Wednesday, April 20, 2011

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩

’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಅಂತ ಕೆ.ಎಸ್.ನ ಬರೆದಿದ್ದರು. ಆದರೆ ಬಹಳಷ್ಟು ಜನರಿಗೆ ಹೆಂಡತಿ ಮನೆಯೊಳಗಿದ್ದರಷ್ಟೇ ಕೋಟಿ ರೂಪಾಯಿ. ಹೆಂಡತಿ ತನಗೆ ಸರಿ ಸಮನಾಗಿ, ಕೆಲವೊಮ್ಮೆ ತನಗಿಂತ ಹೆಚ್ಚು ಬುದ್ಧಿವಂತಳಾಗಿರೋದು, ಸಂಪಾದಿಸೋದು ಬಹಳಷ್ಟು ಜನರಿಗೆ ಭಯ ಹುಟ್ಟಿಸೋ ವಿಷಯ! ಖಂಡಿತಾ ಇದು ಮೇಲ್ ಈಗೋ ವಿಷಯ. ಅಂದರೆ ಫೀಮೇಲ್ ಮೇಲ್ ಗಿಂತ ಮೇಲಾಗೋ ಭಯ ಮೇಲ್ ಗೆ ಹುಟ್ಟೋ ವಿಷಯ! ಇಂಥ ಸಮಾಜದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಂಡತಿಯನ್ನು ಹುರಿದುಂಬಿಸುವವರು, ಹೆಂಡತಿಯ ಬುದ್ಧಿಮತ್ತೆಯನ್ನು ಮನಸಾರೆ ಹೊಗಳುವವರೂ ಸಿಗುತ್ತಾರೆ. ಮೊನ್ನೆ ಅಮೆರಿಕಾದ ಪ್ರಥಮ ಪ್ರಜೆ ಬರಾಕ್ ಒಬಾಮ ಹೆಂಡತಿ ಮಿಶೆಲ್ ಳನ್ನು ಮನಸಾರೆ ಹೊಗಳಿದ್ದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ಒಬಾಮ ಹೆಂಡತಿಗೆ ಹೆದರಿಯೇ ಹೊಗಳಿದ್ದು ಅನ್ನೋ ವಾದವನ್ನೂ ಮಾಡುವವರಿದ್ದಾರೆ.

ತನಗಿಂತ ಬುದ್ಧಿವಂತ ಬೇರೊಬ್ಬರು ಇದ್ದಾರೆ ಅನ್ನೋದನ್ನು ಒಪ್ಪಿಕೊಳ್ಳೋದೆ ಮನುಷ್ಯನಿಗೆ ಅತ್ಯಂತ ಕಷ್ಟದ ಕೆಲಸ. ಅದರಲ್ಲೂ ಆ ’ಬೇರೆಯವರು’ ಹೆಂಡತಿ ಆಗಿದ್ದರಂತೂ ಕೇಳೋದೇ ಬೇಡ. ಹೆಂಡತಿ ಅನ್ನೋ ಶಬ್ದ ಕೇಳಿದ ತಕ್ಷಣವೆ ಕೆಲವರಿಗೆ ಹಿನ್ನೆಲೆಯಲ್ಲಿ ’ಕಾರ್ಯೇಶು ದಾಸಿ, ಶಯನೇಶು ರಂಭಾ ’ ಅನ್ನೋದು ರಾಗವಾಗಿ ಕೇಳತೊಡಗುತ್ತದೆ. ಇದರಲ್ಲೂ ಕಾರ್ಯೇಶು ಮೊದಲೋ ಶಯನೇಷು ಮೊದಲೊ ಅನ್ನೋದು ಅವರವರ preference ಮೇಲೆ ಬದಲಾಗುತ್ತಿರುತ್ತದೆ! ಗಂಡ ಬಹುಷಃ ಮನಸಾರೆ ಹೊಗಳೋದು ಹೆಂಡತಿಯ ಅಡುಗೆಯನ್ನು ಮಾತ್ರ.

ಹೆಂಡತಿಯ ಆಯ್ಕೆಯ ವಿಷಯ ಬಂದಾಗಲೂ ಹುಡುಗಿಯ ವಯಸ್ಸು ತನಗಿಂತ ಕಡಿಮೆ ಇರಬೇಕು, ವಿದ್ಯಾರ್ಹತೆ ಕಡಿಮೆ ಇರಬೇಕು, ಎತ್ತರ ಕಡಿಮೆ ಇರಬೇಕು ಅನ್ನೋದು ಅಘೋಶಿತ ನಿಯಮವೇ ಆಗಿ ಬಿಟ್ಟಿದೆ. ಇಷ್ಟೆಲ್ಲಾ ವಿಷಯಗಳು ಕಡಿಮೆ ಇರುವಾಗ ಬುದ್ಧಿವಂತಿಕೆಯೂ ತನಗಿಂತ ಕಮ್ಮಿ ಇದ್ದೇ ಇರುತ್ತೆ ಅನ್ನೋದು ಹುಡುಗನ ಲೆಕ್ಕಾಚಾರ! ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಂಗಸರಂತೂ ಎಲ್ಲಾ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಇನ್ನು ಏನಿದ್ದರೂ ’ಕಾರ್ಯೇಶು CEO ' ಅನ್ನಬೆಕಷ್ಟೆ!

***********************************************************************************
’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩ ’ ಅಂತ ಯಾಕೆ ಹೆಸರಿಟ್ಟೆ ಅಂತ ನಿಮಗೆಲ್ಲ ಅನಿಸಿರಬೇಕು. ನಿಜ, ಭಾಗ ಒಂದು ಅಥವಾ ಎರಡು ನಾನು ಬರೆದಿಲ್ಲ !

ನಾನು ಈ ಲೇಖನವನ್ನು ತುಂಬಾ ಹಿಂದೆ ಪತ್ರಿಕೆಯೊಂದಕ್ಕೆ ಬರೆದಿದ್ದೆ. As usual ಅಲ್ಲಿ ಪ್ರಕಟ ಆಗಿರಲಿಲ್ಲ! ಬ್ಲಾಗ್ ಗೆ ಹಾಕೋದಿಕ್ಕೆ ಮರೆತಿದ್ದೆ! ಈಗ ಅನು ಅನ್ನೋರ ಬ್ಲಾಗ್ ಲೇಖನ ನೋಡಿ ನೆನಪಾಯ್ತು. ಅವರು ಸಿಂಹ ಅನ್ನೋರ ಬ್ಲಾಗ್ ನೋಡಿ ಅದಕ್ಕೆ ಉತ್ತರವಾಗಿ ಬರೆದದ್ದಂತೆ!

6 comments:

ಮನಸಿನ ಮಾತುಗಳು said...

Liked...:)

ವಾಣಿಶ್ರೀ ಭಟ್ said...

super!!! part 2 chennagide...

Anonymous said...

ಮದುವೆ ಆಗೋದಿಕ್ಕೆ ಹುಡುಗಿ ಹುಡುಕ್ತಾ ಇದ್ದೀರೋ ಹೇಗೆ? :)

sunaath said...

ಹೆಂಡತಿಯು ಮನೆಯಲ್ಲಿದ್ದರೇ ಸುಖ!

Chaithrika said...

"ಭಾಗ ೨" ಅಂತ ನೋಡಿ ಮೊದಲು ಭಾಗ ೧ ಬರೆದಿದ್ದೀರೇನೋ ಎಂದು ಹುಡುಕಿದೆ. ಮತ್ತೆ ಹೊಳೆಯಿತು. ಈಗ ಹೆಂಡತಿ ಮನೆಯಲ್ಲಿದ್ದರೆ ಕಷ್ಟವೇ ಹೆಚ್ಚು ಎಂದು ನನ್ನ ಅನಿಸಿಕೆ. ತಂತ್ರಜ್ಞಾನ ಕೆಲಸಗಳನ್ನು ಸರಳವಾಗಿಸಿ ಹೆಚ್ಚಿನ ಸಮಯ ನೀಡಿರುವುದರಿಂದ ಮನೆಯಲ್ಲಿರುವ ಹೆಂಡತಿಗೆ ಶರೀರಕ್ಕೂ, ಬುದ್ಧಿಗೂ ಕೆಲಸ ಕಮ್ಮಿ ಮಾಡಿದೆ ಅಂತ ನನ್ನ ಭಾವನೆ. ಕೆಲಸ ಮಾಡದೆ ಕಾಲಹರಣ ಕಷ್ಟವಾದರೆ ಜೊತೆ ಇರುವ ಎಲ್ಲರಿಗೂ ತೊಂದರೆಯೇ.

ಮನಸಿನಮನೆಯವನು said...

Hidisitu..