪರ ವಹಿಸಿ ನನಗೇನೂ ಆಗಬೇಕಿಲ್ಲ.

ನಾಣ್ಯಕ್ಕೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ತೋರಿಸೋದಷ್ಟೇ ನನ್ನ ಉದ್ದೇಶವಾಗಿತ್ತು.ಐಟಿಯವರೇ ಈ ಪರಿ ನನ್ನನ್ನು ವಿರೋಧಿಸ್ತಾರೆ ಅನ್ನೋದು ಗೊತ್ತಿದ್ರೆ ಸುಮ್ಮನಿರ್ತಾ ಇದ್ದೆ .

"ನ್ನು "ತಪ್ಪು ಸರಿ ನೋಡ್ಕೊಂಡು ಸಮರ್ಥಿಸೊ ಜಾಯಮಾನ ನನ್ನದಲ್ಲ" ಎಂದು ಬರೆದಿದ್ದೀರಿ.. ಇದು ನಿಜವಾಗಿದ್ದರೆ ಮೊದಲು ನಿಮ್ಮ ಜಾಯಮಾನ ಬದಲಾಯಿಸಿಕೊಳ್ಳಿ ಎಂಬುದು ನನ್ನ ಸಲಹೆ."
ಅಂತ ಉಚಿತ ಸಲಹೆ ಕೊಟ್ರಿ !
ಸಲಹೆ ಏನೋ ಚೆನ್ನಾಗಿದೆ ಆದ್ರೆ ನನಗದರ ಅಗತ್ಯವಿಲ್ಲ.

ನಿಮ್ಮ ಅಣ್ಣ ಒಂದು ಕೊಲೆ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡ ಅಂತ ತಿಳಿದುಕೊಳ್ಳಿ.ಆಗ ನೀವು ಅವನನ್ನು ಬೇಲ್ ಕೊಟ್ಟೂ ಬಿಡಿಸಿಕೊಳ್ತೀರ ಅಥವಾ "ಪೋಲಿಸ್ ಸಾಹೇಬ್ರೇ ನನ್ನ ಅಣ್ಣ ಮಾಡಿದ್ದು ತಪ್ಪು ಅವನನ್ನು ತಳ್ಳಿ ಲಾಕಪ್ ಗೆ ಬಿಡಲೇ ಬೇಡಿ " ಅಂತ ವಾದ ಮಾಡ್ತೀರಾ?
ನಾನಾಗಿದ್ರೆ ನನ್ನ ಅಣ್ಣ ತಪ್ಪನ್ನೇ ಮಾಡಿದ್ರು ಅವನನ್ನು ಬಿಡಿಸಿ ತರುವ ಪ್ರಯತ್ನ ಮಾಡ್ತೀನಿ.
ಎಲ್ಲ ವೇಳೆಯಲ್ಲೂ ಸರಿ ತಪ್ಪಿನ ಜಡ್ಜ್ಮೆಂಟ್ ಮಾಡೋದಕ್ಕಾಗಲ್ಲ ಗೆಳೆಯ ....ಕೆಲವೊಮ್ಮೆ ಕೇವಲ ನಮ್ಮದು ಅನ್ನೋದರ ಪ್ರೀತಿಯಿಂದ ಪರ ವಹಿಸಬೇಕಾಗುತ್ತೆ. ತಪ್ಪು ಅಂತ ಗೊತ್ತಿದ್ರೂ...


ನನಗೆ ಮೊನ್ನೆ ಒಂದು sms ಬಂದಿತ್ತು "Always try to prove that you are right NOT others are wrong " ಅಂತ .ಬಹಳ ಒಳ್ಳೆಯ ಮಾತು .ನನ್ನ ಬ್ಲಾಗ್ ನಲ್ಲಿ ಬಹುತೇಕ ಸಲ ನಾನು ಬೇರೆಯವರದ್ದೇ ತಪ್ಪು ಅನ್ನೋದರ ಬಗ್ಗೆ ಬರೀತಾ ಇದ್ದೆ.ಈ ಮೆಸೇಜ್ ಓದಿ ಸ್ವಲ್ಪ ಸುಧಾರಿಸಿಕೊಳ್ಳೋಣ ಅಂದುಕೊಂಡಿದ್ದೆ.
ಆದ್ರೆ ನೀವು ನಿಮ್ಮದು ಸರಿ ಅನ್ನೋ ಭರದಲ್ಲಿ ನನ್ನದು ತಪ್ಪು ಅಂದ್ರಿ.
ನಾನೇನ್ ಮಾಡ್ಲಿ ಹೇಳಿ ..ಸುಧಾರಣೆಗೆ ಅವಕಾಶವೇ ಇಲ್ಲ!

ಸಂದೀಪ್ ಕಾಮತ್ said...

ರೀ ಅನಾನಿಮಸ್ ,
ಹೇಳಲೇಬೇಕು ಅನ್ನಿಸಿದ್ದು ಹೆಸ್ರು ಹೇಳಿ ಹೇಳಿ ಸ್ವಾಮಿ .
ನಾಲ್ಕು ತಿಂಗಳು ಬಿಟ್ಟೂ ನೋಡಿದ್ರೆ ಐಟಿಯವರು ಬೀದಿಗೆ ಬರ್ತಾರೆ ನಿಜ.ಅವರ ಹಿಂದೆ ಎಷ್ಟು ಜನ ಐಟಿಯಲ್ಲದವರು ಫುಟ್ಪಾತ್ ಗೆ ಬರ್ತಾರೆ ಅದನ್ನೂ ನೋಡುವಿರಂತೆ.
ಮೊನ್ನೆ ಯಾವುದೋ ಕಂಪೆನಿಯಲ್ಲಿ ಕ್ಯಾಬ್ ಡ್ರೈವರ್ಸ್ ಸ್ಟ್ರೈಕ್ ಮಾಡಿದ್ರಂತೆ .ಉದ್ಯೋಗಿಗಳಿಗೆ ಬಿ.ಎಂ.ಟಿ.ಸಿ ವ್ಯವಸ್ಠೆ ಮಾಡ್ತೀವಿ ಅಂದಿದ್ದಕ್ಕೆ.
ಮೊದಲಿಗೆ ಕ್ಯಾಬ್ ಡ್ರೈವರ್ಸ್ ,ಆಮೇಲೆ ಉಳಿದವರು! ಬೀದಿಗೆ ಬೀಳೋದು ದಿಟವೇ .ಆದ್ರೆ ಯಾರ್ಯಾರು ಅನ್ನೋದಕ್ಕೆ ಕಾಲವೇ ಉತ್ತರಿಸುತ್ತೆ.
ಆಟೋ ಡ್ರೈವರ್ ಗಳಿಗೂ ನಗುವಷ್ಟು ಚೈತನ್ಯ ಆಗ ಇರಲ್ಲ ಸ್ವಾಮಿ ಯಾಕಂದ್ರೆ ಆಟೋದಲ್ಲೂ ಹೋಗೋರು ಐಟಿ ಧೂರ್ತರೇ ತಾನೇ?
ಮೇಲಕ್ಕೋದವನು ಕೆಳಕ್ಕಿಳಿಯಲೇ ಬೇಕು ಅದು ಪ್ರಕೃತಿಯ ನಿಯಮ .ಐಟಿಯೂ ಅದಕ್ಕೆ ಹೊರತಲ್ಲ.
ಇನ್ನು ಈ ಅರ್ಥಿಕ ಹಿಂಜರಿತ ಐಟಿಯಿಂದಾಗಿ ಆಗಿದ್ದಲ್ಲ ತಿಳೊಳ್ಳಿ ..ಇದೊಂದು ಡಾಮಿನೋ ಎಫೆಕ್ಟ್ .ಸೈಕಲ್ ಸ್ಟಾಂಡ್ ನಲ್ಲಿ ಸಾಲಾಗಿ ಸೈಕಲ್ ಇಟ್ರೆ ಒಂದು ಬಿದ್ರೆ ಎಲ್ಲಾ ಬೀಳುತ್ತಲ್ಲ ಹಾಗೆ.
ನನ್ನ ಸೈಕಲ್ ಮೊದಲಿತ್ತು .
ಅನಾನಿಮಸ್ ನಿಮ್ಮ ಸೈಕಲ್ ರಕ್ಷಿಸಿಕೊಳ್ಳಿ .
ಆಲ್ ದಿ ಬೆಸ್ಟ್ !

Harisha - ಹರೀಶ said...

ಸಂದೀಪ್, ಯಾರ ಪ್ರೋತ್ಸಾಹಕ್ಕೂ ನಾನು ನಿಂತಿಲ್ಲ. ಪ್ರತಾಪ್ ಸಿಂಹರ ಲೇಖನದಲ್ಲಿ ಸತ್ಯಾಂಶವಿದೆ ಎಂದು ಹೇಳಿದ್ದೇನೆ.

ಸಿನಿಮಾದಲ್ಲಿ ಯಾರೇ ನಟಿಸಿ, ಹಾಡಿ, ಗಿಟಾರ್ ಬಾರಿಸಿದರೂ ಅದು ನಿಮಗೆ ತಿಳಿಯುತ್ತೆ. ಇಂಥವರು ಇಂಥದ್ದನ್ನು ಮಾಡಿದ್ದಾರೆ ಎಂದು ಹೇಳಬಹುದು (ನೀವೇ ಹೇಳಿದ್ದೀರಿ). ಅದೇ ಇಂಟೆಲ್ಲಿನ ಚಿಪ್ಪಿನಲ್ಲಿ ಯಾರು ಏನು ಮಾಡಿದರು? ಜನಸಾಮಾನ್ಯರಿಗೆ ಗೊತ್ತಿರುವ ಒಬ್ಬನೇ ಒಬ್ಬನ ಹೆಸರು ಹೇಳಿ ನೋಡೋಣ? ಐಟಿ ಜನರು ಮಾಡುವುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ ಎಂದು ನಾನು ಹೇಳಿದ್ದೇನೆಯೇ ಹೊರತು, ಐಟಿಯವರು ಮಾಡುವುದೆಲ್ಲ ನಿರುಪಯುಕ್ತ, ಅರ್ಥಹೀನ ಅಂತ ನಾನೆಲ್ಲಿ ಹೇಳಿದೆ? ನೀವೇ ಏನೇನೋ ಹೇಳಿಕೊಂಡು ಅದಕ್ಕೆ ಸಮರ್ಥನೆಯನ್ನೂ ಕೊಡುತ್ತೀರಿ/ಕೇಳುತ್ತೀರಿ.

ಗಣಿತ ಮೇಷ್ಟ್ರು ಪಾಠ ಸರಿ ಮಾಡ್ತಿಲ್ಲ, ಅದ್ಕೇ ನಮ್ಮ ಮಗ ಫೇಲಾದ ಅಂತ ಯಾರಾದ್ರೂ ಹೇಳಿದ್ರೆ ಅಂಥವರ ಮೂರ್ಖತನದ ಬಗ್ಗೆ ನನಗೆ ಕನಿಕರವಿದೆ. ತಮ್ಮ ಮಕ್ಕಳಿಗೆ ಬುದ್ಧಿಯಿಲ್ಲ ಎಂಬುದನ್ನು ಮೇಷ್ಟ್ರ ಮೇಲೆ ಗೂಬೆ ಕೂರಿಸಿ ಮರೆಮಾಚ್ತಾರೆ ಅಷ್ಟೆ.

ಇಲ್ಲಿ ಯಾರು ಎಷ್ಟು ದುಡೀತಾರೆ, ಹೇಗೆ ಖರ್ಚು ಮಾಡ್ತಾರೆ ಅನ್ನೋದು ವಿಷಯವಲ್ಲ. ಚರ್ಚೆ ಇರುವುದು ಐಟಿಯವರು "ಹಾಸಿಗೆ ಇದ್ದಷ್ಟು ಕಾಲು ಚಾಚು" ಎಂಬ ಮಾತು ತಮಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸುತ್ತಾರೆ ಎಂಬ ಪ್ರತಾಪ್ ಸಿಂಹರ ಮಾತಿನ ಮೇಲೆ. (ನಾನೂ ಅದಕ್ಕೆ ಹೊರತಲ್ಲ; ಪ್ಯಾರಾಸೇಲಿಂಗಿಗೆ ಹೋಗ್ತೀನಿ; ಅದಕ್ಕೇ ಜನ ನನ್ನಂಥವರಿಗೆ ಉಗೀತಿರೋದು. ನೀವು ಐಟಿ ಕಂಪನಿಯ ಉದ್ಯೋಗಿ ಎಂದಿದ್ದೀರಿ; ನೀವೂ ಈ ರೀತಿ ಔಟಿಂಗಿಗೆ ಹೋಗೇ ಇರ್ತೀರ. ಅದ್ಕೇ ನಿಮ್ಮನ್ನೂ ಸೇರಿಸಿ ಉಗೀತಾರೆ)

ನೀವು ನಿಮ್ಮಣ್ಣನನ್ನು ಸಮರ್ಥಿಸಿಕೊಳ್ತೀರ ಅಂದ್ರೆ ಅದಕ್ಕೆ "ಸ್ವಜನಪಕ್ಷಪಾತ" ಅಂತಾರೆ.. ನಮ್ಮ ರಾಜಕಾರಣಿಗಳು ಇದನ್ನ ಸ್ವಲ್ಪ ಜಾಸ್ತಿ ಮಾಡ್ತಾರೆ.. ಐಟಿ ಬಿದ್ದ ಮೇಲೆ ನೀವೂ ಅದೇ ಕೆಲಸ ಟ್ರೈ ಮಾಡ್ಬಹುದು.

ಪಕ್ಷಪಾತ ಮಾಡಿ ತಪ್ಪಿರುವವರ ಕಡೆ ಒಲವು ತೋರಿಸಿದವರನ್ನು ಇತಿಹಾಸ ಎಲ್ಲಿಯೂ ಕೊಂಡಾಡಿಲ್ಲ. ಸತ್ಯಕ್ಕೆ ಒತ್ತಾಸೆಯಾದವರನ್ನು ಎಲ್ಲೂ ತೆಗಳಿಲ್ಲ.

ಇಲ್ಲಿ ನಾನು ಸರಿ ಎಂದೂ ಸಮರ್ಥಿಸುತ್ತಿಲ್ಲ, ನೀವು ತಪ್ಪು ಎಂದೂ ಆರೋಪ ಮಾಡುತ್ತಿಲ್ಲ. ಮತ್ತೆ ಹೇಳುತ್ತಿದ್ದೇನೆ, ಈ ಚರ್ಚೆ ಪ್ರತಾಪ್ ಸಿಂಹರ ಲೇಖನದ ಬಗ್ಗೆ ನಡೆಯುತ್ತಿದೆ. ಅವರು ಬರೆದಿದ್ದು ನಿಮಗೆ ಸರಿ ಬರದಿರಬಹುದು... ಆದರೆ ಸತ್ಯ ಯಾವಾಗಲೂ ಕಹಿಯಾಗಿರುತ್ತದೆ.

ಸಂದೀಪ್ ಕಾಮತ್ said...

""ಹಾಸಿಗೆ ಇದ್ದಷ್ಟು ಕಾಲು ಚಾಚು" ಅನ್ನೋದನ್ನು ಚಾಚೂ ತಪ್ಪದೇ ಪಾಲಿಸಿದ್ದೇ ಐಟಿಯವರ ಅವನತಿಗೆ ಕಾರಣ ಹರೀಶ್.
ಹಾಸಿಗೆ ಉದ್ದ ಆದಷ್ಟು ಇವರು ಕಾಲು ಉದ್ದ ಮಾಡಿ ಚಾಚಿದರು.ಸಂಬಳ ಹೆಚ್ಚಾದ ಹಾಗೆ ಇವರು ತಮ್ಮ ಲೈಫ್ ಸ್ಟೈಲ್ ಬದಲಾಯಿಸಿದರು .ಇದು ಸರಿಯೋ ತಪ್ಪೋ ಅನ್ನೋದು ನನಗೂ ಗೊತ್ತಿಲ್ಲ.
ನೀವು ಊರಿಗೆ ಹೋಗ್ಬೇಕಾದ್ರೆ ವೋಲ್ವೋ ಬಸ್ ನಲ್ಲಿ ಹೋಗ್ತೀರಾ ಅಥವ ಕೆ.ಎಸ್.ಆರ್.ಟಿ.ಸಿ ಯ ಕೆಂಪು ಬಸ್ಸಿನಲ್ಲಿ ಹೊಗ್ತೀರಾ?
ನೀವು ಐಟಿಯವರೋ ಬೇರೆಯವರೋ ಎಂಬ ಪ್ರಶ್ನೆ ಇಲ್ಲಿ ಬರಲ್ಲ.ನಿಮ್ಮಲ್ಲಿ ಹಣ ಕಮ್ಮಿ ಇದ್ರೆ ಕೆಂಪು ಬಸ್ ನಲ್ಲಿ ಹೋಗ್ತೀರಿ ಇಲ್ಲಾಂದ್ರೆ ವೋಲ್ವೋ ಬಸ್ ನಲ್ಲಿ ಹೋಗ್ತೀರಿ. ಈ ಮಾತು ಪ್ರತಾಪ್ ಸಿಂಹ ಅವರಿಗೂ ಅನ್ವಯಿಸುತ್ತದೆ.
ಐಟಿಯ ವಿಷಯ ಬಿಡಿ ಪ್ರತಾಪ್ ಸಿಂಹರಿಗೇ ತಿಂಗಳಿಗೆ ಐವತ್ತು ಸಾವಿರ ಸಂಬಳವಿದ್ರೆ ಏನ್ ಮಾಡ್ತಾ ಇದ್ರು? ಬಾಡಿಗೆ ಮನೆಯಲ್ಲಿರ್ತಾ ಇದ್ರ ಅಥ್ವ ಅಪಾರ್ಟ್ಮೆಂಟ್ ತಗೋತಾ ಇದ್ರು?
ನಾನು ಪ್ರತಾಪ್ ಅಭಿಮಾನಿ .ಪ್ರತಿ ಶನಿವಾರ ತಪ್ಪದೇ ಅವರು ಬೇರೆಯವರನ್ನು ಉಗಿದು ಬರೆದಾಗ ಆನಂದಿಸಿದವನು.
ಆದ್ರೆ ಈ ವಾರ ನಮ್ಮನ್ನು ಕುರಿತು ಉಗಿದು ಬರೆದಾಗ ಕೊಂಚ ಕಸಿವಿಸಿಯಾದದ್ದೂ ನಿಜ! ಆದ್ರೆ ನೀವು ನಿಜಕ್ಕೂ ಗ್ರೇಟ್ ,ಉಗಿದದ್ದನ್ನು ಹಾಗೆ ಒರೆಸಿದಿರಿ.ನನಗೂ ಅಂಥ ಸಾಮರ್ಥ್ಯ ಬರಲಿ ಅಂತ ಕೋರಿಕೊಳ್ತೇನೆ ದೇವರಲ್ಲಿ.
ಹರೀಶ್.ಸಂತೋಷ್ ಮನಸ್ಸಿಗೆ ಬೇಸರವಾದಲ್ಲಿ ದಯವಿಟ್ಟು ಕ್ಷಮಿಸಿ.
ನಾವು ನಮ್ಮಲ್ಲೇ "ಏನಪ್ಪ ಈ ಕೆಲ್ಸ ಹಾಳಾದ್ದು ಸುಡುಗಾಡು ಕೋಡಿಂಗು " ಅಂತ ಮಾತಾಡಿಕೊಳ್ತೀವಿ ಅದೇ ಮೂರನೆಯವನು "ಅದೇನ್ ಸುಡುಗಾಡು ಕೋಡಿಂಗ್ ಮಾಡ್ತೀರೋ " ಅಂದ್ರೆ ಎಲ್ಲಿ ಉರಿಯಬೇಕೋ ಅಲ್ಲಿ ಉರಿಯುತ್ತೆ.
ಜನ ಸಾಮಾನ್ಯರಿಗೆ ಬಹುತೇಕ ವಿಷಯಗಳು ಅರ್ಥ ಆಗಲ್ಲ .ಅದಕ್ಕೇ ಅವರನ್ನು ಜನ ಸಾಮಾನ್ಯರು ಅನ್ನೋದು.

ನಾನು ಒಂದು ವಿಷಯ ಕೇಳ್ತೀನಿ ಬೇಜಾರು ಮಾಡ್ಕೋಬೇಡಿ.

ಈ ಐಟಿ ಫೀಲ್ಡ್ ಸರಿ ಇಲ್ಲ ಅಂತ ನಿಮಗೆ ಗೊತ್ತು ,ಅದನ್ನು ಬೇರೆಯವರೂ ಸಾಕಷ್ಟು ಮನವರಿಕೆ ಮಾಡಿಸಿದ್ದಾರೆ ಅಲ್ವ?
ಹಾಗಿದ್ರೆ ನೀವು ಈ ಫೀಲ್ಡ್ ಬಿಟ್ಟು ಬೇರೆ ಯಾವುದಾದರೂ ಒಳ್ಳೆಯ ಫೀಲ್ಡ್ ಅನ್ನು ಆಯ್ಕೆ ಮಾಡಬಹುದಲ್ಲ?ನೀವ್ಯಾಕೆ ಆ ಬಗ್ಗೆ ಮನಸ್ಸು ಮಾಡಿಲ್ಲ ?
ಸುಮ್ಮನೆ ಕುತೂಹಲಕ್ಕೆ ಕೇಳಿದೆ .ತೀರಾ ಪರ್ಸನಲ್ ಅನ್ಸಿದ್ರೆ ಕ್ಷಮಿಸಿ,ನಿಮ್ಮನ್ನು ಮುಜುಗರಕ್ಕೀಡು ಮಾಡುವ ಉದ್ದೇಶ ನನಗಿಲ್ಲ.

Harisha - ಹರೀಶ said...

"ಹಾಸಿಗೆ ಇದ್ದಷ್ಟು ಕಾಲು ಚಾಚು" ಅನ್ನೋದನ್ನು ಚಾಚೂ ತಪ್ಪದೇ ಪಾಲಿಸಿದ್ದೇ ಐಟಿಯವರ ಅವನತಿಗೆ ಕಾರಣ.

"ಇದ್ದಷ್ಟು" ಅಲ್ಲ.. "ಇದ್ದಷ್ಟೂ". ಉಳಿದಂತೆ ನೀವು ಹೇಳಿದ್ದು ೧೦೦% ಸರಿ. ಇದನ್ನೇ ಪ್ರತಾಪ್ ಕೂಡ ಹೇಳಿರೋದು.

***

ಇದುವರೆಗೂ ನಾನು ಊರಿಗೆ ಹೋಗುವಾಗ ಯಾವುದೇ ಬಸ್ಸಿಗೆ ಬುಕ್ ಮಾಡಿಲ್ಲ. ಯಾವುದೇ ಹಬ್ಬವಿದ್ದರೂ, ಎಷ್ಟೇ ರಶ್ ಇದ್ದರೂ ಸಹ ಸಾಮಾನ್ಯ ಜನರಂತೆ ಹೋಗುವುದೇ ನನಗಿಷ್ಟ.. ಎರಡು ವಾರದ ಹಿಂದಷ್ಟೇ ಊರಿಂದ ಬರುವಾಗ ಶಿವಮೊಗ್ಗದಿಂದ ರೈಲಿನಲ್ಲಿ ಜನರಲ್ ಕಂಪಾರ್ಟ್ಮೆಂಟಿನಲ್ಲಿ ಲಗೇಜ್ ಇಡುವ ಜಾಗದಲ್ಲಿ ಕುಳಿತು ತೂಕಡಿಸುತ್ತಾ ಬಂದಿದ್ದೇನೆ. (ನನ್ನಲ್ಲಿ ವೋಲ್ವೋದಲ್ಲಿ ಬರುವಷ್ಟು ದುಡ್ಡಿತ್ತು)

ಪ್ರತಾಪ್ ಸಿಂಹರ ಲೇಖನಗಳು ವಸ್ತುನಿಷ್ಠವಾಗಿರುತ್ತವೆ. ಹಾಗಾಗಿ ನಾನು ಅವರ ಅಭಿಮಾನಿ. ಆದರೆ ಇತ್ತೀಚೆಗೆ ಅವರ ಲೇಖನಗಳು ತೂಕ ಕಳೆದುಕೊಳ್ಳುತ್ತಿವೆ ಎನ್ನುವುದೂ ಅಷ್ಟೇ ದಿಟ.

***

ನನಗೆ ಪರ್ಸನಲ್, ಸೀಕ್ರೆಟ್ ಅಂತ ಏನೂ ಇಲ್ಲ. ನಿಮಗೇನೇನು ಸಂಶಯವಿದೆಯೋ ಕೇಳಿ, ಹೇಳುತ್ತೇನೆ. ಆದರೆ ನಿಮ್ಮ ಬ್ಲಾಗ್ ನನ್ನ ಜೀವನ ಚರಿತ್ರೆಯಾಗುವುದು ಬೇಡ. ನನಗೆ ಐಟಿ ಫೀಲ್ಡ್ ಇಷ್ಟ. ಅದಕ್ಕಾಗಿ ಇದನ್ನು ಆಯ್ದುಕೊಂಡೆ. ಅದರ ಬಗ್ಗೆ ಇಲ್ಲಿ ಬರೆದಿದ್ದೆ. ಅದರಲ್ಲಿಯೂ ನನಗೆ ಸರ್ವಿಸ್ ಓರಿಯೆಂಟೆಡ್ ಕಂಪನಿಗಳು ಇಷ್ಟವಿರಲಿಲ್ಲ. ಹಾರ್ಡ್ವೇರ್ ಬಗ್ಗೆ ಒಲವಿತ್ತು. ಹಾಗಾಗಿ ನಾನು ಇನ್ಫೋಸಿಸ್, ಎಚ್.ಸಿ.ಎಲ್, ಐಬಿಎಂ ಸೇರಿದಂತೆ ಹಲವಾರು ಕಂಪನಿಗಳ ಇಂಟರ್ವ್ಯೂಗೇ ಹೋಗಿರಲಿಲ್ಲ. ನೇರವಾಗಿ ಈಗ ನಾನಿರುವ ಟಾಟಾ ಎಲೆಕ್ಸಿಯ ಇಂಟರ್ವ್ಯೂ ಬರೆದಿದ್ದೆ.

ನಾನೊಬ್ಬ ಹುಚ್ಚ ಅಂತ ನಿಮಗನ್ನಿಸಬಹುದು. ಆದ್ರೆ ನಾನಿರೋದೇ ಹೀಗೆ.

ಸಂದೀಪ್ ಕಾಮತ್ said...

Harish ,

Thanks for the clarification dude:)

ನೀನು ಹುಚ್ಚ ಅಂತ ನನಗೆ ಯಾವತ್ತೂ ಅನಿಸಿಲ್ಲ.ಅನಿಸಿದ್ದನ್ನು ನೇರವಾಗಿ ಹೇಳುವ ಗುಣ ನನಗೆ ಯಾವತ್ತೂ ಇಷ್ಟ ...
ಕೆಲವೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದೆ ಅಂದ ಮಾತ್ರಕ್ಕೆ ನಾನು ಹಾಗೆಲ್ಲ ಅವಮಾನಿಸಲ್ಲ.
ಮತ್ತೊಮ್ಮೆ ಎಲ್ಲರಿಗೂ,
"Always try to prove that you are right NOT others are wrong .."
ನನ್ಗೆ ಈ ಸಲ ಹಾಗಿರೋಕೆ ಸಾಧ್ಯವಾಗಿಲ್ಲ -ಕ್ಷಮೆಯಿರಲಿ:)

Anonymous said...

ಪ್ರತಾಪನ ಲೇಖನದ ವಿಷಯ ಬಗ್ಗೆ ಚರ್ಚೆ ಮಾಡು ಅಂದ್ರೆ ಹರೀಶನ ಪ್ರವರ ಕೇಳ್ತಾ ಕೂತಿದ್ದೀಯಲ್ಲ ಮಾಮು. ಇಲ್ಲಿ ವೈಯಕ್ತಿಕ ಖರ್ಚು ವೆಚ್ಚಗಳಾಗಲೀ ಅಥವಾ ಐ.ಟಿ.ಯವರ ಸಂಬಳದ ಬಗ್ಗೆ ಮಾತ್ರ ಆಗಲೀ ಉಗಿದಿರೋದಲ್ಲ ಪ್ರತಾಪ. ಒಂದು system ಹಾಳಾಗಲು ಐ.ಟಿ. ಹೇಗೆ ಕಾರಣ ಆಯ್ತು ಅಂತ ಬರೆದಿರೋದು. ವೈಯಕ್ತಿಕ ನೆಲೆಗಟ್ಟಿನಿಂದ ಹೊರಬಂದು ಸ್ವಲ್ಪ ಸಾಮಾಜಿಕ ನೆಲೆಗಟ್ಟಿನಲ್ಲಿ ಯೋಚಿಸಿ ನೋಡು.
ಜನರಿಗೆ ಖರ್ಚು ಮಾಡುವ ಕೆಪಾಸಿಟಿ ಜಾಸ್ತಿ ಆಯ್ತು ಅಂದರೆ ಸಮಾಜ ಉದ್ಧಾರ ಆದ ಹಾಗೆ ಅಲ್ಲ, ಬದಲಾಗಿ ಆ ಹಣಕ್ಕೆ ಒಳ್ಳೆಯ ಮೌಲ್ಯ ಇದ್ದರೆ/ ಗೊತ್ತಿದ್ದರೆ ಅದು ಸಮಾಜ, ದೇಶದ ಉದ್ಧಾರದ ಸಂಕೇತ. ದುಡ್ಡು ಇದೆ ಅಂತ ವಿಪರೀತ ಖರ್ಚು ಮಾಡಿದ್ದೇ ಈ ಸ್ಥಿತಿಗೆ ಕಾರಣ ಈಗ ಅಂತ ಪ್ರತಾಪ ಹೇಳಿರೋದು. ನೀನು ಬೇರೆ ಏನೇನೋ ಅರ್ಥ ಕೊಟ್ಟು ಸುಮ್ನೆ ಅಲ್ಲಿ ಪರಪರ ಕೆರ್ಕೊಂಡು ಗಾಯ ಮಾಡ್ಕೋತಾ ಇದೀಯಾ.

-ಹೆಸರಲ್ಲೇನಿದೆ ಬಿಡು ಮಾಮು

ಬೆಂಗಳೂರು ರಘು said...

anonymous obba hedi adaralle enenu doubt illa.illandre hesru helironu....Sandeep dont worry....we are all with you

ಸಂದೀಪ್ ಕಾಮತ್ said...

ಗುರು ,
ನಿಮ್ಮ ಸಪೋರ್ಟ್ ಗೆ ಧನ್ಯವಾದಗಳು.


ಅನಾನಿಮಸ್,
ನನ್ನ ಹರೀಶ್ ವಾದ ಯಾವಾಗಲೂ ಸ್ನೇಹಪೂರ್ವಕವಾಗೇ ಇರುತ್ತೆ.

ಆದ್ರೆ ನೀವು ಚಿತೆಯ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವ ಚಟ ಬಿಡಿ.

Anonymous said...

@gurughatal or something
ನಾನೂ ನಿಮ್ಮ ಹಾಗೆ ಏನೋ ಒಂದು ಹೆಸರು ಇಟ್ಟುಕೊಂಡು ಬರೆಯಬಹುದಿತ್ತು. ಆದರೆ ಇಲ್ಲಿ ಹೆಸರಿಗಿಂತ ವಿಷಯ ಮುಖ್ಯ.
ನಿಮಗೆ ವಿಷಯ ಮಾತಾಡಲಿಕ್ಕಾಗದಿದ್ದರೂ ಹೆಸರೊಂದೇ ಮುಖ್ಯ.!

@sandeep maamu,
ಏನ್ ಮಾಮು, We are with u ಅಂತ ಅವನಂದ್ರೆ ಅವರು ಹೇಳಿದ್ದಕ್ಕೆ ನೀನು ತಲೆ ಅಲ್ಲಾಡಿಸಿಬಿಡುವುದಾ ಹಾಗೆ? ನೀನೇನು ಪ್ರತಾಪನ ಮೇಲೆ ಧಾಳಿಗೆ ಹೊರಟಿದ್ದೀಯಾ ಮಾಮು? ನಿಮ್ದು ಹರೀಶನದ್ದು ಜಗಳ ಅಂತ ನಾನೆಲ್ಲಿ ಹೇಳಿದೆ ? ಸ್ನೇಹಪೂರ್ವಕವಾಗೇ ಇರಲಿ ವಾದ. ನಾನು ಬೀಡಿ ಹತ್ತಿಸಿಕೊಳ್ಳೋದು ಬೇರೆ ವಿಷಯ ಮಾಮು, ಇಲ್ಲಿ ಇಡೀ ಊರಿಗೇ ಬೆಂಕಿ ಬಿದ್ದಿರೋ ವಿಷಯ ಮಾತಾಡಬೇಕಾಗಿದ್ದು.

ಬೆಂಗಳೂರು ರಘು said...

enu swami nimge nanna hesru odokke barolva...nanna hesru guru Ganapathi and btw "hamthaalu" namma sirname.....paapa nimge hesarina soubhagya illa ansitte....vishya enadru bekandre bannni nanna hattira saakshtu ide...i dont want to write like you..just for the heck of it. Pratap simhana articlenalli hurulu thirulu erdu illa...nim prakara IT irlilla andre ella sari irtitto henge?nimma counter vaada mandisi nodova..dont act like a bystander and a moronic nerd...nimage IT avarinda aada tondaregalu enu? good after 5-6 months lets say all IT people come on road, what is it that you are going to get...Unless you are god, please remember all of us are part of this economy and everybody will get affected.dhairya iddre gosumbe tara aadade sariyage ninna vaada mandisu...

ಸಂದೀಪ್ ಕಾಮತ್ said...

ಇರ್ಲಿ ಬಿಡಿ ಗುರು:)

ಇಡೀ ಊರಿಗೆ ಬೆಂಕಿ ಬೀಳುತ್ತೆ ನಿಜ ಆದ್ರೆ ಸುಡೋದು ಐಟಿಯವರು ಮಾತ್ರ ಅಲ್ಲ ನೆನಪಿರಲಿ .

ಸಂದೀಪ್ ಕಾಮತ್ said...

ಗುರು ,
ಮೊನ್ನೆಯಷ್ಟೆ ನನ್ನ ಮ್ಯಾನೇಜರ್ ಹೇಳ್ತಾ ಇದ್ರು .

"When your neighbor loos his job it's recession, when you loose it's depression " ಅಂತ .

ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತೆ.

ನಂಗೆ ವಿಶ್ವೇಶ್ವರ ಭಟ್ರ ಧೋರಣೆ ತುಂಬಾ ಇಷ್ಟ ಆಯ್ತು .ಕೆಲಸ ಕಳಕೊಂಡವರಿಗೆ ಸಾಂತ್ವನ ಹೇಳೋ ರೀತಿಯಲ್ಲಿ ಅವರು ಒಂದು ಲೇಖನ ಬರೆದಿದ್ದರು.

Anonymous said...

ಸರಿ , ನಿಮ್ಮ ಹೆಸರು ಗುರು ಗಣಪತಿ ಹಂತಾಲು/ಳು.
ಹೆಸರು ಬರೆಯೋ ವಿಧಾನ ಹೀಗೆ - Guru G Hantal. ಬಿಡಿಸಿಬರೆಯಬೇಕು. GuruGhantal- ಇದನ್ನು ಗುರುಘ್ಹಂಟಲ್ ಎಂದೂ ಓದಬಹುದು. ನಿಮ್ಮದು ವಿಶ್ವ ಪ್ರಸಿದ್ಧ ಹೆಸರು ಅಲ್ಲದೆ ಇರುವುದರಿಂದ ನೆಟ್ಟಗೆ ಹೆಸರು ಬರೆಯುವುದನ್ನ ಕಲಿತುಕೊಂಡು ನಂತರ ಓದುವುದಕ್ಕೆ ಬರುವುದಿಲ್ಲ ಎಂದು ಹೇಳಿ.
ಅದೇನೋ nerd, bystander, moron ಅಂತೆಲ್ಲಾ ಬೈದಿದ್ದೀರಾ. ಆದರೆ ನಾನು ನಿಮ್ಮ ಮಟ್ಟದವನಲ್ಲದ್ದರಿಂದ ಅದೆಲ್ಲಾ ಬಿಟ್ಟು ಈಗ ವಿಷಯಕ್ಕೆ ಬರೋಣ.

ಇಲ್ಲಿ ಚರ್ಚೆಗೊಳಗಾಗುತ್ತಾ ಇರುವ ವಿಷಯ ಪ್ರತಾಪನ ಲೇಖನದ ಬಗ್ಗೆ ಮತ್ತು ಅದಕ್ಕೆ ಸಂದೀಪರ ವಿರೋಧದ ಬಗ್ಗೆ. ಅದರಲ್ಲಿ ಅವನು ಐ.ಟಿ. ಇರುವುದು ಬೇಡ ಎಂದಾಗಲೀ ಅಥವಾ ಐ.ಟಿ.ಯವರದ್ದು ಅರ್ಥಹೀನ ಕೆಲಸ ಎಂದಾಗಲೀ ಹೇಳಿಲ್ಲ. ನಾನೂ ಕೂಡ ಹೇಳಿಲ್ಲ. ಐ.ಟಿ.ಯವರು part of the economy ಅಲ್ಲ ಎಂದೂ ಹೇಳಿಲ್ಲ. ಐ.ಟಿಯವರು ಬೀದಿಗೆ ಬಿದ್ದರೆ ಖುಷಿಯಾಗುತ್ತದೆ ಎಂದೂ ಹೇಳಿಲ್ಲ. ನಾನು ಕೂಡ ಖುಷಿ ಪಡಲು ಕಾರಣವಿಲ್ಲ, ಯಾಕಂದರೆ ನಾನೂ ಬೀದಿಯಲ್ಲಿರುತ್ತೇನೆ ಆಗ! ಪ್ರತಾಪನ ಲೇಖನವಿದ್ದದ್ದು ಐ.ಟಿ.ಯವರು ದುಡ್ಡನ್ನು ಹೇಗೆ ಬಳಸಿಕೊಂಡರು, ಆ ದುಡ್ಡು/ಅವರ attitude ಸಮಾಜದ ಇತರರಿಗೆ ಹೇಗೆ ತೊಂದರೆ ಮಾಡಿದು ಎಂಬುದರ ಬಗ್ಗೆ. ಮತ್ತು ಐ.ಟಿ.ಇಂಡಸ್ಟ್ರಿ ಎಂಬುದು ನಮ್ಮನ್ನು ಹೇಗೆ ಬೇರೆಯವರ ಸೇವೆ ಮಾಡಿ ದುಡ್ಡುಗಳಿಸಿಕೊಳ್ಳುವುದರಲ್ಲೇ ಉಳಿಸಿಬಿಟ್ಟಿತು ಹೊರತು ಸ್ವಾವಲಂಬನೆ ಕಲಿಸಿಕೊಡಲಿಲ್ಲ ಎಂಬುದರ ಬಗ್ಗೆ. ಒಂದು ಸಮಾಜದಲ್ಲಿ ಬರೀ ಐ.ಟಿ. ಕೆಲಸಗಳೇ ಇರಲು ಸಾಧ್ಯವಿಲ್ಲ, ಇರಲೂ ಬಾರದು. ಐ.ಟಿ ಬಂದು ೧೫ ವರ್ಷ ಆದರೂ ಅವರೇನು ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿದಿಲ್ಲ ಎಂಬುದರಲ್ಲಿ ಯಾವ ತಪ್ಪೂ ಇಲ್ಲ. ಅದು ನಿಜವೂ ಕೂಡ, ಅದನ್ನು ಹರೀಶ್ ನಿರೂಪಿಸಿದ್ದಾರೆ. ಓದಿ ನೋಡಿ. ಇವತ್ತು ಐ.ಟಿ. ಕೆಲಸ ಹೋಗುತ್ತದೆ ಅಂತ ಯುವಕರು ದಿಕ್ಕು ತೋಚದಂತೆ ಆಡುತ್ತಿರುವುದಕ್ಕೆ ಕಾರಣ ಅವರನ್ನು ಬೇರೆ ಏನೂ ಕೆಲಸ ಮಾಡಲು ಆತ್ಮವಿಶ್ವಾಸ ಕಳೆದು ಕೂರಿಸಿದ್ದು ಅದೇ ಐ.ಟಿ.ಫೀಲ್ಡು ಮತ್ತು ಆ excess ದುಡ್ಡು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದುಡ್ಡಿನ ಬೆಲೆ ತಿಳಿಯದಂತೆ ಮಾಡಿ ಅನಗತ್ಯವಾಗಿ ಅತೀ ಖರ್ಚು ಮಾಡಿಸಿ, ಭವಿಷ್ಯದ ಯೋಚನೆಯಿಲ್ಲದೇ ದಿಕ್ಕು ತಪ್ಪಿಸಿದ್ದು. ನೀವು ಇನ್ನೊಮ್ಮೆ ತಣ್ಣಗೆ ಕೂತು ಪ್ರತಾಪನ ಲೇಖನ ಓದಿಕೊಂಡು ಬನ್ನಿ. ಮತ್ತೆ ಇಲ್ಲಿ ವೈಯಕ್ತಿಕ ಬೇಡ, ಅಂದರೆ ನಾನೆಷ್ಟು ಖರ್ಚು ಮಾಡ್ತೀನಿ, ನೀವೆಷ್ಟು ಮಾಡ್ತೀರ ಅಂತ. ಇದನ್ನು general ಆಗಿ ತೆಗೆದುಕೊಳ್ಳಿ.

ನಮಗೆ ನಿಮಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ, ಇಲ್ಲಿ ವಿಷಯದ ಚರ್ಚೆಯಷ್ಟೆ. ಆದ್ದರಿಂದ ಬರೆಯುವಾಗ ಭಾಷೆ ಹದವಾಗಿರಲಿ.

@maamu
ಭಟ್ಟರು ಸಾಂತ್ವನ ಹೇಳಿದ್ದರು, ಪ್ರತಾಪ ಬೈದರು ಅಂತ ವೈಯಕ್ತಿಕ ಇಷ್ಟ ಕಷ್ಟಕ್ಕಿಂತ ಪರಿಸ್ಥಿತಿಯ ಅವಲೋಕನ ಮುಖ್ಯ ಮಾಮು. ಭಟ್ಟರು ಬರೆದದ್ದು ವಿಷಯದ ಬೇರೆ ಕೋನದಲ್ಲಿ, ಪ್ರತಾಪ ಬರೆದದ್ದು ಬೇರೆ ಕೋನದಲ್ಲಿ.

ಸಂದೀಪ್ ಕಾಮತ್ said...

ರೀ ಅನಾನಿಮಸ್ ಒಂದು ಕೆಲಸ ಮಾಡಿ.
ನಿಮಗೆ ಅಶ್ಟೊಂದು ಆಸಕ್ತಿ ಇದ್ರೆ ಪ್ರತಾಪ್ ಸಿಂಹರ ಸೈಟ್ ಗೆ ಹೋಗಿ ಅಲ್ಲಿ ಬರೆಯಿರಿ .
ಅಲ್ಲಿ ನನಗಿಂತ ಚೆನ್ನಾಗಿ ಐಟಿಯವರು ತಮ್ಮನ್ನು ತಾನು ಸಮರ್ಥಿಸಿಕೊಳ್ತಾ ಇದ್ದಾರೆ.
ನಾನು ಪ್ರತಾಪ್ ಸಿಂಹ ಬರೆದದ್ದು ಎಲ್ಲ ತಪ್ಪು ಅಂದಿಲ್ಲ .ಯಾವುದು ಸರಿ ಅನ್ನಿಸಿಲ್ಲವೋ ಅದನ್ನು ಇಲ್ಲಿ ಬರೆದಿದ್ದೇನೆ ಅಷ್ಟೆ.

Anonymous said...

sari maamu thank you. Gurugantalu enu heltare nodi avrigu nine enadru daari torisibidu. bye

ಶ್ರೀನಿಧಿ.ಡಿ.ಎಸ್ said...

hmmmm...

Unknown said...

Anamikare,

Nive helid haage IT is just a few years old, ask any kid now they know what a software means. Namma poorvikaru yaradru sceintist yenadru re-search maadtha iddre, avnobba huccha yeneno maadtha ne antha annovaranthe, so it took a long time for people to understand what science is about what a scientist do, bhumi gundagide andaga jaana biddu biddu nagovranthe.... so it will take sometime for people to understand about any new field... IT yavru beedi ge beelo vishya... its a ripple effect IT biddre ellaru biltaare..inta saddist mansyake... I totally agree with all the adverse effect IT has done but why only point out that... positive matthu negetive eredu nodbekalva...

and Sandeep you are excellent... and this is what exactly we wanted to convey to anyone who things and interprets like Pratab...

ಬೆಂಗಳೂರು ರಘು said...

thanks for the explaination mr.anonymous..naanu henge nanna hesaru baribeku antha naanu decide madiddene aadre neevu nimma hesaru helade bereyavru decide madonge aaytalla... che che ho vidhiye. innondu vishya nimge bekada username sigokke idu RTO officealla kaasu kottida takshana nimage bekada number siguttalla hange. irli ree swami, doctor ge IT barolla haage chappali holeyo chammaranigu IT barolla so it will be obvious people who know one trade may not be/can not be good in another trade. Pratap Simhana problem is he does not understand because he is not in IT. Bareyoru en bekadru baribodu aadare swalpa satya baribeku haage assumptiongalu beda. Naanu bekadare pratap simhana prati linelli tappannu prove maadaballe and i have the proof ( for example indian companies not involved in getting patents, recession is not because of IT and that IT people do not spend all their money carelessly (read all money and everybdody as well).IT avru en madta iddare antha gottilla andiddare? yavattadru artha madkolo praytna maadiddara, hogli ivarigella fan henge work agutte athva motorcycle henge odutte annodu gotta, i doubt if pratap understands all of these. any ways you and lot of people here have talked about some angles(kona), let me tell you and i quote as its said by a great man YMN Murthy (life is all about presepective (durshti"kona")and more broader the perspective(drushti"kona") better is the analysis(vishleshane). Olle borewellnalli iro kappe thara adbedi, mainstream ge banni. about calling moron etc etc, adu nimmabagge nanna vishleshaneinda kandu hidida konada result :).... Sandeep, sorry for cluttering your blog space, just could not hold back on replying...i apologize

ಸಂದೀಪ್ ಕಾಮತ್ said...

ಗುರು ,
YMN ರ ಮಾತು ಇಷ್ಟ ಆಯ್ತು:)
We can't convince all the people all the time.

ಪುಷ್ಪಾ ,

ನಿಮ್ಮ ಬೆಂಬಲಕ್ಕೆ ಧನ್ಯವಾದಗಳು:)

Anonymous said...

OK. ಗುರು , ಮಾಮು.. ಬೇರೆಯವರು ಐ.ಟಿ. ಬಗ್ಗೆ ಬೈದರೆ ಅವರಿಗೆ ನಿಮ್ಮ ದೃಷ್ಟಿಯಲ್ಲಿ ಹೊಟ್ಟೆ ಉರಿ ಅನ್ನಬಹುದು. ಆದರೆ ಸ್ವತಃ ಐ.ಟಿ.ಯಲ್ಲಿ ಕೆಲಸ ಮಾಡುವವರೇ ಒಪ್ಪಿಕೊಳ್ತಾ ಇದ್ದಾರೆ ಅಂದ ಮೇಲೆ ಅದರಲ್ಲಿ ಸತ್ಯ ಇದೆ ಅಂತ ಅನ್ನಿಸುವುದಿಲ್ವಾ ನಿಮಗೆ ಸ್ವಾಮಿ? ಐ.ಟಿ ಯಿಂದ ರೆಸೆಶನ್ ಆಯ್ತು ಅಂತ ಯಾರು ಹೇಳಿದ್ರು ಸ್ವಾಮಿ? ರಿಸೆಶನ್ ಇಂದ ಐ.ಟಿ. ಯವರಿಗೆ ತೊಂದರೆ ಆಗಿರುವುದು ಅಂತ ಎಲ್ಲರಿಗೂ ಗೊತ್ತು. ನೀವು ಸುಮ್ನೆ ಏನೋ ನೀವೇ ಹೇಳಿಕೊಂಡು ನೀವೆ ಅದಕ್ಕೆ ಸಮರ್ಥನೆ ಕೊಟ್ಟುಕೊಳ್ತೀರಾ ಪಾಪ. ಹೋಗ್ಲಿಬಿಡಿ. ಧನ್ಯವಾದಗಳು.


ಸಂಭವಾಮಿ ಉಘೇ ಉಘೇ :)

ಸಂದೀಪ್ ಕಾಮತ್ said...

ಅನಾನಿಮಸ್ ,

ಬೆಂಗಳೂರಿನ ಜನಸಂಖ್ಯೆ ಸುಮಾರು ಎಪ್ಪತ್ತೈದು ಲಕ್ಷ .ಅದರಲ್ಲಿ ಐಟಿ ಯವರು ’ಬರೇ’ ಐದು ಲಕ್ಷ .

ಈ ಐದು ಲಕ್ಷ ಸ್ಯಾಂಪಲ್ ಗಳಲ್ಲಿ ತಮ್ಮ ವೃತ್ತಿಯನ್ನು ಇಷ್ಟ ಪಡುವವರು,ಪಡದವರು ,ಅದರ ಬಗ್ಗೆ ಅಭಿಮಾನ ಇರೋರು,ದುರಭಿಮಾನ ಇರೋರು ಎಲ್ಲಾ ಬಗೆಯವರೂ ಇದ್ದಾರೆ.
ಹಾಗಾಗಿ ನನ್ನೊಬ್ಬನ ಅಥವ ನಿಮ್ಮ ಒಬ್ಬನ ಅಭಿಪ್ರಾಯ ಅಷ್ಟೊಂದು ಲೆಕ್ಕಕ್ಕೆ ಬೀಳಲ್ಲ.
ನೀವೂ ಐಟಿ ಜಗತ್ತಿನಲ್ಲೇ ಇರೋರು ಅನ್ನೋದು ನನಗೆ ಯಾವತ್ತೋ ಗೊತ್ತಾಗಿದೆ.

ಪ್ರತಾಪ್ ಸಿಂಹರಿಗೆ ತಮ್ಮ ಶನಿವಾರದ ಅಂಕಣಕ್ಕೆ ಒಂದು ಲೇಖನ ಬೇಕಿತ್ತು .ಅವರು ಬರೆದ್ರು.
ನನಗೆ ನನ್ನ ಬ್ಲಾಗ್ ಗೆ ಒಂದು ಲೇಖನ ಬೇಕಿತ್ತು ನಾನೂ ಬರೆದೆ .ಅಲ್ಲಿಗೆ ಡೀಲ್ ಸರಿ ಹೋಯ್ತು .

ಐಟಿಯವರು ಬೀದಿಗೆ ಬಿದ್ದರೆ ಪ್ರತಾಪ್ ಅಥವ ನಾನೂ ಏನೂ ಮಾಡೋಕಾಗಲ್ಲ .
ನಾಳೆ ಮತ್ತೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ್ರೂ ಯಾರೂ ಏನೂ ಕಿತ್ತುಕೊಳ್ಳಕ್ಕಾಗಲ್ಲ.

ಮನುಷ್ಯ ಎಲ್ಲಿಯವರೆಗೆ ತಂತ್ರಜ್ಞಾನ ಉಪಯೋಗಿಸ್ತಾನೋ ಅಲ್ಲಿಯವರೆಗೆ ಐಟಿ ಬದುಕಿರುತ್ತೆ.
ಎರಡು ವರ್ಷ ಕಷ್ಟ ಇರಬಹುದೇನೋ .ಆದ್ರೆ ಎರಡು ವರ್ಷದ ನಂತರ ಮತ್ತೆ ಎಲ್ಲಾ ಸರಿ ಹೋಗುತ್ತೆ.

India will become a super power one day .And IT will be having a major contribution.

ಹಣದ ಬಗ್ಗೆ ವೈರಾಗ್ಯ ಬಂದ್ರೆ ನೀವು ಮಠ ಸೇರ್ಕೊಳ್ಳಿ ಅನ್ನೋಕೂ ನನಗೆ ಮನಸ್ಸು ಬರ್ತಾ ಇಲ್ಲ ಯಾಕಂದ್ರೆ ಅಲ್ಲೂ ದುಡ್ಡೇ ದೊಡ್ಡಪ್ಪ.

’ಕುರುಡು ಕಾಂಚಾಣ ದ ಬಗ್ಗೆ ಪುಟಗಟ್ಟಲೆ ಬರೆದ ಲೇಖಕ ಕೂಡಾ ಆ ಅಂಕಣಕ್ಕೆ ಕುರುಡು ಕಾಂಚಾಣವನ್ನೇ ತಗೊಂಡಿರ್ತಾನೆ.ಕಾಂಚಾಣ ಸ್ವಲ್ಪ ಕಮ್ಮಿ ಆಗಿದ್ದಕ್ಕೆ ಈ ಪರಿ ಸಿಟ್ಟೇನೋ ?
ಕುರುಡು ಕಾಂಚಾಣ ಇಲ್ಲದೇ ಇದ್ರೆ ಆ ಅಂಕಣ ಓದೋದಿಕ್ಕೆ ನಿಮ್ ಹತ್ರ ಎರಡು ರೂಪಾಯಿ ಕೊಟ್ಟೂ ಪೇಪರ್ ಓದೋದಕ್ಕೂ ಸಾಧ್ಯ ಆಗಲ್ಲ ಸ್ವಾಮಿ.

ಬೆಂಗಳೂರು ರಘು said...

mr.anonymous, good you gave this point. Today who ever is bashing IT, i will give an open challenge to quit IT, do not use anything related to IT.madokke agutta avra kaiyalli?.hypocrites....I can counter argue here that because of Non-IT sectors, IT is suffering..where did the crash happen? Realty sector and who failed Financial Secotr and who asked for the bailout finance, auto and insurance....now where did this money to bail out come from... IT and other sectors who did not suffer....how.. by paying taxes and exports...then who invested their hard earned money into realty...IT and all the sectors....today because some body's problem, IT people do not have property nor the value nor the job which would generate the income to pay back the loan...who created this hungama, people who had lot of money usually not white...who created the demand ? realty sector...yaake nimgella so called IT bashers and media, bereyavaranna ecchariso vrutti dharma barlilva aaga? kaasu bandaga nimgella beku..ade ilde iddaga support maadade summne huccha patte article most popular paper ondaralli editorialnalli baryoda? ida nimma morality and work culture?? Shame on you, if you can't say something good about somebody or something atleast don't laugh at them(taatsara beda)...irbekagittu neevella like our parent's generation..katthe chaakari, bucketgiri and life long struggle..hogi eeglu maadi yaru beda andru..

ಸಂದೀಪ್ ಕಾಮತ್ said...

ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಂದು ಬಾಗಿಲ ಕಾಯ್ವರು ..
ಉಂಟಾದ ತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಕತ್ತ ಮೇಲಕ್ಕೆತ್ತುವರು........
ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು...

Unknown said...

Exactly Sir.. :) :)...

PaLa said...

nice post, well thought

Anonymous said...

ಇಲ್ಲಿ ಪ್ರತಾಪನನ್ನು ನೀವೆಲ್ಲಾ ವೈಯಕ್ತಿಕವಾಗಿ ಅಟ್ಯಾಕ್ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ, ಅವರ ಸಂಬಳ ಎಶ್ಟು, ಅವನು ಬಾಡಿಗೆ ಮನೆಲ್ಲಿದ್ದಾನಾ ಇತ್ಯಾದಿ. ಅವನನ್ನು ಒಬ್ಬ ಬರಹಗಾರನನ್ನಾಗಿ ನೋಡಿ ಆ ಬರಹದ ವಿಷಯದ ಬಗ್ಗೆ ಚರ್ಚೆ ಮಾಡಿ ಸ್ವಾಮಿ. ಸಂದೀಪ್ ಮಾಮುಗೆ ಭಟ್ಟರು ಭಾರೀ ಇಷ್ಟ ಅಂತೆ ಯಾಕಂದ್ರೆ ಸಾಂತ್ವನ ಹೇಳುತ್ತಾರಂತೆ. ಪ್ರತಾಪನ ಲೇಖನವನ್ನೂ ಭಟ್ಟರೇ ವಿ.ಕದಲ್ಲಿ ಹಾಕುವುದಲ್ವಾ? ಮತ್ತೆ ಭಟ್ಟರು ಹೀರೋ ಆಗಿ, ಪ್ರತಾಪ ಖಳನಾಯಕ ಹೇಗಾಗಲು ಸಾಧ್ಯ?! :)

ಅಪ್ಪಾ ಗುರುಗಂಟಲು, nobody is bashing IT or its uses, advantages here , bashing was for attitude of IT people and misuse of money and only service orientation of IT companies. and your attitude is the best example for that. ನೀನು ಹೀಗೆ ಮಾತಾಡಕ್ಕೆ ಕಾರಣ, ಇಷ್ಟು ಗತ್ತು, ಅಹಂಕಾರ , attitude ತೋರಿಸಲು ಕಾರಣ ಅದೇ ಚಿಕ್ಕವಯಸ್ಸಿಗೇ ಸಿಕ್ಕ ಅತಿಯಾದ ದುಡ್ಡು. ಇಲ್ಲಿ ನಿನ್ನದು ಇಷ್ಟೆ ಪ್ರಮಾಣದಲ್ಲಿದ್ದರೆ ಹೊರಗೆ ಬೇರೆ ಐ.ಟಿ. ಜನರದ್ದು ಬೇರೆ ಬೇರೆ ರೀತಿಯಲ್ಲಿತ್ತು. ಈಗ ಐ.ಟಿ.ಯವರು ಅನುಭವಿಸುತ್ತಿದ್ದಾರೆ. ಅದನ್ನೇ ಹೇಳಿದ್ದು ಪ್ರತಾಪ, ’ಕುರುಡು ಕಾಂಚಾಣ’ ಕುಣಿಯುತಲಿತ್ತು ಅಂತ :)
I told you to read that article once again without loosing your cool. We are NOT against IT or its technology or that job. Ok.

ಸಂದೀಪ್ ಕಾಮತ್ said...

ಅನಾನಿಮಸ್ ,
ನಾನೇನೂ ಪ್ರತಾಪ್ ರನ್ನು ವೈಯುಕ್ತಿಕ ಮಟ್ಟದಲ್ಲಿ ದೂರಿಲ್ಲ .ನಾನು ಯಾವತ್ತಿದ್ರೂ ಅವರ ಲೇಖನಗಳನ್ನು ಮೆಚ್ಚಿದವನು .ಇನ್ನೂ ಮೆಚ್ಚುತ್ತೇನೆ .
ಪ್ರತಾಪ್ ಖಳನಾಯಕ ಅಂದೇನೂ ಹೇಳಿಲ್ಲ ನಾನು.ಅವರ ಕೆಲವು ವಿಷಯಗಳು ಇಷ್ಟ ಆಗಿಲ್ಲ ಅದನ್ನಶ್ಟೇ ಇಲ್ಲಿ ಹೇಳಿದ್ದೆ.

ಪ್ರತಾಪ್ ಸಿಂಹರಿಗೇನಾದ್ರೂ ವಿಜಯ ಕರ್ನಾಟಕದಲ್ಲಿ ಒಬ್ಬ ಐಟಿಯವನಿಗೆ ಬರುವ ಹಾಗೆ ದೊಡ್ಡ ಸಂಬಳ ಬಂದಿದ್ದರೆ ಅವರೂ ಒಬ್ಬ ಐಟಿಯವನ ಹಾಗೇ ಬದುಕುತ್ತಿದ್ದರು ಎಂದಷ್ಟೇ ಹೇಳಿದ್ದೆ.

ದಿನಕ್ಕೆ Rs 200 ದುಡಿಯುವ ಆಟೋ ಡ್ರೈವರ್ ಒಬ್ಬ ದಿನಕ್ಕೆ ನೂರು ರೂಪಾಯಿಯನ್ನು ಕುಡಿತ ಪಾನ್ ಪರಾಗ್ ಸಿಗರೇಟ್ ಅಂತ ಖರ್ಚು ಮಾಡ್ತಾನೆ.ದುಂದು ವೆಚ್ಚ ಮಾಡಲು ದೊಡ್ಡ ಸಂಬಳವೇ ಬೇಕೆಂದಿಲ್ಲ.
ನಮ್ಮ ಆಫೀಸಿನಲ್ಲಿ ದೊಡ್ಡ ಸಂಬಳ ಸಿಗುವ ನೂರಾರು ಜನ ಹವಾಯಿ ಚಪ್ಪಲಿ ಹಾಕ್ಕೊಂಡೇ ಬರ್ತಾರೆ.
ಇನ್ನು ಹಣ ಚಿಕ್ಕ ವಯಸ್ಸಿಗೆ ಸಿಕ್ಕರೂ ಅಷ್ಟೇ ದೊಡ್ಡ ವಯಸ್ಸಿಗೆ ಸಿಕ್ಕಿದರೂ ಅಷ್ಟೇ ಖರ್ಚು ಮಾಡುವ ಹುಡುಗ Ice candy ತಿಂದು ಮಜಾ ಮಾಡ್ತಾನೆ ಅದೇ ಉಳಿತಾಯ ಮಾಡುವವನು ಚಿಕ್ಕ ಡಬ್ಬಿಯಲ್ಲಿ ಹಾಕಿ ಸಂತೋಷ ಪಡ್ತಾನೆ.

ಅದೆಲ್ಲ ಬಿಡಿ ನಿಮಗೆ ಎಷ್ಟು ಹೇಳಿದರೂ ಅರ್ಥ ಆಗಲ್ಲ.

ಬೆಂಗಳೂರು ರಘು said...

tagoli swami matte varase change.... swami nannalli duddu ide antha nimage yaaru heliddu? nimma prakara jaasti duddu endare yeshtu?nimma prakara IT avara service oreientation enu? nimage sudha murthy, rohini nilekani, azim premji antha maha diggajaru (bharatiyaru maatrare) athava bill gates athava michael dell maadiruva non profit foundation for betterment of human being is not enough?hogi janaagraha athava parikrama foundation atahava Who says we dont like pratap simha as a human being? yes we dont like the hat he is wearing as a journalist to prove something which he can't see.have not supported him when he wrote articles about be it bhyrappa, modi, godhra or any other socio-political article.Sari swami..nimma prakara IT janagalu doregala taraha aadta iddare anthane itkolona? avra duddu avra khayali avra shoki..nimgenu?Pratap Simha heege bareyalikke karana avrige chikka vayassinnalli sigada dudda? Namge enu bhattra mele khaas ishta enilla,avrigu naavu namma anisike tilisiddeve. BTW me losing cool... understand, its not about the article nor pratap simha but its the attitude of people who just close their eyes whatever is visible write about it and people like you who are waiting on to pounce on it without analyzing? nimma prakara ee lekhanada attitude sari idya? and to add to that you are showing your attitude by not even able to write my name properly......you loser and a hypocrite.

ಬೆಂಗಳೂರು ರಘು said...

"have not supported him when he wrote articles about be it bhyrappa, modi, godhra or any other socio-political article"... to be read as "have we not supported him when he wrote articles about be it bhyrappa, modi, godhra or any other socio-political article".... Sorry about that

Anonymous said...

ಗುರು ಅವರು Pratap Simha heege bareyalikke karana avrige chikka vayassinnalli sigada dudda? ಅಂತ ಕೇಳ್ತಿದ್ದಾರೆ. ಮಾಮು ಅವರು ಪ್ರತಾಪನಿಗೆ ಸಂಬಳ ಬಂದಿದ್ದರೆ ಅವನೂ ಹಾಗೇ ಖರ್ಚು ಮಾಡುತ್ತಿದ್ದ ಅಂತಾರೆ. ಪದೇ ಪದೇ ಹೇಳುತ್ತಿದ್ದರೂ ಮತ್ತದೇ ಹೇಳುತ್ತೀರಲ್ಲಾ ಸ್ವಾಮಿಗಳೇ. ಪ್ರತಾಪನ ಸಂಬಳ, ಪ್ರತಾಪನ ಬದುಕು, ಖರ್ಚು ಇಲ್ಲಿ ಅಪ್ರಸ್ತುತ. ಅವರು ಬರೆದಿರುವ ವಿಷಯದ ಬಗ್ಗೆ ಚರ್ಚೆ ಮಾಡಿ. ಇದು ಐ.ಟಿ v/s ಪ್ರತಾಪ ಅಲ್ಲ. ಬದಲಾಗಿ ಪ್ರತಾಪ ಒಬ್ಬ ಬರಹಗಾರ. ಅವನ ಬರಹದ ವಿಷಯ ಐ.ಟಿಯವರ ಕುರುಡು ಕಾಂಚಾಣ. ಇಷ್ಟು ಮಾತ್ರದ ತಿಳುವಳಿಕೆ ಇಲ್ಲದ ಐ.ಟಿ. ಪ್ರಭೃತಿಗಳು ನೀವು ಅಂತ ನಿರೂಪಿಸಿದ್ದೀರಿ.

pratapsimha.com ನಲ್ಲಿ ಒಬ್ಬ ಓದುಗರ ಕಮೆಂಟನ್ನು ಇಲ್ಲ್ಲಿ ಹಾಕುತ್ತಿದ್ದೇನೆ, ಈಗಲಾದರೂ ಅರ್ಥವಾಗುತ್ತದೋ ನೋಡಿ.

ಪ್ರತಾಪ್ ಸಿಂಹರ ಲೇಖನದಿಂದ ಸಿಟ್ಟಾದ ಎಲ್ಲ ಸ್ನೇಹಿತರಿಗೆ ವಂದನೆಗಳು

“ಲೇಖನ ಏಕ ಮುಖವಾಗಿದೆ………ಆ ವಿಷಯದ ಬಗ್ಗೆ ಬರೆಯಬಹುದಿತ್ತು…ಇದರ ಬಗ್ಗೆ ಬರೆಯಬಹುದಿತ್ತು……ನಾನೂ ಒಬ್ಬ ಐಟಿ ಉದ್ಯೋಗಿಯಾಗಿದ್ದು ನೀವು ಬರೆದಂತೆ ಇಲ್ಲ….” ಎಂದೆಲ್ಲ ಯಾಕ್ರೀ ಹರಿಹಾಯ್ತೀರಿ? ನೀವುಗಳೇ ಒಪ್ಪಿದ್ದೀರಿ,”ಎಲ್ಲರೂ ಹಾಗಿಲ್ಲ” ಎಂದು. ಇದರರ್ಥ,”ಯಾರೂ ಹಾಗಿಲ್ಲ” ಎಂದಲ್ಲವಲ್ಲಾ? ಅರ್ಥಾತ್ ಪ್ರತಾಪ್ ರು ಬರೆದ ಟೆಕ್ಕಿ ಗಳಂಥವರೂ ಇದ್ದಾರೆಂಬುದನ್ನೂ ನೀವೇ ಒಪ್ಪಿದ್ದೀರಿ. ಅಷ್ಟಕ್ಕೂ ನೀವೊಬ್ಬ ಜವಾಬ್ದಾರಿಯುತ ವ್ಯಕ್ತಿ/ಟೆಕ್ಕಿಯೇ ಹೌದಾಗಿದ್ದರೆ , ಪ್ರತಾಪ್ ರು ಹೇಳಿದ ಟೆಕ್ಕಿ ಯಲ್ಲಿನ ಯಾವ ಋಣಾತ್ಮಕ ಗುಣವೂ ನಿಮ್ಮಲ್ಲಿರದೇ ಇದ್ದರೆ ನೀವ್ಯಾಕ್ರೀ “ಕುಂಬಳಕಾಯಿ ಕಳ್ಳ” ರಂತಾಡುತ್ತಿದೀರಿ? ಅವರು ಬರೆದ ವಿಷಯವನ್ನು ನೀವು ಒಪ್ಪದೇ ಇದ್ದ ಮಾತ್ರಕ್ಕೆ ವಿಷಯ ಅಸತ್ಯವಂತೂ ಖಂಡಿತಾ ಅಲ್ಲ. ಹಣವಿದ್ದವನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದರಿಂದಾಗಿ , ಬಡಮದ್ಯಮವರ್ಗ ದವರಿಗೆ ಅದೆಷ್ಟು ಕಷ್ಟ ನಷ್ಟ ನೋವು ಹಿಂಸೆಗಳಾಗುವುವು ಎಂದು ನಿಮಗೇನ್ರೀ ಗೊತ್ತು? ಕೃಷಿಕ/ಹಳ್ಳಿಯವ/ಸಣ್ಣ ಉದ್ಯೋಗಿ……..ಇಂಥವರ ಬಳಿ ಮಾತಾಡಿ ನೋಡಿ, ಪ್ರತಾಪ್ ರ ಮಾತನ್ನವರು ಅನುಮೋದಿಸದಿದ್ದರೆ ಮತ್ತೆ ಹೇಳಿ.
ಒಂದು ವಿಷಯಕ್ಕೆ ಎರಡು ಮಗ್ಗುಲುಗಳಿರುವುದು ನಿಜ. ಆದರೆ “ಬೆತ್ತಲೆ ಜಗತ್ತು” ಅಂಕಣದ ಲೇಖನ ವೊಂದರಿಂದಲೇ ಇಡೀ ವಿಜಯ ಕರ್ನಾಟಕ ಪೇಪರ್ ತುಂಬುವಷ್ಟು ದೀರ್ಘ ವಾಗಿ ಬರೆದು ಅದರಲ್ಲಿ ಎಲ್ಲ ಧನ,ಋಣ ಅಂಶಗಳನ್ನು ಉಲ್ಲೇಖಿಸುವುದು ಖಂಡಿತವಾಗಿ ಪ್ರಾಯೋಗಿಕವಲ್ಲ. …………………………….ಇನ್ನೂ ಹೇಳ ಹೊರಟರೆ ಬಹಳಷ್ಟಿದೆ. ಪ್ರತಾಪ್ ರೂ ನಾನು ಹೇಳುತ್ತಿರುವುದನ್ನು ಸಮರ್ಥಿಸಬಹುದು………………….ನೀವೂ ಅರ್ಥ ಮಾಡಿಕೊಳ್ಳುತ್ತೀರಿ, …….”ಸ್ವಸ್ಥ ಸಮಾಜ ನಿರ್ಮಾಣ” ವೇ ಪ್ರತಾಪ್ ,ನೀವು, ನಾನು ಮತ್ತು ಎಲ್ಲರ ಉದ್ದೇಶ ಮತ್ತು ಗುರಿ ಎಂಬುದು ನನ್ನ ವಿಶ್ವಾಸ. ಪ್ರತಾಪ್ ರಿಗೆ ಒಂದಿಷ್ಟು ಸಮಯ ಕೊಡಿ. ಅವರು ಹೇಳಲು ಇನ್ನೂ ಬಹಳಷ್ಟಿರಬಹುದು.

ವಂದನೆಗಳು


Happy weekend mamus.

Unknown said...

Finally Pratab is dare to make yet again immatured reply:


Pratap's Reply:
"My dear friends, I have been keeping an eye on ur feed backs. I hope, no fire power left in ur barrel!!

The sad part is, U all missed the very spirit of my article. To be candid, I had no intention hurt u guys and NEVER tried to belittle ur profession. Infact, I am a great admirer of u guys n u can see that in my past articles. But u all started bashing me for no fault. Let me set the record straight, I only tried to throw light on the “Lack of Foresightedness” on part of IT industry. Go through my article again.

BUT, I can understand ur Self Righteousness.

Let the dawn to break, Read my article tomorrow!!

Thanq all



Ree Pratap:

We are matured enough to think & reply, we did not miss any spirit of your article because there was no “spirit” in it. Sum sumne kopadind nimma article reply maadi time waste maado techie galla navu… I guess you should read your artical again to understand why people are responding like above. We lack foresightedness, just because a few people did not think about their future you cannot generalize… most of us are well planned and are ready to face the recession without commiting sucide.

Be a sport and if posibile apologies for your half baked knowledge and article which hurt so many of us and stop using such a powerful media like a monkey trainer…

ಬೆಂಗಳೂರು ರಘು said...

alli barediddannu naanu odiddini and i replied to that.... its awaiting moderator's review... Well said Pushpa.... Pratap simhanigu matte enaadru anahuta maadi sum sumne sorry heluva namma raajakranigaligu enthede vyathyasa illa....anonymous....how could you conclude that if pratap had got money at a young age he would have also spent money like IT folks ? just an assumption dude,did i infer anywhere.. donot derail by knitting up the conclusions and as you are aware logic is not applicable everywhere (in some cases a knowing b and b knowing c does not mean a knows c, so stop the assumptions), do not act like how our breaking news cultured media is today...namma prabrathi enu antha naavu toristivi and torista irtivi, first nimma kannugalannu teredu andahnushradde bidi.. koneya maatu, ondu articlenalli satya illa andare athava sumaru sullu iddare adannu baredava enaguttane? sumne matte odi magudomme odi heegomme odi antha helta irbedi, hengege odidru aa lekhana factually erroneous.

Unknown said...

In today's article Pratap has given the answer to u r question... exactly what he wants to say in his article...

Unknown said...

So hangadre what he mentioned in his earlier article was not exactly what he wanted to say... :) :)... hmmmmmm...now there is one more article which he claims what "EXACTLY" he wants to say..... NO THANKS....

Harisha - ಹರೀಶ said...

ಪ್ರತಾಪ್ ಈ ಲೇಖನ ಓದಿದಂತಿದೆ!

Prabhuraj Moogi said...

ಲೇಖನದ ಜತೆ ಕಾಮೆಂಟುಗಳನ್ನೂ ಓದಿದೆ, ಬಹಳ ಚೆನ್ನಾಗಿ ಬರೆಯುತ್ತೀರಿ, ಬಹಳ ಇಷ್ಟ ಆಯ್ತು, ಸಾಫ್ಟವೇರ್ ಬಗ್ಗೆ ಬರೆದಿದ್ದೀರಿ, ನಾನು ಸಾಫ್ಟವೇರ್ ಇಂಜನೀಯರ್ರು ಅಂತಲ್ಲ, ಬರೆದ ಪ್ರತಿಯೊಂದಕ್ಕೂ ಪೂರಕ ಸಮರ್ಥನೆಯಿದೆ, ಒಪ್ಪಬೇಕು ಹಾಗೆ ಬರೆದಿದ್ದೀರಿ ಅದಕ್ಕೆ...
ಇನ್ನು ಕರಿಯಾ ಹಾಡು... ಟೀಚರಿಗೆ ನಾಯಿಮರಿ ಪದ್ಯದ ಬಗ್ಗೆ ಕೇಳೊದು.. ಸ್ಯಾಟಲೈಟ್ ದಿನಕ್ಕೆ ಎಷ್ಟು ತಯ್ಯಾರಿಸುತ್ತೀರಿ.. ನೀರುಳ್ಳಿ ದೊಸೆ ಬಗ್ಗೆ ಓದಿ ಬಿದ್ದು ಬಿದ್ದು ನಕ್ಕೆ ಒಂದೊಂದೂ ಅಷ್ಟು ಚೆನ್ನಾಗಿದೆ... ಹಾಗೂ ಅವನ್ನು ಸರಿಯಾಗಿ ಸರಿಯಾದ ವಿಷಯದಮೇಲೆ ಬರೆದಿದ್ದೀರಿ... ಯಾರ್‍ಏನೆಂದರೇನಂತೆ.. ನೀವು ಬರೆಯಿರಿ... ನಾನೂ ಪ್ರತಾಪ್ ಲೇಖನ ಒದಿ ತಲೆ ಕೆಡಿಸಿಕೊಂಡಿದ್ದೆ ನಿಮ್ಮ ಲೇಖನದಲ್ಲಿ ನನ್ನ ತಲೆ ತಿನ್ನುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕವು... ತುಂಬಾ ಧನ್ಯವಾದಗಳು...

Anonymous said...

Hi nallikodaa haakiddaaralla nimma lekhana.... nijakkoo thumba chennaagi bardiddeera.... nimm prati points odi enjoy maadide

ಸಂದೀಪ್ ಕಾಮತ್ said...

ವಿಜಯ್ ,
ನಾನೂ ನೋಡಿದೆ ಹಾಯ್ ನಲ್ಲಿ ಆದ್ರೆ ಅದಕ್ಕೆ ನಾನು ಖುಷಿ ಪಟ್ಟಿಲ್ಲ.
ನಾನು ಇದನ್ನು ಬರೆದದ್ದು ಪ್ರತಾಪ್ ಮೇಲಿನ ಪ್ರೀತಿಯಿಂದ,ಅದ್ರೆ ರವಿ ಬೆಳಗೆರೆಯವರು ಅದನ್ನು ಪ್ರಕಟಿಸಿರೋದು ಪ್ರತಾಪ್ ಮೇಲಿನ ದ್ವೇಷದಿಂದ!

Shrinidhi Hande said...

When Pratap wrote “homestay owners leave their homes to IT people and they themselves stay in sheds” I wrote to my contact in Madikeri, who coordinates homestays for tourists, for clarification on this issue-

she wrote back- “what rubbish it is very easy to write and to talk : a pen and tongue both have no bones in them. Actually there are homestays where the people lend their entire house to the tourists, I don’t deny that but they will stay in their old house and the new house could be given to the tourists.
I really don’t think such a thing will be there but I don’t know in what bases he might have written that.

ಸಂದೀಪ್ ಕಾಮತ್ said...

ಶ್ರೀನಿಧಿ,

ಒಳ್ಳೆ ಕೆಲಸ ಮಾಡಿದ್ರಿ ಕೇಳಿ.
ಒಂದು ವೇಳೆ ಹೋಂ ಸ್ಟೇ ಯವರು ಬೇರೆಯವರಿಗೆ ಮನೆಯನ್ನು ಕೊಟ್ಟೂ ಶೆಡ್ಡಲ್ಲಿ ಮಲಗಿದ್ರೂ ಅದು ಅವರ ದುರಾಸೆ ಹಾಗೊ ಹಣದ ಮೇಲಿನ ಮೋಹ ಅಲ್ವಾ? ಆಗ ಯಾರನ್ನು ಬಯ್ಯಬೇಕು ? ಹೋಂ ಸ್ಟೇ ಗೆ ಬಂದವರನ್ನ ಅಥ್ವ ಮನೆ ಕೊಟ್ಟವರನ್ನು?

Anonymous said...

Re Sandit Avere,
Avrgenu gottri software bagge, Andre..."Kattegenu gottu Kasturee Vasne "

ಶ್ವೇತ said...

ತುಂಬಾ ಚೆನ್ನಾಗಿ ಬರೆದಿದ್ದೀರ.... ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟ್ಸ್ ಗಳಿಗೆ ಧನ್ಯವಾದಗಳು

Shrinidhi Hande said...

blog rolled you

ಸಂದೀಪ್ ಕಾಮತ್ said...

Thanks Shrinidhi :)

GunnerCesc4 said...

@ Sandeep,

I read ur blog for the first time today and it is MIND BLOWING.

I actually liked Pratap's article even being a software engineer. But ur article made me earn some self respect :)

I am a fan of Pratap but this is the first time i have seen someone give him as fitting a reply as this.

Keep going Sandeep !

ಸಂದೀಪ್ ಕಾಮತ್ said...

Thank you Galactico14 :)