Saturday, October 31, 2009

ಇದು ಎಂಥ ಮಾರಾಯ್ರೇ...ಜನ ಯಾರನ್ನಾದರೂ ಹೇಗೆ ನೆನಪಿಟ್ಟುಕೋತಾರೆ?ನನಗೆ ಗೊತ್ತಿರೋ ಪ್ರಕಾರ ಜನರು ಯಾರದಾದರೂ ಮುಖವನ್ನು ನೋಡಿ ನೆನಪಿಟ್ಟುಕೋತಾರೆ.ಹಾಗಾಗಿ ’ನನಗೆ ಅವರ ಮುಖ ಪರಿಚಯವಿದೆ’ ಅನ್ನೋ ಮಾತು ಬಂದಿದೆ.

ಇತ್ತೀಚೆಗೆ ರಾತ್ರಿ ಟಿ.ವಿ ನೋಡುತ್ತಿದ್ದಾಗ ಒಂದು ಕಾರ್ಯಕ್ರಮ ನೋಡಿದೆ.ಅದು ಸೆಲೆಬ್ರಿಟಿಯೊಬ್ಬರನ್ನು ಗುರುತಿಸುವ ಸ್ಪರ್ಧೆ.ಮಾಮೂಲಿಯಾಗಿ ಇಂಥ ಸ್ಪರ್ಧೆಗಳಲ್ಲಿ ಅಮಿತಾಬ್ ಬಚ್ಚನ್ ,ಅಕ್ಷಯ್ ಕುಮಾರ್ ಇಂಥ ಖ್ಯಾತ ನಾಮರ ಮುಖವನ್ನು ಮಬ್ಬುಗೊಳಿಸಿ -’ಗುರುತಿಸಿ ಹಣ ಗೆಲ್ಲಿ ’ ಅನ್ನೋದು ಮಾಮೂಲಿಯಾಗಿ ಬರ್ತಾ ಇತ್ತು.

ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ!

ಮೇಲಿನ ಚಿತ್ರ ನೋಡಿ.ಇಂಥ ಕಾರ್ಯಕ್ರಮ ಪ್ರಸಾರ ಮಾಡುತ್ತಿರೋರ ’ಎದೆ’ಗಾರಿಕೆ ಮೆಚ್ಚಬೇಕಾದದ್ದೇ!

ಏನೋ ಪಮೇಲಾ ಅಂಡರ್ಸನ್,ಶಕೀಲಾ ಅಂಥವರನ್ನು ತೋರಿಸಿದ್ರೆ ಗುರುತು ಹಿಡಿಯಬಹುದು .ಎಲ್ಲರನ್ನೂ ಗುರುತಿಸೋ ಬಗೆ ಏನೋ??

ಈ ಸೆಲೆಬ್ರಿಟಿಯ ಗುರುತು ಸಿಕ್ಕಿದರೆ ನನಗೂ ತಿಳಿಸಿ ಪ್ಲೀಸ್(ಯಾವುದೇ ಬಹುಮಾನವಿರುವುದಿಲ್ಲ!)