Wednesday, March 4, 2009

ಪ್ರೀತಿಯಿಂದ ರವಿ ಬೆಳಗೆರೆಗೆ......ಸುಮಾರು ಒಂದು ವರ್ಷ ಹಿಂದಿನ ಮಾತು.ಆಗಿನ್ನೂ ನಾನು ಬ್ಲಾಗ್ ಲೋಕದಲ್ಲಿ ಕಾಲಿಟ್ಟಿರಲಿಲ್ಲ.ನನ್ನ ಕಾಗೆ ಕಾಲಿನಂಥ ಅಕ್ಷರದಲ್ಲಿ ಒಂದು ದೊಡ್ಡ ಲೇಖನ ಬರೆದಿದ್ದೆ ! ಸ್ಟೀಫನ್ ಹಾಕಿಂಗ್ ಬಗ್ಗೆ.ಅದನ್ನು ಬರೆದಿದ್ದು ’ಓ ಮನಸೇ’ ಅನ್ನೋ ಪತ್ರಿಕೆಗಾಗಿ.ಬರೆಯುವ ಮುನ್ನವೇ ರವಿ ಅಜ್ಜಿಪುರ ರ ಬಳಿ ’ಹೀಗೆ ಬರೀತಾ ಇದ್ದೀನಿ ಕಳಿಸ್ಲಾ ?’ ಅಂತ ಹೇಳಿ ,ಇಂಟರ್ನೆಟ್ ನಲ್ಲಿ ಸಾಮಗ್ರಿಗಳನ್ನೆಲ್ಲ ಹೊಂದಿಸಿ A4 sizeನ ಪೇಪರ್ ನ ಒಂದೇ ಮಗ್ಗುಲಲ್ಲಿ ಬರೆದು ಅದಕ್ಕೆ ೨೦ ರೂ ಕೊರಿಯರ್ ಚಾರ್ಜ್ ತೆತ್ತು ಪೋಸ್ಟ್ ಮಾಡಿದ್ದೂ ಆಯ್ತು.

ಹೀಗೆ ಪೋಸ್ಟ್ ಮಾಡಿದ್ದೀನಿ ಬಂದಿರುತ್ತೆ ನೋಡಿ ಅಂತ ರವಿ ಅಜ್ಜಿಪುರರಿಗೆ ಯಾಹೂನಿಂದ ಮೇಲ್ ಕೂಡಾ ಮಾಡಿದ್ದೆ!

ಮುಂದಿನ ಸಂಚಿಕೆಯಲ್ಲಿ ನನ್ನ ಲೇಖನ ಬಂದೇ ಬರುತ್ತೆ ಅನ್ನೋ ಅಪಾರವಾದ ವಿಶ್ವಾಸ ನನಗಿತ್ತು .ಆದರೆ ಮುಂದಿನ ಸಂಚಿಕೆಯಲ್ಲಿ ಅದು ಬರಲೇ ಇಲ್ಲ !ನನ್ನ ಲೇಖನ ಬರಲಿಲ್ಲ ಅನ್ನೋ ಬೇಸರಕ್ಕಿಂತ ಆ ಪತ್ರಿಕೆಯೇ ಬರಲಿಲ್ಲ ನಾನು ಲೇಖನ ಕಳಿಸಿದ ಮೇಲೆ .ಬಹುಷ ನನ್ನ ಲೇಖನ ಓದಿದ ಮೇಲೆ ಪತ್ರಿಕೆ ಪ್ರಕಟಿಸೋದೆ ಬೇಜಾರಾಗಿರ್ಬೇಕು ಬೆಳಗೆರೆಗೆ.

ಹಾಗೇ ಒಂದು ಸಲ ’ಕೆಂಡಸಂಪಿಗೆ’ಗೂ ಒಂದು ಲೇಖನ ಬರೆದಿದ್ದೆ .ಆದ್ರೆ ಈಗ ಹೈಟೆಕ್ ಸ್ಟೈಲ್ ನಲ್ಲಿ ಯೂನಿಕೋಡ್ ಬಳಸಿ ! ಅದೂ ಪ್ರಕಟ ಆಗ್ಲಿಲ್ಲ .ಕಡೇ ಪಕ್ಷ ನಿಮ್ಮ ಲೇಖನ ಪ್ರಕಟಿಸಲು ಯೋಗ್ಯ ಅಲ್ಲ ಅನ್ನೋ ಉತ್ತರವಾದ್ರೂ ಬರುತ್ತೆ ಅನ್ನೋ ಆಸೆ ನನ್ನದಾಗಿತ್ತು .ಯಾಕಂದ್ರೆ ಮೇಲ್ ಮಾಡಲು ಐದು ರೂಪಾಯಿ ಸ್ಟ್ಯಾಂಪ್ ಹಾಕೋ ಅಗತ್ಯವಿಲ್ಲವಾದ್ದರಿಂದ ಮೇಲ್ ಆದ್ರೂ ಮಾಡ್ತಾರೆ ಅನ್ನೋ ಜೊಳ್ಳು ವಾದ ನನ್ನದು.

ಆ ನಿರಾಸೆಯೇ ನನ್ನ ಬ್ಲಾಗ್ ಶುರು ಮಾಡಲು ನನ್ನನ್ನು ಪ್ರೇರೇಪಿಸಿತು.

ಆದರೆ ಈ ಬ್ಲಾಗ್ ಶುರು ಮಾಡಿದ ಮೇಲೆ ಜನರ ಪ್ರೀತಿ ಕಾಳಜಿ ನೋಡಿ ಅಮೇಲೆ ಪೇಪರ್ ಗಳಿಗೆ ಬರೆಯುವ ಅಗತ್ಯವೇ ನನಗೆ ಅನಿಸಿಲ್ಲ.ಹಾಗಾಗಿ ನಾನು ಪೇಪರ್ಗಳಿಗೆ ಬರೆಯುವ ಸಾಹಸವನ್ನೇ ಮಾಡಲು ಮುಂದಾಗಲಿಲ್ಲ!

ಆದರೂ ಕಳೆದ ವಾರ ನನ್ನದೊಂದು ಲೇಖನ ಪತ್ರಿಕೆಯಲ್ಲಿ ಬಂತು. ’ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ನನ್ನ ’ಪ್ರೀತಿಯಿಂದ ಪ್ರತಾಪ್ ಗೆ’ ಲೇಖನವನ್ನು ಪ್ರಕಟಿಸಿದ್ರು .
ಆದ್ರೆ ನನಗೆ ಖಂಡಿತ ಖುಷಿ ಆಗಿಲ್ಲ .ಕಾರಣ ನನ್ನ ಅನುಮತಿಯನ್ನೇ ಪಡೆದಿರಲಿಲ್ಲ ಪ್ರಕಟಿಸೋದಕ್ಕೆ ! ನಾನು ಯಾವತ್ತೂ ಕಾಪಿ ರೈಟ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ.ಆದ್ರೆ ನಾನು ತಲೆ ಕೆಡಿಸಿಕೊಂಡಿದ್ದು ಯಾಕಂದ್ರೆ ನನ್ನ ಬರಹದ ಆಶಯ ಬೇರೇನೆ ಆಗಿತ್ತು , ಆದ್ರೆ ಅದು ಪ್ರಕಟವಾಗಿರೋ ಉದ್ದೇಶವೇ ಬೇರೆ ಆಗಿತ್ತು !

ನನ್ನ ಬರಹದ ತಲೆ ಬರಹವೇ ’ಪ್ರೀತಿಯಿಂದ ಪ್ರತಾಪ್ ಗೆ ’ .ನಾನು ಅದನ್ನು ಬರೆದಿದ್ದೂ ಪ್ರೀತಿಯಿಂದಲೇ ,ಆದರೆ ಅದರ ಶೀರ್ಷಿಕೆಯನ್ನು ’ಮತ್ತೆ ಕೆಡವಿ ದರೋ ’ ಅಂತೆಲ್ಲ ಬದಲಾಯಿಸಿ ಪ್ರಕಟಿಸಿದ್ರು .

’ಹಾಯ್’ ನಂಥ ಪ್ರಖ್ಯಾತ ಪೇಪರ್ ನಲ್ಲಿ ಪ್ರಕಟವಾಗಿದ್ದಕ್ಕೆ ನಾನು ಖುಷಿ ಆಗ್ತೀನಿ ಅನ್ನೋ ಅನಿಸಿಕೆ ಇದ್ದಿರಬಹುದು ಬೆಳಗೆರಯವರದ್ದು .

ಆದ್ರೆ ನನಗೆ ಖುಷಿ ಆಗಿಲ್ಲ .ಯಾಕಂದ್ರೆ ಅದನ್ನು ಸ್ವಥ ನನ್ನ ರೂಂ ಮೇಟ್ ಗಳೇ ಓದಿಲ್ಲ/ಓದಲ್ಲ .ಯಾರಾದ್ರೂ ಪ್ರತಾಪ್ ಗೆ ಬಯ್ದು ಬರೆದ್ರೆ ಅವರು ಅದನ್ನು ಓದೋದಕ್ಕೇ ಹೋಗಲ್ಲ.ಪ್ರತಾಪ್ ಪಕ್ಕಾ ಅಭಿಮಾನಿಗಳು ಅವರು !

ಅದೂ ಅಲ್ಲದೆ ’ನನ್ನ ಲೇಖನ ಪ್ರಕಟ ಆಗಿದೆ ಅದನ್ನು ಓದಿ’ ಅಂತ ಹೇಳೋದಿಕ್ಕೆ ಆ ಪರಿ ಸ್ನೇಹಿತರೂ ನನಗಿಲ್ಲ,ನನ್ನ ಯಾವ ಸ್ನೇಹಿತರಿಗೂ ನನ್ನದೊಂದು ಬ್ಲಾಗ್ ಇದೆ ಅನ್ನೋದೂ ಗೊತ್ತಿಲ್ಲ .ಅಂಥ ಪ್ರಚಾರವೂ ನನಗೆ ಬೇಕಿಲ್ಲ.

ನನ್ನ ಬಹುತೇಕ ಕಮೆಂಟ್ ಗಳಲ್ಲಿ ರವಿ ಹಾಗೊ ನಾಗತಿಹಳ್ಳಿಯವರು ಸಾಫ್ಟ್ವೇರ್ ಬಗ್ಗೆ ಮಾಡಿದ ಕಮೆಂಟ್ ಗಳ ಬಗ್ಗೇನೂ ಬರೆದಿದ್ದೆ .ಆದ್ರೆ ಅದನ್ನು ಅವರು ಓದೇ ಇಲ್ಲ.

ಬಹುಷ ಪ್ರತಾಪ್ ಸಿಂಹರನ್ನು ವಿರೋಧಿಸಿ ಬರೆದ್ರೆ ಅದನ್ನು ಇಂಟರ್ನೆಟ್ ನಲ್ಲಿ ಹುಡುಕುವ ಸಾಫ್ಟ್ವೇರ್ ಅವರಿಗೆ ಸಿಕ್ಕಿರಬೇಕು !

ರವಿ ಬೆಳಗೆರೆಯವರೇ ಹಾಗೂ ಪ್ರತಾಪ್ ಸಿಂಹರವರೇ ನಿಮ್ಮಿಬ್ಬರನ್ನೂ ಸಮನಾಗಿ ಪ್ರೀತಿಸುವ ನನ್ನಂಥ ಓದುಗರು ಸಾವಿರಾರು ಜನ ಇದ್ದಾರೆ.ಆದ್ದರಿಂದ ಇಂಥ ದ್ವೇಷಪೂರಿತ ಬರಹಗಳಿಗೆ ಆಸ್ಪದ ಕೊಡಬೇಡಿ ಪ್ಲೀಸ್ .......

ನನ್ನ ಬರಹ ಯಾವುದೇ ವ್ಯಕ್ತಿ ಅಥವ ಪತ್ರಿಕೆಯನ್ನು ಕುರಿತು ಅಲ್ಲ .ನನ್ನ ನೆಚ್ಚಿನ ಪತ್ರಿಕೆಯ ಪತ್ರಕರ್ತರು ತಪ್ಪು ಬರೆದಾಗ ಅದನ್ನು ಅವರ ಗಮನಕ್ಕೆ ತರುವ ಉದ್ದೇಶವಷ್ಟೆ ನನ್ನದಾಗಿತ್ತು.ಹಾಗಾಗಿ ಈ ಸ್ಪಷ್ಟೀಕರಣ ಅಗತ್ಯವೆಂದು ನನಗೆ ಅನ್ನಿಸಿತು .

26 comments:

Anonymous said...

:-)
Sandeep !
kaDalateeraa is so busy the past few days, that i had to log on early.
nice of you to clarify. As a responsible journalist he should not have used your blog to foster his animosity towards PS.
take care
:-)
ms

Ittigecement said...

ಸಂದೀಪ್....

ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ..
ಹಾಗೇ ಸಮಸ್ಯೆಗಳಿಗೂ ಕೂಡ..
ಪರ, ವಿರೋಧ...!

ನಿಮ್ಮ ಸ್ಪಷ್ಟ ಅಭಿಪ್ರಾಯ ..
ನೇರ ಮಾತುಗಳು..

ಬಹಳ ಇಷ್ಟವಾದವು...

ಯಾರೀಗಾದರೂ ಇಷ್ಟವಾಗುತ್ತವೆ..

ಅಭಿನಂದನೆಗಳು....

Keshav.Kulkarni said...

ಸಂದೀಪ,
ನಿಮ್ಮ ಗೊಂದಲ ನಮ್ಮೆಲ್ಲರದ್ದೂ. ನಿಮಗೆ ಬ್ಲಾಗಿಸ್ಟರೆಲ್ಲರ ಬೆಂಬಲವಿದೆ ಎಂದು ಧೈರ್ಯವಾಗಿ ಹೇಳಬಲ್ಲೆ. ಈ ಹಿಂದೆ ರವಿಗೆ "ನೀವ ಯಾಕೆ ಹಾಯ್ ನ ವೆಬ್ ಮಾಡಬಾರದು?" ಎಂದು ಬರೆದು ಉತ್ತರವಿಲ್ಲದೇ ಕುಳಿತಿದ್ದೇನೆ.
- ಕೇವ

Unknown said...

ಜಗತ್ತಿನ ಎಂಟನೇ ಅದ್ಭುತ ಒಮ್ಮೊಮ್ಮೆ ಕನ್ನಡ ಪತ್ರಿಕಾಲೋಕದಲ್ಲೇ ಉಂಟಾಗುತ್ತಿರುತ್ತದೆ!

Pramod said...

ಅದು ತಪ್ಪು, ತಿರುಚಿ ಬರೋಯೋದು ಮತ್ತೊ೦ದು ತಪ್ಪು. 'ಮಾಹಿತಿ ಹಕ್ಕು' ನಿಮಗಿದೆ.

ಬೆಂಗಳೂರು ರಘು said...

idhenu hosadalla avrige...dadagiriya dinagalu part 2 and 3 odi..sridhar en heliddare antha gottagutte...indiadalli copy right lawgalu sari illavada karandinda ellavu right to copy agbittide...bejaru maadko bedi sandeep naavella nim jothe iddivi

Prabhuraj Moogi said...

sandeep,
nanna bloganlli nimma ee "kuruDu kaaMchaaNa" article bagge comment baredu link koTTeedeeni (tamma anumatiyilladE..) haage nanna geLeyarigoo kood kaLisiddEne... neevu bareda OLLeya vichaaragaLannu ellaroo odali anno oMdE uddeshadiMda... aadare nimagishTavilldiddalli tiLisi tegedu haakuttEne... addare yaavude duruddeshvaMtoo khaMdita illa...

ಸಂದೀಪ್ ಕಾಮತ್ said...

ms u wake up at 4 AM !! oops i never did it in my life even in exam time!

ಪ್ರಕಾಶ್,ಕೇಶವ್,ಪ್ರಮೋದ್,ಸತ್ಯನಾರಾಯಣ,ಗುರು ಧನ್ಯವಾದಗಳು ನಿಮ್ಮ ಬೆಂಬಲಕ್ಕೆ.

ಪ್ರಭು ,

ನನಗೂ ಕಾಪಿ ರೈಟ್ ಬಗ್ಗೆ ಏನೂ ಆಸಕ್ತಿ ಇಲ್ಲ.ಯಾರು ಬೇಕಾದ್ರೂ ಇಲ್ಲಿಂದ ಕಾಪಿ ಮಾಡಿ ಕಳಿಸಬಹುದು .ಆದ್ರೆ ಹಾಯ್ ನಲ್ಲಿ ಲೇಖನದ ತಲೆಬರಹವೇ ಪ್ರಶ್ನಾರ್ಹವಾಗಿತ್ತು .

ತಲೆ ಬರಹ ಲೇಖನದ ಉದ್ದೇಶವನ್ನೇ ಹಾಳುಗೆಡವುತ್ತೆ ಅಲ್ವಾ? ಅದಕ್ಕೆ ಸ್ಪಷ್ಟೀಕರಣ ನೀಡಿದ್ದು.
ನನ್ನ ಅನುಮತಿ ಏನೂ ಬೇಕಾಗಿಲ್ಲ ಲಿಂಕ್ ಕೊಡೋದಿಕ್ಕೆ.

Anonymous said...

ಶೇ, ನಿಮ್ಮ ಅನುಮತಿ ಪಡೆದಿರಲಿಲ್ಲವೇ!! ಹ್ಹ ಹ್ಹ ಹ್ಹಾ,
ಯಾಕೆ ನಗ್ಯಾಡ್ತಾ ಇದ್ದೇನೆ ಅಂದರೆ ನಂಗೆ ನೀವು ನನ್ನ "ಕಾಪಿರೈಟ್ ಕದ್ದವರು" ಬರಹಕ್ಕೆ ಮಾಡಿದ ವಾದ ನೆನಪಾಯ್ತು. ಹೌದು ಬಿಡಿ. ನೀವು ಯಾವತ್ತೂ ಕಾಪಿ ರೈಟ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ.ಅಲ್ವಾ?
-------
ಹೋಗ್ಲಿ ಬಿಡಿ. ಆದ್ರೆ" ಹಾಯ್.." ನವರು ನಿಮ್ಮ ಅನುಮತಿ ತೆಗೆದುಕೊಳ್ಳದೆ ಪ್ರಕಟಿಸಿದ್ದು ಹಾಗೂ ಅದನ್ನು ತಿರುಚಿ ಹಾಕಿದ್ದು ನಿಜಕ್ಕೂ ಖಂಡನೀಯ.
------
ನೀವು ಇದರ ಬಗ್ಗೆ ನಿಜಕ್ಕೂ ಏನು ಮಾಡದೇ ಬರೀ ನಿಮ್ಮ ಬ್ಲಾಗಿನಲ್ಲಿ ಬರೆದು ಸುಮ್ಮನಿರುತ್ತೀರಾ!! :(

ಸಂದೀಪ್ ಕಾಮತ್ said...

ನೀಲಾಂಜಲ ,
ಬಹಳ ದಿನಗಳ ನಂತರವಾದರೂ ನಿಮಗೆ ಕಾಲೆಳೆಯುವ ಅವಕಾಶ ಸಿಕ್ಕಿತಲ್ಲ !

ನಾನು ಈಗಲೂ ಹೇಳ್ತೀನಿ .ಕಾಪ್ ರೈಟ್ ಬಗ್ಗೆ ಅಥವಾ ಅನುಮತಿ ಪಡೆಯದೆ ಪ್ರಕಟಿಸಿದ್ದಕ್ಕಲ್ಲ ನನಗೆ ಬೇಜಾರಾಗಿದ್ದು.

ಇಡೀ ಬರಹದ ಆಶಯವನ್ನೇ ಒಂದು ಹೆಡ್ಡಿಂಗ್ ಮೂಲಕ ಬದಲಾಯಿಸಿದ್ದಕ್ಕೆ.

Anonymous said...

ಸಂದೀಪ್,
ಇದು ಬೇಜಾರಿನ ಪ್ರಶ್ನೆ ಅಲ್ಲ,
ಆ ಪತ್ರಿಕೆಗೆ ನಿಮ್ಮ ಬರಹವನ್ನು ನಿಮ್ಮ ಅನುಮತಿಯನ್ನು ಪಡೆಯದೇ ಪ್ರಕಟಿಸುವ ಹಕ್ಕು ಯಾರು ಕೊಟ್ಟರು? ಇವತ್ತು ನಿಮಗಾಗಿದ್ದು ನಾಳೆ ಬೇರೆ ಯಾರಿಗಾದರೂ ಆಗಬಹುದು. ಏಷ್ಟು ದಿನ ಅಂತ ಹೀಗೆ ಸುಮ್ಮನೇ ಕುತಿರೊದು ? ನMಗೆ ಬೇಜಾರಯ್ತು ಅಂತ ಸುಮ್ಮನೇ ಬ್ಲಾಗಿನಲ್ಲಿ ಅವಲತ್ತಿಕೊಳ್ಳೊದರಿಂದ ಏನಾದರೂ ಉಪಯೋಗ ಇದೆಯಾ?

ನಾಳೆ ಬೇರೆ ಪತ್ರಿಕೆಯವರು ನಿಮ್ಮ ಇನ್ನೊಂದು ಬರಹ ತೆಗೆದುಕೊಳ್ಳಲಿ. ಅದನ್ನು ಮತ್ತೆ ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳಲಿ. ನೀವು ಎಂದಿನಂತೆ ನಂಗೆ ಕಾಪಿ ರೈಟ್ ಬಗ್ಗೆ ಆಸಕ್ತಿ ಇಲ್ಲ, ಆದ್ರೂ ಅವರು ಮಾಡಿದ್ದು ಬೇಜಾರಾಯ್ತು ಅಂತ ಉದ್ದುದ್ದ ಇನ್ನೊಂದು ಬರಹ ಬರೆದು ಬಿಡಿ. ಅಷ್ಟೆ.

ಬಿಡಿ ನಿಮಗೆ ಅರ್ಥವಾಗೋಲ್ಲ, ನಂಗೆ ಇಲ್ಲದ ಹಕ್ಕಿನ ಪ್ರಶ್ನೆ ಇವಳಿಗೆ ಯಾಕೆ ಅಂತೀರಾ.

ಸಂದೀಪ್ ಕಾಮತ್ said...

ಒಬ್ಬರಿಗೆ ನಾನೇ ಆ ಲೇಖನವನ್ನು ರವಿ ಬೆಳಗೆರೆಯವರಿಗೆ ಕಳಿಸಿದ್ದೇನೆ ಅನ್ನೋ ಅನುಮಾನ ಇತ್ತು .

ಕೆಲವರಿಗೆ ರವಿ ಬೆಳಗೆರೆಯವರೇ ನನ್ನನ್ನು ಸಂಪರ್ಕಿಸಿ ಬರಹ ಬರೆಯಲು ಹೇಳಿದರು ಅನ್ನು ಗುಮಾನಿ ಇತ್ತು .

ಆ ಎರಡು ಸಂಶಯಗಳಿಗೆ ಉತ್ತರಿಸಿದ್ದಷ್ಟೆ .
ನಾನು ಇವತ್ತು ಉತ್ತರಿಸದಿದ್ದರೆ ಸಂಶಯಗಳು ಸಂಶಯಗಳಾಗೇ ಉಳಿಯುತ್ತವೆ ಅದಕ್ಕೆ ಈ ಬರಹ .

Anonymous said...

very bad. ಹೇಳದೇ ಕೇಳದೇ ತೆಗೆದುಕೊಳ್ಳುವುದು ಅಥವಾ ಪತ್ರಿಕೆಯಲ್ಲಿ ಬಂದು ಆದಮೇಲೆ inform ಕೂಡ ಮಾಡದೇ ಇರುವುದು ಇನ್ನೂ bad. ಬರಹದ ಆಶಯವನ್ನು ತಿರುಚುವುದು , ಯಾರ ಮೇಲಿನ ದ್ವೇಷಕ್ಕೆ ಯಾರನ್ನೋ ಬಳಸಿಕೊಳ್ಳುವುದು ಇನ್ನೂ ಇನ್ನೂ bad.

ನಾನೂ ಅದೇ ಹೇಳುವುದು ,"ರವಿ ಬೆಳಗೆರೆ ಹಾಗೂ ಪ್ರತಾಪ್ ಸಿಂಹ ಇಬ್ಬರನ್ನೂ ಸಮನಾಗಿ ಪ್ರೀತಿಸುವ ನನ್ನಂಥ ಓದುಗರು ಸಾವಿರಾರು ಜನ ಇದ್ದಾರೆ. ಆದ್ದರಿಂದ ಇಂಥ ದ್ವೇಷ ಸಾಧನೆ ಮಾಡಬೇಡಿ ಪ್ಲೀಸ್ ......."

- ವಿಕಾಸ್

Anonymous said...

sariyaagi hELiddera sandep....
avaribarannu mecchuva nanna nimmantha janarige ivara kittata bisi tuppadante.... atta dari itta puli antaaralla haage...ibrooo ishtaane... aadre hoDedaadOdu nODOke thumbaa kashtaane

ಸಂದೀಪ್ ಕಾಮತ್ said...

ವಿಕಾಸ್ ,ವಿಜಯ್ ,

ಅವರ ಜಗಳಕ್ಕೆ ಬಿಸಿ ತುಪ್ಪ ಎರಚುವವರೂ ಇದ್ದಾರಲ್ಲ ಏನ್ ಮಾಡೋದು ಹೇಳಿ .

ಅದಕ್ಕೆ ಹೇಳೋದು -
ನಟನೆಯನ್ನಷ್ಟೇ ಪ್ರೀತಿಸಿ ನಟರನ್ನಲ್ಲ ....
ಲೇಖನವನ್ನಷ್ಟೇ ಪ್ರೀತಿಸಿರಿ ಲೇಖಕರನ್ನಲ್ಲ......

Unknown said...

like this the vijaya karnataka paper also published the article without the permission of "tarini" about the conversion ...... then they are giving explanation to her ... my strong openion is, this is not correct ...:( :( i think every one remember that situation... i will support neelanjala . u should do some thing.. u r article is very nice ... i am the fan of u r blog.. nice points ... and nice explanation....:):) keep it up....:-):-)

sunaath said...

ರವಿ ಬೆಳಗೆರೆ ಈ ಥರಾ ಮಾಡಿದ್ದು ಓದಿ, ಆಶ್ಚರ್ಯವೇನೂ ಆಗಲಿಲ್ಲ. ನಿಮ್ಮ ಕಿರೀಟವನ್ನು ತಮ್ಮ ತಲೆಗೆ ತಕ್ಕ ಹಾಗೆ ಜೋಡಿಸಿಕೊಂಡಿದ್ದಾರೆ ಅಷ್ಟೆ!

Prabhuraj Moogi said...

ಥ್ಯಾಂಕ್ಸ್... ತಲೆಬರಹ ತಿರುಚಿದ್ದು ತಪ್ಪು... ಸಂಪೂರ್ಣ ಲೇಖನ ತಿರುಚದೆ ಹಾಕುವುದಾದರೆ ಹಾಕಬಹುದಿತ್ತು... ಲೇಖನ ಬಹಳ ಚೆನ್ನಾಗಿತ್ತು ನನ್ನ ಆಫೀಸಿನಲ್ಲಿ ಕೂಡ ಎಲ್ಲರೂ ಬಹಳ ಇಷ್ಟ ಪಟ್ಟರು.. ಹೀಗೆ ಬರೆಯುತ್ತಿರಿ....

ಸಂದೀಪ್ ಕಾಮತ್ said...

Thank You , Sunath,Roopa, and Prabhu.

Anonymous said...

Sandeep,

Pratap bagge baraha na belagere ettakondru,....yeega belegere bagge baraha na Agni-sridhar ettoktoro nodbeku..

Keepe writing....good luck

-Suraj

ಸುಧೇಶ್ ಶೆಟ್ಟಿ said...

ಸ೦ದೀಪ್...

ಹಾಯ್ ಬೆ೦ಗಳೂರು ನಿಮ್ಮ ಲೇಖನಗಳನ್ನು ಪ್ರಕಟಿಸದಿದ್ದರೆ ಏನ೦ತೆ, ನಿಮ್ಮ ಬರಹಗಳನ್ನು ತು೦ಬಾನೇ ಇಷ್ಟಪಡುವ ಬ್ಲಾಗಿಗರು ತು೦ಬಾ ಜನ ಇದ್ದಾರೆ.

Anonymous said...

A beautiful comment on Prathap's article i read in kendasampige.

http://www.kendasampige.com/article.php?id=2164

thanks

Anonymous said...

ಸಂದೀಪ್ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ್ದು ನಿಮ್ಮ ನೇರ ನುಡಿ.. ಹಾಯ್ ನಂಥ ಒಂದು ಪತ್ರಿಕೆ ನಿಮ್ಮ ಲೇಖನ ಪ್ರಕಟಿಸಿದ್ದಕ್ಕೆ ಖುಷಿಪಡುವ ಬದಲು ಅದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದೀರಿ. ಅವಕಾಶವಾದಿಯಾಗಲಿಲ್ಲ ನೀವು .. ಖುಷಿಯಾಯ್ತು..

Anonymous said...

ಸಂದೀಪ್,

ನೀವು ಸ್ಠಿತಪ್ರಜ್ನರು ಅನ್ನೋದಕ್ಕೆ ಈ ಬರಹವೇ ಸಾಕ್ಷಿ.

ಪತ್ರಿಕೆ ಉದ್ಯಮವಾಗಿರುವಾಗ, ಸಂಪಾದಕನಿಗೆ ಸಂಪಾದನೆಯೊಂದೇ ಮುಖ್ಯವಾಗಿರುವಾಗ ಈ ತರಹದ ಅಪಸವ್ಯಗಳು ಆಗುತ್ತವೆ.

ನಿಮ್ಮ ಲೇಖನದ ಆಶಯವನ್ನಾ headline ಅಥವಾ punchline ನಲ್ಲಿ ಇರುತ್ತೆ ಅ೦ತ ಯಾಕೆ ಅಂದುಕೊಂಡಿದ್ದಿರಿ? ಒದುಗ ಭಾಳಾ ಜಾಣ ಇರ್ತಾನೆ. ನಿಮ್ಮ ಲೇಖನ ಎನು ಹೇಳಬೇಕಿತ್ತೋ ಅದನ್ನ ಅವನು ಅರ್ಥ ಮಾಡಿಕೊಳ್ಳುತ್ತಾನೆ.

ಇನ್ನು ರವಿ ಬೆಳಗೆರೆ ವಿಚಾರ.
ಪ್ರತಾಪ ಸಿಂಹನನ್ನು ಟೀಕಿಸಲಿಕ್ಕೆ ಅವರ ಹತ್ತಿರ ಬ೦ದೂಕಿದೆ. ಎತ್ತಿ ಬಾರಿಸಲು ಅವನಿಗೆ ಇನ್ನೋಬ್ಬರ ಹೆಗಲು ಬೇಕು. ಪ್ರತಿ ಸಾರಿ ’ಚಂಪಾ’ ಅವರ ಹೆಗಲು ಬಳಸುತ್ತಿದ್ದರು. ಈ ಬಾರಿ ನಿಮ್ಮ ಹೆಗಲಿಗೆ ಜೋತು ಬಿದ್ದಿದ್ದಾರೆ.

ಅ೦ದ ಹಾಗೆ ಲಂಕೇಶ್ ಸತ್ತ ವಾರ. ಲಂಕೇಶ್ ಗೊಂದು ಅ೦ತಿಮ ನಮನ ಸಲ್ಲಿಸಿ ಆತನ ಅಪಾರ ಪ್ರತಿಭೆ ಬಗ್ಗೆ ಹೊಗಳಿ ಬರೆದಿದ್ದ ರವಿ. ಅದಕ್ಕೆ ’ಚಂಪಾ’ ಪ್ರತಿಕ್ರಿಯೆ... ’ಅವನು ಲಂಕೇಶ್.... ಇವನು ಅವನ ಕೇಶ!’

preeti said...

ಸಂದೀಪ್
ನಿನ್ನೆ ಸುಶ್ರುತ್ ಬ್ಲಾಗ್ ಓದೋವಾಗ ನಿಮ್ಮ ಬ್ಲಾಗ್ ಪರಿಚಯ ಆಯ್ತು.
ತುಂಬಾ ಚೆನ್ನಾಗಿ ಬರಿತೀರ.ನಿನ್ನೆಯಿಂದ ಆಫೀಸ್ ಅಲ್ಲೇ ನಿಮ್ಮ ೬೦% ಲೇಖನ ನ ಓದಿದೀನಿ :)
ಮಾರ್ಕೆಟ್ ಬೇರೆ ಡೌನ್ ಇದೆ,ಕೆಲಸದಿಂದ ತೆಗದೆ ಇದ್ರೆ ಸಾಕು,just kidding.Its a compliment for u.You made me to read most of your articles.I really enjoyed reading them

ಶುಭವಾಗಲಿ

Regards
Preeti

ಸಂದೀಪ್ ಕಾಮತ್ said...

ತುಂಬಾ ಧನ್ಯವಾದಗಳು ಪ್ರೀತಿಯವರೇ .