Sunday, April 5, 2009

ಒಂದು ಸಂತೋಷದ ಸುದ್ದಿ !

ಆರಂಭಿಕ ಎಚ್ಚರಿಕೆ : ನೀವು ತೀರಾ ಮಡಿವಂತ ಹುಡುಗಿ/ಮಹಿಳೆಯಾಗಿದ್ದಲ್ಲಿ ಈ ಲೇಖನ ಓದದೇ ಇರುವುದು ಒಳ್ಳೆಯದು.ಹಾಗೆಯೇ ತೀರಾ ಮಡಿವಂತ ಹುಡುಗರು/ಗಂಡಸರು ಬ್ಲಾಗ್ ಲೋಕದಲ್ಲಿಲ್ಲ ಅನ್ನೋ ಸತ್ಯ ನನಗೆ ಅರಿವಾಗಿರೋದರಿಂದ ಗಂಡಸರಿಗೆ ಈ ಎಚ್ಚರಿಕೆ ಅನ್ವಯಿಸುವುದಿಲ್ಲ.

ನಾನು ಈಗ ಬರೆಯ ಹೊರಟಿರುವುದು ತೀರಾ ಗಂಭೀರವಾದ ವಿಚಾರವೇನೋ ಅಲ್ಲ.ಆದರೂ ಕೆಲವರಿಗೆ ,ಕೆಲವು ಸಲ ಈ ವಿಚಾರ ತೀರಾ ಗಂಭೀರ ಪ್ರಮಾಣದಲ್ಲಿ ಕಾಡಿರುವ ನಿದರ್ಶನಗಳಿವೆ!

ಹುಡುಗಿಯರು ತೀರಾ ಸಾಮಾನ್ಯವಾಗಿ ಗಂಡಸರ ಬಗ್ಗೆ ಆಕ್ಷೇಪ ಎತ್ತೋದು ಗಂಡಸರ ತೀರಾ ಸಾಮಾನ್ಯವಾದ ಒಂದು ಅಭ್ಯಾಸದ ಬಗ್ಗೆ.

ರಸ್ತೆ ಬದಿಯಲ್ಲಿ,ತೆರೆದ ಬಯಲಲ್ಲಿ,ಲೈಟು ಕಂಬದ ಹಿಂದೆ ,ಮನೆಯ ಗೋಡೆಯ ಮುಂದೆ -ಇನ್ನೂ ನೇರವಾಗಿ ಆರೋಪಿಸೋದಾದರೆ ’ಎಲ್ಲೆಂದರಲ್ಲಿ ’ ಸೂಸು ಮಾಡುವ ’ಕೆಟ್ಟ(?) ಅಭ್ಯಾಸ ಗಂಡಸರಿಗಿದೆ ಅನ್ನೋದು ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಬಡಪಾಯಿ ಗಂಡಸರ ಮೇಲೆ ಹಾಕುವ ಆರೋಪ.

’ಗಂಡಸರಿಗಿರುವಂಥ ಅನುಕೂಲಕರ ಸೌಲಭ್ಯ ಒಂದು ವೇಳೆ ನೀವು ಹೆಂಗಸರಿಗಿದ್ದಿದ್ದರೆ , ನೀವೂ ನಮ್ಮ ಹಾಗೆಯೇ ವರ್ತಿಸ್ತಾ ಇದ್ರಿ.ನಿಮಗೆ ಆ ಸ್ವಾತಂತ್ರ್ಯ ,ದೈಹಿಕ ಅನುಕೂಲ ಇಲ್ಲದೇ ಇದ್ದದ್ದರಿಂದ ನೀವು ತುಂಬಾ ಒಳ್ಳೆಯವರಾಗಿದ್ದೀರಿ ! ’ ಅನ್ನೋದು ನನ್ನ ಯಾವತ್ತಿನ ವಾದ .ಅದಕ್ಕಾಗಿ ಬಹಳಷ್ಟು ಜನ ಕೋಪಿಸಿಕೊಂಡಿದ್ದೂ ಇದೆ.Honesty is lack of opportunity ಅನ್ನೋ ಮಾತು ಬೇರೆ ಇದೆಯಲ್ವ ಅದೇ ರೀತಿ ! ಇರಲಿ ಬಿಡಿ ಹೆಂಗಸರನ್ನು ತೀರಾ ಕೆರಳಿಸೋದು ಅಪಾಯ ಅನ್ನೋ ಅರಿವಿದ್ದಿದ್ದರಿಂದ ’ಸರಿ ಮ್ಯಾಡಂ ನಾವು ಗಂಡಸ್ರು ಪರಮ ಕೊಳಕರು ಸರಿ ನಾ ?’ ಅನ್ನೋ ಅರ್ಥದ ಮಾತಾಡಿ ಯಾವಾಗಲೂ ವಾದಕ್ಕೆ ಮಂಗಳ ಹಾಡೋದು ನನ್ನ ಅಭ್ಯಾಸ.

ಈಗ ನನಗೆ ಒಂದು ಖುಷಿಯಾದ ಸುದ್ದಿ ಗೊತ್ತಾಗಿದೆ ! ಈ ಸುದ್ದಿ ಪಾಪ ಹುಡುಗಿಯರಿಗೆ/ಮಹಿಳೆಯರಿಗೆ ಖುಶಿ ಥರೋದಾಗಬೇಕಿತ್ತು .ಆದರೆ ಕಾರಣಾಂತರಗಳಿಂದ ಪಾಪ ನಮ್ಮ ಭಾರತೀಯ ನಾರಿಯರಿಗೆ ಇದು ಅಷ್ಟೊಂದು ಸಂತಸದ ಸುದ್ದಿ ಅಲ್ಲ! ಆದರೂ ಬಹಳಷ್ಟು ಪಾಶ್ಚಾತ್ಯ ಹುಡುಗಿಯರಿಗೆ ಇದು ಸಂತೋಷದ ಸುದ್ದಿಯಂತೆ (?)!

ಸುದ್ದಿ ಏನಂದ್ರೆ ಇನ್ನು ಮುಂದೆ ಹುಡುಗಿಯರೂ ನಮ್ಮ ಹಾಗೆ ಎಲ್ಲೆಂದರಲ್ಲಿ ನಿಂತು ಸೂಸು ಮಾಡುವಂಥ ಒಂದು ವಸ್ತುವನ್ನು ಪಾಶ್ಚಾತ್ಯರು ಕಂಡು ಹುಡುಕಿದ್ದಾರೆ. P-Mate ಅನ್ನೋ ಈ ಸಾಧನದಿಂದ ಇನ್ನು ಮುಂದೆ ಹುಡುಗಿಯರೂ ನಮ್ಮಂಥ ಕೊಳಕು ಹುಡುಗರಿಗೆ ಸಡ್ಡು ಹೊಡೆಯಬಹುದು!

ಇಲ್ಲಿ ತನಕ ’ನೀವು ಹುಡುಗಿಯರು ಯಾವುದರಲ್ಲಿ ಬೇಕಾದರೂ ಗಂಡಸರನ್ನು ಅನುಕರಿಸಬಲ್ಲಿರಿ ,ಆದರೆ ’ಒಂದ’ನ್ನು ಬಿಟ್ಟು !’ ಅನ್ನೋ ಗರ್ವದ ಮಾತು ಆಡಿಕೊಳ್ಳುತ್ತಾ ಇದ್ವಿ.

ಇನ್ನು ಮುಂದೆ ಆ ಮಾತು ಆಡೋ ಹಾಗಿಲ್ಲ :(

ಆದರೆ ಖುಶಿಯಾಗೋ ಸಂಗತಿ ಅಂದ್ರೆ ಇನ್ನು ಮುಂದೆ ’ಬರೀ ಗಂಡಸರಷ್ಟೇ ಕೊಳಕರು ’ ಅನ್ನೋ ಹೆಂಗಸರ ತಪ್ಪು ತಿಳುವಳಿಕೆ ಹೋಗಲಿದೆ.ಹಾಗೆಯೇ ’ರಸ್ತೆ ಬದಿಯಲ್ಲಿ ಸೂಸೂ ಮಾಡುವವರ ಸಂಘ’(ರ.ಬ.ಸೂ.ಮಾ.ಸಂ)ಕ್ಕೆ ಇನ್ನು ಮುಂದೆ ಹುಡುಗಿಯರಿಗೂ ಅರ್ಜಿ ಗುಜರಾಯಿಸಬಹುದು !

ಇಂಥ ಒಂದು ವಸ್ತು ಭಾರತೀಯ ಮಹಿಳೆಯರಿಗೆ ಉಪಯೋಗಿಯಾಗೋದು ಸಂಶಯವೇ .ಆದರೆ ಪ್ರಪಂಚದಾದ್ಯಂತ ಜನರು ಎಷ್ಟು ಕ್ರಿಯೇಟಿವ್ ಆಗಿ ಯೋಚಿಸ್ತಾರೆ ಅನ್ನೋದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ಮಹಿಳಾ ಸ್ವಾತಂತ್ರ್ಯಕ್ಕೆ ಜೈ ಹೋ .....

14 comments:

Anonymous said...

chii ..kiladi

ಶ್ರೀ said...

ಕೋತಿ ತಾನೂ ಕೆಡುವುದಲ್ಲದೆ ವನವನ್ನೂ ಕೆಡಿಸಿತು ಅಂತ ಗಾದೆಯಿದೆ, ನಿಮ್ಮನ್ನು ನೋಡಿಯೇ ಮಾಡಿದ್ದು ಅದು! :-P
ಭಾರತೀಯ ಮಹಿಳೆಯರು ನಿಮಗೆ ಸಡ್ಡು ಹೊಡೆಯುತ್ತಾರೋ ಇಲ್ಲವೋ, ಆದರೆ ಅದರಿಂದಾಗಿ ನಿಮಗೆ ಹುಳುಕಂತೂ ಆಗಿದೆಯಲ್ಲ, ಅದಕ್ಕಾಗಿ ಅದನ್ನು ಕಂಡು ಹಿಡಿದ ಮಹನೀಯರಿಗೆ ನನ್ನದೊಂದು ಸಲಾಮು...!!!

Prabhuraj Moogi said...

ನಿಮ್ಮ ಪೊಸ್ಟಗಳು ಪ್ರತೀಬಾರಿಯೂ ವಿಭಿನ್ನ, ಪಾಶ್ಚ್ಯಾತ್ಯರ ಅನುಕರಣೆ ಮಾಡುತ್ತಿರುವ ಪಟ್ಟಣದ ಕೆಲವು ಪೋರಿಗಳೂ ಪ್ರಯೋಗ ಮಾಡಲು ಹೆದರಬಹುದು, ಹಾಗಿದೆ ಸಂಶೊಧನೆ!

Anonymous said...

:-)

Unknown said...

ಪ್ರಪಂಚದಾದ್ಯಂತ ಜನರು ಎಷ್ಟು ಕ್ರಿಯೇಟಿವ್ ಆಗಿ ಯೋಚಿಸ್ತಾರೆ ಅನ್ನೋದಕ್ಕೆ ಆ ವಸ್ತು ೊಂದು ಉತ್ತಮ ನಿದರ್ಶನ. ಜೊತೆಗೆ ನಿಮ್ಮ ಲೇಖನವೂ ಉತ್ತಮ ನಿದರ್ಶನ ಹೌದು!

Unknown said...

technically "hats of to the technology " ... till now i am very happy that the ladies contribution to the environment pollution is very less ladies are very neat .. not like gents.... :-):-) but now ... i can't tell anything .... useful or not ... i will leave this to the future..:-) :-) :-)

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ....
ಒಳ್ಳೆ ಸಂಶೋದನೆ....

sunaath said...

ಎಲ್ಲರೂ ಜೀನ್ಸ್ ಹಾಕ್ಕೊಂಡು ಹೋಗೋ ಈ ದಿನಗಳಲ್ಲಿ ಹುಡುಗರು ಯಾರು ಹುಡುಗಿಯರು ಯಾರು ಅನ್ನೋದನ್ನು ಗುರುತಿಸಲಿಕ್ಕೆ ‘ಸೂಸೂ’ test ಒಂದೇ ದಾರಿಯಾಗಿತ್ತು. ಈಗ
ಆ ಮಾರ್ಗವೂ ಬಂದಾಯಿತೆ?

Anonymous said...

ರಸ್ತೆ ಬದಿಯಲ್ಲಿ ಸೂಸು ಮಾಡುವುದೂ 'ಸಾಮರ್ತ್ಯ'ಎಂದುಕೊಂಡ ನಿಮ್ಮ ಬಗ್ಗೆ ಕನಿಕರ ಮಾಡುತ್ತಿದೆ ಸಂದೀಪ್ ಅವರೇ. ಹಾಗಾದ್ರೆ ನಿಮ್ಮ ಪ್ರಕಾರ ರಸ್ತೆ ಬದಿಯಲ್ಲಿ ಸೂಸು ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ದಂಡ ವಿಧಿಸ್ತೀವಿ ಅಂತ ನಿಯಮ ಜಾರಿ ತಂದಿರುವ 'ಬಿಬಿಎಂಪಿ' ಅಧಿಕಾರಿಗಳೆಲ್ಲ ಮಹಿಳೆಯರೇ?
ರಸ್ತೆ ಬದಿಯಲ್ಲಿ ಸೂಸು ಮಾಡಿ ನಗರದಲ್ಲೆಲ್ಲಾ ಗಬ್ಬು ನಾತ ಎಬ್ಬಿಸುವುದಲ್ಲದೆ ಅದರ ಬಗ್ಗೆ ಆಕ್ಷೇಪ ಎತ್ತುವ ಮಹಿಳೆಯರನ್ನು ತೀರ ಮಡಿವಂತರೆಂದು ಬಿಂಬಿಸಿದ ನಿಮ್ಮ ಬಗ್ಗೇ ಏನು ಹೇಳಲಿ? ಎಲ್ಲಾ ಮಹಿಳೆಯರನ್ನು 'ಪೂರ್ವಗ್ರಹಪೀಡಿತ'ರಂತೆ ನೀವೇಕೆ ಕಾಣುತ್ತೀರ?’ರಸ್ತೆ ಬದಿಯಲ್ಲಿ ಸೂಸೂ ಮಾಡುವವರ ಸಂಘ’(ರ.ಬ.ಸೂ.ಮಾ.ಸಂ) ಸಂಘ ಇದೆಯೆಂಬ ಮಾಹಿತಿ ನೀಡಿ, ಅದರ ವಕ್ತಾರರಂತೆ ಈ 'ಲೇಖನ' ಬರೆದಿರುವ ನಿಮ್ಮ 'ನಾಗರೀಕತೆಯ' ಬಗ್ಗೆಯೇ ಅನುಮಾನ ಮೂಡುತ್ತಿದೆ.
ಇಂತೀ,
'ಭಾರತೀಯೆ'

ಸಂದೀಪ್ ಕಾಮತ್ said...

ಪ್ರಿಯ ಭಾರತೀಯೆ,

ನಾನು ಇದನ್ನು ಸುಮ್ಮನೆ ಬರೆದಿದ್ದು.

ನನ್ನ ನಾಗರಿಕತೆಯ ಬಗ್ಗೆ ಸರ್ಟಿಫಿಕೇಟ್ ಕೊಡೋದು ಬೇಡ ನೀವು.

ನಾನೊಬ್ಬ ಅನಾಗರಿಕ ಅನ್ನೋದು ನನಗೂ ಗೊತ್ತು.

ಹೆಸರು ಹೇಳಿ ಹಾಕಿದ್ರೆ ನಿಮ್ಮ ನಾಗರಿಕತೆಯ ಬಗ್ಗೆ ಅಭಿಮಾನ ಮೂಡುತ್ತಾ ಇತ್ತು.
ಇರ್ಲಿ ಬಿಡಿ .

Mahesh said...

FUD... :)

It has a history. Patented bak as far as 1922... Sirr hudkondhodre ehtondive nodi. P-Mate TravelMate
Shewee Whiz Plus LaFemme® iPEE®.. Eshtondive saar. aadroo Originallu Originalle!

Chennaagide.. :)

Anonymous said...

ಸಂದೀಪ್, ಏನೇ ಆಗಲಿ ಇಂಥದ್ದೊಂದು ಮಾರ್ಗ ಕಂಡು ಹುಡುಕಿ ಗಂಡಸರಿಗೆ ಹೊಟ್ಟೆಕಿಚ್ಚು ಮೂಡಿಸಿದ ಮಹಾನ್ ಸಂಶೋಧಕರಿಗೆ ನನ್ನ ವಂದನೆ.. ಪ್ರತಿ ಅವಿಷ್ಕಾರವನೂ ಕೂಡಲೇ ಅರಿತು ಪ್ರಕಟಿಸುವ ನಿಮ್ಮ ಈ ಸದ್ಭುದ್ದಿಯನ್ನು ದೇವರು ಹೀಗೆ ಇಟ್ಟಿರಲಿ ಎಂದು ಪ್ರಾರ್ಥಿಸುವೆ..

ಶುಭವಾಗಲಿ,
ಶಮ, ನಂದಿಬೆಟ್ಟ

ಗಿರಿ said...

ಸಂದೀಪ್...

ಬರಹಗಳ ಶೈಲಿ ಇಷ್ಟವಾಯ್ತು.. ಜೊತೆಗೆ, ಬರಹವಸ್ತುಗಳು ಕೂಡಾ...! ಮುಜುಗರದ ವಿಷಯಗಳನ್ನು ನಿರ್ಭಯವಾಗಿ ಬರೆದಿವುದು ನೋಡಿದರೆ, ನಿಮ್ಮ ಸಾಮರ್ಥ್ಯದ ಅರಿವಾಗುತ್ತದೆ.....!!

-ಗಿರಿ

prakash shetty said...

Dear Sandeep,
I think I finally found a new breed humourist !Nanage andare nanna 'VAAREKORE " magazinege Sandeep Kamatha ra agathya ide.Nimma contact no beku. Nanna email - prakashetty@gmail.com or SMS to 9449500294. Mareyabedi .
PRAKASH SHETTY,
EDITOR / VAAREKORE
www.vaarekore.blogspot.com