Wednesday, July 30, 2008

ಸ್ನೇಹಾ ನಾ ಪ್ರೀತಿ ನಾ ???’ಜಾನೆ ತೂ ಯಾ ಜಾನೆ ನಾ ’ ನೋಡಿದೆ. ಇಷ್ಟ ಆಯ್ತು!

ಕಥೆ ಏನಪ್ಪಾ ಅಂದ್ರೆ ಸ್ನೇಹಾನಾ ಪ್ರೀತಿನಾ ಅಂತ ಗೊತ್ತಾಗದಿರೋ ಮಾನಸಿಕ ತೊಳಲಾಟ..

ಎಲ್ಲರ ಬದುಕಿನಲ್ಲೂ ಇಂಥ ಒಂದು ಸನ್ನಿವೇಶ ಬಂದೇ ಬರುತ್ತೆ ಅಂತ ಕಾಣ್ಸುತ್ತೆ.

ಇದನ್ನು handle ಮಾಡೋದು ಅಷ್ಟೇ ಕಷ್ಟ. ಸ್ವಲ್ಪ ಎಡವಟ್ಟಾದ್ರೂ ಅತ್ತ ಪ್ರೀತಿನೂ ಇಲ್ಲ ಇತ್ತ ಸ್ನೇಹಾನೂ ಇಲ್ಲ.


ನ ಘರ್ ಕಾ ನಾ ಘಾಟ್ ಕಾ ಅಂತಾರಲ್ಲ ಆ ಪರಿಸ್ಥಿತಿ.

ನಾವು ಹುಡುಗರೇ ಹೀಗಾ? ಹುಡುಗಿಯರು ಫ್ರೆಂಡ್ ಶಿಪ್ಪಲ್ಲಿ ಎರಡು ಒಳ್ಳೆಯ ಮಾತನ್ನಾಡಿದ್ರೆ ಅದನ್ನೇ ಪ್ರೀತಿ ಅಂದ್ಕೋತೀವ??

ಅಥವಾ ಹುಡುಗಿಯರೇ ಆ ರೀತಿ ಭಾವನೆ ಉಂಟು ಮಾಡ್ತಾರಾ?? ಹೇಳೋದು ಸ್ವಲ್ಪ ಕಷ್ಟ !

ಅಷ್ಟಕ್ಕೂ ಪ್ರೀತಿ ಅಂತಾನೆ ಅಂದ್ಕೋಳ್ಳೋಣ ,ಅದನ್ನು ಹೇಳಿದ್ರೆ ಹುಡುಗಿಯರು ಯಾಕೆ ಸಿಟ್ಟು ಮಾಡ್ಕೋತಾರೆ??

"ಛೇ ನಿನ್ನನ್ನು ’ಆ’ ದೃಷ್ಟಿಯಿಂದ ನೋಡೆ ಇಲ್ಲ ಕಣೋ " ಅಂತ ಯಾಕೆ ಸಿಟ್ಟಾಗ್ತಾರೆ? ನಾವು ಅವರನ್ನು ’ಆ ದೃಷ್ಟಿಯಿಂದ ’ ನೋಡಿದ್ದೇನಾದ್ರೂ ತಪ್ಪಾ??

ಇಷ್ಟೆ ಆದ್ರೆ ಪರ್ವಾಗಿಲ್ಲ "ನೀನು ಇಷ್ಟು ಕಚಡಾ ಅಂತ ಗೊತ್ತಿರ್ಲಿಲ್ಲ " ಅಂತ ಬಯ್ಯೋ ಹುಡುಗಿಯರೂ ಇದ್ದಾರಲ್ವ? ಅವ್ರಿಗೇನನ್ನೋದು!!!

ಹಾಗೆ ನೋಡಿದ್ರೆ ಎಲ್ಲಾ ಸಂಬಂಧಗಳೂ ತುಂಬಾ ಕ್ಲಿಷ್ಟಕರ. Handle with care ಅಂತ ಎಲ್ಲಾ ಸಂಬಂಧಗಳೂ ಟ್ಯಾಗ್ ಹಾಕಿಕೊಂಡೇ ಇರುತ್ತವೆ,ನಾವು ಸರಿಯಾಗಿ ಗಮನಿಸಿರುದಿಲ್ಲ ಅಷ್ಟೆ!

’ಜಾನೆ ತೂ ’ ನಲ್ಲಿ ಇದನ್ನು ಚೆನ್ನಾಗಿ ತೊರಿಸಿದ್ದಾರೆ. ಅದಿತಿ ಪಾತ್ರ ನ ಜೆನೆಲಿಯ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.ಆದ್ರೆ ಬೊಮ್ಮರಿಲ್ಲು ನಷ್ಟು ಚೆನ್ನಾಗಿ ಕಾಣ್ಸಲ್ಲ ಜೆನೆಲಿಯಾ :( ..

ಒಂದು ಹುಡುಗ - ಹುಡುಗಿ ’ಬರೀ’ ಫ್ರೆಂಡ್ಸ್ ಆಗಿರೋದು ಎಷ್ಟು ಕಷ್ಟ ಅಲ್ವಾ?? ನೋಡೋರ ಕಣ್ಣಿಗೆ ಯಾವತ್ತೂ ಅವರು ಲವ್ವರ್ಸ್ ಥರಾನೆ ಕಾಣಿಸ್ತಾರೆ ಆ ವಿಶ್ಯ ಬಿಡಿ.

ಒಂದೆ ಒಂದು ಖುಶಿ ಅಂದ್ರೆ ಕಾಲ ಬದಲಾಗ್ತಾ ಇದೆ ,ಜನರ ದೃಷ್ಟಿಕೋನ ಕೂಡ ಬದಲಾಗಿದೆ. ನಾವು ಬರೀ ಫ್ರೆಂಡ್ಸ್ ಅಂದ್ರೆ ನಂಬೋರು ಸಿಕ್ತಾರೆ! So sweet !

3 comments:

ತೇಜಸ್ವಿನಿ ಹೆಗಡೆ said...

ಸಂದೀಪ್ ಅವರೆ

ಬ್ಲಾಗ್ ಲೋಕಕ್ಕೆ ಸ್ವಾಗತ. ನಿಮ್ಮ ಬರಹ ವೈವಿಧ್ಯಮಯವಾಗಿದೆ. ಕಡಲ ತೀರ ತುಂಬಾ ಆಕರ್ಷಕ ಹೆಸರು. ನನ್ನ ನೆಚ್ಚಿನ ತಾಣ ಕೂಡ. ಎಲ್ಲಕ್ಕಿಂತ ಹೆಚ್ಚಾಗಿ ಬ್ಲಾಗ್ ನಲ್ಲಿ ನೀವು ಮಾಡಿರುವ ಗುರುವಂದನೆ ನಿಜಕ್ಕೂ ಶ್ಲಾಘನೀಯ. ಉತ್ತಮ ಬರಹಗಳನ್ನು ಹೀಗೇ ತಪ್ಪಿಲ್ಲದೇ ಕೊಡುತ್ತಿರಿ.

ಸಂದೀಪ್ ಕಾಮತ್ said...

ತೇಜಸ್ವಿನಿಯವರೆ,

ಪ್ರತಿಕ್ರಿಯೆಗೆ ಧನ್ಯವಾದಗಳು!
ನಿಮ್ಮೆಲ್ಲರ ಬ್ಲಾಗೇ ನನಗೆ ಸ್ಪೂರ್ತಿ.

-ಸಂದೀಪ್ ಕಾಮತ್

Anonymous said...

"ನಂಬೋರು ಸಿಕ್ತಾರೆ! So sweet !" ನಿಜ...