Friday, October 17, 2008

ನೀವೂ ಓದಿ ’ನರೇಂದ್ರ ಮೋದಿ-ಯಾರೂ ತುಳಿಯದ ಹಾದಿ ’’ ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ ’ . ಕೆಲವು ದಿನಗಳ ಹಿಂದಷ್ಟೆ ಈ ಪುಸ್ತಕ ತಗೊಂಡಿದ್ದೆ.ಓದಲು ಸಮಯ ಸಿಗಲ್ಲ ಅಂತ ಗೊತ್ತಿದ್ರಿಂದ ಸದಾ ಬ್ಯಾಗ್ ನಲ್ಲೇ ಇಟ್ಟುಕೊಂಡಿರ್ತಿದ್ದೆ, ಬಸ್ ನಲ್ಲಿ ಹೋಗ್ತಾ ಇರ್ಬೇಕಾದ್ರೆ ಓದೋದಿಕ್ಕೆ ಅಂತ!ನನ್ನ ಬ್ಯಾಗ್ ನಲ್ಲಿ ಈ ಪುಸ್ತಕ ನೋಡಿ ಬಹಳಷ್ಟು ಗೆಳೆಯರು ಹೇಳ್ತಾ ಇದ್ದಿದ್ದು " ಓಹ್ ನೀನು ಮೋದಿ ಫ್ಯಾನಾ....??? "
ನಾನು ಯಾರ ಫ್ಯಾನೂ ಅಲ್ಲ ಬೀಸಣಿಕೆನೂ ಅಲ್ಲ ಅಂದೆ ಅವರಿಗೆಲ್ಲ .ಹಿಂದೆ ಯಾವುದೋ ಒಂದು ವಿಷಘಳಿಗೆಯಲ್ಲಿ ಉಪೇಂದ್ರನ ಅಭಿಮಾನಿ ಅಂತ ಹೇಳಿದ್ದೆ ನನ್ನ ಗೆಳತಿಯೊಡನೆ ,ಅದೇ ಕೊನೆ ಅದಾದ್ ಮೇಲೆ ನಾನು ಯಾರದೇ ಫ್ಯಾನ್ ಅನ್ನೋದಕ್ಕೆ ನಂಗೆ ಮನಸ್ಸೆ ಬಂದಿಲ್ಲ!
ಉಪೇಂದ್ರನ ಫ್ಯಾನ್ ಅನ್ನಿಸಿಕೊಂಡಿದ್ದಕ್ಕೆ ಅವಳು ನನ್ ಹತ್ರ ಮಾತಾಡೋದೇ ಬಿಟ್ಟಿದ್ಲು ಕೆಲ ದಿನ .ಆಗ ಅಷ್ಟೊಂದು ಮಾನಸಿಕವಾಗಿ ಪ್ರಬುದ್ಧನಾಗಿಲ್ಲದ್ದರಿಂದ(ಈಗಲೂ ಆಗಿಲ್ಲ ಅನ್ನೋದು ಕೆಲವರ ಅನಿಸಿಕೆ!) ಬಹುಷ ಉಪೇಂದ್ರನ ಮಂಗ ಚೇಷ್ಟೆಗಳೆಲ್ಲ ಇಷ್ಟವಾಗ್ತಾ ಇತ್ತು .ಈಗ ಆಗಲ್ಲಾ ಬಿಡಿ !
ಈಗ ಫ್ಯಾನ್ ,A.C ,ಬೀಸಣಿಕೆ ಯಾವುದೂ ಇಲ್ಲ.ಇಷ್ಟ ಆದ್ರೆ ಇಷ್ಟ ಆಯ್ತು ಅನ್ನೋದು ,ಇಲ್ಲಾಂದ್ರೆ ಇಲ್ಲ.ಯಾರದೆ ಅಭಿಮಾನಿ ಅಂತ ಬ್ರಾಂಡ್ ಆಗಿಬಿಟ್ರೆ ಆಮೇಲೆ ಅವರು ಮಾಡಿದ್ದೆಲ್ಲ ಚೆನ್ನಾಗಿದೆ ಅಂತ ಅನ್ಸೋಕೆ ಪ್ರಾರಂಭ ಆಗಿಬಿಡುತ್ತೆ . ನಂಗೆ ಆರ್ಕುಟ್ ನಲ್ಲಿ ’ದೈತ್ಯ ಬರಹಗಾರರ’ ಫ್ಯಾನ್ ಕ್ಲಬ್ ನಲ್ಲಿ ಅಂಥ ಅನುಭವ ಆಗಿದೆ.

ಥತ್ ನರೇಂದ್ರ ಮೋದಿ ಪುಸ್ತಕದ ಬಗ್ಗೆ ಬರೆಯಲು ಹೊರಟವನು ಇದೇನು ಉಪೇಂದ್ರನ ಬಗ್ಗೆ ಬರೀತಾ ಇದ್ದೀನಿ:(

ಪ್ರತಾಪ್ ಸಿಂಹರ ’ನರೇಂದ್ರ ಮೋದಿ’ ಪುಸ್ತಕ ಓದಿದ ಮೇಲಂತೂ ಮೋದಿ ಫ್ಯಾನ್ ಆಗಿಬಿಡೋಣ ಅಂತ ಅನ್ನಿಸಿದ್ದು ನಿಜ! ಆದ್ರೆ ಇನ್ನು ಮುಂದೆ ಯಾರದೇ ಫ್ಯಾನ್ ಅಗ್ಬಾರ್ದು ಅಂಥ ನಿರ್ಧಾರ ಮಾಡಿ ಆಗಿದೆ . ಆದ್ದರಿಂದ ಅಭಿಮಾನವಷ್ಟೆ ಸಾಕು ಅಭಿಮಾನಿಯಾಗೋದು ಬೇಡ ಅಲ್ವ?

ಈ ಪುಸ್ತಕ ಓದೋ ತನಕ ನರೇಂದ್ರ ಮೋದಿಯ ಬಗ್ಗೆ ನನಗೆ ಏನೂ ಗೊತ್ತಿರ್ಲಿಲ್ಲ .ಸುಮಾರು ಆರು ತಿಂಗಳು ನಾನೂ ಗುಜರಾತ್ ನಲ್ಲಿ ಕೆಲಸ ಮಾಡಿದ್ರೂ ನಂಗೆ ಮೋದಿಯ ಬಗ್ಗೆ ನನಗೆ ಅಷ್ಟು ಕುತೂಹಲ ಇರ್ಲಿಲ್ಲ .ಗುಜರಾತ್ ನಲ್ಲಿ ನಾನು ನೋಡಿದ್ದು ಭೂಕಂಪದ ಸಮಯದಲ್ಲಿ ಬಿರುಕು ಬಿಟ್ಟ ಕಟ್ಟಡಗಳು ,ಅಹಮದಾಬಾದ್ ನ ಚೆಂದುಳ್ಳಿ ಚೆಲುವೆಯರ ಗರ್ಭಾ ನೃತ್ಯ ಅಷ್ಟೇ !

ಪ್ರತಾಪ್ ಸಿಂಹರ ಲೇಖನಗಳು ನಂಗೆ ಮೊದಲಿಂದಲೂ ತುಂಬಾ ಇಷ್ಟ .ಬಿಜೆಪಿ ,ಕಾಂಗ್ರೆಸ್ ,ಜೆ ಡಿ ಎಸ್ ಅನ್ನೋ ಬೇಧ ಭಾವ ಇಲ್ಲದೆ ಎಲ್ಲರ ಮುಖಕ್ಕೆ ಮಂಗಳಾರತಿ ಮಾಡುವ ರೀತಿ ಸೂಪರ್ಬ್!ಅದೂ ಅಲ್ಲದೆ ಅಂಕಿ ಅಂಶಗಳನ್ನು ಒದಗಿಸಿಯೇ ಲೇಖನ ಬರೆಯೋದ್ರಿಂದ ಅನುಮಾನಿಸೋದಕ್ಕೆ ಆಸ್ಪದವೆ ಇಲ್ಲ(ಅದಾಗ್ಯೂ ಅನುಮಾನಿಸೋರಿದ್ದಾರೆ ಅದು ಬೇರೆ ವಿಷಯ!) ಇಂಥ ಪ್ರತಾಪ್ ಸಿಂಹ ಬರೆದ ಪುಸ್ತಕ ಓದ್ಬೇಕು ಅಂತ ತುಂಬಾ ಆಸೆ ಪಟ್ಟಿದ್ದೆ .ಇವತ್ತು ಈಡೇರಿತು.

ಗುಜರಾತ್ ಮಾದರಿ ಅಂದ ತಕ್ಷಣ ಗೋಧ್ರಾ ಘಟನೆ ನೆನಪಿಸಿ ಕೊಳ್ಳೋ ಜನರು ಎಂಥ ನೆಗೆಟಿವ್ ಥಿಂಕರ್ಸ್ ಅನ್ನೋದರ ಬಗ್ಗೆ ಇಲ್ಲಿ ಚರ್ಚೆ ಮಾಡೋದು ವೇಸ್ಟ್ .ಆದ್ರೆ ಗುಜರಾತ್ ಮೋದಿಯಿಂದಾಗಿ ನಂಬರ್ ಒನ್ ರಾಜ್ಯ ಆಗಿದ್ದು ಮಾತ್ರ ನಗ್ನ ಸತ್ಯ.
ಮೊನ್ನೆ ’ಆಜ್ ತಕ್’ನಲ್ಲಿ ಮೋದಿ ಸಂದರ್ಶನ ಮಾಡ್ತಾ ಇದ್ರು ಪ್ರಭು ಚಾವ್ಲಾ .ಪ್ರಭು ಚಾವ್ಲಾ as usual ಅದೇ ಕೃತಕ ನಗು ಮುಖದಿಂದ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾಡ್ತಾ ಇದ್ರು.ಆದ್ರೆ ಅಮೆರಿಕಾ ವೀಸಾ ಬಗ್ಗೆ ಪ್ರಭು ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಮಾತ್ರ ತುಂಬಾ ಇಷ್ಟ ಆಯ್ತು ನಂಗೆ.
ನರೇಂದ್ರ ಮೋದಿ ಹೇಳಿದ್ದು ಇಷ್ಟು "ನೋಡಿ ಹಿಂದೆ ಒಂದು ಸಲ ನಾನು ವೀಸಾ ಕೇಳಿದಾಗ ಅವರು ನಿರಾಕರಿಸಿದ್ದೇನೋ ನಿಜ ಆದ್ರೆ ಈ ಸಲ ನಾನು ಕೇಳೆ ಇಲ್ಲ ಅವರೆ ವಿನಾ ಕಾರಣ ಅಪಪ್ರಚಾರ ಮಾಡ್ತಾ ಇದ್ದಾರೆ "
ಅದಿಕ್ಕೆ ಚಾವ್ಲಾ "ಹಾಗಿದ್ರೆ ನೀವು ವೀಸಾ ಕೇಳಲ್ವ ? " ಅಂದಿದ್ದಕ್ಕೆ "ನಾನ್ಯಾಕ್ರಿ ಕೇಳ್ಬೇಕು .ಅಮೆರಿಕಾದವರೇ ಭಾರತದ ವೀಸಾ ಗೆ ಕ್ಯೂ ನಿಲ್ಲಬೇಕು ,ಆ ರೀತಿ ಮಾಡೋಣ ನಮ್ಮ ದೇಶವನ್ನು ".

ಇಂಥ ಸ್ವಾಭಿಮಾನ ಎಲ್ಲರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವ??

ಪುಸ್ತಕ ಓದಿದ ಮೇಲೆ ಮೋದಿಯ ಮೇಲೆ ಈಗಾಗಲೇ ಇದ್ದ ಅಭಿಮಾನ ಇಮ್ಮಡಿಯಾದದ್ದಂತೂ ನಿಜ . ಪ್ರತಾಪ್ ಸಿಂಹ ಅದಕ್ಕಾಗಿ ಧನ್ಯವಾದಗಳು ನಿಮಗೆ.

ನೀವೂ ಓದಿ -ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ .
ಕಾಸು ಕೊಟ್ಟು ಓದೋದಿಕ್ಕೆ ಇಷ್ಟ ಇಲ್ವ ? ಪರ್ವಾಗಿಲ್ಲ ಅದಕ್ಕೊ ಪ್ರತಾಪ್ ವ್ಯವಸ್ಥೆ ಮಾಡಿದ್ದಾರೆ ಪ್ರತಾಪ್ !

ಇಲ್ಲಿಂದ ಓದಿ ಅಷ್ಟೆ http://pratapsimha.com/books/narendra-modi.pdf

ಅಂದ ಹಾಗೆ ಪ್ರತಾಪ್ ವಿಜಯ ಕರ್ನಾಟಕದಲ್ಲಿ ನಿರ್ಭಿಡೆಯಿಂದ ಬರೆಯಲು ಸದಾ ಬೆಂಗಾವಲಾಗಿರುವ ವಿಶ್ವೇಶ್ವರ ಭಟ್ ರಿಗೂ ಒಂದು ಥ್ಯಾಂಕ್ಸ್ ಹೇಳೋಣ -ಏನಂತೀರಾ??


ಚಿತ್ರಕೃಪೆ : ಪ್ರತಾಪ್ ಸಿಂಹರ ತಾಣದಿಂದ ಹೈಜಾಕ್ ಮಾಡಿದ್ದು .

4 comments:

Harisha - ಹರೀಶ said...

ನಾನೂ ಓದಿ ಮುಗಿಸಿದೆ.. ಚೆನ್ನಾಗಿ ಮೋದಿಯವರ ಸಾಧನೆಯನ್ನು, ನಿಷ್ಠೆಯನ್ನು, ಸ್ವಾಭಿಮಾನವನ್ನು ವಿವರಿಸಿದ್ದಾರೆ. ಬಹಳ ಇಷ್ಟವಾಯಿತು.

ಎರಡು ದಿನದ ಹಿಂದಷ್ಟೇ ಇದರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಬೇರೇನೋ ಬರೆದಿದ್ದರಿಂದ ಇದನ್ನು ಬರೆಯಲಾಗಲಿಲ್ಲ. ನೀವು ಬರೆದು ನನ್ನ ಕೆಲಸ ತಪ್ಪಿಸಿದ್ದೀರಿ. ಧನ್ಯವಾದಗಳು.

Anonymous said...

ನೀವು ಸಕತ್ ಚೆನ್ನಾಗಿ ಬರೀತೀರ. ನಿಮ್ಮ ಫಸ್ಟ್ ಪ್ಯಾರಾ ಓದಿ ಎಷ್ಟು ಹೊತ್ತು ನಗ್ಯಾಡ್ದೆ ಗೊತ್ತಾ ? ಹ್ಹ ಹ್ಹ ಹ್ಹ

ಹಾಗೂ pdf link ಕೊಟ್ಟಿದ್ದಕ್ಕೆ ಧನ್ಯವಾದಗಳು.

ಸಂದೀಪ್ ಕಾಮತ್ said...

ಹರೀಶ , ಸೌಪರ್ಣಿಕ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು:)

ಮೆಚ್ಚಿಕೊಂಡರೂ ಹೇಳಲು ಸಮಯ ದೊರಕದವ್ರಿಗೂ ಧನ್ಯವಾದಗಳು.

Anonymous said...

Sandeep!
I got this book. presently hubs dear is reading. next nanna turn
:-)
dost