ಪ್ರೀತಿಯ ಮಣಿಕಾಂತ್ ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು. ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಬಿಡುಗಡೆಯ ನೆಪದಲ್ಲಿ ಅಷ್ಟೊಂದು ಚೆಂದನೆಯ ಕಾರ್ಯಕ್ರಮ ಆಯೋಜಿಸಿದ್ದಕ್ಕೆ.
ದೈತ್ಯ ಬರಹಗಾರ ರವಿ ಬೆಳಗೆರೆ ಅದ್ಭುತವಾಗಿ ಮಾತಾಡುತ್ತರಾದರೂ ಅವರ ಮಾತನ್ನು ನಾವು ಆಗಾಗ್ಗೆ ಕೇಳಲು ಅವರದ್ದೇ ಪುಸ್ತಕ ಬಿಡುಗಡೆಯ ಸಮಾರಂಭಗಳು ಅನುವು ಮಾಡಿ ಕೊಡುತ್ತೆ.ಹಾಗೆ ವಿಶ್ವೇಶ್ವರ ಭಟ್ರೂ ಬರೆಯುವಷ್ಟೇ ಚೆನ್ನಾಗಿ ಮಾತಾಡುತ್ತರಾದರೂ ಅವರ ಮಾತುಗಳನ್ನು ಕೇಳಲು ಬಹಳಷ್ಟು ಅವಕಾಶಗಳು ಸಿಗುತ್ತವೆ ನಮಗೆ.ಕೃಷ್ಣೇಗೌಡರ ಅದ್ಭುತ ಮಾತಿನ ವೈಖರಿಯನ್ನು ನಾನು ಮೊದಲ ಬಾರಿಗೆ ಕೇಳಿದೆನಾದರೂ ಅವರು ನಮ್ಮವರೇ.
ಅದರೆ ನನಗೆ ಕಾರ್ಯಕ್ರಮ ವೈಯುಕ್ತಿಕವಾಗಿ ಖುಷಿ ಕೊಟ್ಟಿದ್ದು ಪ್ರಕಾಶ್ ರೈ ಉಪಸ್ಥಿತಿ.ಪ್ರಕಾಶ್ ರೈ ಅವರನ್ನು ಈ ಕಾರ್ಯಕ್ರಮದ ನೆಪದಲ್ಲಿ ಭೇಟಿ ಮಾಡಿಸಿದ ಮಣಿಕಾಂತ್ (ಹಾಗೂ ಬಿ.ಸುರೇಶ್) ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು !
ರವಿ ಬೆಳಗೆರೆ ಹೇಳಿದ ಹಾಗೆ ಕನ್ನಡ ಚಿತ್ರ ರಂಗವೊಂದನ್ನು ಬಿಟ್ಟು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯರಾದ ನಟ ಪ್ರಕಾಶ್ ರೈ .ವಿಶ್ವೇಶ್ವರ ಭಟ್ರ ಮಾತಲ್ಲಿ ಹೇಳುವುದಾದರೆ ’ಎಲ್ಲಾ ಥರದ ಒಳ್ಳೆಯ ಪಾತ್ರಕ್ಕೆ ಸೈ -ಪ್ರಕಾಶ್ ರೈ ’!
ಪ್ರಕಾಶ್ ರೈ ಯನ್ನು ನೋಡುತ್ತಿದ್ರೆ ಕನ್ನಡ ಚಿತ್ರರಂಗ ಎಷ್ಟು ಒಳ್ಳೆಯ ನಟನನ್ನು ಕಳಕೊಂಡಿದೆ ಅನ್ನೋ ದುಖಃ ಯಾವಾಗಲೂ ಕಾಡುತ್ತೆ.ಎಷ್ಟಾದರೂ ಆ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೇ ಭಾವುಕವಾದ್ದರಿಂದ ಈ ನೋವೂ ನಮ್ಮ ಕಣ್ಣನ್ನು ತೇವಗೊಳಿಸಲಿ ಬಿಡಿ.
ಪ್ರಕಾಶ್ ರ ಅತ್ಯಂತ ಸ್ವಚ್ಛ ಕನ್ನಡ ನನಗೆ ತುಂಬಾ ಖುಷಿ ಕೊಡ್ತು.ಅವರು ಹೇಳಿದ ಒಂದೊಂದು ಮಾತು ಕೂಡಾ!
ಕೃಷ್ಣೇಗೌಡ್ರ ಮಾತನ್ನು ನಾನು ಮೊದಲ ಬಾರಿಗೆ ಕೇಳಿದ್ದು ನಿನ್ನೆ ! ಅದ್ಭುತವಾಗಿ ಮಾತಾಡಿದ್ರು ಕೃಷ್ಣೇಗೌಡ್ರು.ಅವರ ಮಾತುಗಳನ್ನು ಕೇಳಿ ’ನಮಗೂ ಇಂಥ ಒಂದು ಮೇಷ್ಟ್ರು ಇದ್ದಿದ್ರೆ!’ ಅನ್ನೋ ಭಾವನೆ ನನಗೆ ಮೂಡಿದ್ದು ಸುಳ್ಳಲ್ಲ.ಕೃಷ್ಣೇಗೌಡ್ರು ಯಾವ ಸಬ್ಜೆಕ್ಟ್ ಕಲಿಸುತ್ತಾರೆ ಅನ್ನೋದೂ ನನಗೆ ಗೊತ್ತಿಲ್ಲ .ಆದ್ರೂ ಕೃಷ್ಣೇಗೌಡ್ರೇ ನೀವು ನಮಗೆ ಮೇಷ್ಟ್ರಾಗಬೇಕಿತ್ತು ಕಣ್ರಿ !
ಮಣಿಕಾಂತ್ ಪುಸ್ತಕದ ಬಗ್ಗೆ ,ಅದರಲ್ಲಿರೋ ಬರಹಗಳ ಬಗ್ಗೆ ,ಅಮ್ಮಂದಿರ ಬಗ್ಗೆ ,ಮಕ್ಕಳ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರೂ ಕೃಷ್ಣೇಗೌಡ್ರು. ಅವರ ಸಾಮಾಜಿಕ ಕಳಕಳಿ ತುಂಬಾನೇ ಇಷ್ಟವಾಯ್ತು ನನಗೆ.ಅದರಲ್ಲೂ ಈಗಿನ ಸಮಾಜ ವೇಗದೋಟದಲ್ಲಿ ಬಿದ್ದು ವ್ಯವಧಾನದಿಂದ ಬದುಕುವುದನ್ನೇ ಮರೆತಿರೋದರ ಬಗ್ಗೆ ಅವರ ಕಾಳಜಿ ತುಂಬಾ ಅಭಿನಂದನೀಯ.
ರವಿ ಬೆಳಗೆರೆ ಮಾತಾಡೋದನ್ನೇ ಕಾಯುತ್ತಾ ಕುಳಿತಿದ್ದವರು ಅದೆಷ್ಟೋ ಜನ.ಸಮಾರಂಭಕ್ಕೆ ಅಷ್ಟೊಂದು ಜನರು ಬಂದಿರೋದಕ್ಕೆ ರವಿ ಬೆಳಗೆರೆಯ ಆಕರ್ಷಣೆಯೂ ಪ್ರಮುಖ ಕಾರಣ ಅಂದರೂ ತಪ್ಪಾಗಲಾರದು.ರವಿ ತಮ್ಮ ಎಂದಿನ ಧಾಟಿಯಲ್ಲಿ ಅಪ್ಪ-ಮಕ್ಕಳು(+ಸೊಸೆ+ಮೊಮ್ಮಕ್ಕಳನ್ನು)ಅದೆಲ್ಲಿಂದಲೋ ಎಳೆ ತಂದು ,ಮಾಮೂಲಿನಂತೆ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.ಅದೇನು ಹೇಳಿದರು ಅಂತ ಇಲ್ಲಿ ಬರೆಯೋದು ಸ್ವಲ್ಪ ಕಷ್ಟ ! ಅವರ ಮೇಲೆ ಅಪ್ಪ-ಮಕ್ಕಳು ಕೇಸ್ ಹಾಕಿದ್ರೆ ಅವರು ಅದನ್ನು ನಿಭಾಯಿಸಬಹುದು ,ಆದರೆ ನನ್ನಂತ ಬಡಪಾಯಿಗೆ ಅದು ಸಾಧ್ಯ ಇಲ್ಲ.ಹಾಗಾಗಿ ರವಿ ಬೆಳಗೆರೆ ಸಿಡಿಸಿದ ಅಪ್ಪ-ಮಕ್ಕಳ ರೋಚಕ ಜೋಕ್ ಗಳಿಗೆ ನೀವು ನನ್ನನ್ನು ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾದ ಇನ್ನಿತರರನ್ನು ಖುದ್ದಾಗಿ ಕೇಳೋದೇ ವಾಸಿ ಅನ್ನಿಸುತ್ತೆ!
ಪ್ರಕಾಶ್ ರೈ ತುಂಬಾ ಭಾವುಕರಾಗಿ ಮಾತಾಡಿದರು.ಕಲಾಕ್ಷೇತ್ರದೊಂದಿಗೆ ಅವರಿರುವ ನಂಟನ್ನು,ರಂಗಭೂಮಿಯಿಂದ ದೊರೆತ ಕಲಿಕೆಯನ್ನು ಅವರು ನೆನೆಸಿಕೊಂಡರು. ’ಕನ್ನಡ ರಂಗಭೂಮಿ/ಚಿತ್ರರಂಗದಲ್ಲಿ ಪಳಗಿಸಿಕೊಂಡ ಕಲೆಯ ಫಲವನ್ನು ತಮಿಳು,ತೆಲುಗಿನ ಜನ ಈಗ ನೋಡುತ್ತಿದ್ದಾರೆ ’ ಅನ್ನೋ ಮಾತು ನನ್ನನ್ನಂತೂ ತುಂಬಾ ಕಲಕಿತು.ನನಗೆ ಪ್ರಕಾಶ್ ರೈ ಯ ಧ್ವನಿಯೇ ತುಂಬಾ ಇಷ್ಟ .ಆ ಗಡಸು ಧ್ವನಿಯಲ್ಲಿ ಮಾತಾಡೋದು ಕೇಳೋದಂತೂ ಇನ್ನೂ ಇಷ್ಟ .ಜೊತೆಗೆ ಆ ಮಾತುಗಳು ಹೃದಯಕ್ಕೆ ತಟ್ಟುವಂತದ್ದಾಗಿದ್ದರೆ ಕೇಳಬೇಕೇ?
ಮಣಿಕಾಂತ್ ಬರಹದಲ್ಲಿ ಮಾತ್ರ ಭಾವುಕರಲ್ಲ ಮಾತಲ್ಲೂ ,ಕೃತಿಯಲ್ಲೂ ತುಂಬಾ ಭಾವುಕರು ಅನ್ನೋದು ಅವರ ಮಾತಿನಿಂದಲೇ ತಿಳಿಯುತ್ತಿತ್ತು.ತಮಗೆ ಕನ್ನಡ ಹೇಳಿಕೊಟ್ಟ ಟೀಚರ್ ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದು ನಿಜಕ್ಕೂ ಅಭಿನಂದನೀಯ.
ವಿಶ್ವೇಶ್ವರ ಭಟ್ರೂ ತಮ್ಮ ಎಂದಿನ ಧಾಟಿಯಲ್ಲಿ ಜೋಕುಗಳನ್ನು ಸಿಡಿಸುತ್ತಾ ,ಜನರನ್ನು ನಗಿಸುತ್ತಾ ಮಣಿಕಾಂತ್ ಬಗ್ಗೆ ಚೆನ್ನಾಗಿರೋ ನಾಲಕ್ಕು ಮಾತನ್ನಾಡಿದರು.ಮಣಿಕಾಂತ್ ತಮಗೆ ಬರಿದಿರೋ ಒಂದು ಕಾಗದವನ್ನು ಇವತ್ತಿಗೂ ಎತ್ತಿಟ್ಟಿರೋದರ ಬಗ್ಗೆ ಭಾವುಕರಾಗಿ ವಿವರಿಸಿದರು ಭಟ್ರು.
ಈ ಎಲ್ಲಾ ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು ತಂದದ್ದು ಉಪಾಸನಾ ತಂಡ. ಕಾರ್ಯಕ್ರಮದ ಶುರುವಿನಲ್ಲೇ ಬಹಳಷ್ಟು ಒಳ್ಳೆಯ ,ಸುಮಧುರ ಭಾವಗೀತೆಗಳನ್ನು ನಮಗೆಲ್ಲಾ ಕೇಳಪಡಿಸಿದ್ದು ಉಪಾಸನಾ ತಂಡ.ನಾಡಗೀತೆ ’ಜಯ ಭಾರತ ಜನನಿಯ ತನುಜಾತೆ’ ಕೇಳುವಾಗಲಂತೂ ರೋಮಾಂಚನಗೊಂಡಿದ್ದು ಸುಳ್ಳಲ್ಲ. ಅಷ್ಟು ಅದ್ಭುತವಾಗಿ ಹಾಡಿದ್ರು ಉಪಾಸನಾ ಮೋಹನ್ ತಂಡ.
ಮತ್ತೊಂದು ಗೀತೆ ’ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ’ ಹಾಡೂ ಫ್ರೀ ಯಾಗಿ ಒಂದಿಷ್ಟು ಕಿಕ್ ನೀಡಿತ್ತು!ಆದರೆ ಇಂಥ ಸಭೆಯಲ್ಲಿ ’ಅತ್ತಿತ್ತ ನೋಡದಿರು ’ಅನ್ನೋ ಜೋಗುಳ ಹಾಡಿದ್ರೆ ಸುಧಾರಿಸೋದು ಸ್ವಲ್ಪ ಕಷ್ಟ .ತಾಯಿಯ ಮಡಿಲಲ್ಲಿದ್ದ ಕಂದಮ್ಮಗಳೇನೋ ಹಾಗೇ ನಿದ್ದೆಗೆ ಜಾರಿದವು ! ಬಡಪಾಯಿಗಳಾದ ನಾವು ಏನ್ ಮಾಡೋದು ಸ್ವಾಮಿ?
’ಕಾರ್ಯಕ್ರಮ ಮುಗಿದ ಮೇಲೆ ಹಾಡಿನ ದಿಬ್ಬಣ ಮುಂದುವರೆಯುತ್ತೆ’ ಅಂತ ನಿರೂಪಕರು ಹೇಳಿದ್ದರೂ ಹಸಿದ ಸಭಿಕರು ಆಗಲೇ ಎದ್ದೇಳತೊಡಗಿದ್ದರಿಂದ ದಿಬ್ಬಣ ಹೊರಡಲೇ ಇಲ್ಲ! ಕಾರ್ಯಕ್ರಮ ಸ್ವಲ್ಪ ಬೇಗನೆ ಶುರುವಾಗಿದ್ದರೆ ಈ ತೊಂದರೆ ತಪ್ಪುತ್ತಿತ್ತೇನೋ .ಆದರೆ ಏನು ಮಾಡೋದು ? ಕಾರ್ಯಕ್ರಮ ಬೇಗನೆ ಇಟ್ರೆ ಭಾನುವಾರ ಲೇಟ್ ಆಗಿ ಏಳೋ ನನ್ನಂಥವರಿಗೆ ತೊಂದರೆ ಆಗುತ್ತೆ ಅನ್ನೋ ಕಾಳಜಿ ಇರಬೇಕು ಮಣಿಕಾಂತ್ ಗೆ!
ಪುಸ್ತಕದ ಜೊತೆಗೆ ಉಪಾಸನಾದ ಕೆಲವು ಸಿ.ಡಿ ಗಳನ್ನೂ ಕೊಂಡು ತಂದೆ ನಾನು.ಇನ್ನು ಮೇಲೆ ದಿನಾ ಜಾಲಿ ಬಾರಿನಲ್ಲಿ ಕೂತು ಹಾಡು ಕೇಳಬಹುದು!
Sunday, April 26, 2009
Subscribe to:
Post Comments (Atom)
11 comments:
ಬೆಂಗಳೂರಿನವರು ದಿನವೂ ಇಂಥ ಕಾರ್ಯಕ್ರಮಗಳನ್ನು ನೋಡುತ್ತೀರಾ. ನೀವು ಬರೆದದ್ದನ್ನು ಓದಿಯೇ, ನಾವು ನಿಮ್ಮ ಸಂತೋಷದಲ್ಲಿ ಭಾಗಿಯಾಗುತ್ತೇವೆ!
ಸುನಾಥ್ ಅಂಕಲ್ ,
ನಿಮ್ಮ ಕಮೆಂಟ್ ಓದಿದ ಮೇಲೆ ನನ್ನ ಲೇಖನದ ಕೊನೆಯ ಸಾಲುಗಳನ್ನು ಇಡಲು ಮನಸು ಬರಲಿಲ್ಲ ಅದಕ್ಕೆ ಡಿಲೀಟ್ ಮಾಡಿದೆ!
ಕೊನೆಯ ಸಾಲು ಏನಿತ್ತು ಅಂತ ಕುತೂಹಲ ಆಗ್ತಿದೆ ಈಗ ! ಅದೇನೇ ಇರಲಿ, ಕಾರ್ಯಕ್ರಮಕ್ಕೆ ಬರದವರಿಗೆಲ್ಲ, ಏನೆಲ್ಲಾ ನಡೆಯಿತು ಏನು ತಿಳಿಸುವುದರ ಜೊತೆಗೆ, "ಛೆ, miss ಮಾಡ್ಕೊಂಡೆವಲ್ಲಾ" ಎಂದು ಅನಿಸುವಷ್ಟು ಚೆನ್ನಾಗಿ ಬರೆದಿದ್ದೀರಾ ಸಂದೀಪ್, ಅಭಿನಂದನೆಗಳು...
Sandeep
i agree with Divya....
:-)
ms
ಊರಿಗೆ ಹೋಗಿದ್ದರಿಂದ ಸಮಾರಂಭಕ್ಕೆ ಬರಲಾಗಿರಲಿಲ್ಲ. ನಿಮ್ಮ ಬರಹ ಓದಿ ಸ್ವಲ್ಪ ಸಮಾಧಾನ ಆಯಿತು! ಥ್ಯಾಂಕ್ಸ್
ಸಂದೀಪ್,
ಒಟ್ಟು ಕಾರ್ಯಕ್ರಮವನ್ನು ಬರಹ ರೂಪದಲ್ಲಿ ಚೆನ್ನಾಗಿ ನಿರೂಪಿಸಿದಿರಿ... ಹಿಂದೆಂದೂ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಿಸದ ನನಗೆ ಕುತೂಹಲ ಉಕ್ಕುವಂತೆ ಮಾಡಿದಿರಿ... ಥಾಂಕ್ಸ್...
-ಗಿರಿ
ಪ್ರಕಾಶ್ ರೈ ಬಹಳ ಒಳ್ಳೆಯ ಕಲಾವಿದ ಅನ್ನುವುದರಲ್ಲಿ ಸಂಶಯವಿಲ್ಲ ಅವರನ್ನು ಕನ್ನಡ ಚಿತ್ರರಂಗ ಇಲ್ಲಿ ಉಳಿಸಿಕೊಳ್ಳಲಾಗದಿದ್ದದ್ದು ನಮ್ಮ ದುರಾದೃಷ್ಟ, ಈ ಕಾರ್ಯಕ್ರಮದ ಬಗ್ಗೆ ಗೊತ್ತೇ ಇರಲಿಲ್ಲ ಗೊತ್ತಿದ್ದರೆ ನಾನೂ ಭಾಗವಹಿಸಭುದಿತ್ತು ಅನಿಸಿತು... ನಿಮಗೆ ಇಂಥ್ ಕಾರ್ಯಕ್ರಮದ ಮಾಹಿತಿ ಎಲ್ಲಿ ಸಿಗುತ್ತವೆ ತಿಳಿಸಿ ನಮಗೂ ಸಹಾಯವಾಗುತ್ತದೆ
ಧನ್ಯವಾದಗಳು MS ,Sathyanararayana,Giri,Prabhu,
ಪ್ರಭು , ಗಿರಿ ಈ ಥರದ ಕಾರ್ಯಕ್ರಮಗಳ ವಿವರ ಯಾವಾಗಲೂ ’ಅವಧಿ’ ಯಲ್ಲಿ ಪ್ರಕಟವಾಗುತ್ತಲೇ ಇರುತ್ತೆ .
http://avadhi.wordpress.com/
sandeep,namaskara.
avattu kalakshetra dalli neevu sigalilla nanage...athavaaa sikkidaaga naanu aa busy li sariyaagi maataadideno illavo...adu kuda nenapaagtaa illa...
aadre nimmannu nodalilla anno besara antooo khandita ide....
function bagge naanu enu helali?naanu ello daari gottagade nintidde...ellarooo seri naannnannu stage li koorisibitru...geddaddu naanalla...abhimaanadinda banda janara preeti...
manikanth
ಮಣಿಕಾಂತ್ ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಇನ್ನೊಮ್ಮೆ ಭೇಟಿಯಾಗೋಣ :)
This is awesoome
Post a Comment