Wednesday, April 1, 2009

ತಪ್ಪು ಮಾಡದವರು ಯಾರವ್ರೇ !

" ನಿನ್ನೆ ರಾತ್ರಿ ನನ್ನಿಂದ ಒಂದು ತಪ್ಪು ನಡೆದು ಹೋಯ್ತು ...." ಹೀಗೆ ಶುರುವಾಗುತ್ತೆ ಆ ಜಾಹೀರಾತು .ಏನಪ್ಪಾ ಅಂಥ ಮಾಡಬಾರದ ತಪ್ಪು ಅಂತ ಕುತೂಹಲದಿಂದ ಮುಂದೆ ನೋಡಿದರೆ ... " ನಿನ್ನೆ ರಾತ್ರಿ ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ .... " ಅಂತಾಳೆ ಹೆಂಡತಿ(!?) .

"ರೀ ನಾನು ಅಡಿಗೆಗೆ ಉಪ್ಪು ಹಾಕೋದು ಮರೆತು ಹೋದೆ " ಅಷ್ಟೇ ಸಲೀಸಾಗಿ "ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ " ಅನ್ನೋ ಕಾಲ ಬಂತಾ? ಅಯ್ಯೋ ವಿಧಿಯೆ !

ಇಲ್ಲಿ ಒಂದು ಕುತೂಹಲಕರವಾದ ಸಂಗತಿ ಅಂದರೆ ಆ ಜಾಹೀರಾತಿನಲ್ಲಿ ಹೆಂಡತಿ ಅಂತ ಬರ್ತಾಳಾದ್ರೂ ಅದು ಹೆಂಡತಿಯರಿಗಲ್ಲ !

ಗೆಳತಿ ,ಗರ್ಲ್ ಫ್ರೆಂಡ್ ಆ ಮಾತು ಹೇಳೋ ಥರ ಜಾಹೀರಾತು ಬರುವಷ್ಟು ಭಾರತ ಇನ್ನೂ ಮುಂದುವರೆದಿಲ್ಲ (ಕಡೆ ಪಕ್ಷ ಟಿ.ವಿ ಯಲ್ಲಿ!).ಹೆಂಡತಿಯರು ಅಂಥಾ ವಿಷಯದಲ್ಲಿ ಎಡವುತ್ತಾರೆ ಅನ್ನೋದು ನನಗಂತೂ ನಂಬಲಾರದ ವಿಷಯ .ನಾನು ಇನ್ನೂ ಮದುವೆ ಆಗದ ಕಾರಣ ನನಗಿನ್ನೂ ಆ ಬಗ್ಗೆ ಜಾಸ್ತಿ ಗೊತ್ತಿಲ್ಲ!

ಈ Unwanted-72 ,Mistake ಥರದ ಮಾತ್ರೆಗಳು ಯುವ ಜನತೆಯನ್ನೇ ಗಮನದಲ್ಲಿಟ್ಟುಕೊಂಡು ಮಾಡಿರೋದು ಅನ್ನೋದಂತೂ ಸತ್ಯ.ಇಂಥ ಮಾತ್ರೆಗಳ ಬಗ್ಗೆ ಅರಿವಿರದ ಯುವ ಜನತೆ ಈ ಥರದ ಮಾತ್ರೆಗಳನ್ನು ಗರ್ಭನಿರೋಧಕ ಮಾತ್ರೆಗಳಿಗೆ ಪರ್ಯಾಯವಾಗಿ ತೆಗೆದುಕೊಳ್ಳುತ್ತಾ ಇರೋದೂ ಅಷ್ಟೇ ನಿಜ.ಕಾಲೇಜು ಮೆಟ್ಟಿಲೇರಿದ ಯುವ ಜನತೆ ಇಂಥ ದುಸ್ಸಾಹಸಕ್ಕೆ ತೊಡಗೋದು ಸಾಮಾನ್ಯ .ಇದಕ್ಕೂ ಭಾರತೀಯ ಸಂಸ್ಕೃತಿಗೂ ಥಳುಕು ಹಾಕೋದೂ ಕಷ್ಟಸಾಧ್ಯ . ಅದೇ ಕಾರಣಕ್ಕೆ ನನಗೆ ನಟಿ ಖುಷ್ಬೂ ಹೇಳಿಕೆ ಕೊಂಚ ಮಟ್ಟಿಗೆ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತೆ.

ಇಂಥ ಮಾತ್ರೆಗಳಿಂದಾಗೋ ದುಷ್ಪರಿಣಾಮಗಳನ್ನೂ ಹೇಳಿಕೊಡುವ ಪ್ರಯತ್ನ ಎಲ್ಲೂ ಆಗ್ತಾ ಇಲ್ಲ.ಬಹುಷಃ ಇಂಥ ಮಾತ್ರೆಗಳನ್ನು ಮಾರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೂ ಈ ಮಾತ್ರೆಗಳ ದುಷ್ಪರಿಣಾಮಗಳನ್ನು ಹೇಳುವ ಅಗತ್ಯ ಕಾಣಿಸ್ತಾ ಇಲ್ಲ.ಎಲ್ಲಾ ಕುರುಡು ಕಾಂಚಾಣದ ಮಹಿಮೆ.ಈ ಕುರುಡು ಕಾಂಚಾಣ ಬರೀ ಸಾಫ್ಟ್ವೇರ್ ಮಂದಿಯನ್ನಷ್ಟೇ ಹಾಳು ಮಾಡಿರುವುದು ಅಂದುಕೊಂಡಿದ್ದೆ ನಾನು !

ಈ ವಿಷಯ ಹೇಗೆ ನೆನಪಾಯ್ತು ಅಂದರೆ ,ಮೊನ್ನೆ ಹುಡುಗರಿಬ್ಬರು ಮಾತಾಡಿಕೊಳ್ತಾ ಇದ್ರು ’ಮಜಾ ಮಾಡೋದು ಮಗಾ ,ಎಡವಟ್ಟಾದ್ರೆ ಇದ್ದೇ ಇದೆಯಲ್ಲ Unwanted -72 ಅಂಥ ’ !

ತಪ್ಪು ಮಾಡುವುದೇ ಆದರೆ ತೊಂದರೆಗೀಡಾಗದ ಹಾಗೆ ತಪ್ಪು ಮಾಡಿ ಎಂದು ಬಹುಷ: ಯುವಜನತೆಗೆ ಹೇಳುವ ಕಾಲ ಬಂದಿದೆ.

ಅಂದ ಹಾಗೆ ನೀವು ತಪ್ಪು ಮಾಡಬೇಡಿ !

ಅಷ್ಟಕ್ಕೂ ಅಪ್ಪಿ ತಪ್ಪಿ ತಪ್ಪು ಮಾಡಿದರೆ ಇದ್ದೇ ಇದೆಯಲ್ಲ ................

Unwanted-72 ಅಲ್ಲ !

’ಮಠ’ ಚಿತ್ರದ ಹಾಡು ‘ತಪ್ಪು ಮಾಡದವರು ಯಾರವ್ರೇ, ತಪ್ಪೇ ಮಾಡದವರು ಎಲ್ಲವ್ರೇ ...’ !

12 comments:

Anonymous said...

hilarious

Anonymous said...

iPill (IPL alla...) is another one...

Shantam papam (Shantamma, Papamma alla...)

Ittigecement said...

ಸಂದೀಪ್...

ಬಹಳ ಚೆನ್ನಾಗಿ ಬರೆದಿದ್ದೀರಿ...

ಎಷ್ಟು ಇಷ್ಟವಾಯಿತು ಅಂದರೆ...

ನನಗೊಂದು ಲೇಖನ (ಹಾಸ್ಯ) ಬರೆಯಲು ಸ್ಪೂರ್ತಿ ಸಿಕ್ಕಿದೆ...

ಒಂದು ಘಟನೆ ನೆನಪಾಗಿದೆ...

ಥಾಂಕ್ಯೂ.... ಸಂದೀಪ್...

Pramod said...

;)

Govinda Nelyaru said...

ಸಂದೀಪ್

ನಿಮ್ಮ ಬರಹ ಓದಿ ಕುಶಿಯಾಯಿತು.
ಇದು ಅಕ್ರಮ ಸಕ್ರಮವಾಗುವ ಇನ್ನೊಂದು ಮುಖ.

ಅನ್ಯಾಯ ಅನಾಚಾರ ಮಾಡಿ, ಒಂದಷ್ಟು (ದೇವರಿಗೆ,ದೇವದೂತರಿಗೆ) ಬಿಸಾಕಿ ಅನ್ನುತ್ತಿದೆ ಇಂದಿನ ಸಮಾಜ. ಒಟ್ಟಿನಲ್ಲಿ ಅಡ್ಡದಾರಿಯೇ ಇಂದು ಹೆದ್ದಾರಿ.

ನೀವಂದಂತೆ ಯಾರೂ ತಪ್ಪುದಾಗಿಗೆಳೆಯುವ ಇದರ ವಿರುದ್ದ ದನಿ ಎತ್ತದಿರುವುದು ಬೇಸರದ ಸಂಗತಿ.

ವಿ.ರಾ.ಹೆ. said...

ರೇವ್ ಪಾರ್ಟಿ ಮಾಡೋದು ತಪಲ್ಲ, ಅದಕ್ಕೆ ಹೋದವರು ಪರಮ ಸಭ್ಯಸ್ಥರು ಅಂತ ಪತ್ರಿಕೆಗಳು ಮುಖಪುಟದಲ್ಲಿ ಮುದ್ರಿಸೋ ಕಾಲ ಕಣ್ರೀ ಇದು. :)

ಸಾಗರದಾಚೆಯ ಇಂಚರ said...

Hi Sandeep, wonderful, i enjoyed

Radhika said...

Good one Sandeep. While most people would be embarrassed talking about such issues, you have successfully drawn people’s attention on the issue with a sense of humour.

sunaath said...

ತಪ್ಪು ಮಾಡಿದವಳು ಉಪ್ಪು ತಿನ್ನುತ್ತಾಳೆ? ಇಲ್ಲ, ಬೇರೊಂದು ಮಾತ್ರೆ ನುಂಗುತ್ತಾಳೆ!

ದೀಪಸ್ಮಿತಾ said...

ಇತ್ತೀಚಿನ ಜಾಹೀರಾತುಗಳನ್ನು ನೋಡಿ/ಕೇಳಿದ್ದೀರಾ? ಕಾಂಡಮ್, ಕಾಂಡಮ್, ಕಾಂಡಮ್ ಎಂದು ಬಡಬಡಿಸುವ ಕಬಡ್ಡಿ ಆಟಗಾರ, ಕಾಂಡಮ್ ರಿಂಗ್ ಟೋನ್ ಇದ್ದವನೇ ಮಹಾಶೂರ, ಅಣ್ಣನ ಮೋಟರ್ ಬೈಕ್ ಬಳಸಿದರೆ ಬಯ್ಯುವ ಅತ್ತಿಗೆ, ಅದೆ ಮೈದುನನ ಜೀನ್ಸ್ ನಲ್ಲಿ ಕಾಂಡಮ್ ಸಿಕ್ಕರೆ, 'ಕಾಂಡಮ್ ತಾನೆ', 'condom, its ok' ಎನ್ನುವ ಜಾಹೀರಾತುಗಳು ಅತೀ ಎನ್ನುವಷ್ಟು ರೇಡಿಯೋ, ಟಿವಿಗಳಲ್ಲಿ ಬರುತ್ತಿವೆ. AIDS ತಡೆಗಟ್ಟುವ ಭರದಲ್ಲಿ ಇನ್ನೊಂದು ಸಾಮಾಜಿಕ ಸಮಸ್ಯೆ ಸೃಷ್ಟಿಸುತ್ತಿದ್ದೇವೆ ಎಂದು ಯಾಕೆ ಯಾರೂ ಯೋಚಿಸುತ್ತಿಲ್ಲ?

ಸಂದೀಪ್ ಕಾಮತ್ said...

ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ಗೆಳೆಯರೇ/ಗೆಳತಿಯರೇ !

Anonymous said...

ಸಂದೀಪ್, ನೀವು ಬರೆದಿದ್ದು ಸತ್ಯ. "AIDS ತಡೆಗಟ್ಟುವ ಭರದಲ್ಲಿ ಇನ್ನೊಂದು ಸಾಮಾಜಿಕ ಸಮಸ್ಯೆ ಸೃಷ್ಟಿಸುತ್ತಿದ್ದೇವೆ ಎಂದು ಯಾಕೆ ಯಾರೂ ಯೋಚಿಸುತ್ತಿಲ್ಲ?" ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಒಅರೆದಿದ್ದಾರಲ್ಲ. ಅವರ ಅಭಿಪ್ರಾಯ ಸತ್ಯ ಸತ್ಯ.. ಒಂದು ಅಪಾಯ ತಡೆಯುವ ಭರದಲ್ಲಿ ಇನ್ನೊದು ಅಪಾಯಕ್ಕೆ ಆಹ್ವಾನ.. ಹೀಗೆ ಮುಂದುವರಿದರೆ ಇದೊಂದು ದುರಂತವೇ ಆದೀತು.

ಶುಭವಾಗಲಿ,
ಶಮ, ನಂದಿಬೆಟ್ಟ