Thursday, September 18, 2008

ಎದೆ ತಟ್ಟಿ ಹೇಳು ನಾನೊಬ್ಬ ಹಿಂದು !


ಹೀಗೆ ವಿಜಯ್ ರಾಜ್ ರ ಕುಂದಾಪ್ರ ಕನ್ನಡ ಬ್ಲಾಗ್ ನೋಡ್ತಾ ಇದ್ದೆ .ದಕ್ಷಿಣ ಕನ್ನಡ(ಅವಿಭಜಿತ) ’ಬುದ್ಧಿವಂತರ ನಾಡು ’ಅಂತ ಹೆಸರು ಪಡೆದುಕೊಂಡಿದ್ದು ,ಈಗ ನಡೆಯುತ್ತಿರೋ ಕೋಮು ಗಲಬೆಯಿಂದ ಈ ಪಟ್ಟ ಹೋಗೋ ಸಂಭವವಿದೆ ಅನ್ನೋ ಭಯ ಅವರಿಗೆ .ಅವರ ಬ್ಲಾಗ್ ನಲ್ಲೇ ಈ ಬಗ್ಗೆ ಕಮೆಂಟಿಸೋಣ ಅಂದುಕೊಂಡಿದ್ದೆ ಆದ್ರೆ ನನಗೆ ’ಹೇಳಲಿಕ್ಕಿನ್ನೂ ತುಂಬಾ ಇದೆ ’ ಆದ್ದರಿಂದ ಎಲ್ಲಾ ಇಲ್ಲೇ ಬರೆಯೋಣ ಅನ್ನಿಸಿತು.
ನಂಗೆ ಕುಂದಾಪ್ರ ಕನ್ನಡ ಬರಲ್ಲ .ಆದ್ರೆ ಅರ್ಥ ಆಗುತ್ತೆ. ವಿಜಯ್ ಲೇಖನ ತುಂಬಾ ಚೆನ್ನಾಗಿದೆ - Food for thought .

ಆದ್ರೆ..........................
There is always other side of story.
ಮಂಗಳೂರಿನ ವಿಷಯದಲ್ಲಿ ರಾಜಕಾರಣ ನುಸುಳಿರುವುದು ಸ್ವಲ್ಪ ಮಟ್ಟಿಗೆ ಸತ್ಯ ಇರಬಹುದು .ಆದ್ರೆ ರಾಜಕಾರಣ ಎಲ್ಲಿಲ್ಲ ಹೇಳಿ ?
ಮುಖ್ಯಮಂತ್ರಿ ಹೆಣ್ಣುಮಕ್ಕಳಿಗೆ ಸೈಕಲ್ ಕೊಟ್ರೆ ಅದು ರಾಜಕೀಯ ,ಹುಡುಗರಿಗೆ ಕೊಟ್ಟಿಲ್ಲ ಅಂದ್ರೆ ಅದೂ ರಾಜಕೀಯ!
ವಿತ್ತ ಸಚಿವರು ಒಳ್ಳೆಯ ಬಜೆಟ್ ಮಂಡಿಸಿದ್ರೆ ಅದು ರಾಜಕೀಯ ,ಕೆಟ್ಟ ಬಜೆಟ್ ಮಂಡಿಸಿದ್ರೆ ಅದೂ ರಾಜಕೀಯ.ಹಜ್ ಗೆ ಸಬ್ಸಿಡಿ ಕೊಟ್ರೆ ಅದೂ ರಾಜಕೀಯಕ್ಕೆ ,ಅಮರನಾಥ ಯಾತ್ರೆ ಗೆ ಭೂಮಿ ಕೊಟ್ಟಿಲ್ಲ ಅಂದ್ರೆ ಅದೂ ರಾಜಕಾರಣ.ಎಲ್ಲಾ ರಾಜಕಾರಣಿಗಳು ಒಳ್ಳೆಯ ಕೆಲಸ ಮಾಡೋದು ರಾಜಕೀಯಕ್ಕೆ !ಕೆಟ್ಟ ಕೆಲಸ ಮಾಡೋದು ರಾಜಕೀಯಕ್ಕೆ !
ವಿಜಯ್ ಹೇಳ್ತಾ ಇದ್ರು ಮತಾಂತರದ ವಿಷಯವನ್ನು ಕಾನೂನು ಪ್ರಕಾರ ಬಗೆಹರಿಸ್ಬೇಕಿತ್ತು ಅಂತ!ಒಳ್ಳೆಯ ವಿಚಾರ ಆದ್ರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ? ಕಾನೂನನ್ನು ಕೈಗೆ ತಗೊಳ್ಳೊದು ತಪ್ಪು ನಿಜ ,ಆದ್ರೆ ಒಂದು ಹೇಳಿ ನಿಮ್ಮ ಆಫೀಸುಗಳಿಗೆ ವಾಚ್ ಮ್ಯಾನ್ ಯಾಕೆ ಇಡ್ತೀರ? ಯಾರಾದ್ರೂ attack ಮಾಡಿದ್ರೆ ,ಅಥವ ಏನಾದ್ರೂ ಕಳವು ಆದ್ರೆ ’ಆಮೇಲೆ ಕಾನೂನಿನ ಪ್ರಕಾರ ಕ್ರಮ ಕೈ ತಗೊಳ್ ಬಹುದು ಅಲ್ವ?? ’ ಆದ್ರೆ ನೀವು security ಇಡ್ತೀರ ,ಅದೂ ನಿಮ್ ಗೆ ಗ್ರೂಪ್ ಫೋರ್ ನಂಥ security agency ನೇ ಬೇಕು?? ಯಾಕೆ?
ಈಗ ನಡೆದಿರೋ ಸಂಗತಿಗಳಿಂದ ಈ ಮತಾಂತರದ ವಿಷಯ ಜಗಜ್ಜಾಹೀರಾಗಿದೆ ,ಆದ್ರೆ ಸುಮ್ಮನೆ ಮತಾಂತರದ ಬಗ್ಗೆ ಸುಮ್ಮನೆ ಒಂದು complaint ಕೊಟ್ಟು ಮನೆಗೆ ಬಂದು ಬೆಚ್ಚಗೆ ಮಲಗಿದ್ರೆ NDTVಯವ್ರು ಈ ಬಗ್ಗೆ ಕಾರ್ಯಕ್ರಮ ನಡೆಸ್ತಿದ್ರ?? ಅಥವಾ ನೀವು/ನಾನು ಬ್ಲಾಗ್ ನಲ್ಲಿ ಈ ಬಗ್ಗೆ ಬರೀತಿದ್ವ??

ನನ್ಗೆ ಮಂಗಳೂರಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಬಗ್ಗೆ ಅಪಾರ ಗೌರವವಿದೆ .ಯಾಕಂದ್ರೆ ನಾನೂ ಕಾನ್ವೆಂಟ್ ನಲ್ಲಿ ಓದಿರೋನು .ನಮ್ಮ ಟೀಚರುಗಳು,ಸಿಸ್ಟರ್ ಗಳು ಎಲ್ಲ ಕ್ರಿಶ್ಚಿಯನ್ ಸಮುದಾಯದವ್ರು.ಆದ್ರೆ ಯಾವತ್ತೂ ಅವರು ಹಿಂದೂ ಧರ್ಮದ ಬಗ್ಗೆ ಅವಮಾನಿಸಿ ಮಾತಾಡಿಲ್ಲ .ನನ್ನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಮೂಡಿದ್ರೆ ಅದರಲ್ಲಿ ಅವರ ಕೊಡುಗೆ ಅಪಾರ.
ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಹಿಂದೂ ಧರ್ಮದ ಸಂಕೇತಗಳಾದ ಹೂ,ಕುಂಕುಮ ಗಳಿಗೆ ನಿಷೇಧ ಹೇರಿದ್ದು ಬಿಟ್ರೆ (ಇದು ಗಂಭೀರ ಅಪರಾಧ ಆದ್ರೂ ಅದನ್ನು ಸರಿ ಪಡಿಸಿದ್ದಾರೆ,ಲಂಡನ್ ನಲ್ಲೇ ಸಿಖ್ ಗಳು ಟರ್ಬನ್ ಧರಿಸೋದನ್ನು ನಿಷೇಧಿಸಿದರ ಬಗ್ಗೆ ಪ್ರತಿಭಟನೆ ನಡೆಸ್ತಾರೆ ಆದ್ರೆ ನಾವು?) ಹಿಂದೂ ಧರ್ಮಕ್ಕೆ ಅಪಚಾರ ಆಗೋ ಅಂಥ ಕೆಲಸ ಅವ್ರು ಯಾವತ್ತೂ ಮಾಡಿಲ್ಲ ,ಮಾಡೋದೂ ಇಲ್ಲ .
ಆದ್ರೆ ಈಗ ಕೆಲವು ದುರುದ್ದೇಶ ಪ್ರೇರಿತ ಸಂಘಟನೆಗಳು ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದು ಸತ್ಯ.ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ ಅನ್ನೋದೂ ರಹಸ್ಯವಾಗೇನೂ ಉಳಿದಿಲ್ಲ.
ನನ್ನ ಹಲವಾರು ಸ್ನೇಹಿತರು ಕೇಳ್ತಾರೆ "ಅಲ್ಲಪ್ಪ ಬೇರೆ ಮತಕ್ಕೆ ಹೋಗೋದು ಅವರಿಷ್ಟ ,ಅದನ್ಯಾಕೆ ನಾವು ವಿರೋಧಿಸ್ಬೇಕು " ಅಂತ !!

ಹೌದಲ್ಲ?? ಯಾಕೆ ನಾವು ತಲೆ ಕೆಡಿಸ್ಕೋಬೇಕು ???

ಅದೆಲ್ಲ ಇರ್ಲಿ ,ನಿಮಗೊಂದು ಪುಟ್ಟ ಮಗು ಇದೆ ಅಂತ ತಿಳ್ಕೊಳ್ಳಿ! ನಿಮಗೆ ಬರೋದು ಎರಡು ಸಾವಿರ ಸಂಬಳ .ನಿಮ್ಮ ಶಕ್ತಿ ಪ್ರಕಾರ ಯಾವುದೋ ಒಂದು ಸರಕಾರಿ ಶಾಲೆಗೆ ಮಗುವನ್ನು ಸೇರಿಸಿ ನಿಮ್ಮ ಶಕ್ತಿ ಮೀರಿ ಬೆಳೆಸ್ತೀರ.
ಒಂದು ದಿನ ಒಬ್ಬ ಶ್ರೀಮಂತ ಸಾಫ್ಟ್ ವೇರ್ ಇಂಜಿನಿಯರ್ ಬಂದು " ಮಗು, ನಿನ್ ಅಪ್ಪಂಗೆ ಬರೀ ಎರಡು ಸಾವಿರ ಸಂಬಳ ,ಅವನಿಂದ ನಿನ್ನನ್ನು ’ಚೆನ್ನಾಗಿ’ ಸಾಕೋ ಯೋಗ್ಯತೆ ಇಲ್ಲ .ನನ್ ಜೊತೆ ಬಾ ,ಯಾವುದಾದ್ರೂ ಒಳ್ಳೆ ಕಾನ್ವೆಂಟ್ ಗೆ ನಿನ್ನ ಸೇರಿಸ್ತೀನಿ ,ದಿನಾ ಹಾರ್ಲಿಕ್ಸ್ ಕೊಡಿಸ್ತೀನಿ ,ಹ್ಯಾರಿ ಪೊಟರ್ ಸಿನೆಮಾ ತೋರಿಸ್ತೀನಿ " ಅಂತ ಪುಸಲಾಯಿಸಿ ಕರ್ಕೊಂಡು ಹೋದ್ರೆ ಏನ್ ಮಾಡ್ತೀರಾ??

ನೀವನ್ ಬಹುದು ಮಗು ಆ ಥರ ಹೋಗಲ್ಲ ಅಂತ !

21st century ಮಗು ಕಣ್ರಿ ಅದು ಏನೂ ಹೇಳೋಕಾಗಲ್ಲ ಹೋದ್ರೂ ಹೋಗ್ ಬಹುದು ! ಆಗ ಏನನ್ನಿಸುತ್ತೆ ನಿಮಗೆ?
ಓಕೆ ಮಗು ಮೈನರ್ . ಅದು ಹೋದ್ರೂ ವಾಪಸ್ ತರ್ಸೋಕೆ ಕಾನೂನು ಇದೆ.
ಇದೇ ಕೆಲಸ ಹೆಂಡತಿ ಮಾಡಿದ್ರೆ ?? "ನಿನ್ ಗಂಡನಿಗೆ ಸಂಬಳ ಚೆನ್ನಾಗಿಲ್ಲ ,ನಾನು ಚೆನ್ನಾಗಿ ಸಾಕ್ತೀನಿ " ಅಂತ ಯಾರಾದ್ರೂ ಪುಸಲಾಯಿಸಿದ್ರೆ ಏನನ್ಸುತ್ತೆ? ಮಗು ಏನೊ ಮೈನರ್ ,ಆದ್ರೆ ಹೆಂಡತಿ ಮೇಜರ್ ಅಲ್ವ? ಡೈವೋರ್ಸ್ ಕೊಟ್ಟೇ ಹೋಗಬಹುದು?

ಈಗ ಹೇಳಿ ತಪ್ಪು ಯಾರ್ದು?

ಯಾರೊ ಒಬ್ಬ ನಡುರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದಾಗ, ಖೇತಾನ್ ಫ್ಯಾನ್ ಕೆಳಗೆ ಜ್ಞಾನೋದಯ ಆಗಿ ಸೀದ ಚರ್ಚಿಗೆ ಹೋಗಿ ’ಫಾದರ್ ನಾನೂ ಕ್ರಿಶ್ಚಿಯನ್ ಆಗ್ಬೇಕು ನನಗೆ ದೀಕ್ಷೆ ಕೊಡಿ ’ಅಂತ ಹೇಳಿದ್ರೆ ಅದು fine ,ಅದು ಅವನಿಷ್ಟ . ಆದ್ರೆ ’ಬೇರೆ ಯಾರೋ ’ಅವನ ಮನೆಗೆ ಬಂದು ಪುಸಲಾಯಿಸಿದ್ರೆ ತಪ್ಪು ಯಾರದ್ದು?
ಸುವರ್ಣ ಚ್ಯಾನೆಲ್ ನಲ್ಲಿ ಈ ಬಗ್ಗೆ ಚರ್ಚೆ ನಡೀತ ಇತ್ತು . ಶಶಿಧರ್ ಭಟ್ ಮತ್ತೆ ಇನ್ನೊಬ್ರು ಸೇರಿಕೊಂಡು ಒಬ್ಬ ಹೆಗ್ಗಡೆಯವರ ಮೇಲೆ ವಾಗ್ದಾಳಿ ನಡೆಸ್ತಾ ಇದ್ರು .ಇದು ಸರಿ ನಾ??
ಶಶಿಧರ್ ಭಟ್ ಅಲ್ಲಿ neutral ಆಗಿರ್ಬೇಕಿತ್ತಲ್ಲ?? ಕೊನೆಗೆ ಭಟ್ರು ’ಕುವೆಂಪು ಹೇಳಿದ್ದಾರೆ ಎಲ್ಲ ದೇವರನ್ನು ಬೀದಿಗೆಸೀರಿ ’ ಅಂತಾನೂ ಹೇಳಿದ್ರೂ .
ಸರಿ ಎಲ್ಲ ಬಿಟ್ಟು ಬಿಡೊಣ ,ಆದ್ರೆ ಭಟ್ ,ಕಾಮತ್ ಅನ್ನೋ ಜಾತಿ ಸೂಚಕಗಳನ್ಯಾಕೆ ನಾವು ಬೀದಿಗೆಸೆಯೋಕೆ ತಯಾರಿಲ್ಲ?? ಅಷ್ಟು ಸುಲಭ ನಾ ಅದು?

’ಎದೆ ತಟ್ಟಿ ಹೇಳು ನಾನೊಬ್ಬ ಹಿಂದು ’ ಅನ್ನೋ ಸ್ಲೋಗನ್ ಇದೆ ಅದನ್ನು ಮಂಗಳೂರಿನಲ್ಲಿದ್ದಾಗ ಕೇಳಿದ್ರೆ ನಗು ಬರ್ತಾ ಇತ್ತು . ಛೇ ! ನಾನೊಬ್ಬ ಹಿಂದು ಅಂತ ಎದೆ ತಟ್ಟಿ ಹೇಳೊದ್ರಲ್ಲಿ ಏನಿದೆ ವಿಶೇಷ ಅಂತ !!

ಆದ್ರೆ ಈಗ ಗೊತ್ತಾಗ್ತಾ ಇದೆ ಅಷ್ಟು ಸುಲಭವಿಲ್ಲ ಎದೆ ತಟ್ಟಿ ಹೇಳೋದು ! ಶಶಿಧರ್ ಭಟ್ರು ,ಹೆಗ್ಡೆಯವ್ರಿಗೆ ಪದೇ ಪದೇ "ನೀವು ಹಿಂದುಗಳು ","ನೀವು ಹಿಂದುಗಳು " ಅಂತ ಉದ್ದೇಶಿಸೀನೇ ಮಾತಾಡ್ತಾ ಇದ್ರು; ಅವ್ರ್ಯಾಕೆ "ನಾವು ಹಿಂದುಗಳು " ಅನ್ನೋ ರೀತಿ ಮಾತಾಡಿಲ್ಲ?? ಯಾಕಂದ್ರೆ ಆ ಕ್ರಿಶ್ಚಿಯನ್ ಹಿರಿಯರು ತಪ್ಪು ತಿಳ್ಕೋತಾರೇನೋ ಭಯ ”ಹೆಗಡೆಯವ್ರಿಗೆ ,ಭಜರಂಗ ದಳದವ್ರಿಗೆ ಸಪೋರ್ಟ್ ಮಾಡ್ತಾ ಇದ್ದೀನಿ ’ ಅಂತ ವೀಕ್ಷಕರು ತಿಳೀಬಹುದೇನೋ ಅನ್ನೊ ಭಯ !
ಎಂಥ ವಿಪರ್ಯಾಸ ?.....
ನಾನು ಅಹಮದಾಬಾದ್ ನಲ್ಲಿ ಸ್ವಲ್ಪ ಕೆಲಸ ಮಾಡ್ತಾ ಇದ್ದೆ .ಸಾಬರಮತೀ ನದಿಯ ಈ ಕಡೆ ಹಿಂದೂಗಳು ,ಆ ಕಡೆ ಮುಸ್ಲಿಮರು ! ಅಂಥ ವಿಚಿತ್ರವಾದ ಏರಿಯಾ ಅದು! ಕೋಳಿ ಮಾಂಸ ನದಿಯ ಆ ಕಡೇನೆ ಸಿಗೋದ್ರಿಂದ ನಾನೂ ನನ್ನ ಫ್ರೆಂಡ್ಸ್ ನಾನ್ ವೆಜ್ ತಿನ್ನೋಕೆ ಅಂತ ’ಆ ಕಡೆ ’ ಹೋಗಿದ್ವಿ . ಮಂಗಳೂರಿನ style ನಲ್ಲಿ ಉದ್ದನೆ ಕುಂಕುಮ ನಾಮ ಬೇರೆ ಹಾಕಿದ್ವಿ (ಅಲ್ಲಿದ್ದಾಗ ಯಾಕೋ ದೈವ ಭಕ್ತಿ ಜಾಸ್ತಿನೇ ಉಕ್ಕಿ ಬಂದಿತ್ತು !).ಅಲ್ಲಿ ಒಂದು ಗಲ್ಲಿ ಇತ್ತು ,ಬಟ್ಟೆ ಬರೆ ಮಾರೋರ್ದು . ದೊಡ್ಡ ಗಲ್ಲಿ ,ಆ ಗಲ್ಲಿಯ ಒಳಗೆ ಹೋದ್ರೆ ಹೊರಗೆ ಬರೋದಕ್ಕೇ ಗೊತ್ತಾಗಿಲ್ಲ ನಮಗೆ .ಒಳಗೆ ನೋಡಿದ್ರೆ ಎಲ್ಲ ಮುಸಲ್ಮಾನ ವರ್ತಕರು.ಎಲ್ಲಾ ನಮ್ಮನ್ನೇ ನೋಡಿ ಗುರಾಯಿಸ್ತಾ ಇದ್ರು .ಯಾಕೆ ಏನೂ ಅಂತ ನಮಗೂ ಗೊತ್ತಾಗಿಲ್ಲ . ಅಲ್ಲಿ ಚೆನ್ನಾಗಿ ಸುತ್ತಾಡಿ ,ಕೋಳಿ ,ಮೀನು ತಿಂದು ಆಫೀಸಿಗೆ ವಾಪಾಸಾದ್ವಿ.
ಆಫೀಸಿನಲ್ಲಿ ಕಲೀಗ್ಸ್ ’ಎಲ್ಲಪ್ಪ ಹೋಗಿದ್ರಿ ,ಏನ್ ಮಾಡಿದ್ರಿ ’ ಅಂತ ಕೇಳಿದ್ರು .
ನಾವು ಎಲ್ಲ ಹೇಳಿ ,’ಅಲ್ಲಿ ನಮ್ಮನ್ನು ಜನ ಗುರಾಯಿಸ್ತಿದ್ದರು ಯಾಕೆ ಅಂತ ಗೊತ್ತಾಗಿಲ್ಲ ’ ಅಂದ್ವಿ .
ಅದಕ್ಕೆ ಆಫೀಸಿನವ್ರು ನಮ್ಮನ್ನೇ ಗದರಿಸೋದಾ?? " ಏನ್ರಪ್ಪ ಈ ರೀತಿ ಬಜರಂಗ ದಳದವ್ರ ಹಾಗೆ ನಾಮ ಇಟ್ಕೊಂಡು ಅಲ್ಲೆಲ್ಲ ಸುತ್ತಾಡೊದಾ ನೀವು? ಜೀವಂತ ವಾಪಸ್ ಬಂದಿದ್ದೆ ಪುಣ್ಯ ಕಣ್ರಯ್ಯ ನೀವು ,ಆ ಗಲ್ಲಿಯಲ್ಲಿ ನಿಮ್ಮನ್ನು ಕತ್ತರಿಸಿ ಬಿಸಾಡಿದ್ರೆ ಎಲ್ಲ ನಂ ತಲೆ ಮೇಲೆ ಬರ್ತಿತ್ತು " ಅಂತ !!!!

ಈಗ ಹೇಳಿ ಇದೆಯ ಧೈರ್ಯ ,ಎದೆ ತಟ್ಟಿ ಹೇಳೊಕೆ ನಾನೊಬ್ಬ ಹಿಂದು ಅಂತ??

ನಾನು ಹೇಳಿರೋದೆಲ್ಲ ಸಿನೆಮಾ ಕಥೆ ಥರ ಅನ್ನಿಸಬಹುದು ,ಆದ್ರೆ ಇದು ನಿಜ .

ಮಂಗಳೂರಿನಲ್ಲಿ ಮತಾಂತರ ಆದ್ರೆ ನಮಗೇನು ಪ್ರಾಬ್ಲೆಮ್ ಅಂತ ಅನ್ನಿಸಬಹುದು ನಿಮಗೆ.!
ಇಲ್ಲಿ ಬೆಂಗಳೂರಿನಲ್ಲಿ ಚಿಕನ್ ಗುನ್ಯ ಬಂದಾಗ ಮಂಗಳೂರಿನವ್ರಿಗೂ ಹಾಗೇ ಅನ್ನಿಸಿತ್ತು .ಅಲ್ಲಿ ಚಿಕನ್ ಗುನ್ಯ ಬಂದ್ರೆ ನಮಗೇನು ಅಂತ .ಆದ್ರೆ ಪುತ್ತೂರಲ್ಲಿ ಬಂದು ಹಾಸಿಗೆ ಹಿಡಿದು ಮಲಗಿದಾಗಲೇ ಗೊತ್ತಾಗಿದ್ದು ಅದರ ಕಷ್ಟ !!

ಹೀಗೆ ಮತಾಂತರ ಮುಂದುವರೀತ ಇದ್ರೆ ಪ್ರತ್ಯೇಕ ಕ್ರಿಶ್ಚಿಯನ್ ರಾಜ್ಯ/ರಾಷ್ಟ್ರಗಳಿಗೆ ಬೇಡಿಕೆ ಬರೋದಂತೂ ನಿಜ.ಬೇಡಿಕೆ ಬಂದ್ರೇನಂತೆ ಕೊಡೋಣ ಅಂತೀರಾ ಅಲ್ವ??
ಒಂದು ಕಾಶ್ಮೀರದ ಸಮಸ್ಯೇನೆ ಇನ್ನೂ ಬಗೆ ಹರಿದಿಲ್ಲ ಗೊತ್ತಲ್ವ??
ಹಿಂದಿಯಲ್ಲಿ ಒಂದು ಶಾಯರಿ ಇದೆ .

"ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಜಹಾಂ ಮೇರಿ ಕಶ್ತೀ ಡೂಬಿ ಪಾನೀ ವಹಾಂ ಕಮ್ ಥಾ............."

ಹಿಂದುಗಳೇ ಹಿಂದುಗಳ ಶತ್ರುಗಳಾಗಿರೋದು ಶೋಚನೀಯ!!!!!

Photo Courtesy : http://www.sciy.org/

28 comments:

Pramod said...

Wow..amazing..that was true inspiring post..
ಉಪ್ಪಿನ೦ಗಡಿ ಸಮೀಪದ ನೆಲ್ಯಾಡಿಯಲ್ಲಿ ಪೂರ್ತಿ Converted Christians ಇದ್ದಾರೆ. ಇಲ್ಲಿ ಮು೦ಚೆ SC/ST ಜನರೇ ಇದ್ರು. Missionary ಜನರು ಇವರ ಹತ್ರ ಬ೦ದು 'ಹಿ೦ದು'ಗಳು ನಿಮ್ಮನ್ನ ತುಚ್ಛ ರೀತಿಯಲ್ಲಿ ನೋಡ್ತಾರೆ ..caste,etc ಅ೦ತಾ brain wash ಮಾಡಿದ್ದಾರೆ.
ಹಿ೦ದುಗಳ ವಿರುದ್ಧ ಮಾತನಾಡುವುದು fashion ಆಗಿದೆ. ಅದೇ secularism ಅ೦ತಾ project ಮಾಡ್ತಾ ಇದ್ದಾರೆ.

Anonymous said...

Religion, philosophy is for the people who are content in life. For those whose daily bread itself is a question mark, religion makes little sense. For that matter the religion which gives bread would be the best for them. Isn't this synonymous to qualified people in our country who wouldn't settle for a moderately paying job in academic/research institutes, instead would move to highly paid MNC jobs? It’s all to do with survival instinct. People move to where they are given life.
Missionaries are clever enough to target such people who are depressed or in need of help who are susceptible to their preaching.

ಸಂದೀಪ್ ಕಾಮತ್ said...

@ radhika,

ನಾಳೆ ಒಬ್ಬ ಅರಬ್ ಶೇಕ್ ಬಂದು ಬಡವ್ರೆಲ್ಲ ಮುಸ್ಲಿಂ ಆಗ್ರಪ್ಪ ಬೇಕಾದಷ್ಟು ಹಣ ಕೊಡ್ತೀನಿ ಅಂತ offer ಕೊಟ್ರೆ ಅದನ್ನು ಒಪ್ಪಬೇಕ?
ಬಡವರಿಗೇನೋ ಬ್ರೆಡ್ ಸಿಗುತ್ತೆ ಆದ್ರೆ ದೇಶದ ಭದ್ರತೆ??

Anonymous said...

@Sandeep, to agree or disagree rests with the individual concerned. What you have mentioned is not far from happening unless we as a nation provide basic amenities to all the people. Same reason why poor countries in Africa have turned to Christianity over a period of time. We react to incidents emotionally and fail to see the root cause. Even to date, many people are not let into the temples in villages. It happened to IAS officer Shivaram! Then think of common people! Instead of addressing the issue, we want the downtrodden to remain there and resist any changes that could lead to better life for them. If by embracing Christianity some people could have better life who are we to stop it!

ಸಂದೀಪ್ ಕಾಮತ್ said...

@ Radhika,

ಒಬ್ಬ ಹಿಂದು ಬಡವನ ಪರಿಸ್ಥಿತಿ ಸುಧಾರಿಸಬೇಕು ಅಂತ ಕ್ರಿಶ್ಚಿಯನ್ ಮಿಶನರಿಗಳಿಗೆ ಮನಸ್ಸಿದ್ದರೆ ಹಾಗೇ ಮಾಡಬಹುದಲ್ಲಒಬ್ಬ ಹಿಂದುವನ್ನು ಕ್ರಿಶ್ಚಿಯನ್ ಆಗಿ ಪರಿವರ್ತಿಸಿ ಸಹಾಯ ಮಾಡುವ ಅಗತ್ಯವೇನು?

Yes what i have mentioned is far from happening UNTIL IT HAPPENS!

You said
'Even to date, many people are not let into the temples in villages'

ಅದೊಂದು ಪ್ರತ್ಯೇಕ ಸಮಸ್ಯೆ .ಅದನ್ನು ಇಲ್ಲಿ ಪರಿಗಣಿಸೋದು ಸರಿ ಅಲ್ಲ.
ಒಬ್ಬ ಪರಿವರ್ತಿತ ಕ್ರಿಶ್ಚಿಯನ್ ರೋಮನ್ ಕ್ಯಾಥೋಲಿಕ್ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸಬಹುದ??
ಕ್ರಿಸ್ಚಿಯನ್ ಸಮುದಾಯದಲ್ಲಿ ಪ್ರೊಟೆಸ್ಟೆಂಟ್ ,ರೋಮನ್ ಕ್ಯಾಥೋಲಿಕ್ ಅಂತೆಲ್ಲ ಭಿನ್ನಾಭಿಪ್ರಾಯಗಳಿಲ್ವ??ಅದೇನು ಪರಿಪೂರ್ಣ ಧರ್ಮ ನಾ?
ಭಜರಂಗ ದಳ ನಿಮಗೆ ಈಗ ವಿಲನ್ ಥರ ಕಾಣಿಸಬಹುದು ಆದ್ರೆ ಅದ್ರ ಅಗತ್ಯ ನಿಮಗೆ ’ಸಮಯ ಬಂದಾಗ ’ ಗೊತ್ತಾಗುತ್ತೆ( ನಾನು ಭಜರಂಗ ದಳದವರು ಖಂಡಿತ ಅಲ್ಲ ).
ಪೋಲಿಸರೆಲ್ಲ ಲಂಚಕೋರರು ,ಭ್ರಷ್ಟರು ಅಂತ ನಿಮಗೆ ಈಗ ಅನ್ನಿಸಬಹುದು ,ಆದ್ರೆ ನಾಳೆ ನಿಮ್ಮ ಮನೆಯಲ್ಲಿ ದರೋಡೆ ಆದಾಗ ಪೋಲೀಸ್ ಸ್ಟೇಶನ್ ಮೆಟ್ಟಿಲು ಹತ್ತುತ್ತಿರಲ್ಲ ಆಗ ಗೊತ್ತಾಗುತ್ತೆ ಅವರ ಮಹತ್ವ.
ಕನ್ನಡ ರಕ್ಷಣಾ ವೇದಿಕೆಯವ್ರು ಪುಂಡು ಪೋಕರಿಗಳು ಅಂತ ತಿಳ್ಕೋತೀರ ಈಗ ,ನಾಳೆ ಯಾವನಾದ್ರೂ ನಿಮಗೆ ಜಾತಿ ಆಧಾರಿತ ಪಾಲಿಟಿಕ್ಸ್ ನಡೆಸಿ ತೊಂದರೆ ಕೊಟ್ಟಾಗ ನೆನಪಾಗೋದು ಇದೇ ಕರಾವೇ!

ಸಂದೀಪ್ ಕಾಮತ್ said...

@ All

Please read this

http://greathindu.com/wp-content/uploads/2008/09/10.jpg

Harisha - ಹರೀಶ said...

ಯಾರ್ ತಿರುಗಿ ಬಿದ್ರೂ ಏನೂ ಆಗಲ್ಲ..

ಈ ದೇಶದ್ ಕಥೆ ಇಷ್ಟೇ ಕಣಮ್ಮೋ.. ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ...

Anonymous said...

ಈ ದೇಶಾನ ಈ ಕಾಂಗ್ರೆಸ್ಸಿನವರು ಮುಸ್ಲಿಂ ಹಾಗೂ ಕ್ರಿಷ್ಚಿಯನ್ನರಿಗೆ ಆಡವು ಇಟ್ಟಿದ್ದಾರೆ ಗೊತ್ತಾ?. ಕಂತ್ರಿ ಜನಾರ್ಧನ ಪೂಜಾರಿ, ಎಡಬಿಡಂಗಿ ಮೊಯಿಲಿ, ಕುಡ್ಚೆಲ ವಸಂತ ಬಂಗೇರ ಇವತ್ತು ಅಲ್ಪಸಂಖ್ಯಾತರ ಕಾಲು ನೆಕ್ಕುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕು. ಇವರನ್ನು ನಡುಬೀದಿಯಲ್ಲಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿ , ಹಳೇ ಎಕ್ಕಡದಲ್ಲಿ ಹೊಡೆಯಬೇಕು.

ಗುರು [Guru] said...

ಮೆಟ್ಟಲ್ಲಿ ಹೊಡೆಯಿರಿ ಹಿಂದೂ ವಿರೋಧಿಗಳಿಗೆ. ಹಿಂದೂ ವಿರೋಧಿಗಳನ್ನು ಈ ದೇಶದಿಂದಲೇ ಓಡಿಸಿದರೆ ಮಾತ್ರ ನಾವು ನೆಮ್ಮದಿ ಜೀವನ ನಡೆಸಬಹುದು.

ವಿವರಗಳಿಗೆ ಈ ನನ್ನ ಬ್ಲಾಗ್ ನೋಡಿ.
http://kannadaputhra.blogspot.com

Anonymous said...

@Sandeep,
you are adding dimensions to my comments! That way you can invite more comments from more people!

Anonymous said...

Sir,

yaavudE samasye, vishayavannu yaavaaglu eradu mukhagaLinda nODOke.

yellarigoo avaravara nambike irutte. adannu yaaroo prashnisuvaa hagoo illa. balavanthada mataanthara yaavattigidroo tappE. avaru bEkidre duddina aamisha tOrisali illa inyaavudE maarga anusarisali adannu sari anta yaaroo samarthane madalu aagodilla.

kaTTaDavannu kaayalu security iDO vishaya hELidri. adE bEre. idE bEre allave. kaTTaDa kaayalu security iDOdu kaanoonina prakaara tappu athava anyaaya allavalla.

aadare ee vishayadalli mataantara adaralloo balavanthada mataantara tappadaroo kooDaa adakke pratibhatane tOroKe kaanoonu kaigettikollOdu esthu sari annOdashte nanna prashne. sadhyada kaanooninalli bEkiddare sooktha maarpatu maadi idannu tadeyalu yatnisabahudalla.

haagantha ee reeti daaLiyinda samasye bagehariyutaa? adoo illa. adu innashTu matheeya sangarshakke naandi haaDabahudEno anno digilu nannadu.

heege maaDuva badalu mataantara maaDuvavarannu red-hand aagi hiDidu avarige tadukidre aagalaadroo ondu artha irutte.

oLLeyavaru ketTtavaru ella dharmagaLalloo iddare. aa kelavara tappige idee samudaayakke manassige nOvaaguvantha krama swalpa ati antha nanna anisike.

heege galaaTe band aadre naavu baree charche maadtivi. aadre adara nera parinaama aagOdu dinada anna dinavE dudidu tinnuva badavarigE allave.

so samasyeyannu innashtu jaTilagoLisuva badalu extreme allada madhyama maarga saadhavillavE? naavella yochisabekalvE? hindugaLoo, christianaaroo.. muslimaru ellaroo..

naa hElOde sari annO vada nannadalla. ee reeti charche nadedaagale samasyeya vividha aayamagaLa bagge inashtu belaku chellalu saadhya...

aadaroo nanage neevu bareda lekhana, adaanu prastutapadisida reeti thumbaane ishta aaytu, kelavu sanna puuta abhipraaya vyatyaasagala horataagiyoo

Anonymous said...

ಆಹಾ ! ಸಕತ್ ಆಗಿ ಥೇಟ್ ಮಂಗಳೂರು ಹುಡುಗನ ತರಹವೇ ಬರದಿದ್ದೀರಾ.
ನೀವು ನೀಡಿದ ಉಪಮೆಗಳು ಮಸ್ತ್ ಆಗಿವೆ.
'ಖೇತಾನ್ ಫ್ಯಾನ್ ಕೆಳಗೆ ಜ್ಞಾನೋದಯ, 21st century ಮಗು ಕಣ್ರಿ, ಹೆಂಡತಿ ಮೇಜರ್ ಅಲ್ವ, ಪುತ್ತೂರಲ್ಲಿ ಬಂದು ಹಾಸಿಗೆ ಹಿಡಿದು ಮಲಗಿದಾಗಲೇ ಗೊತ್ತಾಗಿದ್ದು ಅದರ ಕಷ್ಟ,'
and
added Photo Courtesy!!!
cooooooool :)

ಸಂದೀಪ್ ಕಾಮತ್ said...

@ neelanjala,

ಯಾಕೋ ನನ್ನ ಈ ಲೇಖನ ಮೆಚ್ಚಿದ್ದಕ್ಕೆ ಯಾರಿಗೂ ಧನ್ಯವಾದ ಹೇಳೊಕೆ ನನಗೆ ಮನಸಿಲ್ಲ.ಯಾಕಂದ್ರೆ ಯಾರನ್ನೂ ಓಲೈಸಲಿ ,ಮೆಚ್ಚಿಸಲು ಬರೆದ ಲೇಖನ ಇದಲ್ಲ.ಒರಿಸ್ಸಾದಲ್ಲಿ ಅಷ್ಟೊಂದು ಹಿಂಸಾಚಾರ ಆದ್ರೂ ನನಗೆ ಏನೂ ಬರೆಯಬೇಕೆಂದು ಅನಿಸಿರಲಿಲ್ಲ,ಯಾಕಂದ್ರೆ ನನಗೆ ಅಲ್ಲಿಯ ಸತ್ಯಾಂಶಗಳ ಬಗ್ಗೆ ಏನೂ ಗೊತ್ತಿಲ್ಲ.
ಹಾಗಂತ ಮಂಗಳೂರಿನಲ್ಲಿ ನಡೆದ ಗಲಬೆಯ ಸಂಪೂರ್ಣ ವರದಿ ನನ್ನಲ್ಲಿಲ್ಲ(ಆಚಾರ್ಯರ ಬಳಿ ಇರೋದೇ ಡೌಟು !)ಆದ್ರೆ ನಾನೂ ಮಂಗಳೂರಿನವನಾದ್ದರಿಂದ ,ಅಲ್ಲಿಯ ಪರಿಸ್ಥಿತಿ ಅಲ್ಪ ಸ್ವಲ್ಪ ಗೊತ್ತಿದ್ರಿಂದ ಬರೀಬೇಕಾಯ್ತು.

@ ವಿಜಯ್ ,
ವಿಜಯ್ ನನಗೆ ನಿಮ್ಮ ಕಾಳಜಿ ಖಂಡಿತ ಅರ್ಥ ಆಗುತ್ತೆ.ನಿಮ್ಮ ಕಾಳಜಿಗೂ ಬುದ್ಧಿಜೀವಿಗಳ ಕಾಳಜಿಗೂ ತುಂಬಾ ವ್ಯತ್ಯಾಸವಿದೆ.
ಕಾನೂನಿನ ಪ್ರಕಾರ ಎಲ್ಲಾ ಸಾಧ್ಯವಿದ್ದಲ್ಲಿ ತುಂಬಾನೇ ಚೆನ್ನಾಗಿರ್ತಿತ್ತು,ಆದ್ರೆ ಅದು ಸಾಧ್ಯವಿಲ್ಲ ಅಲ್ವ?
ಮಂಗಳೂರಿನಲ್ಲಿ ನಡೆದ ಹಿಂಸೆಗೆ ನನ್ನ ಸಹಮತಿಯಿಲ್ಲ,ಆದ್ರೆ ಹಿಂದಿಯಲ್ಲಿ ಒಂದು ಹೇಳಿಕೆಯಿದೆ,
’ಲಾತೋಂಕೆ ಭೂತ್ ಬಾತೋಂಸೆ ನಹೀ ಮಾನ್ ತೇ ’ ಅಂತ .
ಗಾಂದೀಜಿಯ ಅನುಯಾಯಿಗಳು ಆಂದುಕೊಂಡಿರಬಹುದು ಸ್ವಾತಂತ್ರ್ಯ ಅಹಿಂಸೆಯಿಂದ ಸಿಕ್ಕಿದ್ದು ಅಂತ,ಆದ್ರೆ ನನ್ನ ಪ್ರಕಾರ ಸ್ವಾತಂತ್ರ್ಯ ಸಿಕ್ಕಿದ್ದು ಭಗತ್ ಸಿಂಗ್,ಬೋಸ್ ಅಂಥವರ ಪ್ರಯತ್ನದಿಂದ!
ಒಂದು ಕಾಯಿಲೆಗೆ ಆಲೋಪತಿ ,ಆಯುರ್ವೇದ ಎರಡನ್ನೂ ತಗೊಂಡ್ರೆ ಯಾವುದ್ರಿಂದ ಗುಣ ಆಯ್ತು ಅಂತ ಕನ್ ಫ್ಯೂಶನ್ ಇರುತ್ತಲ್ವ ಆ ರೀತಿ ಇದು.
’heege maaDuva badalu mataantara maaDuvavarannu red-hand aagi hiDidu avarige tadukidre aagalaadroo ondu artha irutte. ’ ಅಂತ ಹೇಳಿದ್ರಿ ನೀವು! ಎಷ್ಟು ಕಡೆ ತದಕಿಲ್ಲ ವಿಜಯ್ .ಆದ್ರೂ ಬುದ್ಧಿ ಬರಲ್ವಲ್ಲ ಅವ್ರಿಗೆ?
ನನ್ಗೆ ಮಂಗಳೂರಿನ ರೋಮನ್ ಕ್ಯಾಥೋಲಿಕ್ ರ ಬಗ್ಗೆ ಅಪಾರ ಗೌರವವಿದೆ (ಬೇರೆ ಊರಿನರು ಹೇಗೊ ಗೊತ್ತಿಲ್ಲ).
ನೀವು ಮತಾಂತರಗೊಂಡ ಕ್ರಿಸ್ಚಿಯನ್ ರ ಪ್ರಾರ್ಥನಾ ಮಂದಿರಕ್ಕೆ ಒಂದು ಸಲ ಭೇಟಿ ಕೊಟ್ಟು ನೋಡಿ ,ಪ್ರಾರ್ಥನೆಗಿಂತ ಜಾಸ್ತಿ ಅಲ್ಲಿ ಹಿಪ್ನೋಟಿಸಂ ಥರ ನಡೀತಾ ಇರುತ್ತೆ !
ನಮ್ಮ ಹಿಂದೂ ಧರ್ಮ ಬದುಕಿಗೆ ತುಂಬಾ ಹತ್ತಿರವಾದದ್ದು .ನಮಗೆ ತೊಂದರೆ ಕೊಟ್ಟವರಿಗೆ ತಕ್ಕ ಶಾಸ್ತಿ ಮಾಡೋದು ಹೇಳಿ ಕೊಡುತ್ತೆ ಹಿಂದೂ ಧರ್ಮ ,ಅದು ಬಿಟ್ಟು ’ಎಲ್ಲರನ್ನೂ ಪ್ರೀತಿಸು ,ಶಾಂತಿಯಿಂದಿರು ಅಂತ ಮುಂದೆ ಹೇಳಿ ಸಿಕ್ಕ ಸಿಕ್ಕಲ್ಲೆಲ್ಲ ಬಾಂಬ್ ಇಡೋದನ್ನು ನಮ್ಮ ಧರ್ಮ ಯಾವತ್ತೂ ಹೇಳಿಲ್ಲ.ಇಂಥ ಕಾರಣಕ್ಕೇ ಹಿಂದೂ ಧರ್ಮ ಸಹಸ್ರಾರು ವರ್ಷಗಳಿಂದ ಜೀವಂತವಾಗಿರೋದು.
ಪ್ರತಾಪ್ ಸಿಂಹ ರ ಥರ ನನ್ನ ವಾದಗಳನ್ನು ಸಾಬೀತು ಪಡಿಸಲು ನನ್ನ ಹತ್ತಿರ ಅಂಕಿ ಅಂಶಗಳಿಲ್ಲ ,ಅಂಥ ಪಾಂಡಿತ್ಯ ಕೂಡಾ ನನಗಿಲ್ಲ.
ನಾಳೆ ಕ್ರಿಶ್ಚಿಯನ್ ರಿಗೆ ಏನಾದ್ರೂ ಆದ್ರೆ ಅದನ್ನು ಖಂಡಿಸಲು ಜಗತ್ತಿನ್ನಲ್ಲಿ ಸಾಕಷ್ಟು ಕ್ರೈಸ್ತ ದೇಶಗಳಿವೆ,ಮುಸ್ಲಿಮರಿಗೂ ಏನಾದ್ರೂ ಆದ್ರೆ ಉಳಿದ ಮುಸ್ಲಿ ದೇಶಗಳಿಂದ ನೆರವು ,ಹಣ ದಂಡಿಯಾಗಿ ಹರಿದು ಬರಬಹುದು.
ಆದ್ರೆ ಹಿಂದುಗಳಿಗೇನಾದ್ರೂ ಆದ್ರೆ ಇರೋದೊಂದೆ ದೇಶ ಭಾರತ(ನೇಪಾಳ ಇದೆ ಅದು ಏನ್ ಮಾಡುತ್ತೋ ದೇವ್ರಿಗೇ ಗೊತ್ತು!).
ಬೇರೆ ಯಾರದ್ದೋ ಹೆಂಡತಿ,ಮಗಳ ರೇಪ್ ಆದ್ರೆ ಇಲ್ಲಿ ಕೂತು ಕೇಸ್ ಹಾಕ್ರಿ IPC section 375 ಇದೆ ಅನ್ತೀವಿ ನಾವು .ಆದ್ರೆ ನಮ್ಮ ಅಕ್ಕ ,ತಂಗಿಯರಿಗೆ ಈ ರೀತಿ ಆದಾಗ ರೇಪ್ ಮಾಡಿದವನ ತಲೆ ಒಡೆಯೋಣ ಅನ್ನಿಸಲ್ವ?
ಮತಾಂತರ ಮಾಡಿಸಲು ಲಕ್ಷಗಟ್ಟಲೆ ಡಾಲರ್ ಬರುತ್ತಾದ್ರೆ ಅವರು ಸಿಕ್ಕಿ ಬಿದ್ರೆ ಜೈಲಿಂದ ಬಿಡಿಸಲು ಡಾಲರ್ ಗಳು ಬರಲ್ವ ವಿಜಯ್??
ನಾನು ಹೀಗೆ ಬರೀತ ಇದ್ರೆ ಕಾನೂನು ನಿಂದನೆ ಕೇಸ್ ಹಾಕಿ ನನ್ನನ್ನ ಒಳಗೆ ಹಾಕ್ತಾರೆ ಅಷ್ಟೆ -ಬಿಡಿಸಲು ನನ್ನ ಬಳಿ ಡಾಲರ್ ಗಳಿಲ್ಲ !

ವಿ.ರಾ.ಹೆ. said...

ನೇಪಾಳದಲ್ಲಿ ಮಾವೋವಾದಿ ’ಪ್ರಚಂಡ’ ಅಧಿಕಾರಕ್ಕೆ ಬಂದಮೇಲೆ ಅದು ಹಿಂದೂ ದೇಶವಾಗಿ ಉಳಿದಿಲ್ಲ. ಅವರು ಅದನ್ನು ಭಾರತದ ರೀತಿ ಬಹುಧರ್ಮಗಳ ದೇಶ ಅಂತ ಘೋಷಿಸಿದ್ದಾರೆ. ಈಗ ಜಗತ್ತಿನಲ್ಲಿ ಯಾವುದೇ ಹಿಂದೂ ದೇಶವಿಲ್ಲ!


ವಿಷ್ಯಕ್ಕೆ ಬಂದರೆ.. ಹಸಿವು, ಹಣದ ಮುಂದೆ ಧರ್ಮ ಎಲ್ಲವೂ ಗೌಣವಾಗಿ ಬಿಡುತ್ತದಾ ಅಂತ. ಅದನ್ನೇ ’ಅವರು’ ಬಳಸಿಕೊಳ್ಳುತ್ತಿರುವುದು. ಜೊತೆಗೆ ಈ ಸೋಗಲಾಡಿ ಜಾತ್ಯತೀತವಾದಿಗಳ ರಾಜಕೀಯ . ’ನಮ್ಮದೂ’ ತಪ್ಪಿದೆ, ಆದರೆ ಅವರದ್ದು ತಪ್ಪು ಇಲ್ಲ ಅಂತ ಹೇಳುವಂತಿಲ್ಲ. ಅಥವಾ ನಮ್ಮ ತಪ್ಪಿನಿಂದ ಅವರದ್ದು ಸರಿಯಾಗಿಬಿಡುವುದಿಲ್ಲ.

ಈ ದೇಶವನ್ನು ಕಾಪಾಡು ಪ್ರಭುವೇ..

ಸಂದೀಪ್ ಕಾಮತ್ said...

@ vikas

ಥ್ಯಾಂಕ್ಸ್ ಕಣೊ ನೇಪಾಳದ ಬಗ್ಗೆ ತಿಳಿಸಿದ್ದಕ್ಕೆ !ಗೊತ್ತಿರ್ಲಿಲ್ಲ ನಂಗೆ.

ಅವರಿಗೆ ಸಹಾಯ ಮಾಡುವ ಮನಸ್ಸು ನಿಜವಾಗ್ಲೂ ಇದ್ದಿದ್ರೆ ಹಿಂದುಗಳಿಗೆ ಹಿಂದುಗಳಾಗಿರೋದಕ್ಕೆ ಬಿಟ್ಟು ಸಹಾಯ ಮಾಡ್ಲಿ .ಯಾರು ಬೇಡ ಅಂದ್ರು.
ಅಷ್ಟಕ್ಕೂ ಅವರ ಮೇಲೆ ದಾಳಿ ಆಗಿದ್ದಕ್ಕೆ ನೋವಾಗಿದ್ದು ಹಿಂದುಗಳಿಗೇ ಜಾಸ್ತಿ .
ಮಂಗಳೂರಿನಲ್ಲಿ ಎಲ್ಲೂ ಅವರ ಮೇಲೆ ದೈಹಿಕ ಹಲ್ಲೆ ಆಗಿಲ್ಲ .ಮಾಡ್ಲೇ ಬೇಕೆದಿಂದ್ರೆ ದೈಹಿಕ ಹಲ್ಲೇನೂ ಮಾಡ್ತಾ ಇದ್ರು ಅಲ್ವ? ಅದೇ ವ್ಯತ್ಯಾಸ ಅಲ್ ಕಾಯಿದೆ ಹಾಗೂ ಇತರ ಸಂಘಟನೆಗಳಿಗೆ.

Anonymous said...

ಸಂದೀಪ,
ನೀವೇನೋ ಯಾರನ್ನೂ ಮೆಚ್ಚಿಸ್ಲಿಕ್ಕೆ ಈ ಲೇಖನ ಬರೀಲಿಲ್ಲ, ಸರಿ. ಆದ್ರೆ ನನ್ನಿಂದ ಮೆಚ್ಚದೆ ಇರೋಕಾಗ್ಲಿಲ್ಲ. ಯಾರು ರಾಷ್ಟ್ರದ ಬಗ್ಗೆ ನಿಜವಾದ ಕಾಳಜಿ ಹೊಂದಿರ್ತಾರೋ ನಾನು ಅವರ ಅಭಿಮಾನಿ. ಈಗ ನಿಮ್ಮ ಅಭಿಮಾನಿ ಕೂಡಾ.
ಬಹಳ ಚೆನ್ನಾಗಿ ಬರ್ದಿದೀರಿ. ಬರೀತಾ ಇರಿ.

ವಂದೇ,
ಚೇತನಾ ತೀರ್ಥಹಳ್ಳಿ

Anonymous said...

ಒಳ್ಳೆಯ ಬರಹ. ನಾನು ಕೂಡ ಮತಾಂತರ ವಿರೋಧಿಸುವೆ. ಆದರೆ ವಿರೋಧಕ್ಕಿಂತ ಮೊದಲು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾನು ಬುದ್ದಿಜೀವಿಗಳ ತರ ಮಾತನಾಡುತ್ತಿಲ್ಲ ಖಂಡಿತ. ಆದರೆ ಎಲ್ಲೋ ಒಂದು ಕಡೆ ನಮ್ಮಲ್ಲಿರುವ ಹುಳುಕಗಳನ್ನು ಅವರು ಉಪಯೋಗಿಸಿಕೊಳ್ಳುತ್ತಿದ್ದಾರೆ ಅನ್ನೋದು ಸುಳ್ಳಲ್ಲ. ಇವತ್ತಿಗೂ ಮೇಲ್ವರ್ಗದ ಜನ (ನನ್ನನ್ನು ಸೇರಿದಂತೆ) ನಮ್ಮ ದಲಿತ ಬಂಧುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯಿದೆಯಲ್ಲ ಅದು ನಿಜಕ್ಕೂ ಕಳವಳಕಾರಿ. ಅವರಿಗೆನ್ದಿಗು ನೀವು ನಮ್ಮವರು ಅಂತ ನಾವು ಹೇಳಲೇ ಇಲ್ವಲ್ಲ, ಮತ್ತು ಅವರಿಗೂ ಅವರು ನಮ್ಮವರಂತೆ ಅನ್ನಿಸುವ ಹಾಗೆ ನಾವು ನಡೆದುಕೊಳ್ಳಲೇ ಇಲ್ವಲ್ಲ. ತೀರ ಇತ್ತೀಚಿಗೆ ಮೈಸೂರ್ ನ ಹಳ್ಳಿಯೊಂದರಲ್ಲಿ ದಲಿತ ಯುವಕನೊಬ್ಬ ದೇವಸ್ತಾನ ದ ಮೆಟ್ಟಿಲು ಹತ್ತಿದ ಕಾರಣಕ್ಕೆ ಅವನ ಕಾಲು ಕಡಿದರು ಮೇಲ್ವರ್ಗದ ಜನ. (ಅವರು ಬ್ರಾಹ್ಮಣರಾಗಿದ್ದರು ಅಂತ ಹೇಳಿ ಕೊಳ್ಳೋಕೆ ನಂಗೆ ನಾಚಿಕೆಯಾಗುತ್ತೆ). ಹೀಗಿರುವಾಗ ನಾವು ಯಾವ ನೈತಿಕತೆ ಇಟ್ಟುಕೊಂಡು ಮತಾಂತರದ ಬಗ್ಗೆ ಮಾತನಾಡಬೇಕು? . ಅದರರ್ಥ ಮತಾಂತರ ಆಗಲೀ ಅಂತಲ್ಲ, ಆದರೆ ಈ ಮೇಲು ಕೀಳಿನ ವಿಕೃತಿ ಯನ್ನು ದೂರಾಗಿಸದೆ ನಾವು ಎಷ್ಟು ಇದರ ಬಗ್ಗೆ ಚರ್ಚಿಸಿದರು ವ್ಯರ್ಥವೇನೋ ಅನ್ಸುತ್ತೆ. ನಾವು ವೈಟ್ ಕಾಲರ್ ಜನ, ನಮಗೆ ಸ್ಲಮ್ ಗಳೆಂದರೆ ಅಸಹ್ಯ . ಅಲ್ಲಿಯ ಜನರೆಂದರೆ ನಮಗೆ ವಾಕರಿಕೆ. ಆದರೆ ಕಿರಿಸ್ಥಾನರಿಗೆ ಹಾಗಲ್ಲ. ನಮ್ಮ ಧರ್ಮದ ಗುರುಗಳಿಗೆ ಹಿಂದೆ ಮುಂದೆ ಜನ ಬೇಕು. ಅವರಿಗೆ ಪೀಠ ಕೊಟ್ರಷ್ಟೇ ಅವರು ಊರಿಗೆ ಬರ್ತಾರೆ. ಆದರೆ ಒಬ್ಬ ಫಾದರ್ ಅದ್ಯವುದರ ಗೊಡವೆ ಇಲ್ಲದೆಯೇ ಕೊಲೆಗೆರಿಗೆ ನಡೆದು ಬರಬಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಅಂತ ಅವರ ಮೈದಡವಿ ಹೇಳಬಲ್ಲ. ನಮ್ಮ ಎಷ್ಟು ಜನ , ಎಷ್ಟು ಸಂಘಟನೆಗಳು ಈ ಕೆಲಸ ಮಾಡಿವೆ ಹೇಳಿ. ಅದಿರಲಿ ದಲಿತರ ಬಗ್ಗೆ, ಬಡವರ ಬಗ್ಗೆ ಕಣ್ಣೀರು ಬರುವಂತೆ ತಮ್ಮ ಕತೆ ಕಾದಂಬರಿಗಳಲ್ಲಿ ಬರೆದ ಎಷ್ಟು ಜನ ,ಸಾಹಿತಿ' ಮಹೋದಯರು ಈ ಕೆಲಸ ಮಾಡಿದ್ದಾರೆ?. ನನಗೆ ತಿಳಿದಂತೆ 'ಹಿಂದೂ ಸೇವಾ ಪ್ರತಿಷ್ಠಾನ' ವೊಂದು ಪ್ರಾಮಾಣಿಕವಾಗಿ ಈ ಕೆಲಸ ಮಾಡುವ ಪ್ರಯತ್ನ ಮಾಡಿದೆ. ಬಹುತೇಕ ರದು ಈ ವಿಷಯದಲ್ಲಿ ಮೊಸಳೆ ಕಣ್ಣೀರು ಅಷ್ಟೆ. ನಮ್ಮವರೇ ಆದ ತಿಮ್ಮ, ಮುನಿಯ, ಕೆಂಪ, ಬಸ್ಯ, ಕೆಂಚಮ್ಮ ರ ಬಗ್ಗೆ ನಮಗೆ ಕಾಳಜಿ ಇಲ್ಲವಾದಾಗ ಅದಕ್ಕಾಗಿಯೇ ಕಾಯುತ್ತಿರುವ ಅವರು ಸಹಜವಾಗಿ ಅದನ್ನು ಉಪಯೋಗಿಸಿಕೊಂಡು ಅವರ ಕೊರಳಿಗೆ ಶಿಲುಬೆ ಹಾಕಿ ಸಿಮೋನ್, ಅಲೆಕ್ಸಾಂಡರ್, ಜಾರ್ಜ್, ಮೇರಿಯಮ್ಮ ಅಂತೆಲ್ಲ ಹೆಸರಿತ್ತು ಮತ್ತಂತರ ಮಾಡಿಬಿಡುತ್ತಾರೆ. ಮೊದಲ ತಪ್ಪು ನಮ್ಮೆಲ್ಲರದು ಇದೆ. ಆತ್ಮ ವಿಮರ್ಶೆಗೆ ಇದು ಖಂಡಿತ ಸಕಾಲ. ---ರಾಮ ಮೋಹನ ಹೆಗಡೆ, ಬೆಂಗಳೂರು.

Anonymous said...

tumba chennaagide. naanantu hindu endu edetatte helaballe!!

ಸಂದೀಪ್ ಕಾಮತ್ said...

@ Rammohan Hegde,

ಸರ್ ,
ನೀವು ಹೇಳಿದ ಮಾತುಗಳಲ್ಲಿ ಯೋಚಿಸಬೇಕಾದದ್ದು ತುಂಬಾ ಇದೆ.
ಆದ್ರೆ ಒಂದು ವಿಷಯ ನಾವೆಲ್ಲ ತಿಳ್ಕೋಬೇಕು.ಮತಾಂತರ ಮಾಡೋರ strategy ಬದಲಾಗಿದೆ ! ಈಗ ಅವರು ಮುನಿಯ, ಕೆಂಪ, ಬಸ್ಯ, ಕೆಂಚಮ್ಮರ ಹೆಸರನ್ನು ಖಂಡಿತ ಬದಲಾಯಿಸೋದಿಲ್ಲ.ಮತಾಂತರಗೊಂಡವರ ಹೆಸರು ,ವೇಷಭೂಷಣ ನೋಡಿ ಯಾರೂ ಅವರನ್ನು ಕ್ರಿಶ್ಚಿಯನ್ ಅಂತ ಗುರುತಿಸೋಕೆ ಸಾಧ್ಯ ಇಲ್ಲ ಈಗ.ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಕ್ರಿಶ್ಚಿಯನ್ ಅಂತ ಹೇಳೋಕೆ ಸಾಧ್ಯ ನಾ? ಆದ್ರೆ ಮಾನಸಿಕವಾಗಿ ಅವರನ್ನು ಕ್ರಿಶ್ಚಿಯನ್ ಆಗಿ ಪರಿವರ್ತಿಸಲಾಗುತ್ತಿದೆ.
ಭಾರತದಲ್ಲಿ ೬೦ ಶೇಕಡಕ್ಕಿಂತ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ದುಡೀತಾರೆ ಅಂತ ಎಲ್ಲೋ ಓದಿದ್ದೀನಿ,ಹಾಗಂತ ಅವರನ್ನೆಲ್ಲ ಕ್ರಿಶ್ಚಿಯನ್ ಆಗೋಕೆ ಬಿಡೋದಾ??
ಭಾರತ ಸರ್ಕಾರಕ್ಕಿಂತ ಪಾಕಿಸ್ತಾನ ಸರ್ಕಾರ ಸೈನಿಕರಿಗೆ ಜಾಸ್ತಿ ಸಂಬಳ ಕೊಡ್ತೀನಿ ಅಂದ್ರೆ ಅವರು ಪಾಕಿಸ್ತಾನಿ ಸೈನಿಕರಾಗ್ತಾರಾ? No Way!!!

ಈ ಮತಾಂತರಗೊಂಡವರಿಗೆ ಎಲ್ಲಾ ಸಹಾಯಗಳು ಮತಾಂತರಗೊಳ್ಳುವವರೆಗೆ ಮಾತ್ರ. ಆಮೇಲೆ ಚಿಪ್ಪೇ ಗತಿ.
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇನು?? ಅಲ್ವ??
’ಕೆಲವು ಕಂಪೆನಿಗಳ’(?) HR ಗಳು ನೀವು ಕೆಲಸಕ್ಕೆ ಸೇರುವ ತನಕ ’ನೀನೇ ಚಿನ್ನ,ನೀನೇ ರನ್ನ ’ ಅಂತಾರೆ .ನೀವು ಕೆಲಸಕ್ಕೆ ಸೇರಿದ ಮೇಲೆ ,ಅವರ ಟಾರ್ಗೆಟ್ ರೀಚ್ ಆದ್ಮೇಲೆ ನೀನ್ಯಾರೋ ,ನಾನ್ಯಾರೋ !!!

hEmAsHrEe said...

religion has never made, world a better place to live. Mankind, since centuries has witnessed wars, conflicts over the religion.
religion is apolitical but, Personal.
Sadly, in today's context, it has become political and apersonal.
no religion can claim the supremacy by just outnumbering the other.
religion is a solace, a self-defence and extremely related to one's way of living. By force, no one has a right to covert any person. if any person or a group does so, then above all there is a LAW. it has to dealt in a legal way. But unfortunately, in India, we are such a corrupt system that we do not learn lessons from our past mistakes.

sunaath said...

ಮತಾಂತರದ ವಿಷಯ ಅಲ್ಲ, spelling mistake ವಿಷಯ ಒಂದು ಹೇಳಲೇ ಬೇಕಾಗಿದೆ.
’ಭಜರಂಗ’ ಇದು ತಪ್ಪು ಪದ;’ಬಜರಂಗ’ ಇದು ಸರಿಯಾದ ಪದ. ಹನುಮಂತನ ಹೆಸರಾದ ’ವಜ್ರಾಂಗ’ ಇದರ ತದ್ಭವ ’ಬಜರಂಗ’.
ಎಲ್ಲರೂ, ಮುಖ್ಯವಾಗಿ ಬಜರಂಗಿಗಳು ಈ ಅಂಶವನ್ನು ಗಮನಿಸಬೇಕು,please.

ಸಂದೀಪ್ ಕಾಮತ್ said...

ಸುನಾಥ್ ರವರೇ,
ತಪ್ಪಿಗೆ ಕ್ಷಮೆಯಿರಲಿ.ಮುಂದೆ ಈ ತಪ್ಪು ಆಗದಂತೆ ನೋಡಿಕೊಳ್ಳಲಾಗುವುದು.

@ Hemashri

ನೀವು ಕೂಡಾ ವಿಶ್ವಮಾನವ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರೋ ಹಾಗಿದೆ.
ನೀವು ಅಮೆರಿಕಾದಲ್ಲಿದ್ದೀರಲ್ವ ಪಕ್ಕದಲ್ಲಿರೋ ಕ್ರಿಷ್ಚಿಯನ್ ಒಬ್ಬರಿಗೆ ನಿಮ್ಮ ಸಿದ್ಧಾಂತ ಹೇಳಿ .ಅವನು ಧರ್ಮ ಬೇಡ್ವೇ ಬೇಡ ಎಂದು ಹೇಳಲಿ ನೋಡೋಣ.
ಯಾರಾದ್ರೂ ಮುಸ್ಲಿಂ ಸಿಕ್ಕಿದ್ರೆ ಅವರ ಹತ್ರಾನೂ ಈ ಬಗ್ಗೆ ಪ್ರಸ್ತಾವ ಮಾಡಿ ನೋಡಿ ,’ನಾವೆಲ್ಲ ಐಕ್ಯಮತದಲ್ಲಿದ್ದು ಬಿಡೋಣ ದೇವರು,ಧರ್ಮವನ್ನು ಗಾಳಿಗೆ ತೂರಿಬಿಡೋಣ ಎಂದು!
ಅವನೂ ಖಂಡಿತ ಒಪ್ಪಲ್ಲ.
ಅದೇ ಒಬ್ಬ ಹಿಂದು ಸಿಕ್ರೆ ಅವನ ಹತ್ತಿರ ಕೇಳಿ ನೋಡಿ .ಅವನು ನಿಮ್ಮ ಜೊತೆ ದನಿ ಗೂಡಿಸ್ತಾನೆ!ಅವನು ದನಿ ಗೂಡಿಸಿಲ್ಲ ಅಂದ್ರೂ ಇನ್ನು ಕೆಲವರಾದ್ರೂ ದನಿ ಗೂಡಿಸ್ತಾರೆ.ಇದು ನಮಗೆ ಹಿಂದು ಧರ್ಮ ಕೊಟ್ಟಿರೋ ಸ್ವಾತಂತ್ರ್ಯ.ಅದಿಕ್ಕೇ ಈ ಪ್ರಪಂಚದಲ್ಲಿ ಹಿಂದೂ ಧರ್ಮದ ವಿರುದ್ಧ ಮಾತಾಡೋರು ಸಿಗ್ತಾರೆ.
ಧರ್ಮ ಅನ್ನೋದು ಪೊಳ್ಳಾಗಿದ್ರೆ ಅದು ಸಾವಿರಾರು ವರ್ಷದಿಂದ ಜೀವಂತವಾಗಿರ್ತಿರ್ಲಿಲ್ಲ ಹೇಮಾ.
ನೀವು ಧರ್ಮವನ್ನು ಬಿಡಲು ತಯಾರಿರಬಹುದು ಆದ್ರೆ ನಿಮ್ಮ ಸಹೋದ್ಯೋಗಿಗಳಾದ ಮುಸ್ಲಿಂ,ಕ್ರಿಶ್ಚಿಯನ್ ರು ಖಂಡಿತಾ ಬಿಡಲ್ಲ.
ಅದೇನೆ ಐಟಿ,ಬಿಟಿ,ಇಂಟರ್ನೆಟ್ ಗಳು ಬಂದ್ರೂ ಧರ್ಮ ನಮ್ಮನ್ನು ಬಿಟ್ಟು ಹೋಗಲು ಸಾಧ್ಯ ಇಲ್ಲ.ಇಂಟರ್ನೆಟ್ ಬಂದದ್ರಿಂದ ಇಂಟರ್ನೆಟ್ ನಲ್ಲೇ ಭವಿಷ್ಯ,ಜಾತಕ ನೋಡ್ತೀವಿ ವಿನಹ ಧರ್ಮವನ್ನು ಬಿಡಲ್ಲ.
ಇಸ್ರೋದಲ್ಲಿ ಕೆಲಸ ಮಾಡ್ತಿರೋ ಸಾವಿರಾರು ಜನ ವಿಜ್ಞಾನಿಗಳು ಕೂಡ ಸಾಟೆಲೈಟ್ ಲಾಂಚ್ ಮಾಡೋಕೆ ಮುನ್ನ ದೇವರನ್ನು ಪ್ರಾರ್ಥಿಸುತ್ತಾರೆ ಗೊತ್ತಾ??

ನಾನೆಷ್ಟೆ ಸಮಜಾಯಿಶಿ ನೀಡಿದ್ರೂ ಜನ ಪದೇ ಪದೇ ಕಾನೂನಿನ ಬಗ್ಗೆ ಮಾತಾಡ್ತಾರೆ .ಅಷ್ಟರ ಮಟ್ಟಿಗೆ ಕಾನೂನಿನ ಬಗ್ಗೆ ನೀವೆಲ್ಲರೂ ನಂಬಿಕೆ ಇಟ್ಟಿರೋದು ನಮ್ಮ ದೇಶದ ಸೌಭಾಗ್ಯ!

ಸುಧೇಶ್ ಶೆಟ್ಟಿ said...

ಹಿ೦ದೂ ಎ೦ದು ಎದೆ ತಟ್ಟಿ ಹೇಳಬಲ್ಲೆ. ಆದರೆ ಯಾಕೆ ಎದೆ ತಟ್ಟಿಕೊಳ್ಳಬೇಕು ಎ೦ಬ ಪ್ರಶ್ನೆಗೆ ನನ್ನ ಬಳಿ ಸಮರ್ಪಕ ಉತ್ತರವೇ ಇಲ್ಲ.
ಸಾಧ್ಯವಾದರೆ ಒಮ್ಮೆ ನನ್ನ ಬರಹ ಓದಿ.

ಸಂದೀಪ್ ಕಾಮತ್ said...

ಸುಧೇಶ್,
ತುಂಬಾ ಚೆನ್ನಾಗಿ ಬರೆದಿದ್ದೀಯ(ನನ್ನನ್ನೂ ನೀನು ಅಂತ ಕರಿ!)
ಮಂಗಳೂರಿನ ಹಂಪನಕಟ್ಟೆಯಲ್ಲಿ ನಿಂತು ನಾನು ಹಿಂದು ಅಂತ ಎದೆ ತಟ್ಟಿ ಹೇಳೋದಕ್ಕೂ ಅಹಮದಾಬಾದ್ ನ ’ನಾನು ಹೇಳಿದ ಗಲ್ಲಿ’ಯಲ್ಲಿ ನಿಂತು ಹೇಳೋದಕೂ ತುಂಬಾ ವ್ಯತ್ಯಾಸ ಇದೆ ಕಣೋ!
ಶಿವಾಜಿನಗರದ ಬಸ್ ಸ್ಟಾಂಡ್ ಮುಂದೆ ನಿಂತುಕೊಂಡು I am Indian ಅನ್ನೋದಕ್ಕೂ ಪಾಕಿಸ್ತಾನದ ಪೇಷಾವರದಲ್ಲಿ ಹೇಳೋದಕ್ಕೂ ವ್ಯತ್ಯಾಸ ಇದೆ.
ಆ ಧೈರ್ಯದ ಬಗ್ಗೆ ನಾನು ಹೇಳಿದ್ದು.
North East ರಾಜ್ಯಗಳಲ್ಲಿ Indian bastards are not allowed ಅನ್ನೋ ಬೋರ್ಡ್ ಇದೆಯಂತೆ ಗೊತ್ತಾ?(ನನಗೂ ಗೊತ್ತಿಲ್ಲ ಯಾರೋ ಹೇಳಿದ್ದು!)
ನಾನು ಕ್ರಿಶ್ಚಿಯನ್ನರ ವಿರೋಧಿಯಲ್ಲ.ನಿನ್ನ ಹಾಗೆಯೇ ನಾನೂ ಕ್ರಿಷ್ಚಿಯನ್ ಶಾಲೆಗಳಲ್ಲಿ ಓದಿದವನು .ನಾನು ಇಷ್ಟಪಟ್ಟ ಹುಡುಗಿಯರಲ್ಲಿ ನಾಲ್ಕು ಜನ ಕ್ರಿಷ್ಚಿಯನ್ ರು(ಒಟ್ಟು ಎಷ್ಟು ಜನ ಇದ್ರು ಅಂತ ಕೇಳ್ಬೇಡ).
ಹಾಗೆಯೇ ಮುಸ್ಲಿಂ ಜನಾಂಗದ ಬಗ್ಗೇನೂ ನನ್ಗೇನೂ ಪ್ರಾಬ್ಲೆಮ್ ಇಲ್ಲ.
ನಾನೇನೂ ಕಟ್ಟಾ ಹಿಂದು ಅಲ್ಲ.ಹಾಕಿರೋ ಜನಿವಾರ ಯಾವತ್ತೋ ಕಿತ್ತು ಹಾಕಿದ್ದೀನಿ!.ನಾನು ಧರ್ಮದ ಬಗ್ಗೆ ಮಾತಾಡಿದ್ದು ಅದು ’ನನ್ನ ಧರ್ಮ ’ ಅನ್ನೋ ಕಾರಣಕ್ಕೆ.ಅದರಲ್ಲಿ ಎಷ್ಟೆ ಹುಳುಕಿರಲಿ ,ಅದು ಎಷ್ಟೆ ಕೆಟ್ಟದಾಗಿರಲಿ ಅದು ’ನನ್ನ ಧರ್ಮ’.
ಹಾಗೆಯೇ ಮಂಗಳೂರಿನಲ್ಲಿ ಎಷ್ಟೆ ಸಮಸ್ಯೆಗಳಿರಲಿ ಅದು ’ನನ್ನ ಊರು’ ಅದಕ್ಕೆ ಯಾವತ್ತೂ ನನ್ನ support ಇದ್ದೇ ಇರುತ್ತೆ.
ನನ್ನ ಭಾರತ ಎಷ್ಟೇ corrupt ಆಗಿರಲಿ,ಇಲ್ಲಿ ಎಂಥದ್ದೇ ಸಮಸ್ಯೆಗಳಿರಲಿ ಇದು ’ನನ್ನ ಭಾರತ’ .ನನ್ನ ನಿಷ್ಠೆ ಯಾವತ್ತಿದ್ರೂ ಭಾರತಕ್ಕೆ.

ಚೆನ್ನಾಗಿರೋ ಧರ್ಮ, ಭಾಷೆ ,ಭ್ರಷ್ಟಾಚಾರವೇ ಇಲ್ಲದಿರೋ ದೇಶ , select ಮಾಡೋದಿಕ್ಕೆ ಅದೇನು super market ನಲ್ಲಿ ಸಿಗೋ ವಸ್ತು ನಾ ಸುಧೇಶ್?
ಕೆಲವರು ಬೇಕಿದ್ರೆ ಏನೂ ಹುಳುಕಿಲ್ಲದ ಕ್ರಿಷ್ಚಿಯನ್ ಧರ್ಮ ಸಿಲೆಕ್ಟ್ ಮಾಡ್ಲಿ,ಜಗತ್ತಿನಲ್ಲಿರೋ ಅತ್ಯಂತ ಸುಂದರ ಭಾಷೆ ಸೆಲೆಕ್ಟ್ ಮಾಡ್ಕೊಳ್ಳಲಿ,ಭ್ರಷ್ಟಾಚಾರವೇ ಇಲ್ಲದ ಯಾವುದಾದ್ರೂ ದೇಶದ ಸಿಟಿಝನ್ ಶಿಪ್ ತಗೊಂಡು ಆರಾಮಾಗಿರ್ಲಿ .I don't have any problem.

hEmAsHrEe said...

ಸಂದೀಪ್ ಅವರೇ,
ನಾವು(indians),ಸಂಕೀರ್ಣ ಮನಸ್ತಿತಿಯವರು.

ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದರೆ, india ಬಿಟ್ಟು ಹೊರಗೆ ವಾಸಿಸುತ್ತಿರುವಾಗಲೇ,ನನಗೆ ನನ್ನ ದೇಶ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಯಾಕೆ ಇನ್ನೂ ಹಿಂದೆ ಉಳಿದಿದೆ ಅಂದು ನಿಜವಾಗಿ ಅರಿವಾಗಿದ್ದು.
ನಾವು ಇನ್ನೂ ಧರ್ಮ, ಜಾತಿ, ಎನ್ನುವ ಸುಳಿಗಳಲ್ಲೇ ತಿರುಗಿ ತಿರುಗಿ ಮುಳುಗುತ್ತಿದ್ದೇವೆ.
pizza burger ತಿಂದು ದೇಶ ಉದ್ಧಾರ ಆಗೋದಿಲ್ಲ . ಅಥವಾ ಅಮೇರಿಕಾದವರಿಗೆ ಯೋಗ,ನೃತ್ಯ ಕಲಿಸುವುದರಿಂದಲೂ, ಅಲ್ಲಿ ದೇವಸ್ಥಾನ ಕಟ್ಸುವುದರಿಂದಲೂ ನಾವೇನೂ ಹೆಮ್ಮೆ ಪಡಬೇಕಾಗಿಲ್ಲ.
ಅಮೇರಿಕಾ, ಜಪಾನ್, ಚೈನ, ಫ್ರಾನ್ಸ್ ಅಂದ ಕೂಡಲೇ ಅವೇನು ಹುಳುಕಿಲ್ಲದ ದೇಶಗಳೇ ?

ಸಂದೀಪ್ ಅವರೇ , ಅಹಮದಾಬಾದ್ ಯಾಕೆ ಹಾಗಾಯ್ತು ಅನ್ನೋ ಬಗ್ಗೆ ವಿಚಾರ ಮಾಡಿ. ಹಂಪನಕಟ್ಟೆ ಇನ್ನೈದು ವರ್ಷಗಳಲ್ಲಿ ಹಾಗಾಗಬಾರದು ಎನ್ನುವ ವಿವೇಚನೆ ನಮಗೆ ಈಗಲೇ ಬಂದರೆ ಒಳ್ಳೆಯದು ಅಲ್ವಾ.

ಹಿಂದೂ ಧರ್ಮ ಕೊಟ್ಟ ಆಯ್ಕೆಯ ಸ್ವಾತಂತ್ರ್ಯ ಅನ್ನೋದು ನನಗೆ ತಿಳಿದ ಮಟ್ಟಿಗೆ ತಪ್ಪು ಅಭಿಪ್ರಾಯ.
ನನ್ನ ಸ್ನೇಹಿತರಲ್ಲಿ ಹಲವರು born christians, muslims, jews, pharsis... ಎಲ್ಲರೂ ಇದ್ದಾರೆ. ಅವರವರ ಆಯ್ಕೆ ಅವರದ್ದು. some of them are believers, some are agnoists, some are atheists ... ಅವರು ಹುಟ್ಟಿದ ಧರ್ಮವನ್ನು ಪಾಲಿಸಬೇಕು ಅನ್ನುವ ಕಟ್ಟುಪಾಡುಗಳಿಲ್ಲ್ಲದೆ ಅವರವರ ಜೀವನ ಸಾಗುತ್ತಿದೆ.

ಮನುಷ್ಯನ ನಂಬಿಕೆಯೇ ಸತ್ಯ. ನಂಬಿಕೆ ಅನ್ನುವುದು ಧರ್ಮಕ್ಕೆ ತಳಕು ಹಾಕಿಕೊಂಡಿರಬೇಕಾಗಿಲ್ಲ.
protestatism, sufiism ಹೇಗೆ ಹುಟ್ತು.?

ಬುದ್ಧನನ್ನೇ ಒಂದು ಅವತಾರ ಅಂತ ಮಾಡಿ ಚಾರಿತ್ರಿಕ ತಪ್ಪು ಎಸಗಿದ್ದು, ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಅಲ್ಲವೇ ಬಳಸಿದ್ದು.

ಧರ್ಮ ಪೊಳ್ಳು ಎಂದು ನಾನೆಲ್ಲೂ ಹೇಳಿಲ್ಲವಲ್ಲಾ. ನಂಬುವುದು ಬಿಡುವುದು personal ಆದದ್ದು ಎಂದೆ. ಆದ್ರೆ, ಯಾವತ್ತೂ ಅದು political ಆಗಿಯೇ ಇತ್ತು ಜಗತ್ತಿನ ಎಲ್ಲಾ ಕಡೆ.

ಮನುಷ್ಯನ ವೈರುಧ್ಯಗಳು ಯಾವತ್ತೂ ಇದ್ದದ್ದೇ.ಅಲ್ವಾ. communist ಆಗಿದ್ರೂ ಮನೆಒಕ್ಕಲಿಗೆ ಹೋಮ ಹವನ ಮಾಡೋದಿಲ್ವೇ ನಮ್ಮ ಜನ!!!.
ಎಷ್ಟು ಜನ ಬ್ರಾಹ್ಮಣರು ಬೇಕು, ಹಂದಿ ಮಾಂಸ ತಿನ್ನೋರು,ಕೋಳಿ-ದನ ತಿನ್ನೋರು.ಹಾಗಂತ ಅವರೆಲ್ಲಾ ಧರ್ಮಭ್ರಷ್ಟರಾಗ್ತಾರಾ!!!
ಎಲ್ಲಾ ಮುಸಲ್ಮಾನರೂ ಪಕ್ಕಾ ನಮಾಝ್ ಮಾಡ್ತಾರಾ.!!!

ತನ್ನ ಧರ್ಮವನ್ನು ಸರಿಯಾಗಿ ಅರಿತುಕೊಂಡವನಿಗೆ ಇತರ ಧರ್ಮದ ಬಗ್ಗೆಯೂ ಕಳಕಳಿ ಇರುತ್ತದೆ.
ಅರ್ಧಂಬರ್ಧ ತಿಳ್ಕೊಂಡಿರ್ತಾರಲ್ಲಾ ನೋಡಿ ಅವರೇ ಈ ಥರ ಬಾಂಬ್ ಹಾಕೋದು...ಚರ್ಚ್ ಒಡೆಯೋದು... ಸತ್ಯ ದರ್ಶನ ಅಂತ brainwash ಮಾಡೋದು.
ಅದು ಮಾನವನಲ್ಲಿರೋ ಹುಳುಕು. ನಮ್ಮ ನಮ್ಮ ಸ್ವಾರ್ಥಕ್ಕೆ ಏನೇನು ಸರಿಹೊಂದುತ್ತೋ ಅವೆಲ್ಲಾ ನಮಗೆ ಬೇಕು ಅಲ್ವಾ. ಧರ್ಮ,ಜಾತಿ ಅವು ಕೂಡಾ ಅಷ್ಟೆ.

ನಾನು, ಧರ್ಮವನ್ನು ಬಿಡಿ ಅಂತ ಯಾರಿಗೂ ಹೇಳೊಲ್ಲ. ಧರ್ಮವನ್ನು ಬಿಟ್ಟಿರುವುದು, ಅದು ನನ್ನ ಆಯ್ಕೆ.
ನಾನು ಜೀವನ ನಡೆಸೋದಿಕ್ಕೆ ಧರ್ಮದ ಅಗತ್ಯ ನನಗಿಲ್ಲ ಅಂತ ಕಂಡುಕೊಂಡಿದ್ದೇನೆ.ನನ್ನ ಓದಿನಿಂದ,ನನ್ನ ಅನುಭವಗಳಿಂದ.

ಸಾಧ್ಯವಾದರೆ, ಶಿವರಾಮ ಕಾರಂತರ - ನಮ್ಮ ಅಳತೆಯನ್ನು ಮೀರಲಾಗದ ದೇವರು - ಓದಿ.
ಅಥವಾ ಎ ಎನ್ ಮೂರ್ತಿರಾವ್ರ - ದೇವರು - ರಾಹುಲ ಸಾಂಕೃತ್ಯಯನರ - ವೊಲ್ಗಾ ಗಂಗಾ - ಓದಿ.
ಓದಿಕೊಂಡಿದ್ದೀರೇನೋ ಗೊತ್ತಿಲ್ಲ.

fundamentalists whether Muslims, Hindus, Christians ... ಎಲ್ಲರೂ ಒಂದೇ. ಎಲ್ಲರ ದಾರಿ ಹಿಂಸೆ.!!!
ಕೆಲವರು ಬಾಂಬ್ ಹಾಕಿ ಕೆಟ್ಟಿದ್ದಾರೆ. ಇನ್ನು ಕೆಲವರು ಇನ್ನೂ ಬಾಂಬ್ ಹಾಕೋದಕ್ಕೆ ಶುರು ಮಾಡಿಲ್ಲ ಅಷ್ಟೆ. !!!

ಸಾವಿರಾರು ವರ್ಷಗಳಿಂದ ಧರ್ಮ ಅನ್ನೋದು ಮಾನವ ಕಂಡುಕೊಂಡ ಒಂದು tool ಅಷ್ಟೆ. ರಾಮಾಯಣ,ಮಹಾಭಾರತ,ಬೈಬಲ್,ಕುರಾನ್-ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts.
ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.

ಸಂದೀಪ್ ಕಾಮತ್ said...

@hema,

ನಿಮ್ಮ ಧ್ಯೇಯೋದ್ದೆಶಗಳ ಬಗ್ಗೆ ನನಗೆ ಅಪಾರ ಗೌರವವಿದೆ.ಪ್ರವಾಹದ ವಿರುದ್ಧ ಈಜುವ ಧೈರ್ಯ ,ಸಾಮರ್ಥ್ಯ ನಿಮಗಿದ್ದರೆ ಖಂಡಿತ ಹೋಗಿ!All the best.
ನೀವು ನಿಮ್ಮ ವಿಚಾರಧಾರೆಯಿಂದ ಒಬ್ಬ ಹಿಂದೂವನ್ನು convince ಮಾಡಬಹುದು ಅಷ್ಟೆ!
ನಾವೆಲ್ಲ ಧರ್ಮ ಜಾತಿಯನ್ನು ಬಿಟ್ಟು ಬದುಕೋಣ ಅಂತ ಒಂದು ಹತ್ತು ಮಂದಿಗೆ ಹೇಳಿ ನೋಡಿ-
ಒಬ್ಬ ಪೀಟರ್ ನಿಮ್ಮ ವಿಶ್ವಮಾನವ ಸಿದ್ಧಾಂತಕ್ಕೆ ಖಂಡಿತ ದನಿಗೂಡಿಸಲಾರ.
ಒಬ್ಬಳು ರಜಿಯಾ ನಿಮ್ಮ ಮಾತನ್ನೊ ಕೇಳುವುದೂ ಸಂಶಯವೇ !
ನಿಮ್ಮ ಮಾತನ್ನು ಕೇಳುವ ,ಅದರಲ್ಲಿ ಸತ್ಯಾಂಶ ಇದೆ ಎಂದು ಒಪ್ಪಿಕೊಂಡ ದಿನ ಬಂದ್ರೆ ಹೇಳಿ.

ಭಾರತ ಆರ್ಥಿಕವಾಗಿ ,ಸಾಮಾಜಿಕವಾಗಿ ಹಿಂದುಳಿದಿದೆ ಅಂದ್ರಿ .ಆದ್ರೆ ಅದು ನಮ್ಮ ಧರ್ಮಗಳ ಹುಳುಕಿನಿಂದ ಅನ್ನೋದು ತಪ್ಪು.
ಲೇಮನ್ ಬ್ರದರ್ಸ್ ಏನ್ರಿ ಮಾಡಿದ್ರು ?? ಆ ಪರಿ ದಿವಾಳಿ ಎದ್ದು ಹೋದ್ರಲ್ಲ??
ಪ್ರಪಂಚದಲ್ಲಿ ಅತ್ಯಂತ ಮುಂದುವರಿದ ದೇಶ ಅಮೆರಿಕದಲ್ಲಿ ಹೋಟೇಲ್ ಗಳಲ್ಲಿ 13 ಸಂಖ್ಯೆಯ ಕೊಠಡಿಗಳೇ ಇರಲ್ವಂತೆ!! ಇದಾ ವಿಜ್ಞಾನ??
ನೀವು ವೈಜ್ಞಾನಿಕ ಸತ್ಯಗಳನ್ನು ಅಷ್ಟು ನೆಚ್ಚಿಕೊಂಡ್ರೆ ಮುಜುಗರವಾಗುತ್ತೆ ನೋಡಿ.ಈ ಬಗ್ಗೆ ಬ್ಲಾಗ್ನಲ್ಲಿ ಇನ್ನೊಂದು ಲೇಖನ ಹಾಕೋಣ ಅಂತ ಇದ್ದೀನಿ .ಥ್ಯಾಂಕ್ಸ್!!

ಯಾರದೋ ನಿರೀಕ್ಷೆಯಲ್ಲಿ said...

NAMASTHE SANDEEPAVARE TUMBA CHENNAGI BAREDIDDIRA OBBA BANDU NAMMANNU PRIVARTHANE MADUTTANE ANTHA GOTTADARU KAI KATTI KULITTU KOLLALU SADYANA ALAVE? AVANAGI HOGI NANU NIMMA DHARMAKKE SERUTTENE ANDARE ADU ONDU MATHU HANADA HUCCHU HATTISI NAMMA DHARMAKKE BANNI YENDU TALE TINNO INTHA JANARU HAGU HANADA DURASEGE BALIYOGO INTAHA JANARIROVAREGU MATAANTHARA NADEDE NADEYUTTE ALLAVE? MODAL NAMMALLI (HINDUGALALLI) MATHSARA DINDA NODOJANARANNA BADALAVANE MADABEKU JATI MATHA ANNODANNA BADIDODISABEKU NAVELLA HINDU NAVELLA ONDU ANNO GHOSHANE MOLAGABEKU. AVARU HANADA AMISHA ODDO MODALU HINDUGALALLI KASHTADALLI IROVARIGE NAVE SAHAYA MADODANNA KALIBEKU AGA BERE DHARMADAVARU NAMMANNA (HINDUGALANNA) KONDU KOLLUVADAKKE KADIVANA HAKABAHUDU. ALLAVE? SHANTIGAGI SANGHARSHA ANNO MATINANTE NAMMALLI SHANTI NELEURABEKU ANNODADARE SANGHARSHA ATHYAGATYA DHRMADA VISHAYA BANDAGA ALLI RAJAKIYA BARABARDU. II VISHAYA NAMMALLI KELAVARIGE INNU ARTHA AGILLA DHRMADA VISHAYADALLI RAJAKIYA TARUTTARE IDU TAPPU ALLAVE? CHENNAGI BAREDIDIRA.II ONDU LEKHANA ODIDE TUMBA HIDISITU HIGE BARITA IRI.

Unknown said...

Hi