Monday, September 1, 2008

ಡುಂಡಿರಾಜರೊಡನೆ ಒಂದು ಸಂಜೆ



ಬೆಂಗಳೂರಿಗೆ ಬಂದು ಆರು ವರ್ಷ ನಾಲ್ಕು ತಿಂಗಳಾಯ್ತು .ಇದರಲ್ಲಿ ನಾನು ಸರಿಯಾಗಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಸಿದ್ದು ಬೆರಳೆಣಿಕೆಯಷ್ಟು !

ಎಲ್ಲೋ ಗಣೇಶ ಹಬ್ಬದಲ್ಲಿ ಆರ್ಕೆಷ್ಟ್ರಾ ಆಗ್ತ್ರಿಬೇಕಾದ್ರೆ ಹಿಂದೆ ಟಪ್ಪಾಂಗ್ಗುಚ್ಚಿ ಹಾಕಿದ್ದು ಬಿಟ್ರೆ ಅಂಥ ಘನಂದಾರಿ ಕೆಲಸ ಏನೂ ಮಾಡಿರ್ಲಿಲ್ಲ ನಾನು.

ಆದ್ರೆ ಈ ಶನಿವಾರ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸೋ ಅವಕಾಶ ಸಿಕ್ತು ನಂಗೆ .ಥ್ಯಾಂಕ್ಸ್ ಟು ಮೇ ಫ್ಲವರ್ !

ಈ ಶನಿವಾರ ಸೆಂಟ್ರಲ್ ಕಾಲೇಜಿನ ಪಕ್ಕದ ಕೆಂಪು ಕಟ್ಟಡದಲ್ಲಿ ಕರೆಂಟ್ ಇಲ್ಲದಿದ್ದರಿಂದ ನನಗೆ ’ಫಿಶ್ ಮಾರ್ಕೆಟ್’ ಗೆ ಹೋಗಿ ಡುಂಡಿರಾಜ್ ರನ್ನು ಭೇಟಿ ಆಗೋ ಸೌಭಾಗ್ಯ ಸಿಕ್ತು !.ಕೆಂಪು ಕಟ್ಟಡದಲ್ಲಿ ಕರೆಂಟು ಇಲ್ಲದ್ದಕ್ಕೂ ನಾನು ’ಫಿಶ್ ಮಾರ್ಕೆಟ್’ ಕಾರ್ಯಕ್ರಮಕ್ಕೆ ಹೋಗೋದಕ್ಕೂ ಏನು ಸಂಬಂಧ ಅಂತ ಕೇಳ್ತೀರಾ??

ಕೇಳ್ಬೇಡಿ ನಾನು ಹೇಳಲ್ಲ ಅದು ಪರ್ಸನಲ್ !!

ಡುಂಡಿರಾಜ್ ನನ್ನ ನೆಚ್ಚಿನ ಲೇಖಕ/ಕವಿ . ಎಂಥಾ ಹಾಸ್ಯ ಪ್ರಜ್ಞೆ ಅವರಿಗೆ ! ಬರೆಯೊದ್ರಲ್ಲಿ ಮಾತ್ರ ಅಲ್ಲ ಮಾತಾಡೋದು ಅಷ್ಟೇ ತಮಾಷೆಯಾಗಿ ! ನಮ್ಮ ಮೋಹನ್ ಅವ್ರಿಗೂ ಒಳ್ಳೆ ಹಾಸ್ಯ ಪ್ರಜ್ಞೆ ಇದೆ ತುಂಬಾ ಚೆನ್ನಾಗಿ ಮಾತಾಡ್ತಾರೆ ಅವ್ರೂ . ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??

ಕಾರ್ಯಕ್ರಮಕ್ಕೆ ಫಿಶ್ ಮಾರ್ಕೆಟ್ ಅಂತ ಯಾಕೆ ಹೆಸರಿಟ್ಟಿದ್ದು ಅಂತ ಮೋಹನ್ ಮತ್ತೆ ಸಮಜಾಯಿಷಿ ನೀಡಬೇಕಾಯಿತು .ನನಗ್ಯಾಕೋ ಅನ್ನಿಸುತ್ತೆ ಇನ್ನೂ ಬಹಳಷ್ಟು ಸಲ ಹೀಗೇ ಸಮಜಾಯಿಷಿ ನೀಡ್ಬೇಕಾಗಿ ಬರುತ್ತೋ ಏನೋ?

ನಾನೂ ಚಿಕ್ಕಂದಿನಲ್ಲಿ ಮೀನು ತರಲು ಫಿಶ್ ಮಾರ್ಕೆಟ್ ಗೆ ಹೋಗ್ತಾ ಇದ್ದೆ ,ಆದ್ರೆ ಮೀನು ಮಾರುವ ಹೆಂಗಸರ ಕಾಟ ವಿಪರೀತವಾಗಿತ್ತು ! ನನ್ನ ಚೀಲವನ್ನು ಕಿತ್ತುಕೊಂಡು ಅವರ ಹತ್ರ ಇರೋ ಮೀನನ್ನು ಬಲವಂತವಾಗಿ ತುರುಕಿ ಹಣ ಕಿತ್ತು ಕಳಿಸ್ತಾ ಇದ್ರು !!

ಆದ್ರೆ ಈ ಫಿಶ್ ಮಾರ್ಕೆಟ್ ನಲ್ಲಿದ್ದ ಹೆಂಗಸರೆಲ್ಲಾ ತುಂಬಾನೆ ಒಳ್ಳೆಯವರಿದ್ರು! ಎರಡು(?) ಜನ ಹುಡುಗಿಯರು ಇದ್ದ ೫೦ ಜನರ ಎಲ್ಲಾ ಭಂಗಿಯ ಫೋಟೊ ತೆಗೆದದ್ದು ಬಿಟ್ರೆ (ಎಲ್ಲಿ ದೇವೇಗೌಡರ ಥರ ಆಕಳಿಸೋ ಫೋಟೊ ತೆಗೀತಾರೊ ಅಂತ ಭಯ ಇತ್ತು !) ಏನೂ ಕಾಟ ಕೊಡ್ಲಿಲ್ಲ ,ಬದಲಾಗಿ ಕಾಫಿ ತಿಂಡಿ ಅಂತ ಸತ್ಕಾರ ಮಾಡಿದ್ರು . ಅವರಿಗೂ ಅಭಿನಂದನೆಗಳು.

ಡುಂಡಿರಾಜ್ ರವರು ತುಂಬಾ ಚೆನ್ನಾಗಿ ತಮ್ಮ ಹನಿಗವನ,ಗಂಭೀರ ಕವನಗಳನ್ನು ವಾಚಿಸಿದರು . ಅವರ ಬಗ್ಗೆ ಎಷ್ಟೋ ತಿಳಿಯದ ವಿಷಯಗಳು ತಿಳಿದವು ನಮಗೆ .
ನನಗೆ ತುಂಬಾ ಇಷ್ಟವಾದ ಹನಿಗವನವನ್ನೂ ಅವರು ಹೇಳಿದ್ರು ! ಅದೇ ಹನಿಗವನಗಳಲ್ಲಿ Punch ಇರಲೇಬೆಕು Punchಏ ಇರದಿದ್ದರೆ ಅವಮಾನ ಅನ್ನೋ ಅರ್ಥದ್ದು ! ಈ ಹನಿಗವನ ಕೇಳಿದಾಗೆಲ್ಲ ನಂಗೆ ಪಾಪ ಹರಿಕೃಷ್ಣ ಪುನರೂರು ಅವರ ನೆನಪಾಗುತ್ತೆ !ಯಾಕೆ ಅಂತೀರಾ ?
ಅವರು ನಮ್ಮ ಶಾಲೆಯ (ಮೂಲ್ಕಿಯಲ್ಲಿ) ಅಭಿವೃದ್ಧಿ ಸಂಘಕ್ಕೆ ಅಧ್ಯಕ್ಷರಾಗಿದ್ದರು ಅದಿಕ್ಕೆ!(ಅವರ ಪಂಚೆ ಎಳೆದ ಘಟನೆಯಿಂದಾಗಿ ಅಂತ ನೀವು ತಿಳ್ಕೊಂಡ್ರೆ ನನ್ನ ತಪ್ಪಲ್ಲ!).

ಡುಂಡಿರಾಜ್ ಅವರು ತಮ್ಮ ಕಾಲೇಜ್ ಜೀವನದಲ್ಲಿ ಬರೆತಿದ್ದ ಕವನಗಳ ಬಗ್ಗೆ ,ಅವ್ರಿಗೆ ಯಾಕೆ ಆಗ ಬಂಡಾಯ ಸಾಹಿತ್ಯ ಇಷ್ಟ ಆಗ್ತಿತ್ತು ಅನ್ನೋದರ ಬಗ್ಗೆ ತುಂಬಾ ಹಾಸ್ಯಮಯವಾಗಿ ಮಾತಾಡಿದ್ರು .

ದೇವರ ದಯೆಯಿಂದ ಅವರು ಹಾಸ್ಯ ಲೇಖಕ/ಕವಿ ಆಗಿದ್ದೇ ಒಳ್ಳೇದಾಯ್ತು.ಯಾಕಂದ್ರೆ ,ನಗೋದು ಸುಲಭ ಆದ್ರೆ ನಗಿಸೋದು ತುಂಬಾ ಕಷ್ಟ ! ಈ ನಗಿಸೋ ಅಂಥ ಕಷ್ಟದ ಕೆಲಸಕ್ಕೆ ಅವರು ಕೈ ಹಾಕಿದ್ದು ಒಳ್ಳೇದೇ ಆಯ್ತು .ಈಗೀಗ ಯಾವ ಪತ್ರಿಕೆಗಳನ್ನು,ಬ್ಲಾಗ್ ಗಳನ್ನು ನೋಡಿದ್ರೂ ಬರೀ ಗಂಭೀರ ಸಾಹಿತ್ಯ/ಕವಿತೆಗಳೆ ಇರೋದು .ಇಂಥ ಕವಿತೆಗಳನ್ನು ಬರಿಯೋರು ಹತ್ತು ಜನ ಆದ್ರೆ ,ಅರ್ಥ ಆಗೋದು ಬರೆ ಇಬ್ರಿಗೆ.
ನಮಗೆಲ್ಲ ಅರ್ಥ ಆಗಿಲ್ಲ ಅಂದ್ರೂ ಗೋಣಾಡಿಸೋ ಪರಿಸ್ಥಿತಿ !

ಅದಕ್ಕಿಂತ ಡುಂಡಿರಾಜ್ ಅಂಥವರು ಒಬ್ರೇ ಇದ್ರೂ ಹತ್ತು ಜನರನ್ನು ನಗಿಸೋ ಕೆಲಸ ಮಾಡ್ತಾರಲ್ಲ ಅದೂ ನಿಜಕ್ಕೂ ಪ್ರಶಂಸನೀಯ.
ಇವರು ಬರೀ ಹನಿಗವನಗಳನ್ನಲ್ಲದೇ ಲಲಿತ ಪ್ರಬಂಧಗಳನ್ನೂ ಬರೆಯತೊಡಗಿದ್ದು ನಮ್ಮೆಲ್ಲರ ಸೌಭಾಗ್ಯ .ಡುಂಡಿರಾಜ್ ರ ಅಂಕಣಗಳನ್ನು ಓದ್ತಾ ಇದ್ರೆ ಈ ಯಾಂತ್ರಿಕ ಜೀವನದ ಜಂಜಾಟಗಳಿಂದ ಸ್ವಲ್ಪನಾದ್ರೂ ರಿಲೀಫ್ ಸಿಗೋದು ಸತ್ಯ.

ಡುಂಡಿರಾಜ್ ರ ಶೈಲಿಯನ್ನು ಕಾಪಿ ಮಾಡೋರಂತೂ ಬಹಳ ಜನ ಸಿಗ್ತಾರೆ .ಆದ್ರೆ ಅದಕ್ಕಿಂತ ದುಖ:ದ ಸಂಗತಿ ಅಂದ್ರೆ ಕೆಲ ಜನರು ಅವರ ಕವನಗಳನ್ನು ಯಥಾಪ್ರಕಾರ ಓದಿ ಹಾಸ್ಯ ಕಾರ್ಯಕ್ರಮಗಳಲ್ಲಿ ಚಪ್ಪಾಳೆ ಗಿಟ್ಟಿಸ್ಕೋತಾರೆ! ಇದಕ್ಕೆ ಒಬ್ಬನೇ ಅಪವಾದ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ !

ಈ ಗಣೇಶ್ ಕಾಮಿಡಿ ಟೈಮ್ ಗಣೇಶ್ ಆಗಿದ್ದಾಗ ಕಾಮಿಡಿ ಟೈಮ್ ನಲ್ಲಿ ಇವರ ಹನಿಗವನಗಳನ್ನು ಓದ್ತಾ ಇದ್ದ,ಆದ್ರೆ ಓದೋದಕ್ಕಿಂತ ಮುಂಚೆ ಡುಂಡಿರಾಜ್ ರ ಹನಿಗವನ ಅಂತ ಹೇಳಿ ಓದ್ತಾ ಇದ್ದ .ಬರೀ ಕಾಮಿಡಿ ಟೈಮ್ ನಲ್ಲಿ ಅಲ್ಲದೆ ಬೇರೆ ಬೇರೆ ಸ್ಟೇಜ್ ಷೋ ಗಳಲ್ಲೂ ಹೇಳ್ತಾ ಇದ್ದ(ಮೊದಲೇ ಹೇಳಿದ್ನಲ್ಲ ಗಣೇಶ ಹಬ್ಬದಲ್ಲಿ ಟಪ್ಪಾಗ್ಗುಂಚಿ ಹಾಕ್ತಾ ಇದ್ದೆ ಅಂತ ಅಲ್ಲೇ ಸಿಕ್ಕಿದ್ದು ಗಣೇಶ್ !)
ಅಂತೂ ಫಿಶ್ ಮಾರ್ಕೆಟ್ ಕಾರ್ಯಕ್ರಮ ಅಂತೂ ಅದ್ಭುತವಾಗಿತ್ತು .ಮೇ ಫ್ಲವರ್ ಬಳಗದವರ ಕೆಲಸ ಅಭಿನಂದನೀಯ .ಅಷ್ಟು ಒಳ್ಳೆಯ ಕಾರ್ಯಕ್ರಮ ಆಯೋಜಿಸೋದಲ್ಲದೆ ಕಾಫಿ ತಿಂಡಿ ಬೇರೆ ಕೊಟ್ಟಿದ್ರು ! ಉಂಡೂ ಹೋದ ಕೊಂಡೂ ಹೋದ ಅನ್ನೋ ಹಾಗಾಯ್ತು ನನ್ನ ಪರಿಸ್ಥಿತಿ .

ಆದ್ರೆ ಆಶ್ಚರ್ಯ ಅಂದ್ರೆ ಅಷ್ಟೆಲ್ಲ ಪಬ್ಲಿಸಿಟಿ ಕೊಟ್ರೂ ಮೋಹನ್ ಅವ್ರು ,ಭಾಗವಹಿಸೋ ಜನ ಮಾತ್ರ ಕಮ್ಮಿ.ಬಹುಶ: ಬಂದಿದ್ದ 50+ ಜನಾನೇ ಜಾಸ್ತಿ ಇರಬಹುದೇನೋ ಮೋಹನ್ ಅವ್ರೇ ಹೇಳ್ಬೇಕು ,ಯಾಕಂದ್ರೆ ನಾನು ಇಂಥ ಕಾರ್ಯಕ್ರಮಕ್ಕೆ ಹೋಗಿದ್ದು ತೀರಾ ಕಮ್ಮಿ .ಇರ್ಲಿ ಬಿಡಿ ಜಾಸ್ತಿ ಜನ ಬಂದ್ರೆ ಅಲ್ಲಿ ಕೂರೋಕೂ ಆಗ್ತಾ ಇರ್ಲಿಲ್ಲ .

Quality of audience is better than quantity ! ಅಲ್ವ??

ಕಾರ್ಯಕ್ರಮದಲ್ಲಿ ಜೋಜಿಗ ಅನ್ನೋ ಒಂದು ಹೆಸರು ಕೇಳಿ ಬಂತು !

ಆ ಹೆಸರಿನ ಅರ್ಥ ಏನೆಂಬುದೇ ಸೋಜಿಗ ನನಗೆ !


ಫೋಟೊ ಕೃಪೆ : ’ಎರಡು(?) ಹುಡುಗಿಯರು ’

5 comments:

ಚಿತ್ರಾ ಸಂತೋಷ್ said...

ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??
ಎಂಥ ಮಾರಾಯ್ರೆ ಹೀಗೆಲ್ಲಾ ಡೌಟ್ ಪಡೋದು..?! ಮಂಗಳೂರಿನವ್ರೇ ಹಾಗೇಯೇ..(:)
ನನ್ನ ಬ್ಲಾಗಿಗೆ ಬಂದು ಕಮೆಂಟು ಮಾಡಿದ್ದಕ್ಕೆ ಕೃತಜ್ಷತೆಗಳು..ಹಾಗೇ ಬರುತ್ತಿರಿ..ಆಗಾಗ.
-ಚಿತ್ರಾಕರ್ಕೇರಾ

Anonymous said...

ಡುಂಡಿರಾಜ ಮಾಮ್ಮಾಲೆ ಪ್ರೋಗ್ರಾಮಾ ವೈರಿ ಬರೈಲೆಲೆ ಭಾರಿ ಚಂದ ಜಾಲ್ಲಾ ಸಂದೀಪ. ವಾಜ್ಜಿತರಿ ವಾಪಾಸ್ ಹಾಸು ಆಯ್ಲೆ. ಇತ್ಲೆ ಚಂದ ಭಾಷೆನ ಬರೌಚಾಕ ಕಶಿ ಶಿಕ್ಲೋ?
ಜೋಜಿಗ ಕ್ಯೂಟ್ ಆಶಿಲಿ ನ್ಹವ್ಹೆ?
ಅಶೀ ಬರೈತರಿ ಆಸ.
cheers
ಮಾಲತಿ ಎಸ್.
:-)

hamsanandi said...

ಈ ಟಪ್ಪಾಂಗ್ಗುಚ್ಚಿ ಅನ್ನೋ ಪದದ ಅರ್ಥ, ಹಿನ್ನೆಲೆ, ಎಲ್ಲಿಂದ ಬಂತು ಏನ್ಕಥೆ ತಿಳಿಸ್ತೀರಾ ಸ್ವಲ್ಪ?

ಸಂದೀಪ್ ಕಾಮತ್ said...

@ Hamsanandi,

ಋಷಿ ಮೂಲ ,ನದಿ ಮೂಲ ,ಹಾಗೂ ಪದ ಮೂಲ ಕೆದಕಬಾರದು ಅಂತ ಹಿರಿಯರು ಹೇಳಿದ್ದಾರೆ .ಆದ್ದರಿಂದ ಟಪ್ಪಾಂಗುಚ್ಚಿ ಬಗ್ಗೆ ತಲೆ ಕೆಡಿಸ್ಕೋಬೇಡಿ !
.
.
.
(ಪದ ಮೂಲ ನಂದೇ addition ಎಲ್ಲೂ ಹುಡುಕೋಕೆ ಹೋಗ್ಬೇಡಿ ಸಿಗಲ್ಲ!ಹಾಗೇ ಮೇಲೆ ಬರೆದಿರೋದರ ತಾತ್ಪರ್ಯ ’ನಂಗೂ ಗೊತ್ತಿಲ್ಲ ’ ಅಂತ )

shivu.k said...

ಹಾಯ್ ಸಂದೀಪ್ ಕಾಮತ್,
ಆಚಾನಕ್ಕಾಗಿ ನಿಮ್ಮ ಬ್ಲಾಗಿಗೆ ಬಂದೆ. ಡುಂಡಿರಾಜ್ ಫಿಶ್ ಮಾರ್ಕೆಟ್ ಕಾರ್ಯಕ್ರಮದಲ್ಲಿ ನಾನು ಇದ್ದೆ. ನಾನು enjoy ಮಾಡಿದ್ದೆ. ಅಲ್ಲಿ ನಿವ್ಯಾರು ಅಂತ ನನಗೆ ಗೊತ್ತಿರಲಿಲ್ಲ. ನೀವು ಚೆನ್ನಾಗೆ ಬರೀತೀರಿ[ಅಂಗಂದ್ರೆ ಬೇಜಾರಿಲ್ಲ ತಾನೆ!]
ನಾನು ಛಾಯಾಗ್ರಾಹಕ ಅಲ್ಲೊಮ್ಮೆ ಇಲ್ಲೊಮ್ಮೆ ಪತ್ರಿಕೆಗೆ ಬರಿತೀನಿ. ವಿಚಾರ ಮಾತ್ರ ಫೋಟೋಗ್ರಫಿಯದ್ದೆ. ಎಲ್ಲರೂ ಕತೆ, ಕವನ, ಪ್ರವಾಸ ಬರೀತಾದ್ದರಿಂದ ನಾನು ಬೇರೋನೋ ಕೊಡೋಣ ಅಂತ. ನೀವೊಮ್ಮೆ ನನ್ನ ಬ್ಲಾಗಿಗೆ ಬನ್ನಿ. ನಿಮಗಿಷ್ಟವಾಗುವ ಫೋಟೋ ಹಾಗೂ ಲೇಖನ ಸಿಗಬಹುದು. ಖುಷಿಯಾದ್ರೆ ನಾಲ್ಕು ಮಾತು ಬರೀರಿ.
ನನ್ನ ಬ್ಲಾಗ್ ವಿಳಾಸ:

http://chaayakannadi.blogspot.com