Monday, April 11, 2011

ಬಸ್ ಡೇ ...

’ ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು.

ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.

ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.

12 comments:

ವಿ.ರಾ.ಹೆ. said...

ಐಟಿ ಬಿಟಿ ಜನ ಪೀಣ್ಯ ಕಡೆಗೆ ಯಾಕ್ ಹತ್ಕೊಂಡ್ರು ಗುರುವೆ?

ಕೇಶವರಾಯರು ಮುಂದಿನ ಬಸ್ಸಿಗೆ ಬರ್ಬೋದಿತ್ತಪ :)

Chaithrika said...

ನಿಜ.
ಹಿಂದೊಮ್ಮೆ ವೋಲ್ವೋ ಬಸ್ ಪ್ರಯಾಣ ೧ ರೂಪಾಯಿ ಎಂದು ಮಾಡಿ ಕಿಕ್ಕಿರಿದು ಜನ ತುಂಬಿ ಬಸ್ ಗಳು ಜಖಂ ಆಗಿ ಬಿ.ಎಂ.ಟಿ.ಸಿ.ಗೆ ಲಕ್ಷಗಟ್ಟಲೆ ಖರ್ಚು ಆಗಿತ್ತು.
ಕೇಶವರಾಯರ ಈ ಅವಸ್ಥೆ ಊಹಿಸಲಾರದ್ದೇನೂ ಅಲ್ಲ.

Subrahmanya said...

ಬಸ್ ಪೀಣ್ಯ ಕಡೆಗದ್ರೂ ಹೋಗ್ಲಿ ಕೋರಮಂಗಲದ ಕಡೆಗಾದ್ರೂ ಹೋಗ್ಲಿ, ಕೇಶವರಾಯರಂತವರು ತೊಂದರೆಗೊಳಗಾಗಬಾರದು ಅಷ್ಟೆ ! :)

Anonymous said...

’ ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು.

ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.

ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.

ಆಟೋ ಡ್ರೈವರ್ ರಾಜಣ್ಣ ಅವತ್ತು ತನ್ನ ಮಗಳಿಗೆ ಹೊಸ ಟಿಫಿನ್ ಬಾಕ್ಸ್ ತೆಗೆದುಕೊಂಡು ಹೋಗಿ ಕೊಟ್ಟ....

ಸಂದೀಪ್ ಕಾಮತ್ said...

ವಿಕಾಸ ,

ಅದು ಪೀಣ್ಯದಿಂದ ಎಲೆಕ್ಟ್ರಾನಿಕ್ಸ್ ಸಿಟಿ ಗೆ ಹೋಗೋ ಬಸ್ಸು ;)

ವಿ.ರಾ.ಹೆ. said...

ಹ್ಹ ಹ್ಹ... ಆದ್ರೂ ರಾಯ್ರು ಮುಂದಿನ ಬಸ್ಸಿಗೆ ಹೋಗ್ಬೋದಿತ್ತಪ, ಪೀಣ್ಯದಿಂದ ಐದೈದು ನಿಮಿಷಕ್ಕೆ ಬಸ್ ಬರುತ್ತೆ ಎಲೆಕ್ಟ್ರಾನಿಕ್ ಸಿಟಿಗೆ :)

Anonymous said...

ಇತ್ತಿತ್ಲಾಗೆ ನಿಮ್ಮ ಬರಹಗಳೆಲ್ಲ ಲೈಫ್ ಇಷ್ಟೇನೆ ಥೀಮ್ ನಲ್ಲಿ ಬರ್ತಾ ಇವೆ. ಕಹಿ ಸತ್ಯ

sunaath said...

ಬಸ್ ಅಂದರೆ enough ಅಂತ ಅಲ್ವೆ? ಬಸ್ ಡೇ ಅಂದರೆ ಈ ಬಸ್ಸುಗಳು ಸಾಕು ಅಂತ!

ದಿನಕರ ಮೊಗೇರ said...

hha hha..
idarallU auto laabi irabahudaa..?

ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

Anonymous said...

:-)
ms

Shrinidhi Hande said...

can I have a BMW day or Ferrari day pls?

ದೀಪಸ್ಮಿತಾ said...

ಬರಹ ಚಿಕ್ಕದಾದರೂ ಕಹಿ ಸತ್ಯ ಅಡಗಿದೆ. ಈಗ ನಗರದಲ್ಲಿ ಆಗುತ್ತಿರುವ ಅನೇಕ ಬದಲಾವಣೆಗಳು (ಅಭಿವೃದ್ಧಿ??) ಕೇವಲ ಒಂದು ವರ್ಗವನ್ನು ಸಂತುಷ್ಟಗೊಳಿಸಲು ಶುರುವಾದದ್ದು. ಇದರಿಂದ ಬೇರೆಯವರಿಗೆ ಸಹಾಯವಿಲ್ಲ ಎಂದು ನಾನೇನೂ ಹೇಳುತ್ತಿಲ್ಲ, ಆದರೆ ಈ ವರ್ಗಕ್ಕೆ ತೊಂದರೆ ಆದಾಗಲೇ ಯಾಕೆ ಸರಕಾರ ಎಚ್ಚೆತ್ತುಕೊಂಡಿದ್ದು?