Monday, April 20, 2009

ಕಾರ್ಪೋರೇಟ್ ಶೈಲಿ ..

ದೂರದಲ್ಲಿ ಪುಟ್ನಂಜ ಬರೋದು ಕಾಣಿಸಿತು.ಪಾಪ ಪ್ರತಿ ವರ್ಷ ಎಲೆಕ್ಶನ್ ಬಂದ್ರೆ ಹಬ್ಬ ಪುಟ್ನಂಜನಿಗೆ.ಇರೋ ಬರೋ ಅಭ್ಯರ್ಥಿಗಳ ಎಲೆಕ್ಷನ್ ಬ್ಯಾನರ್ ಗಳೆಲ್ಲಾ ನಮ್ ಪುಟ್ನಂಜನೇ ಹಾಕೋದು.ಆದ್ರೆ ಈ ಸಲ ಚುನಾವಣಾ ನೀತಿ ಸಂಹಿತೆಯ ಗುಮ್ಮ !

ಪಾಪ ನಾವು ಐಟಿಯವರಿಗೆಲ್ಲ ರಿಸೆಶನ್ ಬಂದ್ರೆ ಈ ಪುಟ್ನಂಜಂಗೂ ರಿಸೆಶನ್ ಬರೋದಾ ಅಂತ ನಾನು ಮನಸಲ್ಲೇ ಕೊರಗ್ತಾ ಇದ್ದೆ.

’ನಮಸ್ಕಾರ ಸಾರ್ ’ ಅಂದ ಪುಟ್ನಂಜ .

’ಪರ್ವಾಗಿಲ್ಲ ಪುಟ್ನಂಜ ಈ ಚುನಾವಣಾ ನೀತಿ ಸಂಹಿತೆಯಿಂದ ನಿನಗೆ ತುಂಬಾ ಪ್ರಾಬ್ಲೆಮ್ ಆಗಿದೆ ಅಂತ ನಾನಂದುಕೊಂಡಿದ್ರೆ ನೀನು ಮಾತ್ರ ನಗ್ ನಗ್ತಾ ಇದ್ದೀಯಾ ಏನ್ ಸಮಾಚಾರ ಆರ್ಟ್ ಆಫ್ ಲಿವಿಂಗ್ ಏನಾದ್ರೂ ಸೇರ್ಕೊಂಡಿಯಾ ’

’ಹೆ ಹೆ ಹಾಗೇನಿಲ್ಲ ಸಾರ್ ವ್ಯಾಪಾರ ಜೋರಾಗೇ ಐತೆ .ನನಗೇನೂ ಪ್ರಾಬ್ಲೆಮ್ ಆಗಿಲ್ಲ ’

’ಏನೋ ಪುಟ್ನಂಜ ಈ ನೀತಿ ಸಂಹಿತೆ ಅಂತ ಎಲ್ಲಾ ರಾಜಕೀಯ ಪಕ್ಷದವರೂ ತಲೆ ಕೆಡಿಸ್ಕೊಂಡಿದ್ರೆ ನೀನು ವ್ಯಾಪಾರ ಜೋರಾಗೇ ಇದೆ ಅಂತಿಯಲ್ಲ ಏನ್ ಸಮಾಚಾರ ? ’

’ಏನಿಲ್ಲ ಸಾರ್ ಈ ಸಲ ಸ್ವಲ್ಪ ಕಾರ್ಪೋರೇಟ್ ಸ್ಟೈಲ್ ನಲ್ಲಿ ಬಿಸಿನೆಸ್ ಮಾಡ್ತಾ ಇದ್ದೀನಿ . ಎರಡು ಟೀಮ್ ಮಾಡಿದ್ದೀನಿ ಸಾರ್ ,ಬೇರೆ ಬೇರೆ ಹೆಸರಿನಲ್ಲಿ . ಒಂದು ಟೀಮ್ ರಾಜಕೀಯ ಪಕ್ಷದವ್ರ ಹಿಂದೆ ಸುತ್ತಾಡುತ್ತೆ ,ಅವರು ಹೇಳಿದ ಕಡೆ ಬ್ಯಾನರ್ ಗಳನ್ನ ಹಾಕುತ್ತೆ . ಇನ್ನೊಂದು ಟೀಮ್ ಬಿ.ಬಿ.ಎಂ.ಪಿ ಗೋಸ್ಕರ ಕೆಲಸ ಮಾಡುತ್ತೆ .ಯಾರ್ಯಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸ್ತಾ ಇದ್ದಾರೆ ಅನ್ನೋದನ್ನು ಪತ್ತೆ ಹಚ್ಚಿ (ನಾವೇ ಹಾಕಿದ್ದಲ್ವ!) ಅವರು ಹಾಕಿದ ಬ್ಯಾನರ್ ಕಿತ್ತುಕೊಂಡು ಹೋಗುತ್ತೆ . ಬ್ಯಾನರ್ ಹಾಕಿದ್ದಕ್ಕೆ ಇನ್ನೂರು ,ಬ್ಯಾನರ್ ಕಿತ್ತು ಹಾಕಿದ್ದಕ್ಕೆ ನೂರು !’

10 comments:

Anonymous said...

ಭಲೇ!!!
ಒಳ್ಳೆ ಬಿಸಿನೆಸ್ ಐಡಿಯ, ಪುಟ್ನಂಜ ಜಿಂದಾಬಾದ್!
:-)
ಮಾಲತಿ ಎಸ್.

ಸುಧೇಶ್ ಶೆಟ್ಟಿ said...

Lol!

ದಿವ್ಯಾ ಮಲ್ಯ ಕಾಮತ್ said...
This comment has been removed by the author.
ದಿವ್ಯಾ ಮಲ್ಯ ಕಾಮತ್ said...

ತುಂಬಾ ಚೆನ್ನಾಗಿದೆ :-) ಮೊದಲ ಬಾರಿ ಇವತ್ತು ನಿಮ್ಮ ಬ್ಲಾಗಿಗೆ ಬಂದೆ... ಪುಟ್ಟವಾದ, ಹಾಸ್ಯಮಯವಾದ ಬರಹಗಳು, ಏಕತಾನತೆಯಲ್ಲಿ ಬೇಸತ್ತ ಮನಸಿಗೆ ಮಧುರ ಸಿಂಚನ ನೀಡುತ್ತವೆ. ಹೀಗೆ ಬರೆಯುತ್ತಿರಿ.. ಅಭಿನಂದನೆಗಳು!

ಸಾಗರದಾಚೆಯ ಇಂಚರ said...

ತುಂಬಾ ಒಳ್ಳೆ ಐಡಿಯಾ, ಹೀಗೆ ಬರೆಯುತ್ತಿರಿ

Prabhuraj Moogi said...

ಸೂಪರ್ ಸರ್... ಪುಟ್ನಂಜನಿಗೆ ಹೇಳಿ ಸಾರ್ ಬ್ಯಾನರ್ ಕೇಳದೆ ಇರೋಕೆ ಕೂಡ ಪಕ್ಷದವರ ಹತ್ರ ಅಗ್ರೀಮೆಂಟು ಮಾಡಿಕೊಂಡು ದುಡ್ಡು ಮಾಡಬಹುದು ಅಂತ..

ತೇಜಸ್ವಿನಿ ಹೆಗಡೆ said...

:D :D

Lakshmi Shashidhar Chaitanya said...

ಎಂಥಾ ಪ್ರಳಾಯಾಂತಕವಾದ ತಲೆ ಪುಟ್ನಂಜನದ್ದು ! IIMB pass out ಅಂತಾ ? :) :) :)

ಧರಿತ್ರಿ said...

ಪುಟ್ನಂಜನ ಐಡಿಯಾ ಬೊಂಬಾಟಾಗಿದೆ ಸಂದೀಪ್. ನೀತಿ ಸಂಹಿತೆ ಇದ್ರೂ ನೋಡಿ ರಂಗೋಲಿ ಅಡಿ ನುಸುಳುವವರೇ ಜಾಸ್ತಿ! ಅದೇ ಬ್ಯುಸಿನೆಸ್ ಅಲ್ವಾ? ಯಾಕೋ ಇತ್ತೀಚೆಗೆ ಭಾಳ ಹಾಸ್ಯಮಯವಾಗಿ ಬರೇತೀರ..! ಗುಡ್. ಶುಭವಾಗಲಿ
-ಧರಿತ್ರಿ

ಸಂದೀಪ್ ಕಾಮತ್ said...

ಪ್ರತಿಕ್ರಿಯಿಸಿದ ಎಲ್ರಿಗೂ ಧನ್ಯವಾದಗಳು :)