Monday, January 4, 2010

ರಣ್...ಮತ್ತೊಂದು ಹಿಂದಿ ಚಿತ್ರ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ!

’ರಣ್ ’ ಚಿತ್ರ ಬಿಡುಗಡೆಯಾಗೋದನ್ನೇ ಕಾಯ್ತಾ ಇದ್ದೀನಿ ನಾನು.ಚಿತ್ರದ trailers ತುಂಬಾ ಕುತೂಹಲ ಹುಟ್ಟಿಸಿದೆ.'Next time when you watch News ,think again ' ಅನ್ನೋ ಬುದ್ಧಿಮಾತು ಕೂಡಾ ಬರ್ತಾ ಇದೆ ಟ್ರೇಲರ್ ನಲ್ಲಿ.ರಣ್ ಚಿತ್ರ ಸುದ್ದಿ ಮಾಧ್ಯಮದ ಹುಳುಕುಗಳನ್ನು ತೋರಿಸುವಲ್ಲಿ ಬಹುಷಃ ಯಶಸ್ವಿಯಾಗಬಹುದೇನೋ.

ಅಮಿತಾಬ್ ನಟಿಸಿರೋದ್ರಿಂದ ಕೊಟ್ಟ ಕಾಸಿಗೇನೂ ಮೋಸವಾಗಲಾರದು!ಚಿತ್ರದ ಇನ್ನೊಂದು ಆಕರ್ಷಣೆ ’ನಮ್ಮ’ ಸುದೀಪ್! ’ಫೂಂಕ್’ ಚಿತ್ರದಲ್ಲಿ ತಮ್ಮ ಉತ್ತಮ ಅಭಿನಯದಿಂದ ಎಲ್ಲರ ಮನ ಗೆದ್ದಿರೋ ಕಿಚ್ಚ ’ರಣ್’ ಸಿನೆಮಾದಿಂದ ಖಾಯಂ ಆಗಿ ಬಾಲಿವುಡ್ ಕಡೆ ವಲಸೆ ಹೋಗದಿರಲಿ ಅನ್ನೋದೇ ಹಾರೈಕೆ(ಹಾರೈಕೆ ಕೆಟ್ಟದಾ ಒಳ್ಳೆಯದಾ ಗೊತ್ತಾಗ್ತಿಲ್ಲ!)

ಚಿತ್ರದ ಟೈಟಲ್ ಹಾಡಿನ ಬಗ್ಗೆ ಮಾತ್ರ ನಂದೂ ತಕರಾರಿದೆ.ರಾಷ್ಟ್ರಗೀತೆ ಯನ್ನು ತಿರುಚುವ ಹಾಳು ಐಡಿಯಾ ಅದ್ಯಾವನು ಕೊಟ್ಟನೋ ದೇವರಿಗೇ ಗೊತ್ತು !ಇದನ್ನೇ ನ್ಯೂಸ್ ಚ್ಯಾನೆಲ್ ಗಳು ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.

ಬಾಲಿವುಡ್ ನ ಜನ ಸದಾ ಕಾಂಟ್ರೋವರ್ಶಿಯಲ್ ವಸ್ತುಗಳನ್ನಿಟ್ಟುಕೊಂಡು ಸಿನೆಮಾ ಮಾಡ್ತಾ ಇರ್ತಾರೆ.ಹಾಗಾಗಿ ನಮಗೆ ಕೆಲವು ಕರಾಳ ಮುಖಗಳ ದರ್ಶನ ಆಗ್ತಾ ಇರುತ್ತೆ.ಆದ್ರೆ ನಮ್ಮಲ್ಲಿ ಪಾಪ ’ ಮಠ ’ ದ ಗುರುಪ್ರಸಾದ್ ಕಾಂಟ್ರೋವರ್ಷಿಯಲ್ ಸಬ್ಜೆಕ್ಟ್ ಕೈಗೆತ್ತಿ ಕೊಂಡಾಗಲೇ ಹೀರೋ ಎಸ್ಕೇಪ್ ಅಂದು ಬಿಟ್ಟಿದ್ದಾರೆ.ಆದರೆ ಗುರು ಹಿಂಜರಿದಿಲ್ಲ.

'ಡೈರೆಕ್ಟರ್ ಸ್ಪೆಷಲ್ ’ ನ ಡೈರೆಕ್ಟರ್ ಇನ್ನೂ ಸ್ಪೆಶಲ್!

Photo Courtesy :http://www.moviethread.com/

5 comments:

Ittigecement said...

ನನಗೂ ಕುತೂಹಲವಿದೆ....

ಸುದೀಪನನ್ನು ಹಿಂದಿಯಲ್ಲಿ ನೋಡುವದು...
(ಫೂಂಕ್ ಚೆನಾಗಿತ್ತು.
ಅವನ ಅಭಿನಯ ಕೂಡ...)

ಸಾಗರದಾಚೆಯ ಇಂಚರ said...

ನನಗೂ ಆಸೆ ಆಗ್ತಾ ಇದೆ ಚಿತ್ರ ನೋಡ್ಬೇಕು ಅಂತ
ಚಿತ್ರಕ್ಕೆ ಶುಭ ಹಾರೈಕೆ

Anonymous said...

ರಾಮ್ ಗೋಪಾಲ್ ವರ್ಮಾ ಎಂಥ ಫ್ಲಾಪ್ ಕೊಟ್ಟರೂ ಆತನಿಗೆ ಒಳ್ಳೇ ಸಿನೆಮಾದ ಸರಿಯಾದ ವ್ಯಾಖ್ಯಾನ ತಿಳಿದಿದೆ. ಅದಕ್ಕೇನೆ.. ದೌಡ್ ಅಂಥ ಥಿಯೇಟರಿಂದ ಓಡಬೇಕಾದಂಥ ಸಿನೆಮಾದ ಜತೆಗೆ ಸರ್ಕಾರ್ ನಂತಹ ಸಿನೆಮಾವನ್ನೂ ನೀಡುತ್ತಾನೆ. ರಣ್ ಗೆ ಆತನ ಸ್ಕ್ರಿಪ್ಟ್ ವರ್ಕ್ ಚೆನ್ನಾಗಿದೆ ಅಂತ ಕೇಳ್ಪಟ್ಟೆ.

ನಿಜ, ನೀವಷ್ಟೇ ಅಲ್ಲ, ಎಲ್ಲರೂ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರೊವಂತಹ ಚಿತ್ರ.

-ರಂಜಿತ್.

Pramod said...

ಸುದೀಪ್ ಕನ್ನಡದ ಒಳ್ಳೇ ಆಕ್ಟರ್. ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಇನ್ನೂ ಚೆನ್ನಾಗಿ ಪಳಗಿದ್ರೆ ಕನ್ನಡಕ್ಕೊಬ್ಬ ಸೂಪರ್ ಡೈರಕ್ಟರ್ ಬ೦ದ ಹಾಗೆ :) ನಮ್ಮಲ್ಲಿ ಇರೋ ಡೈರಕ್ಟರ್ ಕೊರತೆ ನೀಗೀಸಬಹುದೇನೋ?

ಶೆಟ್ಟರು (Shettaru) said...

ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

ಆತ್ಮೀಯರೆ,

ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

ಧನ್ಯವಾದಗಳೊಂದಿಗೆ

ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು